The most-visited English Wikipedia articles, updated daily. Learn more...
ವೃತ್ತಿಪರವಾಗಿ ಕಲಾ ಮಾಸ್ಟರ್ ಎಂದು ಕರೆಯಲ್ಪಡುವ ಕಲಾ ಭಾರತೀಯ ನೃತ್ಯ ಸಂಯೋಜಕಿ. ಅವರು ಭಾರತೀಯ ರಿಯಾಲಿಟಿ ಡ್ಯಾನ್ಸ್ ಟ್ಯಾಲೆಂಟ್ ಶೋ ಮಾನದ ಮಯಿಲಾಡಾದ ನಿರ್ದೇಶಕರಾಗಿದ್ದಾರೆ - ಅಲ್ಲಿ ಅವರು ಮೂವರು ತೀರ್ಪುಗಾರರಲ್ಲಿ ಒಬ್ಬರು. ಮಲಯಾಳಂ ಚಲನಚಿತ್ರ ಕೊಚ್ಚು ಕೊಚ್ಚು ಸಂತೋಷಂಗಲ್‌ನಲ್ಲಿನ ಜಾನಪದ ನೃತ್ಯದ ಅನುಕ್ರಮಕ್ಕಾಗಿ ೨೦೦೦ ರಲ್ಲಿ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇವರಿಗೆ ನೀಡಲಾಯಿತು.
ತೀರ್ಪು ಎಂದರೆ ಸಿವಿಲ್ ವ್ಯಾಜ್ಯ ಅಥವಾ ಕ್ರಿಮಿನಲ್ ಮೊಕದ್ದಮೆಯೊಂದರ ವಿಚಾರಣೆಯ ಅಂತ್ಯದಲ್ಲಿ, ನ್ಯಾಯಾಲಯ ತನ್ನ ಮುಂದಿನ ವಿವಾದವನ್ನು ತೀರ್ಮಾನಿಸಿ ನೀಡುವ ಆದೇಶ (ವರ್ಡಿಕ್ಟ್). ಸಿವಿಲ್ ವ್ಯಾಜ್ಯದ ತೀರ್ಪು ಪಕ್ಷಗಾರರ ಹಕ್ಕು ಬಾಧ್ಯತೆಗಳನ್ನು ಪೂರ್ಣವಾಗಿ ನಿರ್ಣಯಿಸುತ್ತದೆ; ಮತ್ತು ತೀರ್ಪನ್ನಿತ್ತ ನ್ಯಾಯಾಲಯದ ಮಟ್ಟಿಗೆ ಅದು ಅಂತಿಮವಾಗಿರುತ್ತದೆ. ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಕೊಡುವ ವೇಳೆ ನ್ಯಾಯಾದೀಶ ಅದಕ್ಕೆ ತನ್ನ ಸಹಿ ಹಾಗೂ ತಾರೀಖನ್ನು ಹಾಕುವ ಅಗತ್ಯವಿದೆ.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ದೇಶದ ಸ್ಥಳೀಯ ಸಂಸ್ಥೆ ಸೇರಿದಂತೆ ಲೋಕಸಭೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ವಿಸ್ತೀರ್ಣಾನುಕ್ರಮ ಭಾರತದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ
ಭಾರತ ೨೮ ರಾಜ್ಯಗಳು ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಭಾರತದ ೨೦೧೧ರ ಜನಗಣತಿಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣವನ್ನಾಧಾರಿಸಿ ರಚಿಸಲಾಗಿದೆ.
ಹರಿಣಿ ನಿರೇಕಾ ಅಮರಸುರಾಯ (ಜನನ 6 ಮಾರ್ಚ್ 1970) ಶ್ರೀಲಂಕಾದ ಸಮಾಜಶಾಸ್ತ್ರಜ್ಞೆ, ಶಿಕ್ಷಣ ತಜ್ಞೆ, ಸಾಮಾಜಿಕ ಕಾರ್ಯಕರ್ತೆ ಮತ್ತು ರಾಜಕಾರಣಿ, ಅವರು 2024 ರಿಂದ ಶ್ರೀಲಂಕಾದ 16 ನೇ ಪ್ರಧಾನ ಮಂತ್ರಿಯಾಗಿದ್ದಾರೆ. ಶ್ರೀಲಂಕಾ ಮುಕ್ತ ವಿಶ್ವವಿದ್ಯಾಲಯದಲ್ಲಿ ಹತ್ತು ವರ್ಷಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಗ, ಅವರು ವಿಶ್ವವಿದ್ಯಾಲಯ ಶಿಕ್ಷಕರ ಸಂಘದ ಒಕ್ಕೂಟದೊಂದಿಗೆ ಶಿಕ್ಷಕರ ಸಂಘ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. 2020 ರಲ್ಲಿ, ರಾಷ್ಟ್ರೀಯ ಪೀಪಲ್ಸ್ ಪಾರ್ಟಿ (NPP) ಅವರನ್ನು ಸಂಸತ್ತಿನ ರಾಷ್ಟ್ರೀಯ ಪಟ್ಟಿ ಸದಸ್ಯೆಯಾಗಿ ಆಯ್ಕೆ ಮಾಡಿತು.
ಕಾವ್ಯ,ಲಲಿತ ಪ್ರಬಂದ ಸಣ್ಣಕಥೆಗಳಂಥ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡು ಗಮನ ಸೆಳೆದಿರುವ ಡಾ.ವಿನಯ ಪ್ರಸ್ತುತ ಕನ್ನಡದ ಸ್ಥಿತಿಗಳನ್ನು ಸೂಕ್ಶ್ಮ ಗ್ರಹಿಕೆಯಲ್ಲಿ ಬರವಣಿಗೆಗೆ ಇಳಿದಿದ್ದಾರೆ.ಉತ್ತರ ಕನ್ನಡ ಮಾಸ್ಕೇರಿಯಲ್ಲಿ ಜನಿಸಿದ ಇವರು ಹಾವೇರಿ ಜಿಲ್ಲೆಯ ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಸವಣೂರಿನಲ್ಲಿ ವ್ರತ್ತಿಪರ ಬದುಕನ್ನು ಆರಂಭಿಸಿ ಪ್ರಸ್ತುತ ಮಾಹಾವಿದ್ಯಾಲಯ ಆಳ್ನಾವರದಲ್ಲಿ ಕನ್ನಡ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ.ಪದವಿ ಹಾಗು ಕನ್ನಡದಲ್ಲಿ ಮಹಿಳಾ ಸಾಹಿತ್ಯದ ವಿಕಾಸ ಘಟ್ಟಗಳು ಸಂಷೊದನಾ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ನೂರು ಗೋರಿಯ ದೀಪ ಇವರ ಕ್ರತಿಗಳು.ಪು.ತಿ.ನ ಕಾವ್ಯ ಪ್ರಶಸ್ತ್ತಿ ಸಾರಂಗ ಮಟ ಫ್ರಾಶ್ಃಆಶ್ಟೀ ದೊರಕಿವೆ.ಊರ ಒಳಗಣ ಬಯಲು ಕ್ರತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ೨೦೦೮ನೇ ಸಾಲಿನ ಸಣ್ಣ ಕಥೆ ಪ್ರಕಾರದ ಪುಸ್ತಕ ಬಹುಮಾನವನ್ನು ಪಡೆದಿದೆ.ಇವರು ಸೂಕ್ಶ್ಮ ಸಂವೇದನೆಯ ಕವಯತ್ರಿ ಮಾತ್ರವಲ್ಲ,ಒಳ್ಳೆಯ ಕತೆಗಾರ್ತಿ ಹಾಗು ಒಳ್ಳೆಯ ಚಿಂತನಯುಳ್ಳವರು.ಹೆಣ್ಣಿನಒಳತೊಟ ಸಮಸ್ಯೆ ಸ್ಪಂದನಗಳನ್ನು ಸಶಕ್ತವಾಗಿ ದಾಖಲಿಸುತ್ತವೆ.
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು
ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆಗಳು (ಐಐಎಮ್‌ಗಳು) ಸಂಶೋಧನೆಯನ್ನು ನಡೆಸುವ ಮತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಲಯಗಳಿಗೆ ಪರಾಮರ್ಶ ಸೇವೆಗಳನ್ನೂ ಒದಗಿಸುವ ಭಾರತದ ಪ್ರಧಾನ ನಿರ್ವಹಣಾ ಸಂಸ್ಥೆಗಳು. ಅವು ಭಾರತದ ವಿದ್ಯಾರ್ಥಿ ಸಮುದಾಯದಲ್ಲಿ ಲಭ್ಯವಾದ ಅತ್ಯಂತ ಚುರುಕಾದ ಮೇಧಾವಿ ಪ್ರತಿಭೆಗಳನ್ನು ಗುರುತಿಸಿ ವಿಶ್ವದಲ್ಲಿ ಲಭ್ಯವಿರುವ ಅತ್ಯುತ್ತಮ ನಿರ್ವಹಣಾ ತಂತ್ರಗಳಲ್ಲಿ ತರಬೇತಿ ನೀಡುವ, ಮತ್ತು ಅಂತಿಮವಾಗಿ ಭಾರತೀಯ ಅರ್ಥವ್ಯವಸ್ಥೆಯ ವಿವಿಧ ವಿಭಾಗಗಳನ್ನು ನಿರ್ವಹಿಸಲು ಹಾಗೂ ಮುನ್ನಡೆಸಲು ಸಮಾಜಶ್ರೇಷ್ಠ ನಿರ್ವಾಹಕರ ಒಂದು ನಿಧಿಯನ್ನು ಸೃಷ್ಟಿಸುವ ಉದ್ದೇಶದಿಂದ ಭಾರತ ಸರ್ಕಾರದಿಂದ ರಚಿಸಲ್ಪಟ್ಟವು. ಐಐಎಮ್‌ಗಳು ರಾಷ್ಟ್ರದ ನಿರ್ವಾಹಕ ಬಲದ ಬೆಳವಣಿಗೆಯಲ್ಲಿ ನಾಯಕತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಹೊರಹೊಮ್ಮುತ್ತಿರುವ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತವೆ.
ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿಯಲ್ಲಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯವು ಪಂಜಾಬಿನ ಆರ್ಯ ಪ್ರತಿನಿಧಿ ಸಭೆಯವರು ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯನ್ನನುಸರಿಸಿ 1902ರಲ್ಲಿ ಆರಂಭಿಸಿದ ಒಂದು ರಾಷ್ಟ್ರೀಯ ವಿದ್ಯಾಸಂಸ್ಥೆ. ಇದನ್ನು ಆರ್ಯ ಸಮಾಜದ ಸಂನ್ಯಾಸಿ, ದಯಾನಂದ ಸರಸ್ವತಿಗಳ ಅನುಯಾಯಿಯಾದ ಸ್ವಾಮಿ ಶ್ರದ್ಧಾನಂದರು, ಪ್ರಾಚೀನ ಭಾರತದ ಗುರುಕುಲ ಶಿಕ್ಷಣ ಪದ್ಧತಿಯನ್ನು ಪುನಶ್ಚೇತನಗೊಳಿಸುವ ಏಕೈಕ ಉದ್ದೇಶದಿಂದ ಆರಂಭಿಸಿದರು. ಮೊದಲು ಒಂದು ಪ್ರಾಥಮಿಕ ಶಾಲೆಯಾಗಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ, ಈಗ ಪೂರ್ಣ ಪ್ರಮಾಣದ ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿ (ಡೀಮ್ಡ್ ಯೂನಿವರ್ಸಿಟಿ) ರೂಪುಗೊಂಡಿದೆ.
ಗಾಳಿತುಂಬಿದೆದೆ ಎಂದರೆ ಎದೆಗೂಡಿನ ಎರಡು ಪಕ್ಕಗಳಲ್ಲೂ ಇರುವ ಅಳ್ಳೆಪೊರೆಯ (ಪ್ಲೂರಲ್) ಪೊಳ್ಳಿನಲ್ಲಿ ಗಾಳಿಯೋ ಅನಿಲವೋ ತುಂಬಿರುವಿಕೆ (ನ್ಯೂಮೋತೋರಾಕ್ಸ್). ರೋಗದಿಂದ ಇಲ್ಲವೇ ಆಕಸ್ಮಿಕಗಳಿಂದಾದ ಕಾಯಿಲೆಯನ್ನು ಸಹಜವಾಗಿ ಆದದ್ದೆಂದೂ, ಫುಪ್ಪುಸಗಳ ರೋಗದ ಚಿಕಿತ್ಸೆಗಾಗಿ ವೈದ್ಯನೇ ಒಳಕ್ಕೆ ಗಾಳಿಯನ್ನು ಚುಚ್ಚಿ ಹೊಗಿಸಿ ಆದುದನ್ನು ಕೃತಕವಾದದ್ದೆಂದೂ ಹೇಳುತ್ತಾರೆ. ಸಹಜವಾಗಿ ಗಾಳಿತುಂಬಿದೆದೆ ಆದಾಗ ಅಳ್ಳೆಪೊರೆಯ ಪೊಳ್ಳಿನೊಳಕ್ಕೆ ಸಾಧಾರಣವಾಗಿ ಫುಪ್ಪುಸದಿಂದ ವಾಯು ನುಗ್ಗುವುದು.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಗಿಡಮರಗಳಿಂದ ಕೂಡಿ ಒಂದು ಯಾಜಮಾನ್ಯಕ್ಕೆ ಅಥವಾ ಆಡಳಿತಕ್ಕೆ ಸೇರಿರುವ ಅಥವಾ ವನಖಂಡಗಳಿಂದ ಕೂಡಿರುವ ಪ್ರದೇಶ ಅರಣ್ಯ (ಫಾರೆಸ್ಟ್). ಅರಣ್ಯಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ, ಬೆಳೆಸಿ ಅವುಗಳಿಂದ ಪರಮಾವಧಿ ಉಪಯೋಗ ಹೊಂದುವ ವಿಧಾನ ಅರಣ್ಯಶಾಸ್ತ್ರ (ಫಾರೆಸ್ಟ್ರಿ). ಸಂಯುಕ್ತರಾಷ್ಟ್ರಗಳ (ಯು.ಎನ್.) ಆಹಾರ ಮತ್ತು ಕೃಷಿ ವಿಭಾಗ (ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೇಷನ್, ಎಫ್.ಎ.ಓ.) ನೀಡಿರುವ ವ್ಯಾಖ್ಯೆಯ ಪ್ರಕಾರ ಸಸ್ಯಸಮುದಾಯದಿಂದ ವ್ಯಾಪ್ತವಾಗಿರುವ, ಎಲ್ಲ ಗಾತ್ರದ ಗಿಡಮರಗಳು ಪ್ರಧಾನವಾಗಿರುವ, ಕಡಿಯಲಿ ಬಿಡಲಿ ಮರಮುಟ್ಟು, ಸೌದೆ ಒದಗಿಸಲು ಸಮರ್ಥವಾಗಿರುವ ಅಥವಾ ಸ್ಥಳೀಯ ಹವೆಯ ಮೇಲೆ ಅಥವಾ ಜಲಸಂಪತ್ತಿನ ಮೇಲೆ ಪ್ರಭಾವ ಬೀರಲು ಶಕ್ತವಾಗಿರುವ, ಎಲ್ಲ ನೆಲೆಗಳಿಗೂ ಅರಣ್ಯ ಎಂಬ ಹೆಸರಿದೆ.
ಮಾರ್ಜಕ ಎಂಬುದು ಲ್ಯಾಟಿನ್ ಪದದಿಂದ ನಿಷ್ಪತ್ತಿಯಾಗಿದೆ.ಮೇಲ್ಮ್ಯ್ ಪಟುತ್ವ ಉಳ್ಳದ್ದು ಎಂಬುದು ಅದರ ಅರ್ಥ.ಸಂಶ್ಳೇಷಿತ ಮಾರ್ಜಕಗಳನ್ನು ಸರಲವಾಗಿ ಮಾಡುವುದ ಎನ್ನುವುದು ವಾಡೀಕೆ.ಮಾರ್ಜಕಗಳ್ಳನ್ನು ಸಾಬೂನಲ್ಲದ ಸಾಬೂನು ಎಂದು ಕರೆಯುತ್ತಾರೆ.ಮಾರ್ಜಕಗಳು ಗಡಸು ನೀರಿನಲ್ಲಿರುವ ಮೆಗ್ನೆಸಿಯಂ ಆಯಾನುಗಳು ಮತ್ತು ಕ್ಯಾಲ್ಸಿಯಂ ಆಯಾನುಗಳೊಂದಿಗೆ ವಿಲೀನಗೊಳ್ಳದಿರುವುದರಿಂದ ಚರಟ ಉಂಟು ಮಾಡುವುದಿಲ್ಲ.ಆದ್ದರಿಂದ ಮಾರ್ಜಕಗಳು ಗಡಸು ನೀರಿನ್ನಲ್ಲಿಯು ಸಹ ಸಾಬೂನಿಗಿಂತ ಚೆನ್ನಾಗಿ ಸ್ವಛ್ಹಗೊಳಿಸುತ್ತದೆ.ಮಾರ್ಜಕ ಎಂಬುದು ಉದ್ದ ಸರಪಣಿ ಬೆಂಜಿನ್ ಸಲ್ಫೊನಿಕ್ ಆಮ್ಲಗಲ ಸೋಡಿಯಂ ಲವಣ ಅಥವಾಾ ಉದ್ದ ಸರಪಣೀಯ ಆಲ್ಕ್ಯ್ ಲ್ ಹೈಡ್ರೋಜನ್ ಸಲ್ಫೆಟ್ ಸೋಡಿಯಂ ಲವಣ. ಮಾರ್ಜಕದ ಅಣುವಿನಲ್ಲಿ ಆಯಾನೀಕರವಲ್ಲದ ಒಂದು ದೊಡ್ಡ ಹೈಡ್ರೋಕಾರ್ಬನ್ ಗುಂಪು ಮತ್ತು ಆಯಾನಿಕರವಾದ ಸಲ್ಫೋನೇಟ್ ಗುಂಪು-(SO3 Na) ಅಥವಾ ಸಲ್ಫೆಟ್ ಗುಂಪು-(SO4 Na) ಇರುತ್ತದೆ.ಸೋಡಿಯಂ ಡುಡೇಸ್ಯಿಲ್ ಬೆಂಜಿನ್ ಸಲ್ಫೊನೇಟ್ ಮತ್ತು ಸೊಡಿಯಂ ಡುಡೆಸೆಯ್ಲ್ ಸಲ್ಫೇಟ್ ಎಂಬುವು ಮಾರ್ಜಕಗಳಿಗೆ ಉದಾಹರಣೆಗಳು. ಮಾರ್ಜಕಗಳ ಉಪಯೋಗಗಳು .ಮಾರ್ಜಕಗಳು ಗಡಸು ನೀರಿನಲ್ಲಿ ಚೆನ್ನಾಗಿ ತೊಳೆಯುತ್ತದೆ.ಗಡಸು ನೀರಿನ್ನಲ್ಲಿ ತೊಳೆಯುವ ಕೆಲಸಕ್ಕೆ ಸಾಬೂನು ಅಷ್ತು ಯುಕ್ತವಲ್ಲ.
ಯಕೃತ್ತು ಕಶೇರುಕಗಳಲ್ಲಿ ಮತ್ತು ಇತರ ಕೆಲವು ಪ್ರಾಣಿಗಳಲ್ಲಿ ಕಂಡುಬರುವ ಒಂದು ಜೀವಧಾರಕ ಅಂಗ. ವಿಷದ ಅಂಶವನ್ನು ತೆಗೆದುಹಾಕುವುದು, ಪ್ರೋಟೀನ್ ಸಂಶ್ಲೇಷಣೆ ಮತ್ತು ಜೀರ್ಣಕ್ರಿಯೆಗೆ ಬೇಕಾಗುವ ಜೀವರಾಸಾಯನಿಕ ವಸ್ತುಗಳನ್ನು ಉತ್ಪತ್ತಿ ಮಾಡುವುದು ಇವೇ ಮೊದಲಾದ ಹಲವಾರು ಕಾರ್ಯಗಳನ್ನು ಇದು ಮಾಡುತ್ತದೆ. ಜೀವದ ಉಳಿವಿಗಾಗಿ ಯಕೃತ್ತು ಅತೀ ಅವಶ್ಯಕ; ಯಕೃತ್ತು ಕಾರ್ಯವನ್ನು ಮಾಡದಿದ್ದರೆ ಅದನ್ನು ಸರಿದೂಗಿಸುವಂತಹ ಬೇರೆ ಯಾವುದೇ ಮಾರ್ಗಗಳು ಪ್ರಸ್ತುತದಲ್ಲಿಲ್ಲ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕೃಷಿ (ವ್ಯವಸಾಯ) ಎಂಬುದು ಬೇಸಾಯ ಮತ್ತು ಅರಣ್ಯಕಲೆಯ ಮೂಲಕ ಆಹಾರ ಮತ್ತು ಸರಕುಗಳನ್ನು ಉತ್ಪಾದಿಸುವ ಒಂದು ವಿಧಾನ. ಅಂದರೆ ಆಹಾರ, ನಾರು, ಜೈವಿಕ ಇಂಧನ, ಔಷಧಗಳು ಮತ್ತು ಮಾನವ ಜೀವನವನ್ನು ಪೋಷಿಸಲು ಹಾಗೂ ವರ್ಧಿಸಲು ಬಳಸಲಾಗುವ ಇತರ ಉತ್ಪನ್ನಗಳಿಗಾಗಿ ಪ್ರಾಣಿಗಳು, ಸಸ್ಯಗಳು, ಶಿಲೀಂಧ್ರಗಳು, ಮತ್ತು ಇತರ ಜೀವಿಗಳ ಸಾಗುವಳಿ. ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲೊಂದಾಗಿದೆ.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಪರಿಸರ ವ್ಯವಸ್ಥೆ ಎಂದರೆ ಪರಿಸರದ ಭೌತಿಕವಾದ ಮತ್ತು ಜೈವಿಕವಾದ ಸಂಯೋಜಿತ ಘಟಕಗಳಿಗೆ ಅನ್ವಯಿಸುತ್ತದೆ. ಪರಿಸರ ವ್ಯವಸ್ಥೆ ಒಂದು ನೈಸರ್ಗಿಕ ಪರಿಸರದೊಳಗಿನ ಪ್ರದೇಶವಾಗಿದೆ.ಈ ಪರಿಸರದಲ್ಲಿ ನಾವು ಜೈವಿಕ ಮತ್ತು ಅಜೈವಿಕ ವಸ್ತುಗಳು ಅಂದರೆ, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೈವಿಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ವ್ಯವಸ್ಥೆಯನ್ನು ಕಾಣಬಹುದು ಮತ್ತು ಸಾಮಾನ್ಯವಾಗಿ ಒಂದು ಅಸಂಖ್ಯಾತ ಆಹಾರ ಜಾಲಗಳನ್ನು ರೂಪಿಸುತ್ತವೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ದಾವೂದ್ ಇಬ್ರಾಹಿಂ ಕಸ್ಕರ್ ಒಬ್ಬ ಭಾರತೀಯ ದರೋಡೆಕೋರ, ಮಾದಕವಸ್ತು ದೊರೆ, ಮತ್ತು ಭಯೋತ್ಪಾದಕ. ಅವರು 1970 ರ ದಶಕದಲ್ಲಿ ಮುಂಬೈನಲ್ಲಿ ಸ್ಥಾಪಿಸಿದ ಭಾರತೀಯ ಸಂಘಟಿತ ಅಪರಾಧ ಸಿಂಡಿಕೇಟ್ ಡಿ-ಕಂಪನಿಯ ಮುಖ್ಯಸ್ಥರಾಗಿದ್ದಾರೆಂದು ವರದಿಯಾಗಿದೆ. ಇಬ್ರಾಹಿಂ ವಿರುದ್ಧ ಕೊಲೆ, ಸುಲಿಗೆ, ಗುರಿಯಾಗಿಸಿಕೊಂಡು ಹತ್ಯೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆ ಸೇರಿದಂತೆ ಹಲವು ಆರೋಪಗಳ ಮೇಲೆ ಬೇಕಾಗಿದ್ದಾರೆ.
ಕರ್ನಾಟಕ ವಿಧಾನಸಭೆಯ ಕ್ಷೇತ್ರಗಳ ಪಟ್ಟಿ
ಕರ್ನಾಟಕ ವಿಧಾನಸಭೆಯು ಭಾರತದ ದೇಶದ ಕರ್ನಾಟಕ ರಾಜ್ಯದ ದ್ವಿಸದಸ್ಯೀಯ ಶಾಸಕಾಂಗ ಕೆಳಮನೆಯಾಗಿದೆ.ಕರ್ನಾಟಕವು ಭಾರತದ ಎರಡು ಸದನಗಳನ್ನು ಒಳಗೊಂಡ ಆರು ರಾಜ್ಯಗಳಲ್ಲಿ ಒಂದಾಗಿದೆ. ಈ ಎರಡು ಸದನಗಳೆಂದರೆ ವಿಧಾನ ಸಭಾ (ಕೆಳಮನೆ) ಮತ್ತು ವಿಧಾನ ಪರಿಷತ್ (ಮೇಲಿನ ಮನೆ). ಬೇಸಿಗೆಯಲ್ಲಿ, ವಿಧಾನಸಭೆಯು ರಾಜ್ಯದ ರಾಜಧಾನಿಯಾದ ಬೆಂಗಳೂರು, ಚಳಿಗಾಲದಲ್ಲಿ ರಾಜ್ಯದ ಉತ್ತರ ಭಾಗದಲ್ಲಿರುವ ಬೆಳಗಾವಿಯಲ್ಲಿ ನಡೆಯುತ್ತದೆ ಅವಧಿಗೆ ಮೊದಲು ವಿಸರ್ಜಿಸದಿದ್ದರೆ ವಿಧಾನಸಭೆಯ ಪೂರ್ಣಾವಧಿ ಐದು ವರ್ಷಗಳು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
"ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಪ್ರಕ್ರೀಯೆಯಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಸಲಹೆಯು (ಸೂಚನೆ, ಬುದ್ಧಿವಾದ) ಯಾವುದೋ ಸಂದರ್ಭದಲ್ಲಿ ಪ್ರಸಾರಮಾಡಿದ ನಿರ್ದಿಷ್ಟ ಪರಿಸ್ಥಿತಿಗಳ ಬಗ್ಗೆ ವೈಯಕ್ತಿಕ ಅಥವಾ ಸಾಂಸ್ಥಿಕ ಅಭಿಪ್ರಾಯಗಳು, ನಂಬಿಕೆ ವ್ಯವಸ್ಥೆಗಳು, ಮೌಲ್ಯಗಳು, ಶಿಫಾರಸುಗಳು ಅಥವಾ ಮಾರ್ಗದರ್ಶನವನ್ನು ಮತ್ತೊಬ್ಬ ವ್ಯಕ್ತಿ, ಗುಂಪು ಅಥವಾ ಪಕ್ಷಕ್ಕೆ ಸಂಬಂಧಿಸುವ ಒಂದು ರೂಪ. ಹಲವುವೇಳೆ ಇದನ್ನು ಕಾರ್ಯ ಮತ್ತು/ಅಥವಾ ನಡತೆಯ ಮಾರ್ಗದರ್ಶಿಯಾಗಿ ನೀಡಲಾಗುತ್ತದೆ. ಸ್ವಲ್ಪ ಹೆಚ್ಚು ಸರಳವಾಗಿ ಹೇಳಿದರೆ, ಸಲಹಾ ಸಂದೇಶವು ಒಂದು ಸಮಸ್ಯೆಯನ್ನು ನಿಭಾಯಿಸಲು, ನಿರ್ಧಾರವನ್ನು ಮಾಡಲು, ಅಥವಾ ಒಂದು ಪರಿಸ್ಥಿತಿಯನ್ನು ನಿರ್ವಹಿಸುವ ಬಗ್ಗೆ ಯೋಚಿಸಿರಬಹುದಾದ, ಹೇಳಿರಬಹುದಾದ ಅಥವಾ ಮಾಡಬಹುದಾದ ಶಿಫಾರಸು.
ರಾಮಾಯಣದಲ್ಲಿ ಬರುವ ರಾಕ್ಷಸನ ಪಾತ್ರ. ರಾಮ,ಲಕ್ಷ್ಮಣರು ವಿಶ್ವಾಮಿತ್ರರಲ್ಲಿ ವಿದ್ಯಾರ್ಜನೆ ಮಾಡುತ್ತಿರುವಾಗ ಸುಬಾಹು ಮತ್ತು ಮಾರೀಚನೆಂಬ ರಾಕ್ಷಸರು ವಿಶ್ವಾಮಿತ್ರರ ಹೋಮ-ಯಾಗಾದಿಗಳಲ್ಲಿ ವಿಘ್ನ ತರುತ್ತಿರುತ್ತಾರೆ. ಆಗ ವಿಶ್ವಾಮಿತ್ರರ ಅಪ್ಪಣೆಯ ಮೇರೆಗೆ ರಾಮ,ಲಕ್ಷ್ಮಣರು ಈ ರಾಕ್ಷಸರ ಮೇಲೆ ದಾಳಿ ಮಾಡಿದಾಗ ಸುಬಾಹು ಮೃತನಾಗುತ್ತಾನೆ ಮತ್ತು ಮಾರೀಚ ಅನಾಮಧೇಯ ದ್ವೀಪವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.ಮುಂದೆ ರಾಮ-ಲಕ್ಷ್ಮಣ-ಸೀತೆಯರು ಅರಣ್ಯದಲ್ಲಿ ವನವಾಸದಲ್ಲಿದ್ದಾಗ ಇದೇ ಮಾರೀಚ ರಾವಣನಿಗೆ ಸಹಾಯಮಾಡಲೆಂದು ಬಂಗಾರ ವರ್ಣದ ಜಿಂಕೆಯಾಗಿ ಸೀತೆಯ ಕುಟೀರದ ಮುಂದೆ ಸುಳಿದಾಡತೊಡಗಿ ಸೀತೆಯ ಮನಸೂರೆಗೊಳ್ಳುತ್ತಾನೆ.
ಆಲೂರು ವೆಂಕಟ ರಾವ್ (ಕೆಲವೊಮ್ಮೆ ಆಲೂರು ವೆಂಕಟ ರಾಯ ಎಂದೂ ಕರೆಯುತ್ತಾರೆ) (೧೨ಜುಲೈ ೧೮೮೦ – ೨೫ಫೆಬ್ರವರಿ ೧೯೬೩) ಒಬ್ಬ ಭಾರತೀಯ ಇತಿಹಾಸಕಾರ, ಬರಹಗಾರ ಮತ್ತು ಪತ್ರಕರ್ತ. ಪ್ರತ್ಯೇಕ ಕರ್ನಾಟಕ ರಾಜ್ಯದ ಉದ್ದೇಶಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಅವರನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕುಲಪುರೋಹಿತ ( ಕನ್ನಡ ಕುಟುಂಬದ ಪ್ರಧಾನ ಅರ್ಚಕ ) ಎಂದು ಪೂಜಿಸುತ್ತಾರೆ. ಮೈಸೂರು, ಬಾಂಬೆ ಪ್ರೆಸಿಡೆನ್ಸಿ ಮತ್ತು ನಿಜಾಮರ ಹೈದರಾಬಾದ್‌ನ ಕನ್ನಡ ಮಾತನಾಡುವ ಜನರಿಗಾಗಿ ರಾಜ್ಯ ರಚನೆಗೆ ಬೆಂಬಲವಾಗಿ ಕರ್ನಾಟಕ ಏಕೀಕರಣ ಚಳುವಳಿಯನ್ನು ಕೈಗೊಂಡಿದ್ದಕ್ಕಾಗಿ ಅವರು ಪ್ರಸಿದ್ಧರಾದ್ದಾರೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)
ಶಬರಿಮಲೆ ಸ್ವಾಮಿ ಅಯ್ಯಪ್ಪ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್ ಮತ್ತು ವಿ. ಸ್ವಾಮಿನಾಥನ್ ಅವರು ನಿರ್ಮಿಸಿದ್ದು ರೇಣುಕಾಶರ್ಮ ನಿರ್ದೇಶಿಸಿದ್ದಾರೆ. ಇದರ ಪ್ರಮುಖ ಪಾತ್ರಗಳಲ್ಲಿ ಶ್ರೀನಿವಾಸಮೂರ್ತಿ, ಗೀತಾ, ಮಾಸ್ಟರ್ ಸಂಜಯ್ ಇದ್ದಾರೆ.