The most-visited ಕನ್ನಡ Wikipedia articles, updated daily. Learn more...
ಬಿಗ್ ಬಾಸ್ ಕನ್ನಡ (ಬಿಬಿಕೆ) ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ನ ಕನ್ನಡ ಆವೃತ್ತಿಯಾಗಿದೆ ಇದು ಕಲರ್ಸ್ ಕನ್ನಡ ಚಾನೆಲ್ ಮೂಲಕ ಭಾರತದಲ್ಲಿ ಪ್ರಸಾರವಾಗುತ್ತದೆ. ಬಿಗ್ ಬ್ರದರ್ ನ ಜಾಗತಿಕ ಸ್ವರೂಪವನ್ನು ಹೊಂದಿರುವ ಎಂಡೆಮೊಲ್ ಶೈನ್ ಇಂಡಿಯಾ ಈ ಕಾರ್ಯಕ್ರಮವನ್ನು ನಿರ್ಮಿಸಿದೆ. ಈಟಿವಿ ಕನ್ನಡದಲ್ಲಿ (ಈಗ ಕಲರ್ಸ್ ಕನ್ನಡ ) ಮೊದಲ ಸೀಸನ್ ರಿಯಾಲಿಟಿ ಶೋ ಅನ್ನು 2013 ರಲ್ಲಿ ಹೋಸ್ಟ್ ಮಾಡಲು ಕಿಚ್ಚ ಸುದೀಪ ಅವರನ್ನು ನೇಮಿಸಲಾಯಿತು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಆಸ್ಟ್ರೇಲಿಯಾ ಕ್ರಿಕೆಟ್ ತ೦ಡ ಆಸ್ಟ್ರೇಲಿಯಾ ದೇಶವನ್ನು ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ಇದು ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಹಳೆಯ ತಂಡಗಳಲ್ಲಿ ಒಂದು.ಆಸ್ಟ್ರೇಲಿಯಾ ತ೦ಡ ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಮಾರ್ಚ್ ೧೫, ೧೮೭೭ ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಿತು. ಈಗಿನ ಆಸ್ಟ್ರೇಲಿಯಾ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ರಿಕಿ ಪಾಂಟಿಂಗ್, ಮ್ಯಾಥ್ಯು ಹೇಡನ್, ಬ್ರೆಟ್ ಲೀ, ಮೈಕಲ್ ಹಸ್ಸಿ, ಶೇನ್ ವ್ಯಾಟ್ಸನ್ ಮತ್ತಿತರರು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಚಂದ್ರಯಾನ-೩ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯ ಯೋಜಿತ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದೆ. ಚಂದ್ರಯಾನ-೨ ರಲ್ಲಿ, ಸಾಫ್ಟ್ ಲ್ಯಾಂಡಿಂಗ್ ಮಾರ್ಗದರ್ಶನ ಸಾಫ್ಟ್ವೇರ್ನಲ್ಲಿ ಉಂಟಾದ ಕೊನೆಯ ನಿಮಿಷದ ದೋಷವು ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನದ ವಿಫಲತೆಗೆ ಕಾರಣವಾಯಿತು, ಸಾಫ್ಟ್ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಮತ್ತೊಂದು ಚಂದ್ರನ ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಯಿತು. ಚಂದ್ರಯಾನ-೩ ಚಂದ್ರಯಾನ-೨ರ ಮಿಷನ್ ಪುನರಾವರ್ತನೆ ಆದರೆ ಚಂದ್ರಯಾನ-೨ರಂತೆಯೇ ಲ್ಯಾಂಡರ್ ಮತ್ತು ರೋವರ್ ಅನ್ನು ಮಾತ್ರ ಒಳಗೊಂಡಿರುತ್ತದೆ.
ಐಸಿಸಿ ಕ್ರಿಕೆಟ್ ವಿಶ್ವ ಕಪ್ ಪುರುಷರ ಅತಿ ಪ್ರತಿಷ್ಠಿತ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್ ಪಂದ್ಯಾವಳಿಯಾಗಿದೆ. ಈ ಕ್ರೀಡೆಯ ನಿರ್ವಹಣಾ ಮಂಡಳಿಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಪರಿಷತ್ (ಐಸಿಸಿ) ಈ ಕ್ರೀಡೆಯನ್ನು ಆಯೋಜಿಸುತ್ತದೆ. ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯಗಳು ನಡೆದ ನಂತರ, ಅರ್ಹತೆ ಗಳಿಸಿದ ತಂಡಗಳು, ನಾಲ್ಕು ವರ್ಷಗಳಲ್ಲೊಮ್ಮೆ ನಡೆಯುವ ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತವೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದುಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sowthe seeds to get ripen fruits.) ಹಾವೂ ಸಾಯ್ಬಾರದು, ಕೋಲೂಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English:from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದ್ದಾಳೆ.
ಇಸ್ರೇಲ್ (יִשְׂרָאֵל, ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל, ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل, ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ.
ಮೈಸೂರು ದಸರಾವು ಭಾರತದಲ್ಲಿ ಕರ್ನಾಟಕ ರಾಜ್ಯದ ನಾಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನ ವಿಜಯದಶಮಿ. ಹಬ್ಬವನ್ನು ಹಿಂದೂ ಕ್ಯಾಲೆಂಡರ್ ತಿಂಗಳ ಅಶ್ವಿನ್ನಲ್ಲಿ ಹತ್ತನೇ ದಿನದಂದು ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನ ಗ್ರೆಗೋರಿಯನ್ ತಿಂಗಳುಗಳಲ್ಲಿ ಬರುತ್ತದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಚಿತ್ರ:ಸಾಂಪ್ರದಾಯಿಕ ವಿವಾಹದ ಉಡುಗೆ ಕೊಡಗು ಜಿಲ್ಲೆ (ಕೊಡಗನ್ನು ಕೊಡವ ನಾಡ್ ಎಂದು ಕರೆಯಲಾಗುತ್ತದೆ), ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ. ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ ಅಲ್ಲೆ ಆ ಕಡೆ ನೋಡಲಾ ಅಲ್ಲೆ ಕೊಡವರ ನಾಡಲಾ ಅಲ್ಲೆ ಕೊಡವರ ಬೀಡಲಾ ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. .
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ.
ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯಾಗಿದ್ದು ಇದ್ದನ್ನು ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುತ್ತಾವರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಭತ್ತದ ಪದವು ಸಸ್ಯಕ್ಕೂ ಹಾಗೂ ಸಸ್ಯದ ಕಾಳಿಗೂ ಅನ್ವಯಿಸುತ್ತದೆ. ಭತ್ತಕ್ಕೆ ಕನ್ನಡದಲ್ಲಿ ನೆಲ್ಲು ಎಂದು ಸಹ ಇಂಗ್ಲೀಶ್ನಲ್ಲಿ ಪ್ಯಾಡಿ ಬಳಕೆಯಲ್ಲಿದ್ದಾಗ್ಯೂ ರೈಸ್ ಎನ್ನುವ ಪದವನ್ನು ಭತ್ತ (ಕೆಲವೊಮ್ಮೆ ಅನ್ಮಿಲ್ಡ್ ರೈಸ್), ಅಕ್ಕಿ ಹಾಗೂ ಅನ್ನಕ್ಕೂ ಬಳಸಲಾಗುತ್ತದೆ. ಏಷಿಯಾದ ಭತ್ತದ ವೈಜ್ಞಾನಿಕ ಹೆಸರು ಒರಿಜ ಸಟಿವ ಮತ್ತು ಆಫ್ರಿಕಾದ ಬತ್ತದ ವೈಜ್ಞಾನಿಕ ಹೆಸರು ಒರಿಜ ಗ್ಲಾಬಿರ್ರಿಮ.
ಪ್ಯಾಲೇಸ್ಟೈನ್ (ಫಿಲಾಸ್ಟಿನ್), ಅಧಿಕೃತವಾಗಿ ಪ್ಯಾಲೆಸ್ಟೈನ್ ರಾಜ್ಯ (ಡವ್ಲಾಟ್ ಫಿಲಾಸ್ಟಿನ್), ಮಧ್ಯಪ್ರಾಚ್ಯದಲ್ಲಿ ಡಿ ಜ್ಯೂರ್ ಸಾರ್ವಭೌಮ ರಾಜ್ಯ ವೆಸ್ಟ್ ಬ್ಯಾಂಕ್ (ಇಸ್ರೇಲ್ ಮತ್ತು ಜೋರ್ಡಾನ್ ಗಡಿಯಲ್ಲಿ) ಮತ್ತು ಗಾಜಾ ಪಟ್ಟಿ (ಇಸ್ರೇಲ್ ಮತ್ತು ಈಜಿಪ್ಟ್ ಗಡಿಯಲ್ಲಿ) ಝೆರೂಸಲೇಮಿನೊಂದಿಗೆ ಗೊತ್ತುಪಡಿಸಿದ ರಾಜಧಾನಿಯಾಗಿ,ಅದರ ಆಡಳಿತಾತ್ಮಕ ಕೇಂದ್ರವು ಪ್ರಸ್ತುತ ರಾಮಾಲ್ಲಾದಲ್ಲಿದೆ.ಪ್ಯಾಲೆಸ್ಟೈನ್ 2016 ರ ವೇಳೆಗೆ 4,816,503 ಜನಸಂಖ್ಯೆಯನ್ನು ಹೊಂದಿದೆ, ಇದು ವಿಶ್ವದ 123 ನೇ ಸ್ಥಾನವನ್ನು ಪಡೆದಿದೆ. ವಿಶ್ವ ಸಮರ II ರ ನಂತರ, 1947 ರಲ್ಲಿ, ವಿಶ್ವಸಂಸ್ಥೆಯು ಕಡ್ಡಾಯವಾಗಿ ಪ್ಯಾಲೆಸ್ಟೈನ್ಗಾಗಿ ಒಂದು ವಿಭಜನಾ ಯೋಜನೆಯನ್ನು ಅಳವಡಿಸಿಕೊಂಡಿದೆ ಸ್ವತಂತ್ರ ಅರಬ್ ಮತ್ತು ಯಹೂದಿ ರಾಜ್ಯಗಳ ಸೃಷ್ಟಿಗೆ ಶಿಫಾರಸು ಮಾಡಿತು ಮತ್ತು ಅಂತರಾಷ್ಟ್ರೀಯವಾದ ಜೆರುಸಲೆಮ್. ನೆರೆಹೊರೆಯ ಅರಬ್ ಸೈನ್ಯಗಳು ಹಿಂದಿನ ಬ್ರಿಟಿಷ್ ಜನಾದೇಶವನ್ನು ಆಕ್ರಮಿಸಿಕೊಂಡವು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ಆಂಗ್ಲ: ISRO - Indian Space Research Organisation) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ.
ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ —ಉದಾಹರಣೆಗೆ ಮ್ಯಾಸಚೂಸಿಟ್ಸ್ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ —ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.
ಅಲ್ಲಾಹು ಯೆಹೋವ(Allahu Jehovah) - ಸರ್ವಶಕ್ತ ಪ್ರಭು ಮತ್ತು ಬ್ರಹ್ಮಾಂಡದ ಸೃಷ್ಟಿಕರ್ತ - (ಸರಹುನಾಥ್) - (ಸಾರಾಹು ನಾಜರಾಝಾನ್), (ಅರೇಬಿಕ್ - الله يهوه, ಸ್ಪ್ಯಾನಿಷ್ - ಅಲ್ಲಾಹು ಯೆಹೋವ;) ದೇವರನ್ನು ಇಸ್ಲಾಂನಲ್ಲಿ ಅಲ್ಲಾ ಮತ್ತು ಇಸ್ರೇಲ್ನಲ್ಲಿ ಯೆಹೋವನು ಎಂದು ಕರೆಯಲಾಗುತ್ತದೆ. ಅದರ ಹೊರತಾಗಿ ಸರ್ವಶಕ್ತ ದೇವರನ್ನು ದೇವರ ಕಣ ಎಂದು ಗುರುತಿಸಲಾಗಿದೆ. ಆದರೆ ಅವರು ದೇವರ ಕಣವಲ್ಲ; ಬದಲಾಗಿ ಅದು ಬ್ರಹ್ಮಾಂಡದ ಶಕ್ತಿಯನ್ನು ಅರ್ಥೈಸುತ್ತದ.
ಅರಿಸ್ಟಾಟಲ್ (Greek: Ἀριστοτέλης , ಅರಿಸ್ಟಾಟೆಲೆಸ್ ) (384 BC – 322 BC) ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು.