The most-visited English Wikipedia articles, updated daily. Learn more...
ರಷ್ಯಾ (ರಷ್ಯನ್: Россия), ಅಧಿಕೃತವಾಗಿ ರಸಿಸ್ಕಾಯಾ ಫೇಡರಾಟ್ಸಿಯ (ರಷ್ಯನ್: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ)ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
ಉತ್ತರಾಖಂಡ (ಹಿಂದಿಯಲ್ಲಿ: उत्तराखण्ड ಯಾ उत्तराखंड)( ಮೊದಲಿನ ಹೆಸರು ಉತ್ತರಾಂಚಲ ) ರಾಜ್ಯವನ್ನು ಭಾರತ ಗಣರಾಜ್ಯದ ೨೭ನೆಯ ರಾಜ್ಯವನ್ನಾಗಿ ೨೦೦೦ರ ನವೆಂಬರ್ ೯ ರಂದು ರಚಿಸಲಾಯಿತು. ಉತ್ತರಪ್ರದೇಶ ರಾಜ್ಯದ ಹಿಮಾಲಯಪರ್ವತ ಪ್ರಾಂತ್ಯವನ್ನು ಬೇರಾಗಿಸಿ ಉತ್ತರಾಖಂಡ ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ರಾಜ್ಯದ ಉತ್ತರಕ್ಕೆ ಟಿಬೆಟ್ , ಪೂರ್ವಕ್ಕೆ ನೇಪಾಲ , ದಕ್ಷಿಣ ಹಾಗೂ ಪಶ್ಚಿಮಕ್ಕೆ ಉತ್ತರಪ್ರದೇಶ ರಾಜ್ಯ ಇವೆ.
ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಶಗಳಿಂದ ಉಂಟಾಗುವು ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ.ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭಾರತದಲ್ಲಿನ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿಗಳ ಒಂದು ವೃತ್ತಿಪರ ಲೀಗ್ ಆಗಿದೆ. ಇದನ್ನು ಭಾರತದ ಕ್ರಿಕೆಟ್ (ಬಿಸಿಸಿಐ) ನಿಯಂತ್ರಣ ಮಂಡಳಿ ಆರಂಭಿಸಿದೆ.ಇದು ಮುಂಬಯಿ, ಮಹಾರಾಷ್ಟ್ರ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀಗ್ ನ ಅಧ್ಯಕ್ಷ ಮತ್ತು ಆಯುಕ್ತರಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕಾರ್ಯನಿರ್ವಹಿಸುತ್ತಿದ್ದಾರೆ.ಇದರಲ್ಲಿ ಕ್ರಿಕೆಟ್ ಜಗತ್ತಿನ ಹಲವು ದೇಶಗಳ ಆಟಗಾರರನ್ನು ಹೊಂದಿರುವ, ಎಂಟು ತಂಡಗಳು ಸ್ಪರ್ಧಿಸುತ್ತವೆ.
ನೀಲಗಿರಿಯು (pronounced /ˌjuːkəˈlɪptəs/ ) ಮಿರ್ಟ್ಲ್ ಕುಟುಂಬವಾದ ಮಿರ್ಟೇಸಿಯಲ್ಲಿನ ಹೂಬಿಡುವ ಮರಗಳ (ಮತ್ತು ಕೆಲವೊಂದು ಪೊದೆಸಸ್ಯಗಳ) ಒಂದು ಬಹುವಿಧದ ಕುಲವಾಗಿದೆ. ಈ ಕುಲದ ಸದಸ್ಯ ಮರಗಳನ್ನು ಆಸ್ಟ್ರೇಲಿಯಾದ ಮರದ ಸಸ್ಯಸಂಪತ್ತು ವ್ಯಾಪಿಸಿದೆ. ಬಹುತೇಕವಾಗಿ ಆಸ್ಟ್ರೇಲಿಯಾದ ಸ್ಥಳೀಯ ಸಸ್ಯವಾಗಿರುವ ನೀಲಗಿರಿ ಯ ೭೦೦ಕ್ಕೂ ಹೆಚ್ಚು ಜಾತಿಗಳು ಅಸ್ತಿತ್ವದಲ್ಲಿವೆ, ಮತ್ತು ಅತ್ಯಂತ ಚಿಕ್ಕ ಸಂಖ್ಯೆಯಲ್ಲಿ ಇವು ನ್ಯೂಗಿನಿಯಾ ಮತ್ತು ಇಂಡೋನೇಷ್ಯಾದ ಮಗ್ಗುಲಿನ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗೂ ಫಿಲಿಪ್ಪೀನ್ ದ್ವೀಪಸಮೂಹದಷ್ಟು ದೂರದ ಉತ್ತರ ಭಾಗದಲ್ಲಿ ಒಂದು ಜಾತಿಯು ಕಾಣಿಸಿಕೊಳ್ಳುತ್ತದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಸಲ್ಪಡುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ. ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಹುಟ್ಟಿದಾಗ ನಮ್ ಗ್ಯಾಲ್ ವಂಗಡಿ ಎಂದೂ ಆಗಾಗ್ಗೆ ತೇನ್ಸಿಂಗ್ ನೋರ್ಗೆ ಎಂದು ಕರೆಯಲ್ಪಡುವ ಸುಪ್ರದಿಪ್ತ - ಮಾನ್ಯಭಾರ - ನೇಪಾಳಿ - ತಾರ ತೇನ್ಸಿಂಗ್ ನೋರ್ಗೆ, ಜಿ ಎಮ್ (೧೯೧೪ ರ ಮೇತಿಂಗಳ ಕೊನೆ - ೯ ನೇ ಮೇ ೧೯೮೬ )ನೇಪಾಳಿ - ಭಾರತೀಯ ಶೇರ್ಪ ಪರ್ವತಾರೋಹಿಯಾಗಿದ್ದರು. ಇತಿಹಾಸದಲ್ಲಿ ಪರ್ವತವನ್ನು ಏರಿದ ಅತ್ಯಂತ ಹೆಸರುವಾಸಿಯಾದವರ ಪೈಕಿ, ೨೯ ನೇ ಮೇ ೧೯೫೩ ರಂದು, ಎಡ್ಮಂಡ್ ಹಿಲರಿಯ /೧} ಜೊತೆ ಯಶಸ್ವಿಯಾಗಿ ಗೌರಿಶಂಖರ ಶಿಖರವನ್ನು ತಲುಪಿದ ಮೊದಲನೆ ಇಬ್ಬರು ವ್ಯಕ್ತಿಗಳಲ್ಲಿ ಇವರೂ ಒಬ್ಬರೆಂದು ತಿಳಿಯಲಾಗಿದೆ. ೨೦ ನೇ ಶತಮಾನದ ಅತ್ಯಂತ ಪ್ರಭಾವಶಾಲಿ ನೂರು ವ್ಯಕ್ತಿಗಳಲ್ಲಿ ಒಬ್ಬರೆಂದು ಟೈಮ್ಸ್ ನಿಯತಕಾಲಿಕ ಸಂಚಕೆಯು ಹೆಸರಿಸಿದೆ.
ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆಯಿಂದ (United Nations General Assembly) ೧೯೭೨ರ ಇಸವಿಯಿಂದ ಪ್ರಾರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ್ರ ೫ ಜೂನ್ ದಿನಾಂಕದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ . ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದ ವಿಶ್ವ ಪರಿಸರ ದಿನವು ಪ್ರತಿ ವರ್ಷವೂ ಅನ್ಯ ದೇಶಗಳ ನಗರದಲ್ಲಿ ಜೂನ್ ೫ ದಿನಾಂಕದ ವಾರದಲ್ಲಿ ಆಚರಿಸಲಾಗುತ್ತದೆ. ಆಚರಣೆಯಲ್ಲಿ ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ.ಎಚ್ಐವಿ ಸೋಂಕಿತ ವ್ಯಕ್ತಿಯನ್ನು (ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳು ಕಂಡುಬರುತ್ತದೆ.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ಭಗತ್ ಸಿಂಗ್(೧೯೦೭–೧೯೩೧) ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಮತ್ತು ಭಾರತದ ಮೊದಲ ಮಾರ್ಕ್ಸಿಸ್ಟ್ ಗಳಲ್ಲೊಬ್ಬರು. ಭಗತ್ ಸಿಂಗ್ ಅವರು ಸೆಪ್ಟೆಂಬರ್ ೨೭, ೧೯೦೭ರಲ್ಲಿ ಪಂಜಾಬ್ ಲಾಯಲ್ ಪುರ ಜಿಲ್ಲೆಯ 'ಬಾಂಗಾ' ಎಂಬ ಹಳ್ಳಿಯ ಸಿಖ್ ಸಮುದಾಯದ ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರಿಗೆ ಜನಿಸಿದರು. ಜಲಿಯನ್ ವಾಲಾ ಬಾಗ್ ದುರಂತದಿಂದ ಪ್ರಭಾವಿತರಾದ ಇವರು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಗೋಡಂಬಿ ಯು ಅನಾಕಾರ್ಡಿಯೇಸಿ ಎಂಬ ಹೂಬಿಡುವ ಸಸ್ಯ ವಂಶದಲ್ಲಿನ ಒಂದು ದ್ವಿದಳ ಧಾನ್ಯ ಸಸ್ಯದ ಬೀಜಕೋಶವಾಗಿದೆ. ಇದರ ಸಸ್ಯವು ಈಶಾನ್ಯ ಬ್ರೆಜಿಲ್ಗೆ ಸ್ಥಳೀಕವಾಗಿದೆ. ಗೋಡಂಬಿ ಮರದ ಹಣ್ಣಿಗಾಗಿರುವ ಪೋರ್ಚುಗೀಸ್ ಹೆಸರಾಗಿರುವ ಕಾಜು ಎಂಬುದರಿಂದ ಇದರ ಇಂಗ್ಲಿಷ್ ಹೆಸರು ಜನ್ಯವಾಗಿದೆ; ಕಾಜು ಎಂಬ ಹೆಸರು ಸ್ಥಳೀಯ ಟೂಪಿ ಭಾಷೆಯಲ್ಲಿನ ಹೆಸರಾದ ಅಕಾಜು ಎಂಬುದರಿಂದ ಹುಟ್ಟಿಕೊಂಡಿದೆ.
ಶ್ರೀ ಕನಕದಾಸರು[ತಿಮ್ಮಪ್ಪನಾಯಕ] (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕಬ್ಬು ಅತಿ ಉಪಯುಕ್ತ ಬಹುವಾರ್ಷಿಕ ದೈತ್ಯಾಕಾರದ ಹುಲ್ಲು.ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಛಾ ವಸ್ತು.ಸಿಹಿ ಪದಾರ್ಥಗಳನೇಕವಿದ್ದರೂ ಮಾನವರಿಗೆ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ. ಸಕ್ಕರೆ ಹೊಂದಿರುವ ಸಸ್ಯಗಳು ಹಲವು ಇವೆ. ಆದರೆ ಸಕ್ಕರೆಯ ಅಧಿಕ ಉತ್ಪನ್ನಕ್ಕೆ ಸಹಾಯಕವಾಗುವುದು ಕಬ್ಬು ಮತ್ತು ಸಕ್ಕರೆ ಬೀಟ್ ಗೆಡ್ಡೆಗಳು ಮಾತ್ರ.
ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿದೆ.