The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು. ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ಧಿ ಪಡೆದನು. ಒಂದಾನೊಂದು ಕಾಲದಲ್ಲಿ ಹರಿಶ್ಚಂದ್ರನೆಂಬ ರಾಜನು ಆಯೋಧ್ಯ ಎಂಬ ರಾಜ್ಯವನು ಚಾಣಕ್ಷ್ಯತನದಿಂದ ರಾಜ್ಯವನು ಆಳುತ್ತಿದನು ಮತ್ತು ಅವನು ಸತ್ಯವನು ಬಿಟ್ಟು ಬೇರೆ ಏನನ್ನು ಹೇಳುತ್ತಿರಲಿಲ್ಲ ಯಾವಾಗಲು ಸಂತೋಷದಿಂದ ರಾಜ್ಯಭಾರ ಮಾಡುತ್ತಿದ್ದ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ದ್ವಂದ್ವ|ಭಾರತದ ಸರ್ಕಾರಿ ಸ್ವಾಮ್ಯತೆಯ ಕಿರುತೆರೆ ವಾಹಿನಿ ಜಾಲದ ಬಗ್ಗೆ ಲೇಖನ[ದೂರದರ್ಶನ (ಕಿರುತೆರೆ ವಾಹಿನಿ ಜಾಲ)ಎಂಬಲ್ಲಿ ಇ ಚಿತ೧೯೫೯ರ ಮಾದರಿಯ ಒಂದು ದೂರದರ್ಶನ ಪೆಟ್ಟಿಗೆ] 'ದೂರದರ್ಶನ'ವಚಲಸುವ ಚಿತ್ರಗಳನ್ನು ಶಬ್ದದೊಂದಿಗೆ[ಪ್ರಸಾರಣೆ]ಮಾಡುವ ಮತ್ತು ಪ್ರಸಾರಣೆಯನ್ನು ಪ್ರದರ್ಶಿಸುವ ಒಂದು ತಂತ್ರಜ್ಞಾನ. ಪ್ರದರ್ಶನ ಮಾಡುವ ಉಪಕರಣವನ್ನು [ದೂರದರ್ಶನ ಪೆಟ್ಟಿಗೆ]ಎಂದು ಕರೆಯಲಾಗುತ್ತದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಅಂತರಜಾಲ (ಆಂಗ್ಲ: Internet ಇಂಟರ್ನೆಟ್) ಎನ್ನುವುದು ಕಂಪ್ಯೂಟರ್ ನೆಟ್ವರ್ಕ್ಗಳ (ಜಾಲಬಂಧಗಳ) ಒಂದು ನೆಟ್ವರ್ಕ್ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್ವರ್ಕ್ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ. ಇಂಟರ್ನೆಟ್ ಅಥವಾ ಅಂತರಜಾಲ ಕ್ರಿ.ಶ ೧೯೭೦ರ ದಶಕದಲ್ಲಿ ಯು.ಎಸ್.ಎ ಯಲ್ಲಿ ರಚನೆಯಾಯಿತು.
ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ. ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ. ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ರಾಜ್ಯದ ಭಾಷೆ: ನೆರೆಯ ಬಾಂಗ್ಲದೇಶದಲ್ಲಿ ರಾಷ್ಟ್ರಭಾಷೆ: ಗಂಗಾನದಿ ಬಯಲಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಬ್ಬಿರುವ ಬಂಗಾಳ ಪ್ರಾಂತ್ಯದ ಜನರ ಭಾಷೆ.
ದ್ಯಾಟ್ ಸೆವೆಂಟೀಸ್ ಶೋ ಮೇ ೧೭, ೧೯೭೬ ರಿಂದ ಡಿಸೆಂಬರ್ ೩೧, ೧೯೭೯ವರೆಗೆ ಪಾಯಿಂಟ್ ಪ್ಲೇಸ್, ವಿಸ್ಕಾನ್ಸನ್ ಎಂಬ ಕಾಲ್ಪನಿಕ ಉಪನಗರ ಪಟ್ಟಣದಲ್ಲಿರುವ ಹದಿಹರೆಯದ ಸ್ನೇಹಿತರ ಒಂದು ಗುಂಪಿನ ಜೀವನಗಳ ಮೇಲೆ ಕೇಂದ್ರೀಕರಿಸುವ ಅಮೇರಿಕಾದ ಒಂದು ದೂರದರ್ಶನ ಕಾಲಮಾನ ಸಂದರ್ಭ ಹಾಸ್ಯ ಕಾರ್ಯಕ್ರಮ. ಅದರ ಪ್ರಥಮ ಪ್ರದರ್ಶನ ಫ಼ಾಕ್ಸ್ ದೂರದರ್ಶನ ಜಾಲದ ಮೇಲೆ ಆಗಸ್ಟ್ ೨೩, ೧೯೯೮ರಂದು ಆಯಿತು, ಎಂಟು ನಿರಂತರ ಸರಣಿಗಳಾಗಿ ಪ್ರದರ್ಶನ ಕಂಡಮೇಲೆ, ಮೇ ೧೮, ೨೦೦೬ರಂದು ೨೦೦ನೇ ಸಂಚಿಕೆಯೊಂದಿಗೆ ಕೊನೆಗೊಂಡಿತು. ಮುಖ್ಯ ಹದಿಹರೆಯದ ಪಾತ್ರವರ್ಗದಲ್ಲಿ ಟೋಫ಼ರ್ ಗ್ರೇಸ್, ಮಿಲಾ ಕುನಿಸ್, ಆಶ್ಟನ್ ಕುಚರ್, ಡ್ಯಾನಿ ಮಾಸ್ಟರ್ಸನ್, ಲಾವುರಾ ಪ್ರೀಪಾನ್, ಮತ್ತು ವಿಲ್ಮರ್ ವಾಲ್ಡರಾಮಾ ಇದ್ದರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux checkಟೆಂಪ್ಲೇಟು:Infobox animanga character/aux check Naruto Uzumaki (うずまき ナルト, Uzumaki Naruto)ಆನಿಮೆ ಮತ್ತು ಮಂಗ ಫ್ರಾಂಚೈಸ್ನಲ್ಲಿನ ಒಂದು ಕಲ್ಪಿತ-ಕಥೆಯ ಪಾತ್ರ ನ್ಯಾರುಟೊ ವನ್ನು ಮಸಾಷಿ ಕಿಷಿಮೊಟೊ ಸೃಷ್ಟಿಸಿದರು. ನ್ಯಾರೊಟೊ ಸರಣಿಯ ಮುಖ್ಯ ವೀರನಾಯಕ ಮತ್ತು ನಾಮಮಾತ್ರದ ಪಾತ್ರ. ಕಿಷಿಮೊಟೋ ನ್ಯಾರುಟೋವನ್ನು ಸೃಷ್ಟಿಸುವಾಗ ಪಾತ್ರವನ್ನು "ಸರಳ ಮತ್ತು ಅವಿವೇಕಿ" ಆಗಿ ಇಡಲು ಬಯಸಿದ, ಹಾಗೆ soನ್ ಗೊಕುನ ಹಲವು ಗುಣಗಳನ್ನು ಅವನಿಗೆ ನೀಡಿದನು, ಸನ್ ಗೊಕು ಡ್ರಾಗನ್ ಬಾಲ್ ಫ್ರಾಂಚೈಸ್ನ ಮುಖ್ಯ ಪಾತ್ರ.
ಚೈನೀಸ್ : 李安; pinyin: Lǐ Ān; (ಜ:ಅಕ್ಟೋಬರ್ ೨೩,೧೯೫೪) ಸನ್.೨೦೧೨ ರಲ್ಲಿ,ಅಮೆರಿಕದ 'ಲಾಸ್ ಏಂಜಲಿಸ್:' ನ,ಲೈಫ್ ಆಫ್ ಪೈಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ, ಆಂಗ್ ಲೀ ಅವರಿಗೆ ಈಗ ಬಹಳ ಸಂಭ್ರಮ. ಆಸ್ಕರ್ ಪ್ರಶಸ್ತಿ ಸಮಾರಂಭದ ಬಳಿಕ ಲ್ಯೂರ್ನಲ್ಲಿ ನಡೆದ 'ಟೆಂಟ್ವಿಯತ್ ಸೆಂಚುರಿ ಫಾಕ್ಸ್ ಎಂಡ್ ಫಾಕ್ಸ್ ಸರ್ಚ್ಲೈಟ್ ಪಿಕ್ಚರ್ ಅಕಾಡೆಮಿ ಅವಾರ್ಡ್ ನಾಮಿನಿಗಳ ಪಾರ್ಟಿ'ಯಲ್ಲಿ ಆಂಗ್ ಲೀ,ಜೊತೆಗೆ, ಎನಿಮೇಶನ್ ನಿರ್ದೇಶಕ, 'ಎರಿಕ್ ಜಾನ್ ಡಿ ಬೋರ್', ಭಾರತೀಯ ನಟ, ಸೂರಜ್ ಶರ್ಮಾ, ಗೀತರಚನಕಾರ, ಮೈಕೆಲ್ ಡಾನಾ, ಮತ್ತು ಸಿನೆಮಾಟೋಗ್ರಾಫರ್, ಕ್ಲಾಡಿಯೋ ಮಿರಾಂಡಾ,ರವರೂ ಜತೆಗೂಡಿದರು. ಆಸ್ಕರ್ ಪ್ರಶಸ್ತಿ ವಿಜೇತರಿಗೆ ಇತರ ಪ್ರಶಸ್ತಿಗಳೂ ಬೆನ್ನುಹತ್ತಿಬಂದು ಅವರೆಲ್ಲಾ ಅತಿ ಸಂತೋಷಪಡುತ್ತಿದ್ದಾರೆ.
ಅಧ್ಯಾಯ ಗದ್ಯ, ಕಾವ್ಯ, ಅಥವಾ ಕಾನೂನಿನ ಪುಸ್ತಕದಂತಹ ತುಲನಾತ್ಮಕ ಉದ್ದದ ಬರವಣಿಗೆ ಖಂಡದ ಮುಖ್ಯ ವಿಭಾಗಗಳಲ್ಲಿ ಒಂದು. ಅಧ್ಯಾಯ ಪುಸ್ತಕವು ಹಲವು ಅಧ್ಯಾಯಗಳನ್ನು ಹೊಂದಿರಬಹುದು ಮತ್ತು ಆ ನಿರ್ದಿಷ್ಟ ಅಧ್ಯಾಯದ ಮುಖ್ಯ ವಿಷಯವಾಗಿರಬಹುದಾದ ಅನೇಕ ವಸ್ತುಗಳನ್ನು ಸೂಚಿಸಬಹುದು. ಪ್ರತಿ ಸಂದರ್ಭದಲ್ಲೂ, ಅಧ್ಯಾಯಗಳಿಗೆ ಸಂಖ್ಯೆ ಕೊಡಬಹುದು ಅಥವಾ ಅವುಗಳನ್ನು ಹೆಸರಿಸಬಹುದು ಅಥವಾ ಎರಡನ್ನೂ ಮಾಡಬಹುದು.
ಡೇವಿಡ್ ಕ್ರೇನ್ ಹಾಗೂ ಮಾರ್ಟಾ ಕಾಫ಼್ಮಾನ್ ರಿಂದ ತಯಾರಿತ ಫ಼್ರೆಂಡ್ಸ್, ಅಮೇರಿಕಾದ ಒಂದು ಧಾರಾವಾಹಿಯಾಗಿದೆ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್ ನ ಸಹಯೋಗದೊಂದಿಗೆ ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್ ನಿಂದ ನಿರ್ಮಿಸಲ್ಪಟ್ಟಿದೆ.
ಸ್ಟೇಜ್ ಹೆಸರು ಲೇಡಿ ಗಾಗಾ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದ ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ (ಮಾರ್ಚ್ ೨೮, ೧೯೮೬ ರಂದು ಜನಿಸಿದರು) ಇವರು ಅಮೇರಿಕಾದ ಒಬ್ಬ ಹಾಡುಗಾರ್ತಿ-ಕವನಬರಹಗಾರರಾಗಿದ್ದರು. ರಲ್ಲಿ ನ್ಯೂಯಾರ್ಕ್ ನಗರದ ಲೋವರ್ ಈಸ್ಟ್ ಸೈಡ್ನ ರಾಕ್ ಸಂಗೀತ ದೃಶ್ಯದಲ್ಲಿ ಪಾಲ್ಗೊಂಡ ನಂತರ ಮತ್ತು ನಂತರದಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದ ಆರ್ಟ್ಸ್ನಲ್ಲಿ ದಾಖಲಾತಿಯನ್ನು ಪಡೆದ ನಂತರ, ಆಕೆಯು ಸ್ಟ್ರೀಮ್ಲೈನ್ ರೆಕಾರ್ಡ್ಸ್, ಇಂಟರ್ಸ್ಕೋಪ್ ರೆಕಾರ್ಡ್ಸ್ನ ಒಂದು ಪ್ರಕಾಶನ ಮುದ್ರೆಯಾಗಿತ್ತು. ಇಂಟರ್ಸ್ಕೋಪ್ನಲ್ಲಿನ ಮೊದಲ ಅವಧಿಯ ಸಮಯದಲ್ಲಿ, ಅವರು ತಮ್ಮ ಸಹ ಕಲಾಕಾರರಿಗೆ ಕವನಬರಹಗಾರರಾಗಿ ಕಾರ್ಯನಿರ್ವಹಿಸಿದರು ಮತ್ತು ರಾಪರ್ ಆಕೋನ್ರ ಗಮನವನ್ನು ತಮ್ಮೆಡೆಗೆ ಸೆಳೆದರು, ಆಕನ್ ಆಕೆಯ ಹಾಡುಗಾರಿಕೆಯ ಸಾಮರ್ಥ್ಯಗಳನ್ನು ಗುರುತಿಸಿದರು, ಮತ್ತು ತಮ್ಮ ಸ್ವಂತ ಲೇಬಲ್ ಕಾನ್ ಲೈವ್ ಡಿಸ್ಟ್ರಿಬ್ಯೂಷನ್ನಲ್ಲಿ ಆಕೆಯನ್ನು ದಾಖಲಾತಿ ಮಾಡಿಕೊಂಡರು.
ದಿ ಲಾರ್ಡ್ ಆಫ್ ದಿ ರಿಂಗ್ಸ್, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಭಾಷಾಶಾಸ್ತ್ರಜ್ಞ J.R.R. ಟೋಲ್ಕಿನ್ ಅವರ ಪ್ರಸಿದ್ಧ ಅತಿ ಕಾಲ್ಪನಿಕ ಕಾದಂಬರಿ. ಈ ಕಥಾನಕವು ಟೋಲ್ಕಿನ್ ಅವರ ಮುಂಚಿನ, ಕಡಿಮೆ ಸಂಕಿರ್ಣತೆಯುಳ್ಳ ದಿ ಹೊಬ್ಬಿಟ್ (೧೯೩೭) ಎಂಬ ಮಕ್ಕಳ ಕಾಲ್ಪನಿಕ ಕಾದಂಬರಿಯ ಉತ್ತರಾರ್ಧ ಭಾಗವಾದರೂ ತರುವಾಯ ಬೃಹತ್ ಕೃತಿಯಾಗಿ ಅರಳಿತು. ಈ ಕಾದಂಬರಿಯನ್ನು ೧೯೩೭ ಮತ್ತು ೧೯೪೯ರಲ್ಲಿ ,ಹೆಚ್ಚಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಂತಹಂತವಾಗಿ ಬರೆಯಲಾಯಿತು.ಸಾಮಾನ್ಯವಾಗಿ ಓದುಗರಿಗೆ ಕೃತಿತ್ರಯ ಎಂದೇ ಪರಿಚಿತವಾದರೂ, ಪ್ರಾರಂಭದಲ್ಲಿ ಎರಡು-ಸಂಪುಟಗಳ ಜೋಡಿಯಲ್ಲಿ ಒಂದು ಸಂಪುಟವಾಗಿದಿ ಸಿಲ್ಮರಿಲ್ಲಿಯೋನ್ ಜೊತೆಗೆ ಹೊರತರಬೇಕೆಂಬುದೆ ಟೋಲ್ಕಿನ್ ಉದ್ದೇಶವಾಗಿತ್ತು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಟ್ರೇಲರ್ ಅಥವಾ ಮುನ್ನೋಟವು ಭವಿಷ್ಯದಲ್ಲಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವ ಕಥಾಚಿತ್ರಕ್ಕಾಗಿ ಒಂದು ಜಾಹೀರಾತು. "ಟ್ರೇಲರ್" ಪದವು ಮೂಲತಃ ಅವನ್ನು ಕಥಾಚಿತ್ರ ಪ್ರದರ್ಶನದ ಕೊನೆಯಲ್ಲಿ ತೋರಿಸುತ್ತಿದ್ದರಿಂದ ಬಂದಿದೆ. ಆ ಅಭ್ಯಾಸ ಬಹುಕಾಲ ಉಳಿಯಲಿಲ್ಲ, ಏಕೆಂದರೆ ಗ್ರಾಹಕರು ಚಿತ್ರಗಳು ಮುಗಿದ ನಂತರ ಹೊರಟುಬಿಡುವ ಪ್ರವೃತ್ತಿ ಹೊಂದಿದ್ದರು, ಆದರೆ ಆ ಹೆಸರೇ ಉಳಿದುಕೊಂಡಿದೆ.
ಕನ್ನಡದಲ್ಲಿ ಮಹಿಳಾ ವಿಮಾಂಸೆ ಸಾಹಿತ್ಯದ ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ ೨೦ನೆಯ ಶತಮಾನಕ್ಕೆ ಕಾಲಿರಿಸುವವರೆಗೆ ಮಹಿಳೆಯರೇ ರಚಿಸಿದ ಸಾಹಿತ್ಯ, ಮಹಿಳಾ ಸಾಹಿತ್ಯವೆಂಬ ಹೆಸರಿನಲ್ಲಿ ಗುರುತಿಸಬಹುದಾದಂಥದ್ದು ಹೆಚ್ಚು ಕಂಡುಬರುವುದಿಲ್ಲ. ಸ್ತ್ರೀಯರು ವಿದ್ಯೆಯಿಂದ ವಂಚಿತರಾದದ್ದು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗದೇ ಹೋದದ್ದು, ಸ್ವಾತಂತ್ರ್ಯವಿರದ ಅವಲಂಬನೆಯ ಜೀವನವೇ ಪ್ರಧಾನವಾದದ್ದು - ಇಂಥ ಅನೇಕ ಕಾರಣಗಳಿಂದಾಗಿ ಮಹಿಳೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಬಹುಕಾಲದವರೆಗೆ ಅನನ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದು.
ಸಿದ್ಧಯ್ಯ ಪುರಾಣಿಕ (ಜೂನ್ ೧೮, ೧೯೧೮ - ಸೆಪ್ಟೆಂಬರ್ ೫, ೧೯೯೪) ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ. ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.
ಹವಾಯಿ (/həˈwaɪ.iː/ ಅಥವಾ /həˈwaɪʔiː/ ಇಂಗ್ಲಿಷ್ನಲ್ಲಿ; ಹವಾಯನ್: ಮೊಕುʻಐನಾ ಒ ಹವಾಯಿʻ ) ಯು.ಎಸ್ನ 50 ರಾಜ್ಯಗಳಲ್ಲಿ ಅತ್ಯಂತ ಹೊಸದು (ಆಗಸ್ಟ್ 21, 1959), ಮತ್ತು ಸಂಪೂರ್ಣ ದ್ವೀಪಗಳಿಂದಲೇ ಆಗಿರುವ ಏಕೈಕ ರಾಜ್ಯ. ಮಧ್ಯ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಸಮುದಾಯದ ಬಹುತೇಕ ಭಾಗದಲ್ಲಿ ಇದೇ ವ್ಯಾಪಿಸಿದೆ, ಯುನೈಟೆಡ್ ಸ್ಟೇಟ್ಸ್ ಭೂಖಂಡದ ಈಶಾನ್ಯ, ಜಪಾನ್ನ ಆಗ್ನೇಯ, ಮತ್ತು ಆಸ್ಟ್ರೇಲಿಯಾದ ನೈಋತ್ಯ ದಿಕ್ಕಿನ ಪ್ರದೇಶವನ್ನು ಒಳಗೊಂಡಿದೆ. ಹವಾಯಿಯ ನೈಸರ್ಗಿಕ ಸೌಂದರ್ಯ, ಉಷ್ಣವಲಯದ ಬೆಚ್ಚಗಿನ ಹವಾಮಾನ, ಆಕರ್ಷಿಸುವ ನೀರು ಮತ್ತು ಅಲೆಗಳು, ಮತ್ತು ಜೀವಂತ ಅಗ್ನಿಪರ್ವತಗಳು ಇದನ್ನು ಪ್ರವಾಸಿಗರ, ಕಡಲಲ್ಲಿ ಸವಾರಿ ಮಾಡುವ ಕ್ರೀಡಾಪಟುಗಳ, ಜೈವಿಕ ತಜ್ಞರ, ಮತ್ತು ಅಗ್ನಿಪರ್ವತ ತಜ್ಞರ ಪ್ರಿಯತಾಣವನ್ನಾಗಿ ಮಾಡಿದೆ.
ಕವಚ ಯುದ್ಧ ಪ್ರಸಂಗಗಳಲ್ಲಿ ಶತ್ರುವಿನ ಹೊಡೆತದಿಂದ ದೇಹಕ್ಕೆ ರಕ್ಷಣೆ ಒದಗಿಸಲು ಯೋಧ ಧರಿಸುವ ವಿಶಿಷ್ಟ ರಚನೆ (ಆರ್ಮರ್). ಪೂರ್ವ ಕಾಲದಲ್ಲಿ ಯುದ್ಧಗಳೆಂದರೆ ವ್ಯಕ್ತಿಗಳು ಪರಸ್ಪರವಾಗಿ ಭರ್ಜಿ ಕತ್ತಿ ಕೊಡಲಿ ಮುಂತಾದ ಆಯುಧಗಳನ್ನು ಹಿಡಿದು ಹೋರಾಡುತ್ತಿದ್ದ ಪ್ರಸಂಗಗಳಾಗಿದ್ದುವು. ಆದ್ದರಿಂದ ಪ್ರತಿಯೊಬ್ಬ ಯೋಧನೂ ಪ್ರತಿಸ್ಪರ್ಧಿಯ ಏಟುಗಳನ್ನು ತಡೆಯಲು ಸಹಾಯಕವಾಗುವಂತೆ ತನ್ನ ತಲೆ, ಕತ್ತು, ಎದೆ ಇತ್ಯಾದಿ ಅಂಗಗಳನ್ನು ಇನ್ನೂ ಸ್ವಲ್ಪ ಕಾಲಾನಂತರ ತನ್ನ ಸಮಸ್ತಾಂಗಗಳನ್ನೂ ತಕ್ಕ ಹೊದಿಕೆಗಳಿಂದ ಮರೆ ಮಾಡಿಕೊಳ್ಳುತ್ತಿದ್ದ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪಾಂಡವರು ಮಹಾಭಾರತದ ಮಹಾಕಾವ್ಯದ ಪ್ರಮುಖ ಪಾತ್ರಗಳಾದ ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವ ಎಂಬ ಐದು ಸಹೋದರರನ್ನು ಉಲ್ಲೇಖಿಸಲಾಗಿದೆ. ಅವರನ್ನು ಕುರು ರಾಜ ಪಾಂಡುವಿನ ಪುತ್ರರೆಂದು ಪರಿಗಣಿಸಲಾಗುತ್ತಿತ್ತು, ಆದರೆ ಪಾಂಡುವಿನ ಮಕ್ಕಳನ್ನು ಹೊಂದಲು ಅಸಮರ್ಥತೆಯಿಂದಾಗಿ ಕುಂತಿ-ಮಾದ್ರಿಯರು ಬೇರೆ ಬೇರೆ ದೇವರುಗಳಿಂದ ಪಾಂಡವರನ್ನು ಪಡೆದರು. ಪಾಂಡವರು ದ್ರೌಪದಿ ಎಂಬ ಹೆಂಡತಿಯನ್ನು ಹಂಚಿಕೊಂಡರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಕೇಶಿರಾಜ:~ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ "ಕಾವ್ಯಾವಲೋಕನ"(ಶಬ್ದ ಸ್ಮೃತಿ) ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವೈಯಾಕರಣರು ಅಭಿಪ್ರಾಯಪಟ್ಟಿದ್ದಾರೆ. ಪ್ರಧಾನವಾಗಿ ಇದು ವಿಧಾತ್ಮಕ ಅಥವಾ ಆದರ್ಶ ರೀತಿಯ ವ್ಯಾಕರಣ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಮೈಲಿ ೫,೨೮೦ ಅಡಿಗಳಿಗೆ (೧,೭೬೦ ಗಜಗಳು, ಅಥವಾ ಸುಮಾರು ೧,೬೦೯ ಮೀಟರ್ಗಳು) ಸಮಾನವಾದ ಉದ್ದದ ಏಕಮಾನ. ೫,೨೮೦ ಅಡಿಗಳ ಮೈಲಿಯನ್ನು ನಾವಿಕ ಮೈಲಿಯಿಂದ (ಸುಮಾರು ೬,೦೭೬ ಅಡಿಗಳು, ಅಥವಾ ೧,೮೫೨ ಮೀಟರ್ಗಳು) ಪ್ರತ್ಯೇಕಿಸಲು ಅದನ್ನು ಭೂ ಮೈಲಿ ಎಂದು ಕರೆಯಬಹುದು. ೧೯೫೯ರ ಅಂತರರಾಷ್ಟ್ರೀಯ ಗಜ ಮತ್ತು ಪೌಂಡ್ ಒಪ್ಪಂದ ಗಜವನ್ನು ನಿಖರವಾಗಿ ೦.೯೧೪೪ ಮೀಟರ್ಗಳೆಂದು ಪ್ರಮಾಣೀಕರಿಸುವವರೆಗೆ ಭೂ ಮೈಲಿಯ ನಿಖರವಾದ ಉದ್ದ ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಬದಲಾಗುತ್ತಿತ್ತು, ಮತ್ತು ಇದಾದ ಮೇಲೆ ಒಂದು ಮೈಲಿ ನಿಖರವಾಗಿ ೧,೬೦೯.೩೪೪ ಮೀಟರ್ಗಳೆಂದಾಯಿತು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.