The most-visited ಕನ್ನಡ Wikipedia articles, updated daily. Learn more...
ಮಹಾದೇವಿ ವರ್ಮಾ (೧೯೦೭- ೧೧, ಸೆಪ್ಟೆಂಬರ್ ೧೯೮೭) ಹಿಂದಿ ಭಾಷೆಯ ಪ್ರಸಿದ್ಧ ಕವಯಿತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಹಾಗು ಶಿಕ್ಷಣ ತಜ್ಞೆ.೧೯೧೪ರಿಂದ ೧೯೩೮ರವರೆಗೆ ಹಿಂದಿ ಸಾಹಿತ್ಯಲೋಕದಲ್ಲಿ ನೆಡೆದ ಛಾಯಾವಾದ ಸಾಹಿತ್ಯ ಪ್ರಕಾರ ಹಾಗು ಹಲವು ಕವಿ ಸಮ್ಮೇಳನಗಳಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. "ಆಧುನಿಕ ಮೀರಾ" ಎಂದು ಖ್ಯಾತರಾಗಿದ್ದ ಇವರು ೧೯೮೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ಅಲಹಾಬಾದಿನಲ್ಲಿರುವ ಪ್ರಯಾಗ್ ಮಹಿಳಾ ವಿದ್ಯಾಪೀಠದ ಪ್ರಾಂಶುಪಾಲೆ ಹಾಗು ಉಪ-ಕುಲಪತಿಯಾಗಿಯು ಸಹ ಇವರು ಕಾರ್ಯ ನಿರ್ವಹಿಸಿದರು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟೃವಾಗಿದೆ. ಭಾರತವು ೧೨೧ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ,ನೈರುತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಅಲಹಾಬಾದ್ ([ಇಲಾಹಾಬಾದ್]; ಹಿಂದಿ:इलाहाबाद; ಉರ್ದು: الہ آباد), ಅಥವಾ ಪರ್ಷಿಯಾ ಭಾಷೆಯಲ್ಲಿ ದೇವರು ನೆಲೆಸಿದ ಸ್ಥಳ ಎಂಬ ಈ ನಗರವು ಉತ್ತರ ಪ್ರದೇಶದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಇದರ ಮೂಲ ಹೆಸರು ಪ್ರಯಾಗ (ಹಿಂದಿ:प्रयाग), ಮೊಘಲ್ ದೊರೆ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಎಂಬ ಹೆಸರಿಟ್ಟನು. ಇದು ಉತ್ತರಪ್ರದೇಶದ ರಾಜಧಾನಿ ಲಕ್ನೋಗೆ ದಕ್ಷಿಣಕ್ಕೆ ಸುಮಾರು 205 kilometres (127 mi) ದೂರದಲ್ಲಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ
ಟೆಂಪ್ಲೇಟು:Pp-protect ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬುಕ್ ಸಂಖ್ಯೆ (ಐ.ಎಸ್.ಬಿ.ಎನ್) /ಅಂತರಾಷ್ಟ್ರೀಯ ದರ್ಜೆಯ ಪುಸ್ತಕ ಸಂಖ್ಯೆ ಒಂದು ವಿಶಿಷ್ಟವಾದ ಸಂಖ್ಯೆ. ಪ್ರಕಾಶಕರು ಐಎಸ್ಬಿಎನ್ ಅನ್ನು ಪುಸ್ತಕ ಶೀರ್ಷಿಕೆಗೆ ನಿಯೋಜಿಸುತ್ತಾರೆ.ಒಂದು ಐಎಸ್ಬಿಎನ್ ಮುಖ್ಯವಾಗಿ ಪ್ರಕಾಶಕರು, ಪುಸ್ತಕ ಮಾರಾಟಗಾರರು, ಗ್ರಂಥಾಲಯಗಳು, ಇಂಟರ್ನೆಟ್ ಚಿಲ್ಲರೆ ವ್ಯಾಪಾರಿಗಳು ಮತ್ತು ಇತರ ಪೂರೈಕೆ ಸರಪಳಿಗಳು ಆದೇಶ, ಪಟ್ಟಿಗಳು, ಮಾರಾಟದ ದಾಖಲೆಗಳು ಮತ್ತು ಷೇರು ನಿಯಂತ್ರಣ ಉದ್ದೇಶಗಳಿಗಾಗಿ ಬಳಸಲ್ಪಡುವ ಒಂದು ಉತ್ಪನ್ನ ಗುರುತಿಸುವಿಕೆ. ಐಎಸ್ಬಿಎನ್ ನೋಂದಾಯಿಸುವವರನ್ನು ನಿರ್ದಿಷ್ಟ ಶೀರ್ಷಿಕೆ, ಆವೃತ್ತಿ ಮತ್ತು ಸ್ವರೂಪವನ್ನು ಗುರುತಿಸುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಪರಿಸರವನ್ನು ಕಲುಷಿತಗೊಳಿಸುವ, ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ gfhvಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಕಿತ್ತೂರು ರಾಣಿ ಚನ್ನಮ್ಮ (೧೭೭೮-೧೮೨೯)(English : Kittur Chennamma) ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚನ್ನಮ್ಮ ನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಭಾರತದ ಸಾಮಾಜಿಕ -ಧಾರ್ಮಿಕ ಸುಧಾರಣ ಕ್ರಿಯೆಯಲ್ಲಿ ,ಹೆಚ್ಚು ತೊಡಗಿಸಿಕೊಂಡ ಬ್ರಹ್ಮ ಸಮಾಜ ವನ್ನು ೧೮೨೮ ರಲ್ಲಿ ಹುಟ್ಟು ಹಾಕಿದ್ದು, ರಾಜ ರಾಮ್ ಮೋಹನ್ ರೋಯ್ (ಆಗಸ್ಟ್ ೧೪, ೧೭೭೪ – ಸೆಪ್ಟೆಂಬರ್ ೨೭, ೧೮೩೩),ಬ್ರಾಹ್ಮೋ ಸಭಾ ದ ಸಂಸ್ಥಾಪಕರು , (ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರು ). ರಾಜನೀತಿ , ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ ಧರ್ಮದೊಂದಿಗೆ ,ಅವರ ಪ್ರಭಾವ ಪಾರದರ್ಶಕವಾಗಿತ್ತು. ಹಿಂದೂ ಧರ್ಮದ ಉತ್ತರ ಕ್ರಿಯಾ ಪದ್ಧತಿಯಲ್ಲಿ , ಸತಿಪದ್ಧತಿಯನ್ವಯ ವಿಧವೆಯನ್ನು ಗಂಡಂದಿರ ಅಗ್ನಿ ಚಿತೆಯ ಮೇಲೆ ಬಲವಂತವಾಗಿ ಸುಡುತ್ತಿದ್ದ 'ಸತಿ' ಪದ್ಧತಿಯನ್ನು ರದ್ದು ಮಾಡುವ ಹೋರಾಟದಲ್ಲಿ ಹೆಚ್ಚು ಕ್ರಿಯಾಶಿಳರಾಗಿದ್ದರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ ಇದರಲ್ಲಿ ಇಪ್ಪತ್ತೊಂಬತ್ತು ರಾಜ್ಯಗಳು ಹಾಗು ಏಳು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಈವರೆಗೆ ಎಂಟು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ.
ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕದ ಎಲ್ಲಾ ೨೨೪ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರನ್ನು ಆಯ್ಕೆ ಮಾಡಲು ೨೦೧೮ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ನಡೆಯಲಿದೆ.
ವಿಕಿಪೀಡಿಯ (ಇಂಗ್ಲಿಷ್: Wikipedia ) ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ. ಕಂಪ್ಯೂಟರ್ ಒಳರವಾನೆ ಸಂಸ್ಕರಣೆ ಹಾಗೂ ಹೊರರವಾನೆ ಸಾಧನಗಳನ್ನು ಹೊಂದಿದ್ದು ಒಳರವಾನೆ ಸಾಧನಗಳ ಮೂಲಕ ನೀಡಿದಂತಹ ಮಾಹಿತಿಯನ್ನು ಸಂಸ್ಕರಿಸಿ ಹೊರರವಾನೆ ಸಾಧನಗಳ ಮೂಲಕ ಉಪಯೋಗಿಸಿ(ಯೂಜರ್)ಗೆ ನೀಡುವುದಲ್ಲದೇ ಮಾಹಿತಿ ಮತ್ತು ದತ್ತಾಂಶಗಳನ್ನು ಶೇಖರಿಸಿಡಬಹುದಾದ ಸಾಧನವಾಗಿರುತ್ತದೆ ಅಲ್ಲದೇ ಶೇಖರಿಸಿಟ್ಟ ಅಥವಾ ನಾವು ನೀಡಿದಂತಹಾ ಮಾಹಿತಿಯನ್ನು ಒಂದು ಗಣಕಯಂತ್ರ ದಿಂದ ಮತ್ತೊಂದು ಗಣಕಯಂತ್ರಕ್ಕೆ ಸಂಪರ್ಕಜಾಲದ ಮೂಲಕ ನಮ್ಮ ಆದೇಶದ ಮೇರೆಗೆ ರವಾನಿಸುತ್ತದೆ.
ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಜಾಗತಿಕ ತಾಪಮಾನ ನಿಯಂತ್ರಣ ಜಾಗತಿಕ ತಾಪಮಾನ ಏರಿಕೆ ಯೆಂದರೆ 20ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ.
ಇಂದಿರಾ ಪ್ರಿಯದರ್ಶಿನಿ ಗಾಂಧಿ (ಹಿಂದಿ:इंदिरा प्रियदर्शिनी गांधीಇಂದಿರಾ ಪ್ರಿಯದರ್ಶಿನಿ ಗಾಂಧಿ; ನಿ: ನೆಹರು; (೧೯ ನವೆಂಬರ್ ೧೯೧೭ – ೩೧ ಅಕ್ಟೋಬರ್ ೧೯೮೪) ೧೯೬೬ರಿಂದ ೧೯೭೭ರವೆಗೆ ಸತತ ಮೂರು ಬಾರಿ ಭಾರತ ಗಣತಂತ್ರ ದ ಪ್ರಧಾನ ಮಂತ್ರಿಯಾಗಿದ್ದರು ಮತ್ತು ನಾಲ್ಕನೇ ಬಾರಿ ೧೯೮೦ರಿಂದ ೧೯೮೪ರಲ್ಲಿ ನಡೆದ ಅವರ ಹತ್ಯೆಯವರೆಗೆ, ಒಟ್ಟು ಹದಿನೈದು ವರ್ಷಗಳ ಕಾಲ, ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಅವರು ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ. ಇಂದಿನವರೆಗೆ ಆ ಸ್ಥಾನ ಅವರ ಪಾಲಿನದ್ದೇ ಆಗಿದೆ.
ಭಾರತದಲ್ಲಿ ಶಿಕ್ಷಣವನ್ನು ಸಾರ್ವಜನಿಕ ವಲಯವೂ ಹಾಗೆ ಖಾಸಗಿ ವಲಯವೂ ನೀಡುತ್ತಿದೆ.ಶಿಕ್ಷಣಕ್ಕೆ ಅನುದಾನವು ಮೂರು ಕಡೆಯಿಂದ ಬರುತ್ತದೆ.ಅವುಗಳೆಂದರೆ ಕೇಂದ್ರಸರ್ಕಾರ,ರಾಜ್ಯ ಸರ್ಕಾರ, ಮತ್ತು ಸ್ಥಳೀಯ ಸಂಸ್ಥೆಗಳು.ಭಾರತದ ಹಳೆಯ ಉನ್ನತ ಶಿಕ್ಷಣ ಕೇಂದ್ರವೆಂದರೆ ತಕ್ಷಶಿಲ.ಇಂದಿಗೂ ಇದನ್ನು ವಿಶ್ವವಿದ್ಯಾನಿಲಯವೆಂದು ಕರೆಯಬೇಕೆ /ಬೇಡವೇ ಎಂಬ ವಿವಾದಗಳಿವೆ.ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವೆಂದರೆ ನಳಂದ ವಿಶ್ವವಿದ್ಯಾನಿಲಯ.ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣ ಆಳವಾಗಿ ಬೇರೂರಿತು. ಭಾರತದಲ್ಲಿ ಶಿಕ್ಷಣವು ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡರ ನಿಯಂತ್ರಣಕ್ಕೆ ಒಳಪಡುತ್ತದೆ.ಶಿಕ್ಷಣಕ್ಕೆ ಸಂಬಂದಿಸಿದಂತೆ ಕೆಲವೊಂದು ಜವಬ್ದಾರಿಗಳು ಕೇಂದ್ರಸರ್ಕಾರಕ್ಕೆ ಸ್ವಾಯತ್ತವಾದರೆ ಇನ್ನುಳಿದವು ರಾಜ್ಯಸರ್ಕಾರದ ಜವಬ್ದಾರಿಗಳಾಗುತ್ತವೆ.ಭಾರತ ಸಂವಿಧಾನದ ವಿವಿಧ ಅನುಚ್ಛೇದಗಳು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿವೆ.ಭಾರತದಲ್ಲಿನ ಬಹುತೇಕ ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರ್ಕಾರ/ರಾಜ್ಯಸರ್ಕಾರ ನಿಯಂತ್ರಿಸುತ್ತದೆ. ಭಾರತವು ಪ್ರಾಥಮಿಕ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಭಾರತದಲ್ಲಿನ ಜನಸಂಖ್ಯೆಯಲ್ಲಿ ಶೇ.೭೫ರಷ್ಟು ಜನರಿಗೆ ಶಿಕ್ಷಣವನ್ನು ವಿಸ್ತರಿಸುವುದರ ಮೂಲಕ ಪ್ರಗತಿ ಸಾಧಿಸುತ್ತಿದೆ.ಭಾರತದ ಸುಧಾರಿತ ಶಿಕ್ಷಣ ವ್ಯವಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಪ್ರಮುಖ ಕೊಡುಗೆ.ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಪ್ರಗತಿಗೆ ಕಾರಣ ವಿವಿಧ ಸಾರ್ವಜನಿಕ ಸಂಸ್ಥೆಗಳು.೬-೧೪ ವರ್ಷದೊಳಗಿನ ಶೇ.
ಈತನನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯ ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯನನ್ನೇ ಮೊದಲ ವಚನಕಾರನೆಂದು ಗುರುತಿಸಲಾಗುತ್ತದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಬಗ್ಗೆ ಬೇರೆ ಬೇರೆ ನುಡಿಗಳಲ್ಲಿ ಬರೆದವರನ್ನು ಕನ್ನಡ ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಮೆದುಳಿನ ಗೆಡ್ಡೆ ಎಂದರೆ ಮೆದುಳಿನಲ್ಲಿ ಅಸಹಜವಾಗಿ ಬೆಳೆಯುವ ಜೀವಕೋಶಗಳು,ಇವು ಕ್ಯಾನ್ಸರ್ ಅಥವಾ (ಮಾಲಿಗಂಟ) ಇಲ್ಲವೆ ಕ್ಯಾನ್ಸರ್ ರಹಿತ ಗೆಡ್ಡೆ(ಬೆನಿಗ್ನ್ ) ಗಳಾಗಿ ಮಾರ್ಪಾಡಗಬಹುದು. ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ.ಮೆದುಳು ಅಲ್ಲದೇ (ನ್ಯುರಾನ್ಗಳು, ಗ್ಲಿಯಾಲ್ ಕೋಶಗಳು(ಅಸ್ಟ್ರಿಸೈಟ್ಗಳು, ಒಲಿಗೊದೆಂಡ್ರೊಸೈಟ್ಗಳು, ಎಪೆಂಡಿಮಲ್ ಕೋಶಗಳು , ಮೈಲಿನ್-ಉತ್ಪಾದನೆಯ ಸ್ಕಾನ್ ಕೋಶಗಳು), ಲಿಂಫ್ಅಟಿಕ್ ಅಂಗಾಂಶ, ರಕ್ತ ನಾಳಗಳು ), ಕ್ರೇನಿಯಲ್ ನರಗಳಲ್ಲಿರುವವಗಳು , ಮೆದುಳಿನಲ್ಲಿ ಆವರಿಸಿದ (ಮೆನಿಂಗ್ಸ್), ಬುರುಡೆ, ಪಿಟ್ಯುಟರಿ ಮತ್ತು ಪೈನಿಯಲ್ ಗ್ಲಾಂಡ್, ಅಥವಾ ಕ್ಯಾನ್ಸರ್ಗಳ ಮೂಲಕ ಹರಡಿದ್ದು (ಮೆಟಾಸ್ಟಿಕ್ ಗೆಡೈಗಳು).ಇದನ್ನು ತಲೆ ಬುರುಡೆಯೊಳಗಿನ ಗೆಡ್ಡೆ ಇಲ್ಲವೆ ಅನಿಯಂತ್ರಿತ ಕೋಶಗಳ ವಿಭಜನೆಯ ಕ್ರಿಯೆ ಎಂದು ಹೇಳಲಾಗುತ್ತದೆ. ಪ್ರಾಥಮಿಕವಾಗಿ ಮಕ್ಕಳಲ್ಲಿ ಪೊಸ್ಟೆರಿಯರ್ ಕ್ರೇನಲ್ ಫೊಸ್ಸಾದಲ್ಲಿ ಸಾಮಾನ್ಯವಾಗಿ ಸೆರೆಬ್ರಿಯಲ್ನಲ್ಲಿ ಈ ಗೆಡ್ಡೆಯಂತಹ ಊತ ಕಂಡು ಬರುತ್ತದೆ.ವಯಸ್ಕರ ಮೆದುಳಿನ ಎರಡು ಮೂರಾಂಶದ ಬುರುಡೆ ಭಾಗದಲ್ಲಿ ಇದು ಬೆಳವಣಿಗೆ ಕಾಣುತ್ತದೆ.ಇಲ್ಲಿ ಕ್ಯಾನ್ಸರ್ ಅಂಶಗಳು ಮೆದುಳಿನ ಯಾವುದೇ ಭಾಗಕ್ಕಾದರೂ ಪಸರಿಸಬಹುದು.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.