The most-visited ಕನ್ನಡ Wikipedia articles, updated daily. Learn more...
ಕಾರ್ಗಿಲ್ ಸಂಘರ್ಷ ವೆಂದೇ ಹೆಸರಾದ ಕಾರ್ಗಿಲ್ ಯುದ್ದವು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಸಶಸ್ತ್ರ ಸಂಘರ್ಷವಾಗಿದ್ದು, ಕಾಶ್ಮೀರದ ಕಾರ್ಗಿಲ್ ಜಿಲ್ಲೆ ಮತ್ತು ನಿಯಂತ್ರಣ ರೇಖೆಯಿರುವ ಪ್ರದೇಶಗಳಲ್ಲಿ 1999ರ ಮೇ ಮತ್ತು ಜುಲೈ ನಡುವೆ ಸಂಭವಿಸಿತು. ಉಭಯ ರಾಷ್ಟ್ರಗಳ ನಡುವಿನ de facto ಗಡಿಯಾಗಿರುವ ನಿಯಂತ್ರಣ ರೇಖೆಯಲ್ಲಿ(LOC)ರುವ ಭಾರತದ ನೆಲೆಗಳಿಗೆ ಪಾಕಿಸ್ತಾನದ ಸೈನಿಕರು ಮತ್ತು ಕಾಶ್ಮೀರಿ ಉಗ್ರಗಾಮಿಗಳು ನುಸುಳಿದ್ದೇ ಯುದ್ಧಕ್ಕೆ ಕಾರಣ. ಯುದ್ಧದ ಆರಂಭದ ಹಂತಗಳಲ್ಲಿ, ಕಾರ್ಗಿಲ್ ಕದನಕ್ಕೆ ಸ್ವತಂತ್ರ ಕಾಶ್ಮೀರಿ ಉಗ್ರಗಾಮಿಗಳ ಮೇಲೆ ಪಾಕಿಸ್ತಾನ ಗೂಬೆ ಕೂರಿಸಿತು, ಆದರೆ ಯುದ್ಧಾನಂತರದ ಸಾವು ನೋವುಗಳ ದಾಖಲೆಗಳು ಮತ್ತು ಆ ಬಳಿಕ ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ಸೇನಾ ಸಿಬ್ಬಂದಿ ಮುಖ್ಯಸ್ಥರು ನೀಡಿದ ಹೇಳಿಕೆಗಳು, ಜನರಲ್ ಅಶ್ರಫ್ ರಷೀದ್ ನೇತೃತ್ವದ ಪಾಕಿಸ್ತಾನಿ ಅರೆಸೇನೆ ಪಡೆಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದನ್ನು ರುಜುವಾತು ಮಾಡಿತು.
ಕೊಳಲುಪುರಾತನಕಾಲದಿಂದಲೂ ಪ್ರಸಿದ್ಧವಾಗಿರುವ ಮೂರು ವಾದ್ಯಗಳಲ್ಲಿ ಕೊಳಲು ಕೂಡಾ ಒಂದು.ವೀಣೆ ಹಾಗೂ ಮೃದಂಗ ಉಳಿದೆರಡು ವಾದ್ಯಗಳು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಬಾನ್ಸುರಿ ಎಂಬ ಪ್ರಭೇದ ಬಳಕೆಯಲ್ಲಿದೆ.ಇದರ ಶ್ರುತಿ ಯು ಮನುಷ್ಯನ ಕಂಠದ ಶ್ರುತಿಗೆ ಸಮೀಪವಾಗಿದೆ.ಇದರಿಂದಾಗಿ ಗಮಕ ಮತ್ತು ಜಂಟಿಸ್ವರ ಗಳನ್ನು ನುಡಿಸಲು ಅನುಕೂಲವಾಗಿದೆ. ಇದರ ತಯಾರಿಕೆಯನ್ನು ಹಲವಾರು ವಸ್ತುಗಳಿಂದ ಮಾಡಿದರೂ ಬಿದಿರಿನಿಂದ ಮಾಡಿದ ವಾದ್ಯವು ಶ್ರೇಷ್ಟವಾದುದು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಅಕ್ಷೋಹಿಣಿ ಎಂಬುದು ಮಹಾಭಾರತದಲ್ಲಿ ನಡೆಯುವ ಕುರುಕ್ಷೇತ್ರದ ಮಹಾಯುದ್ಧದ ವಿವರಣೆಯಲ್ಲಿ ಬಳಸಲ್ಪಟ್ಟಿದೆ. ಅಕ್ಷೋಹಿಣಿ ಸೈನ್ಯ ಎಂಬುದು ಆಯಾ ಸೈನ್ಯದಲ್ಲಿರಬಹುದಾದ ಒಂದು ತುಕಡಿ ಅಥವಾ ಈಗಿನ ರೆಜಿಮೆಂಟ್ ಎಂದೂ ಭಾವಿಸಬಹುದಾಗಿದೆ. ನಿರ್ದಿಷ್ಟ ಸಂಖ್ಯೆಯ ಪದಾತಿದಳ,ಕುದುರೆಗಳು,ಆನೆಗಳು ಮತ್ತು ರಥಗಳು ಅಕ್ಷೋಹಿಣಿ ಸೈನ್ಯದಲ್ಲಿ ಸೇರಿಕೊಂಡಿರುತ್ತವೆ.ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸೈನ್ಯದ ತುಕಡಿಯೊಂದರಲ್ಲಿ ೨೧,೮೭೦ ರಥಗಳು,೨೧,೮೭೦ ಆನೆಗಳು,೬೫,೬೧೦ ಕುದುರೆಗಳು ಮತ್ತು ೧,೦೯,೩೫೦ ರಷ್ಟು ಸಂಖ್ಯೆಯ ಪದಾತಿದಳವನ್ನು ಹೊಂದಿರುವ ತುಕಡಿಯನ್ನು ಒಂದು ಅಕ್ಷೋಹಿಣಿ ಸೈನ್ಯ ಎಂದು ಕರೆಯಬಹುದಾಗಿದೆ.೧ ರಥ,೧ ಆನೆ,೩ ಕುದುರೆಗಳು (ಯೋಧರೊಂದಿಗೆ) ಮತ್ತು ೫ ಪದಾತಿ ಸೈನಿಕರ ಅನುಪಾತದೊಂದಿಗೆ ಇಂಥದೊಂದು ತುಕಡಿಯನ್ನು ಕಟ್ಟಿರುವದನ್ನು ಗಮನಿಸಬಹುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಪಲ್ಲಕ್ಕಿ ಚಕ್ರರಹಿತ ವಾಹನಗಳ ಒಂದು ವರ್ಗ, ಜನರ ಸಾಗಾಟಕ್ಕಾಗಿ ಒಂದು ಬಗೆಯ ಮಾನವ ಚಾಲಿತ ಸಾರಿಗೆ. ಪಲ್ಲಕ್ಕಿ ಹೊರುವವರನ್ನು ಭೋವಿಯಂದು ಕರೆಯುತ್ತಾರೆ. ಸ್ವಲ್ಪ ಚಿಕ್ಕ ಪಲ್ಲಕ್ಕಿಗಳು ಇಬ್ಬರು ಅಥವಾ ಹೆಚ್ಚು ಸಾಗಾಳುಗಳಿಂದ ಹೊರಲಾದ ತೆರೆದ ಕುರ್ಚಿಗಳು ಅಥವಾ ಹಾಸಿಗೆಗಳ ರೂಪವನ್ನು ಹೊಂದಿರುತ್ತವೆ, ಮತ್ತು ಕೆಲವು ಪ್ರಾಕೃತಿಕ ಶಕ್ತಿಗಳಿಂದ ರಕ್ಷಣೆಗಾಗಿ ಆವೃತಗೊಂಡಿರುತ್ತವೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂದಿ ಎನ್ನುವರು. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ ೯ ರತ್ನಗಳು. ಇವು, ಹವಳ ಮುತ್ತು ವಜ್ರ ವೈಢೂರ್ಯ ಗೋಮೇಧಿಕ ಮರಕತ ಮಾಣಿಕ್ಯ ಪಚ್ಚೆ ನೀಲ ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು.ಅವರೆಂದರೆ ೧ - ಕಾಳಿದಾಸ, ೨ - ವರರುಚಿ, ೩ - ವೇತಾಲ ಭಟ್ಟ , ೪ - ವರಾಹಮಿಹಿರ, ೫ - ಶಂಕು, ೬- ಧನ್ವಂತ್ರಿ, ೭ - ಬ್ರಹ್ಮ ಗುಪ್ತ, ೮ - ಕ್ಷಪಣಕ, ೯- ಅಮರಸಿಂಹ ನವರತ್ನ (ಸಂಸ್ಕೃತ: नवरत्न) ಸಂಸ್ಕೃತದ ಸಂಯೋಜನಾ ಪದದ ಅರ್ಥ "ಒಂಬತ್ತು ರತ್ನಗಳು" ಎಂದು ಆಗಿದೆ. ಈ ಶೈಲಿಯಲ್ಲಿ ನವರತ್ನಗಳನ್ನು ಉಪಯೋಗಿಸಿಕೊಂಡು ರಚಿತವಾದ ಆಭರಣ ಹಿಂದೂ ಧರ್ಮ, ಜೈನ್ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮ ಪ್ರಮುಖ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಇತರ ಧರ್ಮಗಳ ನಡುವೆ ಹೊಂದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ಆಂಗ್ಲ: ISRO - Indian Space Research Organisation). ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತ.ನಾ), ಹಾಸನ(ಕರ್ನಾಟಕ) ಮತ್ತು ಶ್ರಿಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಮ್ಯಾಕ್ಸ್ಮುಲ್ಲರ್ (ದಿಸೆಂಬರ್ ೬,೧೮೨೩-ಅಕ್ಟೋಬರ್ ೨೮,೧೯೦೦)ಜರ್ಮನಿಯ ವಿದ್ವಾಂಸರು.ಇವರು ಬ್ರಿಟನ್ನಲ್ಲಿ ವಿಧ್ಯಾಭ್ಯಾಸ ಮಾಡಿದರು.ಸಂಸ್ಕೃತವನ್ನು ಕಲಿತು ಭಾರತದ ವೇದಗಳನ್ನು ಇಂಗ್ಲೀಷ್ ಬಾಷೆಗೆ ಅನುವಾದಿಸಿ ಪಾಶ್ವಾತ್ಯ ಜಗತ್ತಿಗೆ ಪರಿಚಯಿಸಿದರು.ರಾಮಕೃಷ್ಣ ಪರಮಹಂಸರಿಂದ ಪ್ರಭಾವಿತರಾಗಿದ್ದ ಇವರು ವೇದಾಂತದ ಪ್ರಮುಖ ಪ್ರತಿಪಾದಕರು.ಇವರ ಪುಸ್ತಕಗಳಲ್ಲಿ India, What can it Teach Us? (1883) ,Six Systems of Hindu Philosophy (1899) ಮುಂತಾದವುಗಳು ಪ್ರಮುಖವಾದವುಗಳು. ಇವರು ಎಸ್ಯದಲ್ಲಿರುವ ಭಾಷೆಗಳಿಗೆ ಉತ್ತೆಜನ ನೀಡಿದರು.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:-ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ)ಮಾದ್ರಿಯ ಮಕ್ಕಳು:- (ಅವಳಿಗಳು)ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ.ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
ಅರಣ್ಯನಾಶ ಎಂದರೆ ನೈಸರ್ಗಿಕವಾಗಿ ಕಾಣಿಸುವ ಅರಣ್ಯಗಳನ್ನು ಮಾನವ ಚಟುವಟಿಕೆಗಳಾದ ಕತ್ತರಿಸುವಿಕೆ ಹಾಗೂ/ಅಥವಾ ಬೆಂಕಿಯಿಂದ ಅರಣ್ಯ ಪ್ರದೇಶದ ಮರಗಿಡಗಳನ್ನು ನಾಶಕ್ಕೊಳಪಡುವ ಕ್ರಿಯೆಯಾಗಿದೆ. ಅರಣ್ಯನಾಶಕ್ಕೆ ಹಲವಾರು ಕಾರಣಗಳಿವೆ: ಮರಗಳು ಅಥವಾ ಅವುಗಳಿಂದ ದೊರಕುವ ಇದ್ದಿಲನ್ನು ಇಂಧನಕ್ಕಾಗಿ ಅಥವಾ ಮಾನವರಿಂದ ಬಳಕೆಯಾಗಲ್ಪಡುವ ಉತ್ಪನ್ನಗಳನ್ನಾಗಿ ಮಾರಾಟ ಮಾಡಲಾಗುತ್ತದೆ, ಇದರ ಜೊತೆಗೆ ತೆರವುಗೊಂಡ ಭೂಮಿಯನ್ನು ಮಾನವರು ಜಾನುವಾರುಗಳ ಮೇವಿಗಾಗಿ, ವಾಣಿಜ್ಯ ಉತ್ಪನ್ನಗಳನ್ನು ಪಡೆಯಲು, ಹಾಗೂ ವಾಸಯೋಗ್ಯ ಸ್ಥಳಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ಪುನರ್ ನಿರ್ಮಾಣ ಮಾಡದೇ ಜನರು ಮರಗಳನ್ನು ಕಡಿದುಹಾಕುತ್ತಿದ್ದಾರೆ, ಇದರಿಂದಾಗಿ ವಾಸಸ್ಥಾನಗಳಿಗೆ ಆದ ಹಾನಿಯಿಂದಾಗಿ ಜೀವ ವೈವಿಧ್ಯತೆ ನಾಶವಾಗಿದ್ದು ವಾತಾವರಣದಲ್ಲಿ ಶುಷ್ಕತೆ ಹೆಚ್ಚುತ್ತಿದೆ.
ಕನ್ನಡ ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.ಕನ್ನಡ ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆ ಬಹಳಷ್ಟಿದೆ
ಮಣ್ಣು ಒಂದು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿ ಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ. ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದ ಬಂಡೆಗಳಿಂದ ಅಥವಾ ಕೊಚ್ಚಿಹೋದ ಅನೇಕ ಮಾರ್ಪಾಡುಗಳನ್ನೊಳಗೊಂಡ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ .
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಇದೇ ಹೆಸರಿನ ಕಾದಂಬರಿಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. ಗ್ರಹಣವು ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ.
ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವ.
ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
ಭೂಮಧ್ಯರೇಖೆಯಿಂದ ಸುಮಾರು 28 ಡಿಗ್ರಿಗಳ ಅಂತರದಲ್ಲಿ ಉತ್ತರಕ್ಕೆ ಇಲ್ಲವೇ ದಕ್ಷಿಣಕ್ಕೆ ಇರುವ ಸ್ಥಳವೇ ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು . ಇವುಗಳು ಕಂಡುಬರುವುದು ಏಷಿಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಮೆಕ್ಸಿಕೊ ಹಾಗೂ ಪೆಸಿಫಿಕ್ ದ್ವೀಪಗಳ ಹಲವು ದ್ವೀಪಗಳು. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ (ಜೀವರಾಶಿ)ಜೀವ ಮಂಡಲ, ಉಷ್ಣವಲಯದ ಆರ್ದ್ರ ಕಾಡುಗಳ ಜಾತಿಯ ಕಾಡುಗಳನ್ನು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು ಉಷ್ಣವಲಯದ ಆರ್ದ್ರ ಕಾಡುಗಳು ಅಥವಾ ವಿಸ್ತಾರ ಕಾಡುಗಳು ) ಮತ್ತು ಕೆಲವೊಮ್ಮೆ ಅವುಗಳನ್ನು ತಗ್ಗುಪ್ರದೇಶದ ಉಷ್ಣವಲಯದ ನಿತ್ಯಹಸಿರಿನ ಕಾಡುಗಳು .
ಸುಭಾಷ್ ಚಂದ್ರ ಬೋಸ್ ಜನನ: ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು.