The most-visited ಕನ್ನಡ Wikipedia articles, updated daily. Learn more...
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
alt=|thumb|396x396px ' ಕುಮಾರರಾಮ: 13ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ ಕುಮಾರರಾಮ ವಾಲ್ಮೀಕಿ/ಬೇಡ [೧] ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ. ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು.ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಲಿಷ್ಠ ಹಿಂದೂ ಸಾಮ್ರಾಜ್ಯದ ಕನಸುಕಂಡವನು ಈ ಕುಮಾರ ರಾಮ.13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ಧಿ.
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು: ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.ಆಗ್ನೇಯದಲ್ಲಿ ಬಂಗಾಳ ಕೊಲ್ಲಿ,ದಕ್ಷಿಣದಲ್ಲಿ ಹಿಂದೂ ಮಹಾ ಸಾಗರ, ನೈಋತ್ಯದಲ್ಲಿ ಅರಬ್ಬಿ ಸಮುದ್ರಗಳಿಂದ ಸುತ್ತುವರಿದಿದ್ದು , ಪಶ್ಚಿಮದಲ್ಲಿ ಪಾಕಿಸ್ತಾನ, ಈಶಾನ್ಯದಲ್ಲಿ ಚೀನಾ,ನೇಪಾಳ,ಭೂತಾನ , ಪೂರ್ವದಲ್ಲಿ ಬರ್ಮಾ, ಬಾಂಗ್ಲಾದೇಶ ಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of Indiaಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ India ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ.
ವಿಜಯನಗರ ಸಾಮ್ರಾಜ್ಯ:( 1336-1646) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
ಕರ್ನಾಟಕ ರಾಜ್ಯದಲ್ಲಿ ೨೦೧೯ - ೨೦೨೦ರ ಕರೋನವೈರಸ್ ಸಾಂಕ್ರಾಮಿಕವನ್ನು ಮೊದಲ ಬಾರಿಗೆ ಮಾರ್ಚ್ ೯, ೨೦೨೦ ರಂದು ದೃಢಪಡಿಸಲಾಯಿತು. ಸಾಂಕ್ರಾಮಿಕ ರೋಗಗಳ ಕಾಯ್ದೆ, ೧೮೯೭ರ ಅಡಿಯಲ್ಲಿ ಸಾಂಕ್ರಾಮಿಕ ನಿರ್ಬಂಧನೆಗಳನ್ನು ಕರ್ನಾಟಕದಲ್ಲಿ ಘೋಷಿಸಲಾಯಿತು. .
ಭಾರತದಲ್ಲಿ ಶಿಕ್ಷಣವನ್ನು ಸಾರ್ವಜನಿಕ ವಲಯವೂ ಹಾಗೆ ಖಾಸಗಿ ವಲಯವೂ ನೀಡುತ್ತಿದೆ.ಶಿಕ್ಷಣಕ್ಕೆ ಅನುದಾನವು ಮೂರು ಕಡೆಯಿಂದ ಬರುತ್ತದೆ.ಅವುಗಳೆಂದರೆ ಕೇಂದ್ರಸರ್ಕಾರ,ರಾಜ್ಯ ಸರ್ಕಾರ, ಮತ್ತು ಸ್ಥಳೀಯ ಸಂಸ್ಥೆಗಳು.ಭಾರತದ ಹಳೆಯ ಉನ್ನತ ಶಿಕ್ಷಣ ಕೇಂದ್ರವೆಂದರೆ ತಕ್ಷಶಿಲ.ಇಂದಿಗೂ ಇದನ್ನು ವಿಶ್ವವಿದ್ಯಾನಿಲಯವೆಂದು ಕರೆಯಬೇಕೆ /ಬೇಡವೇ ಎಂಬ ವಿವಾದಗಳಿವೆ.ಪ್ರಪಂಚದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯವೆಂದರೆ ನಳಂದ ವಿಶ್ವವಿದ್ಯಾನಿಲಯ.ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯೊಂದಿಗೆ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣ ಆಳವಾಗಿ ಬೇರೂರಿತು. ಭಾರತದಲ್ಲಿ ಶಿಕ್ಷಣವು ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡರ ನಿಯಂತ್ರಣಕ್ಕೆ ಒಳಪಡುತ್ತದೆ.ಶಿಕ್ಷಣಕ್ಕೆ ಸಂಬಂದಿಸಿದಂತೆ ಕೆಲವೊಂದು ಜವಬ್ದಾರಿಗಳು ಕೇಂದ್ರಸರ್ಕಾರಕ್ಕೆ ಸ್ವಾಯತ್ತವಾದರೆ ಇನ್ನುಳಿದವು ರಾಜ್ಯಸರ್ಕಾರದ ಜವಬ್ದಾರಿಗಳಾಗುತ್ತವೆ.ಭಾರತ ಸಂವಿಧಾನದ ವಿವಿಧ ಅನುಚ್ಛೇದಗಳು ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿವೆ.ಭಾರತದಲ್ಲಿನ ಬಹುತೇಕ ವಿಶ್ವವಿದ್ಯಾನಿಲಯಗಳನ್ನು ಕೇಂದ್ರ ಸರ್ಕಾರ/ರಾಜ್ಯಸರ್ಕಾರ ನಿಯಂತ್ರಿಸುತ್ತದೆ. ಭಾರತವು ಪ್ರಾಥಮಿಕ ಶಿಕ್ಷಣದ ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಭಾರತದಲ್ಲಿನ ಜನಸಂಖ್ಯೆಯಲ್ಲಿ ಶೇ.೭೫ರಷ್ಟು ಜನರಿಗೆ ಶಿಕ್ಷಣವನ್ನು ವಿಸ್ತರಿಸುವುದರ ಮೂಲಕ ಪ್ರಗತಿ ಸಾಧಿಸುತ್ತಿದೆ.ಭಾರತದ ಸುಧಾರಿತ ಶಿಕ್ಷಣ ವ್ಯವಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಪ್ರಮುಖ ಕೊಡುಗೆ.ಉನ್ನತ ಶಿಕ್ಷಣ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಪ್ರಗತಿಗೆ ಕಾರಣ ವಿವಿಧ ಸಾರ್ವಜನಿಕ ಸಂಸ್ಥೆಗಳು.೬-೧೪ ವರ್ಷದೊಳಗಿನ ಶೇ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಅಲ್ಲು ಅರ್ಜುನ್ (ತೆಲುಗು:అల్లు అర్జున్) (ಇದು ತೆಲುಗು ಹೆಸರಾಗಿದ್ದು ಇದರಲ್ಲಿ ಅಲ್ಲು ಎಂಬುದು ಕುಟುಂಬದ ಹೆಸರಾಗಿದೆ ), (1983 ರ ಏಪ್ರಿಲ್ 8 ರಂದು ಜನನ) ಅವರು ಭಾರತೀಯ ಚಿತ್ರ ನಟರಾಗಿದ್ದು ಇವರು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಚಿತ್ರಗಳೊಂದಿಗೆ ದೀರ್ಘಕಾಲದಿಂದ ಸಂಬಂಧವಿಟ್ಟುಕೊಂಡಿರುವ ಕುಟುಂಬದಿಂದ ಬಂದ ಅಲ್ಲು ಅರ್ಜುನ್ ಅವರು ನಿರ್ಮಾಪಕರಾದ ಅಲ್ಲು ಅರವಿಂದ್ ಅವರ ಪುತ್ರರಾಗಿದ್ದು, ಇವರ ಹೆಸರಾಂತ ಸಂಬಂಧಿಗಳಲ್ಲಿ ಇವರ ಚಿಕ್ಕಪ್ಪರಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್, ಮತ್ತು ಸೋದರ ಸಂಬಂಧಿಯಾದ ರಾಮ್ ಚರಣ್ ತೇಜಾ ಸೇರಿದ್ದಾರೆ. ಇವರು ಸಂತೋಷ್ ಆರ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ ಕೌಟುಂಬಿಕ ವರ್ಗದ ಪ್ರೇಕ್ಷಕರನ್ನು ಗುರಿಯಾಗಿರಿಸಿದ ಚಿತ್ರಗಳನ್ನು ನೀಡುವಲ್ಲಿ ಹೆಸರಾದ ಅಲ್ಲು ಅರ್ಜುನ್ ಅವರು ತಮ್ಮ ಅಭಿನಯಕ್ಕಾಗಿ ಫಿಲ್ಮ್ಫೇರ್ ಮತ್ತು ನಂದಿ ಪ್ರಶಸ್ತಿಯನ್ನು ಒಳಗೊಂಡು ಪ್ರಮುಖ ಮನ್ನಣೆಗಳನ್ನು ಗಳಿಸಿದ್ದಾರೆ.
ಅಂತರವಲೋಕನ ಒಬ್ಬ ವ್ಯಕ್ತಿಯ ಪ್ರಜ್ಞಾನುಭವದ (ಕಾನ್ಷಸ್ ಎಕ್ಸ್ ಪೀರಿಯನ್ಸ್) ಸ್ವಯಂ ವೀಕ್ಷಣೆ (ಇಂಟ್ರಸ್ಪೆಕ್ಷನ್). ಅದು ಒಂದು ಒಳನೋಟ; ತನ್ನ ಪ್ರಬುದ್ಧ ಚೇತನದಲ್ಲಿ ನಡೆಯುತ್ತಿರುವ ಆಲೋಚನೆಗಳು, ಭಾವನೆಗಳು ಮತ್ತು ಇಚ್ಛೆಗಳಲ್ಲದೆ ತಾನು ಯಾವುದನ್ನು ನೋಡು ತ್ತಾನೆ, ಕೇಳುತ್ತಾನೆ ಅಥವಾ ಕಲ್ಪಿಸಿಕೊಳ್ಳುತ್ತಾನೆ ಎಂಬುವುಗಳ ಬಗ್ಗೆ, ಒಬ್ಬ ವ್ಯಕ್ತಿ ವಿವರಗಳನ್ನು ನೀಡುವ ವಿಧಾನ. ಅಂದರೆ, ಒಬ್ಬ ವ್ಯಕ್ತಿ ತನ್ನ ಪ್ರಬುದ್ಧ ಪ್ರಜ್ಞಾ ಪ್ರವಾಹದ (ಸ್ಟ್ರೀಮ್ ಆಫ್ ಕಾನ್ಷಸ್ನೆಸ್) ಮೂಲಾಂಶಗಳ ವೈಲಕ್ಷಣ್ಯಗಳಲ್ಲಿರುವ ಪರಸ್ಪರ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸಿ, ಅವುಗಳನ್ನು ವಿಂಗಡಿಸಿ ವಿವರಿಸುವ ಕ್ರಮ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಹಿಂದು ಧರ್ಮವು ವಿಶ್ವದ ಪುರಾತನ ಧರ್ಮ ವಾಗಿದೆ ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
ಪಲ್ಲಕ್ಕಿ ಚಕ್ರರಹಿತ ವಾಹನಗಳ ಒಂದು ವರ್ಗ, ಜನರ ಸಾಗಾಟಕ್ಕಾಗಿ ಒಂದು ಬಗೆಯ ಮಾನವ ಚಾಲಿತ ಸಾರಿಗೆ. ಪಲ್ಲಕ್ಕಿ ಹೊರುವವರನ್ನು ಭೋವಿಯಂದು ಕರೆಯುತ್ತಾರೆ. ಸ್ವಲ್ಪ ಚಿಕ್ಕ ಪಲ್ಲಕ್ಕಿಗಳು ಇಬ್ಬರು ಅಥವಾ ಹೆಚ್ಚು ಸಾಗಾಳುಗಳಿಂದ ಹೊರಲಾದ ತೆರೆದ ಕುರ್ಚಿಗಳು ಅಥವಾ ಹಾಸಿಗೆಗಳ ರೂಪವನ್ನು ಹೊಂದಿರುತ್ತವೆ, ಮತ್ತು ಕೆಲವು ಪ್ರಾಕೃತಿಕ ಶಕ್ತಿಗಳಿಂದ ರಕ್ಷಣೆಗಾಗಿ ಆವೃತಗೊಂಡಿರುತ್ತವೆ.
ನಮ್ಮ ರಾಜ್ಯದಲ್ಲಿ ಭೋವಿ ಸಮಾಜ ಭಾಂದವರು ಅನಾದಿಕಾಲದಿಂದಲೂ ವಾಸವಾಗಿದ್ದು "ಪಲ್ಲಕ್ಕಿ ಹೊರುವ" , "ಮೇಣೆ ಹೊರುವ" ಕಾಯಕವನ್ನು ಮಾಡುತ್ತಿದ್ದರು. ಭೋವಿಗಳು ದೈಹಿಕವಾಗಿ ಸಶಕ್ತರೂ, ಕಸುವುಳ್ಳವರೂ ಆಗಿದ್ದರಿಂದ ರಾಜರು, ಮಂತ್ರಿಗಳು, ಸಾಮಂತ ಅರಸರು, ದೊಡ್ಡ ದೊಡ್ಡ ಜಮೀನುದಾರರು ಇವರನ್ನು ಪಲ್ಲಕ್ಕಿ ಹೊರುವ ಕಾಯಕಕ್ಕೆ ಸೇವಕರನ್ನಾಗಿ ನೇಮಿಸಿಕೊಳ್ಳುತ್ತಿದ್ದರು . ಈ ಕಾಯಕವು ಭೋವಿ ಜನಾಂಗದವರು ಕುಲ ಕಸುಬಾಗಿತ್ತು.
ಮೌಲ್ಯ ಶಿಕ್ಷಣ ಐವತ್ತಕ್ಕೂ ದೇಶಗಳಲ್ಲಿ ಶಾಲೆಯ ಪಠ್ಯಕ್ರಮದಲ್ಲಿ ಮೌಲ್ಯವನ್ನು ಶಿಕ್ಷಣದ ಮಹತ್ವವನ್ನು ಮಾನ್ಯತೆ, ಮತ್ತು ಸಹ, ನಿಸ್ಸಂದೇಹವಾಗಿ ಮಕ್ಕಳು ಉತ್ತಮ ಮಾನವರ ಬಲಿಯಲು ವೇಳೆ ಮೌಲ್ಯಗಳ ಒಂದು ಧ್ವನಿ ವ್ಯವಸ್ಥೆಯ ಬೆಳೆಯಲು ಅಗತ್ಯವಿರುವ ಮೂಲಭೂತ ವಾಸ್ತವವಾಗಿ ಗುರುತಿಸಲು ಇರುವ ಆ ಮತ್ತು ಜವಾಬ್ದಾರಿಯುತ ನಾಗರಿಕರಾದ, ವಿಷಯಗಳನ್ನು ನಮ್ಮ ದೇಶದಲ್ಲಿ ನಿಂತು ಮಾಹಿತಿ, ಸಾಮಾನ್ಯ ನಿರ್ದೇಶನದ ತಮ್ಮ ಪಠ್ಯಕ್ರಮದ ಭಾಗವಾಗಿರಲಿಲ್ಲ ಶಿಕ್ಷಣ ಮೌಲ್ಯವನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗಿದೆ, ಆದರೆ ಶಾಲೆಗಳು ತಮ್ಮ ಕೆಲಸ ವಿವರಗಳನ್ನು ಬಿಡಲಾಗಿದೆ. ಎಲ್ಲಾ, ನಡೆಸುವಿಕೆಯನ್ನು ಶ್ರೀಮಂತ ಫಲಕಾರಿಯಾಗಿ ಮಾಡಿಲ್ಲ. ಇದು ಉತ್ತಮ ಶಾಲೆಗಳಲ್ಲಿ ಕೆಲವು ತಮ್ಮ ನೆರೆಹೊರೆಯ ಸಮಾಜ ಸೇವೆ ಕಾರ್ಯಕ್ರಮಗಳು ಕೈಗೊಳ್ಳಲು ಅಥವಾ ನಾಯಕತ್ವ ಮತ್ತು ಉತ್ತಮ ನಾಗರಿಕತ್ವ ತಮ್ಮ ಮಕ್ಕಳು ತಯಾರು ಅಣಕು ಸಂಸತ್ ಹಂತ ಎಂದು ಸರಿಯಿದ್ದರೂ, ಇದು ಸತ್ಯ ಬಹುತೇಕ ಎಂದು ಸಹ ಶಾಲೆಗಳ ವಿಷಯದ ಅತ್ಯಂತ ಆರಾಮದಾಯಕ ಅಲ್ಲ, ಮತ್ತು ಅದನ್ನು ಬೋಧನೆ ಚಲನೆ ಮೂಲಕ ಹೋಗಿ, ಮೊದಲನೆಯದಾಗಿ, ವಿಷಯದ ಮೇಲೆ ನಿರ್ದಿಷ್ಟ ಪಠ್ಯಕ್ರಮ ಮತ್ತು ತರಬೇತಿ ಶಿಕ್ಷಕರು ಅನುಪಸ್ಥಿತಿಯಲ್ಲಿ, ತರಗತಿಗಳು ಸುತ್ತಾಡು ಮತ್ತು ಅಂತಿಮವಾಗಿ ತಮ್ಮ ಹಾದಿ ತಪ್ಪಿ: ಒಂದು ಅವುಗಳನ್ನು ದೂಷಿಸಲು ಸಾಧ್ಯವಿಲ್ಲ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ತಂತ್ರಜ್ಞಾನವು ಒಂದು ಜೀವಜಾತಿಯಿಂದ ಉಪಕರಣಗಳು ಹಾಗೂ ಕುಶಲಕರ್ಮಗಳ ಬಳಕೆ ಮತ್ತು ಜ್ಞಾನಕ್ಕೆ ಸಂಬಂಧಿಸಿರುವ, ಮತ್ತು ಒಂದು ಜೀವಜಾತಿಯ ಪರಿಸರವನ್ನು ನಿಯಂತ್ರಿಸಲು ಹಾಗೂ ಅದಕ್ಕೆ ಹೊಂದಿಕೊಳ್ಳಲು ಜೀವಜಾತಿಯ ಸಾಮರ್ಥ್ಯದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆಂಬುದನ್ನು ತಿಳಿಸುವ ಒಂದು ವಿಶಾಲವಾದ ಪರಿಕಲ್ಪನೆಯಾಗಿದೆ. ಆದರೆ, ಒಂದು ನಿಖರವಾದ ವ್ಯಾಖ್ಯಾನ ಸಾಧ್ಯವಿಲ್ಲ; "ತಂತ್ರಜ್ಞಾನವು" ಮಾನವಕುಲಕ್ಕೆ ಉಪಯುಕ್ತವಾಗಿರುವ ಯಂತ್ರಗಳು, ಯಂತ್ರಾಂಶ ಅಥವಾ ಗೃಹೋಪಕರಣಗಳಂತಹ ಭೌತಿಕ ವಸ್ತುಗಳನ್ನು ನಿರ್ದೇಶಿಸಬಹುದು, ಆದರೆ, ವ್ಯವಸ್ಥೆಗಳು, ಸಂಘಟನೆಯ ವಿಧಾನಗಳು, ಮತ್ತು ತಂತ್ರಗಳ ಸಹಿತ ಹೆಚ್ಚು ವಿಶಾಲವಾದ ವಿಷಯಗಳನ್ನೂ ಒಳಗೊಳ್ಳಬಹುದು. ಒಂದು ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ , ಒಂದು ಸಮಸ್ಯೆಗೆ ಮೊದಲೇ ಅಸ್ತಿತ್ವದಲ್ಲಿರುವ ಪರಿಹಾರ ಸುಧಾರಿಸಲು ಒಂದು ಗುರಿಯನ್ನು ಸಾಧಿಸಲು , ಒಂದು ಅನ್ವಯಿಕ ಇನ್ಪುಟ್ ಔಟ್ಪುಟ್ ಸಂಬಂಧಿಸಿದಂತೆ ನಿರ್ವಹಿಸಲು ಅಥವಾ ಒಂದು ನಿರ್ದಿಷ್ಟ ಕಾರ್ಯ ನಿರ್ವಹಿಸಲು, ಇದು ಯಂತ್ರಗಳು , ಮಾರ್ಪಾಡುಗಳನ್ನು , ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳು ಸೇರಿದಂತೆ ಉಪಕರಣಗಳ ,ಜ್ಞಾನದ ಸಂಗ್ರಹ ಎಂದು ಉಲ್ಲೇಖಿಸಬಹುದು .
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು.ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ದಿ ಪಡೆದನು. ಒಂದಾನೊಂದು ಕಾಲದಲ್ಲಿ ಹರಿಶ್ಚಂದ್ರನೆಂಬ ರಾಜನು ಆಯೋಧ್ಯ ಎಂಬ ರಾಜ್ಯವನು ಚಾಣಕ್ಷ್ಯತನದಿಂದ ರಾಜ್ಯವನು ಆಳುತ್ತಿದನು ಮತ್ತು ಅವನು ಸತ್ಯವನು ಬಿಟ್ಟು ಬೇರೆ ಏನನ್ನು ಹೇಳುತ್ತಿರಲಿಲ್ಲ ಯಾವಾಗಲು ಸಂತೋಷದಿಂದ ರಾಜ್ಯಭಾರ ಮಾಡುತ್ತಿದ್ದ. ಆ ಸಮಯದಲ್ಲಿ ದೇವರುಗಳು ಅವನಿಗೂಂದು ಸತ್ವಪರೀಕ್ಷೆಯನ್ನು ಕೊಡಲು ನಿರ್ಧರಿಸಿದರು.
ಚದುರಂಗದ ನಿಯಮಗಳು (ಚದುರಂಗದ ಕಾನೂನುಗಳು ಎಂದೂ ಸಹ ಇವು ಪರಿಚಿತವಾಗಿವೆ) ಚದುರಂಗದ ಆಟದ ಆಡುವಿಕೆಯನ್ನು ನಿರ್ದೇಶಿಸುವ ನಿಯಮಗಳಾಗಿವೆ. ಚದುರಂಗದ ಮೂಲಗಳು ಕರಾರುವಾಕ್ಕಾಗಿ ಯಾವುವು ಎಂಬುದು ಅಸ್ಪಷ್ಟವಾಗಿದ್ದರೂ ಸಹ, ಆಟದ ಆಧುನಿಕ ನಿಯಮಗಳು ೧೬ನೇ ಶತಮಾನದ ಅವಧಿಯಲ್ಲಿ ಇಟಲಿಯಲ್ಲಿ ಮೊದಲು ರೂಪುಗೊಂಡವು ಎನ್ನಬಹುದು. ೧೯ನೇ ಶತಮಾನದ ಆರಂಭದವರೆಗೂ ಈ ನಿಯಮಗಳಲ್ಲಿ ಕೊಂಚಮಟ್ಟಿನ ಮಾರ್ಪಾಡು ಆಗುತ್ತಲೇ ಇತ್ತು.