The most-visited ಕನ್ನಡ Wikipedia articles, updated daily. Learn more...
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಆಶಿಶ್ ದಿವನ್ಸಿಂಗ್ಗ್ ನೆಹ್ರಾ (೨೯ ಏಪ್ರಿಲ್ ೧೯೭೯ ಜನನ) ಭಾರತದ ಜನಪ್ರಿಯ ಕ್ರಿಕೆಟಿಗ ೧೯೯೯ ರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿದ್ದಿಸಿದ್ದಾರೆ ಇವರು ಎಡಗೈ ವೇಗದ ಬೌಲರ್ ಅವರು ವಿವಿಧ ವೇಗ, ನಿಖರತೆ, ಮತ್ತು ಅಂತರ ಕಾರ್ಯತಂತ್ರದ ವ್ಯತ್ಯಾಸಗಳು, ಮತ್ತು ಚೆಂಡನ್ನು ಸ್ವಿಂಗ್ ಎರಡೂ ರೀತಿಯಲ್ಲಿ ಸಾಮರ್ಥ್ಯವನ್ನು ಹೂಂದ್ದಿದ್ದಾರೆ. ಇವರು ಎರಡು ಯಶಸ್ವಿ ವಿಶ್ವಕಪ್ ಪ್ರಚಾರ, ಎರಡು ಏಷ್ಯಾ ಕಪ್, ಮತ್ತು ಮೂರು ಚಾಂಪಿಯನ್ಸ್ ಟ್ರೋಫಿಗಳನ್ನು ಭಾರತವನ್ನು ಪ್ರತಿನಿಧಿಸಿದ್ದರು. ಅವರು ನಾಲ್ಕು ವಿವಿಧ ತಂಡಗಳು ಪ್ರತಿನಿಧಿಸಿದ್ದರು ಇದರಲ್ಲಿ ಐಪಿಎಲ್, ವಿಶೇಷ ಪರಿಣಾಮಕಾರಿಯಾಗಿ ಬಂದಿದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, Transliteration: Bhārata Gaņarājya ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಕೆ.ಜಿ.ಎಫ್: ಅಧ್ಯಾಯ 2 ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ 2022 ರ ಭಾರತೀಯ ಕನ್ನಡ ಭಾಷೆಯ ಅವಧಿಯ ಸಾಹಸ ಚಲನಚಿತ್ರವಾಗಿದೆ. ಇದು ಎರಡು ಭಾಗಗಳ ಸರಣಿಯಲ್ಲಿ ಎರಡನೇ ಕಂತಾಗಿದ್ದು, 2018 ರ ಚಲನಚಿತ್ರ KGF: ಅಧ್ಯಾಯ 1 ರ ಉತ್ತರಭಾಗವಾಗಿದೆ. ಚಿತ್ರದಲ್ಲಿ ಯಶ್, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಮಹಾರಾಜ ದಶರಥ, ಅವನಾಳಿದ ರಾಜ್ಯದ ಹೆಸರು ಅಯೋಧ್ಯೆ, ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ. ಮನುನಾ ಮಾನವೇಂದ್ರೇಣ ಯಾ ಪುರೀ ನಿರ್ಮಿತಾ ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ) ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ ವಾಮದೇವರು ತಪಸ್ವಿಗಳಾದ ಗುರುಗಳು, ಪುರೋಹಿತರು, ಮನಮೆಚ್ಚಿದ ಮೂವರು ಮಡದಿಯರು, ಕೌಸಲ್ಯಾ, ಸುಮಿತ್ರಾ, ಕೈಕೇಯಿ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು.
ಅಭಿಜ್ಞಾನ ಶಾಕುಂತಲಮ್ (ಕನ್ನಡದಲ್ಲಿ "ಅಭಿಜ್ಞಾನ ಶಾಕುಂತಳ" ಎಂಬ ಪ್ರಯೋಗವು ಹೆಚ್ಚಾಗಿದೆ) ‘ಕವಿಕುಲಗುರು’ ಎಂದು ಪ್ರಖ್ಯಾತನಾದ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಏಳು ಅಂಕಗಳ ನಾಟಕ. ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಕಾಳಿದಾಸನೂ ಒಬ್ಬನೆನ್ನುವ ಸ್ಥಾನವನ್ನು ಗಳಿಸಿಕೊಟ್ಟ ನಾಟಕ. "ಕಾವ್ಯೇಷು ನಾಟಕಂ ರಮ್ಯಂ; ತತ್ರ ರಮ್ಯಾ ಶಾಕುಂತಲಾ" ಎಂದು ಹೊಗಳಿಸಿಕೊಂಡ ಶೃಂಗಾರರಸ ಪ್ರಧಾನವಾಗಿರುವ ಕೃತಿ.
ಹೆಣ್ಣು ಪ್ರಾಣಿಗಳಲ್ಲಿ ದೇಹದ ಹೊರಭಾಗದಿಂದ /ತೊಡೆಗಳ ಮಧ್ಯದಿಂದ ಗರ್ಭಕೋಶಕ್ಕೆ ಹೋಗುವ ಸ್ನಾಯುವಿನ ನಾಳವೇ/ತೂತು ಯೋನಿ ಮುಂದುವರಿದ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಇದು ಸಂಭೋಗ, ಮಗುವಿನ ಜನನ ಹಾಗೂ ಮುಟ್ಟಿನ ಸ್ರಾವ ಹೊರಹೋಗಲು ಸಹಾಯಕಾರಿ. ವಯಸ್ಸಿನ ಮಹಿಳೆಯೊಬ್ಬಳು ಯೋನಿಯ ಉದ್ದ ಆದಾಗ್ಯೂ ಮುಂಭಾಗದ ಗೋಡೆಯ (ಮುಂದೆ) ಅಡ್ಡಲಾಗಿ ಸುಮಾರು ೬ ೭.೫ ಸೆಂ (೨.೫ ೩), ಹಾಗೂ ೯ ಸೆಂ (ರಲ್ಲಿ ೩.೫) ಉದ್ದ ಬದಿಯಲ್ಲಿರುವ ಹಿಂಭಾಗದ ಗೋಡೆ (ಹಿಂದಿನ).
ವೆನಿಸ್ (ಇಟಾಲಿಯನ್:Venezia, IPA: [veˈnεttsia], ವೆನೆಷಿಯನ್: ವೆನೆಷಿಯ ) ಉತ್ತರ ಇಟಲಿಯ ಒಂದು ನಗರವಾಗಿದ್ದು 271,367 ಜನಸಂಖ್ಯೆಯ (1 ಜನವರಿ 2004 ಜನಗಣನೆಯ ಪ್ರಕಾರ) ವೆನೆಟೊ ಪ್ರದೇಶದ ರಾಜಧಾನಿ. ಪಡುವಾ ಜೊತೆ ಸೇರಿ, ಈ ನಗರ ಪಡುವಾ-ವೆನಿಸ್ ಮಹಾನಗರ ಪ್ರದೇಶದ ಭಾಗವಾಗಿದೆ (ಜನಸಂಖ್ಯೆ 1,600,000). ಐತಿಹಾಸಿಕವಾಗಿ ಈ ನಗರ ಒಂದು ಸ್ವತಂತ್ರ ರಾಷ್ಟ್ರವಾಗಿತ್ತು.
ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಧಂಕರರು ವೃಷಭನಾಥರು. ಇವರಿಗೆ ಸುನಂದ ಮತ್ತು ನಂದಾ ಯೆಂಬ ಇಬ್ಬರು ಪತ್ನಿಯರು.ಇವರಿಂದ ನೂರುಜನ ಗಂಡು ಮಕ್ಕಳೂ ಮತ್ತು ಇಬ್ಬರು ಹೆಣ್ಣು ಮಕ್ಕಳೂ ಜನಿಸಿದರು.ಬಾಹುಬಲಿಯು ಸುನಂದೆಯ ಮಗ.ವೃಷಭನಾಥರಿಗೆ ವೈರಾಗ್ಯ ಉಂಟಾದಾಗ ಮಕ್ಕಳಿಗೆ ರಾಜ್ಯವನ್ನು ಹಂಚಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೈವಲ್ಯಜ್ಞಾನ ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
[[ ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಸುಹಾಸಿನಿ ರಾಜಾರಾಮ್, ಅವರ ರಂಗನಾಮದಿಂದ ಜನಪ್ರಿಯರಾದ ಸ್ನೇಹ (ಸ್ನೇಹಾ/स्नेहा /స్నేహ/Snehaa) (ಜನನ ೧೨ ಅಕ್ಟೋಬರ್ ೧೯೮೧), ಭಾರತೀಯ ಚಲನಚಿತ್ರ ನಟಿ, ಇವರು ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅನಿಲ್ - ಬಾಬು ನಿರ್ದೇಶನದ ಮಲಯಾಳಂ ಚಿತ್ರ ಇಂಗಾನೆ ಒರು ನೀಲಪಕ್ಷಿ (೨೦೦೦) ನಲ್ಲಿ ಇವರು ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಿತ್ರ ವಿರುಂಬುಗಿರೆನ್ ಗೆ ಸಹಿ ಹಾಕಿದರು, ಆದರೆ ಇದು ಎರಡು ವರ್ಷಗಳ ನಂತರ ಮಾತ್ರ ಬಿಡುಗಡೆಯಾಯಿತು. ಇವಳು ತಮಿಳಿನಲ್ಲಿ ಆಫರ್ಗಳನ್ನು ಪಡೆಯಲು ಪ್ರಾರಂಭಿಸಿದಳು ಮತ್ತು ತನ್ನ ಗಮನವನ್ನು ಕಾಲಿವುಡ್ಗೆ ವರ್ಗಾಯಿಸಿದಳು; ಮತ್ತು ಆರ್.