The most-visited ಕನ್ನಡ Wikipedia articles, updated daily. Learn more...
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಯೋಗ (ಸಂಸ್ಕೃತ, ಪಾಳಿ ಭಾಷೆ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ.ಪಾಲಿಗ್ರಂಥಗಳಲ್ಲಿನ ಪದ ಬಳಕೆಗಾಗಿ, ನೋಡಿ ಥಾಮಸ್ ವಿಲಿಯಂ ರಿಸ್ ಡೇವಿಡ್ಸ್, ವಿಲಿಯಂ ಸ್ಟೆಡೆ, ಪಾಲಿ-ಆಂಗ್ಲ ನಿಘಂಟು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.ಡೆನಿಸ್ ಲಾರ್ಡನರ್ ಕಾರ್ಮಡಿ , ಜಾನ್ ಕಾರ್ಮಡಿ, ಸೆರೆನೆ ಕಂಪ್ಯಾಷನ್. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ ಯು.ಎಸ್, ೧೯೯೬,.ಸ್ಟುವರ್ಟ್ ರೇ ಸರ್ಬ್ಯಾಕರ್, ಸಮಾಧಿ: ದ ನ್ಯೂಮಿನಸ್ ಅಂಡ್ ಸೆಸ್ಸೇಟಿವ್ ಇನ್ ಇಂಡೋ-ಟಿಬೆಟನ್ ಯೋಗ.
ಮಿಥುನ್ ಚಕ್ರವರ್ತಿ ( ಗೌರಂಗಾ ಚಕ್ರವರ್ತಿ ಎಂಬ ಜನ್ಮನಾಮದೊಂದಿಗೆ ಹುಟ್ಟಿದ್ದು ೧೯೪೭ರ ಜೂನ್ ೧೬ರಂದು) ಓರ್ವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-ವಿಜೇತ ಭಾರತದ ಚಲನಚಿತ್ರ ನಟ, ಸಾಮಾಜಿಕ ಕ್ರಿಯಾವಾದಿ ಮತ್ತು ಉದ್ಯಮಿ. ಮೃಗಯಾ (೧೯೭೬) ಎಂಬ ಕಲಾತ್ಮಕ ರೂಪಕ ಚಿತ್ರದೊಂದಿಗೆ ಚಕ್ರವರ್ತಿ ನಟನಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ. ಇದರಲ್ಲಿನ ಅಭಿನಯಕ್ಕಾಗಿ ಆತ ತನ್ನ ಮೊಟ್ಟಮೊದಲ, ಅತ್ಯುತ್ತಮ ನಟನಿಗಾಗಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ.
ಲಿಯಾಂಡರ್ ಏಡ್ರಿಯನ್ ಪೇಸ್ (ಜನನ: ೧೯೭೩ರ ಜೂನ್ ೧೭) ಭಾರತದ ಓರ್ವ ವೃತ್ತಿಪರ ಟೆನಿಸ್ ಆಟಗಾರನಾಗಿದ್ದು, ಈತ ಪ್ರಸಕ್ತವಾಗಿ ATP ಪ್ರವಾಸ ಮತ್ತು ಡೇವಿಸ್ ಕಪ್ ಪಂದ್ಯಾವಳಿಯ ಡಬಲ್ಸ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾನೆ. ೭ ಡಬಲ್ಸ್ ಮತ್ತು ೬ ಮಿಶ್ರ ಡಬಲ್ಸ್ ಟೆನಿಸ್ ಗ್ರಾಂಡ್ ಸ್ಲಾಂ ಪಟ್ಟಗಳನ್ನು ಗೆದ್ದುಕೊಂಡಿರುವ ಹಾಗೂ ಇತರ ಹಲವಾರು ಗ್ರಾಂಡ್ ಸ್ಲಾಂ ಅಂತಿಮ ಪಂದ್ಯಗಳಲ್ಲಿ ಉಪಾಂತ-ವಿಜಯಿಯಾಗಿ (ರನ್ನರ್-ಅಪ್) ಹೊರಹೊಮ್ಮಿರುವ ಈತ, ಪ್ರಪಂಚದಲ್ಲಿನ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಲಯದ ಮಹೋನ್ನತ ಮತ್ತು ಅತ್ಯಂತ ಗೌರವಾನ್ವಿತರಾದ ಸಮಕಾಲೀನ ಆಟಗಾರರ ಪೈಕಿ ಒಬ್ಬನೆಂದು ಪರಿಗಣಿಸಲ್ಪಟ್ಟಿದ್ದಾನೆ. ೨೦೧೦ರಲ್ಲಿ ವಿಂಬಲ್ಡನ್ ಚಾಂಪಿಯನ್ಗಿರಿಗಳಲ್ಲಿ ಕ್ಯಾರಾ ಬ್ಲಾಕ್ ಜೊತೆಯಾಟದಲ್ಲಿ ಮಿಶ್ರ ಡಬಲ್ಸ್ ಪಟ್ಟವನ್ನು ಗೆದ್ದ ನಂತರ, ಮೂರು ವಿಭಿನ್ನ ದಶಕಗಳಲ್ಲಿ ಯಾವುದೇ ವಿಂಬಲ್ಡನ್ ಪಟ್ಟವನ್ನು ಗೆಲ್ಲುವಲ್ಲಿ ರಾಡ್ ಲೇವರ್ ನಂತರದ ಮೊದಲ ಪುರುಷ ಟೆನಿಸ್ ಆಟಗಾರ ಎಂಬ ಕೀರ್ತಿಗೆ ಪಾತ್ರನಾದ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ 'ಆಸ್ಕರ್'ಗೆ ಹೋಲಿಸುತ್ತಾರೆ. ೧೯೫೩ ರಿಂದ ಕೊಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞಾನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು.
ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶದ ಅಧಿಕೃತ ಹೆಸರು ಭಾರತ ಗಣರಾಜ್ಯ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
==ವ್ಯಾಖ್ಯೆ ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಪಂಡಿತ್ ಜವಾಹರಲಾಲ್ ನೆಹರು (14 ನವೆಂಬರ್ 1889 - 27 ಮೇ 1964)((ನವೆಂಬರ್ ೧೪, ೧೮೮೯ - ಮೇ ೨೭, ೧೯೬೪)) ಒಬ್ಬ ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ್ಯ ಮೊದಲು ಮತ್ತು ನಂತರ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮ ಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು 1947ರಲ್ಲಿ ಭಾರತ ಸ್ವತಂತ್ರ ರಾಷ್ಟ್ರವಾಗಿ ಸ್ಥಾಪನೆಯಾದಂದಿನಿಂದ 1964 ರಲ್ಲಿ ಅವರ ಮರಣದವರೆಗೂ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಸಮಾಜವಾದ ತತ್ವದ, ಪ್ರಜಾಪ್ರಭುತ್ವ ಗಣರಾಜ್ಯದ ಮತ್ತು ಜಾತ್ಯತೀತತತ್ವದ ಸಾರ್ವಭೌಮ ಸ್ವತಂತ್ರ ಆಧುನಿಕ ಭಾರತದ ಶಿಲ್ಪಿ ಎಂದು ಅವರು ಪರಿಗಣಿಸಲ್ಪಟ್ಟಿದ್ದಾರೆ .
ಅಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ 'ಯೋಗವಿದ್ಯೆಯು' ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಯೋಗಶ್ಚಿತ್ತವೃತ್ತಿನಿರೋಧಃ ಎಂದ ಮಹಾ ಯೋಗಾಚಾರ್ಯ ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು.
ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.
ಪಾಂಡವರು ಮಹಾಭಾರತದಲ್ಲಿ ಕಂಡುಬರುವ ಪಾತ್ರಗಳು - ಪಾಂಡು ಹಾಗೂ ಕುಂತಿ-ಮಾದ್ರಿಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ. ಕುಂತಿಯ ಮಕ್ಕಳು:-ಯುಧಿಷ್ಠಿರ (ಯಮನಿಂದ) ಭೀಮ (ವಾಯುವಿನಿಂದ) ಅರ್ಜುನ (ಇಂದ್ರನಿಂದ)ಮಾದ್ರಿಯ ಮಕ್ಕಳು:- (ಅವಳಿಗಳು)ನಕುಲ (ಅಶ್ವಿನಿ ದೇವತೆಗಳಿಂದ) ಸಹದೇವ (ಅಶ್ವಿನಿ ದೇವತೆಗಳಿಂದ) ಪಾಂಡವರ ಪತ್ನಿ ದ್ರೌಪದಿ.ಮಹಾಭಾರತದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ ಕೌರವರ ನಡುವೆ ಹಸ್ತಿನಾಪುರದ ಸಿಂಹಾಸನದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು ಕುರುಕ್ಷೇತ್ರ ಯುದ್ಧ ಆರಂಭವಾಗಿ ಕೊನೆಗೆ ಕೃಷ್ಣನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
ಈ ಲೇಖನ ಸಮಾಜ ವಿಜ್ಞಾನದ ಬಗ್ಗೆ. ಅರ್ಥಶಾಸ್ತ್ರ ಪದದ ಇತರ ಬಳಕೆಗಳಿಗಾಗಿ ಅರ್ಥಶಾಸ್ತ್ರ (ದ್ವಂದ್ವ ನಿವಾರಣೆ) ನೋಡಿ.ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ. ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು.
ಜೂನ್ ೨೧ ಅನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೋಷಿಸಿದೆ.ಯೋಗವು ಭಾರತೀಯ ಮೂಲದ, ೬,೦೦೦ ವರ್ಷ ಹಳೆಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯ ತಮ್ಮ ಭಾಷಣದಲ್ಲಿ ವರ್ಷದ ಅತಿ ದೀರ್ಘ ದಿನವಾದ ಜೂನ್ ೨೧ರಂದು ವಿಶ್ವ ಯೋಗ ದಿನ ಆಚರಿಸುವಂತೆ ಕರೆ ನೀಡಿದರು. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸಿತ್ತು.
ಸೌದೆಯು ಮೊಟ್ಟ ಮೊದಲ ಬಾರಿಗೆ ಮಾನವನಿಂದ ಬಳಸಿದ ಇಂಧನವಾಗಿದ್ದು ಅದು ಈಗಲೂ ವಿಶ್ವದೆಲ್ಲೆಡೆ ಪ್ರಮುಖ ಇಂಧನ ಶಕ್ತಿಯ ಮೂಲವಾಗಿ ಬಳಕೆಯಾಗುತ್ತದೆ.]] ಇಂಧನ ವು ಒಂದು ಉರಿಯುವ ವಸ್ತು ಇದರ ಪರಿವರ್ತನೆಯಿಂದ ಶಕ್ತಿಯನ್ನು ಪಡೆಯಬಹುದಾಗಿದೆ.ಇದನ್ನು ಕಾಯಿಸಲು ಅಥವಾ ವಸ್ತುಗಳನ್ನುಚಲಿಸುವಂತೆ ಮಾಡಲು ಇಂಧನವು ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಶಕ್ತಿ ಬಿಡುಗಡೆ ಮಾಡುತ್ತದೆ;ಉದಾಹರಣೆಗೆ ದಹಿಸುವ ಅಥವಾ ಪರಮಾಣು ಮಾಧ್ಯಮ ಅಂದರೆ ಪರಮಾಣುಗಳ ವಿಭಜನೆ ಇಲ್ಲವೇ ಪರಮಾಣುಗಳು ಪರಿವರ್ತನೆ ಮೂಲಕ ಶಕ್ತಿ ಬಿಡುಗಡೆ ಇದರ ಮಾಧ್ಯಮವಾಗಿದೆ. ಉಪಯುಕ್ತ ಇಂಧನದ ಮಹತ್ವದ ಅಂಶವೆಂದರೆ ಅದರಲ್ಲಿನ ಶಕ್ತಿಯನ್ನು ಶೇಖರಿಸಿ ಅವಶ್ಯ ಬಿದ್ದಾಗ ಮಾತ್ರ ಬಳಸಿಕೊಳ್ಳಬಹುದು,ಅಷ್ಟೇ ಅಲ್ಲದೇ ಈ ಇಂಧನ ಶಕ್ತಿಯನ್ನು ನಿಯಂತ್ರಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದಾಗಿದೆ. ಉದಾಹರಣೆಗೆ: ಮಿಥೇನ್, ಪೆಟ್ರೊಲ್ ಮತ್ತು ತೈಲ.
ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ.
ಹೆಣ್ಣು ಪ್ರಾಣಿಗಳಲ್ಲಿ ದೇಹದ ಹೊರಭಾಗದಿಂದ /ತೊಡೆಗಳ ಮಧ್ಯದಿಂದ ಗರ್ಭಕೋಶಕ್ಕೆ ಹೋಗುವ ಸ್ನಾಯುವಿನ ನಾಳವೇ/ತೂತು ಯೋನಿ ಮುಂದುವರಿದ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಇದು ಸಂಭೋಗ, ಮಗುವಿನ ಜನನ ಹಾಗೂ ಮುಟ್ಟಿನ ಸ್ರಾವ ಹೊರಹೋಗಲು ಸಹಾಯಕಾರಿ. ವಯಸ್ಸಿನ ಮಹಿಳೆಯೊಬ್ಬಳು ಯೋನಿಯ ಉದ್ದ ಆದಾಗ್ಯೂ ಮುಂಭಾಗದ ಗೋಡೆಯ (ಮುಂದೆ) ಅಡ್ಡಲಾಗಿ ಸುಮಾರು ೬ ೭.೫ ಸೆಂ (೨.೫ ೩), ಹಾಗೂ ೯ ಸೆಂ (ರಲ್ಲಿ ೩.೫) ಉದ್ದ ಬದಿಯಲ್ಲಿರುವ ಹಿಂಭಾಗದ ಗೋಡೆ (ಹಿಂದಿನ).
ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು. ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಮೊಘಲ್ ಸಾಮ್ರಾಜ್ಯ (ಉರ್ದು:: مغل باد شاہ) ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು ೧೫೨೬ ರಿಂದ ಆಳಿದ ಮುಖ್ಯ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯದ ಸ್ಥಾಪನೆ ೧೫೨೬ ರಲ್ಲಿ ಬಾಬರ್ ನಿಂದ ನಡೆಯಿತು - ಮೊದಲ ಪಾಣಿಪಟ್ ಯುದ್ಧದಲ್ಲಿ ಇಬ್ರಾಹಿಮ್ ಲೋದಿಯನ್ನು ಸೋಲಿಸಿದ ನಂತರ. ಹುಮಾಯೂನ್ ನ ಕಾಲದಲ್ಲಿ ಶೇರ್ ಷಾ ಮೊಘಲ್ ಸಾಮ್ರಾಜ್ಯವನ್ನು ಸೋಲಿಸಿದರೂ, ನಂತರ ಅಕ್ಬರ್ ನ ಕೆಳಗೆ ಮೇಲೇರಲಾರಂಭಿಸಿದ ಮೊಘಲ್ ಸಾಮ್ರಾಜ್ಯ ಔರಂಗಜೇಬನ ಕಾಲದ ವರೆಗೂ ಬೆಳೆಯಿತು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ರಫ್ತು ಒಂದು ದೇಶದ ಬಂದರಿನ ಔಟ್ ಸರಕು ಮತ್ತು ಸೇವೆಗಳ ಹಡಗು ಅರ್ಥ. ಇಂತಹ ಸರಕು ಮತ್ತು ಸೇವೆಗಳ ಮಾರಾಟಗಾರ "ರಫ್ತು" ಎಂದು ಕರೆಯಲಾಗುತ್ತದೆ ಮತ್ತು ವಿದೇಶಿ ಮೂಲದ ಖರೀದಿದಾರ ಒಂದು "ಆಮದು" ಎಂದು ಕರೆಯಲಾಗುತ್ತದೆ ಆದರೆ ರಫ್ತು ದೇಶದಲ್ಲಿ ಆಧರಿಸಿದೆ. ಅಂತರರಾಷ್ಟ್ರೀಯ ವ್ಯಾಪಾರ, "ರಫ್ತು" ಇತರ ಮಾರುಕಟ್ಟೆಗಳಿಗೆ ತಾಯ್ನಾಡಿನಲ್ಲಿ ಸರಕು ಮತ್ತು ಸೇವೆಗಳನ್ನು ಮಾರಾಟ ಸೂಚಿಸುತ್ತದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ.
ಬೆಳೆಯ ಆವರ್ತನೆ, ಹಸಿರು- ಗೊಬ್ಬರ, ಮಿಶ್ರಗೊಬ್ಬರ, ಜೈವಿಕವಾಗಿ ಕೀಟಗಳ ನಿಯಂತ್ರಣ ವನ್ನು ಅವಲಂಬಿಸಿರುವ ಸಾವಯವ ಬೇಸಾಯವು ಮಣ್ಣಿnaತಯಾರಿಕೆಯ ಸಾಮರ್ಥ್ಯವನ್ನು ಸರಿದೂಗಿಸುವಲ್ಲಿ ಮತ್ತು ಕೀಟಗಳನ್ನು ನಿಯಂತ್ರಿಸಲು, ಹಾಗೂ ಯಾಂತ್ರಿಕ ಬೇಸಾಯಕ್ಕಾಗಿ ರಾಸಾಯನಿಕ ಗೊಬ್ಬರಗಳು ಮತ್ತು ರಾಸಾಯನಿಕ ಕೀಟನಾಶಕಗಳು, ಗಿಡ ಬೆಳವಣಿಗೆ ನಿಯಂತ್ರಣಗಳು, ಜಾನುವಾರು ಮೇವು ಸೇರ್ಪಡೆಗಳು, ಮತ್ತು ತಳಿವಿಜ್ಞಾನ ಪ್ರಕಾರವಾಗಿ ಮಾರ್ಪಡಿಸಿದ ಸಾವಯವಗಳನ್ನು ಹೊರತುಪಡಿಸಿ ಅಥವಾ ಕಟ್ಟುನಿಟ್ಟಾಗಿ ನಿಯಮಿತಗೊಳಿಸುವ ವ್ಯವಸಾಯದ ಒಂದು ಭಾಗವಾಗಿದೆ. 1990 ರಿಂದ, ಸಾವಯವ ಉತ್ಪನ್ನಗಳಿಗಾಗಿನ ಮಾರುಕಟ್ಟೆಯು 2007 ರಲ್ಲಿ $46 ಬಿಲಿಯನ್ ತಲುಪಲು ತೀವ್ರಗತಿಯಲ್ಲಿ ಏರಿಕೆ ಕಂಡಿತು. ಸುವ್ಯವಸ್ಥಿತವಾಗಿ ನಿರ್ವಹಿಸುವ ಒಕ್ಕಲುಭೂಮಿಯಲ್ಲಿ ಈ ಬೇಡಿಕೆಯು ಸಜಾತೀಯ ವರ್ಧನೆಯನ್ನು ನಡೆಸುತ್ತದೆ.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಸ್ತ ಪದವಾದಾಗ ಬೇರೊಂದು ಪದದ (ಅನ್ಯ ಪದದ) ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಬಹುವ್ರೀಹಿ ಎಂಬ ಹೆಸರು. ಹಣೆಗಣ್ಣ , ಮುಕ್ಕಣ್ಣ , ನಿಡುಮೂಗ - ಈ ಪದಗಳನ್ನು ಬಿಡಿಸಿ ಬರೆದರೆ , ಹಣೆಯಲ್ಲಿ + ಕಣ್ಣು ಉಳ್ಳವನು ಯಾರೋ ಅವನು - ಹಣೆಗಣ್ಣ (ಶಿವ) ಮೂರು + ಕಣ್ಣು ಉಳ್ಳವನು ಯಾರೋ ಅವನು - ಮುಕ್ಕಣ್ಣ (ಶಿವ)ನಿಡಿದು + ಮೂಗನ್ನು ಉಳ್ಳವನು ಯಾರೋ ಅವನು - ನಿಡುಮೂಗಹಣೆಯಲ್ಲಿ + ಕಣ್ಣು ಉಳ್ಳವ - ಈ ಎರಡೂ ಪದಗಳ ಅರ್ಥ ಇಲ್ಲಿ ಮುಖ್ಯವಲ್ಲ . ಈ ಎರಡೂ ಪದಗಳ ಅರ್ಥದಿಂದ ಹೊಳೆಯುವ ಅನ್ಯ ಪದ ಶಿವ ಮುಖ್ಯ.