The most-visited ಕನ್ನಡ Wikipedia articles, updated daily. Learn more...
ಬ್ರಿಟೀಷರಿಂದ ಆರಂಭಿಸಲ್ಪಪಟ್ಟ ಹಿಂದೂ 'ವೈಯಕ್ತಿಕ ಕಾನೂನಿನ ಸುಧಾರಣೆ ಮತ್ತು ಕ್ರೂಢೀಕರಣ' ಪ್ರಕ್ರಿಯೆಯು,೧೯೪೭ರಲ್ಲಿ ಭಾರತ ಸ್ವಾತಂತ್ರವಾದ ಮೇಲೆ ವಸಾಹತುಶಾಹಿನಂತರದ ಸರ್ಕಾರದ ಪ್ರಧಾನ ಮಂತ್ರಿಯಾದ ಜವಹರಲಾಲ್ ನೆಹರು ನೇತ್ರುತ್ವದಲ್ಲಿ ಸಂಪೂರ್ಣಗೊಂಡಿತು.ಹಸ್ತಕ್ಷೇಪ ಮಾಡದಿರುವ ಬ್ರಿಟಿಷ್ ನೀತಿಯ ಪ್ರಕಾರ, ವೈಯಕ್ತಿಕ ಕಾನೂನಿನ ಸುಧಾರಣೆಯು ಹಿಂದೂ ಸಮುದಾಯದಲ್ಲಿ ಹುಟ್ಟಿದಂತಹ ಬೇಡಿಕೆಯಾಗಿತ್ತು.ಇದು ಆಗಿನ ಸಂಗತಿಯಾಗಿರಲಿಲ್ಲ,ಆ ವೇಳೆಗೆ ಮಹತ್ವವಾದ ವಿರೋಧವು ವಿವಿಧ ಹಿಂದೂ ರಾಜಕಾರಣಿಗಳು,ಸಂಘಟನೆಗಳು ಮತ್ತು ಧಮ೯ಭಕ್ತರುಗಳಿಂದ ವ್ಯಕ್ತವಾಗಿ,ಅನ್ಯಾಯಯುತವಾದದ್ದೆಂದು ಅವರು ಹಿಂದೂ ಸಮುದಾಯದಿಂದ ತಮ್ಮನ್ನು ತಾವು ಬೇಪ೯ಡಿಸಿಕೊಂಡರು ಆದ ಕಾರಣ ಕಾನೂನುಗಳ ಸುಧಾರಣೆಯಾಗಬೇಕಿತ್ತು.ಹೇಗಾದರೂ,ಏಕರೂಪತೆ ಎಂಬುದು ಆದಶ೯ಪ್ರಾಯ ರಾಷ್ಟ್ರದ ಮೊದಲ ಹೆಜ್ಜೆ,ಹೀಗಾಗಿ 'ಕ್ರೂಢಿಕರಣವು' ಹಿಂದೂ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಅಗತ್ಯವಾದದ್ದು ಎಂದು ನೆಹರು ಆಡಳಿತವು ಕಂಡುಕೊಂಡಿತು.೧೯೫೫-೫೬ರಲ್ಲಿ ಅವರು ನಾಲ್ಕು ಹಿಂದೂ ಕೋಡ್ ಬಿಲ್ಸ್ ಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.ಅವುಗಳೆಂದರೆ- (೧)ಹಿಂದೂ ವಿವಾಹ ಕಾಯ್ದೆ (೨)ಹಿಂದೂ ಅನುಪೂವಿ೯ ಅಥವಾ ಅನುಕ್ರಮ ಕಾಯ್ದೆ (೩)ಹಿಂದೂ ಅಲ್ಪಸಂಖ್ಯಾತ ಮತ್ತು ಗಾಡ್೯ನ್ ಶಿಫ್ ಕಾಯ್ದೆ (೪)ಹಿಂದೂ ದತ್ತು ಸ್ವೀಕಾರ ಮತ್ತು ಜೀವನಾಂಶಕಾಯ್ದೆ ಈ ಕಾಯ್ದೆಗಳು ಸ್ತ್ರೀಯರ,ಧಾಮಿ೯ಕ ಮತ್ತು ರಾಷ್ಟ್ರೀಯವಾದಿ ಗುಂಪುಗಳಿಗೆ ಸಂಬಂಧಿಸಿದಂತೆ ಇಂದಿಗೂ ಸಹ ವಿವಾದಾತ್ಮಕವಾಗಿವೆ. ಹಿನ್ನೆಲೆ ಹಿಂದೂಧಮ೯ದ ಜೀವನಸ್ವರೂಪದ ಬಗ್ಗೆ ಬಹಳ ವ್ಯಾಪಕವಾದ ಕೆಲವು ಶಾಶ್ವತವಾದ ನಿಧಿ೯ಷ್ಟ ಮೂಲಭೂತ ನಂಬಿಕೆಗಳು ಇರಬಹುದು.ಹೀಗಾಗಿ ಹಿಂದೂ ಕಾನೂನುಗಳು ಹೆಚ್ಚು ಏಕರೂಪವಾಗಿಲ್ಲದ್ದು.ವಿದ್ವಾಂಸರಾದ ಡೆರೆಟ್ ರವರ ಗ್ರಂಥವಾದ "ಹಿಂದೂ ಕಾನೂನು"ನಲ್ಲಿ ಉಲ್ಲೇಖಿತವಾಗಿದ್ದು-"ನಾವು ಹಿಂದೂಗಳನ್ನು ಗುರುತಿಸುವುದಾದರೆ,ಭೂಮಿಯ ಅಂತ್ಯಭಾಗದಿಂದ ಸಂಗ್ರಹಿಸಲ್ಪಟ್ಟಿರಬಹುದಾದ ಮನುಷ್ಯ ಜೀವಿಗಳ ವೈವಿಧ್ಯಮಯವಾದ ಜೀವನ ಕ್ರಮ,ಮನೋವಿಜ್ಞಾನ,ಹವ್ಯಾಸ,ಮತ್ತು ಕಸುಬು ಮುಂತಾದ ಮಾನವ ಸಮುದಾಯದ ವಿಭಿನ್ನ ಸ್ವರೂಪದ ಆಧಾರದ ಮೇಲೆ ಹಿಂದೂಗಳೆಂದು ವಿವರಿಸಿದ್ದಾರೆ.ಹಾಗೆಯೇ ಧಮ೯ಶಾಸ್ತ್ರವು ಕೆಲೊವೊಂದು ಗ್ರಾಂಥಿಕ ವಿಷಯಗಳ ಮೇಲೆ ಹಿಡಿತವನ್ನು ಹೊಂದಿದೆ ಅವುಗಳಂದರೆ ವಿವಾಹ,ದತ್ತುಸ್ವೀಕಾರ,ಅಲ್ಪಸಂಖ್ಯಾತರು,ಅನುಕ್ರಮ ಹಕ್ಕುದಾರಿಕೆ,ಧಾಮಿ೯ಕ ದತ್ತಿಗಳು ಮತ್ತು ಜಾತಿ ಸವಲತ್ತುಗಳು ಮುಂತಾದ ಖಾಸಗಿ ಕಾನೂನುಗಳಲ್ಲಿ ಹಿಂದೂ ಧಮ೯ ವಿಚಾರಗಳನ್ನು ಕಾಣಬಹುದು.ಹೇಗಾದರೂ,ಹಿಂದೂ ಕಾನೂಗಳ ಅಸಮಂಜಸ ನಿಯಮಗಳನ್ನು ಹೆಸರಿಸುವುದು ಮತ್ತು ವಣಿ೯ಸುವುದು ಕಷ್ಟಸಾಧ್ಯವಾಗಿದ್ದು,ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ಹಿಂದೂ ಕಾನೂನುಗಳು ಕಲಬೆರಕೆಗಳಿಂದಾದ ನಿಯಮಗಳು,ಸಾಮರಸ್ಯವಿಲ್ಲದೆ ಅಪೈಪೋಟಿಯುತವಾಗಿವೆ.ಹೀಗಾಗಿ ಹಿಂದೂ ಕಾನೂಗಳ ಏಕಪ್ರಕಾರತೆಯಲ್ಲಿ ಕೊರತೆಯನ್ನು ಕಾಣಬಹುದು. ಹಿಂದೂ ಕಾನೂನುಗಳ ವಿಷಯ ಮತ್ತು ರಚನೆಯು ಅಂತಿಮವಾಗಿ ಬ್ರಿಟೀಷರ ಆಡಳಿತ ಕಾಲದಲ್ಲಿ ರಕ್ಷಣೆಗೆ ಬಂದು,ಅವರ ಬಹಳಷ್ಟು ಗಮನ ಹಿಂದೂ ಧಾಮಿ೯ಕ ಕಾನೂನು ಗ್ರಂಥಗಳ ಮೇಲಾಗಿ ಏಕಕಾಲದಲ್ಲಿ ಇಂಗ್ಲಿಷ್ ಕಾಯ೯ವಿಧಾನವನ್ನು ಉರಿದುಂಬಿಸಿದರು ಮತ್ತು ಇದ್ದ ಅಂತರವನ್ನು ಆಂಗ್ಲ ಕಾನೂನಿನಿಂದ ಪೂಣ೯ ಮಾಡಿದರು.ನಂತರದ ಅಭಿಪ್ರಾಯಗಳು ಒಂದಕ್ಕೊಂದು ಭಿನ್ನವಾಗಿದ್ದು ವಿಸ್ತಾರವಾದ ವ್ಯತ್ಯಾಸವನ್ನು ಪ್ರಚಲಿತ ಕಾನೂನು ಮತ್ತು ಸಾವ೯ಜನಿಕ ಅವಶ್ಯಕತೆ ಮಧ್ಯೆ ಕಂಡುಕೊಂಡರು,ಹಾಗೂ ಇದನ್ನು ಹೆಚ್ಚು ಜನರು ಒಪ್ಪಿ ಗಣನೀಯವಾದ ಅಸಂಗತೆ ಮತ್ತು ಅಸಾಮರಸ್ಯ ಹುಟ್ಟಿಕೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಬ್ರಿಟೀಷರ ವಸಾಹತುಶಾಹಿ ಸಕಾ೯ರ ಆಡಳಿತ ವ್ಯವಸ್ಥೆಯಲ್ಲಿ ಪಸರಿಸಿದ್ದ ವ್ಯಾಪಕವಾದ ಹಸ್ತಕ್ಷೇಪರಹಿತ ನೀತಿಯಲ್ಲಿ ,ನಾಗರೀಕ ವಿಷಯಗಳನ್ನು ಆಯಾ ಧಾಮಿ೯ಕ ಸಮುದಾಯಗಳ ಮೂಲಕ ವ್ಯವಹರಿಸಬೇಕು.ಹೀಗಾಗಿ ಈ ಸಮುದಾಯಗಳ ವ್ಯಾಪ್ತಿಗೆ ಬಿದ್ದಿದ್ದ ವಿಷಯಗಳನ್ನು ವೈಯಕ್ತಿಕ ಕಾನೂನುಗಳೆಂದು ಕರೆಯಲಾಯಿತು.ಭಾರತೀಯ ರಾಜಕೀಯ ವ್ಯವಸ್ಥೆಯನ್ನು ಸಂಘಟಿಸುವಲ್ಲಿ,೧೯೪೦ರ ವೇಳೆಯ ಮೊದಲೇ ಬ್ರಿಟೀಷರಿಂದ ಆರಂಭವಾದ ವೈಯಕ್ತಿಕ ಹಿಂದೂ ಕಾನೂನುಗಳ ಕ್ರೂಢೀಕರಣ ಪ್ರಕ್ರಿಯೆಯು ಬಹಳ ಪ್ರಮುಖವಾದದ್ದು ಆಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ gfhvಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದುದು ೨೦೧೫-೨೦೧೬ನೇ ಸಾಲಿನಲ್ಲಿ. (ಆಂಗ್ಲ:Clean India Mission)ಇದು ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ . .ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು.
ಏಡ್ಸ್ (ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ.ಎಚ್ಐವಿ ಸೋಂಕಿತ ವ್ಯಕ್ತಿಯನ್ನು (ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳು ಕಂಡುಬರುತ್ತದೆ.
ರನ್ನನು ಕ್ರಿ.ಶ.೯೪೯ರಲ್ಲಿ ಬೆಳಗಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು.ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲನ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು.ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದೂ ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ.
ಜಲಿಯನ್ವಾಲಾ ಬಾಗ್ ಹತ್ಯಾಹಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು., ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು ೧೮೦೦ಕ್ಕೂ ಹೆಚ್ಚು.
ಜಾಗತಿಕ ತಾಪಮಾನ ನಿಯಂತ್ರಣ ಜಾಗತಿಕ ತಾಪಮಾನ ಏರಿಕೆ ಯೆಂದರೆ 20ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ.
ಇ-ಪ್ರಜಾಪ್ರಭುತ್ವ (ಎಲೆಕ್ಟ್ರಾನಿಕ್ ಹಾಗೂ ಪ್ರಜಾಪ್ರಭುತ್ವ ಪದಗಳ ಸಂಯೋಜನ) ರಾಜಕೀಯ ಹಾಗೂ ಆಡಳಿತದ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನಗಳ ಹಾಗೂ ಸಂಪರ್ಕ ತಂತ್ರಜ್ಞಾನಗಳ ಹಾಗೂ ವ್ಯೂಹರಚನೆಗಳ ಬಳಕೆಯನ್ನು ಹೇಳುತ್ತದೆ. ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ನಟರಲ್ಲಿ ಹಾಗೂ ವಿಭಾಗಗಳಲ್ಲಿ ಸರ್ಕಾರಗಳು, ಚುನಾಯಿತ ಅಧಿಕಾರಿಗಳು, ಮಾಧ್ಯಮ, ರಾಜಕೀಯ ಸಂಘಟನೆಗಳು ಹಾಗೂ ನಾಗರೀಕರು/ಮತದಾರರು ಸೇರಿರುತ್ತಾರೆ. ಇಂದಿನ ಪ್ರತಿನಿಧಿತ್ವ ಪ್ರಜಾಪ್ರಭುತ್ವದಲ್ಲಿ ಅಂತರ್ಜಾಲ, ಮೊಬೈಲ್ ಸಂಪರ್ಕಗಳು, ಹಾಗೂ ಇತರ ತಂತ್ರಜ್ಞಾನಗಳಿಂದ ಇ-ಪ್ರಜಾಪ್ರಭುತ್ವ ವಿಸ್ತೃತ ಹಾಗೂ ಹೆಚ್ಚು ಸಕ್ರಿಯ ನಾಗರೀಕ ಭಾಗವಹಿಸುವಿಕೆಯ ಲಕ್ಷ್ಯವನ್ನು ಹೊಂದಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1509-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಮಹಾರಾಷ್ಟ್ರ ಭಾರತದ ಪಶ್ಚಿಮದ ರಾಜ್ಯಗಳಲ್ಲಿ ಒಂದಾಗಿದೆ. ಮಹಾರಾಷ್ಟ್ರವು ಜನಸಂಖ್ಯೆಯಲ್ಲಿ ಭಾರತದ ಎರಡನೆಯ ಅತಿ ದೊಡ್ಡ ರಾಜ್ಯವಾಗಿದೆ ಹಾಗು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಮಹಾರಾಷ್ಟ್ರವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗುಜರಾತ್ ಹಾಗು ದಾದ್ರಾ ಮತ್ತು ನಗರ ಹವೇಲಿಯಿಂದ, ಈಶಾನ್ಯದಲ್ಲಿ ಮಧ್ಯಪ್ರದೇಶದಿಂದ, ಪೂರ್ವದಲ್ಲಿ ಛತ್ತೀಸಘಡದಿಂದ, ದಕ್ಷಿಣದಲ್ಲಿ ಕರ್ನಾಟಕದಿಂದ, ಆಗ್ನೇಯದಲ್ಲಿ ಆಂಧ್ರಪ್ರದೇಶದಿಂದ ಹಾಗು ನೈಋತ್ಯದಲ್ಲಿ ಗೋವಾದಿಂದ ಸುತ್ತುವರಿಯಲ್ಪಟ್ಟಿದೆ.
ಕ್ಯಾನ್ಸರ್ (/ˈkænsə(r)/ ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
ವಿಕಿಪೀಡಿಯ [ಇಂಗ್ಲಿಷ್: Wikipedia ವಿಕಿಪೀಡಿಯ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ ಸಂಸ್ಕೃತ:पञ्चतन्त्र(IAST: ಪಂಚತಂತ್ರ, 'ಐದು ಮೂಲತತ್ವಗಳು') ಕ್ರಿಸ್ತ ಪೂರ್ವ 3 ರನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, "ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು" ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು "ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ" ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು.
ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ.
[[File:Nutrition label.gif|right|300px|thumb| "ಪೌಷ್ಟಿಕತೆಯ ನಿಜಾಂಶಗಳು" ಟೆಬಲ್ನಲ್ಲಿ ನೀವು ಎಷ್ಟು ಪ್ರಮಾಣದ ಪೌಷ್ಟಿಕಾಂಶವನ್ನು ಸೀಮಿತಗೊಳಿಸಬೇಕು ಅಥವಾ ಬೇಕಿರುವ ಪ್ರಮಾಣದಲ್ಲಿ ಸೇವಿಸಬೇಕೆಂದು ಪರಿಣಿತರು ಸಲಹೆ ನೀಡಿರುವುದನ್ನು ಸೂಚಿಸುತ್ತದೆ.ಪೋಷಣೆ (ಪೋಷಕಾಹಾರ ಅಥವಾ ಪೌಷ್ಟಿಕಾಹಾರ )ವು ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು(ಆಹಾರದ ರೂಪದಲ್ಲಿ) ಕೋಶಗಳಿಗೆ ಮತ್ತು ಜೀವಿಗಳಿಗೆ ಒದಗಿಸುತ್ತದೆ. ಆರೋಗ್ಯಕರ ಆಹಾರಪದ್ಧತಿಯ ಮೂಲಕ ಅನೇಕ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಒಂದು ಜೀವಿಯ ಆಹಾರಪದ್ಧತಿ ಎಂದರೆ ಅದು ಏನನ್ನು ಸೇವಿಸುತ್ತದೆ ಎಂಬುದು ಹಾಗೂ ಅದನ್ನು ಹೆಚ್ಚಾಗಿ, ಆಹಾರದ ಸ್ವಾದವನ್ನರಿಯುವ ಅರ್ಹತೆಯನ್ನು ತಿಳಿಯುವ ಮೂಲಕ ನಿರ್ಧರಿಸಲಾಗುತ್ತದೆ.
ಆರ್ಥಿಕತೆಯ ಎಲ್ಲ ವಲಯಗಳನ್ನು ಮೂರು ಭಾಗಗಳಾಗಿ ವರ್ಗೀಕರಿಸಿದಾಗ ಕೈಗಾರಿಕೆಗಳು 'ದ್ವಿತೀಯ' ವಲಯ (Secondary Sector) ಎನ್ನಿಸಿಕೊಂಡಿದೆ. ಕೈಗಾರಿಕೆಗಳು ಒಂದು ದೇಶದ ಮೂಳೆಗಳಿದ್ದಂತೆ. ಮಾನವ ದೇಹಕ್ಕೆ ಪೂರ್ಣ ಚೈತನ್ಯವನ್ನು ಒದಗಿಸಲು ಮೂಳೆಗಳು ಹೇಗೆ ಅವಶ್ಯಕವೋ ಹಾಗೆಯೇ ಆರ್ಥಿಕತೆಗೆ ಚೇತನ ನೀಡಿ ದೀರ್ಘಕಾಲೀನ ಅಭಿವೃದ್ಢಿ ಸಾಧನೆಗೆ ನೆರವಾಗಲು ಕೈಗಾರಿಕೆಗಳು ಅತ್ಯಂತ ಆವಶ್ಯಕ.