The most-visited ಕನ್ನಡ Wikipedia articles, updated daily. Learn more...
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಸಂಯುಕ್ತ ರಾಷ್ಟ್ರಗಳ ಸಾರ್ವತ್ರಿಕ ಸಭೆಯಿಂದ (United Nations General Assembly) ೧೯೭೨ರ ಇಸವಿಯಿಂದ ಪ್ರಾರಂಭವಾಗಿ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ್ರ ೫ ಜೂನ್ ದಿನಾಂಕದಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ . ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮದ ವಿಶ್ವ ಪರಿಸರ ದಿನವು ಪ್ರತಿ ವರ್ಷವೂ ಅನ್ಯ ದೇಶಗಳ ನಗರದಲ್ಲಿ ಜೂನ್ ೫ ದಿನಾಂಕದ ವಾರದಲ್ಲಿ ಆಚರಿಸಲಾಗುತ್ತದೆ. ಆಚರಣೆಯಲ್ಲಿ ಪರಿಸರದ ಬಗ್ಗೆ ಸಮಾಜಗಳಲ್ಲಿ ಅರಿವು ಮೂಡಿಸುತ್ತದೆ.
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಇದೇ ಹೆಸರಿನ ಕಾದಂಬರಿಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. ಗ್ರಹಣವು ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ.
ಪರಿಸರ ಇದೇ ಲೇಖನ.ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ಸ್ವಾಭಾವಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೀವಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಗಳು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು.
ಪರಿಸರ ರಕ್ಷಣೆಯು ವ್ಯಕ್ತಿಗಳು, ಸಂಘಟನೆಗಳು ಮತ್ತು ಸರ್ಕಾರಗಳಿಂದ ನೈಸರ್ಗಿಕ ಪರಿಸರವನ್ನು ರಕ್ಷಿಸುವ ಅಭ್ಯಾಸವಾಗಿದೆ. ಅದರ ಉದ್ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಅಸ್ತಿತ್ವದಲ್ಲಿರುವ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದಾಗಿದೆ ಮತ್ತು ಸಾಧ್ಯವಾದಲ್ಲಿ, ಹಾನಿ ಮತ್ತು ರಿವರ್ಸ್ ಪ್ರವೃತ್ತಿಯನ್ನು ಸರಿಪಡಿಸುವು ಗಿದೆ. ಅತಿಯಾದ ಅನುಭೊಗದ ಒತ್ತಡ, ಜನಸಂಖ್ಯಾ ಬೆಳವಣಿಗೆ ಮತ್ತು ತಂತ್ರಜ್ಞಾನದ ಕಾರಣದಿಂದ, ಜೈವಿಕ ಪರಿಸರವು ಕುಸಿಯುತ್ತಿದೆ ಕೆಲವೊಮ್ಮೆ ಶಾಶ್ವತವಾಗಿ ನಶವಗುತ್ತಿದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಪರಿಸರವನ್ನು ಕಲುಷಿತಗೊಳಿಸುವ,(environmental pollution) ಅಸ್ಥಿರಗೊಳಿಸುವ,ಮಲಿನಕಾರಕಗಳನ್ನು ವಾತಾವಾರಣಕ್ಕೆ ಸೇರ್ಪಡಿಸುವ, ಪರಿಸರ ವ್ಯವಸ್ಥೆಗೆ ಹಾನಿಯುಂಟುಮಾಡುವ ಅಂದರೆ ಭೌತಿಕ ವ್ಯವಸ್ಥೆ ಅಥವಾ ಜೀವಿಗಳಿಗೆ ಹಾನಿಯುಂಟು ಮಾಡುವ ಕ್ರಿಯೆಯನ್ನು ಮಾಲಿನ್ಯ ಎನ್ನಬಹುದು. ಮಾಲಿನ್ಯವು ರಾಸಾಯನಿಕ ವಸ್ತುಗಳು ಅಥವಾ ಶಕ್ತಿ ಆಕರಗಳು, ಗಲಾಟೆ, ಉಷ್ಣ ಅಥವಾ ಬೆಳಕಿನಿಂದ ಕೂಡ ಆಗಬಹುದಾಗಿದೆ. ಮಲಿನಕಾರಕಗಳು, ಮಾಲಿನ್ಯಕ್ಕೆ ಕಾರಣವಾಗುವ ವಸ್ತುಗಳು ಹೊರಗಿನ ವಸ್ತುಗಳಿಂದ ಆಗಬಹುದು ಅಥವಾ ಶಕ್ತಿ ಮೂಲಗಳಿಂದ ಅಥವಾ ನೈಸರ್ಗಿಕ ಕಾರಣಗಳಿಂದ; ಸಾಮಾನ್ಯವಾಗಿ ಪರಿಸರದಲ್ಲಿರುವ ಮಟ್ಟಕ್ಕಿಂತ ಹೆಚ್ಚಿಗೆ ಯಾವುದೇ ವಸ್ತು ಅಥವಾ ರಾಸಾಯನಿಕಗಳು ಹೆಚ್ಚಾದಾಗ ನೈಸರ್ಗಿಕ ಕಾರಣಗಳಿಂದ ಮಾಲಿನ್ಯ ಉಂಟಾಗುತ್ತದೆ ಎನ್ನಬಹುದು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಭಾರತದ ರಾಷ್ಟ್ರೀಯ ಉದ್ಯಾನಗಳ ಹಾಗು ರಾಷ್ಟ್ರಮಟ್ಟದ ವನ್ಯಜೀವಿ ಧಾಮಗಳ ಪಟ್ಟಿ ಇಂತಿದೆ. ಸೂ: ಪೆಂಚ್ ರಾಷ್ಟ್ರೀಯ ಉದ್ಯಾನವು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ. ಸಂಜಯ್ ರಾಷ್ಟ್ರೀಯ ಉದ್ಯಾನವು ಛತ್ತೀಸ್ ಗಢ ಮತ್ತು ಮಧ್ಯಪ್ರದೇಶಗಳಲ್ಲಿ ಹರಡಿದ್ದು ತಮ್ಮ ತಮ್ಮ ಭಾಗದ ಉಸ್ತುವಾರಿಯನ್ನು ಎರಡೂ ರಾಜ್ಯಗಳು ಬೇರೆಬೇರೆಯಾಗಿ ನೋಡಿಕೊಳ್ಳುತ್ತವೆ.
ಸ್ವಾಭಾವಿಕ ಸಸ್ಯ ಮತ್ತು ಪ್ರಾಣಿಸಂಪತ್ತನ್ನು ಉಳಿಸಿಕೊಂಡು ದೇಶದ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಅಲ್ಲದೆ, ನಿಸರ್ಗದ ಸಮತೋಲ ಕದಡದಂತೆ ಇರಿಸುವ ಸಲುವಾಗಿ ಕರ್ನಾಟಕದಲ್ಲಿ ಅಭಯಾರಣ್ಯಗಳನ್ನು, ರಾಷ್ಟ್ರೀಯ ಉದ್ಯಾನಗಳನ್ನು ಸ್ಥಾಪಿಸಲಾಗಿದೆ. ಇವು ಬಹುವಾಗಿ ಅಂತಾರಾಷ್ಟ್ರೀಯ ನಿಯಮಗಳನ್ನೇ ಅನುಸರಿಸುತ್ತವೆ. ಆದರೆ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವಂತೆ ಅಲ್ಪಸ್ವಲ್ಪ ಮಾರ್ಪಾಟುಗಳನ್ನು ಇವುಗಳಲ್ಲಿ ಕಾಣಬಹುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:-ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ)ಮಾದ್ರಿಯ ಮಕ್ಕಳು:- (ಅವಳಿಗಳು)ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ.ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of Indiaಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ India ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ.
ಪರಿಸರ ಶಿಕ್ಷಣದ ಕಲ್ಪನೆ ಪ್ರಪ್ರಥಮವಾಗಿ ಮೂಡೀ ಬ೦ದದ್ದು ೧೯೭೨ರಲ್ಲಿ. ಮಾನವನು ಸಮಾಜಜೀವಿ ಎನ್ನುವ ಹಾಗೆ ಆತನು ಪರಿಸರ ಅಥವಾ ಪ್ರಕ್ರುತಿಯ ಕೂಸು.ಅವನ ಸುತ್ತಮುತ್ತಲು ವೈವಿದ್ಯಮಯವಾದ ನಿಸರ್ಗದ ಸೊಬಗು ಇದೆ. ಅ೦ದರೆ ಆತನ ಸುತ್ತಮುತ್ತಲು ಹಲವಾರು ಮರಗಿದಗಲಿವೆ.ವಿವಿಧ ಪ್ರಕಾರ ಪ್ರಾಣಿಪಕ್ಷಿಗಳಿವೆ.ಅಲ್ಲದೆ ವೈವಿಧ್ಯಮಯವಾದ ಕೀಟ ಪ್ರಪ೦ಚವಿದೆ.ಈ ಜೀವಿಗಳೇ ಅಲ್ಲದೆ ಹಲವಾರು ಮಹಾನದಿ,ಸಾಗರ ಸರೊವರಗಳಿವೆ;ದೊಡ್ಡ ದೊಡ್ಡ ಪರ್ವತ ಶಿಕರಗಲಿವೆ;ಗಾಳಿ,ಬೆಳಕು ಹಾಗು ಖನಿಜ ಸ೦ಪತ್ತನ್ನೊಳಗೊ೦ಡ ಪ್ರಕೃತಿ ಮಾತೆ ಇದ್ದಾಳೆ.
ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ.
ವೇಷ ಲೇಖನಕ್ಕಾಗಿ ಇಲ್ಲಿ ನೋಡಿ. ಹಿಂದೂ ಧರ್ಮದಲ್ಲಿ, ಅವತಾರ (ಸಂಸ್ಕೃತದಲ್ಲಿ "ಅವರೋಹಣ" [ಎಂದರೆ., ಸ್ವರ್ಗದಿಂದ ಭೂಮಿಗೆ]) ದೇವರ ಉದ್ದೇಶಪೂರ್ವಕವಾದ ಅವರೋಹಣವನ್ನು ಉಲ್ಲೇಖಿಸುತ್ತದೆ (ದೇವರು ಸ್ವರ್ಗದಿಂದ ಭೂಮಿಗೆ ಒಂದು ಪುನರ್ಜನ್ಮ , ಅಥವಾ ಅವರೋಹಣ (ವೈಷ್ಣವರಿಗೆ ವಿಷ್ಣು) ಈ ಪದವನ್ನು ಹೆಚ್ಚಾಗಿ ವಿಷ್ಣುವಿನೊಂದಿಗೆ ಬಳಸಲಾಗುತ್ತದೆ. ಆದರೂ ಬೇರೆ ದೇವತೆಗಳಿಗೂ ಕೆಲವೊಮ್ಮೆ ಬಳಸಲಾಗುತ್ತದೆ.
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಯೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಎಂದು ಪರಿಗಣಿಸಿದರೆ, ಇನ್ನು ಕೆಲವರು, ಅವರನ್ನು ಕೋಮುವಾದಿಯಾಗಿಯೂ, ಚಾಣಕ್ಯನೀತಿಯವರಾಗಿಯೂ ಭಾವಿಸುತ್ತಾರೆ. ಸ್ವಾತಂತ್ರ್ಯ ಅಂದೋಲನದ ಇತಿಹಾಸದ ಅತ್ಯಂತ ವಿವಾದಾತ್ಮಕ ವ್ಯಕ್ತಿಗಳಲ್ಲಿ ಸಾವರ್ಕರ್ ಪ್ರಮುಖರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ವಿಜಯನಗರ ಸಾಮ್ರಾಜ್ಯ:( 1336-1646) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಸುಭಾಷ್ ಚಂದ್ರ ಬೋಸ್ ಜನನ: ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು.
ರೈತನು ಕೃಷಿಯಲ್ಲಿ, ಅಥವಾ ಆಹಾರ ಅಥವಾ ಕಚ್ಚಾವಸ್ತುಗಳಿಗಾಗಿ ಸಾವಯವಗಳನ್ನು ಬೆಳೆಸುವಲ್ಲಿ ತೊಡಗಿರುವ ವ್ಯಕ್ತಿ. ಈ ಪದವು ಸಾಮಾನ್ಯವಾಗಿ ಜಮೀನು ಬೆಳೆಗಳು, ಹಣ್ಣಿನ ತೋಟಗಳು, ದ್ರಾಕ್ಷಿತೋಟಗಳು, ಕೋಳಿಗಳು, ಅಥವಾ ಇತರ ಜಾನುವಾರುಗಳನ್ನು ಬೆಳೆಸುವ ಸ್ವಲ್ಪ ಸಂಯೋಜನೆಯನ್ನು ಮಾಡುವ ಜನರಿಗೆ ಅನ್ವಯಿಸುತ್ತದೆ. ರೈತನು ಬೇಸಾಯಮಾಡುವ ಜಮೀನಿನ ಮಾಲೀಕನಾಗಿರಬಹುದು ಅಥವಾ ಇತರರು ಒಡೆಯರಾಗಿರುವ ಜಮೀನಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡಬಹುದು, ಆದರೆ ಮುಂದುವರಿದ ಅರ್ಥವ್ಯವಸ್ಥೆಗಳಲ್ಲಿ, ರೈತನು ಸಾಮಾನ್ಯವಾಗಿ ಜಮೀನಿನ ಒಡೆಯನಾಗಿರುತ್ತಾನೆ, ಮತ್ತು ಜಮೀನಿನ ಉದ್ಯೋಗಿಗಳನ್ನು ಜಮೀನು ಕಾರ್ಮಿಕರು, ಅಥವಾ ಆರಂಬದಾಳುಗಳೆಂದು ಕರೆಯಲಾಗುತ್ತದೆ.
ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂದಿ ಎನ್ನುವರು. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.