The most-visited ಕನ್ನಡ Wikipedia articles, updated daily. Learn more...
ಡಾನ್ ಬ್ರೌನ್ (ಜನನ: 1964ರ ಜೂನ್ 22) ಅಮೆರಿಕಾದ ರೋಮಾಂಚಕ ಕಥೆಗಾರರಾಗಿದ್ದು, 2003ರಲ್ಲಿ ಅತಿ ಹೆಚ್ಚು ಮಾರಾಟವಾದ ಕಾದಂಬರಿ ದಿ ಡಾ ವಿನ್ಸಿ ಕೋಡ್ ನಿಂದ ಇವರ ಜನಪ್ರಿಯತೆ ಹೆಚ್ಚಾಯಿತು. ಬ್ರೌನ್ರ ಕಾದಂಬರಿಗಳು 24 ಗಂಟೆಗಳ ಅವಧಿಯಲ್ಲಿನ ನಿಧಿ ಅನ್ವೇಷಣೆ ಒಳಗೊಂಡಿರುವುದಲ್ಲದೆ, ಗೂಢಲಿಪಿಶಾಸ್ತ್ರ, ಕೀಲಿಕೈಗಳು,(ಅತಿ ಮುಖ್ಯ ಭೇದನಗಳು) ಚಿಹ್ನೆಗಳು, ಸಂಕೇತಗಳು, ಮತ್ತು ಒಳಸಂಚಿನ ವಿಷಯಗಳನ್ನು ಒಳಗೊಂಡಿರುತ್ತವೆ. ಅವರ ಪುಸ್ತಕಗಳು ಸುಮಾರು 40 ಭಾಷೆಗಳಲ್ಲಿ ಭಾಷಾಂತರಗೊಂಡು, 2009ರ ಅಂಕಿಅಂಶದ ಪ್ರಕಾರ ಸುಮಾರು 80 ದಶಲಕ್ಷಕಿಂತಲೂ ಅಧಿಕ ಪ್ರತಿಗಳು ಮಾರಾಟವಾಗಿದ್ದವು.ಬ್ರೌನ್ರ ಕಾದಂಬರಿಗಳಲ್ಲಿ ಐತಿಹಾಸಿಕ ವಿಷಯಗಳು ಮತ್ತು ಹಿಂದಿನ ಕ್ರೈಸ್ತ ಧರ್ಮದ ಕಲಾಕೃತಿಗಳು ಸೇರಿದಂತೆ ರಾಬರ್ಟ್ ಲ್ಯಾಂಗ್ಡನ್ನನ್ನು ಪ್ರಮುಖ ಪಾತ್ರದಲ್ಲಿ ಬಿಂಬಿಸಲಾಗಿರುತ್ತದೆ.
ಭಾರತೀಯ ದ್ವೀಪಕಲ್ಪ ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ (ತಮಿಳು:மதுரை). ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ. ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ , ಇದನ್ನು ಕೂದಲ್ ಮಾನಗರ್ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್) , ಮಲ್ಲಿಗೈ ಮಾನಗರ್(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), ಪೂರ್ವದ ಅಥೆನ್ಸ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ.
ಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್
ಟೆಂಪ್ಲೇಟು:Expert-subject/catcheckಟೆಂಪ್ಲೇಟು:Expert-subject/catcheckಟೆಂಪ್ಲೇಟು:Expert-subject/catcheckಟೆಂಪ್ಲೇಟು:Expert-subject/catcheckಟೆಂಪ್ಲೇಟು:Expert-subject/catcheck
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ಚಕ್ರ (ಸಂಸ್ಕೃತದ cakraṃ चक्रं ([ˈtʃəkrə̃] ದಿಂದ ಉದ್ಭವಿಸಿದೆ), [ˈtʃəkrə] ಹಿಂದಿಯಲ್ಲಿ ಉಚ್ಚರಿಸಲಾಗುತ್ತದೆ; ಪಾಲಿ ಭಾಷೆಯಲ್ಲಿ: ॰हक्क ಚಾಕ್ಕ , ಚೈನೀಸ್ನಲ್ಲಿ: 轮, ಟೆಂಪ್ಲೇಟು:Lang-bo; ಕೊರ್ಲೊ ) ಸಂಸ್ಕೃತ ಪದ "ಚಕ್ರ" ಅಥವಾ "ತಿರುಗುವಿಕೆ" ಎಂದು ಅನುವಾದಿಸುತ್ತದೆ. ಚಕ್ರ ಪರಿಕಲ್ಪನೆಯು ಚಕ್ರ-ಸದೃಶ ಆವರ್ತಗಳನ್ನು ಕುರಿತು ಹೇಳುತ್ತದೆ. ಸಾಂಪ್ರದಾಯಿಕ ಭಾರತೀಯ ವೈದ್ಯಶಾಸ್ತ್ರದ ಪ್ರಕಾರ, ಅವುಗಳು ಮನುಷ್ಯನ ಹಗುರವಾದ ಜೋಡಿ ಮೇಲ್ಮೈಯಲ್ಲಿ ಇರುತ್ತವೆ ಎಂದು ಭಾವಿಸಲಾಗುತ್ತದೆ.
ಶೇನ್ ಎಡ್ವರ್ಡ್ ಬಾಂಡ್ , (ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿ 1975ರ ಜೂನ್ 7ರಂದು ಜನನ) ನ್ಯೂಜಿಲೆಂಡ್ನ ಓರ್ವ ಕ್ರಿಕೆಟ್ ಆಟಗಾರನಾಗಿದ್ದು, "ಸರ್ ರಿಚರ್ಡ್ ಹ್ಯಾಡ್ಲೀಯ ನಂತರದ ನ್ಯೂಜಿಲೆಂಡ್ನ ಅತ್ಯುತ್ತಮ ವೇಗದ ಬೌಲರ್ ಎಂದು ಬಣ್ಣಿಸಲ್ಪಟ್ಟಿದ್ದಾನೆ. ಟೆಸ್ಟ್, ODI ಹಾಗೂ ಟ್ವೆಂಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅವನು ನ್ಯೂಜಿಲೆಂಡ್ನ್ನು ಪ್ರತಿನಿಧಿಸಿರುವುದರ ಜೊತೆಗೆ, ನ್ಯೂಜಿಲೆಂಡ್ ಸ್ವದೇಶಿ ಕ್ರಿಕೆಟ್ನಲ್ಲಿ ಕ್ಯಾಂಟರ್ಬರಿ ತಂಡದ ಪರವಾಗಿ ಮತ್ತು ಇಂಗ್ಲಿಷ್ ಸ್ವದೇಶಿ ಕ್ರಿಕೆಟ್ನಲ್ಲಿ ವಾರ್ವಿಕ್ಷೈರ್ ತಂಡದ ಪರವಾಗಿ ಆಡುತ್ತಿದ್ದಾನೆ. ಬಾಂಡ್ ಓರ್ವ ಬಲಗೈ ವೇಗದ ಬೌಲರ್ ಆಗಿದ್ದಾನೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಅಂಕಗಣಿತ(Aritmetic)ವು ಸಂಖ್ಯೆಗಳ ಕೆಲವು ಪರಿಕ್ರಿಯೆ(Operations)ಗಳ ಲಕ್ಷಣಗಳನ್ನು ತಿಳಿಸುವ ಗಣಿತದ ಒಂದು ವಿಭಾಗ.ಇದು ನಮಗೆ 'ಎಷ್ಟು?', 'ಎಷ್ಟು ದೂರ?', 'ಎಷ್ಟು ಉದ್ದ?' ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.ಅಂಕಗಣಿತವನ್ನು ಕೆಲವೊಮ್ಮೆ ಸಂಖ್ಯೆಗಳ ವಿಜ್ಞಾನ ಎಂದೂ ಕರೆಯುತ್ತಾರೆ. ನಾಗರಿಕತೆಯ ಬೆಳೆವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ¸ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂವಿರ್ಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಲಾಲ್ಬಾಗ್, ಕೆಂಪು ತೋಟ, ಬೆಂಗಳೂರು
ಕೆಂಪು ತೋಟ ಅಥವಾ ಲಾಲ್ಬಾಗ್ ಅಥವಾ ಲಾಲ್ಬಾಗ್ ಸಸ್ಯೋದ್ಯಾನ ವರ್ಣರಂಜಿತ ಫಲ-ಪುಷ್ಪ-ಹಣ್ಣು-ಕಾಯಿಗಳಿಗೆ ಪ್ರಸಿದ್ಧವಾದ ಸಸ್ಯೋದ್ಯಾನ. ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ಉದ್ಯಾನವನವನ್ನು ನಿರ್ಮಿಸಲು ಮೈಸೂರಿನ ಆಡಳಿತ ನಡೆಸುತ್ತಿದ್ದ ಹೈದರಾಲಿ ಸೂಚಿಸಿದ್ದನು.
ಭೌತ ವಿಜ್ಞಾನಿಗಳು ನಿರೂಪಿಸಿರುವ ದಿ ಸ್ಟಾಂಡರ್ಡ್ ಮಾಡೆಲ್ ಸಿದ್ಧಾಂತವು ಅತ್ಯಂತ ಸರಳ ಹಾಗೂ ವ್ಯಾಪಕವಾಗಿದ್ದು, ನೂರಾರು ಕಣಗಳ ಅಸ್ತಿತ್ವ, ಅವುಗಳ ನಡುವಿನ ಸಂಕೀರ್ಣ ಅಂತರಕ್ರಿಯೆಗಳನ್ನು (ಇಂಟರ್ಯಾಕ್ಷನ್) ಕೇವಲ ಆರು ಕ್ವಾರ್ಕ್ಗಳು ಹಾಗೂ ಆರು ಪ್ರತಿ ಕ್ವಾರ್ಕ್ಗಳು, ಆರು ಲೆಪ್ಟಾನ್ ಮತ್ತು ಆರು ಪ್ರತಿಲೆಪ್ಟಾನ್ಗಳು ಮತ್ತು ಬಲವಾಹಕ ಕಣಗಳನ್ನು ಅನ್ವಯಿಸಿ ವಿವರಿಸಿದ್ದಾರೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಡಿಯೇಗೊ ಮೆರಡೋನ (ಅಕ್ಟೋಬರ್ ೩೦, ೧೯೬೦) ಅರ್ಜೆ೦ಟಿನಾದ ಮಾಜಿ ಫುಟ್ಬಾಲ್ ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ ಅರ್ಜೆ೦ಟಿನಾ ರಾಷ್ಟ್ರೀಯ ಫುಟ್ಬಾಲ್ ತ೦ಡದ ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ್ದಿಯೋಗ್ಯವಾದ ವ್ಯಕ್ತಿ ಎಂದೂ ಹೇಳಲಾಗುತ್ತದೆ. ಇವರ ಅ೦ತರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು ೯೧ ಬಾರಿ ಪ್ರತಿನಿಧಿಸಿ ೩೪ ಗೋಲ್-ಗಳನ್ನು ಹೊಡೆದಿರುವರು.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ಅಂಗೈ ರೇಖೆ ನೋಡಿ ಹೇಳುವ ಭವಿಷ್ಯ or ಹಸ್ತ ಸಾಮುದ್ರಿಕ ಶಾಸ್ತ್ರ (ಇದನ್ನು cheiromancy ಎಂತಲೂ ಬರೆಯಲಾಗುತ್ತದೆ, ಗ್ರೀಕ್ನಲ್ಲಿ cheir (χειρ), “hand”; manteia (μαντεία), “divination”), ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹಸ್ತ ಸಾಮುದ್ರಿಕರು , ಹಸ್ತ ಓದುಗರು , ಕೈ ಓದುಗರು , ಹಸ್ತ ವಿಶ್ಲೇಷಕರು ,ಅಥವಾ ಕೈರೊಲೊಜಿಸ್ಟ್ಗಳು ಎಂದು ಕರೆಯಲಾಗುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ.
ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀ ರಾತುಗಳು "ಗುರುತಿನ ಪ್ರತಿ ಅಭಿಪ್ರಾಯ" (ಬ್ರ್ಯಾಂಡ್ ಇಮೇಜ್) ಮತ್ತು "ಗುರುತಿನ ಪ್ರತಿ ನಿಷ್ಠೆ"ಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತು ಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ.
ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ(ಕ್ರಿ.ಪೂ ೩೦೪ - ಕ್ರಿ.ಪೂ ೨೩೨) . ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ. ಕಳಿಂಗ ಯುದ್ಧದ ಬಳಿಕ ಬೌದ್ಧ ಮತವನ್ನು ಪ್ರಚಾರಗೊಳಿಸುವುದರಲ್ಲಿ ತೊಡಗಿಕೊಂಡ ಸಾಮ್ರಾಟ್ ಅಶೋಕ, ವಿಶ್ವದೆಲ್ಲೆಡೆ ಬೌದ್ಧ ಮತ ಹರಡುವಲ್ಲಿ ಪ್ರಮುಖ ಪಾತ್ರವಹಿಸಿದವನು.'ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ದಿ ರೆಸ್ಕ್ಯೂವರ್ಸ್ ೧೯೭೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಜೂನ್ ೨೨, ೧೯೭೭ ರಂದು ಬಿಡುಗಡೆ. ವಾಲ್ಟ್ ಡಿಸ್ನಿ ಅನಿಮೇಟೆಡ್ ಶಾಸ್ತ್ರೀಯ ಸರಣಿಯಲ್ಲಿ ೨೩ ಚಿತ್ರ ಚಿತ್ರ ದೊಡ್ಡ ಜಗತ್ತಿನ ಸುತ್ತ ಅಪಹರಣ ಬಲಿಪಶುಗಳು ಸಹಾಯ ಮೀಸಲಿಟ್ಟ ಪಾರುಗಾಣಿಕಾ ಚಿಕಿತ್ಸೆ ಸೊಸೈಟಿ, ನ್ಯೂ ಯಾರ್ಕ್ ಪ್ರಧಾನ ಕಚೇರಿಯನ್ನು ಮತ್ತು ಯುನೈಟೆಡ್ ನೇಷನ್ಸ್ ನೆರಳು ಅಂತಾರಾಷ್ಟ್ರೀಯ ಮೌಸ್ ಸಂಘಟನೆ, ಸುಮಾರು. ಈ ಇಲಿಗಳ ಎರಡು, ಭಯಗ್ರಸ್ತ ದ್ವಾರಪಾಲಕ ಬರ್ನಾರ್ಡ್ (ಬಾಬ್ ನ್ಯೂಹಾರ್ಟ್) ಮತ್ತು ಅವರ ಸಹ-ದಳ್ಳಾಲಿ, ಸೊಗಸಾದ ಮಿಸ್ ಬಿಯಾಂಕಾ (ಇವಾ ಗ್ಯಾಬೊರ್), ಪೆನ್ನಿ (ಮಿಷೆಲ್ ಸ್ಟೇಸಿ), ನಿಧಿ ಹಂಟ್ರೆಸ್ ಮೂಲಕ ಡೆವಿಲ್ಸ್ ಬೇಊ ರಲ್ಲಿ ಖೈದಿ ಬಂಧಿಗಳಾಗಿದ್ದ ಒಂದು ಅನಾಥ ಹುಡುಗಿಯ ರಕ್ಷಿಸಲು ಔಟ್ ಸೆಟ್ ಮೇಡಮ್ ಮೆಡ್ಯುಸಾ (ಜೆರಾಲ್ಡೀನ್ ಪುಟ).