The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಕೊಂಕಣ ವನ್ನು ಕೊಂಕಣ ಕರಾವಳಿ ಅಥವಾ ಕರಾವಳಿ ಎಂದೂ ಸಹ ಕರೆಯಲಾಗುತ್ತದೆ, ಇದು ರಾಯಗಡದಿಂದ ಮಂಗಳೂರಿನವರೆಗೂ ಇರುವ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಭಾಗವಾಗಿದೆ.ಭಾರತದ ಪಶ್ಚಿಮತೀರದಲ್ಲಿ, ಮಹಾರಾಷ್ಟ್ರದ ಠಾಣೆ (ಥಾನಾ) ಕೊಲಾಬಾ ಮತ್ತು ರತ್ನಾಗಿರಿ ಜಿಲ್ಲೆಗಳನ್ನೂ ಗೋವವನ್ನೂ ಒಳಗೊಂಡ ಪ್ರದೇಶವನ್ನು ಸ್ಥೂಲವಾಗಿ ಕೊಂಕಣ ಎಂದು ಕರೆಯುವುದಿದೆ. ಪಶ್ಚಿಮಘಟ್ಟಗಳ ಪಶ್ಚಿಮಕ್ಕಿರುವ ಈ ತಗ್ಗುನೆಲವೆಲ್ಲ ಮೈದಾನವಲ್ಲ. ೩೦-೫೦ ಮೈ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಇಬೇ ಎಂಟರ್ಪ್ರೈಸ್, ಇಂಕ್ (ಹಿಂದೆ ಜಿಎಸ್ಐ ಕಾಮರ್ಸ್, ಇಂಕ್.) ಬಹುರಾಷ್ಟ್ರೀಯ ಇ-ಕಾಮರ್ಸ್ ನಿಗಮವಾಗಿದ್ದು ಇಟ್ಟಿಗೆ ಮತ್ತು ಗಾರೆ ಬ್ರಾಂಡ್ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಆನ್ಲೈನ್ ಶಾಪಿಂಗ್ ಸೈಟ್ಗಳನ್ನು ರಚಿಸುವಲ್ಲಿ, ಅಭಿವೃದ್ಧಿಪಡಿಸುವಲ್ಲಿ ಮತ್ತು ನಡೆಸುವಲ್ಲಿ ಪರಿಣತಿ ಹೊಂದಿದೆ. ಕಂಪನಿಯು ವಿವಿಧ ಮಾರ್ಕೆಟಿಂಗ್, ಗ್ರಾಹಕ ತೊಡಗಿಸಿಕೊಳ್ಳುವಿಕೆ, ಗ್ರಾಹಕ ಆರೈಕೆ, ಪಾವತಿ ಪ್ರಕ್ರಿಯೆ, ನೆರವೇರಿಕೆ, ವಂಚನೆ ಪತ್ತೆ ಮತ್ತು ತಂತ್ರಜ್ಞಾನ ಏಕೀಕರಣ ಸೇವೆಗಳನ್ನು ಸಹ ಒದಗಿಸಿತು. ಇಬೇ ಎಂಟರ್ಪ್ರೈಸ್ ೫೦೦ ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿತ್ತು ಮತ್ತು ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯಾದಲ್ಲಿ ೨೬ ಕಚೇರಿಗಳನ್ನು ನಿರ್ವಹಿಸುತ್ತಿತ್ತು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಮುಖ್ಯ ಮೆನು ತೆರೆ ವಿಕಿಪೀಡಿಯ ಹುಡುಕು Show my notifications ಬದಲಾವಣೆಗಳು ನಂತರದ ಸಂಪಾದನೆ → Krishi Thapanda ೫,೫೪೨ BYTES ADDED, ೨೭ ನಿಮಿಷಗಳ ಹಿಂದೆ "Krishi Thapanda" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು ಕ್ರಿಷಿ ತಾಪಂಡ ಅವರು ರೂಪದರ್ಶಿಯಾಗಿದ್ದಾರೆ ಹಾಗು ಭಾರತೀಯ ನಟಿಯಾಗಿ ಕನ್ನಡ ಚಲನಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಅವರು ೨೦೧೬ರಲ್ಲಿ ಅಕಿರ ಎಂಬ ಕನ್ನಡ ಚಲನಚಿತ್ರ ಮೂಲಕ ಚಿತ್ರರಂಗ ಪ್ರವೇಶಿಸಿದರು. ೨೦೧೬ರ 'ಎಸ್ಐಐಎಂಎ'ನ ಉತ್ತಮ ನಟಿ ಪ್ರಶಸ್ತಿಗಾಗಿ ಇವರು ನಾಮನಿರ್ದೇಶನಗೊಂಡಿದ್ದರು.
ದೇವಾಲಯಗಳಲ್ಲಿ ದೇವರುಗಳಿಗೆ ವಿಭಿನ್ನ ರೀತಿಯ ಸೇವೆಯನ್ನು ಮಾಡಲು ಅರ್ಪಿಸಲಾಗಿರುವ ಯುವತಿಯರನ್ನು ದೇವದಾಸಿಯರೆಂದು ಕರೆಯಲಾಗುತ್ತಿತ್ತು. ಈ ಯುವತಿಯರು ಭಗವಂತನ ದಾಸಿಯರಾದ್ದರಿಂದ ಮಂದಿರವನ್ನು ಶುದ್ಧಗೋಳಿಸುವುದು, ದೀಪ ಬೆಳಗಿಸುವುದು ಹಾಗೂ ದೇವರ ಪ್ರತಿಮೆಯ ಸಮ್ಮುಖದಲ್ಲಿ ಭಕ್ತಿಪೂರ್ವಕವಾಗಿ ಗಾಯನ ನರ್ತನ ಮೊದಲಾದ ನಿಶ್ಚಿತ ಕಾರ್ಯಗಳನ್ನು ಮಾಡುವುದು-ಇವುಗಳ ಮೂಲಕ ದೇವರ ಸೇವೆಯನ್ನು ನೆರವೇರಿಸುತ್ತಿದ್ದರು. ಈ ಪದ್ಧತಿ ತೀರ ಪ್ರಾಚೀನವಾದುದೆಂದು ತಿಳಿದು ಬರುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ದೀಪಾ ಬಸ್ತಿ (ಜನನ:೧೯೮೩) ಒಬ್ಬ ಭಾರತೀಯ ಬರಹಗಾರ್ತಿ, ಪತ್ರಕರ್ತೆ ಮತ್ತು ಸಾಹಿತ್ಯ ಅನುವಾದಕಿ. ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಸಣ್ಣ ಕಥಾ ಸಂಕಲನ "ಹಾರ್ಟ್ ಲ್ಯಾಂಪ್" (ಮೂಲ ಕನ್ನಡದಲ್ಲಿ "ಎದೆಯ ಹಣತೆ") ಅನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದಕ್ಕಾಗಿ ಇವರು ೨೦೨೫ರ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು (ಲೇಖಕಿಯೊಂದಿಗೆ ಜಂಟಿಯಾಗಿ) ಗಳಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಅನುವಾದಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಭಯ ಕೆಲವು ಬಗೆಯ ಸಾವಯವಗಳಲ್ಲಿ ಗ್ರಹಿಸಿದ ಅಪಾಯ ಅಥವಾ ಬೆದರಿಕೆಯಿಂದ ಪ್ರೇರಿತವಾದ ಒಂದು ಅನಿಸಿಕೆ, ಮತ್ತು ಇದು ಚಯಾಪಚಯ ಹಾಗೂ ಅಂಗ ಕ್ರಿಯೆಗಳ ಬದಲಾವಣೆಗೆ ಮತ್ತು ಅಂತಿಮವಾಗಿ ಗ್ರಹಿಸಿದ ಆಘಾತಕಾರಿ ಘಟನೆಗಳಿಂದ ಪಲಾಯನ, ಅಡಗುವುದು, ಅಥವಾ ಮೈ ತಣ್ಣಗಾಗುವಿಕೆಯಂತಹ ವರ್ತನೆಯಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಮಾನವರಲ್ಲಿ ಭಯವು ವರ್ತಮಾನದಲ್ಲಿ ಆಗುವ ಒಂದು ನಿರ್ದಿಷ್ಟ ಉದ್ದೀಪನಕ್ಕೆ ಪ್ರತಿಕ್ರಿಯೆಯಾಗಿ, ಅಥವಾ ಶರೀರಕ್ಕೆ ಅಥವಾ ಪ್ರಾಣಕ್ಕೆ ಗಂಡಾಂತರವೆಂದು ಗ್ರಹಿಸಲಾದ ಭವಿಷ್ಯದ ಬೆದರಿಕೆಯ ನಿರೀಕ್ಷೆಯಲ್ಲಿ ಉಂಟಾಗಬಹುದು. ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ, ಭಯವು ಅರಿವು ಮತ್ತು ಕಲಿಕೆಯ ಪ್ರಕ್ರಿಯೆಯಿಂದ ನಿಯಂತ್ರಿತಗೊಳ್ಳುತ್ತದೆ.
ರಾಷ್ಟ್ರೀಯ ಶಿಕ್ಷಣದ ನೀತಿ (NPE- National Policy on Education) ಎಂಬುದು ಭಾರತದ ಜನರಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಒಂದು ನೀತಿ. ಈ ನೀತಿಯು ಗ್ರಾಮೀಣ ಮತ್ತು ನಗರ ಭಾರತದ ಕಾಲೇಜು ಮತ್ತು ಪ್ರಾಥಮಿಕ ಶಿಕ್ಷಣವನ್ನು ಒಳಗೊಂಡಿದೆ. 1968 ರಲ್ಲಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಂದ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣದ ನೀತಿ (NPE ಘೋಷಿಸಲ್ಪಟ್ಟಿತು.
ಅಂಜನೇರಿ ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಸಮೀಪದ ಒಂದು ಪರ್ವತ ಸಮೂಹ.ಇದರ ಬಳಿ ಹಿಂದೂಗಳಿಗೆ ಪವಿತ್ರ ಕ್ಷೇತ್ರವಾದ ತ್ರ್ಯಂಬಕೇಶ್ವರವಿದೆ.ಇದು ಹನುಮಂತನ ಜನ್ಮಸ್ಥಳವೆಂದು ಆಸ್ತಿಕರು ನಂಬುತ್ತಾರೆ.ಈ ಊರಿನ ಹೆಸರನ್ನು ಹನುಮಂತನ ತಾಯಿ ಅಂಜನಿಯವರ ಹೆಸರಿನ ಮೇಲೆ ಇಡಲಾಗಿದೆ. ಈ ಊರು ಸಮುದ್ರ ಮಟ್ಟದಿಂದ ೪೨೬೪ ಅಡಿ ಮೇಲಿದೆ. ಅಂಜನೇರಿಯು ನಾಸಿಕ್ನಿಂದ ತ್ರಯಂಬಕ್ ರಸ್ತೆಯಿಂದ ೨೦ಕಿಮೀ ದೂರದಲ್ಲಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ಆಂಗ್ಲ: ISRO – Indian Space Research Organisation) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ.
ಮೆಕ್ಕಾ [ಅಧಿಕೃತವಾಗಿ ಮಕ್ಕಾ ಅಲ್-ಮುಕರ್ರಮ (ಅರೇಬಿಕ್: مكة المكرمة) ಸಾಮಾನ್ಯವಾಗಿ ಮಕ್ಕಾ ಎಂದು ಕರೆಯಲಾಗುತ್ತದೆ] ಇಸ್ಲಾಮ್ ಧರ್ಮದ ಪವಿತ್ರ ಸ್ಥಳ ಮತ್ತು ಸೌದಿ ಅರೇಬಿಯಾದ ಮಕ್ಕಾ ಪ್ರಾಂತ್ಯದ ರಾಜಧಾನಿ. ಇದು ಕೆಂಪು ಸಮುದ್ರದ ತೀರದಲ್ಲಿರುವ ಜೆದ್ದಾದಿಂದ 70 ಕಿ.ಮೀ. (43 ಮೈಲು) ದೂರದಲ್ಲಿ, ಸಮುದ್ರ ಮಟ್ಟದಿಂದ 277 ಮೀ (909 ಅಡಿ) ಎತ್ತರದ ಕಣಿವೆ ಪ್ರದೇಶದಲ್ಲಿದೆ.
ಲಿಂಗರಾಜ ದೇವಾಲಯ ಶಿವನಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ ಮತ್ತು ಭಾರತದ ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಭುವನೇಶ್ವರ ನಗರದ ಪ್ರಮುಖ ಹೆಗ್ಗುರುತಾಗಿದೆ ಮತ್ತು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಇಲ್ಲಿ ಶಿವನ ಪತ್ನಿಯನ್ನು ಅನ್ನಪೂರ್ಣ ಅಥವಾ ಗಿರಿಜಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪಾರ್ವತಿ ಎಂದು ಕರೆಯಲಾಗುತ್ತದೆ.
ಭಾರತದ ಗಡಿಗಳು ಮತ್ತು ನರೆ ರಾಜ್ಯಗಳು
ಭಾರತವು 1947ರಲ್ಲಿ ಸ್ವತಂತ್ರ ರಾಷ್ಟ್ರವಾದ ನಂತರ ಅದರ ನೆರೆಹೊರೆಯ ಸಾರ್ವಭೌಮ ರಾಷ್ಟ್ರಗಳಾದ ಅಫ್ಘಾನಿಸ್ತಾನ್, ಬಾಂಗ್ಲಾದೇಶ, ಭೂತಾನ್, ಚೀನಾ, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನಗಳೊಂದಿಗೆ ಅಂತರರಾಷ್ಟ್ರೀಯ ಭೂ ಗಡಿಗಳನ್ನು ಹೊಂದಿದೆ. ಕಾಶ್ಮೀರ ವಿವಾದದ ಪರಿಣಾಮ ಪಾಕಿಸ್ತಾನದೊಂದಿಗೆ ಗಡಿ ನಿಯಂತ್ರಣ ನಿಯಂತ್ರಣ (ಎಲ್ಒಸಿ) ರೇಖೆಯನ್ನು ಹೊಂದಿದೆ. ಈ ಎಲ್ಲಾ ಗಡಿ ಮತ್ತು ನಿಯಂತ್ರಣ (ಎಲ್ಒಸಿ) ರೇಖೆಯ ರಕ್ಷಣೆಯ ಹೊಣೆಯನ್ನೂ ಹೊಂದಿದೆ.
"ಶ್ರೀ ರಾಮಾಯಣ ದರ್ಶನಂ" ವು ಮಹಾಕಾವ್ಯವಾದ ರಾಮಾಯಣವನ್ನು ಆಧರಿಸಿ ಕುವೆಂಪು ರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ. ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ.
ಹರಪ್ಪ (ಉರ್ದು/ಪಂಜಾಬಿ: ہڑپہ, pronounced [ɦəɽəpːaː]) ಸಾಹಿವಾಲ್ ನ ಪಶ್ಚಿಮಕ್ಕೆ 20 km (12 mi)ದೂರದಲ್ಲಿರುವ, ಪಾಕಿಸ್ತಾನದ ಈಶಾನ್ಯದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಒಂದು ಮಹತ್ವದ ಪ್ರಾಚ್ಯವಸ್ತು ಸಂಶೋಧನಾ ಕುತೂಹಲಗಳ ಆಗರವಾದಂತಹ ಸ್ಥಳ. ಹಿಂದೆ ರಾವಿ ನದಿ ಹರಿಯುತ್ತಿದ್ದ ಸ್ಥಳದಲ್ಲಿ ಈಗ ಇರುವಂತಹ ಒಂದು ಆಧುನಿಕ ಹಳ್ಳಿಯ ಹೆಸರಿನಿಂದ ಇದಕ್ಕೂ ಈ ಹೆಸರು ಬಂದಿದ್ದು, ಈ ಹಳ್ಳಿಯು ಸಂಶೋಧನಾ ಸ್ಥಳದ ಆಗ್ನೇಯಕ್ಕೆ ಸುಮಾರು 5 km (3 mi) ದೂರದಲ್ಲಿದೆ. ಈ ಸ್ಥಳದಲ್ಲಿ ಕಂಚಿನ ಯುಗದ ಕೋಟೆಕೊತ್ತಲಗಳುಳ್ಳ ನಗರದ ಅವಶೇಷಗಳಿದ್ದು,ಇದು ಸಿಮೆಟ್ರಿ H ವಿಧಾನದ ಒಂದು ಭಾಗವಾಗಿದೆ ಹಾಗೂ ಸಿಂಧು ಕಣಿವೆ ನಾಗರಿಕತೆಯ ಅವಶೇಷಗಳ ಆಗರವಾಗಿದೆ; ಸಿಂಧ್ ಮತ್ತು ಪಂಜಾಬ್ ಗಳಲ್ಲಿ ಇದು ಕೇಂದ್ರಿತವಾಗಿದೆ.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ರಿಲಯನ್ಸ್ ಜಿಯೋ ಇನ್ಫೋಕಾಂ ಲಿಮಿಟೆಡ್ ಅಥವಾ ಜಿಯೋ ಭಾರತದ LTE ಮೊಬೈಲ್ ನೆಟ್ವರ್ಕ್ ಆಪರೇಟರ್ ಆಗಿದೆ.ಇದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ,ಇದರ ಪ್ರಧಾನ ಕಚೇರಿ ಮುಂಬೈನಲ್ಲಿ ಇದೆ. ಇದು ಭಾರತದ 22 ಟೆಲಿಕಾಮ್ ವಲಯಗಳಲ್ಲೂ 100℅ 4G LTE ನೆಟ್ವರ್ಕ್ ಸೇವೆ (2G / 3G ಆಧಾರಿತ ಸೇವೆಗಳು ಇಲ್ಲದೆ) ಸೇವೆ ಒದಗಿಸುತ್ತಿದೆ.ಜಿಯೋ ಬೀಟಾ ಆವೃತ್ತಿ ಡಿಸೆಂಬರ್ 27, 2015 ರಂದು ಮೊದಲು Jio ನ ಸಹಭಾಗಿಗಳಿಗೆ ಮತ್ತು ನೌಕರರಿಗೆ ಸೇವೆಗಳನ್ನು ಪ್ರಾರಂಭಿಸಲಾಯಿತು. ವಾಣಿಜ್ಯ ಸೇವೆಗಳನ್ನು 5, ಸೆಪ್ಟೆಂಬರ್, 2016 ರಂದು ಪ್ರಾರಂಭಿಸಲಾಯಿತು.
ಚಾಕ್ಯಾರ್ ಕೂತು (ಉಚ್ಚಾರಣೆ [tʃaːkjaːr kuːt̪ːɨ̆] ) ಭಾರತದ ಕೇರಳದ ಒಂದು ಪ್ರದರ್ಶನ ಕಲೆಯಾಗಿದೆ. ಇದು ಪ್ರಾಥಮಿಕವಾಗಿ ಹೆಚ್ಚು ಸಂಸ್ಕರಿಸಿದ ಸ್ವಗತದ ಒಂದು ವಿಧವಾಗಿದೆ, ಅಲ್ಲಿ ಪ್ರದರ್ಶಕನು ಹಿಂದೂ ಮಹಾಕಾವ್ಯಗಳಿಂದ ( ರಾಮಾಯಣ ಮತ್ತು ಮಹಾಭಾರತದಂತಹ ) ಪ್ರಸಂಗಗಳನ್ನು ಮತ್ತು ಪುರಾಣಗಳಿಂದ ಕಥೆಗಳನ್ನು ನಿರೂಪಿಸುತ್ತಾನೆ. ಕೆಲವೊಮ್ಮೆ, ಆದಾಗ್ಯೂ, ಇದು ಆಧುನಿಕ ಸ್ಟ್ಯಾಂಡ್-ಅಪ್ ಕಾಮಿಡಿ ಆಕ್ಟ್ಗೆ ಸಾಂಪ್ರದಾಯಿಕ ಸಮಾನವಾಗಿದೆ, ಪ್ರಸ್ತುತ ಸಾಮಾಜಿಕ-ರಾಜಕೀಯ ಘಟನೆಗಳ ವ್ಯಾಖ್ಯಾನವನ್ನು ಸಂಯೋಜಿಸುತ್ತದೆ (ಮತ್ತು ಪ್ರೇಕ್ಷಕರ ಸದಸ್ಯರನ್ನು ಉದ್ದೇಶಿಸಿ ವೈಯಕ್ತಿಕ ಕಾಮೆಂಟ್ಗಳು).
ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಭಾರತದ ಉತ್ತರಾಖಂಡ ರಾಜ್ಯದಲ್ಲಿರುವ ಒಂದು ರಾಷ್ಟ್ರೀಯ ಉದ್ಯಾನ. ಪಶ್ಚಿಮ ಹಿಮಾಲಯದ ಉನ್ನತ ಪ್ರದೇಶದಲ್ಲಿರುವ ಈ ಉದ್ಯಾನವು ಅದ್ಭುತ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು ನೂರಾರು ಬಗೆಯ ಹೂವುಗಳ ಬೃಹತ್ ನೈಸರ್ಗಿಕ ತೋಟವಾಗಿದೆ. ಜೀವ ವೈವಿಧ್ಯದ ನೆಲೆಯಾಗಿರುವ ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನವು ಕಪ್ಪು ಕರಡಿ, ಹಿಮ ಚಿರತೆ, ಕಂದು ಕರಡಿ ಮತ್ತು ನೀಲಿ ಕುರಿಗಳಂತಹ ವನ್ಯ ಜೀವಿಗಳಿಗೆ ನೆಲೆಯಾಗಿದೆ.
ಸೂರಜ್ಕುಂಡ್ 10 ನೇ ಶತಮಾನದ ಪ್ರಾಚೀನ ಜಲಾಶಯವಾಗಿದ್ದು, ಹರಿಯಾಣ ರಾಜ್ಯದ ಫರಿದಾಬಾದ್ ನಗರದ ಅರಾವಳಿ ಶ್ರೇಣಿಯ ದಕ್ಷಿಣ ದೆಹಲಿ ಬೆಟ್ಟ ಸಾಲಿನಲ್ಲಿದೆ. ಸೂರಜ್ಕುಂಡ್ (ಅಕ್ಷರಶಃ ಇದರ ಅರ್ಥ 'ಸೂರ್ಯನ ಸರೋವರ') ಎಂಬುದು ಕೃತಕ ಕುಂಡವಾಗಿದ್ದು ಇದನ್ನು ಅರಾವಳಿ ಬೆಟ್ಟಗಳ ಹಿನ್ನೆಲೆಯಲ್ಲಿ ಅರ್ಧವೃತ್ತಾಕಾರದ ರೂಪದಲ್ಲಿ ನಿರ್ಮಿಸಲಾದ ರಂಗಸ್ಥಳ ಆಕಾರದ ಒಡ್ಡಿನೊಂದಿಗೆ ಕಟ್ಟಲಾಗಿದೆ. ಇದನ್ನು 10 ನೇ ಶತಮಾನದಲ್ಲಿ ತೋಮರ ರಾಜವಂಶದ ರಾಜ ಸೂರಜ್ಪಾಲ್ ನಿರ್ಮಿಸಿದನೆಂದು ಹೇಳಲಾಗುತ್ತದೆ.
ಅಂಚೀ ಮಿನ್ (ಸರಳೀಕೃತ ಚೀನೀ: 闵安琪; ಚೀನೀ: 閔安琪; ಪಿನ್ಯಿನ್: Mǐn Ānqí; ಜನನ: ಜನವರಿ ೧೪, ೧೯೫೭) ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಶಾಂಘೈನಲ್ಲಿ ವಾಸಿಸುತ್ತಿರುವ ಚೀನೀ-ಅಮೇರಿಕನ್ ಲೇಖಕಿ. ಮಿನ್ ಅವರು ಎರಡು ಆತ್ಮಕಥೆಗಳನ್ನು ಪ್ರಕಟಿಸಿದ್ದಾರೆ: *ರೆಡ್ ಅಜೇಲಿಯಾ* ಮತ್ತು *ದಿ ಕುಕ್ಡ್ ಸೀಡ್: ಎ ಮೆಮೊಯಿರ್*, ಮತ್ತು ಆರು ಐತಿಹಾಸಿಕ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ಸಾಹಿತ್ಯದಲ್ಲಿ ಶಕ್ತಿಶಾಲಿ ಮಹಿಳಾ ಪಾತ್ರಗಳಿಗೆ ವಿಶೇಷ ಒತ್ತು ನೀಡಲಾಗಿದೆ.
ಶಿಕ್ಷಣ ಸಚಿವಾಲಯ, (1985 - 2020 ರವರೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಂದು ಕರೆಯಲಾಗುತ್ತಿತ್ತು) ಭಾರತದಲ್ಲಿ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಾರಣವಾಗಿದೆ. ಸಚಿವಾಲಯವನ್ನು ಪ್ರಸ್ತುತ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ನಿರ್ವಹಿಸುತ್ತಿದ್ದಾರೆ. ಈ ಸಚಿವಾಲಯವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ: ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ, ವಯಸ್ಕರ ಶಿಕ್ಷಣ ಮತ್ತು ಸಾಕ್ಷರತೆ ಮತ್ತು ವಿಶ್ವವಿದ್ಯಾಲಯದೊಂದಿಗೆ ವ್ಯವಹರಿಸುವ ಉನ್ನತ ಶಿಕ್ಷಣ ಇಲಾಖೆಯನ್ನು ನಿರ್ವಹಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ.
ಯುಮ್ಥಾಂಗ್ ಕಣಿವೆ ಅಥವಾ ಸಿಕ್ಕಿಂ ಪುಷ್ಪ ಕಣಿವೆ ಅಭಯಾರಣ್ಯವು ನದಿ, ಬಿಸಿನೀರಿನ ಬುಗ್ಗೆಗಳು, ಚಮರೀಮೃಗಗಳು ಮತ್ತು ಸೌಮ್ಯ ಉಬ್ಬುತಗ್ಗುಗಳ ಹುಲ್ಲುಗಾವಲುಗಳ ಮೇಲೆ ಮೇವು ಇರುವ, ಸುತ್ತಲೂ ಹಿಮಾಲಯ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿರುವ ಒಂದು ಪ್ರಕೃತಿ ಅಭಯಾರಣ್ಯವಾಗಿದೆ. ಇದು ಭಾರತದ ಸಿಕ್ಕಿಂ ರಾಜ್ಯದ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಜನಪ್ರಿಯವಾಗಿ 'ಹೂಗಳ ಕಣಿವೆ' ಎಂದು ಕರೆಯಲ್ಪಡುತ್ತದೆ ಮತ್ತು ಇದು ಶಿಂಗ್ಬಾ ರೋಡೋಡೆಂಡ್ರಾನ್ ಅಭಯಾರಣ್ಯಕ್ಕೆ ನೆಲೆಯಾಗಿದೆ.
ರಾಮಚಾರಿ ಒಂದು ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿಯಾಗಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. 31 ಜನವರಿ 2022 ರಂದು ಪ್ರಥಮ ಸಂಚಿಕೆ ಮತ್ತು ಕೊನೆಯ ಸಂಚಿಕೆ 28 ಡಿಸೆಂಬರ್ 2025 ರಂದು ಪ್ರಸಾರವಾಯಿತು . ಇದರಲ್ಲಿ ರಿತ್ವಿಕ್ ಕ್ರುಪಕರ್, ಮೌನಾ ಗುಡ್ಡೆಮನೆ, ಮಿಥುನ್ ತೇಜಸ್ವಿ, ಶಂಕರ್ ಅಶ್ವತ್, ಸಿರಿಜಾ ಮತ್ತು ಅಂಜಲಿ ಸುಧಾಕರ್ ನಟಿಸುತ್ತಾ ಇದ್ದಾರೆ .
"ಬ್ರಿಟಿಷ್ ಆಡಳಿತದ ಇತಿಹಾಸ" ವು ಭಾರತದ ಉಪಖಂಡದಲ್ಲಿ ೧೮೫೮ಮತ್ತು ೧೯೪೭ರ ನಡುವೆ ಬ್ರಿಟಿಷ್ ಆಡಳಿತದ ಅವಧಿಯನ್ನು ಉಲ್ಲೇಖಿಸುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯ ಕಂಪೆನಿಯ ಆಡಳಿತವನ್ನು ರಾಣಿ ವಿಕ್ಟೋರಿಯ ( ೧೮೭೬ರಲ್ಲಿ ಅವರನ್ನು ಭಾರತದ ಚಕ್ರವರ್ತಿನಿ ಎಂದು ಘೋಷಿಸಲಾಯಿತು) ಆಳ್ವಿಕೆಯ ರಾಜಪ್ರಭುತ್ವಕ್ಕೆ ವರ್ಗಾಯಿಸಿದಾಗ, ೧೮೫೮ರಲ್ಲಿ ಆಡಳಿತದ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ೧೯೪೭ರವರೆಗೆ ಈ ಆಡಳಿತವು ಉಳಿದುಕೊಂಡಿತು.