The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಯುಥೆನೇಶಿಯ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ದಯಾಮರಣ ಪದಕ್ಕೆ ಉತ್ತಮ ಸಾವು ಎಂಬ ಅರ್ಥವಿದೆ. ಈ ಪದವನ್ನು ಗ್ರೀಕ್ ಭಾಷೆಯ 'ಯು' ಅಂದರೆ ಒಳ್ಳೆಯ ಮತ್ತು 'ಥಾನಾಟೋಸ್' ಅಂದರೆ ಸಾವು ಎಂಬ ೨ ಪದಗಳಿಂದ ಎರವಲು ಪಡೆದುಕೊಂಡು ಸೃಷ್ಟಿಸಲಾಗಿದೆ. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಅಥವಾ ತೀವ್ರವಾದ ದೈಹಿಕ ವೇದನೆಯಲ್ಲಿರುವ ರೋಗಿಯ ಸ್ಥಿತಿಯನ್ನು ಮೊದಲಿನಂತಾಗದೆ ಇದ್ದಾಗ ಆತನ ಜೀವನವನ್ನು ದೀರ್ಘಗೊಳಿಸಬಹುದು.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳು
ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಾಲ ಸಾಹಿತ್ಯ ಪುರಸ್ಕಾರ, ಅನುವಾದ ಕ್ಷೇತ್ರದ ಸಾಧನೆಗೆ ಅನುವಾದ ಬಹುಮಾನಗಳನ್ನೂ ನೀಡಿ ಗೌರವಿಸಲಾಗುತ್ತದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಹಿಂದೂ ತತ್ವಶಾಸ್ತ್ರದ ಪ್ರಕಾರ, ಪರಮಾತ್ಮನನ್ನು, ಸಕಲ ಜೀವಿಗಳ ಏಕಮೇವ-ಅದ್ವಿತೀಯ ಆತ್ಮನಾಗಿ ಪರಿಗಣಿಸಲಾಗುತ್ತದೆ. ಪರಮಾತ್ಮನು, ಸಕಲ ಜೀವಚರಗಳಲ್ಲು ವ್ಯಾಪ್ತನಾಗಿದ್ದಾನೆ. ಪರಮಾತ್ಮ ನಿರಾಕಾರ ಆದಿ ಅಂತ್ಯ ಇಲ್ಲದವನು ಉಪನಿಷದಗಳ ಪ್ರಕಾರ, ಆತ್ಮ ಹಾಗು ಪರಮಾತ್ಮ ನನ್ನು, ಮರದ ಮೇಲೆ ಕುಳಿತಿರುವ ಪಕ್ಷಿಗಳಿಗೆ ಹೊಲಿಸಿದರೆ, ಆತ್ಮವು ಮರದ ಹಣ್ಣುಗಳನ್ನು ತಿನ್ನುತಿದ್ದಾಗ ಕರ್ಮ, ಪರಮಾತ್ಮನು, ಇದನ್ನೆಲ್ಲಾ ಸಾಕ್ಷಿಯಂತೆ, ವೀಕ್ಷಿಸುತಿರುತ್ತನೆ.
ಸಲಹೆಯು (ಸೂಚನೆ, ಬುದ್ಧಿವಾದ) ಯಾವುದೋ ಸಂದರ್ಭದಲ್ಲಿ ಪ್ರಸಾರಮಾಡಿದ ನಿರ್ದಿಷ್ಟ ಪರಿಸ್ಥಿತಿಗಳ ಬಗ್ಗೆ ವೈಯಕ್ತಿಕ ಅಥವಾ ಸಾಂಸ್ಥಿಕ ಅಭಿಪ್ರಾಯಗಳು, ನಂಬಿಕೆ ವ್ಯವಸ್ಥೆಗಳು, ಮೌಲ್ಯಗಳು, ಶಿಫಾರಸುಗಳು ಅಥವಾ ಮಾರ್ಗದರ್ಶನವನ್ನು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಪಕ್ಷಕ್ಕೆ ಸಂಬಂಧಿಸುವ ಒಂದು ರೂಪ. ಹಲವುವೇಳೆ ಇದನ್ನು ಕಾರ್ಯ ಮತ್ತು/ಅಥವಾ ನಡತೆಯ ಮಾರ್ಗದರ್ಶಿಯಾಗಿ ನೀಡಲಾಗುತ್ತದೆ. ಸ್ವಲ್ಪ ಹೆಚ್ಚು ಸರಳವಾಗಿ ಹೇಳಿದರೆ, ಸಲಹಾ ಸಂದೇಶವು ಒಂದು ಸಮಸ್ಯೆಯನ್ನು ನಿಭಾಯಿಸಲು, ನಿರ್ಧಾರವನ್ನು ಮಾಡಲು, ಅಥವಾ ಒಂದು ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ ಯೋಚಿಸಿರಬಹುದಾದ, ಹೇಳಿರಬಹುದಾದ ಅಥವಾ ಮಾಡಬಹುದಾದ ಶಿಫಾರಸು.
ದ್ರವೀಕೃತ ಪೆಟ್ರೋಲಿಯಮ್ ಅನಿಲ(ಎಲ್ಪಿಜಿ),
ದ್ರವೀಕೃತ ಪೆಟ್ರೋಲಿಯಮ್ ಅನಿಲ(LPG, GPL, LP ಗ್ಯಾಸ್, ಅಥವಾ ಆಟೋಗ್ಯಾಸ್ ಎಂದೂ ಕರೆಯಲಾದ) [[ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್ ಅನಿಲಗಳ ಮಿಶ್ರಣ. ಈ ಅನಿಲವನ್ನು ಬಿಸಿ ಮಾಡುವ ಉಪಕರಣಗಳು ಹಾಗೂ ವಾಹನಗಳಲ್ಲಿ ಇಂಧನ ರೂಪದಲ್ಲಿ ಬಳಸಲಾಗುತ್ತಿದೆ. ಇದಲ್ಲದೆ, ಓಜೋನ್ ಪದರಕ್ಕೆ ಹಾನಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ, ಕ್ಲೋರೋಫ್ಲೋರೋಕಾರ್ಬನ್ಗಳ ಬದಲಿಗೆ, ವಾಯುದ್ರವ ನೋದಕ (ಏರೋಸಾಲ್ ಪ್ರೊಪೆಲ್ಲಂಟ್) ಹಾಗೂ ಶೀತಕ|ಸುಲಭವಾಗಿ ಉರಿಯಬಲ್ಲ ಹೈಡ್ರೋಕಾರ್ಬನ್ ಅನಿಲಗಳ ಮಿಶ್ರಣ.
ಕ್ಷಾರ(Alkali):ರಸಾಯನಶಾಸ್ತ್ರದಲ್ಲಿ ಕ್ಷಾರ ಲೋಹಗಳೆಂದು ಕರೆಯಲ್ಪಡುವ ಲಿಥಿಯಮ್,ಸೋಡಿಯಮ್,ಪೊಟ್ಯಾಶಿಯಮ್,ರುಬಿಡಿಯಮ್,ಸೀಸಿಯಮ್,ಫ್ರಾನ್ಸಿಯಮ್ ಮೂಲಧಾತುಗಳ ಹೈಡ್ರಾಕ್ಸಡ್ಗಳ ಹಾಗೂ ಕಾರ್ಬೋನೇಟ್ಗಳನ್ನು ಕ್ಷಾರವೆಂದು ಕರೆಯುತ್ತಾರೆ.ಈ ಕ್ಷಾರ ಲೋಹಗಳ ಸಂಯುಕ್ತಗಳು ಅತ್ಯಂತ ಉಪಯುಕ್ತ ಮತ್ತು ಹೆಚ್ಚು ಬಳಕೆಯಲ್ಲಿರುವ ಸಂಯುಕ್ತಗಳಾಗಿವೆ.ಸೋಡಿಯಮ್ ಕ್ಲೊರೈಡ್,ಹೈಡ್ರೋಜನ್ ಪೆರಾಕ್ಸೈಡ್,ಸೋಡಿಯಮ್ ಹೈಡ್ರಾಕ್ಸೈಡ್ ಮುಂತಾದವುಗಳು ನಿತ್ಯ ಬಳಕೆಯಲ್ಲಿರುವ ಕ್ಷಾರಗಳು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಕನ್ನಡ ಛಂದಸ್ಸು : ಕನ್ನಡ ಭಾಷೆಯ ಪದ್ಯಸಾಹಿತ್ಯದಲ್ಲಿ ಬಹಳ ಹಿಂದಿನಿಂದಲೂ ವಾಡಿಕೆಯಾಗಿ ಬಳಕೆಯಾಗುತ್ತ ಬಂದಿರುವ ಸಂಸ್ಕೃತ ಮತ್ತು ಪ್ರಾಕೃತ ಪ್ರಭಾವದ ಪದ್ಯಜಾತಿಗಳನ್ನೂ ವಿಶೇಷವಾಗಿ ಅಚ್ಚಕನ್ನಡ ಮಟ್ಟುಗಳೆನಿಸಿದ ತ್ರಿಪದಿ ಷಟ್ಪದಿ ಮೊದಲಾದ ಪದ್ಯಜಾತಿಗಳು ಮತ್ತು ಹೊಸಗನ್ನಡ ಕವಿತೆಯ ಮಟ್ಟುಗಳನ್ನೂ ಕನ್ನಡ ಛಂದಸ್ಸು ಎಂಬ ಮಾತು ಒಳಗೊಳ್ಳುತ್ತದೆ.ಕನ್ನಡ ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆ ಬಹಳಷ್ಟಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ನೋಡಿ:ವಾಯುಗುಣ ಬದಲಾವಣೆ ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ. ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಪುನೀತ್ ರಾಜ್ ಕುಮಾರ್ ಅವರ ಚಲನಚಿತ್ರಗಳ ಪಟ್ಟಿ
ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯಕ್ಕಾಗಿ ಹೆಸರುವಾಸಿಯಾದ ಭಾರತೀಯ ನಟ ಪುನೀತ್ ರಾಜ್ಕುಮಾರ್. ಆರು ತಿಂಗಳ ಮಗುವಾಗಿದ್ದಾಗ, ಅವರು ವಿ. ಸೋಮಶೇಖರ ಪ್ರೇಮದ ಕಾಣಿಕೆ (1976) ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಮತ್ತು ನಂತರ ಸನಾದಿ ಅಪ್ಪಣ್ಣ (1977) ಚಿತ್ರದಲ್ಲಿ ನಟಿಸಿದರು.
ಕನ್ನಡದಲ್ಲಿ ಮಹಿಳಾ ವಿಮಾಂಸೆ ಸಾಹಿತ್ಯದ ಸಾವಿರದೈನೂರು ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದರೆ ೨೦ನೆಯ ಶತಮಾನಕ್ಕೆ ಕಾಲಿರಿಸುವವರೆಗೆ ಮಹಿಳೆಯರೇ ರಚಿಸಿದ ಸಾಹಿತ್ಯ, ಮಹಿಳಾ ಸಾಹಿತ್ಯವೆಂಬ ಹೆಸರಿನಲ್ಲಿ ಗುರುತಿಸಬಹುದಾದಂಥದ್ದು ಹೆಚ್ಚು ಕಂಡುಬರುವುದಿಲ್ಲ. ಸ್ತ್ರೀಯರು ವಿದ್ಯೆಯಿಂದ ವಂಚಿತರಾದದ್ದು, ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನದಲ್ಲಿ ಭಾಗಿಯಾಗುವ ಹೆಚ್ಚಿನ ಅವಕಾಶಗಳು ಸೃಷ್ಟಿಯಾಗದೇ ಹೋದದ್ದು, ಸ್ವಾತಂತ್ರ್ಯವಿರದ ಅವಲಂಬನೆಯ ಜೀವನವೇ ಪ್ರಧಾನವಾದದ್ದು - ಇಂಥ ಅನೇಕ ಕಾರಣಗಳಿಂದಾಗಿ ಮಹಿಳೆ ಕನ್ನಡ ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಬಹುಕಾಲದವರೆಗೆ ಅನನ್ಯತೆಯನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳಿರಬಹುದು.
ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (artificial intelligence) ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳುತ್ತವೆ. ಇದರಲ್ಲಿ ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾವೇ ಕೈಗೊಳ್ಳುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು.
ನ್ಯಾಯಾಲಯವು ಕಾನೂನು ನಿಯಮದ ಅನುಗುಣವಾಗಿ ಕಕ್ಷಿಗಳ ನಡುವೆ ಕಾನೂನು ವಿವಾದಗಳನ್ನು ನಿರ್ಣಯ ಮಾಡುವ ಮತ್ತು ನಾಗರೀಕ, ಕ್ರಿಮಿನಲ್, ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ನ್ಯಾಯ ನಿರ್ವಹಣೆ ನಡೆಸುವ ಅಧಿಕಾರವಿರುವ ಒಂದು ತೀರ್ಪುಜಗಲಿ, ಹಲವುವೇಳೆ ಒಂದು ಸರ್ಕಾರಿ ಸಂಸ್ಥೆ. ಸಾಮಾನ್ಯ ಕಾನೂನು ಮತ್ತು ನಾಗರೀಕ ಕಾನೂನು ಎರಡರದ್ದೂ ಕಾನೂನು ವ್ಯವಸ್ಥೆಗಳಲ್ಲಿ, ನ್ಯಾಯಾಲಯಗಳು ವಿವಾದ ಪರಿಹಾರಗಳಿಗೆ ಕೇಂದ್ರ ಸಾಧನಗಳಾಗಿವೆ, ಮತ್ತು ಎಲ್ಲ ವ್ಯಕ್ತಿಗಳು ನ್ಯಾಯಾಲಯದ ಮುಂದೆ ತಮ್ಮ ಬೇಡಿಕೆಗಳನ್ನು ತರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸಾಮಾನ್ಯವಾಗಿ ತಿಳಿಯಲಾಗಿದೆ. ಅದೇರೀತಿ, ಅಪರಾಧದಿಂದ ಆರೋಪಿತರ ಹಕ್ಕುಗಳು ನ್ಯಾಯಾಲಯದ ಮುಂದೆ ಪ್ರತಿವಾದ ಹೂಡುವ ಹಕ್ಕನ್ನು ಒಳಗೊಂಡಿವೆ.
"ಅಪ್ಪು" ೨೦೦೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಪುನಿತ್ ರಾಜಕುಮಾರ್ ಹಾಗೂ ರಕ್ಷಿತಾ ಮುಖ್ಯ ಪಾತ್ರದಲ್ಲಿದ್ದಾರೆ ಜೊತೆಗೆ ಅವಿನಾಶ್,ಶ್ರೀನಿವಾಸ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ. "ಪೂರ್ಣಿಮಾ ಎಂಟರ್ಪ್ರೈಸಸ್" ಸಂಸ್ಥೆಯ ಲಾಂಛನದಲ್ಲಿ ಪಾರ್ವತಮ್ಮ ರಾಜ್ಕುಮಾರ್ ನಿರ್ಮಿಸಿದ್ದ ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶಕರಾಗಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ ಪ್ರಾರಂಭವಾಗಿತ್ತು. ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್ ೨೦೧೪ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭಮಾಡಿದರು. ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನ Archived 2021-11-12 ವೇಬ್ಯಾಕ್ ಮೆಷಿನ್ ನಲ್ಲಿ.ಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ.