The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
"ಪಂಚತಂತ್ರ ಕಥೆಗಳ ಮೂಲ ಭಾರತ".ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ( ಸಂಸ್ಕೃತ:पञ्चतन्त्र' )ಐದು ಮೂಲತತ್ವಗಳು'ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, "ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು" ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು "ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ" ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಒಂದು ಆಸ್ಪತ್ರೆ ಎಂದರೆ ಇದೊಂದು ರೋಗಿಗಳಿಗೆ ಆರೋಗ್ಯ ರಕ್ಷಣೆ, ಗುಣಮಾಡುವ ಚಿಕಿತ್ಸೆ ಒದಗಿಸುವ ತಾಣವಾಗಿದೆ.ಇದಕ್ಕಾಗಿ ವಿಶೇಷ ವೈದ್ಯಕೀಯ ಸಿಬ್ಬಂದಿಯು ಮೇಲಿಂದ ಮೇಲೆ ರೋಗಿಗಳ ಸ್ಥಿತಿಗತಿಯನ್ನು ನಿಗಾವಹಿಸುತ್ತದೆ.ಬಹುಕಾಲದ ಕಾಯಿಲೆಗಳಿಗೆ ಅಲ್ಲಿಯೇ ಔಷಧೋಪಚಾರವನ್ನು ಒದಗಿಸುತ್ತದೆ. ಇಂದು ಆಸ್ಪತ್ರೆಗಳು ಬಹುತೇಕವಾಗಿ ಖಾಸಗಿಯವರಿಂದ ಹಣಕಾಸಿನ ನೆರವಿನಡಿಯಲ್ಲಿ ನಡೆಯುತ್ತಿವೆ,ಲಾಭಕ್ಕಾಗಿ ಇಲ್ಲವೆ ಲಾಭರಹಿತ ಆರೋಗ್ಯ ಸಂಘಟನೆಗಳ ಮೂಲಕ ಆರೋಗ್ಯ ವಿಮೆ ಕಂಪನಿಗಳು ಅಥವಾ ದತ್ತಿಸಂಸ್ಥೆಗಳು ಅಲ್ಲದೇ ನೇರವಾದ ದತ್ತಿ ನಿಧಿ ಕೊಡುಗೆಗಳಿಂದ ನಡೆಸಲ್ಪಡುತ್ತವೆ. ಇತಿಹಾಸದುದ್ದಕ್ಕೂ ಆಸ್ಪತ್ರೆಗಳನ್ನು ಧಾರ್ಮಿಕಸಂಸ್ಥೆಗಳು ಹಣಕಾಸು ನೀಡುವುದು ಅದರ ಸ್ಥಾಪನೆ ಮಾಡುವುದು ಮತ್ತುಅದನ್ನು ರಕ್ಷಿಸಿ ಸಾರ್ವಜನಿಕರಿಗೆ ಸೌಕರ್ಯಕ್ಕಾಗಿ ಅವರಲ್ಲದೇ ವ್ಯಕ್ತಿಗಳ ಸಹಾಯದ ಮೂಲಕ ನಡೆಸುತ್ತಾರೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪಾರ್ಕ್ ಚಾನ್-ವುಕ್ (ಹುಟ್ಟು-ಆಗಸ್ಟ್ ೨೩, ೧೯೬೩ ) ದಕ್ಷಿಣ ಕೊರಿಯದ ಚಲನಚಿತ್ರ ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಇವರು ಹಿಂದೆ ಚಿತ್ರ ವಿಮರ್ಶಕರೂ ಆಗಿದ್ದರು. ತಮ್ಮ ತಾಯ್ನಾಡಿನಲ್ಲಿ ಅತ್ಯಂತ ಜನಪ್ರಿಯ ನಿರ್ಮಾಪಕರು ಹೌದು. ಪಾರ್ಕ್ ಜಾಯಿಂಟ್ ಸೆಕ್ಯುರಿಟಿ ಏರಿಯಾ (ಸಿನೆಮಾ) , ಥರ್ಸ್ಟ್(ಸಿನೆಮಾ) ಮತ್ತು ವೆಂಜೆಯಾನ್ಸ್ ಟ್ರೈಲಜಿ ಎಂದು ಪ್ರಸಿದ್ಧವಾದ ಮೂರು ಚಿತ್ರಗಳ ಸರಣಿಗಾಗಿ ಅತ್ಯಂತ ಹೆಸರುವಾಸಿಯಾಗಿದ್ದಾರೆ.
ಟೆಂಪ್ಲೇಟು:Fix bunching ಥಾಮ್ಸನ್ ರಾಯಿಟರ್ಸ್ ಎಂಬುದು ರಾಯಿಟರ್ಸ್ ಕಂಪೆನಿಯನ್ನು 17 ಏಪ್ರಿಲ್ 2008ರಂದು ಥಾಮ್ಸನ್ ಕಾರ್ಪೋರೇಷನ್ ಕಂಪೆನಿಯು ಖರೀದಿಸಿದಾಗ ರಚಿಸಲಾದ ಮಾಹಿತಿ ಕಂಪೆನಿ ಯಾಗಿದೆ. ಟೊರೊಂಟೋ ಷೇರು ವಿನಿಮಯ ಕೇಂದ್ರ (TSX: TRI) ಮತ್ತು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರಗಳ (NYSE: TRI) ಪಟ್ಟಿಯಲ್ಲಿ ಥಾಮ್ಸನ್ ರಾಯಿಟರ್ಸ್ನ ಷೇರುಗಳನ್ನು ನಮೂದಿಸಲಾಗುತ್ತದೆ. USAಯ ನ್ಯೂಯಾರ್ಕ್ ಮಹಾನಗರದ ಮನ್ಹಾಟ್ಟನ್ ಮಿಡ್ಟೌನ್/ಪೇಟೆವಲಯದಲ್ಲಿ ಥಾಮ್ಸನ್ ರಾಯಿಟರ್ಸ್ ಕಂಪೆನಿಯು ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ.
ಬಯೋಶಾಕ್ ಎಂಬುದು ಅಗ್ರೇಸರ ದೃಷ್ಟಿಕೋನದ ಅನುಭವ ನೀಡುವ ಆಟದ ಶೈಲಿಯಲ್ಲಿರುವ ಒಂದು ಭೀತಿಕಾರಕ ವಿಡಿಯೋ ಆಟವಾಗಿದ್ದು, ಇರ್ಯಾಷನಲ್ ಗೇಮ್ಸ್ ಸಂಸ್ಥೆಯಿಂದ- ನಂತರದಲ್ಲಿ 2K ಬೋಸ್ಟನ್/2K ಆಸ್ಟ್ರೇಲಿಯಾ ಎಂಬ ಹೆಸರಿನ ಅಡಿಯಲ್ಲಿ- ಅಭಿವೃದ್ಧಿಪಡಿಸಲ್ಪಟ್ಟಿತು ಮತ್ತು ಕೆನ್ ಲೆವಿನ್ ಎಂಬಾತನಿಂದ ವಿನ್ಯಾಸಗೊಳಿಸಲ್ಪಟ್ಟಿತು. ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಗೆ ಮತ್ತು Xಬಾಕ್ಸ್ 360 ವಿಡಿಯೋ ಆಟದ ಪೆಟ್ಟಿಗೆಗೆ (ವಿಡಿಯೋ ಗೇಮ್ ಕನ್ಸೋಲ್) ಸಂಬಂಧಿಸಿದಂತೆ 2007ರ ಆಗಸ್ಟ್ 21ರಂದು ಇದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡಲ್ಪಟ್ಟಿತು, ಮತ್ತು ಮೂರು ದಿನಗಳ ನಂತರ ಯುರೋಪ್ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಇದು ಬಿಡುಗಡೆಯಾಯಿತು. 2K ಮ್ಯಾರಿನ್ನಿಂದ ಅಭಿವೃದ್ಧಿಪಡಿಸಲ್ಪಟ್ಟ ಆಟದ ಒಂದು ಪ್ಲೇಸ್ಟೇಷನ್ 3ರ ಆವೃತ್ತಿಯನ್ನು 2008ರ ಅಕ್ಟೋಬರ್ 17ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲಾಯಿತು; ಅಷ್ಟೇ ಅಲ್ಲ, ಕೆಲವೊಂದು ಹೆಚ್ಚುವರಿ ಲಕ್ಷಣಗಳೊಂದಿಗೆ ಇದನ್ನು 2008ರ ಅಕ್ಟೋಬರ್ 21ರಂದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡಲಾಯಿತು.
ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ. ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ. ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ರಾಜ್ಯದ ಭಾಷೆ: ನೆರೆಯ ಬಾಂಗ್ಲದೇಶದಲ್ಲಿ ರಾಷ್ಟ್ರಭಾಷೆ: ಗಂಗಾನದಿ ಬಯಲಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಬ್ಬಿರುವ ಬಂಗಾಳ ಪ್ರಾಂತ್ಯದ ಜನರ ಭಾಷೆ.
' ನಿಕೊಲ್ ಕಿಡ್ಮನ್, ಎ ಸಿ (ಹುಟ್ಟು ಜೂನ್ ೨೦, ೧೯೬೭) ಅಮೆರಿಕಾ ಸಂಜಾತೆ, ಆಸ್ಟ್ರೇಲಿಯಾದ ನಟಿ, ಫ್ಯಾಷನ್ ರೂಪದರ್ಶಿ, ಹಾಡುಗಾರ್ತಿ ಹಾಗೂ ಮಾನವತಾವಾದಿ. ೧೯೯೪ರಿಂದ ಆಸ್ಟ್ರೇಲಿಯಾ ಯುನಿಸೆಫ್ನ ಸದ್ಭಾವ ರಾಯಭಾರಿಯಾಗಿದ್ದಾರೆ. ೨೦೦೬ರಲ್ಲಿ ಕಿಡ್ಮನ್ರಿಗೆ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ನೀಡಿ ಗೌರವಿಸಲಾಯಿತು, ಇದು ಆಸ್ಟ್ರೇಲಿಯಾದ ಉನ್ನತ ನಾಗರೀಕ ಸನ್ಮಾನವಾಗಿದೆ.
ಟೈಲರ್ ಆಲಿಸನ್ ಸ್ವಿಫ್ಟ್ (ಡಿಸೆಂಬರ್ 13,1989ರಂದು ಜನನ)ಅಮೆರಿಕನ್ ಕಂಟ್ರಿ(ಜನಪದ)ಪಾಪ್ ಹಾಡುಗಾರ್ತಿ-ಗೀತರಚನೆಕಾರ್ತಿ ಮತ್ತು ನಟಿ. "ಪಾಪ್ನ ಅತ್ಯುತ್ತಮ ಗೀತರಚನೆಕಾರ್ತಿ, ಕಂಟ್ರಿಯ ಅಗ್ರಗಣ್ಯ ವ್ಯಾವಹಾರಿಕ ಚತುರೆ ಮತ್ತು ಬಹುತೇಕ ಪ್ರೌಢವಯಸ್ಕರಿಗಿಂತ ತನ್ನ ಆಂತರ್ಗತ ಜೀವನದ ಜತೆ ಹೆಚ್ಚು ಸಂಪರ್ಕವಿರಿಸಿಕೊಂಡಿದ್ದಾಳೆ" ಎಂದು ನ್ಯೂಯಾರ್ಕ್ ಟೈಮ್ಸ್ ಸ್ವಿಫ್ಟ್ ಅವಳನ್ನು ಬಣ್ಣಿಸಿದೆ.2006ರಲ್ಲಿ ತಮ್ಮ ಚೊಚ್ಚಲ ಸಿಂಗಲ್(ಒಂದೇ ಹಾಡಿನ ತಟ್ಟೆ) "ಟಿಮ್ ಮೆಕ್ಗ್ರಾ"ನಂತರ ತನ್ನದೇ ಹೆಸರಿನ ಚೊಚ್ಚಲ ಆಲ್ಬಂ ಬಿಡುಗಡೆ ಮಾಡಿದಳು. ಅದು ಅಮೆರಿಕದ ದ್ವನಿಮುದ್ರಣ ಕೈಗಾರಿಕೆ ಒಕ್ಕೂಟದಿಂದ ಅನೇಕ ಬಾರಿ ಪ್ಲಾಟಿನಂ ಪ್ರಮಾಣಪತ್ರ ಪಡೆದಿದೆ.
ಆಲ್ಬರ್ಟ್ ಕಾಮೂ(French: [albɛʁ kamy] ( ); ೭ ನವೆಂಬರ್ ೧೯೧೩ – ೪ ಜನವರಿ ೧೯೬೦)ಫ್ರಾನ್ಸ್ ದೇಶದ ಲೇಖಕ,ಪತ್ರಕರ್ತ ಮತ್ತು ತತ್ವಜ್ಞಾನಿ. ಇವರಿಗೆ ೧೯೫೭ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.. ಇವರ ದೃಷ್ಟಿಕೋನವು ತತ್ವಶಾಸ್ತ್ರದಲ್ಲಿ ಅಸಂಗತತೆಯ ಪರಿಕಲ್ಪನೆಯು ಬೆಳೆಯುವಲ್ಲಿ ಸಹಾಯ ಮಾಡಿತು.ವ್ಯಕ್ತಿಗತ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದರೊಂದಿಗೆ ನಿರಾಕರಣವಾದವನ್ನು ತನ್ನ ಜೀವಮಾನ ಪೂರ್ತಿ ವಿರೋಧಿಸಿಕೊಂಡು ಬಂದುದಾಗಿ ತನ್ನ ಪುಸ್ತಕ ದಿ ರೆಬೆಲ್ ನಲ್ಲಿ ಬರೆದುಕೊಂಡಿದ್ದಾರೆ.
ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ Facebook, Inc. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು.
ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ಲೋಕಸಭೆಗೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ, ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.
ಟೆಂಪ್ಲೇಟು:Infobox Settlement ತೆಹ್ರಾನ್ (ಅಥವಾ ತೆಹೆರಾನ್) (ಪರ್ಶಿಯನ್ ಭಾಷೆ:تهران) ನಗರವು ಇರಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರವಾಗಿದ್ದು, ತೆಹ್ರಾನ್ ಪ್ರಾಂತ್ಯದ ಆಡಳಿತ ಕೇಂದ್ರವಾಗಿದೆ. ಮಧ್ಯ ಪ್ರಾಚ್ಯದ ಅತೀ ಎತ್ತರ ಪ್ರದೇಶವಾಗಿರುವ ಅಲ್ಬೊರ್ಜ್ ಪರ್ವತಶ್ರೇಣಿಯ(೧,೧೯೧ ಮೀ, ೩೯೦೦ಅಡಿ) ಅಡಿಯಲ್ಲಿರುವ ತೆಹ್ರಾನ್ ನಗರವು ಮಧ್ಯ ಪ್ರಾಚ್ಯದ ಪ್ರಮುಖ ನಗರಗಳಲ್ಲಿ ಒಂದಾಗಿದೆ. ತೆಹ್ರಾನ್ ನಗರವು ಸ್ಕೀ ರೆಸಾರ್ಟ್ಗಳು, ದೊಡ್ಡ ವಸ್ತುಸಂಗ್ರಹಾಲಯಗಳು, ಕಲಾಕೇಂದ್ರಗಳು ಮತ್ತು ಅರಮನೆಗಳಿಗೆ ಪ್ರಸ್ಸಿದ್ದವಾಗಿದೆ.
ಹ್ಯಾರಿ ಪಾಟರ್ ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ. ಈ ಪುಸ್ತಕಗಳು ಹಾಗ್ವರ್ಟ್ಸ್ ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹದಿ ವಯಸ್ಸಿನ ಮಾಂತ್ರಿಕ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್ ಗ್ರಾಂಗರ್ ರ ಜೊತೆಗಿನ ಸಾಹಸಗಳ ಘಟನೆಗಳನ್ನು ವಿವರಿಸುತ್ತದೆ. ಈ ಕಥೆಯ ಕೇಂದ್ರ ವಿಷಯವು ಮಾಂತ್ರಿಕ ಜಗತ್ತನ್ನು ಗೆಲ್ಲುವ ಹುಡುಕಾಟದಲ್ಲಿರುವ ಮತ್ತು ಮಾಂತ್ರಿಕರಲ್ಲದ ಸಾಮಾನ್ಯ ಜನರನ್ನು (ಮಗ್ಗಲ್ಸ್) ತನ್ನ ಆಳ್ವಿಕೆಗೆ ಸ್ವಾಧಿನ ಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ, ಹ್ಯಾರಿಯ ಹೆತ್ತವರನ್ನು ಕೊಂದ ದುಷ್ಟ ಮಾಂತ್ರಿಕ ಲಾರ್ಡ್ ವೊಲ್ಡೆಮೊರ್ಟ್ನ ವಿರುದ್ಧ ಹ್ಯಾರಿಯ ಹೋರಾಟದ ಕುರಿತಾಗಿದೆ.
ಸ್ವಾತಂತ್ರ್ಯ ಬಂದಾಗಿನಿಂದಲೂ, ಭಾರತದಲ್ಲಿನ ಚುನಾವಣೆಗಳು ತಮ್ಮ ವಿಕಸನದಲ್ಲಿ ಸುದೀರ್ಘವಾದ ಹಾದಿಯನ್ನು ಸವೆಸಿವೆಯಾದರೂ, ಅಷ್ಟು ಸಮಯವೂ ಚುನಾವಣೆಗಳು ಸ್ವತಂತ್ರ ಭಾರತದ ಒಂದು ಗಮನಾರ್ಹವಾದ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ. 2004ರಲ್ಲಿ ನಡೆದ ಭಾರತೀಯ ಚುನಾವಣೆಗಳು 670 ದಶಲಕ್ಷಕ್ಕೂ ಹೆಚ್ಚಿನ ಜನರಿರುವ ಮತದಾರ ಸಮುದಾಯವೊಂದನ್ನು ಒಳಗೊಂಡಿದ್ದವು; ಇದು ಮುಂದಿನ ಅತಿದೊಡ್ಡ ಸ್ಥಾನವನ್ನು ಹೊಂದಿರುವ ಯುರೋಪಿನ ಸಂಸತ್ ಚುನಾವಣೆಗಳಿಗೆ ಹೋಲಿಸಿದಾಗ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, 1989ರ ವೆಚ್ಚಗಳಿಗೆ ಹೋಲಿಸಿದಾಗ ಈ ಅವಧಿಯ ಘೋಷಿತ ಖರ್ಚುವೆಚ್ಚವು ಮೂರುಪಟ್ಟು ಹೆಚ್ಚಾಗಿ, ಅದು ಬಹುಮಟ್ಟಿಗೆ 300 ದಶಲಕ್ಷ $ನಷ್ಟು ಪ್ರಮಾಣವನ್ನು ತಲುಪಿತ್ತು ಮತ್ತು ಈ ಚುನಾವಣೆಯಲ್ಲಿ 1 ದಶಲಕ್ಷಕ್ಕೂ ಹೆಚ್ಚಿನ ವಿದ್ಯುನ್ಮಾನ ಮತದಾನ ಯಂತ್ರಗಳು ಬಳಸಲ್ಪಟ್ಟವು.
ಸೌಲ್ (ಕೇಳಿ ) ದಕ್ಷಿಣ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರವಾಗಿದೆ. ೧೦ ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸೌಲ್ ನಗರವು ವಿಶ್ವದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾಗಿದೆ. ಇಂಚಿಯಾನ್ ಮತ್ತು ಗ್ಯಾಂಗಿ-ದೊ ಪ್ರದೇಶಗಳನ್ನು ಒಳಗೊಂಡಿರುವ ಸೌಲ್ ರಾಜಧಾನಿ ಪ್ರದೇಶವು ೨೩ ದಶಲಕ್ಷ ಜನರನ್ನು ಹೊಂದ್ದಿದು, ವಿಶ್ವದ ೨ನೆಯ ಅತ್ಯಂತ ದೊಡ್ಡ ಮಹಾನಗರ ಪ್ರದೇಶವಾಗಿದೆ.
ಅಡಾಲ್ಫ್ ಹಿಟ್ಲರ್ , (೨೦ ಏಪ್ರಿಲ್ ೧೮೮೯ - ೩೦ ಏಪ್ರಿಲ್ ೧೯೪೫) ಆಸ್ಟ್ರಿಯಾದಲ್ಲಿ ಜನಿಸಿದ ಜರ್ಮನ್ ರಾಜಕಾರಣಿ ಹಾಗೂ ನಾಜಿ ಪಕ್ಷವೆಂದೇ ಖ್ಯಾತವಾದ ನ್ಯಾಶನಲ್ ಸೋಶಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿಯ (ಸಂಕ್ಷಿಪ್ತ ರೂಪ NSDAP) ನೇತಾರನಾಗಿದ್ದವನು. ಈತನು ೧೯೩೩ರಿಂದ ೧೯೪೫ರ ವರೆಗೆ ಜರ್ಮನಿಯನ್ನು ಆಳಿದನು. ೧೯೩೩ರಿಂದ ೧೯೪೫ರವರೆಗೆ ಚಾನ್ಸೆಲರ್ ಆಗಿ ಹಾಗೂ ೧೯೩೪ರಿಂದ ೧೯೪೫ರವರೆಗೆ ರಾಷ್ಟ್ರದ ಮುಖ್ಯಸ್ಥನಾಗಿ ಆಡಳಿತ ನಡೆಸಿದನು.
ಡಿಸ್ನಿ + (ಡಿಸ್ನಿ ಪ್ಲಸ್ ಎಂದು ಉಚ್ಚರಿಸಲಾಗುತ್ತದೆ) ಎಂಬುದು ಅಮೆರಿಕಾದ ಚಂದಾದಾರಿಕೆ ವೀಡಿಯೊವಾಗಿದ್ದು, ದಿ ವಾಲ್ಟ್ ಡಿಸ್ನಿ ಕಂಪನಿಯ ಮಾಧ್ಯಮ ಮತ್ತು ಮನರಂಜನಾ ವಿತರಣಾ ವಿಭಾಗದ ಒಡೆತನದ ಮತ್ತು ನಿರ್ವಹಿಸುತ್ತಿರುವ ಓವರ್-ದಿ-ಟಾಪ್ ಸ್ಟ್ರೀಮಿಂಗ್ ಸೇವೆಯಾಗಿದೆ. ಈ ಸೇವೆಯು ಪ್ರಾಥಮಿಕವಾಗಿ ದಿ ವಾಲ್ಟ್ ಡಿಸ್ನಿ ಸ್ಟುಡಿಯೋಸ್ ಮತ್ತು ವಾಲ್ಟ್ ಡಿಸ್ನಿ ಟೆಲಿವಿಷನ್ ನಿರ್ಮಿಸಿದ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ವಿತರಿಸುತ್ತದೆ, ಯುನೈಟೆಡ್ ಸ್ಟೇಟ್ಸ್ನ ಹೊರಗಿನ ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ ಡಿಸ್ನಿ, ಪಿಕ್ಸರ್, ಮಾರ್ವೆಲ್, ಸ್ಟಾರ್ ವಾರ್ಸ್, ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಸ್ಟಾರ್ ಬ್ರಾಂಡ್ಗಾಗಿ ಮೀಸಲಾದ ವಿಷಯ ಹಬ್ಗಳೊಂದಿಗೆ. ಮೂಲ ಚಲನಚಿತ್ರಗಳು ಮತ್ತು ದೂರದರ್ಶನ ಸರಣಿಗಳನ್ನು ಡಿಸ್ನಿ + ನಲ್ಲಿ ವಿತರಿಸಲಾಗುತ್ತದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಈ ಲೇಖನವು ಆತಿಥ್ಯ/ಅತಿಥಿ ಸತ್ಕಾರದ ಅರ್ಥ ನಿರೂಪಣೆಗೆ ಸಂಬಂಧಿಸಿದುದಾಗಿದೆ. ಹೋಟೆಲ್ ನಿರ್ವಹಣೆಯ ಶೈಕ್ಷಣಿಕ ಅಧ್ಯಯನಗಳಿಗಾಗಿ, ನೋಡಿ ಆತಿಥ್ಯ/ಅತಿಥಿ ಸತ್ಕಾರ ನಿರ್ವಹಣಾ ಅಧ್ಯಯನಗಳು ಹಾಗೂ ಆತಿಥ್ಯ/ಅತಿಥಿ ಸತ್ಕಾರ ಉದ್ಯಮ. ಆತಿಥ್ಯ/ಅತಿಥಿ ಸತ್ಕಾರ ವು ಓರ್ವ ಅತಿಥಿ ಹಾಗೂ ಆತಿಥೇಯರ ನಡುವಿನ ಒಂದು ಬಾಂಧವ್ಯ/ಸಂಬಂಧ, ಅಥವಾ ಅತಿಥಿ ಸತ್ಕಾರದ ನಡೆ ಅಥವಾ ಪ್ರವೃತ್ತಿಯಾಗಿರುತ್ತದೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು
ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಾಲ ಸಾಹಿತ್ಯ ಪುರಸ್ಕಾರ, ಅನುವಾದ ಕ್ಷೇತ್ರದ ಸಾಧನೆಗೆ ಅನುವಾದ ಬಹುಮಾನಗಳನ್ನೂ ನೀಡಿ ಗೌರವಿಸಲಾಗುತ್ತದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ಯವಾದವು: ಬಹುಜನ ಸಮಾಜ ಪಕ್ಷ (BSP) - ಮಾಯಾವತಿ ಕುಮಾರಿ ಅವರ ನೇತೃತ್ವದಲ್ಲಿ.