The most-visited ಕನ್ನಡ Wikipedia articles, updated daily. Learn more...
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಆಚಾರ್ಯ ಸರ್ ಪ್ರಫುಲ್ಲಾ ಚಂದ್ರ ರಾಯಿ CIE (ಬೆಂಗಾಲಿ: প্রফুল্ল চন্দ্র রায়; 2 ಆಗಸ್ಟ್ 1861 - 16 ಜೂನ್ 1944) [1] ಒಬ್ಬ ಬೆಂಗಾಲಿ ರಸಾಯನಶಾಸ್ತ್ರಜ್ಞ, ಶಿಕ್ಷಕ ಮತ್ತು ವಾಣಿಜ್ಯೋದ್ಯಮಿ. ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಯುರೋಪ್ನ ಹೊರಗಿನ ಮೊದಲ ರಸಾಯನಶಾಸ್ತ್ರಜ್ಞ, ಲ್ಯಾಂಡ್ಮಾರ್ಕ್ ಪ್ಲೇಕ್ನೊಂದಿಗೆ ತನ್ನ ಜೀವನದ ಮತ್ತು ಕೆಲಸವನ್ನು ಗೌರವಿಸಿತು. ಅವರು ಭಾರತದ ಮೊದಲ ಔಷಧಿ ಕಂಪೆನಿಯಾಗಿದ್ದ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕರಾಗಿದ್ದರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of Indiaಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ India ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು: ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ)ಮಾದ್ರಿಯ ಮಕ್ಕಳು:(ಅವಳಿಗಳು) ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ)ಪಾಂಡವರ ಪತ್ನಿ ದ್ರೌಪದಿ. ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ.
[ಯಶ್ ಗೌಡ] (ನವೀನ್ ಕುಮಾರ್ ಗೌಡ ಜನ್ಮ ಹೆಸರು) ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು. ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ
ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ: ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಚಿವಾಲಯದ ಮುಖ್ಯಸ್ಥ. ವಾಸ್ತವಿಕವಾಗಿ ಇವರು ಇಡೀ ಸಂಸ್ಥೆಯ ಮುಂದಾಳು ಮತ್ತು ವಕ್ತಾರ. ದಕ್ಷಿಣ ಕೋರಿಯಾದ ಬಾನ್ ಕೀ-ಮೂನ್ ಪ್ರಸಕ್ತ ಮಹಾಕಾರ್ಯದರ್ಶಿ.
'ರತನ್ ನಾವಲ್ ಟಾಟಾ' (೨೮, ಡಿಸೆಂಬರ್, ೧೯೩೭-)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು.
ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು.
ಜಯಚಾಮರಾಜ ಒಡೆಯರ್ (ಜುಲೈ ೧೮, ೧೯೧೯-ಸೆಪ್ಟೆಂಬರ್ ೨೩, ೧೯೭೪) ಮೈಸೂರು ಸಂಸ್ಥಾನದ ೨೫ನೇ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು ೧೯೪೦ರಿಂದ ೧೯೫೦ರವರೆಗೆ ರಾಜ್ಯಬಾರ ನಡೆಸಿ, ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ೧೯೫೬ರವರೆಗು ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ ೧೯೬೪ರವರೆಗೆ ಅದರ ರಾಜ್ಯಪಾಲರಾಗಿದ್ದರು.ಇವರು ಯದುವಂಶದ ಕೊನೆಯ ದೊರೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ:GST) 2016:(Goods and Services Tax Bill or GST Bill 2016) ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯು ದಿ.1 ಜುಲೈ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ. ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು. |} ಸರಕು ಮತ್ತು ಸೇವಾ ತೆರಿಗೆ ಬಿಲ್ ಅಥವಾ ಜಿ.ಎಸ್.ಟಿ ಮಸೂದೆ (ಬಿಲ್) (ಹಿಂದಿ: वस्तु एवं सेवा कर विधेयक), ಅಧಿಕೃತವಾಗಿ ಇದು ಸಂವಿಧಾನದ (ನೂರಾ ಇಪ್ಪತ್ತೆರಡನೇ ತಿದ್ದುಪಡಿ) ಮಸೂದೆ, 2014 ಎಂದು ಪ್ರಸ್ತಾಪಿಸಿದೆ.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
ಕಶೇರುಕದ ಕಣ್ಣಿನ ಒಳಭಾಗದಲ್ಲಿರುವ ರೆಟಿನಾ ವು ಬೆಳಕಿನ-ಸಂವೇದನಶೀಲ ಅಂಗಾಂಶವನ್ನು ಹೊಂದಿದೆ. ಕ್ಯಾಮರಾದ ಫಿಲ್ಮ್ನಲ್ಲಾಗುವಂತೆ ಕಣ್ಣಿನ ಚಾಕ್ಷುಷವು ತಯಾರಿಸಿದ ನಾವು ನೋಡುವ ಪ್ರಪಂಚದ ಚಿತ್ರವನ್ನು ರೆಟಿನಾದ ಮೇಲೆ ಮೂಡಿಸುತ್ತದೆ. ರೆಟಿನಾದ ಮೇಲೆ ಬೀಳುವ ಬೆಳಕು ರಾಸಾಯನಿಕ ಮತ್ತು ವಿದ್ಯುತ್ತಿನಂಥ ಘಟನೆಗಳ ಅನುಕ್ರಮವನ್ನು ಸೃಷ್ಠಿಸುತ್ತದೆ ಅದು ಕೊನೆಗೆ ನರದ ಆವೇಗವನ್ನು ಪ್ರಚೋದಿಸುತ್ತದೆ.
ಮಾನವನ ಕಣ್ಣು ಬೆಳಕಿಗೆ ಪ್ರತಿಕ್ರಿಯಿಸುವ ವಿವಿಧೋದ್ದೇಶಗಳುಳ್ಳ ಅತ್ಯಮೂಲ್ಯ ಅಂಗವಾಗಿದೆ. ಪ್ರಜ್ಞಾತ್ಮಕ ಜ್ಞಾನೇಂದ್ರಿಯವಾಗಿರುವ ಕಣ್ಣು, ದೃಷ್ಟಿಗೆ ಅವಕಾಶ ನೀಡುತ್ತದೆ. ಅಕ್ಷಿಪಟದಲ್ಲಿರುವ ರಾಡ್(ಕಣ್ಣಿನ ಪಾಪೆಯ ದಂಡ) ಮತ್ತು ಕೋನ್ (ಅಕ್ಷಿಪಟದಲ್ಲಿರುವ ಶಂಕುವಿನಾಕಾರದ ರಚನೆ) ಕೋಶಗಳು, ವಿವಿಧ ಬಣ್ಣಗಳು ಮತ್ತು ಅವುಗಳ ಗಾಢತೆಯನ್ನು ಗ್ರಹಿಸುವುದು ಸೇರಿದಂತೆ ಜಾಗೃತ ಬೆಳಕಿನ ಗ್ರಹಿಕೆ ಮತ್ತು ದೃಷ್ಟಿಗೆ ಅವಕಾಶ ಕಲ್ಪಿಸುತ್ತದೆ.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಗ್ರೀಕ್ (, IPA: [eliniˈka] or , IPA: [eliniˈci ˈɣlosa]), ಇಂಡೋ-ಯೂರೋಪ್ ಭಾಷೆಗಳ ಒಂದು ಸ್ವತಂತ್ರ ಭಾಗವಾಗಿದ್ದು, ಇದು ಗ್ರೀಕರ ಭಾಷೆಯಾಗಿದೆ. ಇದು ದಕ್ಷಿಣ ಬಾಲ್ಕನ್ಸ್ನ ಮೂಲದಿಂದ ಹುಟ್ಟಿದ್ದು, ಸುಮಾರು 34 ಶತಮಾನಗಳ ಲಿಖಿತ ದಾಖಲೆಯನ್ನು ಹೊಂದಿರುವ ಈ ಭಾಷೆಯು ಇತರ ಯಾವುದೇ ಇಂಡೋ-ಯೂರೋಪ್ ಭಾಷೆಗಳಿಗಿಂತಲೂ ಧೀರ್ಘಕಾಲದ ದಾಖಲೆಯ ಚರಿತ್ರೆಯನ್ನು ಹೊಂದಿದೆ.ಇದರ ಬರವಣಿಗೆಯ ವಿಧಾನವು ಪ್ರಮುಖವಾಗಿ ಗ್ರೀಕ್ ಅಕ್ಷರಮಾಲೆಯಿಂದ ಉಗಮಗೊಂಡಿದೆ.(ಇದಕ್ಕೆ ಮೊದಲು ಇತರ ಪದ್ದತಿಗಳಾದ ಲೀನಿಯರ್ ಬಿ ಮತ್ತು ಸಿಪ್ರಿಯೋಟ್ ಕಾಗುಣಿತ , ಪದ್ದತಿಗಳನ್ನು ಬಳಸಲಾಗುತ್ತಿತ್ತು). ಈ ಅಕ್ಷರಮಾಲೆಯು ಫೀನೀಸಿಯನ್ ಲಿಪಿಯಿಂದ ಉಗಮಗೊಡಿದ್ದು, ನಂತರ ಇದು ಲ್ಯಾಟಿನ್, ಸಿರಿಲಿಕ್, ಕೋಪ್ಟಿಕ್, ಮತ್ತು ಇತರ ಬರಹ ಪದ್ದತಿಗಳ ಮೂಲವಾಯಿತು.
ಸುಭಾಷ್ ಚಂದ್ರ ಬೋಸ್ ಜನನ: ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು.
ಅಮೆರಿಕ ಸಂಯುಕ್ತ ಸಂಸ್ಥಾನ ವು (ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನ , ಯುಎಸ್ , ಯುಎಸ್ಎ ಅಥವಾ ಅಮೆರಿಕಾ ಎಂದು ಕರೆಯಲ್ಪಡುವ) ಐವತ್ತು ರಾಜ್ಯಗಳು ಮತ್ತು ಒಳ ಆಡಳಿತದಲ್ಲಿ ಸ್ವತಂತ್ರವಾಗಿರುವ ಡಿಸ್ಟ್ರಿಕ್ಟ್ಯನ್ನೊಳಗೊಂಡ ಒಂದು ಸ್ವಾಯತ್ತ ಸಾಂವಿಧಾನಿಕ ಗಣರಾಜ್ಯ. ಬಹುತೇಕ ಕೇಂದ್ರ ಭಾಗದ ಉತ್ತರ ಅಮೆರಿಕಾದಲ್ಲಿ ಸ್ಥಿತವಾಗಿರುವ ಈ ದೇಶದ ಒತ್ತೊತ್ತಾಗಿರುವ 48 ರಾಜ್ಯಗಳು ಹಾಗೂ ಪ್ರಧಾನ ಡಿಸ್ಟ್ರಿಕ್ಟ್ ವಾಷಿಂಗ್ಟನ್ ಡಿಸಿ, ಪೆಸಿಫಿಕ್ ಹಾಗೂ ಅಟ್ಲಾಂಟಿಕ್ ಸಮುದ್ರಗಳ ನಡುವೆ ನೆಲೆಗೊಂಡಿದ್ದು, ಉತ್ತರದಲ್ಲಿ ಕೆನಡಾ ಹಾಗೂ ದಕ್ಷಿಣದಲ್ಲಿ ಮೆಕ್ಸಿಕೋಗಳನ್ನು ಗಡಿಗಳಾಗಿ ಹೊಂದಿದೆ. ಅಲಾಸ್ಕಾ ರಾಜ್ಯವು ವಾಯುವ್ಯ ಭಾಗದಲ್ಲಿದ್ದು, ಕೆನಡಾವನ್ನು ಉತ್ತರ ದಿಕ್ಕಿನಲ್ಲೂ ಬೇರಿಂಗ್ ಜಲಸಂಧಿಯನ್ನು ಹಾದು ರಷ್ಯಾವನ್ನು ಪಶ್ಚಿಮ ದಿಕ್ಕಿನಲ್ಲೂ ಹೊಂದಿದೆ.
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.