The most-visited ಕನ್ನಡ Wikipedia articles, updated daily. Learn more...
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಮೈಸೂರು ಚಿತ್ರಕಲೆಯು ದಕ್ಷಿಣ ಭಾರತದ ಶಾಸ್ತ್ರೀಯ ಚಿತ್ರಕಲೆಯ ಪ್ರಮುಖ ರೂಪವಾಗಿದ್ದು ಇದು ಹುಟ್ಟಿಕೊಂಡದ್ದು ಕರ್ನಾಟಕದ ಮೈಸೂರು ನಗರದ ಸುತ್ತಮುತ್ತಲೂ, ಮೈಸೂರು ಆಡಳಿತಗಾರರು ಇದನ್ನು ಪ್ರೋತ್ಸಾಹಿಸಿದರು ಮತ್ತು ಪೋಷಿಸಿದರು. ಮೂಲ ಅಜಂತಾ ಕಾಲದಿಂದ ( 2 ನೇ ಶತಮಾನ ಕ್ರಿ.ಪು ಯಿಂದ 7 ನೇ ಶತಮಾನ ಕ್ರಿ.ಶ) ಕರ್ನಾಟಕದಲ್ಲಿ ಚಿತ್ರಕಲೆಯ ದೀರ್ಘ ಮತ್ತು ರೋಚಕ ಇತಿಹಾಸವಿದೆ. ಮೈಸೂರು ಚಿತ್ರಕಲೆ ವಿಶಿಷ್ಟ ಶಾಲೆಯ ವಿಜಯನಗರ ರಾಜರು (1336-1565 ಕ್ರಿ.ಶ.), ವಿಜಯನಗರ ಆಡಳಿತಗಾರರು ಮತ್ತು ಸಾಮಂತರ ರಾಜರುಗಳ ಪ್ರೋತ್ಸಾಹ ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಧಾರ್ಮಿಕ ಮತ್ತು ತತ್ವಶಾಸ್ತ್ರದ ಚರ್ಚೆಗಳ ಆಳ್ವಿಕೆಯಲ್ಲಿ ವಿಜಯನಗರದಲ್ಲಿ ಬಾರಿ ವರ್ಣಚಿತ್ರಗಳು ಹುಟ್ಟಿಕೊಂಡವು.
ಆಸ್ತಿಕ ("ಅದು ಅಸ್ತಿತ್ವದಲ್ಲಿದೆ") ಮತ್ತು ನಾಸ್ತಿಕ ("ಅದು ಅಸ್ತಿತ್ವದಲ್ಲಿಲ್ಲ") ಪರಮ ಬಹಿರಂಗಪಡಿಸಿದ ಧರ್ಮಗ್ರಂಥಗಳಾಗಿ ವೇದಗಳ ಶ್ರೇಷ್ಠತೆಯನ್ನು ಅವು ಅಥವಾ ಅವರು ಒಪ್ಪುತ್ತಾರೊ ಅಥವಾ ಇಲ್ಲವೊ ಎಂಬುದರ ಪ್ರಕಾರ ತತ್ವಶಾಸ್ತ್ರೀಯ ಪರಂಪರೆಗಳು ಮತ್ತು ವ್ಯಕ್ತಿಗಳನ್ನು ವರ್ಗೀಕರಿಸಲು ಬಳಸಲಾಗುವ ಹಿಂದೂ ಧರ್ಮದಲ್ಲಿನ ತಾಂತ್ರಿಕ ಪದಗಳು. ಈ ವ್ಯಾಖ್ಯಾನದ ಪ್ರಕಾರ, ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಮತ್ತು ವೇದಾಂತವನ್ನು ಆಸ್ತಿಕ ಪರಂಪರೆಗಳಾಗಿ ವರ್ಗೀಕರಿಸಲಾಗುತ್ತದೆ; ಮತ್ತು ಚಾರ್ವಾಕ, ಆಜೀವಿಕ, ಜೈನ ಧರ್ಮ ಮತ್ತು ಬೌದ್ಧ ಧರ್ಮದಂತಹ ಕೆಲವು ಪರಂಪರೆಗಳನ್ನು ನಾಸ್ತಿಕ ಎಂದು ಪರಿಗಣಿಸಲಾಗುತ್ತದೆ. ಈ ವ್ಯತ್ಯಾಸ ಪಾಶ್ಚಾತ್ಯದಲ್ಲಿನ ಸಾಂಪ್ರದಾಯಿಕ/ಸಂಪ್ರದಾಯ ವಿರೋಧದ ವ್ಯತ್ಯಾಸವನ್ನು ಹೋಲುತ್ತದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಸರ್ವೋಚ್ಚ ನ್ಯಾಯಾಲಯ ವು(ಒಂದು ಅಂತ್ಯೋಪಾಯದ ನ್ಯಾಯಾಲಯ,ಅಂದರೆ ತೀರ್ಪು ಪ್ರಶ್ನಾತೀತವಾದುದು ಎಂದು ಪರಿಗಣಿಸಲಾಗುತ್ತದೆ. ಕಾನೂನು ವ್ಯವಹಾರ, ಅಥವಾ ತೀರ್ಪು ; ಹೆಚ್ಚುವರಿ ಅಥವಾ ಉಚ್ಚ ನ್ಯಾಯಾಲಯ ; ಅಗ್ರ ಅಪೆಕ್ಸ್ ನ್ಯಾಯಾಲಯ ವೆಂದೂ ಸಹ ಕರೆಯಲ್ಪಡುತ್ತದೆ), ಕೆಲವು ಕಾನೂನು ವ್ಯಾಪ್ತಿಗಳಲ್ಲಿ, ಅದರ ಕಾನೂನು ವ್ಯವಸ್ಥೆಯೊಳಗಿನ ಉನ್ನತ ನ್ಯಾಯಾಂಗವಾಗಿದ್ದು, ಇಲ್ಲಿನ ಅಧಿಕೃತ ತೀರ್ಪು ಮತ್ತೊಂದು ನ್ಯಾಯಾಲಯದಿಂದ ಹೆಚ್ಚುವರಿ ಮರುವಿಮರ್ಶೆಗೆ ಒಳಪಡುವುದಿಲ್ಲ. ಇಂತಹ ನ್ಯಾಯಾಲಯಗಳಿಗೆ ನೇಮಕಾತಿಯು ಕಾನೂನು ವ್ಯಾಪ್ತಿಯೊಳಗೆ ಭಿನ್ನವಾಗಿರುತ್ತದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಮೈಸೂರು ದಸರವು ಭಾರತದ ಕರ್ನಾಟಕ ರಾಜ್ಯದ ನಾಡಹಬ್ಬ (ರಾಜ್ಯ ಉತ್ಸವ) ಆಗಿದೆ. ಇದು ಮಹಾಲಯ ಅಮವಾಸ್ಯೆ ನಂತರದ ೧೦ ದಿನಗಳ ಹಬ್ಬವಾಗಿದ್ದು, ನವರಾತ್ರಿ ಎಂದು ಕರೆಯಲ್ಪಡುವ ಒಂಬತ್ತು ರಾತ್ರಿಗಳಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನವನ್ನು ವಿಜಯದಶಮಿ ಎಂದು ಹೇಳುವ ಸಂದರ್ಭದಲ್ಲಿ ಅರ್ಜುನ ಆಚರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನ ಗ್ರೆಗೋರಿಯನ್ ತಿಂಗಳುಗಳಲ್ಲಿ ಬರುತ್ತದೆ.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ತಂತಿವಾದ್ಯಗಳು ಸಂಗೀತಗಾರನು ಯಾವುದೋ ರೀತಿಯಲ್ಲಿ ತಂತಿಗಳನ್ನು ನುಡಿಸಿದಾಗ ಅಥವಾ ಬಾಜಿಸಿದಾಗ, ಕಂಪಿಸುವ ತಂತಿಗಳಿಂದ ಶಬ್ದವನ್ನು ಉತ್ಪತ್ತಿಮಾಡುವ ಸಂಗೀತ ವಾದ್ಯಗಳು. ಸಂಗೀತಗಾರರು ತಂತಿಗಳನ್ನು ತಮ್ಮ ಬೆರಳುಗಳು ಅಥವಾ ಮೀಟು ದಂತದಿಂದ ಮೀಟುವ ಮೂಲಕ ಕೆಲವು ತಂತಿವಾದ್ಯಗಳನ್ನು ನುಡಿಸುತ್ತಾರೆ, ಮತ್ತು ಇತರ ತಂತಿವಾದ್ಯಗಳನ್ನು ತಂತಿಗಳನ್ನು ಒಂದು ಹಗುರವಾದ ಕಟ್ಟಿಗೆಯ ಸುತ್ತಿಗೆಯಿಂದ ಹೊಡೆದು ಅಥವಾ ತಂತಿಗಳನ್ನು ಕಮಾನಿನಿಂದ ಉಜ್ಜಿ ನುಡಿಸುತ್ತಾರೆ. ಹಾರ್ಪ್ಸಿಕಾರ್ಡ್ನಂತಹ ಕೆಲವು ಕೀಲಿಮಣೆ ವಾದ್ಯಗಳಲ್ಲಿ, ಸಂಗೀತಗಾರನು ಒಂದು ಕೀಲಿಯನ್ನು ಒತ್ತಿದಾಗ ಅದು ತಂತಿಯನ್ನು ಮೀಟುತ್ತದೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಗ್ರೇಟರ್ ಬೆಂಗಳೂರು : ಕರ್ನಾಟಕ ರಾಜ್ಯದ ಒಂದು ಮಹಾನಗರ ಪಾಲಿಕೆಗಳ ಒಕ್ಕೂಟವಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರಿನ ಮೂರು ಜಿಲ್ಲೆಗಳಾದ ಬೆಂಗಳೂರು ನಗರ ಜಿಲ್ಲೆ (ಬೆಂಗಳೂರು), ಬೆಂಗಳೂರು ಉತ್ತರ ಜಿಲ್ಲೆ (ದೊಡ್ಡಬಳ್ಳಾಪುರ), ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಒಟ್ಟು 8005 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ : ಪ್ರಸ್ತುತ ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಗ್ರೇಟರ್ ಬೆಂಗಳೂರು ಎಂದು ಮರುನಾಮಕರಣ ಮಾಡಿ, ಐದು ಮಹಾನಗರ ಪಾಲಿಕೆಗಳನ್ನು ವಿಂಗಡಿಸಲಾಗಿದೆ.
ಚೆನ್ನಕೇಶವ ದೇವಾಲಯವನ್ನು, ಕೇಶವ ಅಥವಾ ಬೇಲೂರಿನ ವಿಜಯನಾರಾಯಣ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ೧೨ ನೇ ಶತಮಾನದ ಹಿಂದೂ ದೇವಾಲಯವಾಗಿದೆ. ಇದು ೧೧೧೭ ಸಿ ಇ ನಲ್ಲಿ ರಾಜ ವಿಷ್ಣುವರ್ಧನನಿಂದ ನಿಯೋಜಿಸಲ್ಪಟ್ಟಿತು, ಬೇಲೂರಿನಲ್ಲಿ ಯಗಚಿ ನದಿಯ ದಡದಲ್ಲಿ ವೇಲಾಪುರ ಎಂದೂ ಕರೆಯಲ್ಪಡುತ್ತದೆ, ಇದು ಆರಂಭಿಕ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಜನಪದ ಎಂಬ ಪದವು ಜನ - ಜನರು ಅಥವಾ ಬುಡಕಟ್ಟು ಪದ - ಎಂಬ ಎರಡು ಪದಗಳಿಂದ ರೂಪುಗೊಂಡಿದೆ - ಒಂದು ರೀತಿಯ ಸಣ್ಣ ಪದ್ಯವು ಸಂಧಿ - ವ್ಯಾಕರಣ ಪದವಾಗಿ ಸೇರಿಕೊಂಡಿದೆ. ಕನ್ನಡಿಗ ಮತ್ತು ಬಹುಶಃ ತೆಲುಗು ಜನರ ಜಾನಪದ ಸಂಸ್ಕೃತಿ ಮತ್ತು ಆಡುಮಾತಿನ ಭಾಷೆಯು ,ಭಾಷೆಗಳು ಅಸ್ತಿತ್ವಕ್ಕೆ ಬಂದ ಸಮಯದಿಂದ ಈ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ರಾಘವಾಂಕ :-ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.(ಷಟ್ಪದಿಯ ಬ್ರಹ್ಮ ಎಂದೇ ಪ್ರಸಿದ್ಧರಾಗಿದ್ದಾರೆ) ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ ಧರ್ಮದ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಹಣ್ಣು ಮತ್ತು ಸಿಪ್ಪೆಯನ್ನು ಹೊಂದಿರುವ ಅಥವಾ ಹೊಂದದೆ ಇರುವ ಸಣ್ಣ, ಗಟ್ಟಿಯಾದ ಏಕದಳ ಸಸ್ಯಗಳ ಬೀಜವನ್ನು ಧಾನ್ಯವೆಂದು ಕರೆಯುತ್ತಾರೆ. ಅಕ್ಕಿ, ಗೋಧಿ, ಜೋಳ, ರಾಗಿ, ನವಣೆ, ಸಜ್ಜೆ ಮತ್ತು ಇತ್ಯಾದಿಗಳು ಧಾನ್ಯಗಳಿಗೆ ಉದಾಹರಣೆಗಳಾಗಿವೆ. ಧಾನ್ಯವು ಸಣ್ಣ, ಗಟ್ಟಿಯಾದ, ಒಣ ಬೀಜವಾಗಿದ್ದು, ಲಗತ್ತಿಸಲಾದ ಹಲ್ ಅಥವಾ ಫ್ರುಟ್ ಲೇಯರ್ ನೊಂದಿಗೆ ಅಥವಾ ಇಲ್ಲದೆ, ಮಾನವ ಅಥವಾ ಪ್ರಾಣಿಗಳ ಬಳಕೆಗಾಗಿ ಕೊಯ್ಲು ಮಾಡಲಾಗುತ್ತದೆ.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.