The most-visited ಕನ್ನಡ Wikipedia articles, updated daily. Learn more...
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ (1970 ರ ಜನವರಿ 29 ರಂದು ರಾಜಸ್ಥಾನದ ಜೈಸಲ್ಮಾರ್ ನಲ್ಲಿ ಜನಿಸಿದರು.) ಅವರು ಅಥೆನ್ಸ್ ನಲ್ಲಿ ನಡೆದ 2004 ರ ಬೇಸಿಗೆಯ ಒಲಿಂಪಿಕ್ಸ್ ನಲ್ಲಿ, ಪುರುಷರ ಡಬಲ್ ಟ್ರ್ಯಾಪ್ ನಲ್ಲಿ ಬೆಳ್ಳಿಯ ಪದಕ ಗೆದ್ದ ಭಾರತದ ಶೂಟರ್(ಗುರಿಕಾರ) ಆಗಿದ್ದಾರೆ. ಇವರು ವೈಯಕ್ತಿಯ ಪಂದ್ಯದಲ್ಲಿ ನಾರ್ಮನ್ ಪ್ರಿಚರ್ಡ್ರವರ ನಂತರ ಬೆಳ್ಳಿಯ ಪದಕ ಗಳಿಸಿದ ಮೊದಲನೆಯ ಭಾರತೀಯರಾಗಿದ್ದಾರೆ. ನಾರ್ಮನ್ ರವರು 1900 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡಿದ್ದರು.
ಭಾರತದ ಬುಡಕಟ್ಟುಗಳ ಜನಸಂಖ್ಯೆಯಲ್ಲಿ ಭಿಲ್ಲರು ಎರಡನೆಯ ಸ್ಥಾನವನ್ನು ಹೊಂದಿದ್ದರೆ. ಭಿಲ್ಲ ಬುಡಕಟ್ಟು ಜನರನ್ನು ಭಿಲಾಲ (Bhilala) ಹಾಗೂ ಭಿಲ್ ಗರಾಸಿಯಾ (Bhil Garasia) ಎಂದು ಕರೆಯುವರು. ೨೦೦೧ರ ಜನಗಣತಿಯ ಪ್ರಕಾರ ಗುಜರಾತ್ ನಲ್ಲಿ_೩,೪೪೧,೯೪೫ಮಧ್ಯ ಪ್ರದೇಶ ೪,೬೧೯,೦೬೮ಮಹಾರಾಷ್ಟ್ರ_೧,೮೧೮,೭೯೨ರಾಜಾಸ್ಥಾನ_೨,೮೦೫,೯೪೮ಕರ್ನಾಟಕ_೧,೮೬೭ ಇಷ್ಟು ಭಿಲ್ಲರ ಜನಸಂಖ್ಯೆ ಕಂಡು ಬಂಧಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜನವರಿ ೩೦,೧೯೪೮ - ಭಾರತದೇಶದ ರಾಷ್ತ್ರಪಿತರೆನಿಸಿಕೊಂಡ ಮಹಾತ್ಮ ಗಾಂಧಿಯವರು ಮರಣ ಹೊಂದಿದ ದಿನ .ಈ ದಿನವನ್ನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾಂತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮಾ ಗಾಂಧಿಯವರ ಮರಣ ದಿನವನ್ನು ಭಾರತದಾದ್ಯಂತ ಈ ಹುತಾತ್ಮರ ದಿನ ಎಂದು ಆಚರಿಸಲಾಗುತ್ತದೆ. ತಮ್ಮ ಬದುಕೇ ತಮ್ಮ ಸಂದೇಶ ಎಂದು ಬದುಕಿನ ಪ್ರತಿ ಗಳಿಗೆಯನ್ನೂ ಮೌಲ್ಯದ ಜೊತೆಯಲ್ಲೇ ಬದುಕಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಪ್ರಯೋಗಕ್ಕೊಡ್ಡಿಕೊಂಡ ರಾಷ್ಟ್ರಪಿತ, ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದ್ದು ಗುಜರಾತಿನ ಪೋರಬಂದರಿನಲ್ಲಿ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ರಾಮಾಯಣದಲ್ಲಿ ಬರುವ ರಾಕ್ಷಸನ ಪಾತ್ರ. ರಾಮ,ಲಕ್ಷ್ಮಣರು ವಿಶ್ವಾಮಿತ್ರರಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗ ಸುಬಾಹು ಮತ್ತು ಮಾರೀಚನೆಂಬ ರಾಕ್ಷಸರು ವಿಶ್ವಾಮಿತ್ರರ ಹೋಮ-ಯಾಗಾದಿಗಳಲ್ಲಿ ವಿಘ್ನ ತರುತ್ತಿರುತ್ತಾರೆ. ಆಗ ವಿಶ್ವಾಮಿತ್ರರ ಅಪ್ಪಣೆಯ ಮೇರೆಗೆ ರಾಮ,ಲಕ್ಷ್ಮಣರು ಈ ರಾಕ್ಷಸರ ಮೇಲೆ ದಾಳಿ ಮಾಡಿದಾಗ ಸುಬಾಹು ಮೃತನಾಗುತ್ತಾನೆ ಮತ್ತು ಮಾರೀಚ ಅನಾಮಧೇಯ ದ್ವೀಪವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.ಮುಂದೆ ರಾಮ-ಲಕ್ಷ್ಮಣ-ಸೀತೆಯರು ಅರಣ್ಯದಲ್ಲಿ ವನವಾಸದಲ್ಲಿದ್ದಾಗ ಇದೇ ಮಾರೀಚ ರಾವಣನಿಗೆ ಸಹಾಯಮಾಡಲೆಂದು ಬಂಗಾರ ವರ್ಣದ ಜಿಂಕೆಯಾಗಿ ಸೀತೆಯ ಕುಟೀರದ ಮುಂದೆ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಬುಡಕಟ್ಟು ಎಂದರೆ ನಿರ್ದಿಷ್ಟ ಪ್ರದೇಶದಲ್ಲಿ ನೆಲಸಿದ್ದು ನಿರ್ದಿಷ್ಟ ಭಾಷೆ ಮಾತಾಡುವ ಒಬ್ಬ ಮೂಲ ಪುರುಷ, ಒಂದು ಅಧಿದೈವ, ಒಬ್ಬ ಸರ್ವಾನುಮತದ ಮುಖ್ಯಸ್ಥನನ್ನು ಹೊಂದಿರುವ, ಏಕಪ್ರಕಾರವಾದ ನೈಸರ್ಗಿಕ ಕಾಯಿದೆ ಕಟ್ಟಳೆ ಅನುಸರಿಸುವ ಮತ್ತು ಸಮಾನ ಸಂಸ್ಕೃತಿ ಹಾಗೂ ಸುಸಂಘಟಿತ ಸಾಮಾಜಿಕ ವ್ಯವಸ್ಥೆಯನ್ನು ರೂಢಿಸಿಕೊಂಡಿರುವ ಸಾಮಾಜಿಕ ಗುಂಪು. ಅಂದರೆ ಒಂದು ಸಣ್ಣ, ಸ್ವತಂತ್ರ ಮತ್ತು ಅನ್ಯೋನ್ಯವಾಗಿ ಒಂದುಗೂಡುವ ಜನರ ಸಮೂಹ; ರಕ್ತಸಂಬಂಧದ ಎಳೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಅಂಶಗಳಿಂದ ಬಂಧಿತವಾಗಿರುತ್ತದೆ. ಅದರ ರಾಜಕೀಯ ವ್ಯವಸ್ಥೆ ವ್ಯಾಪಕವಾದ ತಳಹದಿಯ ಮೇಲೆ ಪುರಾತನ ಪ್ರಜಾಪ್ರಭುತ್ವ ಕ್ರಮವನ್ನಾಧರಿಸಿದೆ (ಕ್ರೋಬರ್).
ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ ೧೯೪೫ರ ಹೇಳಿಕೆಯ ಪ್ರಕಾರ "ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ - ಕೇವಲ ರೋಗ, ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ"ಆರೋಗ್ಯವೇ ಭಾಗ್ಯ.. ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇದೆ.
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
ಮಾನವ ಯಾವುದನ್ನು ಪವಿತ್ರ ಭಾವನೆಯಿಂದ ನೋಡುವನೋ ಅದರೊಡನೆ ಇರಿಸಿಕೊಳ್ಳುವ ಸಂಬಂಧವೇ ಧರ್ಮವೆಂಬ (ರಿಲಿಜನ್) ಶಬ್ದದ ವಿಶಾಲಾರ್ಥ. ಪವಿತ್ರವೆನಿಸತಕ್ಕುದು ಅತಿಮಾನುಷವೇ ಇರಬೇಕೆಂಬ ನಿಯಮವಿಲ್ಲ; ಮಾನವಾಕೃತಿಯಲ್ಲಿಯೇ ಇರಬೇಕೆಂದೂ ಇಲ್ಲ; ವೈಯಕ್ತಿಕ ಭಾವನೆ ಮಾತ್ರವೆಂದೂ ಅದರರ್ಥವಲ್ಲ. ದೇವರು ಎಂಬ ಶಬ್ದವನ್ನು ವೈಯಕ್ತಿಕ ಇಲ್ಲವೆ ಅತಿಮಾನುಷವೆಂಬ ಅಭಿಪ್ರಾಯದಲ್ಲಿ ಬಳಸುವುದಾದರೆ, ಅಂಥ ದೇವತಾಸ್ವರೂಪಗಳೊಡನೆ ಮಾನವನ ಸಂಬಂಧ ಧರ್ಮವೆನಿಸುವಂತೆ, ಅಂಥವುಗಳಲ್ಲದ ಪವಿತ್ರ ವಸ್ತುಗಳೊಂದಿಗೆ ಅವನ ಸಂಬಂಧಕ್ಕೂ ಅನ್ವಯಿಸುವಷ್ಟು ಅದು ವಿಶಾಲವಾಗಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು.
ಹಿಂದೂ ಧರ್ಮದಲ್ಲಿ, ಯಜ್ಞ ಅಥವಾ ಯಾಗವು ವೈದಿಕ ಕಾಲದಿಂದ ಹುಟ್ಟಿಕೊಂಡಿರುವ ವೈದಿಕ ಮಂತ್ರಗಳ (ಮತ್ತು ಅರ್ಚನೆ, ಪ್ರಾರ್ಥನೆ, ಪ್ರಶಂಸೆ, ಅರ್ಪಣೆ ಮತ್ತು ನೈವೇದ್ಯ, ಬಲಿದಾನ) ಪಠಣವು ಜೊತೆಗೂಡಿರುವ ಅರ್ಪಣೆಗಳ ಒಂದು ಧರ್ಮಾಚರಣೆ. ಯಜ್ಞವು ಅಗ್ನಿಯಲ್ಲಿ ಹವನ ಸಾಮಗ್ರಿಯನ್ನು ಅರ್ಪಿಸುವ ಮತ್ತು ಶುದ್ಧೀಕರಿಸುವ ಒಂದು ಪುರಾತನ ಕ್ರಿಯಾವಿಧಿ. ಯಜ್ಞ ಶಬ್ದದ ಭವ್ಯ ಅರ್ಥವು ಸಂಸ್ಕೃತ ಕ್ರಿಯಾಪದ ಯಜ್ ಇಂದ ವ್ಯುತ್ಪನ್ನವಾಗಿದೆ, ಮತ್ತು ಇದು ಮೂರು ಅರ್ಥಗಳನ್ನು ಹೊಂದಿದೆ - ದೇವಪೂಜನ, ಸೌಗತೀಕರಣ ಹಾಗೂ ದಾನ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗಪ್ರಸಿದ್ದರಾಗಿದ್ದರು, ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಜೈನ ಧರ್ಮದಂತೆ ಆಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದ್ದರು.
ಪ್ರಾಚೀನ ಕನ್ನಡ ಕವಿಗಳು ಉಭಾಯಭಾಷಾ ವಿಶಾರದರೂ, ಸಂಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿಂದ ಅವರು ತಮ್ಮ ಕನ್ನಡ ಕಾವ್ಯಗಳಲ್ಲಿ ಸಂಸ್ಕ್ರತದ ವಸ್ತು, ಭಾಷಾ ಶೈಲಿಯ ಜೊತೆಗೆ ಸಂಸ್ಕೃತ ಛಂದಸ್ಸನ್ನು ಬಳಸಿದರು. ಚಂಪೂ ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿಂತ ಪದ್ಯದ ಪ್ರಮಾಣ ಅಧಿಕವಾಗಿದ್ದು, ಪದ್ಯದಲ್ಲಿ ಕಂದ ಮತ್ತು ವೃತ್ತಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಂಸ್ಕ್ರತದ ಲೌಕಿಕ ಛಂದಸ್ಸಿನಲ್ಲಿ ಒಂದು ಅಕ್ಷರದ ಉಕ್ತೆಯಿಂದ ಇಡಿದು ಇಪ್ಪಾತ್ತಾರು ಅಕ್ಷರಗಳ ಉತ್ಪತ್ತಿಯವರೆಗಿನ ಛಂದಸ್ಸಿನದಿಂದ ಹೊರಡುವ ಸಮವೃತ್ತಗಳು ನೂರಾರಿವೆ.
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಗೋಲ್ ಗುಮ್ಮಟ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ , ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು.