The most-visited ಕನ್ನಡ Wikipedia articles, updated daily. Learn more...
ಮಾಧುರಿ ದೀಕ್ಷಿತ್ (ಪೂರ್ಣಹೆಸರು ಮಾಧುರಿ ಶಂಕರ್ ದೀಕ್ಷಿತ್ ಜನನ ೧೫ ಮೇ ೧೯೬೭) ಒಬ್ಬ ಬಾಲಿವುಡ್ ನಟಿ. ೧೯೮೦ರ ದಶಕದ ಕೊನೆಯಲ್ಲಿ ಮತ್ತು ೧೯೯೦ರ ದಶಕದಾದ್ಯಂತ ಅವರು ಹಿಂದಿ ಚಿತ್ರರಂಗದ ಅಗ್ರ ನಟಿಯರು ಮತ್ತು ನಿಪುಣ ನರ್ತಕಿಯರ ಪೈಕಿ ಒಬ್ಬರೆಂದು ಪರಿಗಣಿತರಾಗಿದ್ದರು. ಅವರು ಅನೇಕ ಯಶಸ್ವಿ ಚಲನಚಿತ್ರಗಳಲ್ಲಿ ಅಭಿನಯಿಸಿದರು ಮತ್ತು ಹಲವಾರು ಪ್ರದರ್ಶನಗಳು ಹಾಗೂ ವಿವಿಧ ಚಲನಚಿತ್ರಗಳಲ್ಲಿನ ನೃತ್ಯಗಳಿಗಾಗಿ ಗುರುತಿಸಲ್ಪಟ್ಟರು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ (ಉಭಯ ಸದನಿಕ) ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ಕೆಳಮನೆಯನ್ನು ಇದು ಒಳಗೊಂಡಿದೆ. ನವದೆಹಲಿಯಲ್ಲಿನ ಸಂಸದ್ ಭವನದಲ್ಲಿರುವ (ಇದನ್ನು ಸಾಮಾನ್ಯವಾಗಿ ಸಂಸದ್ ಮಾರ್ಗ ಎಂದು ಕರೆಯಲಾಗುತ್ತದೆ) ಪ್ರತ್ಯೇಕ ಶಾಸನಸಭೆಗಳಲ್ಲಿ ಎರಡೂ ಸದನಗಳು ಸಭೆ ಸೇರುತ್ತವೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ತಾಜ್ ಮಹಲ್ (pronounced /tɑdʒ məˈhɑl/; ಹಿಂದಿ: ताज महल ; ಪರ್ಷಿಯನ್/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್ಳ ನೆನಪಿಗಾಗಿ ಕಟ್ಟಿಸಿದನು. ಪರ್ಷಿಯನ್, ಭಾರತೀಯ ಮತ್ತು ಮುಸ್ಲಿಂ ವಾಸ್ತುಶೈಲಿಗಳ ಸಮ್ಮಿಶ್ರಣವಾದ ಮೊಘಲ್ ವಾಸ್ತುಶೈಲಿಗೆ ತಾಜ್ ಮಹಲ್ ("ತಾಜ್" ಎಂದೂ ಕರೆಯಲ್ಪಡುತ್ತದೆ) ಅತ್ಯುತ್ತಮ ಉದಾಹರಣೆಯೆಂದು ಪರಿಗಣಿಸಲಾಗಿದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಚಲನಚಿತ್ರ ನಿರ್ಮಾಣ ಪ್ರಕಾರವನ್ನು ಅವಲಂಬಿಸಿ ಚಲನಚಿತ್ರ ನಿರ್ಮಾಪಕರು ವಿವಿಧ ಪಾತ್ರಗಳನ್ನು ತುಂಬುತ್ತಾರೆ. ಉತ್ಪಾದನಾ ಕಂಪೆನಿ ಅಥವಾ ಸ್ವತಂತ್ರ, ನಿರ್ಮಾಪಕರು ಯೋಜಿಸಿದ ಮತ್ತು ಚಲನಚಿತ್ರ ನಿರ್ಮಾಣದ ವಿವಿಧ ಅಂಶಗಳನ್ನು ಸಂಘಟಿಸಲು, ಉದಾಹರಣೆಗೆ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡುವುದು, ಬರೆಯುವ ನಿರ್ದೇಶನ, ನಿರ್ದೇಶನ ಮತ್ತು ಸಂಪಾದನೆ, ಮತ್ತು ಹಣಕಾಸು ವ್ಯವಸ್ಥೆ ಮಾಡುವುದನ್ನು ಸಂಯೋಜಿಸುವುದು. "ಆವಿಷ್ಕಾರ ಹಂತ" ದ ಸಮಯದಲ್ಲಿ, ನಿರ್ಮಾಪಕರು ಭರವಸೆಯ ವಸ್ತುಗಳನ್ನು ಕಂಡುಕೊಳ್ಳಬೇಕು ಮತ್ತು ಅಂಗೀಕರಿಸಬೇಕು.
ಸಂಗೀತ ನಿರ್ಮಾಪಕ ಧ್ವನಿಮುದ್ರಣದ ಮೇಲ್ವಿಚಾರಣೆ, ನಿರ್ವಹಣೆ ಮತ್ತು ವಾದ್ಯವೃಂದ ಅಥವಾ ಸಂಗೀತಗಾರರ ಸಂಗೀತ ಉತ್ಪಾದನೆಯನ್ನು ನಿರ್ವಹಿಸುತ್ತಾರೆ. ನಿರ್ಮಾಪಕನ ಪಾತ್ರಗಳು ಬದಲಾಗುತ್ತವೆ. ಅವರು ಯೋಜನೆಗಾಗಿ ಸಂಗೀತದ ಕಲ್ಪನೆಗಳನ್ನು ಸಂಗ್ರಹಿಸಬಹುದು, ಕಲಾವಿದರ ಮೂಲಕ ಮೂಲ ಗೀತೆಗಳನ್ನು ಆಯ್ಕೆ ಮಾಡಲು ಸಹಕರಿಸುತ್ತಾರೆ, ಕಲಾವಿದರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರ ಹಾಡುಗಳು, ಸಾಹಿತ್ಯ ಅಥವಾ ವ್ಯವಸ್ಥೆಗಳನ್ನು ಸುಧಾರಿಸಲು ಅವರಿಗೆ ಸಹಾಯ ಮಾಡಬಹುದು.
ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ.
ಹಬಲ್ ದೂರದರ್ಶಕ ಭೂಮಿಯ ಸುತ್ತ ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ಒಂದು ದೂರದರ್ಶಕ. ಬಾಹ್ಯಾಕಾಶದಲ್ಲಿರುವುದರಿಂದ ಈ ದೂರದರ್ಶಕವು ಭೂಮಿಯ ವಾಯುಮಂಡಲದ ಹೊರಗಿರುವುದರಿಂದ ಬ್ರಹ್ಮಾಂಡದ ದೂರ ಪ್ರದೇಶಗಳಿಂದ ಬರುವ ದುರ್ಬಲ ಬೆಳಕನ್ನು ಕೂಡ ಪತ್ತೆ ಹಚ್ಚಬಲ್ಲದು. ೧೯೯೦ರಲ್ಲಿ ಅಂತರಿಕ್ಷದಲ್ಲಿ ಸ್ಥಾಪನೆಗೊಂಡ ನಂತರದಿಂದಲೂ ಇದು ಖಗೋಳವಿಜ್ಞಾನಕ್ಕೆ ಬ್ರಹ್ಮಾಂಡದ ಬಗ್ಗೆ ಅತ್ಯಮೂಲ್ಯ ಮಾಹಿತಿಗಳನ್ನು ನೀಡುತ್ತಾ ಬಂದಿದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ನೃತ್ಯವು ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಾಚೀನ ಕಲೆಯಾಗಿದೆ.ಭಾರತದಲ್ಲಿನ ನೃತ್ಯಗಳನ್ನು ಮುಖ್ಯವಾಗಿ ಶಾಸ್ತ್ರೀಯ ಹಾಗು ಜನಪದ ನೃತ್ಯಗಳೆಂದು ವಿಂಗಡಿಸಲಾಗಿದೆ.ಭಾರತದ ವಿವಿಧ ಭಾಗಗಳಲ್ಲಿ ಹುಟ್ಟಿಕೊಂಡಿರುವ ಸ್ಥಳೀಯ ಸಂಪ್ರದಾಯಗಳಿಗೆ ಹಾಗು ಅಲ್ಲಿನ ಸಂಸ್ಕೃತಿಗೆ ಅನುಗುಣವಾಗಿ ವಿವಿಧ ರೀತಿಯ ನೃತ್ಯಗಳು ಅಭಿವೃದ್ಧಿಗೊಂಡಿವೆ.ಭಾರತದಲ್ಲಿನ ಸಂಗೀತ ನಾಟ್ಯ ಅಕಾಡೆಮಿಯು ಎಂಟು ಸಾಂಪ್ರದಾಯಿಕ ನೃತ್ಯಗಳನ್ನು ಭಾರತೀಯ ಶಾಸ್ತ್ರೀಯ ನೃತ್ಯಗಳಾಗಿ ಗುರುತಿಸಿದೆ.ಶಾಸ್ತ್ರೀಯ ನೃತ್ಯಗಳು ಐತಿಹಾಸಿಕವಾಗಿ ಶಾಲೆ ಅಥವಾ ಗುರು-ಶಿಷ್ಯ ಪರಂಪರೆಯನ್ನು ಒಳಗೊಂಡಿವೆ ಮತ್ತು ಶಾಸ್ತ್ರೀಯ ಪಠ್ಯಗಳು, ದೈಹಿಕ ವ್ಯಾಯಾಮಗಳು ಮತ್ತು ನೃತ್ಯದ ಸಂಗ್ರಹವನ್ನು ಆಧಾರವಾಗಿರುವ ನಾಟಕ ಅಥವಾ ಸಂಯೋಜನೆ, ಗಾಯಕರು ವ್ಯವಸ್ಥಿತವಾಗಿ ಮಾಡಲು ವ್ಯಾಪಕ ತರಬೇತಿಯ ಅಗತ್ಯವಿರುತ್ತದೆ. ಜಾನಪದ ನೃತ್ಯವು ಕೆಲವು ಮೌಖಿಕ ಸಂಪ್ರದಾಯಗಳಲ್ಲಿ ಒಂದಾಗಿದೆ.ಜಾನಪದ ನೃತ್ಯಗಳಲ್ಲಿ ಹಲವಾರು ಶೈಲಿಗಳಿವೆ.ಅವು ಆಯಾ ರಾಜ್ಯ,ಜನಾಂಗ ಅಥವಾ ಭೌಗೋಳಿಕ ಪ್ರದೇಶಗಳ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗುತ್ತವೆ.ನಾಟ್ಯಶಾಸ್ತ್ರವನ್ನು ಬರೆದವರು ಭರತಮುನಿ.ಅವು ಒಂದು ತಲೆಮಾರಿನಿಂದ ಮುಂದಿನ ಪೀಳಿಗೆಗೆ ಬಾಯಿ ಮಾತು ಮತ್ತು ಪ್ರಾಸಂಗಿಕ ಜಂಟಿ ಅಭ್ಯಾಸದ ಮೂಲಕ ಸಾಗುತ್ತವೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, Transliteration: Bhārata Gaņarājya ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಮರಾಠಾ ಚಕ್ರವರ್ತಿ ಮತ್ತು ಛತ್ರಪತಿ ಶಿವಾಜಿಯ ಉತ್ತರಾಧಿಕಾರಿ ಛತ್ರಪತಿ ಸಂಭಾಜಿ ರಾಜೇ (ಛತ್ರಪತಿ ಸಂಭಾಜಿ ರಾಜೇ ಭೋಸ್ಲೆ) ಅಥವಾ ಶಂಭಬ್ಬಾರಿ (೧೬೫೭-೧೬೮೯). ಆ ಸಮಯದಲ್ಲಿ, ಅವರು ಮರಾಠರ ಶತ್ರುಗಳಾದ, ಮುಘಲ್ ಚಕ್ರವರ್ತಿ ಔರಂಗಜೇಬ್, ಬಿಜಾಪುರ ಸುಲ್ತಾನರ ಅತ್ಯಂತ ಶಕ್ತಿಶಾಲಿ ಆಳ್ವಿಕೆಯನ್ನು ಅಂತ್ಯಗೊಳಿಸಲು ಪ್ರಮುಖ ಪಾತ್ರ ವಹಿಸಿದರು. ಸಂಭಾಜಿ ಅವರು ಧೈರ್ಯಕ್ಕಾಗಿ ಪ್ರಸಿದ್ಧರಾಗಿದ್ದರು.
ಜನಪದ ನೃತ್ಯಗಳು: ಮನುಷ್ಯನ ಬದುಕನ್ನು ತೀವ್ರ ಸಂವೇದನೆಗೊಳಗಾಗಿಸುವ ಹುಟ್ಟು, ಸಾವು ಮತ್ತು ಇವುಗಳ ನಡುವೆ ಅವನಿಗೆ ಉಂಟಾಗುವ ನಾನಾ ತರಹದ ಅನುಭವಗಳಿಗೆ ಒಂದು ಜನಾಂಗ ಚಲನೆಯ ಮೂಲಕ ವ್ಯಕ್ತಪಡಿಸುವ ಒಂದು ಪ್ರತಿಕ್ರಿಯೆಯಾಗಿ ನೃತ್ಯ ಹುಟ್ಟಿತೆನ್ನಬಹುದು. ಮೂಲಭೂತವಾಗಿ ಅದು ಅವನ ಅತೀವ ಆನಂದದ, ತೃಪ್ತಿಯ ಸರಳ ಅಭಿವ್ಯಕ್ತಿ. ಜನಾಂಗದ ಆಚರಣೆ, ಸಂಪ್ರದಾಯ, ನಂಬಿಕೆ, ಮೂಢನಂಬಿಕೆ, ವೃತ್ತಿ ಮುಂತಾದವನ್ನೂ ಅದು ಪ್ರತಿ ಬಿಂಬಿಸುತ್ತದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ. ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನ ಈ ಬರಹದು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
thumb|ಗುಲ್ಜಾರಿ ಲಾಲ್ ನಂದಾ ಗುಲ್ಜಾರಿ ಲಾಲ್ ನಂದಾ (ಜುಲೈ ೪, ೧೮೯೮ - ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ೧೯೩೭ರಲ್ಲಿ ಮುಂಬಯಿ ಸರ್ಕಾರದ ವಿಧಾನಸಭೆಗೆ ಚುನಾಯಿತರಾಗಿದ್ದರು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಹಾಗೂ ಅಪಾಯಗಳಿಂದ ಭಾರತದ ರಕ್ಷಣೆ ಹಾಗೂ ತನ್ನ ಸರಹದ್ದಿನ ಒಳಗೆ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಇಬ್ಬರು ಅಧಿಕಾರಿಗಳಿಗೆ ಪಂಚತಾರಾ ದರ್ಜೆಯಾದ ಫೀಲ್ಡ್ ಮಾರ್ಷಲ್ ದರ್ಜೆಯನ್ನು ಪ್ರದಾನ ಮಾಡಲಾಗಿದೆ, ಇದೊಂದು ಶ್ರೇಷ್ಠ ಗೌರವದ ವಿಧ್ಯುಕ್ತ ಸ್ಥಾನವಾಗಿದೆ.
ಕೊರೊನಾ ವೈರಸ್ ಕಾಯಿಲೆ 2019 ( ಕೋವಿಡ್ ೧೯ ) ಎಂಬುದು ತೀವ್ರವಾದ ಉಸಿರಾಟದ ಸಮಸ್ಯೆಯಾದ ಸಿಂಡ್ರೋಮ್ ಕೊರೊನಾವೈರಸ್ ೨ (ಸಾರ್ಸ್-ಕೋವಿಡ್-೧೯) ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ . ಈ ರೋಗ ಮೊದಲು ೨೦೧೯ರಲ್ಲಿ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತು. ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ ಜ್ವರ, ಕೆಮ್ಮು,ವಾಸನೇ ಮತ್ತು ರುಚಿ ನಷ್ಟ ಉಸಿರಾಟದ ತೊಂದರೆ.