The most-visited ಕನ್ನಡ Wikipedia articles, updated daily. Learn more...
ಶಿವಕುಮಾರ ಸ್ವಾಮಿ (ಜನನ- ಶಿವಣ್ಣ, ೧ ಏಪ್ರಿಲ್ ೧೯೦೭ - ೨೧ ಜನವರಿ ೨೦೧೯) ಒಬ್ಬ ಭಾರತೀಯ ಆಧ್ಯಾತ್ಮಿಕ ನಾಯಕ, ಮಾನವೀಯ ಮತ್ತು ಶಿಕ್ಷಣತಜ್ಞ.ಅವರು ಹಿಂದೂ ಲಿಂಗಾಯತ ಧಾರ್ಮಿಕ ವ್ಯಕ್ತಿಯಾಗಿದ್ದರು ಮತ್ತು ಕರ್ನಾಟಕದ ಸಿದ್ದಗಂಗಾ ಮಠದ ಮಠಾಧಿಪತಿಗಳಾಗಿದ್ದರು. ಅವರು ಶ್ರೀ ಸಿದ್ದಗಂಗ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.ಹಿಂದೂಧರ್ಮದ ಲಿಂಗಾಯತ ಸಂಪ್ರದಾಯದ ಅತ್ಯಂತ ಗೌರವಾನ್ವಿತ ಅನುಯಾಯಿಯಾಗಿದ್ದರು. ಅವರನ್ನು ರಾಜ್ಯದಲ್ಲಿ ನಡೆದಾಡುವ ದೇವರು ಎಂದು ಕೂಡ ಉಲ್ಲೇಖಿಸಲಾಗಿದೆ.ಭಾರತದಲ್ಲಿ ವಾಸಿಸುತ್ತಿದ್ದ ಅತಿ ಪುರಾತನ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಇದನ್ನು ಪೆರುವುದೈಯರ್ ಕೊವಿಲ್ ಅಥವಾ ಬೃಹದೀಶ್ವರ್ ಟೆಂಪಲ್ Tamil: பெருவுடையார் கோவில், peruvuḍaiyār kōvil ?ಅಲ್ಲದೇ ಇದನ್ನು ರಾಜರಾಜೇಶ್ವರಮ್ ಎಂದೂ ಕರೆಯುತ್ತಾರೆ.ಭಾರತದ ರಾಜ್ಯ ತಮಿಳುನಾಡಿನಲ್ಲಿರುವ ತಂಜಾವೂರ್ ನಲ್ಲಿ ಈ ದೇವಾಲಯವಿದೆ.ವಿಶ್ವದಲ್ಲೇ ಸಂಪೂರ್ಣವಾಗಿ ಬೆಣಚು ಶಿಲೆ ಅಥವಾ ಗ್ರ್ಯಾನೈಟ್ ನಲ್ಲಿ ನಿರ್ಮಿತ ಏಕೈಕ ದೇವಾಲಯವಾಗಿದೆ. ಆಗಿನ ಚೋಳರ ಕಾಲದ ಅರಸರ ಆಳ್ವಿಕೆ ಸಮಯದಲ್ಲಿ ವಿಶ್ವಕರ್ಮರಿಂದ ನಿರ್ಮಿತ ಅತ್ಯಂತ ಸೂಕ್ಷ್ಮ ಕಲಾಪ್ರಕಾರವಾಗಿದೆ.ವಿಶ್ವದಲ್ಲಿಯೇ ಇದು ತನ್ನ ಸುಂದರ ಶಿಲ್ಪಕಲೆ ಗೆ ಹೆಸರಾಗಿದೆ. ಇದರ ನಿರ್ಮಾಣವು ಅದರ ಪೋಷಕ ಅರಸು ರಾಜಾರಾಜಾ ಚೋಳ I ಈತನ ಸ್ಮರಣಾರ್ಥ ಕಟ್ಟಿದ ಒಂದು ಪ್ರತಿಬಿಂಬವೆನಿಸಿದೆ.ಭಾರತದ ಹಲವಾರು ವಾಸ್ತುಶಿಲ್ಪ ಕಲೆಗಳಲ್ಲಿ ಅತ್ಯಂತ ವೈಭಯುತವಾದ ಕಟ್ಟಡವಾಗಿದೆ.
ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು.
ಕನಿಷ್ಕ : ಉತ್ತರ ಭಾರತದಲ್ಲಿ ರಾಜ್ಯವಾಳಿದ ಕುಶಾಣ ರಾಜವಂಶದ ಚಕ್ರವರ್ತಿಗಳಲ್ಲಿ ಅತ್ಯಂತ ಶ್ರೇಷ್ಠ, ಪ್ರಸಿದ್ಧ. ಪ್ರಾಚೀನ ಭಾರತದ ಪ್ರದೇಶಗಳಾದ ಮಧ್ಯ ದೇಶ, ಉತ್ತರಾಪಥ ಮತ್ತು ಅಪರಾಂತಗಳು ಇವನ ಆಳ್ವಿಕೆಗೆ ಒಳಪಟ್ಟಿದ್ದುವು. ಪುರ್ವ-ಪಶ್ಚಿಮವಾಗಿ ಬಿಹಾರದಿಂದ ಖೊರಾಸಾನದವರೆಗೂ ಉತ್ತರ-ದಕ್ಷಿಣವಾಗಿ ಖೊತಾನದಿಂದ ಕೊಂಕಣದವರೆಗೂ ಈತನ ಚಕ್ರಾಧಿಪತ್ಯ ಹಬ್ಬಿತ್ತೆಂದು ಹೇಳಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಮಹಾನಗರದ ಕ್ಷೇತ್ರದ ನಾಗರಿಕ ಮತ್ತು ಮೂಲಭೂತ ವ್ಯವಸ್ಥೆಗಳ ಆಸ್ತಿಯ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರದ ಆಡಳಿತಾತ್ಮಕ ಅಂಗವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ):ಯನ್ನು ಆಡಳಿತದ ಅನುಕೂಲಕ್ಕಾಗಿ ತಾಲೂಕುವಾರು ಮಹಾನಗರ ಪಾಲಿಕೆ ರಚನೆ ಮಾಡಲಾಗುವುದು. 01.ಬೆಂಗಳೂರು ಮಹಾನಗರ ಪಾಲಿಕೆ 02.ಕೆಂಗೇರಿ ಮಹಾನಗರ ಪಾಲಿಕೆ 03.ಕೃಷ್ಣರಾಜ ಪುರ ಮಹಾನಗರ ಪಾಲಿಕೆ 04.ಯಲಹಂಕ ಮಹಾನಗರ ಪಾಲಿಕೆಬಿಬಿಎಂಪಿ ಸರ್ಕಾರದ ಮೂರನೇ ಹಂತವನ್ನು ಪ್ರತಿನಿಧಿಸುತ್ತದೆ, (ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೊದಲಿನ ಎರಡು ಹಂತಗಳು).
ಭೂಮಿಯ ವಾತಾವರಣ ಅಥವಾ ವಾಯುಮಂಡಲವು, ಭೂಮಿಯು ತನ್ನ ಸುತ್ತಲೂ ಗುರುತ್ವಾಕರ್ಷಣೆಯಿಂದ ಸೆಳೆದಿಟ್ಟಿರುವ ಅನಿಲಗಳ ವಿಶಾಲ ಆವರಣ.ಭೂಮಿಯ ವಾತಾವರಣವು ಸೂರ್ಯನ ಅತಿನೇರಳೆ ಕಿರಣಗಳನ್ನು ಹೀರಿಕೊಳ್ಳುವುದರಿಂದಲೂ,ಸೂರ್ಯನಿಂದ ಬರುವ ಉಷ್ಣತೆಯನ್ನು ಉಳಿಸಿಕೊಂಡು(ಹಸಿರುಮನೆ ವಿದ್ಯಮಾನ ಅಥವಾ ಗ್ರೀನ್ ಹೌಸ್ ಎಫೆಕ್ಟ್)ಭೂಮಿಯ ಮೇಲ್ಮೈಯನ್ನು ಬೆಚ್ಚಗಿಡುವುದರಿಂದಲೂ ಮತ್ತು ಹಗಲು, ರಾತ್ರಿಗಳಲ್ಲಿ ತಾಪಮಾನವು ತೀರಾ ಏರಿಳಿಕೆಯಾಗದಂತೆ ನಿಯಂತ್ರಿಸುವುದರಿಂದಲೂ ಭೂಮಿಯ ಜೀವರಾಶಿಗಳನ್ನು ರಕ್ಷಿಸುತ್ತದೆ. ಭೂಮಿಯ ವಾತಾವರಣದ ತೂಕವು ಸುಮಾರು ಐದು ಕ್ವಾಡ್ರಿಲಿಯನ್ (೫೦೦೦೦೦೦೦೦೦೦೦೦೦೦)ಟನ್ ಗಳಷ್ಟು. ಈ ತೂಕದ ಮುಕ್ಕಾಲು ಭಾಗದಷ್ಟು ಭಾರವು ಭೂಮಿಯ ಮೇಲ್ಮೈಯಿಂದ ೧೧ ಕಿ.ಮೀ ವರೆಗಿನ ವಾಯುವಿನಿಂದಾಗುತ್ತದೆ.ಮೇಲ್ಮೈಯಿಂದ ಎತ್ತರಕ್ಕೆ ಹೋದಂತೆಲ್ಲಾ ವಾತಾವರಣದ ಸಾಂದ್ರತೆಯು ಕ್ಷೀಣಿಸುತ್ತಾ, ವಾತಾವರಣವು ತೆಳ್ಳಗಾಗುತ್ತಾ, ಇನ್ನೂ ಮೇಲಕ್ಕೆ ಹೋದಂತೆ ನಿಧಾನವಾಗಿ ಅಂತರಿಕ್ಷವಾಗಿ ಮಾರ್ಪಡುತ್ತದೆ.
ಪ್ರಭುದೇವ (ಜನನ ೩ ಏಪ್ರಿಲ್ ೧೯೭೩) ಒಬ್ಬ ಭಾರತೀಯ ನೃತ್ಯ ಸಂಯೋಜಕ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ನಟ, ಇವರು ಪ್ರಧಾನವಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ೩೨ ವರ್ಷಗಳ ವೃತ್ತಿಜೀವನದಲ್ಲಿ, ಅವರು ವ್ಯಾಪಕ ಶ್ರೇಣಿಯ ನೃತ್ಯ ಶೈಲಿಗಳನ್ನು ಪ್ರದರ್ಶಿಸಿದ್ದಾರೆ ಮತ್ತು ವಿನ್ಯಾಸಗೊಳಿಸಿದ್ದಾರೆ. ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು (Chemicals), ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು. ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ. ವಾಯು ಮಾಲಿನ್ಯದ ಕಾರಣದಿಂದ ಓಜೋನ ಪದರವು ಕ್ಷಿಣಿಸುತಿದ್ದೆ , ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
ಕಂಪು ಸಾಮಾನ್ಯವಾಗಿ ಬಹಳ ಕ್ಷೀಣ ಸಾಂದ್ರಣಬಲದಲ್ಲಿ ಆವೀಕೃತ ರಾಸಾಯನಿಕ ಸಂಯುಕ್ತಗಳಿಂದ ಉಂಟಾಗುತ್ತದೆ, ಮತ್ತು ಇದನ್ನು ಮಾನವರು ಮತ್ತು ಇತರ ಪ್ರಾಣಿಗಳು ಆಘ್ರಾಣದ ಇಂದ್ರಿಯದಿಂದ ಗ್ರಹಿಸುತ್ತವೆ. ಕಂಪುಗಳನ್ನು ವಾಸನೆಗಳೆಂದೂ ಕರೆಯಲಾಗುತ್ತದೆ, ಮತ್ತು ಈ ಪದವು ಹಿತಕರ ಹಾಗೂ ಅಹಿತಕರ ಕಂಪುಗಳು ಎರಡನ್ನೂ ನಿರ್ದೇಶಿಸಬಹುದು. ಪರಿಮಳ, ಸುವಾಸನೆ ಪದಗಳು ಮುಖ್ಯವಾಗಿ ಆಹಾರ ಮತ್ತು ಪ್ರಸಾಧನ ಉದ್ಯಮಗಳಿಂದ ಹಿತಕರ ಗಂಧವನ್ನು ವರ್ಣಿಸಲು ಬಳಸಲ್ಪಡುತ್ತವೆ, ಮತ್ತು ಕೆಲವೊಮ್ಮೆ ಸುಗಂಧಗಳನ್ನು ನಿರ್ದೇಶಿಸಲು ಬಳಸಲ್ಪಡುತ್ತವೆ.
ದಕ್ಷಿಣ ಭಾರತದ ಕೆಲವು ಭಾಗಗಳನ್ನು ಧೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳರ ವಂಶವು (ತಮಿಳು:சோழர் குலம், ಟೆಂಪ್ಲೇಟು:IPA2ಒಂದು ಪ್ರಮುಖ ತಮಿಳು ನಾಯಕ ರಾಜವಂಶವಾಗಿದೆ. ಕಿಸ್ತ ಪೂರ್ವ 3ರನೇ ಶತಮಾನದಲ್ಲಿ ಉತ್ತರಭಾರತದ ದೊರೆಯಾಗಿದ್ದ. ಅಶೋಕನ, ಕಾಲದ ಶಾಸನಗಳು, ಈ ವಂಶವು ಕ್ರಿಸ್ತಶಕ 13ನೇ ಶತಮಾನದವರೆಗೆ ತಮ್ಮ ಆಳ್ವಿಕೆಯನ್ನು ಮುಂದುವರೆಸಿಕೊಂಡು ಹೋದುದಕ್ಕೆ ಪುರಾವೆಗಳನ್ನು ಕೊಡುತ್ತವೆ.ಚೋಳರನ್ನು ಕರ್ನಾಟಕದ ಇತಿಹಾಸಕಾರ ಪ್ರಕಾರ,ಸಾಮಂತ ಕ್ಷತ್ರಿಯರು(ಪಲ್ಲವ ರಾಜ್ಯದ ಸೈನಿಕರು) ಎಂದು ಬಣ್ಣಿಸಲಾಗಿದೆ ...
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ (ಸ್ಪ್ಯಾನಿಷ್ ನಲ್ಲಿ ಮೆಹಿಕೋ) ಉತ್ತರ ಅಮೆರಿಕಾದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ ಯು.ಎಸ್.ಎ, ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ ಮೆಕ್ಸಿಕೋ ಕೊಲ್ಲಿ, ಆಗ್ನೇಯಕ್ಕೆ ಗ್ವಾಟೆಮಾಲಾ, ಬೆಲಿಝ್ ಮತ್ತು ಕೆರಿಬ್ಬಿಯನ್ ಸಮುದ್ರಗಳಿವೆ. ಮೆಕ್ಸಿಕೋ ರಾಷ್ಟ್ರವು ಮೆಕ್ಸಿಕೋ ನಗರವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ ಒಕ್ಕೂಟ ಗಣರಾಜ್ಯವಾಗಿದೆ.
ಐರನ್ ಮ್ಯಾನ್ ಅದೇ ಹೆಸರಿನ ಮಾರ್ವಲ್ ಕಾಮಿಕ್ಸ್ ಪಾತ್ರದ ಮೇಲೆ ಆಧಾರಿತವಾದ ೨೦೦೮ರ ಒಂದು ಅಮೇರಿಕಾದ ಸೂಪರ್ಹೀರೊ ಚಿತ್ರ. ಅದು ಮಾರ್ವಲ್ ಸಿನಮಾ ಪ್ರಪಂಚ ಮತ್ತು ಐರನ್ ಮ್ಯಾನ್ ಚಲನಚಿತ್ರ ಸರಣಿಯ ಮೊದಲ ಕಂತು. ಜಾನ್ ಫ಼ಾವ್ರೊ ನಿರ್ದೇಶಿತ ಈ ಚಿತ್ರದ ತಾರಾಗಣದಲ್ಲಿ ಟೋನಿ ಸ್ಟಾರ್ಕ್ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ಇದ್ದಾರೆ, ಒಂದು ಶಕ್ತಿಚಾಲಿತ ಹೊರಕವಚವನ್ನು ನಿರ್ಮಿಸುವ ಮತ್ತು ತಾಂತ್ರಿಕವಾಗಿ ಮುಂದುವರೆದ ಸೂಪರ್ಹೀರೊ ಐರನ್ ಮ್ಯಾನ್ ಆಗುವ ಒಬ್ಬ ಉದ್ಯಮಿ ಮತ್ತು ಕುಶಲ ಇಂಜಿನಿಯರ್ ಆಗಿ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಅಟ್ಲಾಂಟಿಕ್ ಮಹಾಸಾಗರ ಭೂಮಿಯ ಮಹಾಸಾಗರಗಳಲ್ಲಿ ಎರಡನೇ ದೊಡ್ಡದಾಗಿದ್ದು ಭೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ. ಅಮೆರಿಕಾ ಭೂಖಂಡಗಳ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವ್ಯಾಪಿಸಿರುವ ಈ ಮಹಾಸಾಗರವು ಕೆಲವೊಮ್ಮೆ ಉತ್ತರ ಹಾಗೂ ದಕ್ಷಿಣ ಅಟ್ಲಾಂಟಿಕ್ ಸಾಗರಗಳೆಂದು ಬೇರೆಬೇರೆಯಾಗಿ ಕರೆಯಲ್ಪಡುವುದು. ಈ ಮಹಾಸಾಗರವು ಎಲ್ಲ ಸಾಗರಗಳ ಪೈಕಿ ಅತಿ ಹೆಚ್ಚಿನ ಪ್ರಕ್ಷುಬ್ಧತೆಯುಳ್ಳದ್ದಾಗಿದೆ.
ವಿದ್ಯುಚ್ಛಾಸ್ತ್ರದಲ್ಲಿ ಅಸಮತೋಲ ವಾಹಕ ಗುಣವುಳ್ಳ ಎರಡು ತುದಿಯ ಮಿನ್ನ ಅ೦ಗವನ್ನು ಡಯೋಡ್ ಎಂದು ಕರೆಯುತ್ತಾರೆ;ಅರ್ಥಾತ್ ಒಂದು ತುದಿಯಲ್ಲಿ ವಿದ್ಯುತ್ ಗೆ ಸಂಪೂರ್ಣ ಪ್ರತಿರೋದಕವಾಗಿಯೂ ಮತ್ತೊಂದು ತುದಿಯಲ್ಲಿ ಅದಕ್ಕೆ ಸಂಪೂರ್ಣ ತದ್ವಿರುದ್ದವಾಗಿಯೂ ವರ್ತಿಸುತ್ತದೆ.ಹೆಚ್ಚು ಪ್ರಚಲಿತದಲ್ಲಿರುವ ಅರೆವಾಹಕ ಡಯೋಡ್ ಗಳು ಅರೆವಾಹಕ ಮೂಲದ್ರವ್ಯದ ಸ್ಪಟಿಕದಂತಹ ತುಂಡುಗಳಾಗಿದ್ದು ತನ್ನ p -n junction ಮೂಲಕ ಎರಡು ಎಲೆಕ್ಟ್ರಿಕಲ್ ತುದಿಗಳನ್ನು ಸಂಪರ್ಕಿಸುತ್ತಿರುತ್ತವೆ.ನಿರ್ವಾತ ಕೊಳವೆ ಡಯೋಡ್ ಗಳು ಅನೊಡ್(Anode) ಮತ್ತು ಕ್ಯಾಥೋಡ್(Cathode) ಎಂಬ ಎರಡು ಎಲೆಕ್ಟ್ರೋದೆ ಗಳನ್ನು ಹೊಂದಿರುತ್ತವೆ.ಮೊದಲ ಅರೆವಾಹಕ ಡಯೋಡ್ cat's whisker diode ನ್ನು ೧೯೦೬ ರಲ್ಲಿ ಗಲೇನ(Galena) ಎಂಬ ಖನಿಜ ಸ್ಪಟಿಕದಿಂದ ಅಭಿವೃದ್ದಿಪಡಿಸಲಾಯಿತು.ಈ ಕಾಲದ ಡಯೋಡ್ ಗಳು ಹೆಚ್ಚಾಗಿ ಸಿಲಿಕಾನ್ ಮತ್ತೆ ಕೆಲವು ಬಾರಿ ಸೆಲೆನಿಯಮ್ ಅಥವಾ ಜರ್ಮೇನಿಯಮ್ ನಿಂದ ತಯಾರಿಸಲ್ಪಟ್ಟಿರುತ್ತವೆ.
ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಪಡೆದಿರುವ ಮೇಲುಕೋಟೆಯಲ್ಲಿನ ಬ್ರಹ್ಮೋತ್ಸವ ಕಾರ್ಯಕ್ರಮಗಳು ಪ್ರಸಿದ್ಧವಾಗಿವೆ. ಭೂ ವೈಕುಂಠ ಎಂಬ ಖ್ಯಾತಿಯ ಮಂಡ್ಯ ಜಿಲ್ಲೆ ಮೇಲುಕೋಟೆ ಹಲವು ಹತ್ತು ಪುರಾಣೇತಿಹಾಸಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರಮುಖ ಧಾರ್ಮಿಕ ಕ್ಷೇತ್ರ. ಯಾದವಾದ್ರಿ, ನಾರಾಯಣಾದ್ರಿ, ಯತಿಶೈಲ, ತಿರುನಾರಾಯಣಪುರ, ಯದುಗಿರಿ, ದಕ್ಷಿಣ ಬದರಿ ಕ್ಷೇತ್ರ ...
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ವಾಯುಮಂಡಲವಕ್ಕೆ ವಾತಾವರಣ, ಗಾಳಿಹೊದಿಕೆ, ಸುತ್ತಾವಿ ಎಂಬ ಅರ್ಥಗಳಿವೆ. ಸಾಕಷ್ಟು ಘನವನ್ನು ಹೊಂದಿರುವ ಅಂತರಿಕ್ಷ ಕಾಯಗಳು ತಮ್ಮ ಗುರುತ್ವಾಕರ್ಷಣ ಬಲದಿಂದ ಸುತ್ತಲು ಹಿಡಿದಿಟ್ಟುಕೊಳ್ಳುವ ವಾಯುವಿನ ಪದರವನ್ನು 'ವಾಯುಮಂಡಲವೆಂದು ಕರೆಯಬಹುದು. ಕೆಲವು ಅನಿಲರೂಪಿ ಗ್ರಹಗಳು ಹೆಚ್ಚಾಗಿ ಅನಿಲಗಳಿಂದಲೇ ನಿರ್ಮಿತವಾಗಿರುವುದರಿಂದ ಅವುಗಳ ವಾಯುಮಂಡಲ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿರುತ್ತವೆ.ವಾಯುಮಂಡಲ ಸಾರಜನಕ,ಆಮ್ಲಜನಕ,ಇಂಗಾಲದ ಡೈಆಕ್ಸೈಡ್,ಆರ್ಗಾನ್ ನಿಂದ ಹೆಚ್ಚಾಗಿ ಕೂಡಿರುತ್ತದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು. ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಭಾರತ ಸರ್ಕಾರವು ಇಂದು ಭಾರತೀಯ ಕಾನೂನು ಆಧಾರಿತ ಮೀಸಲಾತಿಯ ಸೌಲಭ್ಯವನ್ನು ಶೇಕಡಾವಾರು ಪ್ರಮಾಣದ ಮೇಲೆ ಸರ್ಕಾರಿ ಮತ್ತು ಸಾರ್ವಜನಿಕ ಕಂಪನಿಗಳ ನೇಮಕಾತಿಯಲ್ಲಿ ಸೇವಾವಕಾಶವನ್ನು ಒದಗಿಸುತ್ತಿದೆ. ಅಷ್ಟೇ ಅಲ್ಲದೇ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಮೀಸಲಾತಿ ನೀಡುತ್ತದೆ.ಆದರೆ ಧಾರ್ಮಿಕ/ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಈ ನಿಯಮಗಳಿಂದ ಹೊರತುಪಡಿಸಲಾಗಿದೆ. ಪ್ರಮುಖವಾದುದ್ದೆಂದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಸರ್ಕಾರ ಇದನ್ನು ಜಾರಿಗೊಳಿಸಿದೆ.ಇದನ್ನು ನೀಡುವ ಕಾರಣವೆಂದರೆ ಅವರು ಇಂತಹ ಸೇವಾವಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತ ಪ್ರಮಾಣದ ಪ್ರಾತಿನಿಧಿತ್ವ ಹೊಂದಿರುವುದಿಲ್ಲ.ಈ ಕೊರತೆ ನೀಗಿಸಲು ಭಾರತ ಸರ್ಕಾರವು ಈ ಕೋಟಾ ಪದ್ದತಿಯನ್ನು ಜಾರಿಗೊಳಿಸಿದೆ.