The most-visited English Wikipedia articles, updated daily. Learn more...
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದುದು ೨೦೧೫-೨೦೧೬ನೇ ಸಾಲಿನಲ್ಲಿ. (ಆಂಗ್ಲ:Clean India Mission)ಇದು ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ . ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು.
ಕಿತ್ತೂರು ರಾಣಿ ಚೆನ್ನಮ್ಮ (೧೭೭೮-೧೮೨೯) ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲ್ಪಡುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ.
ಭಾರತದಲ್ಲಿ ಭ್ರಷ್ಟಾಚಾರ ಪ್ರತಿಕೂಲ ಆರ್ಥಿಕತೆಗೂ ಭಾವಿಸುವ ಒಂದು ಪ್ರಮುಖ ವಿಷಯವಾಗಿದೆ.೨೦೦೫ ರಲ್ಲಿ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ನಡೆಸಿದ ಅಧ್ಯಯನವು ಭಾರತೀಯರ ಹೆಚ್ಚು ೬೨% ಉದ್ಯೋಗಗಳು ಯಶಸ್ವಿಯಾಗಿ ಸಾರ್ವಜನಿಕ ಕಚೇರಿಗಳಲ್ಲಿ ಕೆಲಸ ಮಾಡಲು ಪ್ರಭಾವ ಪಾವತಿ ಖುದ್ದು ಅನುಭವ ಕಂಡುಕೊಂಡರು .೨೦೦೮ ರಲ್ಲಿ ನಡೆಸಿದ ಅಧ್ಯಯನದ ಬಗ್ಗೆ, ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಭಾರತೀಯರು ಸುಮಾರು ೪೦% ಲಂಚಗಳನ್ನು ಅಥವಾ ಕೆಲಸ ಸಾರ್ವಜನಿಕ ಕಚೇರಿಯಲ್ಲಿ ಕೆಲಸ ಮಾಡಲು ಸಂಪರ್ಕ ಬಳಸಿಕೊಂಡು ಖುದ್ದು ಅನುಭವ ವರದಿಗಳು. ೨೦೧೪ ರಲ್ಲಿ ಭಾರತದ ನೆರೆ ಭೂತಾನ್(೩೦), ಬಾಂಗ್ಲಾದೇಶ (೧೪೫), ಮ್ಯಾನ್ಮಾರ್ (೧೫೬), ಚೀನಾ (೧೦೦), ನೇಪಾಳ (೧೨೬), ಪಾಕಿಸ್ತಾನ (೧೨೬) ಮತ್ತು ಹೋಲಿಸಿದರೆ, ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಭ್ರಷ್ಟಾಚಾರ ವೇದ್ಯ ಸೂಚ್ಯಂಕ ೧೭೫ ರಾಷ್ಟ್ರಗಳಲ್ಲಿ ೮೫ ನೇ ಸ್ಥಾನ ಶ್ರೀಲಂಕಾ (೮೫ ನೇ).೨೦೧೩ ರಲ್ಲಿ, ಭಾರತ ೧೭೫ ದೇಶಗಳಲ್ಲಿ ೯೪ ನೇ ಸ್ಥಾನವನ್ನು ಪಡೆಯಿತು. ಭಾರತದಲ್ಲಿ ಭ್ರಷ್ಟಾಚಾರ ದೊಡ್ಡ ಮೂಲಗಳ ಅತ್ಯಂತ ಅರ್ಹತೆಗಿಂತ ಕಾರ್ಯಕ್ರಮಗಳ ಮತ್ತು ಭಾರತೀಯ ಸರ್ಕಾರ ರಚಿಸಿದ ಸಾಮಾಜಿಕ ಖರ್ಚು ಯೋಜನೆಗಳು ಇವೆ.
ಹೃದಯ ಸ್ನಾಯುವಿನ ಊತಕ ಸಾವು (MI ) ಅಥವಾ ತೀವ್ರ ಹೃದಯ ಸ್ನಾಯುವಿನ ಊತಕ ಸಾವು (AMI ) ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿಯ-ಕಾಠಿಣ್ಯದ ಪ್ಲೇಕ್(ತಂತುಯುಕ್ತವಾದ ಊತಕದ ಶೇಖರಣೆ)ಯ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ (ತಡೆಗಟ್ಟುವಿಕೆ). ಈ ಪ್ಲೇಕ್ ಅಪಧಮನಿಯ ಪೊರೆಯಲ್ಲಿ ಲಿಪಿಡ್ಗಳು (ಕೊಬ್ಬಿನಾಮ್ಲಗಳು) ಮತ್ತು ಬಿಳಿರಕ್ತಕಣಗಳ (ವಿಶೇಷವಾಗಿ ಮ್ಯಾಕ್ರೊಫೇಜ್ಗಳು) ಅಸ್ಥಿರ ಸಂಗ್ರಹವಾಗಿದೆ.
ವಿದ್ಯುತ್ ಕಾರ್ ಒಂದು ಪ್ಲಗ್-ಅಳವಡಿಸಿ1}ಬ್ಯಾಟರಿ ಶಕ್ತಿಯಿಂದ ಚಾಲನೆಗೊಳಿಸುವ ವಾಹನವಾಗಿದ್ದು ಇದರ ಚಾಲನೆಯುವಿದ್ಯುತ್ ಮೋಟಾರ್(ಗಳು)ಗಳಿಂದ ಆಗುತ್ತದೆ. ವಿದ್ಯುತ್ ಕಾರ್(ವಿದ್ಯುತ್ ಚಾಲಿತ ಕಾರ್)ಗಳು ಸಾಮಾನ್ಯವಾಗಿ ಒಳ್ಳೆಯ ತ್ವರಿತತೆಯನ್ನು ಹಾಗೂ ಒಪ್ಪತಕ್ಕ ಗರಿಷ್ಠ ವೇಗವನ್ನು ಹೊಂದಿದ್ದರೂ,2010ನೆಯ ಇಸವಿಯಲ್ಲಿನ ಇಂಗಾಲ ಮೂಲದ ಇಂಧನಗಳಿಗೆ ಹೋಲಿಸಿದರೆ ಕಡಿಮೆಯೆನಿಸುವ ಬ್ಯಾಟರಿಗಳ ಉತ್ಪಾದನೆಯು ನಿರ್ದಿಷ್ಟ ಸಾಮರ್ಥ್ಯ ಹೊಂದಿರುವುದರಿಂದ ವಾಹನ ದಟ್ಟಣೆಯ ಸಾಕಷ್ಟು ದೊಡ್ಡ ಅಂಶವೇ ಆದ ಬ್ಯಾಟರಿಗಳನ್ನು ಈ ಕಾರ್ ಗಳಿಗೆ ಆಗಾಗ್ಗೆ ತೊಡಿಸಬೇಕಾಗುವುದು ಹಾಗೂ ಹಾಗೆ ಬ್ಯಾಟರಿಗಳನ್ನು ಚಾರ್ಜ್ ಮಾಡುವ ಅಂತರದಲ್ಲಿ ಇವುಗಳ ಮಿತಿಯು (ಮೈಲೇಜ್) ಬಹಳ ಕಡಿಮೆ ಇರುತ್ತದೆ. ಮರುಚಾರ್ಜಿಂಗ್ ಗೆ ಸಾಕಷ್ಟು ಸಮಯವೂ ಬೇಕಾಗಬಹುದು.
ಹ್ಯಾಂಬರ್ಗ್ (pronounced /ˈhæmbɜrɡ/; German pronunciation: [ˈhambʊʁk], ಸ್ಥಳೀಯ ಉಚ್ಚಾರಣೆ [ˈhambʊɪç] ಲೋ ಜರ್ಮನ್/ಲೋ ಸ್ಯಾಕ್ಸನ್: ಹ್ಯಾಂಬೊರ್ಗ್ [ˈhambɔːx]) ಜರ್ಮನಿಯಲ್ಲಿನ ಎರಡನೇ-ಅತಿದೊಡ್ಡ ನಗರವಾಗಿದೆ ಮತ್ತು ಐರೋಪ್ಯ ಒಕ್ಕೂಟದಲ್ಲಿನ ಏಳನೇ-ಅತಿದೊಡ್ಡ ನಗರವಾಗಿದೆ. 1.8 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಈ ನಗರವು ನೆಲೆಯಾಗಿದ್ದರೆ, ಹ್ಯಾಂಬರ್ಗ್ ಮಹಾನಗರದ ಪ್ರದೇಶವು (ನೆರೆಹೊರೆಯ ಒಕ್ಕೂಟದ ಸಂಸ್ಥಾನಗಳಾದ ಲೋಯರ್ ಸ್ಯಾಕ್ಸನಿ ಮತ್ತು ಸ್ಕ್ಲೆಸ್ವಿಗ್-ಹಾಲ್ಸ್ಟೀನ್ನ ಭಾಗಗಳನ್ನು ಒಳಗೊಂಡಂತೆ) 4.3 ದಶಲಕ್ಷಕ್ಕೂ ಹೆಚ್ಚಿನ ನಿವಾಸಿಗಳನ್ನು ಹೊಂದಿದೆ. ಹ್ಯಾಂಬರ್ಗ್ನ ಬಂದರು ಯುರೋಪ್ನಲ್ಲಿನ ಮೂರನೇ-ಅತಿದೊಡ್ಡ ಬಂದರಾಗಿದೆ (ರೋಟರ್ಡ್ಯಾಮ್ ಹಾಗೂ ಆಂಟ್ವೆರ್ಪ್ ಬಂದರುಗಳು ಮೊದಲಿನ ಎರಡು ಸ್ಥಾನಗಳಲ್ಲಿವೆ) ಮತ್ತು ಪ್ರಪಂಚದಲ್ಲಿನ ಎಂಟನೇ ಅತಿದೊಡ್ಡ ಬಂದರಾಗಿದೆ.
ಕ್ಯಾನ್ಸರ್ (/ˈkænsə(r)/ ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
ರಷ್ಯಾ (ರಷ್ಯನ್: Россия), ಅಧಿಕೃತವಾಗಿ ರಸಿಸ್ಕಾಯಾ ಫೇಡರಾಟ್ಸಿಯ (ರಷ್ಯನ್: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ)ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್' [[೧]](Telugu: సర్వేపల్లి రాధాకృష్ణ, (Kannada: ಸರ್ವಪಲ್ಲಿ ರಾಧಾಕೃಷ್ಣನ್) (ಜನನ : ೫ ನೇ ಸೆಪ್ಟೆಂಬರ್, ೧೮೮೮.) ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ.
ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ.ಎಚ್ಐವಿ ಸೋಂಕಿತ ವ್ಯಕ್ತಿಯನ್ನು (ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳು ಕಂಡುಬರುತ್ತದೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ.ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ. ತಪ್ಪಿಸಿದ ಋತುಚಕ್ರ, ಕೋಮಲ ಸ್ತನಗಳು, ವಾಕರಿಕೆ ಮತ್ತು ವಾಂತಿ, ಹಸಿವು ಮತ್ತು ಪದೇ ಪದೇ ಮೂತ್ರವಿಸರ್ಜನೆ ಇವು ಗರ್ಭಧಾರಣೆಯ ಲಕ್ಷಣಗಳು.
೨೦೦೮ ರ ನವೆಂಬರ್ ೨೬ ರಂದು ಪಾಕೀಸ್ತಾನದ ೧೦ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ ೧೬೬ ಜನ ಅಮಾಯಕರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಪಾರುಮಾಡಲು ನ್ಯಾಷನಲ್ ಸೆಕ್ಯೂರಿಟೀ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು. ಗುಂಡು ಅವರ ಎದೆಗೆ ನಾಟಿದಾಗಲೂ, " ದಯವಿಟ್ಟು ಮೇಲೆಹತ್ತಿಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ", ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ ನನ್ನು, ಎನ್.ಎಸ್.ಜಿ.ಅಧಿಕಾರಿಗಳು ನೆನೆಯುತ್ತಾರೆ.
ಕ್ಯಾಲ್ಗರಿ ಯು (pronounced /ˈkælɡri, ˈkælɡəri/) ಕೆನಡಾದ ಆಲ್ಬರ್ಟಾ ಪ್ರಾಂತ್ಯದ ಅತಿ ದೊಡ್ಡ ನಗರವಾಗಿದೆ. ಇದು ಈ ಪ್ರಾಂತ್ಯದ ದಕ್ಷಿಣಕ್ಕೆ, ಅಡಿಗುಡ್ಡ ಮತ್ತು ಪ್ರೇರಿ ಪ್ರದೇಶದಲ್ಲಿ, ಕೆನಡಿಯನ್ ರಾಕೀಸ್ನ ಮುಂಭಾಗದ ಶ್ರೇಣಿಗಳಿಂದ(ಫ್ರಂಟ್ ರೇಂಜಸ್) ಸರಿಸುಮಾರು 80 km (50 mi) ಪೂರ್ವ ಭಾಗಕ್ಕೆ ನೆಲೆಸಿದೆ. ಈ ನಗರವು ಆಲ್ಬರ್ಟಾದ ಹುಲ್ಲುಗಾವಲು ಪ್ರದೇಶದಲ್ಲಿದೆ.