The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್ಕಿನ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ ೯ ರತ್ನಗಳು. ಇವು, ಹವಳ ಮುತ್ತು ವಜ್ರ ವೈಢೂರ್ಯ ಗೋಮೇಧಿಕ ಮರಕತ ಮಾಣಿಕ್ಯ ಪಚ್ಚೆ ನೀಲ ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು.ಅವರೆಂದರೆ ೧ - ಕಾಳಿದಾಸ, ೨ - ವರರುಚಿ, ೩ - ವೇತಾಲ ಭಟ್ಟ , ೪ - ವರಾಹಮಿಹಿರ, ೫ - ಶಂಕು, ೬- ಧನ್ವಂತ್ರಿ, ೭ - ಬ್ರಹ್ಮ ಗುಪ್ತ, ೮ - ಕ್ಷಪಣಕ, ೯- ಅಮರಸಿಂಹ ನವರತ್ನ (ಸಂಸ್ಕೃತ: नवरत्न) ಸಂಸ್ಕೃತದ ಸಂಯೋಜನಾ ಪದದ ಅರ್ಥ "ಒಂಬತ್ತು ರತ್ನಗಳು" ಎಂದು ಆಗಿದೆ. ಈ ಶೈಲಿಯಲ್ಲಿ ನವರತ್ನಗಳನ್ನು ಉಪಯೋಗಿಸಿಕೊಂಡು ರಚಿತವಾದ ಆಭರಣ ಹಿಂದೂ ಧರ್ಮ, ಜೈನ್ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮ ಪ್ರಮುಖ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಇತರ ಧರ್ಮಗಳ ನಡುವೆ ಹೊಂದಿದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ವಾದಿರಾಜರು (ಕ್ರಿ.ಶ. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ. ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ,-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ. ಈ ಕಾರ್ಯವಿಧಾನವು ವಾಸ್ತವಿಕ ಹಸಿರುಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ, ಲಂಬಗಮನದಿಂದ ತಾಪವು ನಷ್ಟವಾಗುವುದಿಲ್ಲ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಈ ಲೇಖನ ಸಮಾಜ ವಿಜ್ಞಾನದ ಬಗ್ಗೆ. ಅರ್ಥಶಾಸ್ತ್ರ ಪದದ ಇತರ ಬಳಕೆಗಳಿಗಾಗಿ ಅರ್ಥಶಾಸ್ತ್ರ (ದ್ವಂದ್ವ ನಿವಾರಣೆ) ನೋಡಿ.ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ. ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು.
ಕರ್ನಾಟಕದ ಏಳು ಅದ್ಭುತಗಳು - ಕರ್ನಾಟಕದ ಸಾಂಸ್ಕೃತಿಕ, ಚಾರಿತ್ರಿಕ, ಕಲಾತ್ಮಕ ಮತ್ತು ನೈಸರ್ಗಿಕ ಹೆಗ್ಗುರುತುಗಳನ್ನು ಹುಡುಕಿ, ಗುರುತಿಸುವ ಅಭಿಯಾನ. ಈ ಅಭಿಯಾನವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ ಆರಂಭಿಸಿತು. ಕರ್ನಾಟಕದ ಏಳು ಅದ್ಭುತಗಳನ್ನು ವೈಜ್ಞಾನಿಕ ಆಯ್ಕೆಯ ವಿಧಾನದ ಮೂಲಕ ಆರಿಸಿ ಹೆಸರಿಸುವುದು ಈ ಅಭಿಯಾನದ ಗುರಿಯಾಗಿತ್ತು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷಿಣಿಸುತಿದ್ದೆ , ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.
ಕ್ರೊಯೆಶಿಯ (Hrvatska), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska ಉಚ್ಛಾರ ), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.
ಪತ್ರಕರ್ತರು ಆಧುನಿಕ ಸಮಾಜದ ಕನ್ನಡಿಯೆಂದೇ ಹೇಳಬಹುದು.ಪತ್ರಕರ್ತನು ಸ್ಥಳಿಯ ಮತ್ತು ಹೊರನಾಡಿನ ಪ್ರಸ್ತುತ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೋದ್ಯಮದ ಮೂಲಕ ವಿವರಿಸುತ್ತ ಹೋಗುತ್ತಾನೆ.ಅದೇ ರೀತಿ ರಾಜಕೀಯ ವ್ಯವಸ್ಥೆ,ಭೂಗತ ಜಗತ್ತಿನ ಷಡ್ಯಂತ್ರಗಳು ಇವೇ ಮೊದಲಾದ ವಿಷಯಗಳ ಬಗ್ಗೆ ಕಾಲಕಾಲಕ್ಕೆ ಜನತೆಗೆ ವರದಿ ಮಾಡುವದರ ಜೊತೆಗೇ ಒಂದು ರೀತಿಯ ಜನಾಭಿಪ್ರಾಯ ಮೂಡಿಸುವಲ್ಲಿಯೂ ತನ್ನ ಪಾತ್ರ ವಿಸ್ತರಿಸುತ್ತಾ ಹೋಗುತ್ತಾನೆ.ಈ ರೀತಿಯ ಜನಾಭಿಪ್ರಾಯದಿಂದಲೇ ಸರ್ಕಾರ ಬದಲಾಗಿದ್ದೂ ಉಂಟು.ಹಾಗಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತನನ್ನು ಸಮಾಜದ ನಾಲ್ಕನೇ ಅಂಗ ಎಂದು ಕರೆದಿದ್ದಾರೆ. ಪತ್ರಕರ್ತ ಇವತ್ತು ಮುದ್ರಿತ ಸ್ವರೂಪಗಳಾದ ಸುದ್ದಿಪತ್ರಿಕೆ/ಮ್ಯಾಗಜೀನ್ ವಿಭಾಗದಿಂದ ಹಿಡಿದು ರೇಡಿಯೊ,ಟೆಲಿವಿಷನ್(ದೂರದರ್ಶನ),ಅಂತರ್ಜಾಲ ವಿಭಾಗದವರೆಗೂ ಹರಡಿಕೊಂಡಿದ್ದಾನೆ. ಪತ್ರಿಕೋದ್ಯಮದಲ್ಲಿ ಪತ್ರಕರ್ತ(ವರದಿಗಾರ)ನಲ್ಲದೇ ಸಂಪಾದಕ,ಅಂಕಣಕಾರ,ಛಾಯಾಗ್ರಾಹಕ ಕೂಡ ತಮ್ಮದೇ ಆದ ಕೊಡುಗೆ ನೀಡುತ್ತಿರುತ್ತಾರೆ.
ಸಂತಾಲಿ ( ಓಲ್ ಚಿಕಿ : ᱥᱟᱱᱛᱟᱲᱤ ),ಸಂಥಾಳಿ ಎಂದೂ ಸಹ ಕರೆಯಲ್ಪಡುವ ಈ ಭಾಷೆಯು ಹೊ ಮತ್ತು ಮುಂಡಾರಿಗಳಿಗೆ ಸಂಬಂಧಿಸಿದ ಆಸ್ಟ್ರೋಸಿಯಾಟಿಕ್ ಭಾಷೆಗಳ ಮುಂಡಾ ಉಪಕುಟುಂಬಗಳಲ್ಲಿ ಹೆಚ್ಚು ವ್ಯಾಪಕವಾಗಿ ಮಾತನಾಡಲ್ಪಡುವ ಭಾಷೆಯಾಗಿದೆ; ಈ ಭಾಷೆಯು ಮುಖ್ಯವಾಗಿ ಅಸ್ಸಾಂ, ಬಿಹಾರ, ಜಾರ್ಖಂಡ್, ಮಿಜೋರಾಂ, ಒರಿಸ್ಸಾ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳ ಗಳಲ್ಲಿ ಮಾತನಾಡಲ್ಪಡುತ್ತದೆ . ಸಂತಾಲಿ ಭಾಷೆಯು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೆದದ ಪ್ರಕಾರ ಮಾನ್ಯತೆಯನ್ನು ಪಡೆದ ಭಾರತದ ಪ್ರಾದೇಶಿಕ ಭಾಷೆಯಾಗಿದೆ. ಸಂತಾಲಿಯನ್ನು ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ನೇಪಾಳದಲ್ಲಿ ಸುಮಾರು ೭.೬ ಮಿಲಿಯನ್ ಅಷ್ಟು ಜನರು ಮಾತನಾಡುತ್ತಾರೆ ಹಾಗೂ ಈ ಭಾಷೆಯು ವಿಯೆಟ್ನಾಮೀಸ್ ಮತ್ತು ಖಮೇರ್ ನಂತರದ ಮೂರನೇ ಅತಿ ಹೆಚ್ಚು ಮಾತನಾಡುವ ಆಸ್ಟ್ರೋಸಿಯಾಟಿಕ್ ಭಾಷೆಯಾಗಿದೆ.
ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್
ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ (೨ ಎಪ್ರಿಲ್ ೧೮೦೫ – ೪ ಆಗಸ್ಟ್ ೧೮೭೫). ಡೆನ್ಮಾರ್ಕಿನ ಸಾಹಿತಿ; ಜಗತ್ಪ್ರಸಿದ್ಧ ಮಕ್ಕಳಕಥೆಗಳ ಲೇಖಕ.
ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು.ಮಾರ್ಗ ಮದ್ಯ ಆನಂದ ಆಶ್ರಮ ಸ್ಥಾಪಿಸಿದರು ಅಲ್ಲಿ ಮೋತಿಲಾಲ್ ನೆಹರು ಉದ್ಘಾಟನೆ ಮಾಡಿದರು ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.
ಸೂಶಿ ಬೇಯಿಸಿದ ವಿನಿಗರ್ ಸೇರಿಸಿದ ಅಕ್ಕಿ ಜೊತೆಗೆ ಇತರ ಪದಾರ್ಥಗಳು, ಹಸಿ ಬೇಯಿಸದ ಕಡಲಾಹಾರ, ತರಕಾರಿಗಳು ಮತ್ತು ಕೆಲವೊಮ್ಮೆ ಉಷ್ಣವಲಯದ ಹಣ್ಣುಗಳನ್ನು ಹೊಂದಿರುವ ಒಂದು ಜ್ಯಾಪನೀಸ್ ಖಾದ್ಯ. ಪದಾರ್ಥಗಳು ಮತ್ತು ಸೂಶಿಯ ಪ್ರಸ್ತುತಿಯ ರೂಪಗಳು ವ್ಯಾಪಕವಾಗಿ ಬದಲಾಗುತ್ತವೆ, ಆದರೆ ಎಲ್ಲ ಸೂಶಿ ಸಮಾನವಾಗಿ ಹೊಂದಿರುವ ಪದಾರ್ಥವೆಂದರೆ ಅನ್ನ. ಸೂಶಿಯನ್ನು ಕಂದು ಅಕ್ಕಿ ಅಥವಾ ಬಿಳಿ ಅಕ್ಕಿಯಿಂದ ತಯಾರಿಸಬಹುದು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕಾರಖಾನೆ ಅಥವಾ ಉತ್ಪಾದನಾ ಘಟಕವು ಸಾಮಾನ್ಯವಾಗಿ ಕಟ್ಟಡಗಳು ಮತ್ತು ಯಂತ್ರೋಪಕರಣಗಳನ್ನು ಹೊಂದಿರುವ ಒಂದು ಔದ್ಯೋಗಿಕ ಸ್ಥಳ, ಅಥವಾ ಹೆಚ್ಚು ಸಾಮಾನ್ಯವಾಗಿ ಹಲವಾರು ಕಟ್ಟಡಗಳನ್ನು ಹೊಂದಿರುವ ಒಂದು ಸಂಕೀರ್ಣ. ಇಲ್ಲಿ ಕಾರ್ಮಿಕರು ಸರಕುಗಳನ್ನು ಉತ್ಪಾದಿಸುತ್ತಾರೆ ಅಥವಾ ಒಂದು ಉತ್ಪನ್ನವನ್ನು ಮತ್ತೊಂದು ಉತ್ಪನ್ನವಾಗಿ ಸಂಸ್ಕರಿಸುವ ಯಂತ್ರಗಳನ್ನು ನಡೆಸುತ್ತಾರೆ. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಗೃಹ ಕೈಗಾರಿಕೆ ಅಥವಾ ಕಾರ್ಯಾಗಾರಗಳಿಗೆ ಬಂಡವಾಳ ಹಾಗೂ ಸ್ಥಳದ ಅಗತ್ಯಗಳು ಬಹಳ ಹೆಚ್ಚಾದುದರಿಂದ, ಯಂತ್ರೋಪಕರಣಗಳ ಅಂತರ್ನಿವೇಶನದಿಂದ ಕಾರಖಾನೆಗಳು ಹುಟ್ಟಿಕೊಂಡವು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
[[ ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಆಲ್ಬರ್ಟ್ ಕಾಮೂ(French: [albɛʁ kamy] ( ); ೭ ನವೆಂಬರ್ ೧೯೧೩ – ೪ ಜನವರಿ ೧೯೬೦)ಫ್ರಾನ್ಸ್ ದೇಶದ ಲೇಖಕ,ಪತ್ರಕರ್ತ ಮತ್ತು ತತ್ವಜ್ಞಾನಿ. ಇವರಿಗೆ ೧೯೫೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.. ಇವರ ದೃಷ್ಟಿಕೋನವು ತತ್ವಶಾಸ್ತ್ರದಲ್ಲಿ ಅಸಂಗತತೆಯ ಪರಿಕಲ್ಪನೆಯು ಬೆಳೆಯುವಲ್ಲಿ ಸಹಾಯ ಮಾಡಿತು.ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರೊಂದಿಗೆ ನಿರಾಕರಣವಾದವನ್ನು ತನ್ನ ಜೀವಮಾನ ಪೂರ್ತಿ ವಿರೋಧಿಸಿಕೊಂಡು ಬಂದುದಾಗಿ ತನ್ನ ಪುಸ್ತಕ ದಿ ರೆಬೆಲ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ಜಾತಿ ಪದ್ದತಿ ಯು ಸಾಮಾಜಿಕ ಶ್ರೇಣೀಕರಣವನ್ನು ವಿವರಿಸುತ್ತದೆ.ಅದಲ್ಲದೇ ಸಾಮಾಜಿಕ ನಿರ್ಭಂಧಗಳಡಿ ಭಾರತ ಉಪಖಂಡದ ಸಾವಿರಾರು ಪಂಗಡದ ಪ್ರವರ್ಗಗಳನ್ನು, ವಂಶವಾಹಿನಿಗಳ ಸಮೂಹವನ್ನು ವ್ಯಾಖ್ಯಾನಿಸುತ್ತದೆ.ಇದನ್ನೇ ಜಾತಿ ಗಳು ಅಥವಾ ಕೋಮು ಗಳೆಂದು ಹೇಳಲಾಗುತ್ತದೆ. ಈ ಜಾತಿಯಲ್ಲಿಯೇ ಅನ್ಯಗೋತ್ರ ಗುಂಪುಗಳ ಅಸ್ತಿತ್ವ ಇದೆ,ಇದನ್ನು ಗೋತ್ರಗಳು,ವಂಶವಾಹಿನಿ ಅಥವಾ ಕುಟುಂಬದ ಕುಲಗೋತ್ರವನ್ನು ವೈಯಕ್ತಿಕ ನೆಲೆಯಲ್ಲಿ ಗುರುತಿಸಲಾಗುತ್ತದೆ. ಹಲವಾರು ಉಪ-ಜಾತಿಗಳಲ್ಲಿ ಶಾಕಾದ್ವಿಪಿ,ಕೂಡಾ ಒಂದು,ಒಂದೇ ಗೋತ್ರದಲ್ಲಿ ವಿವಾಹ ಅನುಮತಿಸಿದ್ದರೂ ಅದನ್ನು ಪರ್ಯಾಯ ನಿರ್ಭಂದಿತ ಸಗೋತ್ರ ವಿವಾಹಕ್ಕೆ ಪರಿಗಣಿಸಲಾಗುತ್ತದೆ.(ಉದಾಹರಣೆಗೆ ಅಡ್ಡಹೆಸರುಗಳು ಒಂದೇ ಆಗಿದ್ದರೆ ಅಲ್ಲಿ ವಿವಾಹ ನಿಷಿದ್ದದ ನಿಯಮ ಉಂಟು) ಹಿಂದುತ್ವದೊಂದಿಗೆ ಗುರುತಿಸಿಕೊಂಡಿರುವ ಇತರ ಮುಸ್ಲಿಮರ ಕೆಲವು ಗುಂಪುಗಳು ಮತ್ತು ಕ್ರಿಶ್ಚನ್ ರು ಕೂಡಾ ಇದೇ ತೆರನಾದ ಗುಂಪು ಪ್ರಭೇದವನ್ನು ಹೊಂದಿರುವುದು ಭಾರತದ ಉಪಖಂಡದಲ್ಲಿ ಕಾಣುತ್ತದೆ.