The most-visited ಕನ್ನಡ Wikipedia articles, updated daily. Learn more...
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಫ್ಲಾರೆನ್ಸ್ ನೈಟಿಂಗೇಲ್ - "ಲೇಡಿ ವಿತ್ ದಿ ಲ್ಯಾಂಪ್" ಎಂದೇ ಪ್ರಖ್ಯಾತರಾಗಿದ್ದ ಮಹಿಳೆ.ಜನನ ಇಟಲಿಯಲ್ಲಿ ೧೮೨೦ರ ಮೇ ೧೨ ರಂದು.ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ,ತಮ್ಮ ೧೭ನೇ ವಯಸ್ಸಿನಲ್ಲೇ ನರ್ಸಿಂಗ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.ಸಮಾಜದಲ್ಲಿ ಹಿಂದುಳಿದ ಹಾಗೂ ಬಡಜನರಿಗೆ ವೈದ್ಯಕೀಯ ನೆರವು ದೊರೆಯಬೇಕೆಂಬುದೇ ಇವರ ಧ್ಯೇಯವಾಗಿತ್ತು.೧೮೫೪ರ ಅಕ್ಟೋಬರ್ ೨೧ರಂದು ತಮ್ಮ ೩೮ ನರ್ಸ್ ತಂಡದೊಂದಿಗೆ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಶುಶ್ರೂಷೆ ಮಾಡಿದರು.ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಇಕ್ಷ್ವಾಕು ವಂಶದ ದೊರೆ ರಾಜ ಹರಿಶ್ಚಂದ್ರ ಸತ್ಯಪಾಲನೆಗಾಗಿ ಹೆಸರಾದವನು. ತಂದೆ ಸೂರ್ಯ ವಂಶದ ದೊರೆ ತ್ರಿಶಂಕು,ತಾಯಿ ಸತ್ಯವ್ರತೆಯ ಮಗ ಮುಂದೆ ಸತ್ಯ ಹರಿಶ್ಚಂದ್ರನೆಂದು ಪ್ರಸಿದ್ಧಿ ಪಡೆದನು. ಒಂದಾನೊಂದು ಕಾಲದಲ್ಲಿ ಹರಿಶ್ಚಂದ್ರನೆಂಬ ರಾಜನು ಆಯೋಧ್ಯ ಎಂಬ ರಾಜ್ಯವನು ಚಾಣಕ್ಷ್ಯತನದಿಂದ ರಾಜ್ಯವನು ಆಳುತ್ತಿದನು ಮತ್ತು ಅವನು ಸತ್ಯವನು ಬಿಟ್ಟು ಬೇರೆ ಏನನ್ನು ಹೇಳುತ್ತಿರಲಿಲ್ಲ ಯಾವಾಗಲು ಸಂತೋಷದಿಂದ ರಾಜ್ಯಭಾರ ಮಾಡುತ್ತಿದ್ದ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ನಮಸ್ಕಾರ(ಉಚ್ಚಾರಣೆː) ಹಿಂದೂ ಸಂಪ್ರದಾಯದಲ್ಲಿ ಶುಭಾಶಯದ ಒಂದು ಗೌರವಯುತ ರೂಪ, ಮತ್ತು ಭಾರತೀಯ ಉಪಖಂಡದಲ್ಲಿ, ಮುಖ್ಯವಾಗಿ ಭಾರತ ಹಾಗೂ ನೇಪಾಳದಲ್ಲಿ ಮತ್ತು ಭಾರತದಿಂದ ಚದುರಿದ ಭಾರತೀಯರಲ್ಲಿ ಕಂಡುಬರುತ್ತದೆ. ಅದನ್ನು ವಂದನೆ ಮತ್ತು ಬೀಳ್ಕೊಡುಗೆ ಎರಡಕ್ಕೂ ಬಳಸಲಾಗುತ್ತದೆ. ನಮಸ್ಕಾರವನ್ನು ಸಾಮಾನ್ಯವಾಗಿ ಸ್ವಲ್ಪ ಬಗ್ಗಿ ಮತ್ತು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ಹೇಳಲಾಗುತ್ತದೆ.
ಅಲಿಪ್ತ ಚಳುವಳಿ (Non Aligned Movement (ನ್ಯಾಮ್)(ಎನ್ಎಎಂ)), ಅಮೇರಿಕಾ ಹಾಗು ಹಿಂದಿನ ಸೊವಿಯತ್ ಸಂಘದ ನಡುವಿನ ಶೀತಲ ಸಮರದ ಕಾಲದಲ್ಲಿ, ಎರಡೂ ಶಕ್ತಿ ಕೇಂದ್ರಗಳಿಂದ ದೂರವುಳಿದು ಈ ಸಂಘಟನೆಯ ಮುಖ್ಯ ದ್ಯೇಯವಾಗಿತ್ತು. ಇದು ಯುನೈಟೆಡ್ ಸೈಟ್ಸ್ ಮತ್ತು ಸೋವಿಯತ್ ಒಕ್ಕೂಟದ ಯಾವುದೇ ಪ್ರಮುಖ ರಾಜಕೀಯ ಶಕ್ತಿಯೊಂದಿಗೆ ಔಪಚಾರಿಕವಾಗಿ ಅಥವಾ ವಿರುದ್ಧವಾಗಿ ನಿಲ್ಲುವುದಿಲ್ಲ. ವಿಶ್ವಸಂಸ್ಥೆಯ ನಂತರ, ಇದು ವಿಶ್ವದಾದ್ಯಂತ ರಾಜ್ಯಗಳ ಅತಿದೊಡ್ಡ ಗುಂಪು.
ಸಾಲುಮರದ ತಿಮ್ಮಕ್ಕ (೩೦ ಜೂನ್ ೧೯೧೧ – ೧೪ ನವೆಂಬರ್ ೨೦೨೫) ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿದ್ದ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಚೇರ್ಮನ್ ಮಾವೊ ಎಂದೂ ಕರೆಯಲ್ಪಡುವ ಮಾವೋ ಝೆಡಾಂಗ್ ಅಥವಾ ಮಾಓ ತ್ಸೆ ತುಂಗ್ (ಡಿಸೆಂಬರ್ ೨೬, ೧೮೯೩ - ಸೆಪ್ಟೆಂಬರ್ ೯, ೧೯೭೬), ಚೀನೀ ಕಮ್ಯುನಿಸ್ಟ್ ಕ್ರಾಂತಿಕಾರಿ, ಕವಿ, ರಾಜಕೀಯ ಸಿದ್ಧಾಂತವಾದಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಥಾಪಕರಾಗಿದ್ದರು, ಚೀನಾದ ಕಮ್ಯುನಿಸ್ಟ್ ಪಕ್ಷದ ಚೇರ್ಮನ್ ಆಗಿ ೧೯೪೯ ರಲ್ಲಿ ಅದರ ಸ್ಥಾಪನೆಯಾಯಿತು, ೧೯೭೬ ಅವರ ಮರಣದವರೆಗೆ ಅಧ್ಯಕ್ಷರಾಗಿದ್ದರು ಅವರ ಮಾರ್ಕ್ಸ್ವಾದ-ಲೆನಿನಿಸ್ಟ್ ಸಿದ್ಧಾಂತಗಳು, ಮಿಲಿಟರಿ ತಂತ್ರಗಳು, ಮತ್ತು ರಾಜಕೀಯ ನೀತಿಗಳು ಒಟ್ಟಾರೆಯಾಗಿ ಮಾವೋವಾದಿ ಅಥವಾ ಮಾರ್ಕ್ಸ್ವಾದ-ಲೆನಿನಿಸಮ್-ಮಾವೋಯಿಸಂ ಎಂದು ಕರೆಯಲಾಗುತ್ತದೆ. ಶಾವೊಶನ್, ಹುನಾನ್ ನಲ್ಲಿ ಶ್ರೀಮಂತ ರೈತನ ಮಗನಾಗಿ ಹುಟ್ಟಿದವರು ಆರಂಭಿಕ ಜೀವನದಲ್ಲಿ ಚೀನೀ ರಾಷ್ಟ್ರೀಯತಾವಾದಿ ಮತ್ತು ಸಾಮ್ರಾಜ್ಯಶಾಹಿ ವಿರೋಧಿ ದೃಷ್ಟಿಕೋನವನ್ನು ಅಳವಡಿಸಿಕೊಂಡರು, ವಿಶೇಷವಾಗಿ ೧೯೧೧ ರ ಸಿನ್ಹೈ ಕ್ರಾಂತಿಯ ಘಟನೆಗಳು ಮತ್ತು ೧೯೧೯ ರ ಮೇ ನಾಲ್ಕನೆಯ ಚಳುವಳಿಯಿಂದ ಪ್ರಭಾವಿತರಾಗಿದ್ದರು. ಮಾವೋ ಪೆಕಿಂಗ್ ಯೂನಿವರ್ಸಿಟಿಯಲ್ಲಿ ಕೆಲಸ ಮಾಡುವಾಗ ಮಾರ್ಕ್ಸಿಸಮ್-ಲೆನಿನಿಸಮ್ ಅನ್ನು ಅಳವಡಿಸಿಕೊಂಡರು ಮತ್ತು ೧೯೨೭ ರಲ್ಲಿ ಶರತ್ಕಾಲದ ಹಾರ್ವೆಸ್ಟ್ ದಂಗೆಗೆ ಕಾರಣವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಸಂಸ್ಥಾಪಕ ಸದಸ್ಯರಾದರು.ಕ್ಯುಮಿಂಟಾಂಗ್ (ಕೆಎಂಟಿ) ಮತ್ತು ಸಿಪಿಸಿ ನಡುವಿನ ಚೀನೀ ನಾಗರಿಕ ಯುದ್ಧದ ಸಮಯದಲ್ಲಿ, ಮಾವೊ ಚೀನಾದ ವರ್ಕರ್ಸ್ ಮತ್ತು ರೈತರ ರೆಡ್ ಆರ್ಮಿಗಳನ್ನು ಕಂಡುಕೊಳ್ಳಲು ಸಹಾಯಮಾಡಿದನು, ಜಿಯಾಂಗ್ಸಿ ಸೋವಿಯತ್ನ ತೀವ್ರಗಾಮಿ ಭೂನೀತಿ ನೀತಿಗಳನ್ನು ನೇತೃತ್ವ ವಹಿಸಿದನು ಮತ್ತು ಲಾಂಗ್ ಮಾರ್ಚನ ಸಮಯದಲ್ಲಿ ಅಂತಿಮವಾಗಿ ಸಿಪಿಸಿಯ ಮುಖ್ಯಸ್ಥನಾದನು.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಅರಿಸ್ಟಾಟಲ್ (Greek: Ἀριστοτέλης , ಅರಿಸ್ಟಾಟೆಲೆಸ್ ) (384 BC – 322 BC) ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ.
ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಮಹರ್ಷಿ ವಾತ್ಸ್ಯಾಯನ ಕೃತವಾದ ಕಾಮಸೂತ್ರವೆಂಬ ಪ್ರಾಚೀನ ಭಾರತೀಯ ಸಂಸ್ಕೃತ ಗ್ರಂಥ ಮಾನವನ ಲೈಂಗಿಕ ವರ್ತನೆ ಮತ್ತು ಭಾರತೀಯ ಪುರುಷಾರ್ಥ ಚಿಂತನೆಯನ್ನು ಕುರಿತ ಪ್ರಮಾಣಿತ ಕೃತಿಯೆಂಬುದು ಪಂಡಿತಜನ ವೇದ್ಯವಾದ ವಿಷಯ. ವಾತ್ಸ್ಯಾಯನ ಕಾಮಸೂತ್ರವು ಪ್ರಧಾನವಾಗಿ ಸಂಭೋಗ ಭಂಗಿಗಳನ್ನು ಕುರಿತ ಲೈಂಗಿಕ ಕೈಪಿಡಿಯಲ್ಲ.ಅದು ಚೆನ್ನಾಗಿ ಬದುಕುವ ಕಲೆ, ಪ್ರೀತಿಯ ಸ್ವರೂಪ, ಸಂಗಾತಿಗಳನ್ನು ಹುಡುಕುವ ಕ್ರಮ, ಲೈಂಗಿಕ ಜೀವನವನ್ನು ಕಾಪಾಡಿಕೊಳ್ಳುವುದು ಮತ್ತು ಆನಂದ-ಆಧಾರಿತ ಸಾಮರ್ಥ್ಯಗಳಿಗೆ ಸಂಬಂಧಿಸಿದ ಇತರ ಅಂಶಗಳನ್ನು ಕುರಿತು ಮಾರ್ಗದರ್ಶಿಯಾಗಿದೆ. ಇದು ವಿಭಿನ್ನ ಭಾಷ್ಯಗಳೊಂದಿಗೆ (ವ್ಯಾಖ್ಯಾನಗಳು) ಆಧುನಿಕ ಯುಗದಲ್ಲಿ ಉಳಿದುಕೊಂಡಿರುವ ಸಂಕ್ಷಿಪ್ತ ಪೌರುಷ ಪದ್ಯಗಳನ್ನು ಹೊಂದಿರುವ ಸೂತ್ರ ವಿಭಾಗದ ಗ್ರಂಥವಾಗಿದೆ.
ಟೆಂಪ್ಲೇಟು:HistoryOfSouthAsia ಮಹಾಜನಪದಗಳು (ಸಂಸ್ಕೃತ: महाजनपद), ಅಕ್ಷರಶಃ "ಬೃಹತ್ ರಾಜ್ಯ", (ಅಂದರೆ ಮಹಾ, "ಬೃಹತ್", ಮತ್ತು ಜನಪದಗಳು "ಬುಡಕಟ್ಟಿನ ಕಾಲ್ನೆಲೆ", "ದೇಶ") ಪುರಾತನ ಭಾರತೀಯ ರಾಜ್ಯಗಳು ಅಥವಾ ದೇಶಗಳು ಎಂಬುದಾಗಿ ಕರೆಯಲ್ಪಡುತ್ತವೆ. ಅಂಗುತ್ತರ ನಿಕಾಯದಂತಹ ಪುರಾತನ ಬೌದ್ಧಧರ್ಮ ಪಠ್ಯಗಳು ಹದಿನಾರು ರಾಜ್ಯಗಳು ಮತ್ತು ಗಣರಾಜ್ಯಗಳ (ಸೋಲಾಸ್ ಮಹಾಜಾನಪದಾಸ್ ) ಪುನರಾವರ್ತಿತ ಉಲ್ಲೇಖವನ್ನು ಮಾಡುತ್ತವೆ, ಇವು ವಾಯವ್ಯದ ಗಾಂಧಾರದಿಂದ ಭಾರತೀಯ ಉಪಖಂಡದ ಪೂರ್ವ ಭಾಗದಲ್ಲಿನ ಅಂಗದವರೆಗೆ ವಿಸ್ತರಿಸಿದ ಕ್ಷೇತ್ರದಲ್ಲಿ ವಿಕಸನ ಹೊಂದಿ ಪ್ರವರ್ಧಮಾನಕ್ಕೆ ಬಂದವು ಮತ್ತು ಭಾರತದಲ್ಲಿ ಬೌದ್ಧಮತ (ಬೌದ್ಧಧರ್ಮ) ಪ್ರವರ್ಧಮಾನಕ್ಕೆ ಬರುವುದಕ್ಕೂ ಮುಂಚೆ ವಿಂಧ್ಯ ಪ್ರದೇಶದಾಚೆಗಿನ ಭಾಗಗಳನ್ನು ಒಳಗೊಂಡಿತ್ತು. ಕ್ರಿ.ಪೂ.
ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಅರ್ಥವ್ಯವಸ್ಥೆ ಎಂದು ವಿವರಿಸಲಾಗಿದೆ. ಪಿ.ಪಿ.ಪಿ.ವುಳ್ಳ (ಕೊಳ್ಳುವ ಶಕ್ತಿಯ ಸಾಮ್ಯತೆ) ಜಿ.ಡಿ.ಪಿ ಪ್ರಕಾರ ಭಾರತ ವಿಶ್ವದಲ್ಲೇ ಮೂರನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಐದನೆಯ ಸ್ಥಾನದಲ್ಲಿದೆ. ಐಎಂಎಫ್ ಪ್ರಕಾರ, ತಲಾವಾರು ಆದಾಯದ ಆಧಾರದಲ್ಲಿ, ೨೦೧೮ರಲ್ಲಿ ಭಾರತವು ಜಿಡಿಪಿ ಪ್ರಕಾರ ೧೩೯ನೇ (ನಾಮಮಾತ್ರದ) ಮತ್ತು ಜಿಡಿಪಿ ಪ್ರಕಾರ ೧೧೮ನೇ (ಪಿಪಿಪಿ) ಸ್ಥಾನ ಹೊಂದಿತ್ತು.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ (artificial intelligence) ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು "ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ" ಎಂದು ಹೇಳುತ್ತವೆ. ಇದರಲ್ಲಿ ಒಂದು ಯಂತ್ರವು ತನ್ನ ಪರಿಸರವನ್ನು ಗ್ರಹಿಸಿ ತನಗೆ ಕೊಟ್ಟಿರುವ ಗುರಿಯತ್ತ ಹೆಚ್ಚು ಯಶಸ್ಸು ಪಡೆಯಲು ಅಗತ್ಯವಿರುವ ಕ್ರಮಗಳನ್ನು ತಾವೇ ಕೈಗೊಳ್ಳುತ್ತದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.