The most-visited ಕನ್ನಡ Wikipedia articles, updated daily. Learn more...
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಗೂಳಿಯು ಬೋಸ್ ಟಾರಸ್ ಪ್ರಜಾತಿಯ ಒಂದು ಅಖಂಡ (ಬೀಜ ಒಡೆಯದ) ವಯಸ್ಕ ಗಂಡು. ಇದೇ ಪ್ರಜಾತಿಯ ಹೆಣ್ಣಾದ ಹಸುವಿಗಿಂತ ಹೆಚ್ಚು ಮಾಂಸಲ ಮತ್ತು ಆಕ್ರಮಣಕಾರಿಯಾದ ಗೂಳಿಯು ದೀರ್ಘಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಒಂದು ಪ್ರಮುಖ ಸಂಕೇತವಾಗಿದೆ, ಮತ್ತು ಗೋಮಾಂಸ ಹಾಗು ಹೈನುಗಾರಿಕೆ ಮತ್ತು ಇತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ. ದನಗಳಲ್ಲಿ ಬೀಜದ ಹೋರಿಗೆ ಈ ಹೆಸರುಂಟು (ಬುಲ್).
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕ್ಯಾನ್ಸರ್ (/ˈkænsə(r)/ ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡೆ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷಿಣಿಸುತಿದ್ದೆ , ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅಂತರಜಾಲ (ಆಂಗ್ಲ: Internet ಇಂಟರ್ನೆಟ್) ಎನ್ನುವುದು ಕಂಪ್ಯೂಟರ್ ನೆಟ್ವರ್ಕ್ಗಳ (ಜಾಲಬಂಧಗಳ) ಒಂದು ನೆಟ್ವರ್ಕ್ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್ವರ್ಕ್ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ. ಇಂಟರ್ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು.
ಬ್ಯಾಸ್ಕೆಟ್ಬಾಲ್ ಒಂದು ಸಾಂಘಿಕ ಆಟವಾಗಿದ್ದು, ೫ ಆಟಗಾರರ ಎರಡು ತಂಡಗಳು ಸಂಘಟಿತ ನಿಯಮದಡಿ ೧೦ ಅಡಿ (೩.೦೪೮ ಮೀ) ಎತ್ತರದ ಹೂಪ್ನಲ್ಲಿ (ಗೋಲ್ ) ಚೆಂಡನ್ನು ಹಾಕುವ ಮೂಲಕ ಹೆಚ್ಚು ಅಂಕಗಳಿಸಲು ಪರಸ್ಪರ ಸೆಣಸಾಡುತ್ತವೆ. ಬ್ಯಾಸ್ಕೆಟ್ಬಾಲ್ ಒಂದು ಸುಪ್ರಸಿದ್ಧ ಹಾಗೂ ಪ್ರಪಂಚದಾದ್ಯಂತ ವ್ಯಾಪಕವಾಗಿ ವೀಕ್ಷಿಸುವ ಆಟ.ಚೆಂಡನ್ನು ಮೇಲಿಂದ ಬ್ಯಾಸ್ಕೆಟ್ನೊಳಗೆ ಎಸೆಯುವುದು, ಗೋಲು ಉಂಗುರಕ್ಕೆ ಚೆಂಡನ್ನು ಹಾಕುವುದು ಮತ್ತು ಹೊಡೆಯುವುದು, ಅಥವಾ ಯಾವುದೇ ದೂರದಿಂದ ಚೆಂಡನ್ನು ಬ್ಯಾಸ್ಕೆಟ್ನೊಳಗೆ ಹಾಕುವುದು ಇತ್ಯಾದಿ ಇತರಾವುದೇ ಚಮತ್ಕಾರಗಳ ಮೂಲಕ ಅಂಕಗಳನ್ನು ಗಳಿಸಬಹುದು. ಆಟದ ಕೊನೆಯಲ್ಲಿ ಹೆಚ್ಚು ಅಂಕಗಳಿಸುವ ತಂಡ ಜಯಶೀಲವಾಗುತ್ತದೆ, ಆದರೆ ಉಭಯ ತಂಡಗಳು ಸಮಾನ ಅಂಕಗಳನ್ನು ಪಡೆದಾಗ ಹೆಚ್ಚುವರಿ ಸಮಯವನ್ನು (ಅಧಿಕಾವಧಿ) ನೀಡಲಾಗುತ್ತದೆ.
೧೨ ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು ತಾರತಮ್ಯ , ಅಸ್ಪ್ರುಶ್ಯತೆ , ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು.
ಬ್ಯಾಡ್ಮಿಂಟನ್ ರಾಕೆಟ್ಗಳಿಂದ ಆಡುವಂತಹ ಕ್ರೀಡೆಯಾಗಿರುತ್ತದೆ. ಈ ಆಟವನ್ನು ಒಬ್ಬೊಬ್ಬರಾಗಿ ಎದುರುದಾರರಾಗಿ ಅಥವಾ ಇಬ್ಬಿಬ್ಬರು ಜೊತೆಯಾಗಿ ಎದುರಾಗಿ ಆಟವಾಡಲಾಗುತ್ತದೆ.ಆಟಗಾರರು ಬಲೆಯಿಂದ ಇಬ್ಬಾಗಿಸಿದ ಆಯತಾಕಾರದ ಅಂಕಣದಲ್ಲಿ ಆಟವಾಡುತ್ತಾರೆ. ಆಟಗಾರರು ತಮ್ಮ ರಾಕೆಟ್ನಿಂದಶಟಲ್ ಕಾಕ್ನ್ನು ಬಲೆಯ ಮೇಲ್ಬಾಗದಿಂದ ಎದುರು ಆಟಗಾರರ ಅಂಕಣಕ್ಕೆ ಹೋಗುವಂತೆ ಹೊಡೆಯುವುದರಿಂದ ಅಂಕಗಳನ್ನು ಗಳಿಸುತ್ತಾರೆ.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಮರಾಠಾ ರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಯುದ್ಧನೌಕೆ ಯು ಯುದ್ಧಕ್ಕಾಗಿ ನಿರ್ಮಿಸಿದ ಮತ್ತು ಪ್ರಾಥಮಿಕವಾಗಿ ಉದ್ದೇಶಿಸಿದ ಒಂದು ಹಡುಗು ಆಗಿದೆ. ಯುದ್ಧನೌಕೆಗಳನ್ನು ಸಾಮಾನ್ಯವಾಗಿ ವ್ಯಾಪಾರದ ಹಡಗುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ನಿರ್ಮಿಸಲಾಗುತ್ತದೆ. ಶಸ್ತ್ರಾಸ್ತ್ರಸಜ್ಜಿತವಾಗಿರುವುದು ಮಾತ್ರವಲ್ಲದೆ ಯುದ್ಧನೌಕೆಗಳನ್ನು ಹಾನಿಯುಂಟಾದರೆ ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತದೆ ಮತ್ತು ಅವು ಸಾಮಾನ್ಯವಾಗಿ ವ್ಯಾಪಾರದ ಹಡಗುಗಳಿಗಿಂತ ವೇಗವಾಗಿರುತ್ತವೆ ಮತ್ತು ಹೆಚ್ಚು ಕುಶಲ ತಂತ್ರದಿಂದ ನಿರ್ವಹಿಸಬಹುದಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ದಂಡಯಾತ್ರೆ ಎಂದರೆ ಯುದ್ಧದಲ್ಲಿ ಒಂದು ನಿರ್ದಿಷ್ಟ ಘಟ್ಟವಾಗಿ ಕೈಗೊಂಡ ಸೇನಾಕಾರ್ಯಾಚರಣೆ ಯಾ ಪರಸ್ಪರ ಸಂಬಂಧಿತ ಕಾರ್ಯಾಚರಣೆಗಳು ಅಥವಾ ಒಟ್ಟಾರೆ ಯುದ್ಧನೀತಿಯ (ಸ್ಟ್ರ್ಯಾಟಜಿ) ಕಾರ್ಯಾಚರಣೆ (ಕೇಂಪೇನ್). ವಿಶೇಷ ಕಾರಣಕ್ಕಾಗಿ ನಡೆಸುವ ಸೇನಾ ಮುನ್ನಡೆಗೂ ಈ ಹೆಸರುಂಟು. ದೀರ್ಘಾವಧಿಯ ಯುದ್ಧದಲ್ಲಿ ಒಂದು ಮಹಾನಾಯಕತ್ವದ ಅಧೀನವಾಗಿ ಹಲವಾರು ಉಪನಾಯಕತ್ವಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕದನಗಳಲ್ಲಿ ಉದ್ಯುಕ್ತವಾಗಿರಬಹುದು.
ಜಲಾಂತರ್ಗಾಮಿ - ನೀರಿನ ಮೇಲೂ ನೀರಿನೊಳಗೂ ಓಡಾಡುವ ಯುದ್ಧ ಹಡಗು(ಸಬ್ಮರೀನ್). ಇದು ನೀರಿನೊಳಗೆ ದೀರ್ಘಕಾಲ ನಿಲ್ಲಬಲ್ಲದು; ಆಳ ವಿಪರೀತವಾಗಿಲ್ಲದಿದ್ದರೆ ಸಮುದ್ರತಳದಲ್ಲಿ ನಿಲ್ಲಬಲ್ಲದು. ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಜರ್ಮನರ-ದೋಣಿಗಳೆಂಬ ಜಲಾಂತರ್ಗಾಮಿಗಳೂ ಮಿತ್ರಪಕ್ಷದ ಜಲಾಂತರ್ಗಾಮಿಗಳೂ ಅಸಂಖ್ಯಾತ ಯುದ್ಧನೌಕೆಗಳನ್ನೂ ಪ್ರಯಾಣಿಕರ ಮತ್ತು ದವಸ, ಧಾನ್ಯ ವ್ಯಾಪಾರಿಗಳ ಹಡಗುಗಳನ್ನೂ ದಾಳಿಮಾಡಿ ಮುಳುಗಿಸಿದವು.
ಕ್ರಿಸ್ಟಿಯಾನೋ ರೊನಾಲ್ಡೊ ಡಾಸ್ಸ್ಯಾಂಟೋಸ್ ಅವೇರೊ (ಜನನ ೦೫ ಫೆಬ್ರವರಿ ೧೯೮೫) ಒಬ್ಬ ಫ್ರಸಿದ್ದ ಪೋರ್ಚುಗೀಸ್ ಫುಟ್ಬಾಲ್ ಆಟಗಾರ. ಸ್ಪ್ಯಾನಿಷ್ ಲೀಗಿನ ರಿಯಲ್ ಮ್ಯಾಡ್ರಿಡ್ ಮತ್ತು ಪೋರ್ಚುಗಲ್ ಲಿನ ರಾಷ್ಟ್ರೀಯತಂಡಕ್ಕೆ ಆಟವಾಡುತ್ತಾನೆ. ಅವರು ಫಾರ್ವಡ್ ಮತ್ತು ಪೋರ್ಚುಗಲಿನ ನಾಯಕನನ್ನಾಗಿ ಕಾರ್ಯನಿರ್ವಹಿಸುತ್ತದೆ.೨೦೦೮ ರಲ್ಲಿ, ತನ್ನ ಮೊದಲ ಬ್ಯಾಲನ್ ಡಿ'ಓರ್ ಮತ್ತು ವರ್ಷದ ಅತ್ಯತ್ತಮ ಫಿಫಾ ವಿಶ್ವ ಆಟಗಾರ ಪ್ರಶಸ್ತಿ ದೊರಕಿದ .ನಂತರ ೨೦೧೩ ಮತ್ತು ೨೦೧೪ ರಲ್ಲಿ ಫಿಫಾ ಬ್ಯಾಲನ್ ಡಿ'ಓರ್ ಸಾಧಿಸಿದೆ.೨೦೧೫ ರಲ್ಲಿ ರೊನಾಲ್ಡೊ ಕ್ಲಬ್ ಮತ್ತು ದೇಶಕ್ಕೆ ತನ್ನ 500 ನೇ ಗೋಲನ್ನು ಒಡೆದ.
ಇವೆಂತಸ್ ಫುಟ್ಬಾಲ್ ಕ್ಲಬ್ (ಲ್ಯಾಟಿನ್ ಭಾಷೆಯಿಂದ: ಐವೆಂಟಸ್, "ಯುವಕರು"; ಇಟಾಲಿಯನ್ ಉಚ್ಚಾರಣೆ: ಜುವಾಂಟಸ್), ಇದನ್ನು ಆಡುಮಾತಿನಲ್ಲಿ ಜುವೆ ಎಂದು ಕರೆಯಲಾಗುತ್ತದೆ (ಉಚ್ಚರಿಸಲಾಗುತ್ತದೆ), ಇದು ಟ್ಯೂರಿನ್, ಪೀಡ್ಮಾಂಟ್ ಮೂಲದ ಇಟಾಲಿಯನ್ ವೃತ್ತಿಪರ ಫುಟ್ಬಾಲ್ ಕ್ಲಬ್ ಆಗಿದೆ. ಟೊರಿನೀಸ್ ವಿದ್ಯಾರ್ಥಿಗಳ ಗುಂಪಿನಿಂದ ೧೮೯೭ ರಲ್ಲಿ ಸ್ಥಾಪನೆಯಾದ ಕ್ಲಬ್ ೧೯೦೩ ರಿಂದ ಕಪ್ಪು ಮತ್ತು ಬಿಳಿ ಪಟ್ಟೆಯ ಹೋಮ್ ಕಿಟ್ ಧರಿಸಿದೆ ಮತ್ತು ತನ್ನ ನಗರದ ವಿವಿಧ ಮೈದಾನಗಳಲ್ಲಿ ಹೋಮ್ ಪಂದ್ಯಗಳನ್ನು ಆಡಿದೆ. ಇತ್ತೀಚಿನದು ೪೧,೮೦೭ ಸಾಮರ್ಥ್ಯದ ಇವೆಂತಸ್ ಕ್ರೀಡಾಂಗಣ.
ಎಲಿಜಬೆತ್ ಜಾನೆ ಹರ್ಲಿ (೧೯೬೫ರ ಜೂನ್ ೧೦ರಂದು ಜನಿಸಿದರು) ಒಬ್ಬ ಇಂಗ್ಲಿಷ್ ರೂಪದರ್ಶಿ ಮತ್ತು ನಟಿ, ಈಕೆ ೧೯೯೦ರಲ್ಲಿ ಹಘ್ ಗ್ರ್ಯಾಂಟ್ನ ಪ್ರೇಯಸಿಯೆಂದು ಜನಪ್ರಿಯವಾದರು. ೧೯೯೪ರಲ್ಲಿ, ಗ್ರ್ಯಾಂಟ್ನ ಫೋರ್ ವೆಡ್ಡಿಂಗ್ಸ್ ಆಂಡ್ ಎ ಫನರಲ್ ಚಲನಚಿತ್ರವು ಜಾಗತಿಕವಾಗಿ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದರಿಂದ ಆತನು ಪ್ರಪಂಚದಾದ್ಯಂತದ ಮಾಧ್ಯಮದ ಕೇಂದ್ರಬಿಂದುವಾದ್ದರಿಂದ, ಹರ್ಲಿಯು ಲಾಸ್ ಏಂಜಲೀಸ್ನಲ್ಲಿನ ಈ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಚಿನ್ನದ ಸೇಫ್ಟಿ ಪಿನ್ಗಳಿಂದ ಸೇರಿಸಿದ ಕೆಳಮಟ್ಟದವರೆಗೆ ಇಳಿಬಿಟ್ಟ ವರ್ಸೇಸ್ ಉಡುಪನ್ನು ಧರಿಸಿಕೊಂಡು ಆತನೊಂದಿಗೆ ಜತೆಗೂಡಿದರು, ಈ ಉಡುಪಿನಿಂದಾಗಿ ಆಕೆಯು ಮಾಧ್ಯಮದ ಗಮನವನ್ನು ಸೆಳೆದರು. ಹರ್ಲಿ ಪ್ರಸಾಧನ ವಸ್ತುಗಳ ಕಂಪನಿ ಎಸ್ಟೀ ಲಾಡರ್ಗಾಗಿ ಸುಮಾರು ಹದಿನೈದು ವರ್ಷಗಳಿಂದ ಕೆಲಸ ಮಾಡಿದ್ದರು, ಆ ಕಂಪನಿಯಲ್ಲಿ ಆಕೆಯು ತನ್ನ ೨೯ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಮಾಡೆಲಿಂಗ್ನಲ್ಲಿ ಉದ್ಯೋವನ್ನು ಪಡೆದಿದ್ದರು.
ಅರ್ಜಿದಾರ ಲೇಖನಕ್ಕಾಗಿ ಇಲ್ಲಿ ನೋಡಿ.ಅಭ್ಯರ್ಥಿ, ಅಥವಾ ನಿರ್ದಿಷ್ಟನಾಮಿ, ಒಂದು ಪ್ರಶಸ್ತಿ ಅಥವಾ ಗೌರವದ ಭಾವೀ ಗ್ರಾಹಿ, ಅಥವಾ ಯಾವುದೋ ರೀತಿಯ ಸ್ಥಾನಕ್ಕಾಗಿ ಅರಸುತ್ತಿರುವ ಅಥವಾ ಪರಿಗಣಿಸಲ್ಪಡುತ್ತಿರುವ ವ್ಯಕ್ತಿ; ಉದಾಹರಣೆಗೆ: ಒಂದು ಕಾರ್ಯಸ್ಥಾನಕ್ಕೆ ಚುನಾಯಿತನಾಗಲು — ಈ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಒಂದು ಗುಂಪಿನಲ್ಲಿ ಸದಸ್ಯತ್ವ ಪಡೆಯಲು"ನಾಮನಿರ್ದೇಶನ"ವು ರಾಜಕೀಯ ಪಕ್ಷದಿಂದ ಒಂದು ಕಾರ್ಯಸ್ಥಾನಕ್ಕೆ ಚುನಾವಣೆಗಾಗಿ ಅಥವಾ ಒಂದು ಗೌರವ ಅಥವಾ ಪ್ರಶಸ್ತಿ ನೀಡಲು ಒಬ್ಬ ಅಭ್ಯರ್ಥಿಯನ್ನು ಆಯ್ಕೆಮಾಡುವ ಪ್ರಕ್ರಿಯೆಯ ಭಾಗವಾಗಿದೆ. ಈ ವ್ಯಕ್ತಿಯನ್ನು ನಿರ್ದಿಷ್ಟನಾಮಿ ಎಂದು ಕರೆಯಲಾಗುತ್ತದೆ.
ಆರ್ಸೆನಲ್ ಫುಟ್ಬಾಲ್ ಕ್ಲಬ್ (PLUS ಮಾರುಕಟ್ಟೆಗಳು: AFC)(ಹಲವು ಸಂದರ್ಭಗಳಲ್ಲಿ ಆರ್ಸೆನಲ್ ಅಥವಾ ದಿ ಆರ್ಸೆನಲ್ ಎಂದು ಸರಳವಾಗಿ ಅಥವಾ ದಿ ಗನ್ನರ್ಸ್ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ)ಉತ್ತರ ಲಂಡನ್ನ ಹೊಲೋವೇನಲ್ಲಿ ನೆಲೆಯಾಗಿರುವ ಇಂಗ್ಲಿಷ್ ವೃತ್ತಿಪರ ಫುಟ್ಬಾಲ್ ಕ್ಲಬ್. ಆರ್ಸೆನಲ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದು,ಹದಿಮೂರು ಫಸ್ಟ್ ಡಿವಿಷನ್ ಮತ್ತು ಪ್ರೀಮಿಯರ್ ಲೀಗ್ ಪ್ರಶಸ್ತಿಗಳನ್ನು ಮತ್ತು ಹತ್ತು FA ಕಪ್ಗಳನ್ನು ಜಯಿಸುವ ಮೂಲಕ ಇಂಗ್ಲೀಷ್ ಫುಟ್ಬಾಲ್ನಲ್ಲಿ ಅತ್ಯಂತ ಯಶಸ್ವಿ ಕ್ಲಬ್ಗಳಲ್ಲಿ ಒಂದೆನಿಸಿದೆ. ಇಂಗ್ಲಿಷ್ ಫುಟ್ಬಾಲ್ ಕ್ರೀಡೆಗಳಲ್ಲಿ ಸುದೀರ್ಘ, ನಿರಂತರ ಅವಧಿಗೆ ಉನ್ನತ ಮಟ್ಟದ ದಾಖಲೆಯನ್ನು ಹೊಂದಿದೆ ಮತ್ತು ಅಜೇಯರಾಗುಳಿದು ಕ್ರೀಡಾ ಋತುವೊಂದನ್ನು ಮುಗಿಸಿದ ಏಕೈಕ ಪ್ರೀಮಿಯರ್ ಲೀಗ್.
ಒಂದು ನಿರ್ದಿಷ್ಟ ವಿಷಯದ ಕುರಿತು ಮತ್ತು ಆ ವಿಷಯದಲ್ಲಿ ಪರಿಣತಿ ಹೊಂದಿರುವ ವ್ಯಕ್ತಿಗಳಿಂದ ಕೆಲವು ಲೇಖನಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿರುತ್ತದೆ.ಇವುಗಳನ್ನು ಬರೆಯುವ ಲೇಖಕರನ್ನು ಅಂಕಣಕಾರರೆಂದು ಕರೆಯಲಾಗುತ್ತದೆ. ಅಂಕಣಗಳನ್ನು ಬರೆಯಲು ಒಂದು ನಿರ್ದಿಷ್ಟ ವಿಷಯದಲ್ಲಿ ಅಪರಿಮಿತ ಜ್ನಾನವನ್ನು ಹೊಂದಿರುವ ಮತ್ತು ಆ ಕ್ಷೇತ್ರದಲ್ಲಿ ಪ್ರಸಿದ್ಧರಾದ ಕೆಲವು ಪ್ರಸಿದ್ಧ ವ್ಯಕ್ತಿಗಳು ಮಾತ್ರ ಈ ಕಾರ್ಯವನ್ನು ನಿರ್ವಾಹಿಸುತ್ತಾರೆ. [[ಪತ್ರಿಕೆಗಳು]] ತಮ್ಮ ಪ್ರಸಾರನವನ್ನು ಹೆಚ್ಚಿಸಿಕೊಳ್ಳಲು ಕೆಲವು ಪ್ರಸಿದ್ಧ ವ್ಯಕ್ತಿಗಳಿಂದ ಆಂಕಣಗಳನ್ನು ಬರೆಸಿ ಅವುಗಳನ್ನು ಪ್ರಕಟಿಸುತ್ತಾರೆ.ಇದರಿಂದ ಪತ್ರಿಕೆಗಳ ಪ್ರಾಸಾರದಲ್ಲಿ ಹೆಚ್ಚಳವನ್ನು ನೋಡಬಹುದು.
ಜಲಾನಯನ ಪ್ರದೇಶವು ಅವಕ್ಷೇಪನ ಸಂಗ್ರಹಗೊಂಡು ನದಿ, ಕೊಲ್ಲಿ, ಅಥವಾ ಬೇರೆ ಜಲಸಮೂಹದಂತಹ ಸಾಮಾನ್ಯ ಹೊರಗುಂಡಿಯೊಳಗೆ ಹರಿದು ಹೋಗುವ ಯಾವುದೇ ಭೂಪ್ರದೇಶ. ಜಲಾನಯನ ಪ್ರದೇಶವು ಹಂಚಿಕೊಂಡ ಹೊರಗುಂಡಿಯ ಕಡೆಗೆ ಇಳಿಜಾರಿನಲ್ಲಿ ಚಲಿಸುವ ಹರಿದು ಹೋಗುವ ಮಳೆನೀರು, ಹಿಮಕರಗುವಿಕೆ, ಮತ್ತು ಹತ್ತಿರದ ಹೊಳೆಗಳಿಂದ ಮೇಲ್ಮೈ ನೀರನ್ನು, ಜೊತೆಗೆ ಭೂಮಿಯ ಮೇಲ್ಮೈ ಕೆಳಗಿನ ಅಂತರ್ಜಲವನ್ನು ಒಳಗೊಂಡಿರುತ್ತದೆ. ಜಲಾನಯನ ಪ್ರದೇಶಗಳು ಕ್ರಮಾನುಗತ ಮಾದರಿಯಲ್ಲಿ ಕಡಿಮೆ ಎತ್ತರದಲ್ಲಿನ ಇತರ ಜಲಾನಯನ ಪ್ರದೇಶಗಳನ್ನು ಕೂಡುತ್ತವೆ.
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು.
ಆಂಡ್ರೆಸ್ ಇನಿಯೆಸ್ಟಾ ರು (Spanish pronunciation: [anˈdɾes iˈnjesta]; ಕ್ಯಾಸ್ಟೈಲ್-ಲಾ ಮಾಂಚಾದ ಅಲ್ಬಾಸೆಟೆಯಲ್ಲಿನ ಫ್ಯೂಯೆಂಟೀಲ್ಬಿಲ್ಲಾನಲ್ಲಿ 11 ಮೇ 1984ರಂದು ಜನನ) ಓರ್ವ ವಿಶ್ವ ಕಪ್ ವಿಜೇತ ಸ್ಪ್ಯಾನಿಷ್ ಅಂತರರಾಷ್ಟ್ರೀಯ ಫುಟ್ಬಾಲ್ ಮಿಡ್ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರರಾಗಿದ್ದು ಪ್ರಸ್ತುತ ಸ್ಪ್ಯಾನಿಷ್ ಲಾ ಲಿಗಾ ಕ್ಲಬ್ ಆದ FC ಬಾರ್ಸಿಲೋನಾದಲ್ಲಿ ಆಡುತ್ತಿದ್ದಾರೆ. ಮೈದಾನದ ಯಾವುದೇ ಭಾಗದಲ್ಲಿಯೂ ಆಡುವುದಕ್ಕೆ ತಯಾರಿರುವಿಕೆ ಮತ್ತು ಸ್ವಾಭಾವಿಕ ವಿನಮ್ರತೆಗಳು ಸೇರಿ ಆತನಿಗೆ ಎಲ್ ಇಲ್ಯೂಷನಿಸ್ಟಾ (ಗಾರುಡಿಗ), ಎಲ್ ಆಂಟಿ-ಗ್ಯಾಲಕ್ಟಿಕೋ (ಮಹಾತಾರೆ-ವಿರೋಧಿ), ಸೆರೆಬ್ರೋ (ಬುದ್ಧಿವಂತ/ಮಿದುಳು) ಮತ್ತು ತೀರ ಇತ್ತೀಚೆಗೆ ಸ್ಪ್ಯಾನಿಷ್ ಪತ್ರಿಕಾರಂಗದಿಂದ ಡಾನ್ ಆಂಡ್ರೆಸ್ ಎಂಬ ಉಪನಾಮಗಳಿಗೆ ಬಾಧ್ಯರಾಗುವಂತೆ ಮಾಡಿವೆ. 2009ರ UEFA ಚಾಂಪಿಯನ್ಸ್ ಲೀಗ್ ಫೈನಲ್ನ ನಂತರ, ಮ್ಯಾಂಚೆಸ್ಟರ್ ಯುನೈಟೆಡ್ನ ಗೋಲು ಹೊಡೆಯುವ ಆಟಗಾರ/ಸ್ಟ್ರೈಕರ್ ವೇನ್ ರೂನೆಯವರು, ತಾನು ಈ ಮಿಡ್ಫೀಲ್ಡರ್/ಮಧ್ಯಮೈದಾನದಲ್ಲಿನ ಆಟಗಾರನನ್ನು ವಿಶ್ವದಲ್ಲೇ ಅತ್ಯುತ್ತಮ ಆಟಗಾರ ಎಂದು ಭಾವಿಸಿದ್ದೇನೆ ಎಂದು ಒತ್ತಿ ಹೇಳಿದ್ದರು.
ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಸಿ ಎರಡನೇ ವಿವೇಕಾನಂದ ಎನಿಸಿದ್ದಾರೆ. ನಡೆದಾಡುವ ದೇವರು, ಜೇಬಿಲ್ಲದ ಅಂಗಿಯ ರಾಷ್ಟ್ರ ಸಂತ ಎಂಬ ಹತ್ತು ಹಲವಾರು ನಾಮಾವಳಿಗಳಿಂದ ಜಗಪ್ರಸಿದ್ದರಾಗಿದ್ದರು, ಹಾಗೂ ಅಪಾರ ಭಕ್ತ ಸಾಗರವನ್ನು ಹೊಂದಿದ್ದರು. ಜೈನ ಧರ್ಮದಂತೆ ಆಹಾರ ಮತ್ತು ಜಲವನ್ನು ತ್ಯಾಗ ಮಾಡಿ ವೈಕುಂಠ ಏಕಾದಶಿಯಂದು ಇಚ್ಛಾಮರಣ ಹೊಂದಿದ್ದರು.
ಕುಂಟೆಯು ದ್ವಿತೀಯಕ ಉಳುವಿಕೆಗೆ ಬಳಸಲಾದ ಕೃಷಿ ಉಪಕರಣಗಳ ಹಲವಾರು ಬಗೆಗಳಲ್ಲಿ ಯಾವುದಾದರೂ ಒಂದು. ಈ ಹೆಸರಿನ ಒಂದು ಅರ್ಥ ಮಣ್ಣಿನ ಮೂಲಕ ರೇಖೀಯವಾಗಿ ಎಳೆಯಲ್ಪಟ್ಟಾಗ ಮಣ್ಣಿನೊಳಗೆ ತೂರುವ ಹಲ್ಲಿರುವ (ಕಾಂಡ ಎಂದೂ ಕರೆಯಲ್ಪಡುತ್ತದೆ) ಚೌಕಟ್ಟುಗಳನ್ನು ಸೂಚಿಸುತ್ತದೆ. ಮತ್ತೊಂದು ಅರ್ಥವು ಅದೇ ರೀತಿಯ ಪರಿಣಾಮವನ್ನು ಸಾಧಿಸಲು ಬಿಲ್ಲೆಗಳು ಅಥವಾ ಹಲ್ಲುಗಳ ಪರಿಭ್ರಾಮಕ ಚಲನೆಯನ್ನು ಬಳಸುವ ಯಂತ್ರಗಳನ್ನು ಸೂಚಿಸುತ್ತದೆ.
ದಿ ಗ್ರೇಟ್ ವಾಲ್ ಆಫ್ ಚೀನಾ (simplified Chinese: 长城; traditional Chinese: 長城; pinyin: Chángchéng; literally "long city/fortress") ಅಥವಾ (simplified Chinese: 万里长城; traditional Chinese: 萬里長城; pinyin: Wànlǐ Chángchéng; literally "The long wall of 10,000 Li (里)") ಎಂಬುದು ವಿವಿಧ ಪರಂಪರೆಯ ರಾಜವಂಶಗಳ ಅವಧಿಯಲ್ಲಿ ಕಂಡುಬಂದ ಚೀನಾದ ಸಾಮ್ರಾಜ್ಯದ ಉತ್ತರದ ಗಡಿಭಾಗಗಳನ್ನು ರಕ್ಷಿಸಲು 5ನೇ ಶತಮಾನ BC ಮತ್ತು 16ನೇ ಶತಮಾನದ ನಡುವೆ ನಿರ್ಮಿಸಿ, ಮರುನಿರ್ಮಿಸಿ, ಮತ್ತು ನಿರ್ವಹಣೆ ಮಾಡಲ್ಪಟ್ಟ, ಉತ್ತರದ ಚೀನಾದಲ್ಲಿನ ಕಲ್ಲು ಮತ್ತು ಸುಟ್ಟ ಜೇಡಿಮಣ್ಣಿನ ಕೋಟೆ-ನಿರ್ಮಾಣಗಳ ಒಂದು ಸರಣಿಯಯಾಗಿದೆ. 5tನೇ ಶತಮಾನದ BCಯಿಂದ ಮೊದಲ್ಗೊಂಡು, ಹಲವಾರು ಗೋಡೆಗಳು ಕಟ್ಟಲ್ಪಟ್ಟಿದ್ದು, ಅವು ಮಹಾನ್ ಗೋಡೆ ಎಂದು ಉಲ್ಲೇಖಿಸಲ್ಪಟ್ಟಿವೆ. ಕ್ವಿನ್ ಷಿ ಹುವಾಂಗ್ ಎಂಬ ಮೊದಲನೆಯ, ಚೀನಾದ ಚಕ್ರವರ್ತಿಯಿಂದ 220–206 BCಯ ನಡುವಿನ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಗೋಡೆಯು ಅತ್ಯಂತ ಪ್ರಸಿದ್ಧವಾದವುಗಳಲ್ಲಿ ಒಂದಾಗಿದೆ.
ಬರ್ಲಿನ್ ಗೋಡೆ (German: [Berliner Mauer] Error: {{Lang}}: text has italic markup (help)) ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ (GDR, ಪೂರ್ವ ಜರ್ಮನಿ)ಯು ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಯಾಗಿದ್ದು, ಇದು ಪಶ್ಚಿಮ ಬರ್ಲಿನ್ ನಗರವನ್ನು ಸಂಪೂರ್ಣವಾಗಿ ಸುತ್ತುವರೆದು, ಅದನ್ನು ಪಶ್ಚಿಮ ಜರ್ಮನಿಯಿಂದ ಬೇರಾಗಿಸಿತ್ತು ಮತ್ತು ಪೂರ್ವ ಬರ್ಲಿನ್ ಅನ್ನು ಒಳಗೊಂಡ ನಂತರ ಇದನ್ನು ಕೆಡವಲಾಯಿತು. ಈ ಗೋಡೆಯು ಬೃಹತ್ ಕಾಂಕ್ರೀಟ್ ಗೋಡೆಗಳುದ್ದಕ್ಕೂ ಹಲವಾರು ಕಾವಲುಗೋಪುರಗಳನ್ನು ಹೊಂದಿದ್ದು ಒಂದು ದೊಡ್ಡ ಕ್ಷೇತ್ರವನ್ನು ಸುತ್ತುವರೆದಿತ್ತು (ನಂತರ ಇದನ್ನು "ಡೆತ್ ಸ್ಟ್ರಿಪ್" ಎಂದು ಕರೆಯಲಾಯಿತು) ಮತ್ತು ಇದು ವಾಹನಗಳನ್ನು ಪ್ರತಿಬಂಧಿಸುವ ಕಂದಕಗಳು, "ಫಕೀರನ ಹಾಸಿಗೆಗಳು" ಮತ್ತು ಇನ್ನಿತರ ಭದ್ರತಾವ್ಯವಸ್ಥೆಗಳನ್ನೊಳಗೊಂಡಿತ್ತು.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.