The most-visited ಕನ್ನಡ Wikipedia articles, updated daily. Learn more...
ವಿದ್ಯುತ್ ಕಾರ್ ಒಂದು ಪ್ಲಗ್-ಅಳವಡಿಸಿ1}ಬ್ಯಾಟರಿ ಶಕ್ತಿಯಿಂದ ಚಾಲನೆಗೊಳಿಸುವ ವಾಹನವಾಗಿದ್ದು ಇದರ ಚಾಲನೆಯುವಿದ್ಯುತ್ ಮೋಟಾರ್(ಗಳು)ಗಳಿಂದ ಆಗುತ್ತದೆ. ವಿದ್ಯುತ್ ಕಾರ್(ವಿದ್ಯುತ್ ಚಾಲಿತ ಕಾರ್)ಗಳು ಸಾಮಾನ್ಯವಾಗಿ ಒಳ್ಳೆಯ ತ್ವರಿತತೆಯನ್ನು ಹಾಗೂ ಒಪ್ಪತಕ್ಕ ಗರಿಷ್ಠ ವೇಗವನ್ನು ಹೊಂದಿದ್ದರೂ,2010ನೆಯ ಇಸವಿಯಲ್ಲಿನ ಇಂಗಾಲ ಮೂಲದ ಇಂಧನಗಳಿಗೆ ಹೋಲಿಸಿದರೆ ಕಡಿಮೆಯೆನಿಸುವ ಬ್ಯಾಟರಿಗಳ ಉತ್ಪಾದನೆಯು ನಿರ್ದಿಷ್ಟ ಸಾಮರ್ಥ್ಯ ಹೊಂದಿರುವುದರಿಂದ ವಾಹನ ದಟ್ಟಣೆಯ ಸಾಕಷ್ಟು ದೊಡ್ಡ ಅಂಶವೇ ಆದ ಬ್ಯಾಟರಿಗಳನ್ನು ಈ ಕಾರ್ ಗಳಿಗೆ ಆಗಾಗ್ಗೆ ತೊಡಿಸಬೇಕಾಗುವುದು ಹಾಗೂ ಹಾಗೆ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಅಂತರದಲ್ಲಿ ಇವುಗಳ ಮಿತಿಯು (ಮೈಲೇಜ್) ಬಹಳ ಕಡಿಮೆ ಇರುತ್ತದೆ. ಮರುಚಾರ್ಜಿಂಗ್ ಗೆ ಸಾಕಷ್ಟು ಸಮಯವೂ ಬೇಕಾಗಬಹುದು.
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ಸೆಂಟಿಮೆಂಟ್ ವಿಶ್ಲೇಷಣೆಯು (ಅಭಿಪ್ರಾಯ ಗಣಿಗಾರಿಕೆ ಎಂದು ಕರೆಯಲಾಗುತ್ತದೆ) ಸ್ವಾಭಾವಿಕ ಭಾಷೆ ಸಂಸ್ಕರಣೆ, ಪಠ್ಯ ವಿಶ್ಲೇಷಣೆ ಮತ್ತು ಗುರುತಿಸಲು ಮತ್ತು ಮೂಲ ವಸ್ತುಗಳಲ್ಲಿ ವೈಯಕ್ತಿಕ ಮಾಹಿತಿ ಹೊರತೆಗೆಯಲು ಎಣಿಕೆಯ ಭಾಷಾಶಾಸ್ತ್ರಗಳು ಬಳಸಿಕೊಳ್ಳುವುದಕ್ಕೆ ಉಲ್ಲೇಖಿತವಾಗಿದೆ. ಸೆಂಟಿಮೆಂಟ್ ವಿಶ್ಲೇಷಣೆ ವ್ಯಾಪಕವಾಗಿ ವಿಮರ್ಶೆಗಳು ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಗ್ರಾಹಕ ಸೇವೆ ಹಿಡಿದು, ಅನ್ವಯಗಳ ವಿವಿಧ ಅನ್ವಯಿಸಲಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ, ಭಾವನೆ ವಿಶ್ಲೇಷಣೆ ಕೆಲವು ವಿಷಯ ಅಥವಾ ಡಾಕ್ಯುಮೆಂಟ್ ಒಟ್ಟಾರೆ ಸಂದರ್ಭೋಚಿತ ಧ್ರುವೀಯತೆಯ ಸಂಬಂಧಿಸಿದಂತೆ ಸ್ಪೀಕರ್ ಅಥವಾ ಬರಹಗಾರ ವರ್ತನೆ ನಿರ್ಧರಿಸಲು ಗುರಿ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲ್ಪಡುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಮೊಬೈಲ್ ಫೋನ್ (ಚರ ದೂರವಾಣಿ) (ಇದನ್ನು ಸೆಲ್ಫೋನ್ ಅಥವಾ ಹ್ಯಾಂಡ್ಫೋನ್ ಎಂತಲೂ ಕರೆಯಲಾಗಿದೆ)ಎಂಬುದು ಸಂವಹನಕ್ಕೆ ಬಳಸಲಾಗುವ ಒಂದು ವಿದ್ಯುನ್ಮಾನ ಉಪಕರಣ ಸಾಧನ. ಸೆಲ್ ಸೈಟ್ಸ್ ಎನ್ನಲಾದ 'ವಿಶಿಷ್ಟ ಬೇಸ್ ಸ್ಟೇಷನ್'ಗಳ 'ಸೆಲ್ಯುಲರ್ ಜಾಲ'ದ ಮೂಲಕ ಮೊಬೈಲ್ ದೂರಸಂವಹನ(ಸೆಲ್ ಸೈಟ್ಸ ಎಂದೂ ಕರೆಯಲಾಗುತ್ತದೆ) ( ಮೊಬೈಲ್ ಫೋನ್ ವ್ಯವಸ್ಥೆ, [[]]ಪಠ್ಯ ಸಂದೇಶ,ಮಾಹಿತಿ ಅಥವಾ ದತ್ತಾಂಶ ರವಾನೆ) ಮಾಡಲು ಈ ದೂರವಾಣಿಯನ್ನು ಬಳಸಲಾಗುತ್ತದೆ. ಮೊಬೈಲ್ಗಳು ನಿಸ್ತಂತು (ಕಾರ್ಡ್ಲೆಸ್) ದೂರವಾಣಿಗಳಿಗಿಂತ ಭಿನ್ನವಾಗಿವೆ.
ಕಾರ್ಮಿಕ ಚಳವಳಿಯ ನೆನಪಿಗಾಗಿ ಮೇ ೧ ಕಾರ್ಮಿಕರ ದಿನ ವಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುತ್ತದೆ.೧೮೬೦ರಿಂದ ದಿನವೊಂದಕ್ಕೆ ೮ ಗಂಟೆಗಳ ಕೆಲಸವನ್ನು ನಿಗದಿಗೊಳಿಸಬೇಕೆಂಬ ಚಳವಳಿ ಆರಂಭವಾಯಿತು.ಅಮೆರಿಕ, ಕೆನಡಾ ದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು.ದಿನವೊಂದಕ್ಕೆ ೧೦,೧೨,೧೪ ಗಂಟೆಗಳ ಕಾಲ ಬಲವಂತವಾಗಿ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು.ಶಿಕಾಗೋ ಸಾವಿರಾರು ಕಾರ್ಮಿಕರ ಸಂಘಟನೆಗಳ ಕೇಂದ್ರವಾಯಿತು.೧೮೮೧ರ ಮೇ ೧ರಂದು ಮೊದಲ ಬಾರಿಗೆ,ದಿನಕ್ಕೆ ೮ ಗಂಟೆಗಳ ಕೆಲಸದ ಕಾನೂನನ್ನು ಜಾರಿಗೊಳಿಸಲಾಯಿತು.ಹೀಗಾಗಿ ಮೇ ೧ ಕಾರ್ಮಿಕರ ದಿನವಾಗಿ ಘೋಷಿತವಾಯಿತು.ಭಾರತದಲ್ಲಿ ೧೯೨೩ರಿಂದ ಮೇ ದಿನವನ್ನು ಆಚರಿಸಲಾಗುತ್ತಿದೆ.
ಅಥರ್ವವೇದಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಕೊನೆಯದು.ಅಥರ್ವಣ ಅಂಗೀರಸ ಋಷಿಗಳು ರಚಿಸಿದ ಮಂತ್ರಗಳಿಂದ ಕೂಡಿದ ವೇದವಾದುದರಿಂದ ಈ ಹೆಸೆರು.ಇದರಲ್ಲಿ ೨೦ ಕಾಂಡಗಳೂ,೭೬೦ ಸೂಕ್ತಗಳೂ,೬೦೦೦ ಮಂತ್ರಗಳೂ ಇವೆ.ಗದ್ಯ ಹಾಗೂ ಪದ್ಯ ಎರಡೂ ಶೈಲಿಯಲ್ಲಿ ರಚಿತವಾಗಿದೆ.ಈ ವೇದದಲ್ಲಿ ವಿವಾಹ ಪದ್ಧತಿ,ಶವಸಂಸ್ಕಾರ,ಗೃಹನಿರ್ಮಾಣ ಮುಂತಾದ ಜನರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಕೂಡಾ ಸೇರಿಕೊಂಡಿದೆ.ಮಾಟ ಮಂತ್ರ,ಯಕ್ಷಿಣಿವಿದ್ಯೆ,ಇಂದ್ರಜಾಲ ಮುಂತಾದವುಗಳೂ ವಿಸ್ತಾರವಾಗಿ ಪ್ರಸ್ತಾಪಿಸಲ್ಪಟ್ಟಿದೆ.ಧನುರ್ವಿದ್ಯೆ,ರೋಗನಿವಾರಣೋಪಾಯ,ಔಷಧಿಗಳ ವಿವರ ಕೂಡಾ ಇದರಲ್ಲಿದೆ.ಯಜ್ಞಯಾಗಾದಿಗಳನ್ನು ನಿರ್ವಹಿಸುವ ಕ್ರಮದ ವಿವರಗಳೂ ಸೇರಿದೆ. ಇದು ದಿನನಿತ್ಯದ ಜೀವನಕ್ಕೆ ಬೇಕಾದ ಜ್ಞಾನವನ್ನು ಕೊಡುವ ಭಂಡಾರವೇ ಆಗಿದೆ. ಇದು ವೇದಗಳ ರಚನೆಯಲ್ಲಿ ಕೊನೆಯದು.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ಮೈಕೆಲ್ಯಾಂಜೆಲೊ ವಿ ಲೊಡೊವಿಕೊ ಬುವೊನರೊಟಿ ಸಿಮೊನಿ (೬ ಮಾರ್ಚ್ ೧೪೭೫ – ೧೮ ಫೆಬ್ರವರಿ ೧೫೬೪), ಮೈಕೆಲ್ಯಾಂಜೆಲೊ ಎಂದೇ ಪ್ರಸಿದ್ಧನಾಗಿದ್ದ ಇಟಲಿಯ ನವೋದಯದ ಅವಧಿಯ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಕವಿ, ಮತ್ತು ಎಂಜಿನಿಯರ್. ಕಲೆಗಳಿಂದ ಆಚೆಗೆ ಆತ ಮಾಡಿದ ಕೆಲವೊಂದು ಪ್ರವೇಶಗಳ ಹೊರತಾಗಿಯೂ, ಆತ ಆಯ್ದುಕೊಂಡ ಕ್ಷೇತ್ರಗಳಲ್ಲಿ ಕಂಡುಬಂದ ಅವನ ಬಹುಮುಖ ಪ್ರತಿಭೆಯು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು. ಇದರಿಂದಾಗಿ ಮೂಲಕಲ್ಪನೆಯ ನವೋದಯದ ಮನುಷ್ಯನೆಂಬ ಶೀರ್ಷಿಕೆಯ ನೀಡುವಿಕೆಗೆ ಸಂಬಂಧಿಸಿದಂತೆ ಅವನ ಪ್ರತಿಸ್ಪರ್ಧಿ ಹಾಗೂ ಇಟಲಿಯ ಸಹವರ್ತಿಯಾದ ಲಿಯೋನಾರ್ಡೊ ಡ ವಿನ್ಸಿಯೊಂದಿಗೆ ಅವನನ್ನು ಅನೇಕಬಾರಿ ಓರ್ವ ಸ್ಪರ್ಧಿಯಂತೆ ಅಥವಾ ಪೈಪೋಟಿಗಾರನಂತೆ ಪರಿಗಣಿಸಲಾಗುತ್ತದೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
"ಕಾರ್ಮಿಕ ಕಾನೂನು (ಅಥವಾ"ಲೇಬೊರ್", ಅಥವಾ"ಉದ್ಯೋಗ" ಕಾನೂನು) ಇದನ್ನು ಕಾನೂನಿನ ರಚನೆಗಳು ಎನ್ನಲಾಗುತ್ತದೆ.ಅಲ್ಲದೇ ಆಡಳಿತಾತ್ಮಕ ನಿಯಮಗಳು,ಅದಲ್ಲದೇ ಕಾನೂನು ಹಕ್ಕುಗಳ ವಿವರಣೆ ಮಾಡುವ,ನಿಬಂಧನೆಗಳುಕಾರ್ಯನಿರತ ಜನರು ಅಲ್ಲದೇ ಅವರ ಸಂಘಟನೆಗಳ ವಿವರವನ್ನೊಳಗೊಂಡಿದೆ. ಇದು ಟ್ರೇಡ್ ಯುನಿಯನ್,ಕಾರ್ಮಿಕ ಸಂಘಟನೆಗಳ ಸಂಬಂಧಿಸಿದ ಹಲವಾರು ಅಂಶಗಳನ್ನು,ಉದ್ಯೋಗದಾತರು ಮತ್ತು ಕಾರ್ಮಿಕರು ಇವರ ಬಗ್ಗೆ ವಿವರಗಳನ್ನು ತಿಳಿಸುತ್ತದೆ. ಕೆನಡಾದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಕಾನೂನುಗಳು ಒಟ್ಟುಗೂಡಿದ ಕೆಲಸದ ತಾಣಗಳ ಬಗ್ಗೆ ಹೇಳುತ್ತವೆಯೇ ವಿನಹ ವ್ಯಕ್ತಿಗಳ ವಿಷಯವನ್ನಲ್ಲ.
ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ , ಚನ್ನಬಸವಣ್ಣನವರದು ಬಹು ಪ್ರಮುಖವಾದುದು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ ; ಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರ. ಹನ್ನೆರಡನೆ ಯ ಶತಮಾನದ ಯುಗಪುರುಷನೂ; ಸಾಮಾಜಿಕ ಬದಲಾವಣೆಗಳ ಹರಿಕಾರನೂ ; ಅಸಮಾನತೆಯ ವಿರುದ್ದ ದನಿಯೆತ್ತಿ ,ವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದ , ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ .
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಯಾವ ಭವ್ಯ ಭಾರತ ಇಸ್ಲಾಮೀ ಭಯೋತ್ಪಾದಕರ ದಾಳಿ, ದೌರ್ಜನ್ಯದ ಆಡಳಿತದವಯಲ್ಲಿ ನಲುಗುತ್ತಿತ್ತೋ, ಯಾವ ಹಿಂದೂಸ್ತಾನದ ಹಿಂದೂಗಳನ್ನು ಪಶುಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿತ್ತೋ... ಅಂಥಾ ದೇಶದ ದಾಸ್ಯಮುಕ್ತಿಗಾಗಿ, ಸ್ವಾಭಿಮಾನಿ ಸ್ವತಂತ್ರ ಜೀವನಕ್ಕಾಗಿ, ಹಿಂದವೀ ಸ್ವರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಮರ್ದ್ ಮರಾಠಾ ನಮ್ಮೆಲ್ಲರ ಹೆಮ್ಮೆಯ ವೀರ ಶಿವಾಜಿ. ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿ ಭೋಂಸ್ಲೆ (ಫೆಬ್ರುವರಿ ೧೯, ೧೬೩೦ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ದಿ ರೆಸ್ಕ್ಯೂವರ್ಸ್ ೧೯೭೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ನಿರ್ಮಾಣದ ಮೊದಲ ಜೂನ್ ೨೨, ೧೯೭೭ ರಂದು ಬಿಡುಗಡೆ. ವಾಲ್ಟ್ ಡಿಸ್ನಿ ಅನಿಮೇಟೆಡ್ ಶಾಸ್ತ್ರೀಯ ಸರಣಿಯಲ್ಲಿ ೨೩ ಚಿತ್ರ ಚಿತ್ರ ದೊಡ್ಡ ಜಗತ್ತಿನ ಸುತ್ತ ಅಪಹರಣ ಬಲಿಪಶುಗಳು ಸಹಾಯ ಮೀಸಲಿಟ್ಟ ಪಾರುಗಾಣಿಕಾ ಚಿಕಿತ್ಸೆ ಸೊಸೈಟಿ, ನ್ಯೂ ಯಾರ್ಕ್ ಪ್ರಧಾನ ಕಚೇರಿಯನ್ನು ಮತ್ತು ಯುನೈಟೆಡ್ ನೇಷನ್ಸ್ ನೆರಳು ಅಂತಾರಾಷ್ಟ್ರೀಯ ಮೌಸ್ ಸಂಘಟನೆ, ಸುಮಾರು. ಈ ಇಲಿಗಳ ಎರಡು, ಭಯಗ್ರಸ್ತ ದ್ವಾರಪಾಲಕ ಬರ್ನಾರ್ಡ್ (ಬಾಬ್ ನ್ಯೂಹಾರ್ಟ್) ಮತ್ತು ಅವರ ಸಹ-ದಳ್ಳಾಲಿ, ಸೊಗಸಾದ ಮಿಸ್ ಬಿಯಾಂಕಾ (ಇವಾ ಗ್ಯಾಬೊರ್), ಪೆನ್ನಿ (ಮಿಷೆಲ್ ಸ್ಟೇಸಿ), ನಿಧಿ ಹಂಟ್ರೆಸ್ ಮೂಲಕ ಡೆವಿಲ್ಸ್ ಬೇಊ ರಲ್ಲಿ ಖೈದಿ ಬಂಧಿಗಳಾಗಿದ್ದ ಒಂದು ಅನಾಥ ಹುಡುಗಿಯ ರಕ್ಷಿಸಲು ಔಟ್ ಸೆಟ್ ಮೇಡಮ್ ಮೆಡ್ಯುಸಾ (ಜೆರಾಲ್ಡೀನ್ ಪುಟ).