The most-visited ಕನ್ನಡ Wikipedia articles, updated daily. Learn more...
ಕ್ರಿಕೆಟ್ ಎಂಬುದು ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಡೊನಾಲ್ಡ್ ಜಾನ್ ಟ್ರಂಪ್ ರವರು 1946 ರ ಜೂನ್ 14 ರಂದು ಜನಿಸಿದರು,ಇವರು ಅಮೆರಿಕದ ಪ್ರಭಾವಿ ಉದ್ಯಮಿಯಾಗಿದ್ದರು,ಲೇಖಕ,ಮಾಧ್ಯಮ ಲೋಕದ ಖ್ಯಾತಿ ಪಡೆದ್ದಿದ್ದರು, ಮತ್ತು ೨೦೧೬ರಲ್ಲಿ ರಾಷ್ಟ್ರಪತಿಗಳ ಹುದ್ದೆಗೆ ಅಭ್ಯರ್ಥಿಯಾಗಿದ್ದರು.ಅವರು ಟ್ರಂಪ್ ಸಂಸ್ಥೆಯ ಅಧ್ಯಕ್ಷ ಮತ್ತು ಟ್ರಂಪ್ ಎಂಟರ್ಟೈನ್ಮೆಂಟ್ ರೆಸಾರ್ಟ್ಸ್ ನ ಸ್ಥಾಪಕರಾಗಿದ್ದರು.ಟ್ರಂಪ್ ವೃತ್ತಿಜೀವನದಲ್ಲಿ, ಮುದ್ರೆಹಾಕುವುದರಲ್ಲಿ ಅವರ ಪ್ರಯತ್ನಗಳು, ಜೀವನ, ಮತ್ತು ನೇರ್ ನುಡಿಗಳು ಅವರನ್ನು ಬಹಳ ವರ್ಷಗಳ ಕಾಲ ಒಬ್ಬ ಖ್ಯಾತ ವ್ಯಕ್ತಿಯನ್ನಾಗಿ ಮಾಡಿತು. ಎನ್ಬಿಸಿ ರಿಯಾಲಿಟಿ ಶೋನಲ್ಲಿ ಅವರು ಕಂಡ ಜನಪ್ರಿಯತೆ ಅವರನ್ನು ಇನ್ನು ಉತ್ತುಂಗಕ್ಕೆ ಯೇರಿಸಿತು.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ (೧೯೧೪ ರ ಮೇತಿಂಗಳ ಕೊನೆ - ೯ ನೇ ಮೇ ೧೯೮೬ )ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫೩ ರಂದು, ಎಡ್ಮಂಡ್ ಹಿಲರಿಯ /೧} ಜೊತೆ ಯಶಸ್ವಿಯಾಗಿ ಗೌರಿಶಂಖರ ಶಿಖರವನ್ನು ತಲುಪಿದ ಮೊದಲನೆ ಇಬ್ಬರು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ತಿಳಿಯಲಾಗಿದೆ. ೨೦ ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನೂರು ವ್ಯಕ್ತಿಗಳಲ್ಲಿ ಒಬ್ಬರೆಂದು ಟೈಮ್ಸ್ ನಿಯತಕಾಲಿಕ ಸಂಚಕೆಯು ಹೆಸರಿಸಿದೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. ಕಂಪ್ಯೂಟರಿಗೆ ಊಡಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ.ಎಚ್ಐವಿ ಸೋಂಕಿತ ವ್ಯಕ್ತಿಯನ್ನು (ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳು ಕಂಡುಬರುತ್ತದೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಮ್ ಮುಂಬಯಿ
ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್ ಎಂದು ಕರೆಯಲ್ಪಡುವ, '(The Prince of Wales Museum of Western India', Mumbai, India) , ೨೦ ನೆಯ ಶತಮಾನದ ಮೊದಲ ಹಂತದಲ್ಲೇ ಸ್ಥಾಪಿಸಲ್ಪಟ್ಟಿತು. ಬೊಂಬಾಯಿನ ಪ್ರತಿಶ್ಠಿತವ್ಯಕ್ತಿಗಳಿಂದ ಹಾಗೂ ಬೊಂಬಾಯಿ ಸರ್ಕಾರದ ಸಹಾಯದಿಂದ, 'ಪ್ರಿನ್ಸ್ ಆಫ್ ವೇಲ್ಸ್' (Prince of Wales), ಭಾವಿ ಇಂಗ್ಲೆಂಡ್ ಅರಸ, 'King George ೫ of the United Kingdom', ರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಈದು ದಕ್ಷಿಣ ಮುಂಬೈ ನ ಪ್ರಮುಖತಾಣಗಳಾದ, ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈ, ಡೇವಿಡ್ ಸಸೂನ್ ಲೈಬ್ರೆರಿ, ರಿದಮ್ ಹೌಸ್, ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈ, ಪೋಲೀಸ್ ಆಯುಕ್ತ, ರೀಗಲ್ ಸಿನೆಮಾ ಹಾಗೂ "ಗೇಟ್ ವೆ ಆಫ್ ಇಂಡಿಯ," ಸ್ಮಾರಕದ ಬಳಿ ಇದೆ.
ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಆರ್.ಕೆ.ನಾರಾಯಣ್ ಓದುಗರಿಗೆ ಮಾಲ್ಗುಡಿಯನ್ನು ಪರಿಚಯಿಸುವುದಕ್ಕೆ ಮುನ್ನವೇ ತಮ್ಮ ಕೃತಿಗಳ ಮೂಲಕ ರಾಮಸ್ವಾಮಿ ಅಯ್ಯಂಗಾರ್ ಅವರು ಗೊರೂರು ಗ್ರಾಮವನ್ನು ಪರಿಚಯಿಸಿದ್ದರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಸೈಬರ್ನೆಟಿಕ್ಸ್ ಎಂಬುವುದು ಯಂತ್ರಮಾನವರ ಅಧ್ಯಯನಕ್ಕೆ ಸಂಬಂಧಿಸಿದ ವಿಜ್ಞಾನದ ಅತ್ಯಾಧುನಿಕ ಶಾಖೆ; ಮಿದುಳು, ನರಮಂಡಲ, ಕಂಪ್ಯೂಟರ್ನಂಥ ಯಂತ್ರಗಳ ಸ್ವನಿಯಂತ್ರಣ ವ್ಯವಸ್ಥೆ ಮತ್ತು ಸ್ವಾಮ್ಯಗಳನ್ನು ಕುರಿತ ಶಾಸ್ತ್ರವಿಭಾಗ (ಮೈಸೂರು ವಿವಿಯ ಇಂಗ್ಲಿಷ್-ಕನ್ನಡ ನಿಘಂಟಿನಲ್ಲಿರುವಂತೆ ). ಯಂತ್ರಮಾನವರ ಅಧ್ಯಯನ ನಡೆಸಲು ಹುಟ್ಟಿಕೊಂಡಿದ್ದ ರೋಬಾಟಿಕ್ಸ್ ತೊಂಬತ್ತರ ದಶಕದ ವೇಳೆಗೆ ಈ ಹೊಸ ಶಾಖೆಗೆ ಜನ್ಮನೀಡಿತು. ರೋಬಾಟಿಕ್ಸ್ನಲ್ಲಿ ಕೇವಲ ಯಂತ್ರದಂತೆ ದುಡಿಯುತ್ತ ಮನುಷ್ಯರಿಗೆ ಸಹಾಯಕರಾಗಿದ್ದ ರೋಬಾಟ್ಗಳು, ಸೈಬರ್ನೆಟಿಕ್ಸ್ನ ಉಗಮವಾದ ಮೇಲೆ ಮನುಷ್ಯನ ನರಮಂಡಲಗಳು ಹಾಗೂ ಜ್ಞಾನವಾಹಕಗಳನ್ನೂ ಪಡೆದುಕೊಳ್ಳಲಾರಂಭಿಸಿದವು.
ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ ಸಂಸ್ಕೃತ:पञ्चतन्त्र(IAST: ಪಂಚತಂತ್ರ, 'ಐದು ಮೂಲತತ್ವಗಳು') ಕ್ರಿಸ್ತ ಪೂರ್ವ 3 ರನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, "ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು" ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು "ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ" ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು.
ಮಯನ್ಮಾರ್ ( ಅಧಿಕೃತವಾಗಿ ಮಯನ್ಮಾರ್ ಒಕ್ಕೂಟ -- ಉಚ್ಛಾರ:-Myanmar:(myan-mar/ Listeni/miɑːnˈmɑr/ mee-ahn-mar, /miˈɛnmɑr/ mee-en-mar or /maɪˈænmɑr/ my-an-mar (also with the stress on first syllable); Burmese pronunciation:ಮೀಯಾನ್ಮಾರ್ [mjəmà])೧,officially the Republic of the Union of Myanmar and also known as Burma) ಆಗ್ನೇಯ ಏಷ್ಯಾದ ಮುಖ್ಯಭೂಭಾಗದಲ್ಲಿನ ಅತ್ಯಂತ ದೊಡ್ಡ ರಾಷ್ಟ್ರವಾಗಿದೆ. ೧೯೪೮ರ ಜನವರಿ ೪ ರಂದು ಯುನೈಟೆಡ್ ಕಿಂಗ್ಡಂ ఇంದ ಸ್ವಾತಂತ್ರ್ಯ ಪಡೆದ ಈ ನಾಡು ಅಂದು ಬರ್ಮಾ ಒಕ್ಕೂಟವೆಂದು ಕರೆಯಲ್ಪಟ್ಟಿತು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣ
ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಅವಶ್ಯಕ.ಹೆಣ್ಣು ಮತ್ತು ಗಂಡು ಎಂಬ ಜೈವಿಕ ಲಕ್ಷಣಗಳು ಲಿಂಗ ಎಂಬುದಾಗಿ ವ್ಯಕ್ತಿಯ ಹುಟ್ಟಿನಿಂದಲೇ ನಿರ್ಧರವಾಗುತ್ತದೆ. ಲಿಂಗವು ಸೃಷ್ಟಿಯ ಸಹಜ ಸ್ಥಿ ತಿ. ದೈಹಿಕ ರಚನೆ ಹಾಗೂ ಸಂತಾನೋತ್ಪತಿಯ ಕ್ರಿಯೆಗಳಲ್ಲಿ ಹೆಣ್ಣು ಹಾಗು ಗಂಡು ವಿಶೇಷವಾದ ಗುಣಗಳನ್ನು ಹೊಂದಿದ್ದಾರೆ.
ಭಗತ್ ಸಿಂಗ್(೧೯೦೭–೧೯೩೧) ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಭಾರತದ ಮೊದಲ ಮಾರ್ಕ್ಸಿಸ್ಟ್ ಗಳಲ್ಲೊಬ್ಬರು. ಭಗತ್ ಸಿಂಗ್ ಅವರು ಸೆಪ್ಟೆಂಬರ್ ೨೭, ೧೯೦೭ರಲ್ಲಿ ಪಂಜಾಬ್ ಲಾಯಲ್ ಪುರ ಜಿಲ್ಲೆಯ 'ಬಾಂಗಾ' ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಜನಿಸಿದರು. ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು.