The most-visited ಕನ್ನಡ Wikipedia articles, updated daily. Learn more...
ಅಂಕಗಣಿತ(Aritmetic)ವು ಸಂಖ್ಯೆಗಳ ಕೆಲವು ಪರಿಕ್ರಿಯೆ(Operations)ಗಳ ಲಕ್ಷಣಗಳನ್ನು ತಿಳಿಸುವ ಗಣಿತದ ಒಂದು ವಿಭಾಗ.ಇದು ನಮಗೆ 'ಎಷ್ಟು?', 'ಎಷ್ಟು ದೂರ?', 'ಎಷ್ಟು ಉದ್ದ?' ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.ಅಂಕಗಣಿತವನ್ನು ಕೆಲವೊಮ್ಮೆ ಸಂಖ್ಯೆಗಳ ವಿಜ್ಞಾನ ಎಂದೂ ಕರೆಯುತ್ತಾರೆ. ನಾಗರಿಕತೆಯ ಬೆಳೆವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ¸ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂವಿರ್ಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ವಿವಿಧ ರೀತಿಯ ವಸ್ತುಗಳ ತಯಾರಿಕೆಯಲ್ಲಿ ಮತ್ತು ವಿವಿಧ ಕ್ಷೇತ್ರಗಳ ಇಂಜಿನಿಯರಿಂಗ್ ಕೆಲಸಗಳಿಗಾಗಿ ಬಳಕೆಗೆ ತಕ್ಕಂತಹ ಗುಣಲಕ್ಷಣಗಳನ್ನು ಹೊಂದಿರುವ ಲೋಹಗಳ ಆಯ್ಕೆ ಮುಖ್ಯವಾದುದು. ಲೋಹಗಳ ಮೂಲಭೂತ ರಚನೆ, ವಿವಿಧ ಪರಿಸ್ಥಿತಿಗಳಲ್ಲಿ ಅವುಗಳ ಪ್ರತಿಕ್ರಿಯೆ ಮತ್ತು ಅವುಗಳ ಪ್ರತಿಭಟನಾ ಶಕ್ತಿ ಮುಂತಾದವುಗಳ ಆಧಾರದ ಮೇಲೆ ಲೋಹ ಗುಣಲಕ್ಷಣಗಳನ್ನು ಗುರುತಿಸಲಾಗುತ್ತದೆ. ಅಂತಹ ಗುಣಲಕ್ಷಣಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಸ್ವೀಡನ್ನಿನ ಕೈಗಾರಿಕಾ ರಸಾಯನವಿಜ್ಞಾನಿಯಾಗಿದ್ದ ಆಲ್ಫ್ರೆಡ್ ಬರ್ನ್ಹಾರ್ಡ್ ನೊಬೆಲ್ರವರು 1833ರ ಅಕ್ಪೋಬರ್ 21ರಂದು ಸ್ವೀಡನ್ನಿನ ಸ್ಟಾಕ್ಹೋಮ್ನಲ್ಲಿ ಜನಿಸಿದರು. ಕೋವಿಮದ್ದಿಗಿಂತ (gunpowder) ಶಕ್ತಿಯುತ ಸ್ಪೋಟಕವಾದ ಸಿಡಿಹತ್ತಿಯನ್ನು (guncotton) ಜರ್ಮನಿಯ ರಸಾಯನವಿಜ್ಞಾನಿ ಕ್ರಿಶ್ಚಿಯನ್ ಷೋನ್ಬೈನ್ರವರು (1799-1868) 1846ರಲ್ಲಿ ಕಂಡುಹಿಡಿದರು. ಒಂದು ವರುಷದ ನಂತರ ಇಟಲಿಯ ಅಸ್ಸೇನಿಯೋ ಸೊಬ್ರೆರೋರವರು (1812-1888) ನೈಟ್ರೋಗ್ಲಿಸರಿನ್ ಸಂಶೋಧಿಸಿದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ರಾಸ್ಟೊವ್-ಆನ್ -ಡಾನ್ (Ростов-на-Дону) - ದಕ್ಷಿಣ ರಶಿಯಾ, ರಾಸ್ಟೊವ್ ಪ್ರದೇಶದ ಆಡಳಿತ ಕೇಂದ್ರ ಮತ್ತು ದಕ್ಷಿಣ ಫೆಡರಲ್ ಜಿಲ್ಲಾ ಕೇಂದ್ರದಲ್ಲಿ ದೊಡ್ಡ ನಗರ. ಡಿಸೆಂಬರ್ 15, 1749 ರಾಣಿ ಎಲಿಜಬೆತ್ಳ ಆಧಾರಿತ ಡಿಪ್ಲೊಮಾ. ಡಾನ್ ನದಿಯ, ಇದು 1100 ಕಿಲೋಮೀಟರು ದಕ್ಷಿಣದಲ್ಲಿ ಮಾಸ್ಕೋದ ಅಜೊವ್ ಸಮುದ್ರ, ಹರಿಯುತ್ತದೆ ಇಲ್ಲಿ 46 ಕಿಲೋಮೀಟರ್ ರಂದು, ಪೂರ್ವ ಯೂರೋಪಿನ ಬಯಲುಗಳು ಆಗ್ನೇಯ ರಲ್ಲಿ ಇದೆ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ಅಂಗೈ ರೇಖೆ ನೋಡಿ ಹೇಳುವ ಭವಿಷ್ಯ or ಹಸ್ತ ಸಾಮುದ್ರಿಕ ಶಾಸ್ತ್ರ (ಇದನ್ನು cheiromancy ಎಂತಲೂ ಬರೆಯಲಾಗುತ್ತದೆ, ಗ್ರೀಕ್ನಲ್ಲಿ cheir (χειρ), “hand”; manteia (μαντεία), “divination”), ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹಸ್ತ ಸಾಮುದ್ರಿಕರು , ಹಸ್ತ ಓದುಗರು , ಕೈ ಓದುಗರು , ಹಸ್ತ ವಿಶ್ಲೇಷಕರು ,ಅಥವಾ ಕೈರೊಲೊಜಿಸ್ಟ್ಗಳು ಎಂದು ಕರೆಯಲಾಗುತ್ತದೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.
ಮೈಕೆಲ್ಯಾಂಜೆಲೊ ವಿ ಲೊಡೊವಿಕೊ ಬುವೊನರೊಟಿ ಸಿಮೊನಿ (೬ ಮಾರ್ಚ್ ೧೪೭೫ – ೧೮ ಫೆಬ್ರವರಿ ೧೫೬೪), ಮೈಕೆಲ್ಯಾಂಜೆಲೊ ಎಂದೇ ಪ್ರಸಿದ್ಧನಾಗಿದ್ದ ಇಟಲಿಯ ನವೋದಯದ ಅವಧಿಯ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಕವಿ, ಮತ್ತು ಎಂಜಿನಿಯರ್. ಕಲೆಗಳಿಂದ ಆಚೆಗೆ ಆತ ಮಾಡಿದ ಕೆಲವೊಂದು ಪ್ರವೇಶಗಳ ಹೊರತಾಗಿಯೂ, ಆತ ಆಯ್ದುಕೊಂಡ ಕ್ಷೇತ್ರಗಳಲ್ಲಿ ಕಂಡುಬಂದ ಅವನ ಬಹುಮುಖ ಪ್ರತಿಭೆಯು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು. ಇದರಿಂದಾಗಿ ಮೂಲಕಲ್ಪನೆಯ ನವೋದಯದ ಮನುಷ್ಯನೆಂಬ ಶೀರ್ಷಿಕೆಯ ನೀಡುವಿಕೆಗೆ ಸಂಬಂಧಿಸಿದಂತೆ ಅವನ ಪ್ರತಿಸ್ಪರ್ಧಿ ಹಾಗೂ ಇಟಲಿಯ ಸಹವರ್ತಿಯಾದ ಲಿಯೋನಾರ್ಡೊ ಡ ವಿನ್ಸಿಯೊಂದಿಗೆ ಅವನನ್ನು ಅನೇಕಬಾರಿ ಓರ್ವ ಸ್ಪರ್ಧಿಯಂತೆ ಅಥವಾ ಪೈಪೋಟಿಗಾರನಂತೆ ಪರಿಗಣಿಸಲಾಗುತ್ತದೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಬಿದ್ರಿ ಕಲೆ (English: Bidriware ) Bidar ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು.</nowiki> 'ಬಿದ್ರಿ ಕಲೆ' ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ. ಕಣ್ಮನ ಸೆಳೆಯುವ ಇದರ ಇನ್ಲೇ(ಒಳಕೊರೆತ)ದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ.
ಪ್ರಕೃತಿಯ ರಮ್ಯ ಮನೋಹರ ತಾಣ, ಸಹ್ಯಾದ್ರಿಯ ಮನೋಹರ ತಪ್ಪಲು, ಬಳುಕುತ್ತಿರುವ ನೇತ್ರಾವತಿ ನದಿ ಮನೋಹರ ವಲಯಗಳಿಂದ ಸುತ್ತುವರಿದಿರುವ ಪುಣ್ಯಕ್ಷೇತ್ರ, ಧರ್ಮಸ್ಥಳವಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ. ಭಕ್ತರ ಸ್ನೇಹಮಯನಾದ ಮಂಜುನಾಥನೆಂಬ ಕರುಣೆಯ ವಲ್ಲಭ ತ್ರಿಮೂರ್ತಿಗಳಲ್ಲಿ ಓರ್ವ ನೆಲೆಸಿಹ ಧರ್ಮಸ್ಥಳದ ಬಗ್ಗೆ 'ಎಲ್ಲೆ ಮೀರದಿರಲಿ, ಸೀಮೆಯ ಕಾಣದಿರಲಿ, ಎಲ್ಲೆ ಸೀಮೆಯ ತರಸಿಹೆನು ಅದು ಮಂಜುನಾಥನ ಮಹಿಮೆಯೇ' ಎಂದು ಈ ಕ್ಷೇತ್ರದ ಬಗ್ಗೆ ಹೇಳಬಹುದಾಗಿದೆ. ಈ ಪುಣ್ಯ ಕ್ಷೇತ್ರಕ್ಕೆ ಅನ್ನಭೂಮಿಗೆ ಶಿರೋಭೂಷಣವೇ "ಶಾಂತಿವನ" ವಾಗಿದೆ.
ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ.
ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ(ಕ್ರಿ.ಪೂ ೩೦೪ - ಕ್ರಿ.ಪೂ ೨೩೨) . ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು.'ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.
ಜೈನ ತಾತ್ವಿಕ ಭಿತ್ತಿಯಲ್ಲಿ ಯಶೋಧರ ಚರಿತೆಯ ಆಶಯ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವೂ ವಿಶಿಷ್ಟವೂ ಆದ ಕೃತಿಯೆಂದರೆ ಅದು ಜನ್ನನ ಯಶೋಧರ ಚರಿತೆ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ದೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದ ಕೃತಿ. ಸಾಂಪ್ರದಾಯಿಕ ಜೈನಕಾವ್ಯಗಳಿಗಿಂತಲೂ ಬಹಳ ವಿಭಿನ್ನವಾದ ಕೃತಿ.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಪ್ರಗತಿಶೀಲತೆ ಯು ಸರ್ಕಾರೀ ಕಾರ್ಯದ ಮೂಲಕ ಬದಲಾವಣೆಗಳು ಅಥವಾ ಸುಧಾರಣೆಗಳನ್ನು ಸಮರ್ಥಿಸುವ ಅಥವಾ ಶಿಫಾರಸು ಮಾಡುವ ಒಂದು ರಾಜಕೀಯ ವರ್ತನೆಯಾಗಿದೆ. ಪ್ರಗತಿಶೀಲತೆಯನ್ನು ಹೆಚ್ಚಾಗಿ ಸಂಪ್ರದಾಯವಾದಿ ಅಥವಾ ಪ್ರತಿಗಾಮಿ ತತ್ತ್ವಗಳ ವಿರೋಧಿಯಾಗಿ ಪರಿಗಣಿಸಲಾಗುತ್ತದೆ. ಪ್ರಗತಿಶೀಲ ಚಳವಳಿ ಯು ಮನೆಯಲ್ಲಿ ಮತ್ತು ಕೆಲಸದಲ್ಲಿ ಅಸಹನೀಯ ಸ್ಥಿತಿಗಳನ್ನು ಎದುರಿಸುತ್ತಿದ್ದವರಿಗೆ ಸಹಾಯ ಮಾಡಲು ಆಸಕ್ತಿಹೊಂದಿದ್ದ ವಸಾಹತು ಕಾರ್ಮಿಕರು ಮತ್ತು ಸುಧಾರಕರಿಂದ ನಗರಗಳಲ್ಲಿ ಆರಂಭವಾಯಿತು.