The most-visited ಕನ್ನಡ Wikipedia articles, updated daily. Learn more...
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು. ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ಸಮುದ್ರ ತಟದಲ್ಲಿರುವ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ.ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ [ನರೇಂದ್ರ ಮೋದಿ|ನರೇಂದ್ರ ಮೋದಿಯವರು] ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು. ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ತಾವೇನೂ ಮಾಡಲಾಗದೇ, ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು., ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿ . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು. ಇದನ್ನು ಎಲ್ಲರು ಧರಿಸಿ ಪೂಜಿಸಬಹುದು.
ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳುವಳಿ/ಆಂದೋಲನವೇ ಗೋಕಾಕ್ ಚಳುವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ರು ಸಿದ್ಧಪಡಿಸಿ ಸಲ್ಲಿಸಿದ್ದರು, ಆದ ಕಾರಣ ಚಳುವಳಿಗೆ ಅವರದೇ ಹೆಸರು ಬಂದಿದೆ.
ನಮ್ಮ ಸುತ್ತಮುತ್ತಲಿನ ಪ್ರದೇಶವೇ ಪರಿಸರ. ಈ ಪರಿಸರ ಮರ ಗಿಡಗಳು ಹಾಗೂ ಪ್ರಾಣಿ ಪಕ್ಷಿಗಳಿಂದ ಕೂಡಿದೆ.ಇದರೊಂದಿಗೆ ಮಾನವನು ಅನ್ಯೋನ್ಯತೆಯಿಂದ ಜೀವಿಸುತಿದ್ದಾನೆ.ಇವೆಲ್ಲದರ ನಡುವೆ ಮಾನವನು ತನ್ನನ ಸ್ವಾರ್ಥತೆಯನ್ನು ತೋರಿಸುತ್ತಾನೆ.ಇದರಿಂದಾಗಿ ಪರಿಸರವು ಹಲವಾರು ತೊಂದರೆಗೆ ಒಳಗಾಗಿದೆ.ಇದರಲ್ಲಿ ಪರಿಸರವೂ ಎದುರಿಸುವ ಮೂರು ಮುಖ್ಯವಾದ ತೊಂದರೆಗಳೆಂದರೆ ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ. ಇದರ ಮುಖ್ಯ ಕಾರಣವೆಂದರೆ ಹೆಚ್ಚಾಗುತ್ತಿರುವ ಜನಸಂಖ್ಯೆ.ಜನರು ಬಳಸುವ ವಾಹನಗಳಿಂದ ಕೆಟ್ಟ ಹೊಗೆ ಹೊರಬರುತ್ತದೆ.ಕಾರ್ಖಾನೆಗಳಿಂದ ಹೊರಬರುವ ರಾಸಾಯನಿಕ ಹೊಗೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ.ಮಾನವನ ಇಂದಿನ ದಿನಚರಿಕೆಯಿಂದ ಹಾಗೂ ಕಾರ್ಖಾನೆಗಳಿಂದ ಹೊರ ಬಿಡುವ ಕಸಗಳು, ನೀರನ್ನು ಮಾಲಿನ್ಯಗೊಳಿಸುತ್ತದೆ.ವಾಹನಗಳಿಂದ,ಮದುವೆ ಸಮಾರಂಭಗಳಲ್ಲಿ ಹಾಗೂ ದೀಪಾವಳಿಯ ಸಮಯದಲ್ಲಿ ಉಪಯೋಗಿಸುವ ಪಟಾಕಿಯಿಂದ ಶಬ್ದ ಮಾಲಿನ್ಯವಾಗುತ್ತದೆ.ಇದೆಲ್ಲಾ ಮಾನವನ ಮೇಲೆಯೇ ಪ್ರಭಾವ ಬೀರುತ್ತದೆ.ಮಾಲಿನ್ಯವೂ ಮಿತಿಮೀರಿದರೆ ಮಾನವನಿಗೆ ಈ ಪರಿಸರದಲ್ಲಿ ಜೀವಿಸಲು ಅಸಾಧ್ಯವಾಗುತ್ತದೆ.ಆದುದರಿಂದ ಈ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜವಬ್ದಾರಿ ನಮ್ಮದಾಗಿದೆ.ಮುಂದಿನ ಪೀಳಿಗೆಗೆ ಈ ಪರಿಸರವು ಉಳಿಯ ಬೇಕಾದರೆ ಇಂದಿನಿಂದಲೇ ಒಳ್ಳೆಯ ಬದಲಾವಣೆಯನ್ನು ಮಾಡಬೇಕಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಪರಿಸರವನ್ನು ಕಲುಷಿತಗೊಳಿಸುವ,(environmental pollution) ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಚಂದ್ರಯಾನ-೨ (ಸಂಸ್ಕೃತ:चंद्रयान-२, lit: Moon-vehicle pronunciation ), ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆಯ ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ಚಾಂದ್ರ ಪರಿಶೋಧನಾ ಅಭಿಯಾನ. ೨೨ ಜುಲೈ ೨೦೧೯ ರ ಅಪರಾಹ್ನ ೦೨ ಗಂಟೆ ೪೩ (2ಗಂ.43 ನಿ.ಕ್ಕೆ)ನಿಮಿಷ ಭಾರತೀಯ ಕಾಲಮಾನಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿ ಎಸ್ ಎಲ್ ವಿ ಎಂಕೆ 3-ಎಂ1 ) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಒಂದು ಚಾಂದ್ರ ಕಕ್ಷೆಗಾಮಿ, ರೋವರ್ ಹಾಗು ಒಂದು ಭೂಸ್ಪರ್ಶಕ ಒಳಗೊಂಡಿರುವ ಇದು ಸೆಪ್ಟೆಂಬರ್ ವೇಳೆಗೆ ಚಂದ್ರನ ದಕ್ಷಿಣ ದ್ರುವಕ್ಕೆ ಇಳಿಯುವ ಯೋಜನೆ ಇದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊಟ್ಟ ಮೊದಲ ಯೋಜನೆ ಇದಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (2018 ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಭಾರತ ಬಿಟ್ಟು ತೊಲಗಿ ಚಳುವಳಿಯು ಒಂದು ಅಸಹಕಾರ ಚಳುವಳಿಯಾಗಿದ್ದು ಆಗಸ್ಟ್ ೧೯೪೨ರಲ್ಲಿ ಮಹಾತ್ಮಾ ಗಾಂಧಿಯವರ ಮುಂದಾಳತ್ವದಲ್ಲಿ ನಡೆಯಿತು. ಇದರ ಗುರಿ ಬ್ರಿಟಿಷ್ ಸರ್ಕಾರದಿಂದ ಭಾರತದ ಸ್ವಾತಂತ್ರ್ಯ ಪಡೆಯುವುದಾಗಿತ್ತು. ೮ ಆಗಸ್ಟ್ ರಂದು ಮುಂಬಯಿಯ ಗೊವಾಳಿಯ ಮೈದಾನ(ಇಂದಿನ ಹೆಸರು - ಆಗಸ್ಟ್ ಕ್ರಾಂತಿ ಮೈದಾನ)ದಲ್ಲಿ ಗಾಂಧೀಜಿಯವರ ಮಾಡು ಇಲ್ಲವೆ ಮಡಿ ಎಂಬ ಘೋಷಣೆಯೊಂದಿಗೆ ಪ್ರಾರಂಭವಾಯಿತು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ (೧೭೭೮-೧೮೨೯)(English : Kittur Chennamma) ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚನ್ನಮ್ಮ ನನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
This article incorporates information from this version of the equivalent article on the English Wikipedia. ಗ್ರೇಟ್ ಬ್ರಿಟನ್ ಹಾಗೂ ಉತ್ತರ ಐರ್ಲೆಂಡ್ನ ಯುನೈಟೆಡ್ ಕಿಂಗ್ಡಂ (ಸಾಮಾನ್ಯವಾಗಿ ಯುನೈಟೆಡ್ ಕಿಂಗ್ಡಂ , ಅಂದರೆ UK ಅಥವಾ ಬ್ರಿಟನ್ ಎಂದು ಹೆಸರಾಗಿದೆ) ಒಂದು ಸಾರ್ವಭೌಮ ಸಂಸ್ಥಾನವಾಗಿದ್ದು ಯುರೋಪ್ ಖಂಡದ ವಾಯುವ್ಯ ತೀರದ ಆಚೆಯಲ್ಲಿ ನೆಲೆಗೊಂಡಿದೆ. ಇದೊಂದು ದ್ವೀಪ ದೇಶ ವಾಗಿದ್ದು,ಗ್ರೇಟ್ ಬ್ರಿಟನ್, ಐರ್ಲೆಂಡ್ನ ಈಶಾನ್ಯ ಭಾಗ ಮತ್ತು ಅನೇಕ ಚಿಕ್ಕ ದ್ವೀಪಗಳನ್ನು ಒಳಗೊಂಡು ವ್ಯಾಪಿಸಿರುವ ದ್ವೀಪಸಮೂಹವಾಗಿದೆ.
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ಚಲನಚಿತ್ರಗಳ ಪಟ್ಟಿ
ಇದು ಅತ್ಯಂತ ಹೆಚ್ಚು ಹಣ ಗಳಿಸಿದ ಭಾರತೀಯ ಚಿತ್ರಗಳ ಶ್ರೇಯಾಂಕವಾಗಿದೆ, ಇದರಲ್ಲಿ ಸಂಪ್ರದಾಯವಾದಿ ಜಾಗತಿಕ ಗಲ್ಲಾ ಪೆಟ್ಟಿಗೆಯ ಅಂದಾಜಿನ ಆಧಾರದ ಮೇಲೆ ಹಲವಾರು ಭಾಷೆಗಳಿಂದ ಬರುವ ಚಲನಚಿತ್ರಗಳು ಪ್ರಸಿದ್ಧವಾದ ಮೂಲಗಳಿಂದ ವರದಿಯಾಗಿದೆ. ಭಾರತದಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ಅಧಿಕೃತ ಟ್ರ್ಯಾಕಿಂಗ್ ಇಲ್ಲ, ಮತ್ತು ಇಂಡಿಯನ್ ಸೈಟ್ಗಳ ಪ್ರಕಾಶನ ದತ್ತಾಂಶವನ್ನು ಆಗಾಗ್ಗೆ ತಮ್ಮ ದೇಶೀಯ ಬಾಕ್ಸ್ ಆಫೀಸ್ ಅಂದಾಜು ಹೆಚ್ಚಿಸಲು ಒತ್ತಾಯಿಸಲಾಗುತ್ತದೆ. ಭಾರತೀಯ ಚಲನಚಿತ್ರಗಳು 20 ನೇ ಶತಮಾನದ ಆರಂಭದಿಂದಲೂ ಸಹ ಪ್ರಪಂಚದಾದ್ಯಂತ ಮಾರುಕಟ್ಟೆಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ.
ಬೆಳೆಯ ಆವರ್ತನೆ, ಹಸಿರು- ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣ ವನ್ನು ಅವಲಂಬಿಸಿರುವ ಸಾವಯವ ಬೇಸಾಯವು ಮಣ್ಣಿನ ತಯಾರಿಕೆಯ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ಮತ್ತು ಕೀಟಗಳನ್ನು ನಿಯಂತ್ರಿಸಲು, ಹಾಗೂ ಯಾಂತ್ರಿಕ ಬೇಸಾಯಕ್ಕಾಗಿ ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳು, ಗಿಡ ಬೆಳವಣಿಗೆ ನಿಯಂತ್ರಣಗಳು, ಜಾನುವಾರು ಮೇವು ಸೇರ್ಪಡೆಗಳು, ಮತ್ತು ತಳಿವಿಜ್ಞಾನ ಪ್ರಕಾರವಾಗಿ ಮಾರ್ಪಡಿಸಿದ ಸಾವಯವಗಳನ್ನು ಹೊರತುಪಡಿಸಿ ಅಥವಾ ಕಟ್ಟುನಿಟ್ಟಾಗಿ ನಿಯಮಿತಗೊಳಿಸುವ ವ್ಯವಸಾಯದ ಒಂದು ಭಾಗವಾಗಿದೆ. 1990 ರಿಂದ, ಸಾವಯವ ಉತ್ಪನ್ನಗಳಿಗಾಗಿನ ಮಾರುಕಟ್ಟೆಯು 2007 ರಲ್ಲಿ $46 ಬಿಲಿಯನ್ ತಲುಪಲು ತೀವ್ರಗತಿಯಲ್ಲಿ ಏರಿಕೆ ಕಂಡಿತು. ಸುವ್ಯವಸ್ಥಿತವಾಗಿ ನಿರ್ವಹಿಸುವ ಒಕ್ಕಲುಭೂಮಿಯಲ್ಲಿ ಈ ಬೇಡಿಕೆಯು ಸಜಾತೀಯ ವರ್ಧನೆಯನ್ನು ನಡೆಸುತ್ತದೆ.
ವಿಜಯನಗರ ಸಾಮ್ರಾಜ್ಯ:( 1336-1646) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಯೋಗ (ಸಂಸ್ಕೃತ, ಪಾಲಿ: योग yóga ) ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲಿ, ಹಿಂದೂ ತತ್ವಶಾಸ್ತ್ರದ ಆರು ಸಂಪ್ರದಾಯಬದ್ಧ(ಆಸ್ತಿಕ) ಶಾಖೆ/ಪಂಥಗಳಲ್ಲಿ ಒಂದಕ್ಕೆ ಈ ಪದವನ್ನು ಬಳಸುತ್ತಾರಲ್ಲದೆ, ಆ ಪಂಥವು ತನ್ನ ಆಚರಣೆಗಳಿಂದ ತಲುಪಲು ಬಯಸುವ ಗುರಿಗೂ ಇದೇ ಪದವನ್ನು ಬಳಸುತ್ತಾರೆ.
ಶ್ರೀ ಪುರಂದರದಾಸರು (೧೪೮೦ – ೧೫೬೪)[೧] ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸ ಪದ್ಧತಿಯ ಅನೇಕ ಪ್ರಮುಖರಲ್ಲಿ ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥದಾಸ, ವಿಜಯದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ.
ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
ಜಾಗತಿಕ ತಾಪಮಾನ ನಿಯಂತ್ರಣಜಾಗತಿಕ ತಾಪಮಾನ ಏರಿಕೆ ಯೆಂದರೆ 20 ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ.
ಸುಭಾಷ್ ಚಂದ್ರ ಬೋಸ್ (সুভাষ চন্দ্র বসু; ಜನನ: ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳುಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.
ಮಹಾಲಯ ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಪಿತೃಗಳಿಗೆ ಯಾ ಪೂರ್ವಜರಿಗೆ ಗೌರವಪೂರ್ವಕವಾಗಿ ನೆನಪಿಸಿ ಅವರಿಗೆ ಪಿಂಡಪ್ರದಾನ ಮತ್ತು ತರ್ಪಣ ಕೊಡುವ ಪಕ್ಷಕ್ಕೆ ಪಿತೃ ಪಕ್ಷ ಯಾ ಮಹಾಲಯ ಎನ್ನುತ್ತಾರೆ. ಇದನ್ನೇ ಬೇರೆಬೇರೆ ಕಡೆಗಳಲ್ಲಿ ಪಿತ್ರಿ ಪೊಕ್ಖೊ, ಹದಿನಾರು ಶ್ರಾದ್ಧಗಳು, ಕನಗತ, ಜಿತಿಯಾ, ಮಹಾಲಯ ಪಕ್ಷ ಮತ್ತು ಅಪರ ಪಕ್ಷವೆಂದೂ ಕರೆಯುತ್ತಾರೆ. ಪಿತೃ ಪಕ್ಷ ಯಾ ಮಹಾಲಯವು ಮರಣಹೊಂದಿರುವ ಪೂರ್ವಜರಿಗೆ (ಪಿತೃಗಳಿಗೆ ಯಾ ಹಿರಿಯರಿಗೆ) ಶ್ರಾದ್ಧ ಮತ್ತು ತರ್ಪಣ ಕೊಡುವ ಪಕ್ಷವಾಗಿರುವ ಕಾರಣ ಬೇರೆ ಯಾವ ಶುಭ ಸಮಾರಂಭಗಳು ಮದುವೆ, ಉಪನಯನ, ಜಾತಕವನ್ನು ಹೊರಗೆ ತೆಗೆಯುವುದು (ಹೆಣ್ಣಿಗೆ ಗಂಡು ಹುಡುಕಲು ಪ್ರಾರಂಭಿಸುವುದು), ಮದುವೆಯ ದಿನವನ್ನು ಇತ್ಯರ್ಥಗೊಳಿಸುವುದು ಇವುಗಳಿಗೆ ಅಶುಭ.