The most-visited ಕನ್ನಡ Wikipedia articles, updated daily. Learn more...
ರೋಹಿತ್ ಗುರುನಾಥ್ ಶರ್ಮಾ (1987 ಏಪ್ರಿಲ್ 30 ರಂದು ಹುಟ್ಟಿದರು) ಭಾರತೀಯ ಅಂತರರಾಷ್ಟ್ರೀಯ ತಂಡದ ಆಟಗಾರ. ಅವರು ಬಲಗೈ ಬ್ಯಾಟ್ಸ್ಮನ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ಮುಂಬಯಿ ತಂಡದಲಿ ಆಡುವ ಒಬ್ಬ ಸಾಂದರ್ಭಿಕ ಬಲಗೈ ಆಫ್ ಬ್ರೇಕ್ ಬೌಲರ್ (ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹ್ಯಾಟ್ರಿಕ್ ಹೊಂದಿದೆ), ಆಗಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬಯಿ ಇಂಡಿಯನ್ಸ್ ತಂಡದ ನಾಯಕ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ (ಸಂಸ್ಕೃತದಲ್ಲಿ ಇತಿ=ಹೀಗೆ ಮತ್ತು ಹಾಸ=ಆದದ್ದು ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ ಇತಿಹಾಸವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ. ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ ಬರವಣಿಗೆಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ.
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಕೈಗಾರಿಕಾ ಕ್ರಾಂತಿಯು ೧೮ ಮತ್ತು ೧೯ನೇ ಶತಮಾನದ ಅವಧಿಯಲ್ಲಿ ಸಂಭವಿಸಿದೆ. ಆ ಅವಧಿಯಲ್ಲಿ ಕೃಷಿ, ಉತ್ಪಾದನೆ,ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಗಳ ಮೇಲೆ ಗಾಢಪರಿಣಾಮ ಬೀರಿತು. ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ಯುರೋಪ್ನಾದ್ಯಂತ, ಉತ್ತರ ಅಮೆರಿಕ ಮತ್ತು ಅಂತಿಮವಾಗಿ ವಿಶ್ವದಲ್ಲಿ ಹರಡಿತು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಮೊಬೈಲ್ ಅಪ್ಲಿಕೇಶನ್ (Mobile app) ಒಂದು ತಂತ್ರಾಂಶ, ಮೊಬೈಲ್ ಸಾಧನಗಳಲ್ಲಿ ಮತ್ತು ಟ್ಯಾಬ್ಲೆಟ್, ಕಂಪ್ಯೂಟರ್ಗಳಲ್ಲಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ. ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಇಮೇಲ್, ಕ್ಯಾಲೆಂಡರ್, ಮ್ಯಾಪಿಂಗ್ ಪ್ರೋಗ್ರಾಂ ಮತ್ತು ಸಂಗೀತ, ಮೊಬೈಲ್ ಅಪ್ಲಿಕೇಶನ್ಗಳನ್ನು ಪ್ರಿ ಇನ್ಸ್ಟಾಲ್ ಮಾಡಿ ಮಾರಾಟ ಮಾಡುತ್ತವೆ.ಕೆಲವು ಪೂರ್ವ ಅನುಸ್ಥಾಪಿತವಾದ ಅಪ್ಲಿಕೇಶನ್ಗಳು ಡಿಲೀಟ್ ಮಾಡಬಹುದು ಮತ್ತು ಕೆಲವೊಂದು ಸಾಧನಗಳಲ್ಲಿ ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಸಾಫ್ಟ್ವೇರ್ ಅನುಮತಿಸುವುದಿಲ್ಲ.ಅನಪೇಕ್ಷಿತ ಅಪ್ಲಿಕೇಶನ್ಗಳು ತೊಡೆದುಹಾಕಲು ಮೊಬೈಲ್ ರೂಟ್ ಮಾಡಬೇಕಾಗುತ್ತದೆ. ಪ್ರಿ ಇನ್ಸ್ಟಾಲ್ಲ್ಡ್ ಅಲ್ಲದ ಅಪ್ಪ್ಲಿಕೇಷನ್ಸ್ಗಳನ್ನು ವಿತರಣೆ ವೇದಿಕೆಗಳಾದ, ಅಪ್ಲಿಕೇಶನ್ ಅಂಗಡಿಗಳ(ಆಪ್ ಸ್ಟೋರ್) ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.ಇವು 2008 ರಲ್ಲಿ ಕಾಣಿಸಿಕೊಳ್ಳತೊಡಗಿದವು ಮತ್ತು ಮೊಬೈಲ್ ಆಪರೇಟಿಂಗ್ ಸಿಸ್ಟಂ ಮಾಲೀಕರಿಂದ ನಿರ್ವಹಿಸಲ್ಪಡುತ್ತಿದ್ದವು, ಆಪಲ್ ಆಪ್ ಸ್ಟೋರ್, ಗೂಗಲ್ ಪ್ಲೇ, ವಿಂಡೋಸ್ ಫೋನ್ ಸ್ಟೋರ್ ಮತ್ತು ಬ್ಲ್ಯಾಕ್ಬೆರಿ ಆಪ್ ವರ್ಲ್ಡ್.
ಇಸಾಮು ಅಕಾಸಕಿ (赤崎 勇, Akasaki Isamu, ಜನನ, ಜನವರಿ 30, 1929) ಜಪಾನಿನ ತಂತ್ರಜ್ಜ ಮತ್ತು ಭೌತಶಾಸ್ತಜ್ಜ. ಇವರು ಅರೆವಾಹಕಗಳ ತಂತ್ರಜ್ಜಾನದಲ್ಲಿ ವಿಷೇಶಜ್ಜ ಮತ್ತು ನೊಬೆಲ್ ಪ್ರಶಸ್ತಿ ವಿಜೇತರು.ಇವರ ಪ್ರಸಿದ್ಧ ಸಂಶೋಧನೆ ೧೯೮೯ರಲ್ಲಿ ಮಾಡಿದ ಪ್ರಖರ ಗ್ಯಾಲಿಯಮ್ ನೈಟ್ರೈಡ್ (GaN) p-n ಜಂಕ್ಷನ್ ನೀಲಿ ಎಲ್ ಇ ಡಿ ಮತ್ತು ಇದರ ಫಲಶ್ರುತಿಯಾಗಿ ಅತ್ಯಂತ ಹೆಚ್ಚು ಪ್ರಕಾಶಮಾನವುಳ್ಳ ಗ್ಯಾಲಿಯಮ್ ನೈಟ್ರೈಡ್ ನೀಲಿ ಎಲ್.ಇ.ಡಿ,ಯ ಅವಿಷ್ಕಾರ.ಇದಕ್ಕಾಗಿ ಮತ್ತು ಇತರ ಸಾಧನೆಗಳಿಗಾಗಿ, ಅಕಾಸಾಕಿಗೆ 2009 ರಲ್ಲಿ ಸುಧಾರಿತ ತಂತ್ರಜ್ಞಾನದಲ್ಲಿ ಕ್ಯೋಟೋ ಪ್ರಶಸ್ತಿ, ಮತ್ತು 2011 ರಲ್ಲಿ ಐಇಇಇ ಎಡಿಸನ್ ಪದಕವನ್ನು ನೀಡಲಾಯಿತು .
ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ.ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು.
ಎಕ್ಸ್ ಬಾಕ್ಸ್ ಮೈಕ್ರೋಸಾಫ್ಟ್ ನವರು ತಯಾರಿಸಿದ ಆರನೆಯ ತಲೆಮಾರಿನ ವಿಡಿಯೋ ಕ್ರೀಡಾ ಕನ್ಸೋಲ್(ಉಪಕರಣ ವ್ಯವಸ್ಥೆ). ಇದನ್ನು ಉತ್ತರ ಅಮೆರಿಕದಲ್ಲಿ ನವೆಂಬರ್ 15, 2001ರಂದು, ಜಪಾನ್ ನಲ್ಲಿ ಫೆಬ್ರವರಿ 22, 2002ರಂದು, ಮತ್ತು ಆಸ್ಟ್ರೇಲಿಯಾ ಹಾಗ ಯೂರೋಪ್ ಗಳಲ್ಲಿ ಮಾರ್ಚ್ 14, 2002ರಂದು ಬಿಡುಗಡೆ ಮಾಡಲಾಗಿದ್ದು, ಇದು ಎಕ್ಸ್ ಬಾಕ್ಸ್ 360ರ ಹಿಂದಿನ ಅವತರಣಿಕೆಯಾಗಿದೆ. ಇದರ ಮೂಲಕ ವಿಡಿಯೋ ಕ್ರೀಡಾ ಕನ್ಸೋಲ್ ಗಳ ಮಾರುಕಟ್ಟೆಗೆ ಮೈಕ್ರೋಸಾಫ್ಟ್ ಪಾದಾರ್ಪಣ ಮಾಡಿತು ಮತ್ತು ಸೋನಿಯ ಪ್ಲೇಸ್ಟೇಷನ್, ಸೀಗಾದ ಡ್ರೀಂಕ್ಯಾಸ್ಟ್, ಮತ್ತು ನಿಂಟೆಂಡೋದ ಗೇಮ್ ಕ್ಯೂಬ್ ಗಳಿಗೆ ಸೆಡ್ಡು ಹೊಡೆಯಿತು.
ಪುರಾತತ್ತ್ವ ಶಾಸ್ತ್ರ(Archaeology) ಅಥವಾ archeology (ಗ್ರೀಕ್ನಲ್ಲಿ ἀρχαιολογία, archaiologia – ἀρχαῖος, arkhaīos , "ಪುರಾತನ"; ಮತ್ತು -λογία, -logiā , "-logy")ವು ಹಿಂದಿನ ಕಾಲದ ಮಾನವ ಸಮಾಜಗಳ ಅಭಿವೃದ್ಧಿ ಬಗೆಗಿನ ಅಧ್ಯಯನವಾಗಿದೆ, ಇದನ್ನು ಪ್ರಾಥಮಿಕವಾಗಿ ಕೈಗಳಿಂದ ಮಾಡಿದ ಹಸ್ತಕೃತಿಗಳು, ವಾಸ್ತುಶಿಲ್ಪ, ಜೈವಿಕ ಸಂಗತಿಗಳು ಮತ್ತು ಸಾಂಸ್ಕೃತಿಕ ಭೂದೃಶ್ಯಗಳು ಮೊದಲಾದವುಗಳನ್ನು ಒಳಗೊಂಡಂತೆ ಅವರು ಬಿಟ್ಟುಹೋದ ಪರಿಸರದ ಮಾಹಿತಿಗಳ ಮತ್ತು ಭೌತಿಕ ಸಂಸ್ಕೃತಿಯ ಪುನಸ್ಸಂಪಾದನೆ ಮತ್ತು ವಿಶ್ಲೇಷಣೆಯ ಮೂಲಕ ಮಾಡಲಾಗುತ್ತದೆ. ಪುರಾತತ್ತ್ವ ಶಾಸ್ತ್ರವು ಅಸಂಖ್ಯಾತ ಕಾರ್ಯಸರಣಿಗಳನ್ನು ತೊಡಗಿಸಿಕೊಳ್ಳುವುದರಿಂದ, ಇದನ್ನು ವಿಜ್ಞಾನ ಮತ್ತು ಮಾನವಕುಲ ಎಂಬುದಾಗಿ ಪರಿಗಣಿಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು ಮಾನವಶಾಸ್ತ್ರದ ಉಪವಿಭಾಗವೆಂದು ಭಾವಿಸಲಾಗುತ್ತದೆ.
ಯೂಬಿಸಾಫ್ಟ್ ಮನರಂಜನೆ ಎಸ್ಎ ಫ್ರಾನ್ಸ್ ನ ಮೊನ್ಟ್ರಿಯುವಿಲ್ ನಲ್ಲಿ ಪ್ರಧಾನ ಕಚೇರಿಯನ್ನು ಹೊ೦ದಿರುವ ಫ್ರೆಂಚ್ ನ ಬಹುರಾಷ್ಟ್ರೀಯ ವೀಡಿಯೊ ಗೇಮ್ ಅಭಿವೃದ್ಧಿಪಡಿಸುವ ಮತ್ತು ಪ್ರಕಾಶಕ ಮತ್ತು ವಿತರಿಸುವ ಕ೦ಪನಿಯಾಗಿದೆ, ಇದು ಅಸ್ಯಾಸಿನ್ಸ್ ಕ್ರೀಡ್, ಫಾರ್ ಕ್ರೈ, ಘೋಸ್ಟ್ ರೆಕಾನ್, ಜಸ್ಟ್ ಡಾನ್ಸ್, ರೈನ್ಬೋ ಸಿಕ್ಸ್, ಪ್ರಿನ್ಸ್ ಆಫ್ ಪರ್ಷಿಯಾ, ರೆಮ್ಯಾನ್ ಮತ್ತು ಸ್ಪಿಂಟರ್ ಸೆಲ್ ಸೆರಿದ೦ತೆ ಹಲವಾರು ಮೆಚ್ಚುಗೆಯ ವಿಡಿಯೋ ಗೇಮ್ ಫ್ರ್ಯಾಂಚೈಸೀಗಳಿಗೆ ಆಟಗಳನ್ನು ಅಭಿವೃದ್ಧಿಪಡೀಸುವಲ್ಲಿ ಹೆಸರುವಾಸಿಯಾಗಿದೆ.
ಆಸ್ಟ್ರಿಯ (ಜರ್ಮನ್:Österreich) ಅಧಿಕೃತವಾಗಿ ಆಸ್ಟ್ರಿಯ ಗಣರಾಜ್ಯ (ಜರ್ಮನ್:Republik Österreich) ಮಧ್ಯ ಯುರೋಪ್ನಲ್ಲಿರುವ ಒಂದು ನೆಲಾವೃತ ದೇಶ. ಇದರ ಉತ್ತರದಲ್ಲಿ ಜರ್ಮನಿ ಮತ್ತು ಚೆಕ್ ಗಣರಾಜ್ಯ; ಪೂರ್ವದಲ್ಲಿ ಸ್ಲೊವಾಕಿಯ ಮತ್ತು ಹಂಗರಿ; ದಕ್ಷಿಣದಲ್ಲಿ ಸ್ಲೊವೇನಿಯ ಮತ್ತು ಇಟಲಿ ಹಾಗು ಪಶ್ಚಿಮದಲ್ಲಿ ಸ್ವಿಟ್ಜರ್ಲ್ಯಾಂಡ್ ಮತ್ತು ಲೈಕ್ಟೆನ್ಸ್ಟೈನ್ ದೇಶಗಳಿವೆ. ಇದರ ರಾಜಧಾನಿ ದನುಬೆ ನದಿಯ ತೀರದಲ್ಲಿರುವ ವಿಯೆನ್ನ ನಗರ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಶೈಕ್ಷಣಿಕ ಹಂತಗಳು ಎಂದರೆ ವಿಧ್ಯುಕ್ತ ಕಲಿಕೆಯ ಉಪವಿಭಾಗಗಳು ಮತ್ತು ಸಾಮಾನ್ಯವಾಗಿ ಮುಂಚಿನ ಬಾಲ್ಯದ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಮತ್ತು ತೃತೀಯಕ (ಅಥವಾ ಉನ್ನತ) ಶಿಕ್ಷಣವನ್ನು ಒಳಗೊಳ್ಳುತ್ತವೆ. ತನ್ನ ಅಂತರರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಪ್ರಮಾಣಕ ವರ್ಗೀಕರಣದಲ್ಲಿ (ಐಎಸ್ಸಿಇಡಿ) ಯುನೆಸ್ಕೊ ಏಳು ಸ್ತರಗಳ ಶಿಕ್ಷಣವನ್ನು ಗುರುತಿಸುತ್ತದೆ, ಸ್ತರ ೦ (ಪ್ರಾಥಮಿಕಪೂರ್ವ ಶಿಕ್ಷಣ) ಇಂದ ಸ್ತರ ೬ ರವರೆಗೆ (ಉನ್ನತ ಶಿಕ್ಷಣದ ಎರಡನೇ ಹಂತ). ಯುನೆಸ್ಕೊದ ಅಂತರರಾಷ್ಟ್ರೀಯ ಶಿಕ್ಷಣ ವಿಭಾಗವು ದೇಶ-ನಿರ್ದಿಷ್ಟ ಶಿಕ್ಷಣ ವ್ಯವಸ್ಥೆಗಳು ಮತ್ತು ಅವುಗಳ ಹಂತಗಳ ದತ್ತಸಂಚಯವನ್ನು ನಿರ್ವಹಿಸುತ್ತದೆ.
ಅಧ್ಯಾಯ ಗದ್ಯ, ಕಾವ್ಯ, ಅಥವಾ ಕಾನೂನಿನ ಪುಸ್ತಕದಂತಹ ತುಲನಾತ್ಮಕ ಉದ್ದದ ಬರವಣಿಗೆ ಖಂಡದ ಮುಖ್ಯ ವಿಭಾಗಗಳಲ್ಲಿ ಒಂದು. ಅಧ್ಯಾಯ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿರಬಹುದು ಮತ್ತು ಆ ನಿರ್ದಿಷ್ಟ ಅಧ್ಯಾಯದ ಮುಖ್ಯ ವಿಷಯವಾಗಿರಬಹುದಾದ ಅನೇಕ ವಸ್ತುಗಳನ್ನು ಸೂಚಿಸಬಹುದು. ಪ್ರತಿ ಸಂದರ್ಭದಲ್ಲೂ, ಅಧ್ಯಾಯಗಳಿಗೆ ಸಂಖ್ಯೆ ಕೊಡಬಹುದು ಅಥವಾ ಅವುಗಳನ್ನು ಹೆಸರಿಸಬಹುದು ಅಥವಾ ಎರಡನ್ನೂ ಮಾಡಬಹುದು.
ಅನಿಮೇಶನ್ನ ಭ್ರಮೆ-ಸಾಮಾನ್ಯವಾಗಿ ಚಲನೆಯ ಚಿತ್ರಗಳಂತೆ-ಸಾಂಪ್ರದಾಯಿಕವಾಗಿ ದೃಷ್ಟಿಯ ನಿರಂತರತೆಗೆ ಮತ್ತು ನಂತರ ಫೈ ವಿದ್ಯಮಾನ ಮತ್ತು/ಅಥವಾ ಬೀಟಾ ಚಲನೆಗೆ ಕಾರಣವೆಂದು ಹೇಳಲಾಗುತ್ತದೆ, ಆದರೆ ನಿಖರವಾದ ನರವೈಜ್ಞಾನಿಕ ಕಾರಣಗಳು ಇನ್ನೂ ಅನಿಶ್ಚಿತವಾಗಿವೆ. ಗಮನಿಸಲಾಗದ ಅಡೆತಡೆಗಳೊಂದಿಗೆ, ಪರಸ್ಪರ ಕನಿಷ್ಠವಾಗಿ ಭಿನ್ನವಾಗಿರುವ ಚಿತ್ರಗಳ ತ್ವರಿತ ಅನುಕ್ರಮದಿಂದ ಉಂಟಾಗುವ ಚಲನೆಯ ಭ್ರಮೆಯು ಸ್ಟ್ರೋಬೋಸ್ಕೋಪಿಕ್ ಪರಿಣಾಮವಾಗಿದೆ . ಆನಿಮೇಟರ್ಗಳು ಸಾಂಪ್ರದಾಯಿಕವಾಗಿ ಪ್ರತಿಯೊಂದು ಭಾಗದ ಚಲನೆಗಳು ಮತ್ತು ಅಂಕಿಗಳ ಬದಲಾವಣೆಗಳನ್ನು ಪ್ರತ್ಯೇಕ ಹಿನ್ನೆಲೆಯಲ್ಲಿ ಚಲಿಸಬಹುದಾದ ಪಾರದರ್ಶಕ ಸೆಲ್ಗಳಲ್ಲಿ ಚಿತ್ರಿಸಲು ಬಳಸಿದರೆ, ಕಂಪ್ಯೂಟರ್ ಅನಿಮೇಷನ್ ಸಾಮಾನ್ಯವಾಗಿ ಡಿಜಿಟಲ್ ರಚಿಸಿದ ಪರಿಸರದಲ್ಲಿ ಡಿಜಿಟಲ್ ರಚಿಸಿದ ಅಂಕಿಗಳನ್ನು ನಿರ್ವಹಿಸಲು ಪ್ರಮುಖ ಫ್ರೇಮ್ಗಳ ನಡುವಿನ ಪ್ರೋಗ್ರಾಮಿಂಗ್ ಮಾರ್ಗಗಳನ್ನು ಆಧರಿಸಿದೆ.ಅನಿಮೇಷನ್ ಎನ್ನುವುದು ಚಲಿಸುವ ಚಿತ್ರಗಳಾಗಿ ಕಾಣಿಸಿಕೊಳ್ಳಲು ಅಂಕಿಗಳನ್ನು ಕುಶಲತೆಯಿಂದ ನಿರ್ವಹಿಸುವ ಒಂದು ವಿಧಾನವಾಗಿದೆ.
' ನಿಕೊಲ್ ಕಿಡ್ಮನ್, ಎ ಸಿ (ಹುಟ್ಟು ಜೂನ್ ೨೦, ೧೯೬೭) ಅಮೆರಿಕಾ ಸಂಜಾತೆ, ಆಸ್ಟ್ರೇಲಿಯಾದ ನಟಿ, ಫ್ಯಾಷನ್ ರೂಪದರ್ಶಿ, ಹಾಡುಗಾರ್ತಿ ಹಾಗೂ ಮಾನವತಾವಾದಿ. ೧೯೯೪ರಿಂದ ಆಸ್ಟ್ರೇಲಿಯಾ ಯುನಿಸೆಫ್ನ ಸದ್ಭಾವ ರಾಯಭಾರಿಯಾಗಿದ್ದಾರೆ. ೨೦೦೬ರಲ್ಲಿ ಕಿಡ್ಮನ್ರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ನೀಡಿ ಗೌರವಿಸಲಾಯಿತು, ಇದು ಆಸ್ಟ್ರೇಲಿಯಾದ ಉನ್ನತ ನಾಗರೀಕ ಸನ್ಮಾನವಾಗಿದೆ.
ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ – ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕ, ನಿರ್ಮಾಪಕ, ಹಾಗೂ ಚಿತ್ರಕಥಾ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ. ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ.
ಪೆನೆಲೊಪ್ ಕ್ರೂಜ್ ಎಂದೇ ಗುರುತಿಸಲ್ಪಡುವ ಪೆನೆಲೊಪ್ ಕ್ರೂಜ್ ಸ್ಯಾನ್ಚೀಸ್ (ಜನನ:ಏಪ್ರಿಲ್ 28, 1974) ಸ್ಪ್ಯಾನಿಷ್ ದೇಶದ ನಟಿಯಾಗಿದ್ದಾರೆ. ಜಮೌನ್, ಜಮೌನ್ ದಿ ಗರ್ಲ್ ಆಫ್ ಯುವರ್ ಡ್ರೀಮ್ಸ್ ಮತ್ತು ಬೆಲ್ ಎಪೊಕ್ ಮುಂತಾದ ಚಲನಚಿತ್ರಗಳಲ್ಲಿನ ತಮ್ಮ ಅಮೋಘ ಅಭಿನಯಕ್ಕೆ ಹಲವು ವಿಮರ್ಶಕರಿಂದ ಉದಯೋನ್ಮುಖ ನಟಿ ಎಂಬ ಹೊಗಳಿಕೆಗೆ ಪಾತ್ರರಾದರು. ಅಲ್ಲದೇ ಅವರು ಹಲವಾರು ಅಮೇರಿಕನ್ ಚಲನಚಿತ್ರಗಳಾದ ಬ್ಲೊವ್ , ವೆನಿಲ್ಲಾ ಸ್ಕೈ ,ವಿಕ್ಕಿ ಕ್ರಿಸ್ಟಿನಾ ಬಾರ್ಸಿಲೋನಾ ಹಾಗೂ ನೈನ್ ಚಿತ್ರಗಳಲ್ಲೂ ನಟಿಸಿದ್ದಾರೆ.
ಎಲೆಕ್ಟ್ರಾನಿಕ್ ಕಾಮರ್ಸ್, ಸಾಮಾನ್ಯವಾಗಿ (ಇ-ಶಾಪಿಂಗ್)ಇ-ಕಾಮರ್ಸ್ ಅಥವಾ eCommerce ಎಂದೇ ಪರಿಚಿತ. ಇದರಲ್ಲಿ ಯಾವುದೇ ವಸ್ತು ಗಳನ್ನು ಅಥವಾ ಸೇವೆಗಳನ್ನು ಎಲೆಕ್ಟ್ರಾನಿಕ್ ವ್ಯವಸ್ಥೆಗಳಾದ ಅಂತರಜಾಲ ಹಾಗು ಇತರ ಕಂಪ್ಯೂಟರ್ ಜಾಲಗಳ ಮೂಲಕ ಕೊಂಡುಕೊಳ್ಳುವುದು ಅಥವಾ ಮಾರಾಟಮಾಡುವುದು. ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತಿರುವ ವ್ಯಾಪಾರದ ಪ್ರಮಾಣವು ವ್ಯಾಪಕವಾದ ಅಂತರಜಾಲದ ಬಳಕೆಯಿಂದ ಅಸಾಧಾರಣ ರೀತಿಯಲ್ಲಿ ಅಭಿವೃದ್ಧಿಯಾಗಿದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಆಡಳಿತ ಸಿಬ್ಬಂದಿ ಸಂಘಟನೆಯಲ್ಲಿ ನೌಕರರು ತಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಲು ಅವರಿಗೆ ಪ್ರೋತ್ಸಾಹ ಅವಶ್ಯಕ. ಪದೋನ್ನತಿಯು ಅಂಥ ಪ್ರೋತ್ಸಾಹದ ವಿಧಾನಗಳಲ್ಲೊಂದು. ಒಬ್ಬ ಅಧಿಕಾರಿಯನ್ನು ಕೆಳಗಿನ ಹುದ್ದೆಯಿಂದ ಮೇಲಿನ ಹುದ್ದೆಗೆ ಏರಿಸುವುದು, ಅವನ ಅಂಕಿತವನ್ನು ಬದಲಾಯಿಸುವುವು, ಅವನ ಕರ್ತವ್ಯಗಳನ್ನು ಬದಲು ಮಾಡುವುದು ಇವು ಪದೋನ್ನತಿಯ ಕೆಲವು ಬಗೆಗಳು.ಒಳ್ಳೆಯ ಪದೋನ್ನತಿಯ ವ್ಯವಸ್ಥೆ ಒಳ್ಳೆಯ ಆಡಳಿತ ಪದ್ದತಿಯ ಅಡಿಗಲ್ಲು.
ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು.
ಚಿತ್ರ ಎಂದರೆ ದೃಶ್ಯ ಗ್ರಹಿಕೆಯನ್ನು ಚಿತ್ರಿಸುವ ಒಂದು ವಸ್ತು, ಉದಾಹರಣೆಗೆ, ಛಾಯಾಚಿತ್ರ ಅಥವಾ ಎರಡು ಆಯಾಮದ ಚಿತ್ರ. ಇದು ಸಾಮಾನ್ಯವಾಗಿ ಒಂದು ಭೌತಿಕ ವಸ್ತು ಅಥವಾ ಒಬ್ಬ ವ್ಯಕ್ತಿಯಂತಹ ಯಾವುದೋ ವಿಷಯಕ್ಕೆ ಹೋಲುವ ನೋಟವನ್ನು ಹೊಂದಿರುತ್ತದೆ ಮತ್ತು ಹಾಗಾಗಿ ಅದರ ಚಿತ್ರಣವನ್ನು ಒದಗಿಸುತ್ತದೆ. ಚಿತ್ರಗಳನ್ನು ದ್ಯುತಿ ಸಾಧನಗಳು ಸೆರೆಹಿಡಿಯಬಹುದು – ಉದಾಹರಣೆಗೆ ಕ್ಯಾಮರಾಗಳು, ಕನ್ನಡಿಗಳು, ಮಸೂರಗಳು, ದೂರದರ್ಶಕಗಳು, ಸೂಕ್ಷ್ಮ ದರ್ಶಕಗಳು, ಇತ್ಯಾದಿ, ಮತ್ತು ನೈಸರ್ಗಿಕ ವಸ್ತುಗಳು ಹಾಗೂ ವಿದ್ಯಮಾನಗಳು ಸೆರೆಹಿಡಿಯಬಹುದು, ಉದಾಹರಣೆಗೆ ಕಣ್ಣು ಅಥವಾ ನೀರು.
ದಿ ಮೆಟ್ರಿಕ್ಸ್ ಒಂದು(West Frisian) ವೈಜ್ಞಾನಿಕ ಕಾಲ್ಪನಿಕ ಕತೆ-ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು ಲಾರ್ರಿ ಮತ್ತು ಎಂಡೀ ವಾಚೋಸ್ಕಿ ಮತ್ತು ಅಭಿನಯಿಸಿದವರು ಕೀನು ರೀವ್ಸ್, ಲಾರೆನ್ಸ್ ಫೀಶ್ಬರ್ನ್, ಕೇರ್ರೀ-ಆಯ್ನೆ ಮೊಸ್ ಜೋ ಪೆಂಟೋಲಿಯಾನೊ ಮತ್ತು ಹ್ಯೂಗೋ ವೀವಿಂಗ್. ಇದು ಮೊದಲು ಅಮೇರಿಕಾ ದೇಶದದಲ್ಲಿ ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು ಈ ಚಲನಚಿತ್ರ ಸರಣಿಯ, ಹಾಸ್ಯ ಪುಸ್ತಕಗಳು, ವಿಡಿಯೊ ಆಟಗಳು ಮತ್ತು ಎನಿಮೇಶನ್ಗಳ ಮೊದಲ ಭಾಗವಾಗಿದೆ. ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ ವಾಸ್ತವಿಕತೆ ಮೆಟ್ರಿಕ್ಸ್ ಆಗಿರುತ್ತದೆ: ಇದು ಸಚೇತನ ಯಂತ್ರಗಳು ನಕಲು ಮಾಡಿದ ವಾಸ್ತವಿಕತೆಯಾಗಿದ್ದು, ಇದನ್ನು ಮನುಷ್ಯರನ್ನು ತಣಿಸಲು ಮತ್ತು ವಶಪಡಿಸಿಕೊಳ್ಳಲು, ಮತ್ತು ಅದೇ ಸಮಯದಲ್ಲಿ ಅವರ ದೇಹದ ಶಾಖ ಮತ್ತು ವಿದ್ಯಚ್ಛಕ್ತಿಯನ್ನು ಶಕ್ತಿಯ ಆಕರಗಳಾಗಿ ಬಳಸಿಕೊಳ್ಳಲು ಮಾಡಲಾಗಿರುತ್ತದೆ.
ಡೊರೆಮನ್(ಜಪಾನೀಸ್ ಭಾಷೆ: ドラえもん ) ಎಂಬುದು ಪಾನೀಸ್ ಮಂಗಾ ಸರಣಿಯಾಗಿದ್ದು, ಇದನ್ನು ಫ್ಯೂಜಿಕೊ ಎಫ್. ಫ್ಯೂಜಿಯೊ ಬರೆದು ವಿವರಿಸಿದ್ದಾರೆ. ಮಂಗಾವನ್ನು ಡಿಸೆಂಬರ್ ೧೯೬೯ ರಲ್ಲಿ ಮೊದಲ ಬಾರಿಗೆ ಧಾರಾವಾಹಿ ಮಾಡಲಾಯಿತು, ಅದರ ೧೩೪೫ ಪ್ರತ್ಯೇಕ ಅಧ್ಯಾಯಗಳನ್ನು ೪೫ ಟ್ಯಾಂಕೋಬಾನ್ ಸಂಪುಟಗಳಲ್ಲಿ ಸಂಕಲಿಸಲಾಗಿದೆ ಮತ್ತು ಶೋಗಾಕುಕನ್ ಅವರು ೧೯೭೦ ರಿಂದ ೧೯೯೬ ರವರೆಗೆ ಪ್ರಕಟಿಸಿದರು.
ಪೆಂಗ್ವಿನ್ಗಳು (ಗಣ ಸ್ಫೆನಿಸಿಫೋರ್ಮ್ಸ್ , ವಂಶ ಸ್ಫೆನಿಸಿಡೇ ) ದಕ್ಷಿಣಾರ್ಧ ಗೋಳದಲ್ಲಿ, ಅದರಲ್ಲೂ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಹೆಚ್ಚೂಕಮ್ಮಿ ಪ್ರತ್ಯೇಕವಾಗಿ ಜೀವಿಸುತ್ತಿರುವ ಜಲಜೀವಿ, ಹಾರಲಾರದ ಪಕ್ಷಿಗಳ ಒಂದು ಗುಂಪಾಗಿದೆ. ನೀರಿನಲ್ಲಿನ ಜೀವನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ರೀತಿಯಲ್ಲಿ ಹೊಂದಿಕೊಂಡಿರುವ ಪೆಂಗ್ವಿನ್ಗಳು, ವಿರುದ್ಧಛಾಯೆಯ ಕಪ್ಪು ಮತ್ತು ಬಿಳಿ ಪುಕ್ಕಗಳನ್ನು ಹೊಂದಿರುತ್ತವೆ, ಮತ್ತು ಅವುಗಳ ರೆಕ್ಕೆಗಳು ಈಜುಗೈಗಳಾಗಿ ಮಾರ್ಪಟ್ಟಿವೆ. ಬಹುಪಾಲು ಪೆಂಗ್ವಿನ್ಗಳು ಪುಟ್ಟ ಕಡಲಕಳೆ ಚಿಪ್ಪುಜೀವಿಗಳು, ಮೀನು, ಸ್ಕ್ವಿಡ್, ಮತ್ತು ನೀರೊಳಗೆ ಈಜುವಾಗ ಹಿಡಿದ ಕಡಲಜೀವದ ಇತರ ಸ್ವರೂಪಗಳನ್ನು ತಿನ್ನುತ್ತವೆ.
ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳು ಪ್ರಮುಖವಾಗಿ ಆಗ್ನೇಯ ಏಷ್ಯಾದಲ್ಲಿ ಮತ್ತು ಭಾರತ ಹಾಗು ಬಾಂಗ್ಲಾದೇಶಗಳ ಕೆಲವೆಡೆಗಳಲ್ಲಿ ಉಪಯೋಗದಲ್ಲಿರುವ ಒಂದು ಪ್ರಮುಖ ಭಾಷಾ ಕುಟುಂಬ. ಏಷ್ಯಾದ ದಕ್ಷಿಣ ಭಾಗಗಳಲ್ಲಿ ಇದು ಹರಡಿರುವುದರಿಂದ ಲ್ಯಾಟಿನ್ ಭಾಷೆಯ "ಆಸ್ಟ್ರೋ" (ಅಂದರೆ "ದಕ್ಷಿಣ") ಪದದಿಂದ ಈ ಕುಟುಂಬ ಹೆಸರು ಪಡೆದಿದೆ. ಈ ಭಾಷೆಗಳಲ್ಲಿ ಕೇವಲ ವಿಯೆಟ್ನಮೀಸ್, ಖ್ಮೇರ್ ಮತ್ತು ಮೊನ್ಗಳ ತಿಳಿದ ಪ್ರಾಚೀನ ಇತಿಹಾಸವಿದೆ.
ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ Facebook, Inc. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು.
Wii (ウィー, pronounced /ˈwiː/, like the pronoun we)ವೈ ನಿಂಟೆಂಡೊ ಮೂಲಕ ನವೆಂಬರ್ 19, 2006ರಲ್ಲಿ ಬಿಡುಗಡೆಯಾದ ಮನೆಮಂದಿಯೆಲ್ಲ ಆಡಬಹುದಾದ ವಿಡಿಯೋ ಗೆಮ್ ಆಗಿದೆ. ಏಳನೆ ಪೀಳಿಗೆಯ ಕನ್ಸೊಲ್ ಆಗಿ, ವೈ ಪ್ರಾಥಮಿಕವಾಗಿ ಮೈಕ್ರೊಸಾಫ್ಟ್ನ Xbox 360 ಮತ್ತು ಸೋನಿಯ ಪ್ಲೇಸ್ಟೇಷನ್ 3ಯೊಂದಿಗೆ ಸ್ಪರ್ಧಿಸುತ್ತದೆ. ನಿಂಟೆಂಡೊ ಹೀಗೆ ಹೇಳಿಕೆ ನೀಡಿದ್ದಾರೆ ಅದರ ಕನ್ಸೊಲ್ ಇತರೆ ಎರಡಕ್ಕಿಂತ ಒಂದು ವಿಸ್ತಾರವಾದ ಜನಸಂಖ್ಯೆಯನ್ನು ಗುರಿಯಾಗಿಸಿದೆ.
ಪೀಟರ್ ಸೆಲ್ಲರ್ಸ್ , CBE (ಜನನ ರಿಚರ್ಡ್ ಹೆನ್ರಿ ಸೆಲ್ಲರ್ಸ್ ; ೮ ಸೆಪ್ಟೆಂಬರ್ ೧೯೨೫ - ೨೪ ಜುಲೈ ೧೯೮೦) ಪ್ರಸಿದ್ಧ ಇಂಗ್ಲಿಷ್ ಚಲನಚಿತ್ರ ನಟ, ಹಾಸ್ಯನಟ ಮತ್ತು ಗಾಯಕ. ಅವರು ಬಿಬಿಸಿ ರೇಡಿಯೊ ಕಾಮಿಡಿ ಸರಣಿಯಲ್ಲಿ ದಿ ಗುಯನ್ ಶೋನಲ್ಲಿ ಪ್ರದರ್ಶನ ನೀಡಿದ್ದಾರೆ.ಹಲವಾರು ಹಾಸ್ಯಮಯ ಹಾಡುಗಳ ಮೂಲಕ ಬ್ರಿಟನ್ನ ಅಭಿಮಾನಿಗಳಲ್ಲಿ ಹೆಸರಾಗಿದ್ದಾರೆ ಮತ್ತು ವಿಶ್ವದಾದ್ಯಂತ ಅನೇಕ ಪ್ರೇಕ್ಷಕರಿಗೆ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ, ಅವರಲ್ಲಿ ದಿ ಪಿಂಕ್ ಪ್ಯಾಂಥರ್ ಸರಣಿಯ ಚಲನಚಿತ್ರಗಳಲ್ಲಿ ಮುಖ್ಯ ಇನ್ಸ್ಪೆಕ್ಟರ್ ಕ್ಲೆಶೌ .ಪೋರ್ಟ್ಸ್ಮೌತ್ನಲ್ಲಿ ಜನಿಸಿದ ಸೆಲ್ಲರ್ಸ್ ಅವರು ಎರಡು ವಾರದ ಹಸುಳೆಯಾಗಿರುವಾಗಲೆಯೇ ದಕ್ಷಿಣದ ಕಿಂಗ್ಸ್ ಥಿಯೇಟರ್ನಲ್ಲಿ ತಮ್ಮ ಪ್ರಥಮ ರಂಗಪ್ರವೇಶವನ್ನು ಮಾಡಿದರು. ಅವರು ಪ್ರಾಂತೀಯ ಚಿತ್ರಮಂದಿರಗಳಲ್ಲಿ ಪ್ರವಾಸ ಮಾಡಿದ ವೈವಿಧ್ಯಮಯ ಕಾರ್ಯದಲ್ಲಿ ನಟಿಸುತ್ತಿದ್ದ, ತಮ್ಮ ಪೋಷಕರ ಜೊತೆಗೂಡಿ ನಟನೆಯ ವೃತ್ತಿ ಆರಂಭಿಸಿದರು.
ನ್ಯೂ ಯಾರ್ಕ್ (/nuːˈjɔrk/ ) ಅಮೇರಿಕ ಸಂಯುಕ್ತ ಸಂಸ್ಥಾನದ ಈಶಾನ್ಯ ಭಾಗದಲ್ಲಿನ ಒಂದು ರಾಜ್ಯ. ಈ ದೇಶದ ಮೂರನೇ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಈ ರಾಜ್ಯದ ದಕ್ಷಿಣಕ್ಕೆ ನ್ಯೂ ಜರ್ಸಿ ಮತ್ತು ಪೆನ್ಸಿಲ್ವೇನಿಯ, ಪೂರ್ವಕ್ಕೆ ಕನೆಕ್ಟಿಕಟ್, ಮ್ಯಾಸಚೂಸೆಟ್ಸ್ ಮತ್ತು ವೆರ್ಮಾಂಟ್, ಹಾಗೂ ಉತ್ತರಕ್ಕೆ ಕೆನಡಾ ಇವೆ. ಆಲ್ಬನಿ ರಾಜಧಾನಿಯಾಗಿರುವ ಈ ರಾಜ್ಯದ ಅತ್ಯಂತ ದೊಡ್ಡ ನಗರ ನ್ಯೂ ಯಾರ್ಕ್ ನಗರ.
For a topical guide to this subject, see Outline of James Bond.ಜೇಮ್ಸ್ ಬಾಂಡ್ 007 ಎಂಬುದು 1953 ರಲ್ಲಿ ಲೇಖಕ ಇಯಾನ್ ಫ್ಲೆಮಿಂಗ್ನಿಂದ ಸೃಷ್ಟಿಯಾದ ಒಂದು ಕಾಲ್ಪನಿಕ ಪಾತ್ರ. ಹನ್ನೆರಡು ಕಾದಂಬರಿಗಳುಹಾಗೂ ಎರಡು ಸಣ್ಣ ಕಥೆಗಳಲ್ಲಿ ಇದು ಒಳಗೊಂಡಿದೆ. 1962ರಲ್ಲಿ ತಯಾರಾದ ಡಾ.ನೋ ದಿಂದ ಪ್ರಾರಂಭಗೊಂಡ ಈ ಪಾತ್ರವು ಆಂಗ್ಲ ಭಾಷೆಯ ಅತಿ ಹೆಚ್ಚು ಓಡಿದ ಹಾಗೂ ದುಡ್ಡು ಗಳಿಸಿದ ಚಿತ್ರ ಸರಣಿಯಾಗಿದೆ.1964 ರಲ್ಲಿ ಫ್ಲೇಮಿಂಗ್ನ ಸಾವಿನ ನಂತರ ಮುಂದಿನ ಜೇಮ್ಸ್ ಬಾಂಡ್ ಕಾದಂಬರಿಗಳು ಕಿಂಗ್ಸ್ಲೇ ಆಮಿಸ್ (ರಾಬರ್ಟ್ ಮಾರ್ಕಾಮ್), ಜಾನ್ ಪರ್ಸನ್, ರೇಮಂಡ್ ಬೆನ್ಸನ್, ಜಾನ್ ಗಾರ್ಡನ್ ಮತ್ತು ಸಬಾಸ್ಟಿಯನ್ ಫಾಕ್ಸ್ರಿಂದ ಬರೆಯಲ್ಪಟ್ಟವು.
ಅರ್ಜುನನು ಹಿಂದು ಪುರಾಣಗಳಲ್ಲಿ ಒಂದಾದ ಮಹಾಭಾರತದ ನಾಯಕರಲ್ಲಿ ಸಾರಥಿಯೂ, ಆಪ್ತ ಮಿತ್ರನೂ ಆಗಿದ್ದ ಶ್ರೀಕೃಷ್ಣ ಪರಮಾತ್ಮನು ಮನವೂಲಿಸಿದನು. ಯುದ್ಧದಲ್ಲಿ ಅಡಕವಾಗಿರುವ ವಿಷಯಗಳು, ಧೈರ್ಯ, ಯೋಧನೋರ್ವನ ಕರ್ತವ್ಯ, ಮಾನವ ಜೀವನದ ಹಾಗೂ ಆತ್ಮದ ಸ್ವಭಾವ ಹಾಗೂ ದೇವರುಗಳ ಪಾತ್ರ ಇವೇ ಮುಂತಾದವುಗಳಿಂದ ಕೂಡಿದ್ದ ಇವರ ನಡುವಿನ ಸಂಭಾಷಣೆಯು ಮಹಾಭಾರತದ ಅತೀ ಪ್ರಮುಖ ಪ್ರಸಂಗಗಳಲ್ಲಿ ಒಂದಾದ ಭಗವದ್ಗೀತೆಯವಸ್ತುವಾಗಿದೆ. ಕಡೆಯಲ್ಲಿ ಈತನ ಪರಮ ಪ್ರತಿಸ್ಫರ್ಧಿಯಾದ ಕರ್ಣನನ್ನು ಕೊಲ್ಲುವುದರಲ್ಲಿ ಅರ್ಜುನನು ಪ್ರಮುಖ ಪಾತ್ರವನ್ನು ವಹಿಸಿದ್ದನು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ದಕ್ಷಿಣ ಭಾರತದ ಕೆಲವು ಭಾಗಗಳನ್ನು ಧೀರ್ಘಕಾಲ ಆಳಿದ ರಾಜವಂಶಗಳಲ್ಲಿ ಚೋಳರ ವಂಶವು (ತಮಿಳು:சோழர் குலம், ಟೆಂಪ್ಲೇಟು:IPA2ಒಂದು ಪ್ರಮುಖ ತಮಿಳು ನಾಯಕ ರಾಜವಂಶವಾಗಿದೆ. ಕಿಸ್ತ ಪೂರ್ವ 3ರನೇ ಶತಮಾನದಲ್ಲಿ ಉತ್ತರಭಾರತದ ದೊರೆಯಾಗಿದ್ದ. ಅಶೋಕನ, ಕಾಲದ ಶಾಸನಗಳು, ಈ ವಂಶವು ಕ್ರಿಸ್ತಶಕ 13ನೇ ಶತಮಾನದವರೆಗೆ ತಮ್ಮ ಆಳ್ವಿಕೆಯನ್ನು ಮುಂದುವರೆಸಿಕೊಂಡು ಹೋದುದಕ್ಕೆ ಪುರಾವೆಗಳನ್ನು ಕೊಡುತ್ತವೆ.ಚೋಳರನ್ನು ಕರ್ನಾಟಕದ ಇತಿಹಾಸಕಾರ ಪ್ರಕಾರ,ಸಾಮಂತ ಕ್ಷತ್ರಿಯರು(ಪಲ್ಲವ ರಾಜ್ಯದ ಸೈನಿಕರು) ಎಂದು ಬಣ್ಣಿಸಲಾಗಿದೆ ...
ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ —ಉದಾಹರಣೆಗೆ ಮ್ಯಾಸಚೂಸಿಟ್ಸ್ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ —ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.