The most-visited ಕನ್ನಡ Wikipedia articles, updated daily. Learn more...
2014 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಪ್ರಾರಂಭವಾದ ನಂತರ 2015 ರಿಂದ ವಾರ್ಷಿಕವಾಗಿ ಜೂನ್ 21 ರಂದು ವಿಶ್ವದಾದ್ಯಂತ ಯೋಗದ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2014 ರಲ್ಲಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಸೂಚಿಸಿದ್ದರು. ಏಕೆಂದರೆ ಇದು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹಂಚಿಕೊಳ್ಳುತ್ತದೆ.
ಯೋಗ (ಸಂಸ್ಕೃತ, ಪಾಳಿ ಭಾಷೆ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗೂ ಮಾನಸಿಕ ಆಚರಣೆಗಳ ಬೋಧನಶಾಖೆ. ಪಾಲಿಗ್ರಂಥಗಳಲ್ಲಿನ ಪದ ಬಳಕೆಗಾಗಿ, ನೋಡಿ ಥಾಮಸ್ ವಿಲಿಯಂ ರಿಸ್ ಡೇವಿಡ್ಸ್, ವಿಲಿಯಂ ಸ್ಟೆಡೆ, ಪಾಲಿ-ಆಂಗ್ಲ ನಿಘಂಟು. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಈ ಪದವನ್ನು ಧ್ಯಾನದ ಆಚರಣೆಗಳೊಂದಿಗೆ ಬಳಸಲಾಗುತ್ತದೆ.ಡೆನಿಸ್ ಲಾರ್ಡನರ್ ಕಾರ್ಮಡಿ , ಜಾನ್ ಕಾರ್ಮಡಿ, ಸೆರೆನೆ ಕಂಪ್ಯಾಷನ್.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ-ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ 'ಯೋಗವಿದ್ಯೆಯು' ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ. ಯೋಗಶ್ಚಿತ್ತವೃತ್ತಿನಿರೋಧಃ ಎಂದ ಮಹಾ ಯೋಗಾಚಾರ್ಯ ಪತಂಜಲಿ ಮಹರ್ಷಿಗಳು ಯೋಗ ಪ್ರವರ್ತಕರು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
{{Infobox deity | type = ಹಿಂದು | Image = Munneswaram Sharabha.jpg | Caption = Shiva as Sharabha subduing Narasimha (Lord Vishnu), panel view from Munneswaram temple in [[Sri | Caption = Shiva as Sharabha subduing Narasimha (Lord Vishnu), panel view from Munneswaram temple in Sri Lanka. | Name = ಶರಭ | Devanagari = शरभ | Sanskrit_Transliteration = Śarabha | Tamil script = சரபா | Tamil_Transliteration = Caraba | Affiliation = ಅವತಾರ of ಶಿವ | God_of = | consort = Prathyangira | Weapon = }} ಶರಭ ಹಿಂದೂ ಪುರಾಣಗಳಲ್ಲಿ ಕಂಡು ಬರುವ ಅರ್ಧ ಸಿಂಹ ಮತ್ತು ಅರ್ಧ ಹಕ್ಕಿಯ ದೇಹ ಹೊಂದಿರುವ, ಎಂಟು ಕಾಲುಗಳಿರುವ ಪ್ರಾಣಿ. ಈ ಪ್ರಾಣಿ ಸಿಂಹ ಮತ್ತು ಆನೆಗಿಂತ ಭೀಕರ ಮತ್ತು ಸಿಂಹವನ್ನೇ ಕೊಲ್ಲಬಲ್ಲಂತಹ ಪ್ರಾಣಿ.
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
' ಸಂಪರ್ಕ ವೆಂದರೆ ಅಸ್ತಿತ್ವದಲ್ಲಿರುವ ಒಂದು ವಸ್ತು ವಿನಿಂದ ಇನ್ನೊಂದಕ್ಕೆ ಮಾಹಿತಿ ವರ್ಗಾಯಿಸುವ ಪ್ರಕ್ರಿಯೆಯಾಗಿದೆ. ಸಂಪರ್ಕವೆಂದೂ ಸಹ ಹೇಳುವ ಇದು ತಿಳಿವಳಿಕೆಯನ್ನು ಮನದಟ್ಟು ಮಾಡುವ ಕಾರ್ಯವೂ ಆಗಿದೆ. ಸಂವಹನ ಪ್ರಕ್ರಿಯೆಗಳೆಂದರೆ ಸಂಕೇತಗಳ ಸಂಚಯ ಮತ್ತು ಸಂಕೇತ ಶಾಸ್ತ್ರದ ನಿಯಮಗಳೊಂದಿಗೆ, ಕನಿಷ್ಠ ಎರಡು ಪ್ರತಿನಿಧಿತ್ವಗಳ ನಡುವಿನ ಸಂಕೇತ-ಆಧರಿಸಿದ ಸಂಪರ್ಕದ ಕೊಂಡಿಯಾಗಿದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಪ್ರಕ್ರೀಯೆಯಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಇದು ಭಾರತದ ಒಂದು ಕೇಂದ್ರೀಯ ಸಂಸ್ಥೆಯಾಗಿದ್ದು ಸಾರ್ವಜನಿಕ ಸೇವೆಗೆ ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಿ ಲೋಕ ಸೇವಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ತೊಡಗುವ ಅಧಿಕಾರವನ್ನು ಹೊಂದಿದೆ. ಭಾರತೀಯ ನಾಗರೀಕ ಸೇವಾ ಪರೀಕ್ಷೆ, ಇಂಜಿನಿಯರಿಂಗ್ ಸೇವಾ ಪರೀಕ್ಷೆ, ಕಂಬೈನ್ಡ್ ಡಿಫೆನ್ಸ್ ಸೇವಗಳ ಪರೀಕ್ಷೆ, ರಾಷ್ಟ್ರೀಯ ಸೇನಾ ಅಕಾಡೆಮಿ ಪರೀಕ್ಷೆ,ಜಲ ಸೇನಾ ಅಕಾಡೆಮಿ ಪರೀಕ್ಷೆ, ಭಾರತೀಯ ಅರಣ್ಯ ಸೇವೆ ಪರೀಕ್ಷೆ, ಭಾರತೀಯ ಅರ್ಥ ಸೇವೆ ಪರೀಕ್ಷೆ, ಭಾರತೀಯ ಸಂಖ್ಯಾ ಸೇವೆ ಪರೀಕ್ಷೆ, ಸಂಯೋಜಿತ ಭೂಗರ್ಭವಿಜ್ಞಾನ ಹಾಗು ಭೂಗರ್ಭ ತಜ್ಞರ ಪರೀಕ್ಷೆ ಹಾಗು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಪರೀಕ್ಷೆಗಳನ್ನು ಕೇಂದ್ರ ಲೋಕ ಸೇವಾ ಆಯೋಗವು ಕಾಲ ಕಾಲಕ್ಕೆ ತಕ್ಕಂತೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಪರೀಕ್ಷೆಗಳು ಅಭ್ಯರ್ಥಿಯ ಮಾನಸಿಕ ಸಾಮರ್ಥ್ಯ, ಭೌದ್ದಿಕ ಸಾಮರ್ಥ್ಯಗಳನ್ನು ಅಳೆಯುವ ಬಹು ಮುಖ್ಯ ಸಾಧನಗಳಾಗಿರುತ್ತವೆ.
ಕೈಮೀರ ಗ್ರೀಕ್ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಒಂದು ವಿಚಿತ್ರ ಕಾಲ್ಪನಿಕ ಹೆಣ್ಣು ಪ್ರಾಣಿ; ಸಿಂಹದ ತಲೆ, ಆಡಿನ ದೇಹ, ಹಾವಿನ ಬಾಲ ಮುಂತಾಗಿ ವಿಭಿನ್ನ ಪ್ರಾಣಿಗಳ ದೇಹಭಾಗಗಳನ್ನು ಒಟ್ಟಾಗಿಸಿ ಹೊಸೆದಿರುವ ಒಂದು ವಿಚಿತ್ರ ರೂಪವುಳ್ಳದ್ದು. ಇದು ನಿಃಶ್ವಸಿಸುವಾಗ ಬೆಂಕಿಯ ಜ್ವಾಲೆಯನ್ನೇ ಉಗುಳುತ್ತಿತ್ತಂತೆ. ಈ ಪ್ರಾಣಿ ಏಷ್ಯಮೈನರಿನ ಪ್ರಾಚೀನ ವಿಭಾಗಗಳಾದ ಲಿಶಿಯ ಹಾಗೂ ಕೇರಿಯಗಳನ್ನು ಧ್ವಂಸ ಮಾಡಿತೆಂದೂ ಗ್ರೀಕ್ ವೀರನಾದ ಬೆಲೆರೊಫಾನ್ ಇದನ್ನು ಸಂಹರಿಸಿದನೆಂದೂ ಕತೆ ಮುಂದುವರಿಯುತ್ತದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKSN, ಅನುವಾದ: ಪ್ರಧಾನಮಂತ್ರಿಗಳ ರೈತ ಗೌರವ ನಿಧಿ) ಭಾರತ ಸರ್ಕಾರದ ಉಪಕ್ರಮವಾಗಿದ್ದು, ರೈತರಿಗೆ ಕನಿಷ್ಠ ಆದಾಯ ಬೆಂಬಲವಾಗಿ ವರ್ಷಕ್ಕೆ ₹೬೦೦೦(₹೬,೩೦೦ ಅಥವಾ ೨೦೨೦ ರಲ್ಲಿ US$೭೯ ಗೆ ಸಮಾನ) ನೀಡುತ್ತದೆ. ೧ ಫೆಬ್ರವರಿ ೨೦೧೯ ರಂದು ಭಾರತದ ೨೦೧೯ರ ಮಧ್ಯಂತರ ಯೂನಿಯನ್ ಬಜೆಟ್ನಲ್ಲಿ ಪಿಯೂಷ್ ಗೋಯಲ್ ಅವರು ಈ ಉಪಕ್ರಮವನ್ನು ಘೋಷಿಸಿದರು . ಈ ಯೋಜನೆಗೆ ವಾರ್ಷಿಕ ₹೭೫,೦೦೦ ಕೋಟಿ (₹೭೯೦ ಶತಕೋಟಿ ಅಥವಾ ೨೦೨೦ ರಲ್ಲಿ US$೯.೯ ಶತಕೋಟಿಗೆ ಸಮಾನ) ವೆಚ್ಚವಾಗಿದೆ ಮತ್ತು ಡಿಸೆಂಬರ್ ೨೦೧೮ರಿಂದ ಜಾರಿಗೆ ಬಂದಿದೆ.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಕೃಷಿ (ವ್ಯವಸಾಯ) ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಅಂದರೆ ಆಹಾರ, ನಾರು, ಜೈವಿಕ ಇಂಧನ, ಔಷಧಗಳು ಮತ್ತು ಮಾನವ ಜೀವನವನ್ನು ಪೋಷಿಸಲು ಹಾಗೂ ವರ್ಧಿಸಲು ಬಳಸಲಾಗುವ ಇತರ ಉತ್ಪನ್ನಗಳಿಗಾಗಿ ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಮತ್ತು ಇತರ ಜೀವಿಗಳ ಸಾಗುವಳಿ. ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲೊಂದಾಗಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ ಅಥವಾ ಕೆ-ಸಿಇಟಿ ) ಕರ್ನಾಟಕ ರಾಜ್ಯದ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ವಾರ್ಷಿಕವಾಗಿ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ. ಸಿಇಟಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತದೆ, ಇದು ಕರ್ನಾಟಕದ ಉನ್ನತ ಶಿಕ್ಷಣ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಇದು ಕರ್ನಾಟಕ ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ಣ ಸಮಯದ ಎಂಜಿನಿಯರಿಂಗ್, ತಂತ್ರಜ್ಞಾನ, ಬಿ-ಫಾರ್ಮಾ, ಡಿ-ಫಾರ್ಮಾ, ಕೃಷಿ ಶಿಕ್ಷಣ (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಸಲಾದ ಆಫ್ಲೈನ್ ಪರೀಕ್ಷೆಯಾಗಿದೆ.
ನೋಡಿ:ವಾಯುಗುಣ ಬದಲಾವಣೆ ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಬಾಲ್ಯ ವಿವಾಹ ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ ೧೮ ಹಾಗೂ ಹುಡುಗರಿಗೆ ೨೧ ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ.
ಕಿರಾಣಿ ಅಂಗಡಿಯು ಮುಖ್ಯವಾಗಿ ಆಹಾರವನ್ನು ಮಾರಾಟಮಾಡುವ ಒಂದು ಚಿಲ್ಲರೆ ಅಂಗಡಿ. ಕಿರಾಣಿ ವ್ಯಾಪಾರಿಯು ಆಹಾರದ ಸಗಟು ಮಾರಾಟಗಾರ. ಕಿರಾಣಿ ಅಂಗಡಿಗಳು ಬಾಟಲಿಗಳು, ಪೆಟ್ಟಿಗೆಗಳು ಮತ್ತು ತವರದ ಡಬ್ಬಿಗಳಲ್ಲಿ ಪ್ಯಾಕ್ ಮಾಡಿದ ಬೇಗ ಕೆಡದ ಆಹಾರಗಳನ್ನು ಕೂಡ ಮಾರುತ್ತವೆ; ಕೆಲವು ಅಂಗಡಿಗಳು ಬೇಕರಿಗಳು, ಕಸಾಯಿಗಳು, ರಸಭಕ್ಷ್ಯದ ವಿಭಾಗಗಳು ಮತ್ತು ತಾಜಾ ಉತ್ಪನ್ನಗಳನ್ನು ಕೂಡ ಹೊಂದಿರುತ್ತವೆ.
ವಿಶ್ವ ಪರಿಸರ ದಿನವನ್ನು ( ಡಬ್ಲ್ಯೂಇಡಿ ) ವಾರ್ಷಿಕವಾಗಿ ಜೂನ್ 5 ರಂದು ಆಚರಿಸಲಾಗುತ್ತದೆ ಮತ್ತು ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮತ್ತು ಕ್ರಮವನ್ನು ಉತ್ತೇಜಿಸುತ್ತದೆ. ಇದು ಅನೇಕ ಸರ್ಕಾರೇತರ ಸಂಸ್ಥೆಗಳು, ವ್ಯವಹಾರಗಳು, ಸರ್ಕಾರಿ ಘಟಕಗಳಿಂದ ಬೆಂಬಲಿತವಾಗಿದೆ ಮತ್ತು ಪರಿಸರವನ್ನು ಬೆಂಬಲಿಸುವ ಪ್ರಾಥಮಿಕ ವಿಶ್ವಸಂಸ್ಥೆಯ ಎಲ್ಲರಿಗೂ ತಲುಪುವ ಜಾಗೃತಿ ದಿನವನ್ನು ಪ್ರತಿನಿಧಿಸುತ್ತದೆ. ಮೊದಲ ಬಾರಿಗೆ 1973 ರಲ್ಲಿ ಆಯೋಜಿಸಲಾಯಿತು, ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ.
ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ ಪ್ರಾರಂಭವಾಗಿತ್ತು. ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್ ೨೦೧೪ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭಮಾಡಿದರು. ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನ Archived 2021-11-12 ವೇಬ್ಯಾಕ್ ಮೆಷಿನ್ ನಲ್ಲಿ.ಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ.
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಲೈಂಗಿಕ ಸಂಭೋಗ ಎಂಬುದು ಗಂಡಿನ ಶಿಶ್ನವನ್ನು ಹೆಣ್ಣಿನ ಯೋನಿಯೊಳಕ್ಕೆ ತುರುಕಿಸುವ ಮತ್ತು ಹಿಂತೆಗೆದುಕೊಳ್ಳುವ ದೈಹಿಕ ಕ್ರಿಯೆ. ಸಾಮಾನ್ಯವಾಗಿ ಲೈಂಗಿಕ ಆನಂದಕ್ಕಾಗಿ ಸಂಭೋಗ ನಡೆಸುವುದಿದೆ ಮತ್ತು ಸಂತಾನೋತ್ಪತ್ತಿಗಾಗಿಯೂ ಸಂಭೋಗ ನಡೆಸಲಾಗುತ್ತದೆ. ನಿಜವಾಗಿ ನೋಡಿದರೆ ಗಂಡು ಮತ್ತು ಹೆಣ್ಣು ಕೂಡಿ ಸೃಷ್ಟಿಕಾರ್ಯದಲ್ಲಿ ತೊಡಗುವುದು ಲೈಂಗಿಕ ಕ್ರಿಯೆಯ ಮೂಲಕವೇ ಮತ್ತು ಮಗುವಿಗೆ ಜನ್ಮ ಕೊಡಲು ಸಾಧ್ಯವಾಗುವುದು ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ.
ಜನಪದ ಎಂಬ ಪದವು ಜನ - ಜನರು ಅಥವಾ ಬುಡಕಟ್ಟು ಪದ - ಎಂಬ ಎರಡು ಪದಗಳಿಂದ ರೂಪುಗೊಂಡಿದೆ - ಒಂದು ರೀತಿಯ ಸಣ್ಣ ಪದ್ಯವು ಸಂಧಿ - ವ್ಯಾಕರಣ ಪದವಾಗಿ ಸೇರಿಕೊಂಡಿದೆ. ಕನ್ನಡಿಗ ಮತ್ತು ಬಹುಶಃ ತೆಲುಗು ಜನರ ಜಾನಪದ ಸಂಸ್ಕೃತಿ ಮತ್ತು ಆಡುಮಾತಿನ ಭಾಷೆಯು ,ಭಾಷೆಗಳು ಅಸ್ತಿತ್ವಕ್ಕೆ ಬಂದ ಸಮಯದಿಂದ ಈ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ.
ಇಸ್ರೇಲ್ (יִשְׂרָאֵל, ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל, ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل, ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರದ ಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ.
ಸುಧಾ ಚಂದ್ರನ್ ರವರು(೨೭ ಸಪ್ಟೆಂಬರ್ ೧೯೬೫) ಭಾರತೀಯ ಚಲನಚಿತ್ರ ಮತ್ತು ಕಿರುತರೆ ನಟಿ ಹಾಗೂ ಭರತನಾಟ್ಯ ನೃತ್ಯ ಕಲಾವಿದೆ. ಸುಧಾ ಚಂದ್ರನ್ ಮತ್ತು ಆಕೆಯ ತಂದೆ ತಾಯಿಯೊಂದಿಗೆ ೨ ಮೇ ೧೯೮೧ ರಂದು ದೇವಸ್ಥಾನಕ್ಕೆ ತೆರಳುತ್ತಿರುವಾಗ ತಮಿಳುನಾಡಿನ ತಿರುಚಿರಾಪಲ್ಲಿ ಬಳಿ ರಸ್ತೆ ಅಪಘಾತದಿಂದಾಗಿ ತನ್ನ ಕಾಲನ್ನು ಕಳೆದುಕೊಂಡರು. ನಂತರ ಕೃತಕ ಕಾಲಿನ ಸಹಾಯದಿಂದ ಅವರು ನಡೆಯಲು ಪ್ರಾರಂಭಿಸಿದರು.