The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಭೂರಚನಶಾಸ್ತ್ರ ಮತ್ತು ಭೌತಿಕ ಭೂಗೋಳಶಾಸ್ತ್ರದಲ್ಲಿ, ಪ್ರಸ್ಥಭೂಮಿ ಎಂದರೆ ಸಾಮಾನ್ಯವಾಗಿ ತುಲನಾತ್ಮಕವಾಗಿ ಚಪ್ಪಟೆ ಭೂಮಿಯನ್ನು ಹೊಂದಿರುವ, ಸುತ್ತಮುತ್ತಲಿನ ಪ್ರದೇಶದ ಮೇಲೆ ಗಣನೀಯವಾಗಿ ಎತ್ತರಿಸಿರುವ, ಹಲವುವೇಳೆ ಕಡಿದಾದ ಇಳಿಜಾರಿನ ಒಂದು ಅಥವಾ ಹೆಚ್ಚು ಬದಿಗಳಿರುವ ಎತ್ತರದ ಭೂಪ್ರದೇಶ. ಪ್ರಸ್ಥಭೂಮಿಗಳು ಅನೇಕ ಪ್ರಕ್ರಿಯೆಗಳಿಂದ ರೂಪಗೊಳ್ಳಬಹುದು. ಇವುಗಳಲ್ಲಿ ಜ್ವಾಲಾಮುಖಿ ಶಿಲಾಪಾಕದ ಉಬ್ಬುವಿಕೆ, ಶಿಲಾರಸದ ನಿಸ್ಸರಣ, ಮತ್ತು ನೀರು ಹಾಗೂ ಹಿಮನದಿಗಳಿಂದಾದ ಸವೆತ ಸೇರಿವೆ.
ಟೆಂಪ್ಲೇಟು:Korean War Infobox ಕೊರಿಯನ್ ಯುದ್ಧ ವು, ಸಂಯುಕ್ತ ರಾಷ್ಟ್ರಗಳ ಬೆಂಬಲ ಹೊಂದಿದ ಕೊರಿಯಾದ ರಿಪಬ್ಲಿಕ್ ಹಾಗೂ ಚೈನಾದ ಪೀಪಲ್ಸ್ ರಿಪಬ್ಲಿಕ್ ಮತ್ತು ಸೋವಿಯತ್ ಯೂನಿಯನ್ನ ಬೆಂಬಲ ಹೊಂದಿದ ಕೊರಿಯಾದ ಡೆಮೋಕ್ರಾಟಿಕ್ ಪೀಪಲ್ಸ್ ನಡುವಿನ ಮಿಲಿಟರಿ ಸಂಘರ್ಷಣೆಯಾಗಿದೆ. ಯುದ್ದವು ೨೫ ಜೂನ್ ೧೯೫೦ ರಲ್ಲಿ ಶುರುವಾಯಿತು, ಹಾಗೂ ೨೭ ಜುಲೈ ೧೯೫೩ರಲ್ಲಿ ಯುದ್ದ ವಿರಾಮಕ್ಕೆ ಸಹಿ ಹಾಕಿತು. ಪೆಸಿಫಿಕ್ ಯುದ್ದದಲ್ಲಿ ಗೆದ್ದ ಅಲೀಸ್ನ ಒಪ್ಪಂದದಿಂದಾದ ಕೋರಿಯಾದ ರಾಜಕೀಯ ವಿಭಜನೆಯ ಫಲವಾಗಿ ಯುದ್ದವು ಆರಂಭವಾಯಿತು.
ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು. ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಚಂದ್ರಯಾನ-೩ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯ ಯೋಜಿತ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದೆ. ಚಂದ್ರಯಾನ-೨ ರಲ್ಲಿ, ಸಾಫ್ಟ್ ಲ್ಯಾಂಡಿಂಗ್ ಮಾರ್ಗದರ್ಶನ ಸಾಫ್ಟ್ವೇರ್ನಲ್ಲಿ ಉಂಟಾದ ಕೊನೆಯ ನಿಮಿಷದ ದೋಷವು ಲ್ಯಾಂಡರ್ನ ಸಾಫ್ಟ್ ಲ್ಯಾಂಡಿಂಗ್ ಪ್ರಯತ್ನದ ವಿಫಲತೆಗೆ ಕಾರಣವಾಯಿತು, ಸಾಫ್ಟ್ ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಮತ್ತೊಂದು ಚಂದ್ರನ ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಯಿತು. ಚಂದ್ರಯಾನ-೩ ಚಂದ್ರಯಾನ-೨ರ ಮಿಷನ್ ಪುನರಾವರ್ತನೆ ಆದರೆ ಚಂದ್ರಯಾನ-೨ರಂತೆಯೇ ಲ್ಯಾಂಡರ್ ಮತ್ತು ರೋವರ್ ಅನ್ನು ಮಾತ್ರ ಒಳಗೊಂಡಿರುತ್ತದೆ.
ಸೌದೆಯು ಮೊಟ್ಟ ಮೊದಲ ಬಾರಿಗೆ ಮಾನವನಿಂದ ಬಳಸಿದ ಇಂಧನವಾಗಿದ್ದು ಅದು ಈಗಲೂ ವಿಶ್ವದೆಲ್ಲೆಡೆ ಪ್ರಮುಖ ಇಂಧನ ಶಕ್ತಿಯ ಮೂಲವಾಗಿ ಬಳಕೆಯಾಗುತ್ತದೆ. ಇಂಧನ ವು ಒಂದು ಉರಿಯುವ ವಸ್ತು ಇದರ ಪರಿವರ್ತನೆಯಿಂದ ಶಕ್ತಿಯನ್ನು ಪಡೆಯಬಹುದಾಗಿದೆ.ಇದನ್ನು ಕಾಯಿಸಲು ಅಥವಾ ವಸ್ತುಗಳನ್ನುಚಲಿಸುವಂತೆ ಮಾಡಲು ಇಂಧನವು ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಶಕ್ತಿ ಬಿಡುಗಡೆ ಮಾಡುತ್ತದೆ;ಉದಾಹರಣೆಗೆ ದಹಿಸುವ ಅಥವಾ ಪರಮಾಣು ಮಾಧ್ಯಮ ಅಂದರೆ ಪರಮಾಣುಗಳ ವಿಭಜನೆ ಇಲ್ಲವೇ ಪರಮಾಣುಗಳು ಪರಿವರ್ತನೆ ಮೂಲಕ ಶಕ್ತಿ ಬಿಡುಗಡೆ ಇದರ ಮಾಧ್ಯಮವಾಗಿದೆ. ಉಪಯುಕ್ತ ಇಂಧನದ ಮಹತ್ವದ ಅಂಶವೆಂದರೆ ಅದರಲ್ಲಿನ ಶಕ್ತಿಯನ್ನು ಶೇಖರಿಸಿ ಅವಶ್ಯ ಬಿದ್ದಾಗ ಮಾತ್ರ ಬಳಸಿಕೊಳ್ಳಬಹುದು,ಅಷ್ಟೇ ಅಲ್ಲದೇ ಈ ಇಂಧನ ಶಕ್ತಿಯನ್ನು ನಿಯಂತ್ರಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳಬಹುದಾಗಿದೆ.
ಕರ್ನಾಟಕ ಜನಪದ ನೃತ್ಯ : ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ.
ಶಿಲೀಂಧ್ರವು ಯೂಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್ಗಳು (ಕಿಣ್ವ ಬೂಸ್ಟ್ಗಳು) ಮತ್ತು ಮೊಲ್ಡ್ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಅಣಬೆಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಸಾಮ್ರಾಜ್ಯ, ಶಿಲೀಂಧ್ರಗಳು ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದುಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sowthe seeds to get ripen fruits.) ಹಾವೂ ಸಾಯ್ಬಾರದು, ಕೋಲೂಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English:from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಇತರ ಪರಮಾಣುಗಳ ಉತ್ಕರ್ಷಣವನ್ನು ನಿಧಾನಿಸುವ ಅಥವಾ ನಿಯಂತ್ರಿಸಲು ಸಮರ್ಥವಾದ ಒಂದು ಪರಮಾಣುವನ್ನು ಉತ್ಕರ್ಷಣ ನಿರೋಧಕ (ಆಯ್೦ಟಿಆಕ್ಸಿಡೆಂಟ್) ಎನ್ನುತ್ತಾರೆ. ಉತ್ಕರ್ಷಣ ಒಂದು ರಾಸಾಯನಿಕ ಪ್ರಕ್ರಿಯೆಯಾಗಿದ್ದು, ಅದು ವಿದ್ಯುತ್ಕಣಗಳನ್ನು ಒಂದು ವಸ್ತುವಿನಿಂದ ಒಂದು ಆಕ್ಸಿಡೀಕರಣ ಏಜೆಂಟ್ಗೆ ವರ್ಗಾಯಿಸುತ್ತದೆ. ಆಕ್ಸಿಡೀಕರಣ ಪ್ರಕ್ರಿಯೆಗಳು ಮುಕ್ತ ಮೂಲಸ್ವರೂಪಗಳನ್ನು ಉತ್ಪಾದಿಸಲಬಹುದಾಗಿದ್ದು, ಅದು ಸರಪಳಿ ಪ್ರಕ್ರಿಯೆಗಳನ್ನು ಆರಂಭಿಸುವ ಮೂಲಕ ಕೋಶಗಳಿಗೆ ಹಾನಿಮಾಡಬಹುದು.
ಶಕ್ತಿ ಎಂದರೆ ಕೆಲಸ (ಅಥವಾ ಕಾರ್ಯ) ಮಾಡಲು ಇರುವ ಅಳವು. ಗ್ರೀಕ್ನ ಮೂಲ ಪದಗಳಾದ ἐνέργεια ಅಂದರೆ ಎನರ್ಜೀಯಾ (ಚಟುವಟಿಕೆ, ಕಾರ್ಯಾಚರಣೆ) ಮತ್ತು ἐνεργός ಎನರ್ಗೊಸ್' (ಸಕ್ರಿಯ, ಕಾರ್ಯನಿರತ) ಎಂಬ ಪದಗಳಿಂದ ಭೌತವಿಜ್ಞಾನದ ಶಕ್ತಿ ('ಎನರ್ಜಿ') ಎಂಬ ಇಂಗ್ಲಿಷ್ ಪದವು ನಿಷ್ಪನ್ನವಾಗಿದೆ. 'ಶಕ್ತಿ' ಎಂಬುದು, ಬಲವು ನಿರ್ವಹಿಸಬಲ್ಲ ಕಾರ್ಯದ ಯಾವುದೇ ಭೌತಿಕ ಅದಿಶ ಪರಿಮಾಣವನ್ನು ಸೂಚಿಸುತ್ತದೆ.
ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು (energy) ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ಏಕೆಂದರೆ ಅದು ಬಳಕೆಯಾಗುವ ದರದಲ್ಲಿಯೇ ಪುನಃ ಭರ್ತಿಯಾಗುತ್ತದೆ. ಸೌರ ದ್ಯುತಿವಿದ್ಯುಜ್ಜನಕ ಕೋಶಗಳು (ಎಸ್.ಪಿ.ವಿ - ಸೋಲಾರ್ ಪೋಟೋ ವೋಲ್ಟಾಯಿಕ್ ಕೋಶ) ನೇರವಾಗಿ ಸೂರ್ಯನ ಬೆಳಕಿನಿಂದ ವಿದ್ಯುತ್ ಆಗಿ ಪರಿವರ್ತಿಸುತ್ತದೆ.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಸಾಂದ್ರತೆ ಎಂದರೆ ವಸ್ತುವಿನ ಏಕಮಾನ ಗಾತ್ರದಲ್ಲಿರುವ ದ್ರವ್ಯರಾಶಿಯ ಅಳತೆ. ಗಾತ್ರ V, ರಾಶಿ m, ಸಾಂದ್ರತೆ D ಆದಲ್ಲಿ D=m/V{\displaystyle D=m/V}ಒಂದು ಘನಮೀಟರ್ನಲ್ಲಿ ಇಂತಿಷ್ಟು ಕಿ.ಗ್ರಾಂ (Kg/m೩) ಅಥವಾ ಒಂದು ಘನ ಸೆಂಟಿಮೀಟರ್ನಲ್ಲಿ ಇಂತಿಷ್ಟು ಗ್ರಾಮ್ (g/cm೩) ಎಂದು ಅಳೆಯಲಾಗುತ್ತದೆ. ಸಾಂದ್ರತೆಗೆ ಹೆಚ್ಚಾಗಿ ಬಳಸುವ ಚಿಹ್ನೆ ρ (ಗ್ರೀಕ್ ಅಕ್ಷರ ರೋ), ಆದರೂ ಲ್ಯಾಟಿನ್ ಅಕ್ಷರ D ಅನ್ನು ಸಹ ಬಳಸಬಹುದು.
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ).
ಕರ್ಮಧಾರೆಯ ಸಮಾಸ:- "ಪೂರ್ವೋತ್ತರಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರಯಸಮಾಸವೆನ್ನುವರು." ಇದರಲ್ಲೂ ಉತ್ತರಪದದ ಅರ್ಥವೇ ಪ್ರಧಾನವಾಗಿರುವುದು. ಉದಾಹರಣೆಗೆ:- (i) ಸಂಸ್ಕೃತ ಸಂಸ್ಕೃತ ಶಬ್ದಗಳು ಸೇರಿ ಸಮಾಸವಾಗಿರುವುದಕ್ಕೆ- ನೀಲವಾದ + ಉತ್ಪಲ = ನೀಲೋತ್ಪಲ[5] (ನೀಲಕಮಲ) ಶ್ವೇತವಾದ + ವಸ್ತ್ರ = ಶ್ವೇತವಸ್ತ್ರ (ಬಿಳಿಯವಸ್ತ್ರ) ಶ್ವೇತವಾದ + ಛತ್ರ = ಶ್ವೇತಛತ್ರ (ಬಿಳಿಯಕೊಡೆ) ಬೃಹತ್ತಾದ + ವೃಕ್ಷ = ಬೃಹದ್ವೃಕ್ಷ (ದೊಡ್ಡಗಿಡ) ನೀಲವಾದ + ಶರಧಿ = ನೀಲಶರಧಿ ನೀಲವಾದ + ಸಮುದ್ರ = ನೀಲಸಮುದ್ರ ಶ್ವೇತವಾದ + ವರ್ಣ = ಶ್ವೇತವರ್ಣ ಮತ್ತವಾದ + ವಾರಣ = ಮತ್ತವಾರಣ (ಮದ್ದಾನೆ) ಪೀತವಾದ + ವಸ್ತ್ರ = ಪೀತವಸ್ತ್ರ ಪೀತವಾದ + ಅಂಬರ = ಪೀತಾಂಬರ ದಿವ್ಯವಾದ + ಪ್ರಕಾಶ = ದಿವ್ಯಪ್ರಕಾಶಮೇಲಿನ ಕನ್ನಡ, ಸಂಸ್ಕೃತ ಸಮಾಸಗಳಲ್ಲೆಲ್ಲ ಪೂರ್ವಪದಗಳು ವಿಶೇಷಣಗಳಾಗಿದ್ದು ಉತ್ತರಪದಗಳು ವಿಶೇಷ್ಯಗಳಾಗಿವೆ. ಇವುಗಳಿಗೆ ವಿಶೇಷಣ ಪೂರ್ವಪದ ಕರ್ಮಧಾರಯ ಎಂದು ಸ್ಪಷ್ಟಪಡಿಸಿ ಹೇಳುವ ಪರಿಪಾಠವುಂಟು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಏಷ್ಯನ್ ಕ್ರೀಡಾಕೂಟ', ಹಾಗೂ ಏಷ್ಯಾಡ್, ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ ೧೯೭೮ರ ಕ್ರೀಡಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್ನಿಂದ ನಿಯಂತ್ರಸಲ್ಪಟ್ಟಿತ್ತು. ೧೯೮೨ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಜಲಶುದ್ಧೀಕರಣ ವೆಂಬುದು, ಮೂಲ ಸ್ಥಿತಿಯ ನೀರಿನಲ್ಲಿರುವ ಬೇಡವಾದ ರಾಸಾಯನಿಕಗಳನ್ನು, ವಸ್ತುಗಳನ್ನು ಮತ್ತು ಜೈವಿಕ ಕಶ್ಮಲಗಳನ್ನು ತೆಗೆಯುವ ಕ್ರಿಯೆಯಾಗಿದೆ. ನಿರ್ದಿಷ್ಟ ಉದ್ದೇಶಕ್ಕೆ ಹೊಂದಿಕೊಳ್ಳುವ ನೀರನ್ನು ಉತ್ಪಾದಿಸುವುದು ಇದರ ಗುರಿಯಾಗಿದೆ. ಮಾನವರ ಬಳಕೆಗಾಗಿ ಬಹುಪಾಲು ನೀರನ್ನು ಶುದ್ಧೀಕರಿಸಲಾಗುತ್ತದೆ (ಕುಡಿಯುವ ನೀರು), ಆದರೆ ಜಲಶುದ್ಧೀಕರಣವನ್ನು ವೈದ್ಯಕೀಯ, ಔಷಧ ವಿಜ್ಞಾನ, ರಾಸಾಯನಿಕ ಮತ್ತು ಕೈಗಾರಿಕಾ ಬಳಕೆಗಳ ಬೇಡಿಕೆಗಳನ್ನು ಈಡೇರಿಸುವುದು ಒಳಗೊಂಡಂತೆ ವಿವಿಧ ಉದ್ದೇಶಗಳಿಗಾಗಿ ಮಾಡಬಹುದಾಗಿದೆ.
ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು) ಸೂತ್ರ ಪದ್ಯ ಹೀಗಿದೆ "ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್" ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ.
ಅಂಗಿಕಾ ( ಅಂಗ, ಅಂಗಿಕರ್ ಅಥವಾ ಚಿಕಾ-ಚಿಕಿ ಎಂದೂ ಕರೆಯುತ್ತಾರೆ) ಪೂರ್ವ ಇಂಡೋ-ಆರ್ಯನ್ ಭಾಷೆಯಾಗಿದ್ದು, ಇದನ್ನು ಭಾರತದ ಬಿಹಾರ ಮತ್ತು ಜಾರ್ಖಂಡ್ನ ಕೆಲವು ಭಾಗಗಳಲ್ಲಿ ಮತ್ತು ನೇಪಾಳದ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಅಂಗಿಕಾವು ನೆರೆಯ ಭಾರತೀಯ ಭಾಷೆಗಳಾದ ಮೈಥಿಲಿ, ಬೆಂಗಾಲಿ, ಭೋಜ್ಪುರಿ ಮತ್ತು ಮಾಗಾಹಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಐತಿಹಾಸಿಕವಾಗಿ ಇದನ್ನು ' ಅಂಗ ಲಿಪಿ ' ಎಂದು ಕರೆಯಲಾಗುವ ಪ್ರತ್ಯೇಕ ಲಿಪಿಯಲ್ಲಿ ಬರೆಯಲಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ARM (ಎಆರ್ಎಂ) ಎನ್ನುವುದು ARM ಹೋಲ್ಡಿಂಗ್ಸ್ ಎನ್ನುವ ಕಂಪನಿ ಅಭಿವೃದ್ಧಿಪಡಿಸಿರುವ 32 ಬಿಟ್ ರಿಡ್ಯೂಸ್ಡ್ ಇನಸ್ಟ್ರಕ್ಷನ್ ಸೆಟ್ ಕಂಪ್ಯೂಟರ್ (RISC) ಇನಸ್ಟ್ರಕ್ಷನ್ ಸೆಟ್ ಆರ್ಕಿಟೆಕ್ಚರ್(ISA). (ರೆಡ್ಯೂಸಡ್ ಇನ್ಸ್ಟ್ರಕ್ಷನ್ ಸೆಟ್ ಕಂಪ್ಯೂಟಿಂಗ್ - ಸಂಕ್ಷಿಪ್ತವಾಗಿ RISC ಎಂದು ಕೆರಯಲಾಗುವ- ಇದು CPU ರಚನೆ ವ್ಯವಸ್ಥೆ ಪ್ರತಿನಿಧಿಸುತ್ತದೆ ಇದರಿಂದಾಗಿ ಸೂಚನೆಗಳನ್ನು ಸರಳಿಕರಸಿಬಹುದಾಗಿದ್ದು, ಇದರಿಂದ ಸೂಚನೆಗಳನ್ನು ಕಡಿಮೆ ಪ್ರಮಾಣದಲ್ಲಿ ಆದರೆ ವೇಗವಾಗಿ ಅನುಷ್ಠಾನಗೊಳ್ಳುವುದರಿಂದ ಹೆಚ್ಚಿನ ಕಾರ್ಯಕ್ಷಮತೆಯನ್ನು ಪಡೆಯಬಹುದು.). ಹಿಂದೆ ಇದನ್ನು, ಅಡ್ವಾನ್ಸಡ್ RISC ಮಷೀನ್ ಎಂದೂ ಹಾಗು ಅದಕ್ಕೂ ಹಿಂದೆ ಇದನ್ನು ಆಕ್ರಾನ್ RISC ಮಷೀನ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.
ದೃಗ್ವಿಜ್ಞಾನ ಎನ್ನುವುದು ಬೆಳಕಿನ ವರ್ತನೆ ಮತ್ತು ಲಕ್ಷಣಗಳನ್ನು, ವಸ್ತುವಿನ ಜೊತೆಗೆ ಅದರ ಸಂವಹನ ಮತ್ತು ಅದನ್ನು ಬಳಸುವ ಅಥವಾ ಶೋಧಿಸುವ ಉಪಕರಣಗಳ ರಚನೆಯನ್ನು ಅಧ್ಯಯಿಸುವ ಭೌತಶಾಸ್ತ್ರದ ಒಂದು ಶಾಖೆ. ದೃಗ್ವಿಜ್ಞಾನವು ಸಾಮಾನ್ಯವಾಗಿ ದೃಷ್ಟಿಗೋಚರವಾದ, ಅತಿನೇರಳೆ, ಮತ್ತು ಅತಿಗೆಂಪು ಬೆಳಕಿನ ಬಗೆಗೆ ವಿವರಿಸುತ್ತದೆ. ಬೆಳಕು ವಿದ್ಯುದಯಸ್ಕಾಂತ ತರಂಗ ಆಗಿರುವುದರಿಂದ, ವಿದ್ಯುದಯಸ್ಕಾಂತ ವಿಕಿರಣದ ಇತರ ರೂಪಗಳು ಉದಾಹರಣೆಗೆ ಕ್ಷ-ಕಿರಣಗಳು, ಸೂಕ್ಷ್ಮತರಂಗಗಳು, ಮತ್ತು ರೇಡಿಯೋ ತರಂಗಗಳು ಇದೇ ರೀತಿಯ ಲಕ್ಷಣಗಳನ್ನು ತೋರುತ್ತದೆ.ದೃಗ್ವಿಜ್ಞಾನದ ಅನೇಕ ಸ್ವರೂಪಗಳು ಬೆಳಕಿನ ಶಾಸ್ತ್ರೀಯ ವಿದ್ಯುದಯಸ್ಕಾಂತ ವಿವರಣೆಯನ್ನು ಬಳಸುವುದರಿಂದಲೇ ಆಗಿವೆ ಎನ್ನಬಹುದು.
ಪ್ರಾಚೀನ ಕನ್ನಡ ಕವಿಗಳು ಉಭಾಯಭಾಷಾ ವಿಶಾರದರೂ, ಸಂಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿಂದ ಅವರು ತಮ್ಮ ಕನ್ನಡ ಕಾವ್ಯಗಳಲ್ಲಿ ಸಂಸ್ಕ್ರತದ ವಸ್ತು, ಭಾಷಾ ಶೈಲಿಯ ಜೊತೆಗೆ ಸಂಸ್ಕೃತ ಛಂದಸ್ಸನ್ನು ಬಳಸಿದರು. ಚಂಪೂ ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿಂತ ಪದ್ಯದ ಪ್ರಮಾಣ ಅಧಿಕವಾಗಿದ್ದು, ಪದ್ಯದಲ್ಲಿ ಕಂದ ಮತ್ತು ವೃತ್ತಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಂಸ್ಕ್ರತದ ಲೌಕಿಕ ಛಂದಸ್ಸಿನಲ್ಲಿ ಒಂದು ಅಕ್ಷರದ ಉಕ್ತೆಯಿಂದ ಇಡಿದು ಇಪ್ಪಾತ್ತಾರು ಅಕ್ಷರಗಳ ಉತ್ಪತ್ತಿಯವರೆಗಿನ ಛಂದಸ್ಸಿನದಿಂದ ಹೊರಡುವ ಸಮವೃತ್ತಗಳು ನೂರಾರಿವೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಇದೇ ಹೆಸರಿನ ಕಾದಂಬರಿಯ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.ಗ್ರಹಣವು ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ. ಗ್ರಹಣ ಪದವನ್ನು ಹಲವುವೇಳೆ, ಒಂದು ಸೂರ್ಯಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು ಚಂದ್ರಗ್ರಹಣವನ್ನು (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ.
ಸೌರವ್ಯೂಹದ ರಚನೆ ಮತ್ತು ವಿಕಾಸವು 4.568 ಶತಕೋಟಿ ವರ್ಷಗಳ ಹಿಂದೆ ಆರಂಭವಾಯಿತೆಂದು ಅಂದಾಜು ಮಾಡಲಾಗಿದೆ. ಬೃಹತ್ ಆಣ್ವಿಕ ಮೋಡದ ಸಣ್ಣ ಭಾಗವು ಗುರುತ್ವದಿಂದ ಕುಸಿತವುಂಟಾಗಿ ಸೌರವ್ಯೂಹ ರಚನೆಯಾಯಿತು.ಕುಸಿತಗೊಂಡ ಬಹುತೇಕ ದ್ರವ್ಯರಾಶಿ ಮಧ್ಯಭಾಗದಲ್ಲಿ ಸಂಗ್ರಹವಾಗಿ ಸೂರ್ಯನನ್ನು ನಿರ್ಮಾಣ ಮಾಡಿತು. ಉಳಿದವು ಪ್ರೋಟೊಪ್ಲ್ಯಾನೆಟರಿ ಡಿಸ್ಕ್(ನಕ್ಷತ್ರವೊಂದರ ಸುತ್ತ ತಿರುಗುವ ಅನಿಲ,ದೂಳಿನ ಚಪ್ಪಟೆಯ ತಟ್ಟೆ) ಆಕಾರ ತಳೆಯಿತು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಭಾರತ ಗಣರಾಜ್ಯವು ಐತಿಹಾಸಿಕ ದಾಖಲೆ, ಧ್ವಜ, ಲಾಂಛನ, ಗೀತೆ, ಸ್ಮಾರಕ ಗೋಪುರ ಮತ್ತು ಹಲವಾರು ರಾಷ್ಟ್ರೀಯ ವೀರರು ಸೇರಿದಂತೆ ಹಲವಾರು ಅಧಿಕೃತ ರಾಷ್ಟ್ರೀಯ ಚಿಹ್ನೆಗಳನ್ನು ಹೊಂದಿದೆ. ಎಲ್ಲಾ ಚಿಹ್ನೆಗಳನ್ನು ವಿವಿಧ ಸಮಯಗಳಲ್ಲಿ ತೆಗೆದುಕೊಳ್ಳಲಾಗಿದೆ. ೧೯೪೭ ರ ಜುಲೈ ೨೨ ರಂದು ರಾಷ್ಟ್ರೀಯ ಧ್ವಜದ ವಿನ್ಯಾಸವನ್ನು ಸಂವಿಧಾನ ಸಭೆಯು ಅಧಿಕೃತವಾಗಿ ಅಂಗೀಕರಿಸಿತು ಮತ್ತು ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು, ಹಣ್ಣು ಮತ್ತು ಮರ ಸೇರಿದಂತೆ ಇನ್ನೂ ಹಲವಾರು ಚಿಹ್ನೆಗಳು ಇವೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ಆಂಗ್ಲ: ISRO - Indian Space Research Organisation) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ.