The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷಿಣಿಸುತಿದ್ದೆ , ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ರಾಘವಾಂಕ :-ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ. ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ವೀರಶೈವ ಕವಿ.
ಪೈ ದಿನವು ಗಣಿತದ ಸ್ಥಿರ π (pi) ನ ವಾರ್ಷಿಕ ಆಚರಣೆಯಾಗಿದೆ. 3, 1, ಮತ್ತು 4 π ಯ ಮೊದಲ ಮೂರು ಪ್ರಮುಖ ಅಂಕೆಗಳು ಆಗಿರುವುದರಿಂದ ಪೈ ಡೇ ಮಾರ್ಚ್ 14 ರಂದು (3/14 ತಿಂಗಳ / ದಿನ ದಿನಾಂಕ ಸ್ವರೂಪದಲ್ಲಿ) ಆಚರಿಸಲಾಗುತ್ತದೆ.2009 ರಲ್ಲಿ ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪೈ ದಿನದ ಹೆಸರನ್ನು ಬೆಂಬಲಿಸಿದರು. ಪೈ ಅಂದಾಜು ದಿನವನ್ನು ಜುಲೈ 22 ರಂದು (22/7 ದಿನ / ತಿಂಗಳ ದಿನಾಂಕ ಸ್ವರೂಪದಲ್ಲಿ) ಆಚರಿಸಲಾಗುತ್ತದೆ, ಏಕೆಂದರೆ 22/7 ಭಾಗವು π ಯ ಸಾಮಾನ್ಯ ಅಂದಾಜುಯಾಗಿದೆ, ಇದು ಆರ್ಕಿಮಿಡೀಸ್ನಿಂದ ಎರಡು ದಶಮಾಂಶ ಸ್ಥಳಗಳು ಮತ್ತು ದಿನಾಂಕಗಳಿಗೆ ನಿಖರವಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು jhaನಿಸಿದವ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್ಕಿನ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ.
ಭಾರತದಲ್ಲಿ ಬ್ರಿಟಿಷ್ ಆಡಳಿತದ ವೇಳೆಯಲ್ಲಿ, ಉಪ್ಪಿನ ಮೇಲೆ ವಿಧಿಸಿದ ಕರವನ್ನು ವಿರೋಧಿಸಿ ಮಹಾತ್ಮ ಗಾಂಧಿಯವರು ನಡೆಸಿದ ಸತ್ಯಾಗ್ರಹ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹ ಅಥವಾ ದಾಂಡಿ ಯಾತ್ರೆ ಎನ್ನಲಾಗುತ್ತದೆ. ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರು ತಮ್ಮಅನುಯಾಯಿಗಳೊಡನೆ, ಸಬರಮತಿ ಆಶ್ರಮದಿಂದ ದಾಂಡಿಯವರೆಗಿನ ೨೪೦ ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು.ಮಾರ್ಗ ಮದ್ಯ ಆನಂದ ಆಶ್ರಮ ಸ್ಥಾಪಿಸಿದರು ಅಲ್ಲಿ ಮೋತಿಲಾಲ್ ನೆಹರು ಉದ್ಘಾಟನೆ ಮಾಡಿದರು ಇಲ್ಲಿ ಈ ಕರದ ವಿರೋಧದ ಸಂಕೇತವಾಗಿ ನಿಬಂಧನೆಯ ವಿರುದ್ಧವಾಗಿ ಉಪ್ಪನ್ನು ತಯಾರಿಸಿದರು. ಈ ಚಳುವಳಿಯು ೧೯೩೦ನೇ ಇಸವಿಯ ಮಾರ್ಚ್ ೧೨ ರಿಂದ ಏಪ್ರಿಲ್ ೬ರವರಗೆ ನಡೆಯಿತು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಅಮೀರ್ ಹುಸೇನ್ ಖಾನ್(ಹಿಂದಿ:आमिर ख़ान, ಉರ್ದು: عامر حسین خان,) ಮಾರ್ಚ್ 14 1965ರಂದು ಜನಿಸಿದರು. ಭಾರತೀಯ ಸಿನಿಮಾ ನಟ, ನಿರ್ದೇಶಕ ಮತ್ತು ನಿರ್ಮಾಪಕ ವಿಮರ್ಶಾತ್ಮಕವಾಗಿ ಮತ್ತು ವಾಣೀಜ್ಯೀವಾಗಿ ಯಶಸ್ವಿಯಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ, ಮತ್ತು ತಮ್ಮ ಸ್ವಂತ ಪರಿಶ್ರಮದಿಂದಲೇ ಬಾಲಿವುಡ್ನಲ್ಲಿ ಮುಂಚೂಣಿಯ ನಟರಾಗಿದ್ದಾರೆ. ಇವರ ಚಿಕ್ಕಪ್ಪ ನಾಸಿರ್ ಹುಸೇನ್ರ ಚಿತ್ರ ಯಾದೋಂಕಿ ಬಾರಾತ್ (1973)ನಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು, ಇದಾಗಿ ಹನ್ನೊಂದು ವರ್ಷದ ನಂತರ ಹೋಲಿ (1984) ಚಿತ್ರದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು ಮತ್ತು ಮೊದಲ ವಾಣಿಜ್ಯೀಕವಾಗಿ ಯಶಸ್ವಿಯಾದ ಮೊದಲ ಚಿತ್ರ ಖಯಾಮತ್ ಸೆ ಖಯಾಮತ್ ತಕ್ (1988).
ಆಲ್ಕೆಮಿ ಎಂಬ ಪದವನ್ನು, ಅರೇಬಿಕ್ ಪದ ಅಲ್-ಕಿಮಿಯಾ (الكيمياء)ದಿಂದ ವ್ಯುತ್ಪನ್ನವಾದದ್ದಾಗಿದ್ದು, ಬೆರಕೆ/ಕೀಳು ಲೋಹಗಳನ್ನು ಚಿನ್ನ/ಸ್ವರ್ಣವನ್ನಾಗಿ ಪರಿವರ್ತಿಸುವ ವಿಧಾನಗಳ ಬಗ್ಗೆ, "ದೀರ್ಘಾಯಸ್ಸಿನ ಸಿದ್ಧರಸ"ದ ತಯಾರಿಕೆಯ ಬಗ್ಗೆ ಸಂಶೋಧನೆ, ಸರ್ವೋತ್ಕೃಷ್ಠ ಜ್ಞಾನ ಪಡೆಯುವ ಯತ್ನ ರಸವಾದಿ/ರಸಸಿದ್ಧಾಂತಿಯ ಅಭಿವೃದ್ಧಿಯನ್ನೂ ಒಳಗೊಂಡು ಇನ್ನಿತರ ಅಸಾಧಾರಣ ಗುಣಲಕ್ಷಣಗಳನ್ನು ಹೊಂದಿರುವಂತಹಾ ವಸ್ತುಗಳ ರಚನೆಗಳ ಬಗ್ಗೆ ಕೇಂದ್ರೀಕೃತವಾದ ಸಿದ್ಧಾಂತ ಹಾಗೂ ಒಂದು ಪ್ರಾಚೀನ ಪದ್ಧತಿಯಾಗಿದೆ. ರಸವಿದ್ಯೆಯ ಪ್ರಾಯೋಗಿಕ ಅಂಶಗಳು ಆಧುನಿಕ ಅಜೈವಿಕ ರಸಾಯನಶಾಸ್ತ್ರದ ಮೂಲಭೂತ ಅಂಶಗಳ ತಿಳುವಳಿಕೆ ನೀಡಿದ್ದು, ಸಂಬಂಧಪಟ್ಟ ಪ್ರಕ್ರಿಯೆಗಳು, ಉಪಕರಣಗಳು ಹಾಗೂ ಈಗಿನ ಅನೇಕ ವಸ್ತುಗಳ ಗುರುತಿಸುವಿಕೆ ಹಾಗೂ ಬಳಕೆಯ ಬಗ್ಗೆ ತಿಳಿದುಬರಲು ಕಾರಣವಾಗಿವೆ. ಪ್ರಾಚೀನ ಈಜಿಪ್ಟ್, ಮೆಸೊಪೊಟೇಮಿಯಾ (ಆಧುನಿಕ ಇರಾಕ್), ಭಾರತ (ಆಧುನಿಕ ಭಾರತೀಯ ಉಪಖಂಡ), ಪರ್ಷಿಯ (ಆಧುನಿಕ ಇರಾನ್), ಚೀನಾ, ಜಪಾನ್, ಕೊರಿಯಾ, ಪ್ರಾಚೀನ ಗ್ರೀಕ್-ರೋಮನ್ ವಿಶ್ವ, ಮಧ್ಯಯುಗೀಯ ಮಹಮ್ಮದೀಯ ವಿಶ್ವ, ಹಾಗೂ ಆಗಿನ ಮಧ್ಯಯುಗೀಯ ಯೂರೋಪ್ಗಳಲ್ಲಿ 20ನೇ ಶತಮಾನದವರೆಗೆ ಕನಿಷ್ಠ 2,500 ವರ್ಷಗಳ ಕಾಲ ವ್ಯಾಪಿಸಿದ ಶಾಲೆಗಳು ಹಾಗೂ ಸಿದ್ಧಾಂತೀಯ ವ್ಯವಸ್ಥೆಗಳ ಸಂಕೀರ್ಣ ಜಾಲಗಳಲ್ಲಿ ರಸವಿದ್ಯೆಯು ಬಳಕೆಯಲ್ಲಿತ್ತು.
ಟಿಪ್ಪು ಸಾಹಿಬ್ ಎಂದೂ ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್ (೧೭೫೩ - ಮೇ ೪, ೧೭೯೯), ೧೭೮೨ ರಿಂದ ಮೈಸೂರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟೀಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ-ಮೈಸೂರ್ (ಮೈಸೂರ ಹುಲಿ) ಎಂಬ ಬಿರುದು ಉಂಟು. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.
ಈ ಲೇಖನ ಸಮಾಜ ವಿಜ್ಞಾನದ ಬಗ್ಗೆ. ಅರ್ಥಶಾಸ್ತ್ರ ಪದದ ಇತರ ಬಳಕೆಗಳಿಗಾಗಿ ಅರ್ಥಶಾಸ್ತ್ರ (ದ್ವಂದ್ವ ನಿವಾರಣೆ) ನೋಡಿ.ಅರ್ಥಶಾಸ್ತ್ರವು ಸರಕುಗಳ ಮತ್ತು ಸೇವೆಗಳ ಉತ್ಪಾದನೆ, ಹಂಚುವಿಕೆ ಮತ್ತು ಬಳಕೆಗಳನ್ನು ಅಧ್ಯಯನ ಮಾಡುವ ಒಂದು ಸಮಾಜ ವಿಜ್ಞಾನ. ಪ್ರಚಲಿತ ಆರ್ಥಿಕ ವಿನ್ಯಾಸಗಳು, ಭೌತಿಕ ವಿಜ್ಞಾನಗಳಿಗೆ ಹೆಚ್ಚಿನ ಸಮಾನ ಧರ್ಮವುಳ್ಳ ಒಂದು ಪ್ರಾಯೋಗಿಕ ಹಾದಿ ಬಳಸುವ ಒಂದು ಅಪೇಕ್ಷೆಗೆ ಬದ್ಧವಾಗಿ, ೧೯ನೇ ಶತಮಾನದಲ್ಲಿ ತಡವಾಗಿ ರಾಜಕೀಯ ಆರ್ಥಿಕ ವ್ಯವಸ್ಥೆಯ ವಿಶಾಲವಾದ ವ್ಯಾಪ್ತಿಯಿಂದ ಹೊರಹೊಮ್ಮಿದವು.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು.
ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ 'ರಾಜ'ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು, ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷಣೆ ಅತ್ಯಗತ್ಯವಾಗಿದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಪೌರನೆಂದರೆ ಪೌರತ್ವ (ದೇಶ ಅಥವಾ ನಗರದಂತಹ ಒಂದು ರಾಜಕೀಯ ಸಮುದಾಯದಲ್ಲಿ ಸದಸ್ಯತ್ವ) ಹೊಂದಿರುವ ಒಬ್ಬ ವ್ಯಕ್ತಿ. ಪೌರತ್ವ] ಅಥವ ನಾಗರಿಕತ್ವವೆಂದರೆ ಒಂದು ಪದ್ಧತಿ ಅಥವಾ ಕಾನೂನಿನ ಅಡಿಯಲ್ಲಿ ಮಾನ್ಯತೆ ವ್ಯಕ್ತಿಯ ಸ್ಥಿತಿಗೆ ಸದಸ್ಯತ್ವ ಕೊಡಲಾಗುತ್ತದೆ. ಒಂದು ವ್ಯಕ್ತಿಯು ಅನೇಕ ನಾಗರೀಕತ್ವಗಳನ್ನು ಹೊಂದಿರಬಹುದು ಮತ್ತು ಯಾವುದೇ ರಾಜ್ಯದ ಪೌರತ್ವ ಹೊಂದಿಲ್ಲದ ಒಬ್ಬ ವ್ಯಕ್ತಿಯು 'ಸ್ಥಿತಿಯಿಲ್ಲದ'ವ ಎಂದು ಹೇಳಲಾಗುತ್ತದೆ.
ಟೈಟಾನಿಕ್ - ೧೯೧೨ರಲ್ಲಿ ಇಂಗ್ಲೆಂಡಿನ ಸೌತ್ಹ್ಯಾಂಪ್ಟನ್ನಿಂದ ಅಮೆರಿಕಾದ ನ್ಯೂಯಾರ್ಕ್ಗೆ ಹೊರಟು, ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿ ಮುಳುಗಿಹೋದ ಬೃಹತ್ ಹಡಗು. 'ಮುಳುಗಲಾರದ ಹಡಗು' ಎಂದು ಭಾರೀ ಪ್ರಚಾರ ಪಡೆದು ವಿಶ್ವಪ್ರಖ್ಯಾತವಾಗಿದ್ದ ಟೈಟಾನಿಕ್ನ ದಾರುಣ ಅಂತ್ಯ ಮಾನವ ಇತಿಹಾಸದ ಅತ್ಯಂತ ಭೀಕರ ದುರ್ಘಟನೆಗಳಲ್ಲೊಂದು. 'ವೈಟ್ ಸ್ಟಾರ್ ಲೈನ್' ಎಂಬ ಸಾರಿಗೆ ಸಂಸ್ಥೆಯ ಒಡೆತನದಲ್ಲಿದ್ದ ಟೈಟಾನಿಕ್ ಅನ್ನು ಬೆಲ್ಫಾಸ್ಟ್ನ ಹಾರ್ಲಂಡ್ ಅಂಡ್ ವುಲ್ಫ್ ಎಂಬ ಸಂಸ್ಥೆ ನಿರ್ಮಿಸಿತ್ತು.
ಒಪ್ಪಂದ: ಏನನ್ನಾದರೂ ಮಾಡುವುದಾಗಿ ಅಥವಾ ಮಾಡದೆ ಬಿಡುವುದಾಗಿ ಒಂದು ಗೊತ್ತುಪಾಡಿನ ವ್ಯಕ್ತಿಗಳ ಅಥವಾ ಪಕ್ಷಗಳ ನಡುವೆ ಏರ್ಪಟ್ಟ ಏಕಾಭಿಪ್ರಾಯ; ಪರಸ್ಪರ ತಿಳಿವಳಿಕೆ, ನಿರ್ಣಯ, ಷರತ್ತು; ಮನಸ್ಸುಗಳ ಕೂಡಿಕೆ (ಅಗ್ರೀಮೆಂಟ್),ಒಬ್ಬ ಅಥವಾ ಒಂದು ಪಕ್ಷ ಏನನ್ನಾದರೊ ಮಾಡಲು ಇಲ್ಲವೇ ಮಾಡದಿರಲು ಪ್ರಸ್ತಾಪ (ಪ್ರೊಪೋಸಲ್) ಮಾಡಲಾಗಿ, ಇನ್ನೊಬ್ಬ ಅಥವಾ ಇನ್ನೊಂದು ಪಕ್ಷ ಅದನ್ನು ನವೀಕರಿಸಿರುವುದನ್ನು ಅಥವಾ ಅದಕ್ಕೆ ಸಮ್ಮತಿಸಿರುವುದನ್ನು ಮತ್ತು ಆ ಬಗ್ಗೆ ಬರೆಯಲಾದ ಪತ್ರವನ್ನು ಒಪ್ಪಂದ ಎನ್ನಲಾಗುತ್ತದೆ. ಈ ಪದವನ್ನು ನ್ಯಾಯಶಾಸ್ತ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ವ್ಯವಹಾರದ ಮುಕ್ತಾಯ ಎಂಬ ಎರಡರ್ಥದಲ್ಲಿ ಉಪಯೋಗಿಸಲಾಗುತ್ತದೆ. ಅದನ್ನು ಯಾವ ಅರ್ಥದಲ್ಲಿ ಬಳಸಲಾಗಿದೆ ಎಂಬುದನ್ನು ಒಪ್ಪಂದದ ಪತ್ರದ ಸಂದರ್ಭದಿಂದ ತಿಳಿಯಬಹುದು.ಭಾರತದ ಕರಾರು ಕಾಯಿದೆಯಲ್ಲಿ ಒಪ್ಪಂದ ಪದದ ವಿವರಣೆಯುಂಟು.
ಯೂಬಿಸಾಫ್ಟ್ ಮನರಂಜನೆ ಎಸ್ಎ ಫ್ರಾನ್ಸ್ ನ ಮೊನ್ಟ್ರಿಯುವಿಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊ೦ದಿರುವ ಫ್ರೆಂಚ್ ನ ಬಹುರಾಷ್ಟ್ರೀಯ ವೀಡಿಯೊ ಗೇಮ್ ಅಭಿವೃದ್ಧಿಪಡಿಸುವ ಮತ್ತು ಪ್ರಕಾಶಕ ಮತ್ತು ವಿತರಿಸುವ ಕ೦ಪನಿಯಾಗಿದೆ, ಇದು ಅಸ್ಯಾಸಿನ್ಸ್ ಕ್ರೀಡ್, ಫಾರ್ ಕ್ರೈ, ಘೋಸ್ಟ್ ರೆಕಾನ್, ಜಸ್ಟ್ ಡಾನ್ಸ್, ರೈನ್ಬೋ ಸಿಕ್ಸ್, ಪ್ರಿನ್ಸ್ ಆಫ್ ಪರ್ಷಿಯಾ, ರೆಮ್ಯಾನ್ ಮತ್ತು ಸ್ಪಿಂಟರ್ ಸೆಲ್ ಸೆರಿದ೦ತೆ ಹಲವಾರು ಮೆಚ್ಚುಗೆಯ ವಿಡಿಯೋ ಗೇಮ್ ಫ್ರ್ಯಾಂಚೈಸೀಗಳಿಗೆ ಆಟಗಳನ್ನು ಅಭಿವೃದ್ಧಿಪಡೀಸುವಲ್ಲಿ ಹೆಸರುವಾಸಿಯಾಗಿದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಪಗ್ ನಾಯಿಯ ಒಂದು ತಳಿ.ಒಂದು ಸುಕ್ಕುಗತಟ್ಟದ ಸಣ್ಣಮುಚ್ಚಿದಾದ ಮುಖ ಮತ್ತು ಸುರುಳಿಯಾದ ಬಾಲ.ಪಗ್ ತಳಿ ವಿವಿಧ ಬಣ್ಣಗಳಲ್ಲಿ ಬರುತ್ತದೆ.ದಂಡ ಹೊಳಪು ಕೊಟ ಹೊಂದಿದೆ.ಅವುಗಳು ಹೆಚ್ಚಾಗಿ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಇರುತ್ತವೆ.ಅವುಗಳು ಕಾಂಪ್ಯಕ್ಟಚದರದ ದೀಹವನ್ನು ಹೊಂದಿರುತ್ತವೆ ಮತ್ತು ಅಭಿವ್ರದ್ದಿಪಡಿಸಿದ ಸ್ನಾಯಗಳನ್ನು ಹೊಂದಿರುತ್ತವೆ.ಪಗ್ಸ್ ೧೬ನೀ ಶತಮಾನದಲ್ಲಿ ಚೀನಾದಿಂದ ಯುರೂಪಿಗೆ ತಂದಿದ್ದ.ಪಗ್ಸ್ ಗಳು ಪಶ್ಚಿಮ ಯುರೊಪನ ನೆದಲ್ಂದ್ಸ್ನ ಕಿತ್ತಳೆ ಮನೆಯ ಮತ್ತು ಸ್ತುವಟ್ರ್ ಮನೆಯಲ್ಲಿ ಜನಪ್ರಿಯಗೊಳಿಸಿದರು.೧೯ನೀ ಶತಮಾನದಲ್ಲಿ ರಾಣಿ ವಿಕ್ಟೂರಿಯಾ ಯುನೈಟಡ ಕಿಂಗ್ದ್ ಮ್ ರಲ್ಲಿ ಪಗ್ಸ್ ಒಂದು ತೀವ್ರಾಸಕ್ತಯ.ಅವರು ಈ ನಾಯಿಗಳನ್ನು ರಾಯಲ್ ಕುಟುಂಬದ ಇತರ ಸದಸ್ಯರಿಗೆ ತಲುಪಿಸಿದ್ದರು.ಪಗ್ಸ್ ಬೆರೆಯುವ ಮತ್ತು ಶಾಂತ ಬಡನಾಡಿ ನಾಯಿಗಳು ಎಂದು ಕರೆಯಲಾಗುತ್ತದೆ.೨೦೦೪ರಲ್ಲಿ ನಡೆದ ವಿಶ್ವದ ಶ್ವಾನ ಪ್ರದಶ್ರನದಲ್ಲಿ ಪಗ್ ಅತುತ್ತಮ ನಾಯಿ ಎಂದು ನಿಣಯಿಸಲಾಯಿತು...
ಸಾಲುಮರದ ತಿಮ್ಮಕ್ಕ - ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿರುವ ಒಬ್ಬ ಭಾರತೀಯ ಪರಿಸರವಾದಿ.ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆಯಾಗಿದ್ದುಕೊಂಡು ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ ಅಲ್ಲದೆ ಈಕೆ ಮುಂದಿನ ಪೀಳಿಗೆಯ ಒಳಿತಿಗಾಗಿ ಮರಗಳಿಗೆ ನೀರುಣಿಸಿ ಬೆಳೆಸಿದದ್ದಾಳೆ. ಅವರ ಈ ಕೆಲಸವನ್ನು ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿಯಿತ್ತು ಸನ್ಮಾನಿಸಲಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್ ಮತ್ತು ಓಕ್ಲ್ಯಾಂಡ್, ಕ್ಯಾಲಿಫೋರ್ನಿಯಗಳಲ್ಲಿ ಸ್ಥಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕರವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕ ಅವರನ್ನು ಆಧರಿಸಿ ಇಡಲಾಗಿದೆ.
[[ ಕೃಷಿ ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಕೃಷಿಯು ಮಾನವ ನಾಗರಿಕತೆಯ ಉಗಮಕ್ಕೆ ಕಾರಣವಾದ ಪ್ರಮುಖ ಬೆಳವಣಿಗೆಯಾಗಿತ್ತು. ಅಷ್ಟೇ ಅಲ್ಲ, ಪಳಗಿಸಿದ ಪ್ರಾಣಿಗಳು ಮತ್ತು ಸಸ್ಯಗಳ (ಅಂದರೆ, ಬೆಳೆಗಳ) ಸಂಗೋಪನೆಯಿಂದಾಗಿ ಆಹಾರದ ಮಿಗುತಾಯಗಳು ಸೃಷ್ಟಿಯಾಗುವುದರಿಂದ ಅದು ಹೆಚ್ಚು ಜನಭರಿತವಾದ ಮತ್ತು ಶ್ರೇಣೀಕೃತವಾದ ಸಮಾಜಗಳ ಬೆಳವಣಿಗೆಗೆ ಕಾರಣವಾಯಿತು.
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು
ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) (All India Council for Technical Education (AICTE)) ಎಂಬುದು ಮಾನವ ಸಂಪನ್ಮೂಲ ಸಂಪನ್ಮೂಲ ಸಚಿವಾಲಯದ, ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ತಾಂತ್ರಿಕ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದೆ. ನವೆಂಬರ್ 1945 ರಲ್ಲಿ ಸ್ಥಾಪನೆಯಾದ ಸಲಹಾ ಮಂಡಳಿ ಮತ್ತು ನಂತರ 1987 ರಲ್ಲಿ ಸಂಸತ್ತಿನ ಕಾಯಿದೆಯಡಿ ಶಾಸನಬದ್ಧ ಸ್ಥಾನಮಾನವನ್ನು ನೀಡಲ್ಪಟ್ಟಿತು, ಭಾರತದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ನಿರ್ವಹಣಾ ಶಿಕ್ಷಣ ವ್ಯವಸ್ಥೆಯ ಸರಿಯಾದ ಯೋಜನೆ ಮತ್ತು ಸಂಘಟಿತ ಅಭಿವೃದ್ಧಿಗೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಯು ಕಾರಣವಾಗಿದೆ. ಎಐಸಿಟಿಇ(AICTE) ಯು ಭಾರತೀಯ ಸಂಸ್ಥೆಗಳ ನಿರ್ದಿಷ್ಟ ವಿಭಾಗಗಳ ಅಡಿಯಲ್ಲಿ ಸ್ನಾತಕೋತ್ತರ ಮತ್ತು ಪದವಿ ಕಾರ್ಯಕ್ರಮಗಳನ್ನು ಅದರ ಕಾಯ್ದೆಯ ಪ್ರಕಾರ ಮಾನ್ಯಮಾಡುತ್ತದೆ.ಇದು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸ್ನಾತಕ ಆಧ್ಯಯನ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಮತ್ತು ಸಂಶೊಧನಾ ಆಧ್ಯಯನ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ [ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( ಸಿಬಿಎಸ್ಇ )] ಸಾರ್ವಜನಿಕ ಮತ್ತು ಖಾಸಗಿ ಶಾಲೆಗಳಿಗೆ ಭಾರತದಲ್ಲಿ ರಾಷ್ಟ್ರೀಯ ಮಟ್ಟದ ಶಿಕ್ಷಣ ಮಂಡಳಿಯಾಗಿದ್ದು, ಇದನ್ನು ಕೇಂದ್ರ ಸರ್ಕಾರವು ನಿಯಂತ್ರಿಸುತ್ತದೆ ಮತ್ತು ನಿರ್ವಹಿಸುತ್ತದೆ. ಸಿಬಿಎಸ್ಇ ಅಂಗಸಂಸ್ಥೆ ಹೊಂದಿರುವ ಎಲ್ಲಾ ಶಾಲೆಗಳನ್ನು ಎನ್ಸಿಇಆರ್ಟಿ ಪಠ್ಯಕ್ರಮವನ್ನು ಮಾತ್ರ ಅನುಸರಿಸಲು ಕೇಳಿದೆ. ಭಾರತದಲ್ಲಿ ಅಂದಾಜು 20,299 ಶಾಲೆಗಳು ಮತ್ತು 28 ವಿದೇಶಗಳಲ್ಲಿ 220 ಶಾಲೆಗಳು ಸಿಬಿಎಸ್ಇಗೆ ಸಂಯೋಜಿತವಾಗಿವೆ.
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ.
ಒಂದು ಕಾಯದ ಮೇಲೆ ಪ್ರಯೋಗವಾಗುವ ನಿವ್ವಳ ಬಲವು ಚಲನೆತಯ ನೇರದಲ್ಲಿ ವರ್ತಿಸಿದಾಗ ಆಥವ ಶೂನ್ಯವಾದಾಗ ಆ ಕಾಯವು ಸರಳ ರೇಖೆಯಲ್ಲಿ ಚಲಿಸುತ್ತದೆ.ನಿವ್ವಳ ಬಲವು ಚಲನೆಯ ನೇರಕ್ಕೆ ಯಾವಾಗಲೂ ಒಂದು ಕೋನದಲ್ಲಿ ಅ೦ದರೆ ಓರೆಯಾಗಿ ವರ್ತಿಸಿದಾಗ ಕಾಯವು ತನ್ನ ಚಲನೆ ನೇರವನ್ನು ಬದಲಿಸಿ ವಕ್ರಪಥದಲ್ಲಿ ಚಲಿಸತೊಡಗುತ್ತದೆ.ವಕ್ರಪಥದಲ್ಲಿನ ಚಲನೆಗೆ ಅತಿ ಸರಳ ಉದಾಹರಣೆಯೆ೦ದರೆ ಏಕರೂಪ ವೃತ್ತೀಯ ಚಲನೆ.ವೃತೀಯ ಪಥದಲ್ಲಿ ಸ್ಥಿರ ಜವದಿ೦ದ ಆಗುತ್ತಿರುವ ಚಲನೆಯೇ ಏಕರೂಪ ವೃತ್ತೀಯ ಚಲನೆ. ಒಂದು ಸಣ್ಣ ಕಲ್ಲು ಅಥವಾ ಚೆ೦ಡಿಗೆ ದಾರ ಕಟ್ಟಿ ನಿಮ್ಮ ತಲೆಯ ಸುತ್ತ ಅದನ್ನು ಒ೦ದೇ ರೀತಿಯಲ್ಲಿ ಸುತ್ತಿಸಿದ್ದೇ ಆದರೆ ಅದು ವೃತೀಯ ಚಲನೆ ಆಗುತ್ತದೆ ಚ೦ದ್ರ ಭೂಮಿಯ ಸುತ್ತ ಪರಿಭ್ರಮಿಸುತ್ತದೆ.ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುತ್ತದೆ.ಇವುಗಳ ಪಥಗಳು ಸರಿ ಸುಮಾರು ವೃತ್ತಗಳು.ಇವು ಏಕವೃತ್ತೀಯ ಚಲನೆಗೆ ಕೆಲವು ಉದಾಹರಣೆಗಳು. ವೃತ್ತೀಯ ಚಲನೆ ಒಂದು ಸ್ಥಳೀಯ ಚಿಲ್ಲರೆ ವ್ಯಾಪಾರ ಮಾಡುತ್ತಿರುವ ವೈದ್ಯಕೀಯ ಪೂರೈಕೆಗಳನ್ನು ಮತ್ತು ಉಪಕರಣವನ್ನು ಒದಗಿಸುತ್ತದೆ.
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು. ವಿಶ್ವ ಆರೋಗ್ಯ ಸಂಸ್ಥೆಯ ೧೯೪೫ರ ಹೇಳಿಕೆಯ ಪ್ರಕಾರ "ಆರೋಗ್ಯವೆಂದರೆ ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ - ಕೇವಲ ರೋಗ, ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ"ಆರೋಗ್ಯವೇ ಭಾಗ್ಯ.. ಮಾನವನಿಗೆ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವಾಗ ಸ್ವಯಂ ನಿರ್ವಹಿಸುವ ಸಾಮರ್ಥ್ಯ ಇದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.