The most-visited ಕನ್ನಡ Wikipedia articles, updated daily. Learn more...
ಐರ್ಲೆಂಡ್ (pronounced /ˈaɪrlənd/ ( listen), ಟೆಂಪ್ಲೇಟು:IPA2; ಐರಿಷ್:Éire, pronounced [ˈeːɾʲə] ( ); ಅಲ್ ಸ್ಟರ್ ಸ್ಕಾಟ್ಸ್ ಏರ್ಲಾನ್ ಯುರೋಪನಲ್ಲಿರುವ ಮೂರನೆಯ ಅತಿ ದೊಡ್ಡ ದ್ವೀಪವೆನಿಸಿದೆ.ವಿಶ್ವದಲ್ಲೇ ಇಪ್ಪತ್ತನೆಯ ವಿಶಾಲ ದ್ವೀಪವಾಗಿದೆ. ಇದು ಯುರೋಪ್ ಖಂಡದ ವಾಯುವ್ಯ ಭಾಗದಲ್ಲಿ ವಿಸ್ತರಿಸಿ ತನ್ನ ಸುತ್ತಲೂ ನೂರಾರು ಸಣ್ಣ ಮತ್ತು ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಐರ್ಲೆಂಡಿನ ಪೂರ್ವಭಾಗದಲ್ಲಿ ಐರಿಶ್ ಸಮುದ್ರದಿಂದ ಪ್ರತ್ಯೇಕಗೊಂಡ ಗ್ರೇಟ್ ಬ್ರಿಟನ್ ದ್ವೀಪವಿದೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ನಗ್ಮಾ ೨೫ ಡಿಸೆಂಬರ್ ೧೯೭೪ ರಂದು ಜನಿಸಿದರು. ಹೆಸರು ನಂದಿತಾ ಅರವಿಂದ್ ಮೊರಾರ್ಜಿ. ಕಿಲ್ಲರ್, ಘರಾನಾ ಮೊಗುಡು, ಬಾಷ ಮತ್ತು ಅನೇಕ ಇತರ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ತಮ್ಮ ಪಾತ್ರ ಉತ್ತಮವಾಗಿದೆ.ತನ್ನ ನಟನಾ ವೃತ್ತಿಯನ್ನು ಬಾಲಿವುಡ್ನಲ್ಲಿ ಆರಂಭಿಸಿದರು.ನಗ್ಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಬಂಗಾಳಿ, ಭೋಜಪುರಿ, ಪಂಜಾಬಿ, ಮತ್ತು ಮರಾಠಿ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ದಾಲ್ಚಿನ್ನಿ ಅನೇಕ ಮರಗಳ ಒಳ ತೊಗಟೆಯಿಂದ ಪಡೆಯುವ ಸಿನ್ನಮೋಮಮ್ ಕುಲದ ಒಂದು ಮಸಾಲೆ ಪದಾರ್ಥ.ಇದನ್ನು ಲವಂಗಪಟ್ಟೆ, ಚಕ್ಕೆ ಎಂದು ಕರೆಯುತ್ತಾರೆ. ಸಿಹಿ ಮತ್ತು ಖಾರದ ಆಹಾರ ಈ ಎರಡರಲ್ಲೂ ಬಳಸಲಾಗುತ್ತದೆ. "ದಾಲ್ಚಿನ್ನಿ" ಎಂಬ ಪದ ಮರದ ಮಧ್ಯ ಇರುವ ಕಂದು ಬಣ್ಣವನ್ನು ಕೂಡ ಸೂಚಿಸುತ್ತದೆ.'ಸಿನ್ನಮೋಮಮ್ ವೆರಮ್' 'ಕೆಲವೊಮ್ಮೆ' " 'ನಿಜವಾದ ದಾಲ್ಚಿನ್ನಿ' " ಎಂದು ಪರಿಗಣಿಸಲ್ಪಟ್ಟಿದೆಯಾದರೂ,ಅಧಿಕವಾಗಿ ದಾಲ್ಚಿನ್ನಿಯನ್ನು ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ಇತರ ಸಂಬಂಧಿತ ತಳಿಗಳಿಂದಲೂ ಪಡೆಯಲಾಗುತ್ತದೆ."ನಿಜವಾದ ದಾಲ್ಚಿನ್ನಿ"ಯಿಂದ ಇದನ್ನು ಬೇರ್ಪಡಿಸಲು "ಕ್ಯಾಶಿಯಾ" ಎಂದಲೂ ಕರೆಯಲಾಗುತ್ತದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕಮಲ್ ರನಾದಿವೆ(ಕಮಲ್ ಜಯ್ಸಿಂಗ್ ರನಾದಿವೆ)-(೮ ನವೆಂಬರ್ ೧೯೧೭-೨೦೦೧).ಇವರು ಭಾರತೀಯ ಬಯೊಮೆಡಿಕಲ್ ಸಂಶೋಧಕಿ.ಕ್ಯಾನ್ಸರ್ ಸಂಶೋಧನೆಯ ಕ್ಷೇತ್ರದಲ್ಲಿ ಪ್ರಸಿದ್ಧರಾದವರು.ಇವರ ಸಂಶೋಧನೆಯು ಕ್ಯಾನ್ಸರ್ ಮತ್ತು ಸೋಂಕುಗಳ(ವೈರಸ್) ನಡುವೆ ಇರುವ ಕೊಂಡಿಗಳ ಕುರಿತಾಗಿತ್ತು.ಶ್ರೀಮತಿ ಕಮಲ್ ಅವರು ಭಾರತೀಯ ಮಹಿಳಾ ವಿಜ್ಞಾನ ಸಂಘದ ಸ್ಥಾಪಕ ಸದಸ್ಯೆಯಾಗಿದ್ದರು.೧೯೬೦ರಲ್ಲಿ ಭಾರತದ ಮೊದಲ ಅಂಗಾಂಶ ಕೃಷಿ ಪ್ರಯೋಗಾಲಯವನ್ನು ಭಾರತೀಯ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ(ಐ.ಸಿ.ಆರ್.ಸಿ) ಸ್ಥಾಪಿಸಿದರು.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಪ್ರಗತಿಶೀಲತೆ ಯು ಸರ್ಕಾರೀ ಕಾರ್ಯದ ಮೂಲಕ ಬದಲಾವಣೆಗಳು ಅಥವಾ ಸುಧಾರಣೆಗಳನ್ನು ಸಮರ್ಥಿಸುವ ಅಥವಾ ಶಿಫಾರಸು ಮಾಡುವ ಒಂದು ರಾಜಕೀಯ ವರ್ತನೆಯಾಗಿದೆ. ಪ್ರಗತಿಶೀಲತೆಯನ್ನು ಹೆಚ್ಚಾಗಿ ಸಂಪ್ರದಾಯವಾದಿ ಅಥವಾ ಪ್ರತಿಗಾಮಿ ತತ್ತ್ವಗಳ ವಿರೋಧಿಯಾಗಿ ಪರಿಗಣಿಸಲಾಗುತ್ತದೆ. ಪ್ರಗತಿಶೀಲ ಚಳವಳಿ ಯು ಮನೆಯಲ್ಲಿ ಮತ್ತು ಕೆಲಸದಲ್ಲಿ ಅಸಹನೀಯ ಸ್ಥಿತಿಗಳನ್ನು ಎದುರಿಸುತ್ತಿದ್ದವರಿಗೆ ಸಹಾಯ ಮಾಡಲು ಆಸಕ್ತಿಹೊಂದಿದ್ದ ವಸಾಹತು ಕಾರ್ಮಿಕರು ಮತ್ತು ಸುಧಾರಕರಿಂದ ನಗರಗಳಲ್ಲಿ ಆರಂಭವಾಯಿತು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಮೊಬೈಲ್ ಫೋನ್ (ಚರ ದೂರವಾಣಿ) (ಇದನ್ನು ಸೆಲ್ಫೋನ್ ಅಥವಾ ಹ್ಯಾಂಡ್ಫೋನ್ ಎಂತಲೂ ಕರೆಯಲಾಗಿದೆ)ಎಂಬುದು ಸಂವಹನಕ್ಕೆ ಬಳಸಲಾಗುವ ಒಂದು ವಿದ್ಯುನ್ಮಾನ ಉಪಕರಣ ಸಾಧನ. ಸೆಲ್ ಸೈಟ್ಸ್ ಎನ್ನಲಾದ 'ವಿಶಿಷ್ಟ ಬೇಸ್ ಸ್ಟೇಷನ್'ಗಳ 'ಸೆಲ್ಯುಲರ್ ಜಾಲ'ದ ಮೂಲಕ ಮೊಬೈಲ್ ದೂರಸಂವಹನ(ಸೆಲ್ ಸೈಟ್ಸ ಎಂದೂ ಕರೆಯಲಾಗುತ್ತದೆ) ( ಮೊಬೈಲ್ ಫೋನ್ ವ್ಯವಸ್ಥೆ, [[]]ಪಠ್ಯ ಸಂದೇಶ,ಮಾಹಿತಿ ಅಥವಾ ದತ್ತಾಂಶ ರವಾನೆ) ಮಾಡಲು ಈ ದೂರವಾಣಿಯನ್ನು ಬಳಸಲಾಗುತ್ತದೆ. ಮೊಬೈಲ್ಗಳು ನಿಸ್ತಂತು (ಕಾರ್ಡ್ಲೆಸ್) ದೂರವಾಣಿಗಳಿಗಿಂತ ಭಿನ್ನವಾಗಿವೆ.
ದಿ ರೆಸ್ಕ್ಯೂವರ್ಸ್ ೧೯೭೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಜೂನ್ ೨೨, ೧೯೭೭ ರಂದು ಬಿಡುಗಡೆ. ವಾಲ್ಟ್ ಡಿಸ್ನಿ ಅನಿಮೇಟೆಡ್ ಶಾಸ್ತ್ರೀಯ ಸರಣಿಯಲ್ಲಿ ೨೩ ಚಿತ್ರ ಚಿತ್ರ ದೊಡ್ಡ ಜಗತ್ತಿನ ಸುತ್ತ ಅಪಹರಣ ಬಲಿಪಶುಗಳು ಸಹಾಯ ಮೀಸಲಿಟ್ಟ ಪಾರುಗಾಣಿಕಾ ಚಿಕಿತ್ಸೆ ಸೊಸೈಟಿ, ನ್ಯೂ ಯಾರ್ಕ್ ಪ್ರಧಾನ ಕಚೇರಿಯನ್ನು ಮತ್ತು ಯುನೈಟೆಡ್ ನೇಷನ್ಸ್ ನೆರಳು ಅಂತಾರಾಷ್ಟ್ರೀಯ ಮೌಸ್ ಸಂಘಟನೆ, ಸುಮಾರು. ಈ ಇಲಿಗಳ ಎರಡು, ಭಯಗ್ರಸ್ತ ದ್ವಾರಪಾಲಕ ಬರ್ನಾರ್ಡ್ (ಬಾಬ್ ನ್ಯೂಹಾರ್ಟ್) ಮತ್ತು ಅವರ ಸಹ-ದಳ್ಳಾಲಿ, ಸೊಗಸಾದ ಮಿಸ್ ಬಿಯಾಂಕಾ (ಇವಾ ಗ್ಯಾಬೊರ್), ಪೆನ್ನಿ (ಮಿಷೆಲ್ ಸ್ಟೇಸಿ), ನಿಧಿ ಹಂಟ್ರೆಸ್ ಮೂಲಕ ಡೆವಿಲ್ಸ್ ಬೇಊ ರಲ್ಲಿ ಖೈದಿ ಬಂಧಿಗಳಾಗಿದ್ದ ಒಂದು ಅನಾಥ ಹುಡುಗಿಯ ರಕ್ಷಿಸಲು ಔಟ್ ಸೆಟ್ ಮೇಡಮ್ ಮೆಡ್ಯುಸಾ (ಜೆರಾಲ್ಡೀನ್ ಪುಟ).
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಮೈಕೆಲ್ಯಾಂಜೆಲೊ ವಿ ಲೊಡೊವಿಕೊ ಬುವೊನರೊಟಿ ಸಿಮೊನಿ (೬ ಮಾರ್ಚ್ ೧೪೭೫ – ೧೮ ಫೆಬ್ರವರಿ ೧೫೬೪), ಮೈಕೆಲ್ಯಾಂಜೆಲೊ ಎಂದೇ ಪ್ರಸಿದ್ಧನಾಗಿದ್ದ ಇಟಲಿಯ ನವೋದಯದ ಅವಧಿಯ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಕವಿ, ಮತ್ತು ಎಂಜಿನಿಯರ್. ಕಲೆಗಳಿಂದ ಆಚೆಗೆ ಆತ ಮಾಡಿದ ಕೆಲವೊಂದು ಪ್ರವೇಶಗಳ ಹೊರತಾಗಿಯೂ, ಆತ ಆಯ್ದುಕೊಂಡ ಕ್ಷೇತ್ರಗಳಲ್ಲಿ ಕಂಡುಬಂದ ಅವನ ಬಹುಮುಖ ಪ್ರತಿಭೆಯು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು. ಇದರಿಂದಾಗಿ ಮೂಲಕಲ್ಪನೆಯ ನವೋದಯದ ಮನುಷ್ಯನೆಂಬ ಶೀರ್ಷಿಕೆಯ ನೀಡುವಿಕೆಗೆ ಸಂಬಂಧಿಸಿದಂತೆ ಅವನ ಪ್ರತಿಸ್ಪರ್ಧಿ ಹಾಗೂ ಇಟಲಿಯ ಸಹವರ್ತಿಯಾದ ಲಿಯೋನಾರ್ಡೊ ಡ ವಿನ್ಸಿಯೊಂದಿಗೆ ಅವನನ್ನು ಅನೇಕಬಾರಿ ಓರ್ವ ಸ್ಪರ್ಧಿಯಂತೆ ಅಥವಾ ಪೈಪೋಟಿಗಾರನಂತೆ ಪರಿಗಣಿಸಲಾಗುತ್ತದೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಇರಾನ್, (ಪರ್ಷಿಯನ್ ಭಾಷೆಯಲ್ಲಿ: ايران), ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ (ಪರ್ಷಿಯನ್ನಲ್ಲಿ: جمهوری اسلامی ايران - ಜೊಮ್ಹೂರಿ-ಯೆ ಎಸ್ಲಾಮಿ-ಯೆ ಇರಾನ್), ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್ಬೈಜಾನ್ ಮತ್ತು ತುರ್ಕ್ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್ಗಳೊಂದಿಗೆ ಸೀಮೆಯನ್ನು ಹೊಂದಿದೆ.
ಪರಿಸರವನ್ನು ಸಂರಕ್ಷಿಸಲು ಒಂದು ಸಂಸ್ಥೆ ಕೈಗೊಳ್ಳುವ ಪೂರ್ವನಿಧಾರಿತ, ನಿಯಮಬದ್ಧವಾದ ಕ್ರಮಗಳನ್ನು ಪರಿಸರ ನಿರ್ವಹಣಾ ವ್ಯವಸ್ಥೆ(Environmental Management System[EMS]) ಎಂದು ಕರೆಯಬಹುದು.ಸಾಮಾನ್ಯವಾಗಿ ಬಳಕೆಯಾಗುವ ಪರಿಸರ ನಿರ್ವಹಣಾ ವ್ಯವಸ್ಥೆ ಐ.ಎಸ್.ಓ ೧೪೦೦೧() ನ ಮೇಲೆ ನಿರ್ಧಾರಿತವಾಗಿದೆ. ಅದಕ್ಕೆ ಪರ್ಯಾಯವಾಗಿ EMAS(ECo Management and Audit Scheme) ಅನ್ನು ಕೂಡಾ ಬಳಸಬಹುದು.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ. ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ.