The most-visited ಕನ್ನಡ Wikipedia articles, updated daily. Learn more...
ಬ್ಯಾಪ್ಟಿಸಮ್(ದೀಕ್ಷಾಸ್ನಾನ, ಜ್ಞಾನಸ್ನಾನ)
ಕ್ರೈಸ್ತಧರ್ಮದಲ್ಲಿ, ಬ್ಯಾಪ್ಟಿಸಮ್ (ಗ್ರೀಕ್ನಿಂದ βαπτίζω ಬ್ಯಾಪ್ಟೈಜೋ : "ಮುಳುಗಿಸುವುದು", "ಶುದ್ಧೀಕರಣವನ್ನು ನಡೆಸುವುದು", ಅರ್ಥಾತ್, "ಸಂಸ್ಕಾರ ಸ್ನಾನ") ಎಂಬುದು ಒಂದು ಧಾರ್ಮಿಕ ವಿಧಿಯ ಆಚರಣೆಯಾಗಿದ್ದು, ಇದರಲ್ಲಿ ನೀರನ್ನು ಬಳಸುವುದರ ಮೂಲಕ ವ್ಯಕ್ತಿಯೊಬ್ಬನಿಗೆ ಚರ್ಚ್ನ ಸದಸ್ಯತ್ವವನ್ನು ನೀಡಲಾಗುವುದು.ಯೇಸುವು ಸ್ವತಃ ತಾನು ಬ್ಯಾಪ್ಟೈಜ್ ಆಗಿದ್ದರು. ಅರಂಭದ ಕ್ರಿಶ್ಚಿಯನ್ನರಲ್ಲಿ ಸಾಮಾನ್ಯವಾಗಿ ಆಚರಣೆಯಲ್ಲಿದ್ದ ಬ್ಯಾಪ್ಟಿಸಮ್ನ ವಿಧಾನವು ಅಭ್ಯರ್ಥಿಯನ್ನು(ಅಥವಾ "ಬ್ಯಾಪ್ಟಿಜ್ಯಾಂಡ್") ಸಂಪೂರ್ಣವಾಗಿ ಇಲ್ಲವೇ ಪಾರ್ಶ್ವಿಕವಾಗಿ ಅದ್ದುವುದನ್ನು ಒಳಗೊಂಡಿದ್ದಿತು. ಜಾನ್ ದ ಬ್ಯಾಪ್ಟಿಸ್ಟ್ನು ತನ್ನ ಬ್ಯಾಪ್ಟಿಸಮ್ನಲ್ಲಿ ಆಳವಾದ ನದಿಯನ್ನು ಬಳಸಿದ್ದುದು ಅದ್ದುವಿಕೆಯನ್ನು ಸೂಚಿಸುತ್ತದಾದರೂ, 3ನೇ ಶತಮಾನ ಮತ್ತು ನಂತರದ ಕ್ರಿಶ್ಚಿಯನ್ ಬ್ಯಾಪ್ಟಿಸಮ್ನ ಚಿತ್ರಗಳು ಹಾಗೂ ಉತ್ಖನನದ ಸಾಕ್ಷಿಗಳು ಅಗಿನ ಸಾಮಾನ್ಯ ಆಚರಣೆಯ ಪ್ರಕಾರ ಅಭ್ಯರ್ಥಿಯು ನೀರಿನಲ್ಲಿ ನಿಂತುಕೊಂಡಿದ್ದಾಗ ಆತನ ದೇಹದ ಮೇಲ್ಭಾಗದ ಮೇಲೆ ನೀರನ್ನು ಸುರಿಯಲಾಗುತ್ತಿತ್ತೆಂಬುದನ್ನು ಸೂಚಿಸುತ್ತವೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಯೋಗ (ಸಂಸ್ಕೃತ, ಪಾಳಿ ಭಾಷೆ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ.ಪಾಲಿಗ್ರಂಥಗಳಲ್ಲಿನ ಪದ ಬಳಕೆಗಾಗಿ, ನೋಡಿ ಥಾಮಸ್ ವಿಲಿಯಂ ರಿಸ್ ಡೇವಿಡ್ಸ್, ವಿಲಿಯಂ ಸ್ಟೆಡೆ, ಪಾಲಿ-ಆಂಗ್ಲ ನಿಘಂಟು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.ಡೆನಿಸ್ ಲಾರ್ಡನರ್ ಕಾರ್ಮಡಿ , ಜಾನ್ ಕಾರ್ಮಡಿ, ಸೆರೆನೆ ಕಂಪ್ಯಾಷನ್. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ ಯು.ಎಸ್, ೧೯೯೬,.ಸ್ಟುವರ್ಟ್ ರೇ ಸರ್ಬ್ಯಾಕರ್, ಸಮಾಧಿ: ದ ನ್ಯೂಮಿನಸ್ ಅಂಡ್ ಸೆಸ್ಸೇಟಿವ್ ಇನ್ ಇಂಡೋ-ಟಿಬೆಟನ್ ಯೋಗ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ ಕವಿ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಗುಣ ಸಂಧಿ ಎಂಬ ಸಂಸ್ಕೃತ ಸಂಧಿಯು ಪ್ರಮುಖವಾಗಿ ಮೂರು ಸಂದರ್ಭಗಳಲ್ಲಿ ಕಂಡು ಬರುತ್ತದೆ. ಅ ಆ ಕಾರಗಳ ಮುಂದೆ ಇ ಈ ಕಾರವು ಬಂದಾಗ 'ಏ' ಕಾರವು ಉ ಊ ಕಾರವು ಬಂದಾಗ 'ಓ' ಕಾರವೂ ಋ ಕಾರವು ಬಂದಾಗ 'ಆರ್' ಕಾರವೂ ಆದೇಶವಾಗಿ ಬಂದರೆ ಗುಣಸಂಧಿ ಎನಿಸುವುದು.ಅಥವ ಅ,ಆ ಕಾರಗಳಿಗೆ ಇ,ಈ ಕಾರಗಳು ಪರವಾದರೆ, ಓ ಕಾರವು ಋ ಕಾರವು ಪರವಾದರೆ ಅರ್ ಕಾರವು ಬರುತ್ತದೆ ಇದನ್ನ ಗುಣ ಸಂಧಿ ಎನ್ನುವರು. ಅ,ಆ + ಇ,ಈ ಸ್ವರಗಳು ಸಂಧಿಯಾಗಿ, 'ಏ' ಸ್ವರವಾಗಿ ಉಳಿಯುತ್ತದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ.
ಕೈಗಾ ಎಂಬುದು ಭಾರತದ ಕರ್ನಾಟಕ ರಾಜ್ಯದಲ್ಲಿನ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಎಂಬಲ್ಲಿ ನೆಲೆಗೊಂಡಿರುವ ಒಂದು ಪರಮಾಣು ವಿದ್ಯುತ್ ಸ್ಥಾವರವಾಗಿದೆ. ಈ ಸ್ಥಾವರವು 2000ನೇ ಇಸವಿಯ ಮಾರ್ಚ್ನಿಂದಲೂ ಕಾರ್ಯಾಚರಣೆಯನ್ನು ನಡೆಸುತ್ತಿದೆ ಮತ್ತು ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದೆ. ಇದು ನಾಲ್ಕು ಘಟಕಗಳನ್ನು ಹೊಂದಿದೆ.
ಲಕ್ಷ್ಮೀ - ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದೆಯರಲ್ಲೊಬ್ಬರು.ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದ ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಕಾರಣದಿಂದಾಗಿ ಪಂಚಭಾಷಾ ತಾರೆ ಎಂದೂ ಕರೆಯಿಸಿಕೊಳ್ಳುತ್ತಾರೆ.ಕನ್ನಡ ಚಿತ್ರರಂಗದ ಪ್ರಥಮ ಚಲನಚಿತ್ರ ಸತಿ ಸುಲೋಚನ (೧೯೩೪) ಚಿತ್ರದ ನಿರ್ದೇಶಕ ಹಾಗು ದಕ್ಷಿಣ ಭಾರತದ ಪ್ರಮುಖ ಚಿತ್ರ ನಿರ್ದೇಶಕರಲ್ಲೊಬ್ಬರಾದ ವೈ.ವಿ.ರಾವ್ ಅವರ ಮಗಳು ಲಕ್ಷ್ಮೀ.
==ವ್ಯಾಖ್ಯೆ ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ವಿದ್ಯುತ್ ಪ್ರವಾಹ ಎಂದರೆ, ಸನ್ನಿವೇಶವನ್ನು ಅವಲಂಬಿಸಿ, ವಿದ್ಯುದಾವೇಶದ ಒಂದು ಹರಿವು (ಒಂದು ವಿದ್ಯಮಾನ) ಅಥವಾ ವಿದ್ಯುದಾವೇಶದ ಹರಿವಿನ ಪ್ರಮಾಣ (ಒಂದು ಪರಿಮಾಣ) ಎಂದರ್ಥ. ತಂತಿಯಂಥ ಒಂದು ವಾಹಕದಲ್ಲಾದರೆ ಈ ಹರಿಯುತ್ತಿರುವ ವಿದ್ಯುದಾವೇಶವು ಚಲಿಸುತ್ತಿರುವ ಇಲೆಕ್ಟ್ರಾನುಗಳಿಂದ ವಿಶಿಷ್ಟವಾಗಿ ಸಾಗಿಸಲ್ಪಡುತ್ತದೆ; ಒಂದು ವಿದ್ಯುದ್ವಿಚ್ಛೇದ್ಯದಲ್ಲಿ ಇದು ಇಲೆಕ್ಟ್ರಾನುಗಳ ಬದಲಿಗೆ ಅಯಾನುಗಳಿಂದ ಸಾಗಿಸಲ್ಪಡುತ್ತದೆ, ಮತ್ತು ಪ್ಲ್ಯಾಸ್ಮ ಸ್ಥಿತಿಯೊಂದರಲ್ಲಿ ಎರಡರಿಂದಲೂ ಸಾಗಿಸಲ್ಪಡುತ್ತದೆ.ಆಂಪೇರ್ ಎಂಬುದು ವಿದ್ಯುದಾವೇಶದ ಹರಿವಿನ ಪ್ರಮಾಣವನ್ನು ಅಳೆಯುವುದಕ್ಕೆ ಸಂಬಂಧಿಸಿದ SI ಏಕಮಾನವಾಗಿದ್ದು, ಇದು ಪ್ರತಿ ಸೆಕೆಂಡಿಗೆ ಒಂದು ಕೂಲಂಬ್ ಪ್ರಮಾಣದಲ್ಲಿ ಯಾವುದಾದರೊಂದು ಮೇಲ್ಮೈ ಮೂಲಕ ಹರಿಯುತ್ತಿರುವ ಆವೇಶವಾಗಿರುತ್ತದೆ. ವಿದ್ಯುತ್ ಪ್ರವಾಹವನ್ನು ಒಂದು ಆಮೀಟರ್ ಬಳಸಿಕೊಂಡು ಅಳೆಯಲಾಗುತ್ತದೆ.
[ಗೌತಮ ಬುದ್ಧ] (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.
ರಾಷ್ಟ್ರೀಯ ವೈದ್ಯರ ದಿನವು ವೈಯಕ್ತಿಕ ಜೀವನ ಮತ್ತು ಸಮುದಾಯಗಳಿಗೆ ವೈದ್ಯರ ಕೊಡುಗೆಗಳನ್ನು ಗುರುತಿಸಲು ಒಂದು ದಿನವಾಗಿದೆ.ದಿನ ಗುರುತಿಸಲು ಬಳಸಲಾಗುತ್ತದೆ ಸ್ಮರಣಾರ್ಥ ಘಟನೆ ಅವಲಂಬಿಸಿ ದಿನಾಂಕ ದೇಶದಿಂದ ರಾಷ್ಟ್ರಕ್ಕೆ ಬದಲಾಗಬಹುದು.ಕೆಲವು ರಾಷ್ಟ್ರಗಳಲ್ಲಿ ಈ ದಿನವನ್ನು ರಜಾದಿನವೆಂದು ಗುರುತಿಸಲಾಗಿದೆ.ರೋಗಿಗಳು ಮತ್ತು ಆರೋಗ್ಯ ಸೇವೆ ಉದ್ಯಮದ ಪ್ರಾಯೋಜಕರು ಆಚರಿಸಬೇಕೆಂದು ಭಾವಿಸಿದ್ದರೂ ಇದನ್ನು ಸಾಮಾನ್ಯವಾಗಿ ಆರೋಗ್ಯ ರಕ್ಷಣಾ ಸಂಸ್ಥೆಗಳಿಂದ ಆಚರಿಸಲಾಗುತ್ತದೆ.ಸಿಬ್ಬಂದಿ ಗುರುತಿಸುವ ಸಂಕೇತಗಳೊಂದಿಗೆ ವೈದ್ಯರನ್ನು ಪ್ರಸ್ತುತಪಡಿಸಲು ವೈದ್ಯರು ಊಟವನ್ನು ಆಯೋಜಿಸಬಹುದು.ಐತಿಹಾಸಿಕವಾಗಿ, ಒಂದು ಕಾರ್ಡ್ ಅಥವಾ ಕೆಂಪು ಕಾರ್ನೇಷನ್ ಅನ್ನು ವೈದ್ಯರು ಮತ್ತು ಅವರ ಸಂಗಾತಿಗಳಿಗೆ ಕಳುಹಿಸಬಹುದು, ಸತ್ತ ವೈದ್ಯರ ಸಮಾಧಿಯ ಮೇಲೆ ಹೂವು ಹೂಡಲಾಗುತ್ತದೆ.ಮೊದಲ ವೈದ್ಯರ ದಿನವನ್ನು ಜಾರ್ಜದ ವೈಂಡರ್ನಲ್ಲಿ ಮಾರ್ಚ್ ೩೦,೧೯೩೩ರಂದು ಆಚರಿಸಲಾಗಿತ್ತು. ಭಾರತದಲ್ಲಿ ಪ್ರಸಿದ್ಧ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥ ವೈದ್ಯರ ದಿನವನ್ನು ಜುಲೈ ೧ರಂದು ಆಚರಿಸಲಾಗುತ್ತದೆ. ಈ ಆಚರಣೆಯು ನಮ್ಮ ಜೀವನದಲ್ಲಿರುವ ವೈದ್ಯರಿಗೆ ಅವರು ನಮಗೆಷ್ಟು ಮುಖ್ಯ ಮತ್ತು ನಮ್ಮನ್ನು ಗುಣಪಡಿಸುವ ಅವರ ಚಿಕಿತ್ಸೆಗಳು ಎಷ್ಟು ಅಮೂಲ್ಯವೆಂದು ತೋರಿಸುವ ಅಗತ್ಯವನ್ನು ಈಡೇರಿಸುತ್ತದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಭಾರತ, ಅಧಿಕೃತವಾಗಿ: ಭಾರತ ಗಣರಾಜ್ಯ, Transliteration: Bhārata Gaņarājya ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಪ್ರಾಚೀನ ಕನ್ನಡ ಕವಿಗಳು ಉಭಾಯಭಾಷಾ ವಿಶಾರದರೂ,ಸ೦ಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿ೦ದ ಅವರು ತಮ್ಮ ಕನ್ನಡ ಕಾವ್ಯಗಳಲ್ಲಿ ಸ೦ಸ್ಕ್ರತದ ವಸ್ತು,ಭಾಷಾ ಶೈಲಿಯ ಜೊತೆಗೆ ಸ೦ಸ್ಕೃತ ಛ೦ದಸ್ಸನ್ನು ಬಳಸಿದರು.ಚ೦ಪೂ ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿ೦ತ ಪದ್ಯದ ಪ್ರಮಾಣ ಅಧಿಕವಾಗಿದ್ದು,ಪದ್ಯದಲ್ಲಿ ಕ೦ದ ಮತ್ತು ವೃತ್ತಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಸ೦ಸ್ಕ್ರತದ ಲೌಕಿಕ ಛ೦ದಸ್ಸಿನಲ್ಲಿ ಒ೦ದು ಅಕ್ಷರದ ಉಕ್ತೆಯಿ೦ದ ಇಡಿದು ಇಪ್ಪಾತ್ತಾರು ಅಕ್ಷರಗಳ ಉತ್ಪತ್ತಿಯವರೆಗಿನ ಛ೦ದಸ್ಸಿನದಿ೦ದ ಹೊರಡುವ ಸಮವೃತ್ತಗಳು ನೂರಾರಿವೆ.ಅವುಗಳಲ್ಲಿ ಕನ್ನಡ ಕವಿಗಳಿಗೆ ಚ೦ಪಕಮಾಲೆ,ಉತ್ಪಲಮಾಲೆ,ಮತ್ತೇಭ ವಿಕ್ರೀಡಿತ,ಶಾರ್ದೂಲ ವಿಕ್ರೀಡಿತ,ಸ್ರಗ್ದರಾ ಮತ್ತು ಮಹಾಸ್ರಗ್ದರಾಗಳೆ೦ಬ ಆರು ವೃತ್ತಗಳು ಪ್ರಿಯವಾಗಿ ಕ೦ಡಿವೆ.ನಾಗವರ್ಮನು ಛ೦ದೋ೦ಬುಧಿಯಲ್ಲಿ ಈ ಆರೂ ವೃತ್ತಗಳನ್ನು ಖ್ಯಾತಕರ್ಣಾಟಕ ಎ೦ದೇ ಕರೆದಿದ್ದಾರೆ.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಗೌತಮ ಬುದ್ಧ ವಿಷ್ಣುವಿನ ಅವತಾರಗಳಲೊಂದು (ಕ್ರಿ.ಪೂ ೫೫೭-೪೪೭) ಬೌದ್ಧಧರ್ಮದ ಸಂಸ್ಥಾಪಕ. ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ.
ಕರ್ಮಧಾರಯ ಸಮಾಸ:- "ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು." ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು. ಉದಾಹರಣೆಗೆ:- (ii) ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ- ನೀಲವಾದ + ಉತ್ಪಲ = ನೀಲೋತ್ಪಲ[5] (ನೀಲಕಮಲ) ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ) ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ) ಬೃಹತ್ತಾದ + ವೃಕ್ಷ = ಬೃಹದ್ವೃಕ್ಷ (ದೊಡ್ಡಗಿಡ) ನೀಲವಾದ + ಶರಧಿ = ನೀಲಶರಧಿ ನೀಲವಾದ + ಸಮುದ್ರ = ನೀಲಸಮುದ್ರ ಶ್ವೇತವಾದ + ವರ್ಣ = ಶ್ವೇತವರ್ಣ ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ) ಪೀತವಾದ + ವಸ್ತ್ರ = ಪೀತವಸ್ತ್ರ ಪೀತವಾದ + ಅಂಬರ = ಪೀತಾಂಬರ ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶ ಮೇಲಿನ ಕನ್ನಡ, ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.