The most-visited ಕನ್ನಡ Wikipedia articles, updated daily. Learn more...
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಡೆಪ್ಯೂಟಿ ಚನ್ನಬಸಪ್ಪ (ಜನನ - ನವೆಂಬರ ೧ ೧೮೩೩ , ಮರಣ - ಜನವರಿ ೪ ೧೮೮೦) ೧೯ ನೆಯ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ ಆಗ ಕನ್ನಡ ಭಾಷೆ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಚನ್ನಬಸಪ್ಪನವರು. ಕನ್ನಡದ ಕುಲ, ನೆಲಗಳ ಉಜ್ವಲ ಅಭಿಮಾನಿಗಳಾಗಿ, ಖ್ಯಾತಿವೆತ್ತ ಶಿಕ್ಷಣ ತಜ್ಞರಾಗಿ, ಗಣಿತ ಶಾಸ್ತ್ರಜ್ಞರಾಗಿ, ಶ್ರೇಷ್ಠ ವಾಗ್ಮಿಗಳಾಗಿ, ಶೇಕ್ಸಪಿಯರನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ, ಕರ್ನಾಟಕದ ಪ್ರಥಮ ಮತ್ತು ಪ್ರಮುಖ ಶಿಕ್ಷಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ, ಶತಮಾನೋತ್ಸವವನ್ನು ಆಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಮಾಸಿಕ "ಜೀವನ ಶಿಕ್ಷಣ" ಪತ್ರಿಕೆಯ ಸ್ಥಾಪಕರಾಗಿ, ದಕ್ಷ ಡೆಪ್ಯೂಟಿ ಎಜ್ಯುಕೆಶನಲ್ ಇನ್ಸ್ಪೆಕ್ಟರ್ ರಾಗಿ ಅನೇಕ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ಕನ್ನಡ ಪ್ರಾಥಮಿಕ ಶಿಕ್ಷಣದ ಪಿತಾಮಹರಾಗಿ, ಉಚಿತ ಪ್ರಸಾದನಿಲಯಗಳ ಸ್ಥಾಪನೆಗೆ ಮೂಲ ಪ್ರೇರಕರಾಗಿ, ಕನ್ನಡ ಪುನರುಜ್ಜೀವನ ಕಾರ್ಯದ ಕಾರಣಪುರುಷರಾಗಿ ಬೆಳಗಿದ ಪುಣ್ಯಜೀವಿ ಚನ್ನಬಸಪ್ಪನವರು ಲಿಂಗೈಕ್ಯರಾಗಿ ೪-೧-೧೯೮೧ ಕ್ಕೆ ನೂರು ವರುಷಗಳಾಗುತ್ತವೆ. ಆ ಸಂದರ್ಭದಲ್ಲಿ ಡೆಪ್ಯೂಟಿ ಚನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ.
ಯೋಗ (ಸಂಸ್ಕೃತ, ಪಾಳಿ ಭಾಷೆ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ.ಪಾಲಿಗ್ರಂಥಗಳಲ್ಲಿನ ಪದ ಬಳಕೆಗಾಗಿ, ನೋಡಿ ಥಾಮಸ್ ವಿಲಿಯಂ ರಿಸ್ ಡೇವಿಡ್ಸ್, ವಿಲಿಯಂ ಸ್ಟೆಡೆ, ಪಾಲಿ-ಆಂಗ್ಲ ನಿಘಂಟು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.ಡೆನಿಸ್ ಲಾರ್ಡನರ್ ಕಾರ್ಮಡಿ , ಜಾನ್ ಕಾರ್ಮಡಿ, ಸೆರೆನೆ ಕಂಪ್ಯಾಷನ್. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮುದ್ರಣಾಲಯ ಯು.ಎಸ್, ೧೯೯೬,.ಸ್ಟುವರ್ಟ್ ರೇ ಸರ್ಬ್ಯಾಕರ್, ಸಮಾಧಿ: ದ ನ್ಯೂಮಿನಸ್ ಅಂಡ್ ಸೆಸ್ಸೇಟಿವ್ ಇನ್ ಇಂಡೋ-ಟಿಬೆಟನ್ ಯೋಗ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಕೊರೊನಾ ವೈರಸ್ ಕಾಯಿಲೆ 2019 ( ಕೋವಿಡ್ ೧೯ ) ಎಂಬುದು ತೀವ್ರವಾದ ಉಸಿರಾಟದ ಸಮಸ್ಯೆಯಾದ ಸಿಂಡ್ರೋಮ್ ಕೊರೊನಾವೈರಸ್ ೨ (ಸಾರ್ಸ್-ಕೋವಿಡ್-೧೯) ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ . ಈ ರೋಗ ಮೊದಲು ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು,ವಾಸನೇ ಮತ್ತು ರುಚಿ ನಷ್ಟ ಉಸಿರಾಟದ ತೊಂದರೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ವೇದಾವತಿ ನದಿಯು ಪಶ್ಚಿಮ ಘಟ್ಟಗಳಲ್ಲಿ ಉಗಮಿಸಿ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಹರಿದು ತುಂಗಭದ್ರಾ ನದಿಯೊಂದಿಗೆ ಸೇರುತ್ತದೆ. ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಬಳಿ ಹುಟ್ಟುವ 'ವೇದಾ' ನದಿಗೆ ಕಡೂರು ಬಳಿಯ ಮದಗದಕೆರೆಯಿಂದ ಹರಿದು ಬರುವ 'ಆವತಿ ಹಳ್ಳ'ವು ಸಂಗಮಿಸುವುದರೊಂದಿಗೆ 'ವೇದಾವತಿ ನದಿ'ಯಾಗಿ ಹರಿದು ಮುಂದೆ ಸಾಗುತ್ತದೆ. ಹಿರಿಯೂರು ಬಳಿಯ ಮಾರಿಕಣಿವೆ ಎಂಬಲ್ಲಿ ಸರ್ ಎಂ.
ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು. ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, Transliteration: Bhārata Gaņarājya ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಮಾನವ ಹಕ್ಕುಗಳು ಭಾರತದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು (ವಸ್ತುಸ್ಥಿತಿ) ಬಹಳ ಸಂಕೀರ್ಣ ರಚನೆಯಾಗಿದೆ. ಕಾರಣವೆಂದರೆ ದೇಶದ ವಿಶಾಲವಾದ ಭೂ ಭಾಗ ಮತ್ತು ಅತ್ಯದ್ಭುತ ವೈವಿಧ್ಯತೆಯ ಪರಿಣಾಮವಾಗಿ, ಇದರ ಸ್ಥಾನವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದ ನೀತಿ ಮತ್ತು ಈ ದೇಶದ ಸಾರ್ವಭೌಮತ್ವ, ಸಾಮಾಜಿಕ ಸಮಾನತೆ, ಪ್ರಜಾತಂತ್ರ ಗಣರಾಜ್ಯ ರಾಷ್ಟ್ರವಾಗಿದ್ದು, ಮತ್ತು ಇತಿಹಾಸವನ್ನು ದಾಖಲಿಸಿದ್ದ ಹಳೆಯ ವಸಾಹತುಶಾಹಿ ಪ್ರಾಂತ್ಯಗಳಂತಿದೆ. ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳ ನೀಡಿಕೆಯ ಜೊತೆ, ಧಾರ್ಮಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಟ್ಟಿದೆ.
[[ ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್ಕಿನ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ.
ಬಾಲ್ಯ ವಿವಾಹ ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ನೈಸರ್ಗಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೀವಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಗಳು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು.
ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಅರ್ಥವ್ಯವಸ್ಥೆ ಎಂದು ವಿವರಿಸಲಾಗಿದೆ. ಪಿ.ಪಿ.ಪಿ.ವುಳ್ಳ (ಕೊಳ್ಳುವ ಶಕ್ತಿಯ ಸಾಮ್ಯತೆ) ಜಿ.ಡಿ.ಪಿ ಪ್ರಕಾರ ಭಾರತ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಐದನೆಯ ಸ್ಥಾನದಲ್ಲಿದೆ. ಐಎಂಎಫ್ ಪ್ರಕಾರ, ತಲಾವಾರು ಆದಾಯದ ಆಧಾರದಲ್ಲಿ, ೨೦೧೮ರಲ್ಲಿ ಭಾರತವು ಜಿಡಿಪಿ ಪ್ರಕಾರ ೧೩೯ನೇ (ನಾಮಮಾತ್ರದ) ಮತ್ತು ಜಿಡಿಪಿ ಪ್ರಕಾರ ೧೧೮ನೇ (ಪಿಪಿಪಿ) ಸ್ಥಾನ ಹೊಂದಿತ್ತು.೧೯೪೭ರಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ೧೯೯೧ರ ವರೆಗೆ, ಅನುಕ್ರಮದ ಸರ್ಕಾರಗಳು ವ್ಯಾಪಕ ಸರ್ಕಾರಿ ಹಸ್ತಕ್ಷೇಪ ಮತ್ತು ನಿಯಂತ್ರಣವುಳ್ಳ ರಕ್ಷಣಾವಾದಿ ಆರ್ಥಿಕ ನೀತಿಗಳನ್ನು ಪ್ರೋತ್ಸಾಹಿಸಿದವು; ಶೀತಲ ಸಮರದ ಅಂತ್ಯ ಮತ್ತು ೧೯೯೧ ರಲ್ಲಿ ತೀವ್ರ ಪಾವತಿ ಬಾಕಿ ಬಿಕ್ಕಟ್ಟಿನ ಕಾರಣ ಭಾರತವು ಆರ್ಥಿಕ ಉದಾರೀಕರಣದ ವಿಶಾಲ ಕಾರ್ಯಕ್ರಮವನ್ನು ಅಳವಡಿಸಿಕೊಂಡಿತು.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.