The most-visited ಕನ್ನಡ Wikipedia articles, updated daily. Learn more...
ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದುದು ೨೦೧೫-೨೦೧೬ನೇ ಸಾಲಿನಲ್ಲಿ. (ಆಂಗ್ಲ:Clean India Mission)ಇದು ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ . .ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ gfhvಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ.ಎಚ್ಐವಿ ಸೋಂಕಿತ ವ್ಯಕ್ತಿಯನ್ನು (ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳು ಕಂಡುಬರುತ್ತದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ಜಾಗತಿಕ ತಾಪಮಾನ ನಿಯಂತ್ರಣ ಜಾಗತಿಕ ತಾಪಮಾನ ಏರಿಕೆ ಯೆಂದರೆ 20ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1509-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಜೇಡರ ದಾಸಿಮಯ್ಯ (ಕ್ರಿ.ಶ. ಸು. ೧೧೪೦)
ಈತನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂಬ ಎರಡು ರೀತಿಯಲ್ಲಿ ಗುರುತಿಸಲಾಗುತ್ತದೆಯಾದರೂ ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯವಸ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿದ್ದಾರೆ. ವೃತ್ತಿಯಲ್ಲಿ ನೆಯ್ಗೆಕಾರನಾದದಾಸಿಮಯ್ಯ ಶಿವನಿಗೇ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಲ್ಲೇಕಗಳು ಸಿಗುತ್ತವೆ. ದುಗ್ಗಲೆ/ಸುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ.ಸುರಪುರ ತಾಲೂಕಿನ ಮುದನೂರಿಸವನಅದ ನೃಕರ ದಾಸಿಮಯ್ಯ ತನ್ನ ಸತಿ ದುಗ್ಗಲೆಯೊಂದಿಗೆ ಕಾಯಕವನ್ನೇ ಕೈಲಾಸವಾಗಿಸಿಕೊಡ ಸಾಧಕ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಪರಿಸರ ಇದೇ ಲೇಖನ. ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ಸ್ವಾಭಾವಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೀವಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.
ಸಂಸ್ಕೃತ ಆಲಂಕಾರಿಕ ರಾಜಶೇಖರ ಕಾವ್ಯಕವಿ, ಶಾಸ್ತ್ರಕವಿ, ಉಭಯಕವಿ ಎಂಬ ಮೂರು ಬಗೆಯ ಕೃತಿಕಾರರನ್ನು ಗುರುತಿಸುತ್ತಾನೆ: ಕಾವ್ಯಕವಿ ರಮಣೀಯವಾಗಿ ಬರೆಯಬಲ್ಲನೇ ಹೊರತು ಖಚಿತತೆ ಪ್ರಧಾನ ಲಕ್ಷಣವಾದ ಶಾಸ್ತ್ರಭಾಗಗಳನ್ನು ಬರೆಯುವಲ್ಲಿ ಅವನು ಸೋತುಬಿಡಬಹುದು. ಶಾಸ್ತ್ರಕವಿ ಶಾಸ್ತ್ರಭಾಗಗಳನ್ನು ತರ್ಕಬದ್ಧವಾಗಿ ನಿರೂಪಿಸಬಲ್ಲವನಾದರೂ ಕಾವ್ಯಭಾಗಗಳನ್ನು ಬರೆಯುವಾಗ ನೀರಸವಾಗಿ ಬಿಡಬಹುದು. ಉಭಯಕವಿ ಮಾತ್ರ ಕಾವ್ಯ ಶಾಸ್ತ್ರಗಳೆರಡನ್ನೂ ಅವುಗಳಿಗೆ ಅಪಚಾರ ವೆಸಗದಂತೆ ಬರೆಯುವ ಸಮರ್ಥ ಎಂದು ರಾಜಶೇಖರ ಅಂಥವನನ್ನು ಹೊಗಳಿದ್ದಾನೆ.
ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ,ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಶಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು .ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು.
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. ಕಂಪ್ಯೂಟರ್ ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಉಪಯೋಗಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ..
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್ಕಿನ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ.
revision of annual fees pertaining to bsc, nursing pharma and BPT OF karnataka state private nursing and paramedical college management seats prescribes as per (1) of the above read in government order as per the letter of director of medical education mentioned above in read (2) of the private medical college management seats fees revision as mentioned below after duly verify with relevent documents and records pertaining to the private nursing. college management seats annual fees havebeen revised by the following government order. the private institutions management seats fee has been revised with immediate effect till the further orders ಸಾಮ್ರಾಟ್ ಅಶೋಕ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ(ಕ್ರಿ.ಪೂ ೩೦೪ - ಕ್ರಿ.ಪೂ ೨೩೨).
ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆ ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿ ನಾಲ್ಕು ಮುಖ್ಯ ಭಾಗಗಳಿವೆ, ಯೋನಿ (ಗರ್ಭಕೊಳವೆ) ಗರ್ಭಕೋಶ ೨ ಅಂಡಾಶಯಗಳು ೨ ಫಲೋಪಿಯನ್ ಕೊಳವೆ ಈ ರೀತಿಯಾಗಿ ೪ ಅಂಡಾಶಯಗಳು ಹಲವಾರು ಮೊಟ್ಟೆಗಳನ್ನು ಹೊಂದಿರುತ್ತವೆ. ೧೦-೧೮ ವಯಸ್ಸಿನೊಳಗೆ ಈ ಅಂಡಗಳು ಬೆಳೆದು ಹಣ್ಣಾಗತೊಡಗುತ್ತವೆ. ಪ್ರತಿ ತಿಂಗಳು ಈ ಫಲೋಪಿಯನ್ ಕೊಳವೆಗಳ ಮೂಲಕ ಗಭ್ಯಯ ತಲುಪುವಂತೆ ಈ ಅಂಡಾಶಯಗಳು ಅಂಡಾಣುವನ್ನು ಬಿಡುಗಡೆ ಮಾಡುತ್ತವೆ.
ಭಾರತದಲ್ಲಿ ಶಿಕ್ಷಣವನ್ನು ಸಾರ್ವಜನಿಕ ವಲಯವೂ ಹಾಗೆ ಖಾಸಗಿ ವಲಯವೂ ನೀಡುತ್ತಿದೆ.ಶಿಕ್ಷಣಕ್ಕೆ ಅನುದಾನವು ಮೂರು ಕಡೆಯಿಂದ ಬರುತ್ತದೆ.ಅವುಗಳೆಂದರೆ ಕೇಂದ್ರಸರ್ಕಾರ,ರಾಜ್ಯ ಸರ್ಕಾರ, ಮತ್ತು ಸ್ಥಳೀಯ ಸಂಸ್ಥೆಗಳು.ಭಾರತದ ಹಳೆಯ ಉನ್ನತ ಶಿಕ್ಷಣ ಕೇಂದ್ರವೆಂದರೆ ತಕ್ಷಶಿಲ.ಇಂದಿಗೂ ಇದನ್ನು ವಿಶ್ವವಿದ್ಯಾನಿಲಯವೆಂದು ಕರೆಯಬೇಕೆ /ಬೇಡವೇ ಎಂಬ ವಿವಾದಗಳಿವೆ.ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವೆಂದರೆ ನಳಂದ ವಿಶ್ವವಿದ್ಯಾನಿಲಯ.ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣ ಆಳವಾಗಿ ಬೇರೂರಿತು. ಭಾರತದಲ್ಲಿ ಶಿಕ್ಷಣವು ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡರ ನಿಯಂತ್ರಣಕ್ಕೆ ಒಳಪಡುತ್ತದೆ.ಶಿಕ್ಷಣಕ್ಕೆ ಸಂಬಂದಿಸಿದಂತೆ ಕೆಲವೊಂದು ಜವಬ್ದಾರಿಗಳು ಕೇಂದ್ರಸರ್ಕಾರಕ್ಕೆ ಸ್ವಾಯತ್ತವಾದರೆ ಇನ್ನುಳಿದವು ರಾಜ್ಯಸರ್ಕಾರದ ಜವಬ್ದಾರಿಗಳಾಗುತ್ತವೆ.ಭಾರತ ಸಂವಿಧಾನದ ವಿವಿಧ ಅನುಚ್ಛೇದಗಳು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿವೆ.ಭಾರತದಲ್ಲಿನ ಬಹುತೇಕ ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರ್ಕಾರ/ರಾಜ್ಯಸರ್ಕಾರ ನಿಯಂತ್ರಿಸುತ್ತದೆ. ಭಾರತವು ಪ್ರಾಥಮಿಕ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಭಾರತದಲ್ಲಿನ ಜನಸಂಖ್ಯೆಯಲ್ಲಿ ಶೇ.೭೫ರಷ್ಟು ಜನರಿಗೆ ಶಿಕ್ಷಣವನ್ನು ವಿಸ್ತರಿಸುವುದರ ಮೂಲಕ ಪ್ರಗತಿ ಸಾಧಿಸುತ್ತಿದೆ.ಭಾರತದ ಸುಧಾರಿತ ಶಿಕ್ಷಣ ವ್ಯವಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಪ್ರಮುಖ ಕೊಡುಗೆ.ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಪ್ರಗತಿಗೆ ಕಾರಣ ವಿವಿಧ ಸಾರ್ವಜನಿಕ ಸಂಸ್ಥೆಗಳು.೬-೧೪ ವರ್ಷದೊಳಗಿನ ಶೇ.
ಕ್ಯಾನ್ಸರ್ (/ˈkænsə(r)/ ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
ಶ್ರೀ ಸಿದ್ಧಗಂಗಾ ಕ್ಷೇತ್ರವು ತುಮಕೂರು ನಗರದಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. ಊಟ, ವಿದ್ಯೆ ಮತ್ತು ವಸತಿಯ ಉಚಿತ ವ್ಯವಸ್ಥೆ ಇದ್ದು, ಇದೇ ಕಾರಣದಿಂದ ತ್ರಿವಿಧ ದಾಸೋಹದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. ಸುಮಾರು ಹತ್ತು ಸಾವಿರ ಮಕ್ಕಳಿಗೆ ತ್ರಿವಿಧ ದಾಸೋಹ ಕಾರ್ಯ ನಡೆಯುತ್ತಿದೆ.ಕರ್ನಾಟಕ ರತ್ನ ಪ್ರಶಸ್ತಿಯನ್ನು ಡಾ|ಶ್ರೀ ಶಿವಕುಮಾರ ಸ್ವಾಮಿಗಳವರಿಗೆ ನೀಡಲಾಗಿದೆ.
ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು.
ಹಿಂದು ಧರ್ಮವು ವಿಶ್ವದ ಪುರಾತನ ಧರ್ಮ ವಾಗಿದೆ ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಬ್ಲ್ಯಾಕ್ಜಾಕ್ ಪ್ರಪಂಚದಲ್ಲೇ ಅತಿ ವ್ಯಾಪಕವಾಗಿ ಆಡುವ ಕ್ಯಾಸಿನೊ ಬ್ಯಾಂಕಿಂಗ್ ಆಟವಾಗಿದೆ, ಇದನ್ನು ಟ್ವೆಂಟಿ-ಒನ್ , ವಿಂಗ್ಟ್-ಎಟ್-ಉನ್ ("ಟ್ವೆಂಟಿ-ಒನ್"ಗೆ ಫ್ರೆಂಚ್ನಲ್ಲಿ) ಅಥವಾ ಪಾಂಟೂನ್ ಎಂದೂ ಕರೆಯುತ್ತಾರೆ. ಈ ಪ್ರಮಾಣಿತ ಆಟವನ್ನು 52 ಎಲೆಗಳನ್ನು ಹೊಂದಿರುವ ಒಂದು ಅಥವಾ ಅದಕ್ಕಿಂತ ಹೆಚ್ಚು ಆಂಗ್ಲೊ-ಅಮೆರಿಕನ್ ಡೆಕ್(ಇಸ್ಪೀಟು ಕಟ್ಟು)ಗಳನ್ನು ಬಳಸಿಕೊಂಡು ಆಡಲಾಗುತ್ತದೆ. ಈ ಆಟದ ಮೂಲಭೂತ ನಿಯಮಗಳೆಂದರೆ ಇಪ್ಪತ್ತೊಂದು ಮೌಲ್ಯವನ್ನು ಹಂಚುವ ಮೂಲಕ ಕೈಯಲ್ಲಿರುವ ಆರಂಭಿಕ ಎರಡು ಎಲೆಗಳ ಮೌಲ್ಯವನ್ನು ಸೇರಿಸುವುದಾಗಿರುತ್ತದೆ.
ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀ ರಾತುಗಳು "ಗುರುತಿನ ಪ್ರತಿ ಅಭಿಪ್ರಾಯ" (ಬ್ರ್ಯಾಂಡ್ ಇಮೇಜ್) ಮತ್ತು "ಗುರುತಿನ ಪ್ರತಿ ನಿಷ್ಠೆ"ಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತು ಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ.
ರನ್ನನು ಕ್ರಿ.ಶ.೯೪೯ರಲ್ಲಿ ಬೆಳಗಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು.ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲನ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು.ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ.
ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ. ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು. ಆಧುನಿಕ ಅರ್ಥಶಾಸ್ತ್ರದ ಬಹಳಷ್ಟನ್ನು ನಿರೂಪಿಸುವ ಒಂದು ವ್ಯಾಖ್ಯಾನ ಲಾಯನಲ್ ರಾಬಿನ್ಸ್ರ ಒಂದು ೧೯೩೨ರ ಪ್ರಬಂಧದಲ್ಲಿದೆ: "ಮಾನವೀಯ ವರ್ತನೆಯನ್ನು ಪರ್ಯಾಯ ಉಪಯುಕ್ತತೆಗಳಿರುವ ಮಿತಿಗಳು ಮತ್ತು ದುರ್ಲಭವಾದ ಸಾಧನಗಳ ನಡುವಣ ಒಂದು ಸಂಬಂಧವಾಗಿ ಅಧ್ಯಯನಮಾಡುವ ವಿಜ್ಞಾನ." ವಿರಳತೆಯು ಲಭ್ಯವಾದ ಸಂಪನ್ಮೂಲಗಳು ಎಲ್ಲ ಬೇಕುಗಳನ್ನು ಮತ್ತು ಆವಶ್ಯಕತೆಗಳನ್ನು ನೆರವೇರಿಸಲು ಸಾಕಾಗುವುದಿಲ್ಲ ಎಂದು ಸೂಚಿಸುತ್ತದೆ.