The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
ಅನುಮತ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಅಭಿಪ್ರಾಯ ಲೇಖನಕ್ಕಾಗಿ ಇಲ್ಲಿ ನೋಡಿ.ಸಾಮಾನ್ಯ ಮಾತಿನಲ್ಲಿ, ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ಇನ್ನೊಬ್ಬನ ಪ್ರಸ್ತಾಪ ಅಥವಾ ಬಯಕೆಗಳಿಗೆ ಒಪ್ಪಿದಾಗ ಒಪ್ಪಿಗೆ (ಸಮ್ಮತಿ) ಉಂಟಾಗುತ್ತದೆ. ಒಪ್ಪಿಗೆಯ ಪರಿಕಲ್ಪನೆಯನ್ನು ಕಾನೂನು, ವೈದ್ಯಶಾಸ್ತ್ರ ಮತ್ತು ಲೈಂಗಿಕ ಸಂಬಂಧಗಳನ್ನು ಒಳಗೊಂಡಂತೆ, ಹಲವಾರು ಪ್ರಮುಖ ಸಂದರ್ಭಗಳಲ್ಲಿ ಕಾರ್ಯಗತಗೊಳಿಸಲಾಗಿದೆ.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷಿಣಿಸುತಿದ್ದೆ , ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಒಂದು ಕಾಯದ ಮೇಲೆ ಪ್ರಯೋಗವಾಗುವ ನಿವ್ವಳ ಬಲವು ಚಲನೆತಯ ನೇರದಲ್ಲಿ ವರ್ತಿಸಿದಾಗ ಆಥವ ಶೂನ್ಯವಾದಾಗ ಆ ಕಾಯವು ಸರಳ ರೇಖೆಯಲ್ಲಿ ಚಲಿಸುತ್ತದೆ.ನಿವ್ವಳ ಬಲವು ಚಲನೆಯ ನೇರಕ್ಕೆ ಯಾವಾಗಲೂ ಒಂದು ಕೋನದಲ್ಲಿ ಅ೦ದರೆ ಓರೆಯಾಗಿ ವರ್ತಿಸಿದಾಗ ಕಾಯವು ತನ್ನ ಚಲನೆ ನೇರವನ್ನು ಬದಲಿಸಿ ವಕ್ರಪಥದಲ್ಲಿ ಚಲಿಸತೊಡಗುತ್ತದೆ.ವಕ್ರಪಥದಲ್ಲಿನ ಚಲನೆಗೆ ಅತಿ ಸರಳ ಉದಾಹರಣೆಯೆ೦ದರೆ ಏಕರೂಪ ವೃತ್ತೀಯ ಚಲನೆ.ವೃತೀಯ ಪಥದಲ್ಲಿ ಸ್ಥಿರ ಜವದಿ೦ದ ಆಗುತ್ತಿರುವ ಚಲನೆಯೇ ಏಕರೂಪ ವೃತ್ತೀಯ ಚಲನೆ. ಒಂದು ಸಣ್ಣ ಕಲ್ಲು ಅಥವಾ ಚೆ೦ಡಿಗೆ ದಾರ ಕಟ್ಟಿ ನಿಮ್ಮ ತಲೆಯ ಸುತ್ತ ಅದನ್ನು ಒ೦ದೇ ರೀತಿಯಲ್ಲಿ ಸುತ್ತಿಸಿದ್ದೇ ಆದರೆ ಅದು ವೃತೀಯ ಚಲನೆ ಆಗುತ್ತದೆ ಚ೦ದ್ರ ಭೂಮಿಯ ಸುತ್ತ ಪರಿಭ್ರಮಿಸುತ್ತದೆ.ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುತ್ತದೆ.ಇವುಗಳ ಪಥಗಳು ಸರಿ ಸುಮಾರು ವೃತ್ತಗಳು.ಇವು ಏಕವೃತ್ತೀಯ ಚಲನೆಗೆ ಕೆಲವು ಉದಾಹರಣೆಗಳು. ವೃತ್ತೀಯ ಚಲನೆ ಒಂದು ಸ್ಥಳೀಯ ಚಿಲ್ಲರೆ ವ್ಯಾಪಾರ ಮಾಡುತ್ತಿರುವ ವೈದ್ಯಕೀಯ ಪೂರೈಕೆಗಳನ್ನು ಮತ್ತು ಉಪಕರಣವನ್ನು ಒದಗಿಸುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ:NITI=National Institution for Transforming India)ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ ೨,೨೦೧೫ರಲ್ಲಿ ಸ್ಥಾಪಿಸಲಾಗಿದೆ.. ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ರುಮಾಲು ಬಟ್ಟೆಯ ಸುತ್ತುವಿಕೆಯನ್ನು ಆಧರಿಸಿದ ಒಂದು ಬಗೆಯ ತಲೆಯುಡುಗೆ. ಅನೇಕ ಸ್ವರೂಪಗಳನ್ನು ಹೊಂದಿರುವ ಇದನ್ನು ವಿವಿಧ ದೇಶಗಳ ಪುರುಷರು ಸಾಂಪ್ರದಾಯಿಕ ತಲೆಯುಡುಗೆಯಾಗಿ ಧರಿಸುತ್ತಾರೆ. ರುಮಾಲು ಧರಿಸುವ ಮಹತ್ವದ ಸಂಪ್ರದಾಯಗಳನ್ನು ಹೊಂದಿರುವ ಸಮುದಾಯಗಳನ್ನು ಭಾರತೀಯ ಉಪಖಂಡ, ಅಫ಼್ಘಾನಿಸ್ತಾನ, ಆಗ್ನೇಯ ಏಷ್ಯಾ, ಅರಬ್ಬೀ ಪರ್ಯಾಯದ್ವೀಪ, ಮಧ್ಯಪ್ರಾಚ್ಯ, ನಿಕಟಪ್ರಾಚ್ಯ, ಮಧ್ಯ ಏಷ್ಯಾ, ಉತ್ತರ ಆಫ಼್ರಿಕಾ, ಆಫ಼್ರಿಕಾದ ಕೊಂಬು, ಉತ್ತರ ಅಮೇರಿಕಾ, ಮತ್ತು ಸ್ವಾಹಿಲಿ ಕರಾವಳಿಯ ಭಾಗಗಳಲ್ಲಿ ಕಾಣಬಹುದು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ರಷ್ಯಾ (Russian: Россия), ಅಧಿಕೃತವಾಗಿ ರಸಿಸ್ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ) ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
ದನಗಳು ದೊಡ್ಡ ಪಳಗಿಸಿದ ಗೊರಸುಳ್ಳ ಪ್ರಾಣಿಗಳ ಅತಿ ಸಾಮಾನ್ಯ ವಿಧ. ಅವು ಬೋವಿನಿ ಉಪಕುಟುಂಬದ ಒಂದು ಪ್ರಮುಖ ಆಧುನಿಕ ಸದಸ್ಯವಾಗಿವೆ, ಬೋಸ್ ಪ್ರಜಾತಿಯ ಅತಿ ವ್ಯಾಪಕ ಜಾತಿಯಾಗಿವೆ, ಮತ್ತು ಅತಿ ಸಾಮಾನ್ಯವಾಗಿ ಒಟ್ಟಾರೆಯಾಗಿ ಬೋಸ್ ಪ್ರೀಮಿಗೇನ್ಯೂಸ್ ಎಂದು ವರ್ಗೀಕರಿಸಲ್ಪಡುತ್ತವೆ. ದನಗಳನ್ನು ಮಾಂಸಕ್ಕಾಗಿ (ಗೋಮಾಂಸ ಮತ್ತು ವೀಲ್) ಜಾನುವಾರುಗಳಾಗಿ, ಹಾಲು ಮತ್ತು ಇತರ ಕ್ಷೀರೋತ್ಪನ್ನಗಳಿಗಾಗಿ ಹೈನು ಪ್ರಾಣಿಗಳಾಗಿ, ಮತ್ತು ಭಾರ ಎಳೆಯುವ ಪ್ರಾಣಿಗಳಾಗಿ (ಎತ್ತುಗಳು ಅಥವಾ ಗವ್ಯ ಪ್ರಾಣಿಗಳು) (ಬಂಡಿಗಳು, ನೇಗಿಲುಗಳು ಮತ್ತು ಇತ್ಯಾದಿಗಳನ್ನು ಎಳೆಯುವುದಕ್ಕಾಗಿ) ಬಳಸಲಾಗುತ್ತದೆ.
ಕೋಲಿ ಸಿಬ್ಬರ್ (6 ನವೆಂಬರ್ 1671 - 11 ಡಿಸೆಂಬರ್ 1757) ಒಬ್ಬ ಇಂಗ್ಲಿಷ್ ನಟ-ನಿರ್ವಾಹಕ, ನಾಟಕಕಾರ ಮತ್ತು ಕವಿ ಪ್ರಶಸ್ತಿ ವಿಜೇತರಾಗಿದ್ದರು. ಅವರ ವರ್ಣಮಯ ಆತ್ಮಚರಿತ್ರೆ ಅಪಾಲಜಿ ಫಾರ್ ದಿ ಲೈಫ್ ಆಫ್ ಕೋಲಿ ಸಿಬ್ಬರ್ (1740) ತನ್ನ ಜೀವನವನ್ನು ವೈಯಕ್ತಿಕ, ಉಪಾಖ್ಯಾನ ಮತ್ತು ಹಬ್ಬುವ ಶೈಲಿಯಲ್ಲಿ ವಿವರಿಸುತ್ತದೆ.ಡ್ರುರಿ ಲೇನ್ನಲ್ಲಿ ತನ್ನ ಸ್ವಂತ ಕಂಪನಿಗೆ 25 ನಾಟಕಗಳನ್ನು ಅವರು ಬರೆದರು, ಅವುಗಳಲ್ಲಿ ಅರ್ಧದಷ್ಟು ವಿವಿಧ ಮೂಲಗಳಿಂದ ಅಳವಡಿಸಲ್ಪಟ್ಟಿವೆ, ಇದು "ಶಿಲುಬೆಗೇರಿಸಿದ ಮೋಲಿಯೆರ್ [ಮತ್ತು] ಅದೃಷ್ಟಹೀನ ಷೇಕ್ಸ್ಪಿಯರ್" ನ "ಶೋಚನೀಯ ಮೃದುಗೊಳಿಸುವಿಕೆ" ಯನ್ನು ವಿಮರ್ಶಿಸಲು ರಾಬರ್ಟ್ ಲೋವೆ ಮತ್ತು ಅಲೆಕ್ಸಾಂಡರ್ ಪೋಪ್ರನ್ನು ಇತರರಲ್ಲಿ ದಾರಿ ಮಾಡಿಕೊಟ್ಟಿತು.ಅವರು ತಮ್ಮನ್ನು ಮೊದಲ ಮತ್ತು ಅಗ್ರಗಣ್ಯ ನಟ ಎಂದು ಪರಿಗಣಿಸಿದರು ಮತ್ತು ಹಾಸ್ಯಮಯ ಫಾಪ್ ಭಾಗಗಳಲ್ಲಿ ಹೆಚ್ಚಿನ ಯಶಸ್ಸನ್ನು ಹೊಂದಿದ್ದರು, ಆದರೆ ದುರಂತ ನಟನಾಗಿ ಅವನು ನಿರಂತರವಾಗಿ ಹಾಸ್ಯಾಸ್ಪದವಾಗಿದ್ದನು.ಸಿಬ್ಬರ್ ಅವರ ಕಟುವಾದ, ಬಹಿರ್ಮುಖಿಯಾದ ವ್ಯಕ್ತಿತ್ವವು ಅವರ ಸಮಕಾಲೀನರೊಂದಿಗೆ ಚೆನ್ನಾಗಿ ಕುಳಿತುಕೊಳ್ಳಲಿಲ್ಲ ಮತ್ತು ಅವರು ರುಚಿಲ್ಲದ ನಾಟಕೀಯ ನಿರ್ಮಾಣಗಳು, ಮೋಸದ ವ್ಯವಹಾರ ವಿಧಾನಗಳು ಮತ್ತು ಸಾಮಾಜಿಕ ಮತ್ತು ರಾಜಕೀಯ ಅವಕಾಶವಾದಿಗಳ ಬಗ್ಗೆ ಹೆಚ್ಚಾಗಿ ಆರೋಪಿಸಿದರು, ಅದು ಅವರಿಗೆ ಉತ್ತಮವಾದ ಕವಿಗಳಿಗಿಂತಲೂ ಲಾಭದಾಯಕತೆಯನ್ನು ಪಡೆದಿತ್ತು ಎಂದು ಭಾವಿಸಲಾಗಿತ್ತು. ಅವನು ಅಲೆಕ್ಸಾಂಡರ್ ಪೋಪ್ನ ವಿಡಂಬನಾತ್ಮಕ ಕವಿತೆ ದಿ ಡನ್ಸಿಯಾಡ್ ಎಂಬ ಮುಖ್ಯ ಗುರಿಯಾದ ಮುಖ್ಯಸ್ಥನಾದ ಡನ್ಸೆ ಆಗಿದ್ದಾಗ ಅವಮಾನಕರ ಖ್ಯಾತಿಗೆ ಏರಿತು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಇದೇ ಆರ್ಥದ ಬ್ರಹ್ಮಾಂಡ ಪುಟ ಬೇರೆ ಇದೆ.ಗುರುತ್ವಾಕರ್ಷಣದಿಂದ ಒಟ್ಟಾಗಿರುವ ಅನೇಕ ನಕ್ಷತ್ರಗಳು, ಅವುಗಳ ಮಧ್ಯೆ ಇರುವ ವಾಯು, ಧೂಳು ಮತ್ತು ಅಜ್ಞಾತ ಕಪ್ಪು ದ್ರವ್ಯದ (en:Dark Matter)ಬೃಹತ ಗಾತ್ರದ ಸಮೂಹ -ಬ್ರಹ್ಮಾಂಡ; ನಕ್ಷತ್ರಗಳ ಗುಂಪು ಎರಡು ಅಥವಾ ಹೆಚ್ಚು ನಕ್ಷತ್ರಗಳ ಗುಂಪಿಗೆನಕ್ಷತ್ರಪುಂಜಗಳು; (ನಕ್ಷತ್ರಕೂಟ:ಉಪಯೋಗದಲ್ಲಿಲ್ಲ -ಜಾತಕ ತಾಳೆ ನೋಡುವಾಗ ಮಾತ್ರಾ ಉಪಯೋಗಿಸುವರು) ಅಥವಾ ತಾರಾಗಣವು ಕೆಲವೇ ನಕ್ಷತ್ರಗಳ ಒಂದು ಗುಂಪು ಎಂದು ಹೆಸರು. ಈ ನಕ್ಷತ್ರಕೂಟಗಳಲ್ಲಿ ಸಾಮಾನ್ಯವಾಗಿ ೧೦ ಮಿಲಿಯನ್ ಇಂದ ೧ ಟ್ರಿಲಿಯನ್ ನಕ್ಷತ್ರಗಳು ಒಂದೇ ಗುರುತ್ವದ ಕೇಂದ್ರಬಿಂದುವಿನ ಸುತ್ತ ಪ್ರದಕ್ಷಣೆ ಮಾಡುತ್ತವೆ. ಸೂರ್ಯ ಮತ್ತು ಸೌರಮಂಡಲ ಇರುವ ನಕ್ಷತ್ರಕೂಟದ ಹೆಸರು ಆಕಾಶಗಂಗೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.