The most-visited ಕನ್ನಡ Wikipedia articles, updated daily. Learn more...
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಸರ್ ಐಸಾಕ್ ನ್ಯೂಟನ್ FRS (4 ಜನವರಿ 1643– 31 ಮಾರ್ಚ್ 1727 [OS: 25 December 1642– 20 March 1727]) ರವರು ಓರ್ವ ಆಂಗ್ಲ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ಸ್ವಾಭಾವಿಕ ತತ್ವಜ್ಞಾನಿ, ರಸಸಿದ್ಧಾಂತಿ, ಹಾಗೂ ಬ್ರಹ್ಮಜ್ಞಾನಿಯಾಗಿದ್ದರು. ಗಮನಾರ್ಹ ಪ್ರಮಾಣದ ತಜ್ಞರು ಹಾಗೂ ಸಾರ್ವಜನಿಕರು ಅವರ ಬಗ್ಗೆ ಇತಿಹಾಸದ ಬಹುಪ್ರಭಾವಿ ವ್ಯಕ್ತಿ ಎಂದು ತಿಳಿದು ಭಾವಿಸಿಕೊಂಡಿದ್ದಾರೆ. 1687ರಲ್ಲಿ ಪ್ರಕಟಿಸಿದ ಅವರ ಫಿಲಾಸೊಫೀಸ್ ನ್ಯಾಚ್ಯುರಲಿಸ್ ಪ್ರಿನ್ಸಿಪಿಯಾ ಮ್ಯಾಥೆಮೆಟಿಕಾ (ಸಾಮಾನ್ಯವಾಗಿ ಪ್ರಿನ್ಸಿಪಿಯಾ ಎಂದು ಕರೆಯಲ್ಪಡುವ) ಪುಸ್ತಕವು ವಿಜ್ಞಾನದ ಇತಿಹಾಸದಲ್ಲೇ ಬಹು ಪ್ರಭಾವೀ ಪುಸ್ತಕಗಳಲ್ಲಿ ಒಂದಾಗಿದ್ದು ಅಭಿಜಾತ ಯಂತ್ರಶಾಸ್ತ್ರಕ್ಕೆ ಉತ್ತಮ ತಳಪಾಯ ಒದಗಿಸಿಕೊಟ್ಟ ಕೃತಿಯೆಂಬ ಹೆಗ್ಗಳಿಕೆ ಹೊಂದಿದೆ.
ದತ್ತಾತ್ರೇಯನು ಹಿಂದೂಗಳಿಂದ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರನಾದ ದೇವರೆಂದು ಪರಿಗಣಿಸಲ್ಪಡುತ್ತಾನೆ. ದತ್ತ ಶಬ್ದದ ಅರ್ಥ "ಕೊಟ್ಟಿದ್ದು", ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ ದತ್ತನೆಂದು ಕರೆಯಲ್ಪಡುತ್ತಾನೆ. ಅವನು ಅತ್ರಿಯ ಪುತ್ರ, ಹಾಗಾಗಿ "ಆತ್ರೇಯ"ನೆಂಬ ಹೆಸರು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
|ordo = Proteales | familia = Nelumbonaceae | genus = [[Nelumbo]ugh| species = N. nucifera | binomial = Nelumbo nucifera | binomial_authority = Gaertn. | synonyms = Nelumbium speciosum Willd. Nymphaea nelumbo Nymphaea stellata}} ಕಮಲ (ನೀಲಂಬೊ ನೂಸಿಫೆರಾ) ನೀಲಂಬೊನೇಸಿಯಿ ಕುಟುಂಬದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ.ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ [ನರೇಂದ್ರ ಮೋದಿ|ನರೇಂದ್ರ ಮೋದಿಯವರು] ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತ್ತು ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ತಾವೇನೂ ಮಾಡಲಾಗದೇ, ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ. ಮೋದಿಯವರು ಸಾರ್ವಜನಿಕರಿಗೆ ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕರೆ ಜೊತೆ ಅಂಬಾನಿ, ಸಚಿನ್ ತೆಂಡೂಲ್ಕರ್ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶವನ್ನು ಸ್ವಚ್ಛಗೊಳಿಸುವುದು ಹಾಗೂ ಇನ್ನಿತರರಿಗೂ ಅದೇ ರೀತಿ ಮಾಡುವಂತೆ ಕರೆ ನೀಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಲು ಆಹ್ವಾನಿಸಿದ್ದು, ಇದಕ್ಕೆ ಹಲವು ದಿಗ್ಗಜರ ಬೆಂಬಲ ಹಾಗೂ ಪೂರಕ ಸ್ಪಂದನೆಗಳಿಂದ ಈ ಅಭಿಯಾನವು ಇನ್ನಷ್ಟು ಚುರುಕುಗೊಂಡಿದೆ.
ಸಿಂಗ 2019ರ ಕನ್ನಡ ಭಾಷೆಯ ಚಲನಚಿತ್ರ, ವಿಜಯ್ ಕಿರಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿರಂಜೀವಿ ಸರ್ಜಾ,ಅಧಿತಿ ಪ್ರಭುದೇವ, ತಾರಾ ಮತ್ತು ಅರುಣಾ ಬಾಲರಾಜ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ . ಈ ಚಿತ್ರವು ಸಿಂಗ (ಚಿರಂಜೀವಿ ಸರ್ಜಾ), ಅವರ ತಾಯಿ ಜಾನಕಮ್ಮ (ತಾರಾ), ಅವರ ಪ್ರೇಯಸಿ ಗೀತಾ (ಅದಿತಿ ಪ್ರಭುದೇವ) ಮತ್ತು ಖಳನಾಯಕ ರುದ್ರಸ್ವಾಮಿ (ರವಿಶಂಕರ್) ಅವರ ಜೀವನವನ್ನು ಆಧರಿಸಿದೆ..ಈ ಚಿತ್ರವು 2013 ರ ತಮಿಳು ಚಿತ್ರ ಕುಟ್ಟಿ ಪುಲಿಯ ರಿಮೇಕ್ ಆಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of Indiaಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ India ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ.
ಗಣಕ ವಿಜ್ಞಾನವು (ಅಥವಾ ಗಣನಾ ವಿಜ್ಞಾನ) ಮಾಹಿತಿ ಹಾಗೂ ಗಣನೆಯ ಸೈದ್ಧಾಂತಿಕ ಆಧಾರಗಳ, ಮತ್ತು ಗಣಕಯಂತ್ರ ವ್ಯವಸ್ಥೆಗಳಲ್ಲಿ ಅವುಗಳ ಕಾರ್ಯಾನ್ವಯ (ಇಂಪ್ಲಮಂಟೇಶನ್) ಹಾಗೂ ಬಳಸುವಿಕೆಗಾಗಿ ಕಾರ್ಯೋಪಯೋಗಿ ವಿಧಾನಗಳ ಅಧ್ಯಯನ. ಆಗಾಗ, ಮಾಹಿತಿಯನ್ನು ವರ್ಣಿಸುವ ಮತ್ತು ರೂಪಾಂತರಿಸುವ ಕ್ರಮಾವಳಿ ಲಕ್ಷಣದ ಕ್ರಿಯಾಸರಣಿಗಳ (ಆಲ್ಗರಿತ್ಮಿಕ್ ಪ್ರೋಸೆಸ್) ಕ್ರಮಬದ್ಧವಾದ ಅಧ್ಯಯನವೆಂದು ಅದನ್ನು ವಿವರಿಸಲಾಗುತ್ತದೆ; "ಯಾವುದನ್ನು (ಸಮರ್ಥವಾಗಿ) ಯಾಂತ್ರೀಕರಿಸಬಹುದು?" ಎಂಬುದು ಗಣಕ ವಿಜ್ಞಾನಕ್ಕೆ ಆಧಾರವಾದ ಮೂಲಭೂತವಾದ ಪ್ರಶ್ನೆಯಾಗಿದೆ ಗಣಕ ವಿಜ್ಞಾನವು ಹಲವಾರು ಉಪಕ್ಷೇತ್ರಗಳನ್ನು ಹೊಂದಿದೆ; ಗಣಕಯಂತ್ರ ಚಿತ್ರ ನಿರ್ಮಾಣದಂತಹ (ಕಂಪ್ಯೂಟರ್ ಗ್ರ್ಯಾಫ಼ಿಕ್ಸ್) ಕೆಲವು ಉಪಕ್ಷೇತ್ರಗಳು ನಿರ್ದಿಷ್ಟ ಪರಿಣಾಮಗಳ ಗಣನೆಗೆ ಒತ್ತುಕೊಟ್ಟರೆ, ಗಣನಾತ್ಮಕ ಸಂಕೀರ್ಣತೆ ಸಿದ್ಧಾಂತದಂತಹ (ಕಾಂಪ್ಯುಟೇಶನಲ್ ಕಂಪ್ಲೆಕ್ಸಿಟಿ ಥೀಯರಿ) ಇತರ ಕೆಲವು ಉಪಕ್ಷೇತ್ರಗಳು ಗಣನಾತ್ಮಕ ಸಮಸ್ಯೆಗಳ (ಕಾಂಪ್ಯುಟೇಶನಲ್ ಪ್ರಾಬ್ಲಮ್) ಲಕ್ಷಣಗಳನ್ನು ಅಧ್ಯಯನಮಾಡುತ್ತವೆ. ಇನ್ನೂ ಕೆಲವು ಉಪಕ್ಷೇತ್ರಗಳು ಗಣನೆಗಳನ್ನು ಕಾರ್ಯಗತಮಾಡುವಾಗ ಬರುವ ಸವಾಲುಗಳ ಮೇಲೆ ಕೇಂದ್ರೀಕರಿಸುತ್ತವೆ.
ಪ್ರಮೀಳಾ ಜೋಷಾಯ್ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ. ನಾಯಕಿಯಾಗಿ, ಹಾಸ್ಯ ಮತ್ತು ಪೋಷಕ ನಟಿಯಾಗಿ ಸುಮಾರು ೧೦೦ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕೆಲವು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಚಿನ್ನಾ ನಿನ್ನ ಮುದ್ದಾಡುವೆ(೧೯೭೭), ದೇವರೆ ದಿಕ್ಕು(೧೯೭೭), ಸಂಗೀತ(೧೯೮೧), ಆನಂದಸಾಗರ(೧೯೮೩), ತಾಯಿಯ ಆಸೆ(೧೯೮೮), ಮೊಮ್ಮಗ(೧೯೯೭) ಮತ್ತು ತಾಯಿ(೨೦೦೮) ಚಿತ್ರಗಳಲ್ಲಿನ ತಮ್ಮ ಪ್ರಬುದ್ಧ ಅಭಿನಯದಿಂದ ಕನ್ನಡ ಚಿತ್ರರಸಿಕರ ನೆನಪಿನ ಪುಟಗಳಲ್ಲಿ ಸ್ಥಾನ ಪಡೆದಿರುವ ನಟಿ.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
[ಯಶ್ ಗೌಡ] (ನವೀನ್ ಕುಮಾರ್ ಗೌಡ ಜನ್ಮ ಹೆಸರು) ಭಾರತೀಯ ಚಲನಚಿತ್ರ ನಟ, ಮುಖ್ಯವಾಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಸೋಪ್ಗಳಲ್ಲಿ ಕಾಣಿಸಿಕೊಂಡರು. ಯಶ್ ೨೦೦೭ ರಲ್ಲಿ ಜಂಭದ ಹುಡುಗಿ ಅವರ ಚಲನಚಿತ್ರದ ಚೊಚ್ಚಲ ಪ್ರವೇಶವನ್ನು ಮಾಡಿದರು, ಈ ಚಿತ್ರದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರು.
ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯ ದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ನವೋದಯ ಸಾಹಿತ್ಯವೆಂದು ಹೊಸ ಸಾಹಿತ್ಯ ಪ್ರಕಾರ ದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ ಛಂದಸ್ಸಿನ ಸಾನೆಟ್ ಮಾದರಿಯ ಪದ್ಯಗಳು ಮುಖ್ಯವಾದವು.
ಬಸಪ್ಪ ದಾನಪ್ಪ ಜತ್ತಿ(ಬಿ.ಡಿ.ಜತ್ತಿ) (ಸೆಪ್ಟೆಂಬರ್ 10,1912 - ಜೂನ್ 7, 2002) - ಭಾರತದ ಮಾಜಿ ಉಪರಾಷ್ಟ್ರಪತಿಗಳಲ್ಲೊಬ್ಬರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಲ್ಲೊಬ್ಬರು. ಸ್ವಲ್ಪ ದಿನಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಕರ್ನಾಟಕದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮ ಪಂಚಾಯತಿಯಿಂದ ದೇಶದ ಹಂಗಾಮಿ ರಾಷ್ಟ್ರಪತಿ ಹುದ್ದೆಯವರೆಗೆ ತಲುಪಿದ ಏಕೈಕ ರಾಜಕಾರಣಿ ಬಿ.ಡಿ.ಜತ್ತಿ.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:-ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ)ಮಾದ್ರಿಯ ಮಕ್ಕಳು:- (ಅವಳಿಗಳು)ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ.ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
ಸುದೀಪ ಅಥವಾ ಕಿಚ್ಚ ಸುದೀಪ (ಜನನ 2 ಸೆಪ್ಟೆಂಬರ್ 1973) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್್ದ್ದಾರೆರ ನಟಿ ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚಾ (2001), ನಂದಿ (2002), ಕಿಚ್ಚಾ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73, ಶಾಂತಿ ನಿವಾಸ (2007, ನಿರ್ದೇಶಕ), ಮುಸಾಂಜೆಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಈಗಾ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019). ಹುಚ್ಚಾ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು. 2013 ರಿಂದ, ಅವರು ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ನಿರೂಪಕರಾಗಿದ್ದರೆ .
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಹೃದಯ ಸ್ನಾಯುವಿನ ಊತಕ ಸಾವು (MI ) ಅಥವಾ ತೀವ್ರ ಹೃದಯ ಸ್ನಾಯುವಿನ ಊತಕ ಸಾವು (AMI ) ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿಯ-ಕಾಠಿಣ್ಯದ ಪ್ಲೇಕ್(ತಂತುಯುಕ್ತವಾದ ಊತಕದ ಶೇಖರಣೆ)ಯ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ (ತಡೆಗಟ್ಟುವಿಕೆ). ಈ ಪ್ಲೇಕ್ ಅಪಧಮನಿಯ ಪೊರೆಯಲ್ಲಿ ಲಿಪಿಡ್ಗಳು (ಕೊಬ್ಬಿನಾಮ್ಲಗಳು) ಮತ್ತು ಬಿಳಿರಕ್ತಕಣಗಳ (ವಿಶೇಷವಾಗಿ ಮ್ಯಾಕ್ರೊಫೇಜ್ಗಳು) ಅಸ್ಥಿರ ಸಂಗ್ರಹವಾಗಿದೆ.
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.