The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ರಿಕ್ಟರ್, ಮಾನಕ ಅಧಿಕೇಂದ್ರಗಳಲ್ಲಿ ಭೂಕಂಪನಗಳ ಪರಿಮಾಣ ವನ್ನು ಅಂದಾಜು ಮಾಡಲು ಮತ್ತು ತುಲನೆ ಮಾಡಲು ಉಪಯೋಗಿಸುವ ಅಳತೆಗೋಲು (ರಿಕ್ಟರ್ ಸ್ಕೇಲ್). ಈ ಅಳತೆಗೋಲನ್ನು ಮೊಟ್ಟಮೊದಲಿಗೆ ೧೯೩೫ರಲ್ಲಿ ಚಾರ್ಲ್ಸ್ ರಿಕ್ಟರ್ ಎಂಬ ವ್ಯಕ್ತಿಯು ಬೆನೋ ಗುಟನ್ಬರ್ಗ್ ಎಂಬ ವ್ಯಕ್ತಿಯೊಡಗೂಡಿ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳಲ್ಲಿ ಅಳವಡಿಸಿದ್ದ ವುಡ್-ಆಂಡರ್ಸನ್ ಭೂಕಂಪ ಮಾಪಕದಲ್ಲಿ ದಾಖಲಾದ ಕಂಪನಗಳನ್ನು ಅಳೆಯಲು ಉಪಯೋಗಿಸಿದನು. ಈ ಅಳತೆಗೋಲು ಭೂಮಿಗೆ ಸಮಾನಾಂತರವಾಗಿ ಆಗುವ ಕಂಪನದ ತೀವ್ರತೆಯನ್ನು ಅವಲಂಬಿಸಿ ೧೦ರ ಲಘುಗಣಕವನ್ನು ಆಧರಿಸಿರುದ ಒಂದು ಸಂಖ್ಯೆಯನ್ನು ನೀಡುತ್ತದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಕೆಂಬೂತ, (ಕೆಂಬೂತ-ಘನ - Greater Coucal or Crow Pheasant) (ವೈಜ್ಞಾನಿಕ ಹೆಸರು : Centropus sinensis) ಕೆಂಬೂತ, ಕಾಗೆ ಗಾತ್ರದ ಕೋಗಿಲೆ ಗಣಕ್ಕೆ ಸೇರಿದ ಒಂದು ಹಕ್ಕಿ ಪ್ರಭೇದ. ಕೋಗಿಲೆ (cuckoo) ಗಣಕ್ಕೆ ಸೇರಿದ್ದರೂ, ಕೋಗಿಲೆಯಂತೆ ಬೇರೆ ಹಕ್ಕಿಗಳ ಗೂಡಿನಲ್ಲಿ ಮೊಟ್ಟೆ ಇಡುವುದಿಲ್ಲ, ಹಾಗಾಗಿ ಇದು ಪರಾವಲಂಬಿಯಲ್ಲ. ಏಷ್ಯಾದ ಬಹು ಭಾಗ, ಭಾರತ, ಚೀನಾ, ಇಂಡೋನೇಷ್ಯಾಗಳಲ್ಲಿ ಇದರ ಜಾತಿ, ಪ್ರಜಾತಿಗಳು ಹರಡಿವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದುಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sowthe seeds to get ripen fruits.) ಹಾವೂ ಸಾಯ್ಬಾರದು, ಕೋಲೂಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English:from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ).
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ರಸಾಯನಶಾಸ್ತ್ರದಲ್ಲಿ, ಮಿಶ್ರಣ ಎಂದರೆ ಭೌತಿಕವಾಗಿ ಸೇರಿಸಲಾದ ಎರಡು ಅಥವಾ ಹೆಚ್ಚು ಭಿನ್ನ ವಸ್ತುಗಳಿಂದ ತಯಾರಾದ ವಸ್ತು. ಮಿಶ್ರಣವು ಎರಡು ಅಥವಾ ಹೆಚ್ಚು ವಸ್ತುಗಳ ಭೌತಿಕ ಸಂಯೋಜನೆಯಾಗಿದ್ದು, ಸ್ವಸ್ವರೂಪಗಳು ಹಾಗೆಯೇ ಉಳಿದಿರುತ್ತವೆ ಮತ್ತು ವಸ್ತುಗಳನ್ನು ದ್ರಾವಣಗಳು, ತೇಲಣ ಹಾಗೂ ಕಲಿಲಗಳ ರೂಪದಲ್ಲಿ ಬೆರೆಸಲಾಗುತ್ತದೆ.ಮಿಶ್ರಣಗಳು ಮೂಲಧಾತುಗಳು ಹಾಗೂ ಸಂಯುಕ್ತಗಳಂತಹ ರಾಸಾಯನಿಕ ವಸ್ತುಗಳ ಯಾಂತ್ರಿಕ ಬೆರಕೆ ಅಥವಾ ಮಿಶ್ರಮಾಡುವಿಕೆಯ ಒಂದು ಉತ್ಪನ್ನವಾಗಿರುತ್ತವೆ, ಆದರೆ ರಾಸಾಯನಿಕ ಬಂಧ ಅಥವಾ ರಾಸಯನಿಕ ಬದಲಾವಣೆ ಇರುವುದಿಲ್ಲ, ಮತ್ತು ಹಾಗಾಗಿ ಪ್ರತಿಯೊಂದು ಘಟಕಾಂಶ ವಸ್ತುವು ತನ್ನ ಸ್ವಂತದ ರಾಸಾಯನಿಕ ಗುಣಗಳು ಹಾಗೂ ರಚನೆಯನ್ನು ಉಳಿಸಿಕೊಂಡಿರುತ್ತದೆ.
ಅಮ್ಮ ಎಂಬುದು ಕನ್ನಡದಲ್ಲಿ ತಾಯಿಗೆ ಪರ್ಯಾಯ ಪದ.ಅಮ್ಮ ಎಂಬುದು ತಾಯಿಯನ್ನು ಸಂಬೋಧಿಸುವ ಪದ ಕೂಡಾ ಹೌದು.ಅಲ್ಲದೆ ಹಿರಿಯ ಹೆಂಗಸರನ್ನು ಸಂಬೋಧಿಸುವಾಗ ಮರ್ಯಾದೆ ಸೂಚಕ ಪದವಾಗಿ ಕೂಡಾ ಬಳಕೆಯಾಗುತ್ತದೆ.ಮಾತೃಸ್ವರೂಪಿಣಿಯಾದ ದೇವತೆಗೆ ಅಮ್ಮ ಎಂದು ಕರೆಯುವ ವಾಡಿಕೆ ಇದೆ.ಮೈಮೇಲೆ ಏಳುವ ದಡಾರ ಮುಂತಾದ ಗುಳ್ಳೆಗಳಿಗೆ "ಅಮ್ಮ ಎದ್ದಿದೆ" ಎಂದು ಹೇಳುವ ರೂಢಿ ಇದೆ. ಅಮ್ಮ ಹೆಸರಿನ ಕನ್ನಡ ಚಿತ್ರರಂಗದ ಬಗ್ಗೆ ಲೇಖನ ಈ ಪುಟದಲ್ಲಿ ಇದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿರುವ ಎಲ್ಲ ಹಬ್ಬಗಳೂ ಸಾಮಾನ್ಯವಾಗಿ ಆಚರಣೆಯಲ್ಲಿವೆ. ಅಲ್ಲದೆ ಹಲವು ಮತ ಪಂಥಗಳ ಜನರು ಶತಶತಮಾನಗಳಿಂದ ಇಲ್ಲಿ ನೆಲೆಸಿರುವ ಕಾರಣ ಅವರ ಹಬ್ಬಗಳೂ ಆಚರಣೆಯಲ್ಲಿವೆ. ಮುಸಲ್ಮಾನರ ಈದ್ಮಿಲಾದ್, ಮೊಹರಂ, ರಂಜಾನ್ ಮುಂತಾದವು; ಕ್ರಿಶ್ಚಿಯನ್ನರ ಈಸ್ಟರ್ ಹಾಗೂ ಕ್ರಿಸ್ಮಸ್ ; ಜೈನರ ಮಹಾವೀರ ಜಯಂತಿ ; ಬೌದ್ಧರ ಬುದ್ಧ ಜಯಂತಿ; ಶೈವರ ಬಸವಣ್ಣನವರ ಜಯಂತಿ ; ಮಾಧ್ವರ ಮಧ್ವನವಮೀ ; ರಾಮಾನುಜರ ತಿರುನಕ್ಷತ್ರಗಳು ಕನಕದಾಸ ಜಯಂತಿ- ಮುಂತಾದುವು ಮುಖ್ಯವಾದವು.
thumb|coin money ಸಾಮಾನ್ಯವಾಗಿ ಸರಕು ಮತ್ತು ಸೇವೆಗಳು ಹಾಗೂ ಋಣಗಳ ವಾಪಸಾತಿಗೆ ಸಂದಾಯದ ರೂಪವೆಂದು ಒಪ್ಪಿಕೊಳ್ಳಲಾದ ಯಾವುದಕ್ಕಾದರೂ ಹಣವೆನ್ನಬಹುದು. ಪ್ರಮುಖವಾಗಿ ಒಂದು ವಿನಿಮಯ ಸಾಧನವಾಗಿ (ಮೀಡಿಯಮ್ ಆಫ಼್ ಎಕ್ಸ್ಚೇಂಜ್), ಒಂದು ಲೆಕ್ಕದ ಏಕಮಾನವಾಗಿ (ಯೂನಿಟ್ ಆಫ಼್ ಅಕೌಂಟ್), ಮತ್ತು ಒಂದು ಮೌಲ್ಯದ ಸಂಗ್ರಹವಾಗಿ (ಸ್ಟೋರ್ ಆಫ಼್ ವ್ಯಾಲ್ಯು) ಹಣವನ್ನು ಉಪಯೋಗಿಸಲಾಗುತ್ತದೆ. ಕೆಲವು ಲೇಖಕರು ಹಣವು ಸ್ಪಷ್ಟವಾಗಿ ಒಂದು ಮುಂದೆ ಸಲ್ಲಿಸುವ ಸಂದಾಯದ ಮಾನದಂಡ (ಸ್ಟ್ಯಾಂಡರ್ಡ್ ಆಫ಼್ ಡೆಫ಼ರ್ಡ್ ಪೇಮಂಟ್) ಆಗಿರಬೇಕೆಂದು ಬಯಸುತ್ತಾರೆ.
ಭಾಗ್ಯಲಕ್ಷ್ಮೀ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಅಕ್ಟೋಬರ್ ೧೦, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೦೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.
ಹಬ್ಬವು (ಉತ್ಸವ) ಸಾಮಾನ್ಯವಾಗಿ ಒಂದು ಸ್ಥಳೀಯ ಸಮುದಾಯದಿಂದ ಏರ್ಪಡಿಸಲಾಗುವ, ಆ ಸಮುದಾಯದ ಯಾವುದೋ ಒಂದು ಅದ್ವಿತೀಯ ಅಂಶದ ಮೇಲೆ ಕೇಂದ್ರೀಕರಿಸುವ ಮತ್ತು ಅದನ್ನು ಆಚರಿಸುವ ಒಂದು ಸಂದರ್ಭ. ಅನೇಕ ಧರ್ಮಗಳಲ್ಲಿ, ಉತ್ಸವವು ದೇವರು ಅಥವಾ ದೇವತೆಗಳ ಗೌರವಾರ್ಥವಾಗಿ ಏರ್ಪಡಿಸಲಾಗುವ ಆಚರಣೆಗಳ ಒಂದು ಕೂಟ. ಉತ್ಸವ ಮತ್ತು ಹಬ್ಬ ಎರಡೂ ಐತಿಹಾಸಿಕವಾಗಿ ಅದಲು ಬದಲು ಮಾಡಬಲ್ಲವಾಗಿವೆ.
ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯ ದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ನವೋದಯ ಸಾಹಿತ್ಯವೆಂದು ಹೊಸ ಸಾಹಿತ್ಯ ಪ್ರಕಾರ ದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ ಛಂದಸ್ಸಿನ ಸಾನೆಟ್ ಮಾದರಿಯ ಪದ್ಯಗಳು ಮುಖ್ಯವಾದವು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ನೋಡಿ:ವಾಯುಗುಣ ಬದಲಾವಣೆಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ಊಳಿಗಮಾನ ಪದ್ಧತಿ ಅನ್ನುವುದು ಶ್ರೀಮಂತರ(ಒಡೆಯ ಅಥವಾ ಧಣಿ), ಮತ್ತು ಹಿಡುವಳಿದಾರರ (ರೈತ) ನಡುವಿನ ಆಳ್ವಿಕೆಯ ಮತ್ತು ಮಿಲಿಟರಿ ಪದ್ಧತಿ. ಊಳಿಗಮಾನ ಪದ್ಧತಿಯು ಒಂಬತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೂ ಪ್ರವರ್ಧ ಮಾನದಲ್ಲಿತ್ತು. ಇದರ ಅತ್ಯಂತ ಉನ್ನತ ಅರ್ಥದಲ್ಲಿ, ಊಳಿಗಮಾನ ಪದ್ಧತಿಯನ್ನು ಮಧ್ಯಯುಗದ ಯುರೋಪಿನ ಆಳ್ವಿಕೆಯ ಪದ್ದತಿಗೆ ಸೂಚಿಸಲಾಗಿದ್ದು ಪರಸ್ಪರ ಕಾನೂನು ಬದ್ದ ಮತ್ತು ಸೈನಿಕ ಉದಾತ್ತಗುಣದ ನಡುವಿನ ಮಿಲಿಟರಿ ಜವಾಬ್ದಾರಿಗಳಿಂದ ರಚಿಸಲ್ಪಟ್ಟು, ಮೂರು ಪ್ರಮುಖ ಪರಿಕಲ್ಪನೆಗಳಾದ ಒಡೆಯರ, ಹಿಡುವಳಿದಾರರ, ಮತ್ತು ಉಂಬಳಿಗಳ ಸುತ್ತ ಸುತ್ತುತ್ತದೆ.
ಅಳೆಯುವ ಸಾಧನವು (ಮಾಪಕ) ಒಂದು ಭೌತಿಕ ಪರಿಮಾಣವನ್ನು ಅಳೆಯುವ ಉಪಕರಣ. ಭೌತಿಕ ವಿಜ್ಞಾನಗಳು, ಗುಣಮಟ್ಟದ ಆಶ್ವಾಸನೆ ಮತ್ತು ಎಂಜಿನಿಯರಿಂಗ್ನಲ್ಲಿ, ಮಾಪನವೆಂದರೆ ನೈಜ ಪ್ರಪಂಚದ ವಸ್ತುಗಳು ಮತ್ತು ಘಟನೆಗಳ ಭೌತಿಕ ಪರಿಮಾಣಗಳನ್ನು ಪಡೆದು ಹೋಲಿಸುವ ಚಟುವಟಿಕೆಯಾಗಿದೆ. ಸ್ಥಾಪಿತ ಪ್ರಮಾಣೀಕೃತ ವಸ್ತುಗಳು ಮತ್ತು ಘಟನೆಗಳನ್ನು ಏಕಮಾನಗಳಾಗಿ ಬಳಸಲಾಗುತ್ತದೆ, ಮತ್ತು ಮಾಪನದ ಪ್ರಕ್ರಿಯೆಯು ಅಧ್ಯಯನದಲ್ಲಿರುವ ವಸ್ತು ಮತ್ತು ಉಲ್ಲೇಖಿತ ಮಾಪನ ಏಕಮಾನವನ್ನು ಸಂಬಂಧಿಸುವ ಒಂದು ಸಂಖ್ಯೆಯನ್ನು ನೀಡುತ್ತದೆ.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
ಹಿಂದೂ ಧರ್ಮದಲ್ಲಿ, ಸಮುದ್ರಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆದ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭ ಮೇಳ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ. ಹಾಗೂ ಇದನು ಪ್ರೀತಂ ಬಿ ಉ ಶಿಕಾರಿಪುರ ರವರು ಬರೆದಿದ್ದಾರೆ ಸಮುದ್ರಮಂಥನದ ಇತರ ಹೆಸರುಗಳು — ಸಮುದ್ರಮಂಥನಂ — ಮಂಥನಂ ಎಂದರೆ ಸಂಸ್ಕೃತದಲ್ಲಿ ಮಂಥನ ಅಥವಾ 'ಕಡೆಯುವುದು' ಎಂದರ್ಥ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ (ಡೊಳ್ಳು ಕುಣಿತ, ಕಂಸಾಳೆ, ಕರಡಿ ಮಜಲು, ವೀರಗಾಸೆ, ನಂದಿಕೋಲು ಕುಣಿತ, ಇತ್ಯಾದಿ), ನಾಟಕ (ಬಯಲಾಟ, ದೊಡ್ಡಾಟ, ಶ್ರೀ ಕೃಷ್ಣಪಾರಿಜಾತ, ಯಕ್ಷಗಾನ) ಮುಂತಾದ ವಿವಿಧ ಪ್ರಕಾರಗಳನ್ನು ನಮ್ಮ ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಕನ್ನಡ ಜಾನಪದ ಸಂಸ್ಕೃತಿಯು ಒಂದು ಭಾಗವಾದ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿ ಕನ್ನಡನಾಡಿನ ವಿವಿಧ ಪ್ರದೇಶಗಳ ಪ್ರಾದೇಶಿಕ ಸೊಗಡುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೋಪಾನ ಮಾಡಿವೆ ಎಂದರೆ ತಪ್ಪಲ್ಲ.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಬೆಲ್ಲವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ ಸಕ್ಕರೆ. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ ಕಬ್ಬಿನ ರಸದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು.
ಹಿಂದು ಧರ್ಮ ಎಂದರೆ ಅದು ಮಾನವ ಧರ್ಮ, ಅನಂತ ಸತ್ಯ ಧರ್ಮ, ವಿಶ್ವದ ಪುರಾತನ ಧರ್ಮವಾಗಿದೆ. ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, "ಶಾಶ್ವತ ಧರ್ಮ" ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ "ಪ್ರಕಾರಗಳು", ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಕ್ಯಾರಿಕೇಚರುಗಳು, ಕಾರ್ಟೂನುಗಳು ಒಬ್ಬ ವ್ಯಕ್ತಿಯನ್ನೋ ಒಂದು ಸನ್ನಿವೇಶವನ್ನೋ ಪರಿಹಾಸ ಮಾಡುವ ಉದ್ದೇಶದಿಂದ ರಚಿತವಾದ ಚಿತ್ರಗಳು. ವ್ಯಂಗ್ಯಚಿತ್ರ, ವಿಕಟಚಿತ್ರ, ವಿಡಂಬನ ಚಿತ್ರ, ಹಾಸ್ಯಚಿತ್ರ, ಪ್ರಹಸನ ಚಿತ್ರ, ಉಪಹಾಸ ಚಿತ್ರ-ಎಂಬೆಲ್ಲ ಪರ್ಯಾಯನಾಮಗಳು ಇಂಥ ಚಿತ್ರಗಳ ಧ್ಯೇಯಗಳನ್ನು ಸಾಕಷ್ಟು ಸ್ಪಷ್ಟಪಡಿಸುತ್ತವೆ. ಇಟಾಲಿಯನ್ ಮೂಲದಿಂದ ಬಂದ ಕ್ಯಾರಿಕೇಚರ್ ಮತ್ತು ಕಾರ್ಟೂನ್ ಎಂಬ ಈ ಶಬ್ದಗಳನ್ನು ಪಾಶ್ಚಾತ್ಯರಲ್ಲಿ ಪ್ರಸಿದ್ಧ ಪಡಿಸಿದವರು ಫ್ರೆಂಚರು.