The most-visited ಕನ್ನಡ Wikipedia articles, updated daily. Learn more...
ವಿಶ್ರವಸು ಪುಲಸ್ತ್ಯನ ಮಗ, ಪ್ರಸಿದ್ಧ ಋಷಿಯಾದ ಅಗಸ್ತ್ಯ ಮುನಿಯ ಸಹೋದರ ಮತ್ತು ಸೃಷ್ಟಿಕರ್ತ ಬ್ರಹ್ಮನ ಮೊಮ್ಮಗ, ಸೃಷ್ಟಿಕರ್ತ ಪ್ರಾಚೀನ ಭಾರತದ ಮಹಾನ್ ಹಿಂದೂ ಧರ್ಮಗ್ರಂಥ ಮಹಾಕಾವ್ಯ ರಾಮಾಯಣದಲ್ಲಿ ವಿವರಿಸಿದಂತೆ ಪ್ರಬಲ ಋಷಿ. ಶ್ರೇಷ್ಠ ವಿದ್ವಾಂಸರಾದ, ಅವರು ತಪಸ್ಸಿನ ಮೂಲಕ ಮಹಾನ್ ಶಕ್ತಿಗಳನ್ನು ಗಳಿಸಿದರು, ಇದು ಅವರ ಸಹವರ್ತಿ ಋಷಿಗಳಲ್ಲಿ ಅವರಿಗೆ ಉತ್ತಮ ಹೆಸರು ಮತ್ತು ಖ್ಯಾತಿಯನ್ನು ಗಳಿಸಿತು. ವಿಶೇಷವಾಗಿ ಭಾರದ್ವಾಜನು ವಿಶ್ರವನಿಂದ ಎಷ್ಟು ಪ್ರಭಾವಿತನಾದನೆಂದರೆ ಅವನಿಗೆ ತನ್ನ ಮಗಳಾದ ಇಳವಿದಾಳನ್ನು ಮದುವೆ ಮಾಡಿಕೊಟ್ಟನು.
ಟೆಂಪ್ಲೇಟು:Globalize/USA ಅಂಕಿ ಸಂಖ್ಯಾಶಾಸ್ತ್ರ ಅಥವಾ ಅಂಕಿ ಸಂಖ್ಯಾ ಮಾಹಿತಿ ಸರ್ಕಾರದಲ್ಲಿ ಉಪಯೋಗವಿರುವಂತೆ ಮನುಷ್ಯರ ಜನಸಂಖ್ಯೆಯ ದತ್ತಾಂಶ, ವಿಕ್ರಯಿಸುವ ಅಥವಾ ಸಂಶೋಧನಾ ಅಭಿಪ್ರಾಯಗಳ, ಅಥವಾ ಅಂಕಿ ಸಂಖ್ಯಾಶಾಸ್ತ್ರದ ಪಾರ್ಶ್ವಚಿತ್ರ ಸಂಶೋಧಿಸಿದಂತೆ. "ಅಂಕಿ ಸಂಖ್ಯಾಶಾಸ್ತ್ರ " ಎಂಬ ಶಬ್ದದ ಅರ್ಥದಲ್ಲಿನ ವ್ಯತ್ಯಾಸವನ್ನು ಕಂಡಾಗ, (ಕೆಳಗೆ ನೋಡಿ) ಅದರಲ್ಲಿ ಸಾಮಾನ್ಯವಾಗಿ ಅಂಕಿ ಸಂಖ್ಯಾಶಾಸ್ತ್ರವು ಲಿಂಗ, ಬುಡಕಟ್ಟು/ಜನಾಂಗ, ವಯಸ್ಸು, ಆದಾಯ, ಅಂಗವೈಕಲ್ಯತೆ, ಚಲನೆ (ಪ್ರಯಾಣದ ಸಮಯದಲ್ಲಿ ಕೆಲಸ ಮಾಡುವ ಅಥವಾ ಇರುವ ವಾಹನಗಳ ಸಂಖ್ಯೆ ), ಶೈಕ್ಷಣಿಕ ಅರ್ಹತೆ, ಮನೆಯ ಮಾಲೀಕತ್ವ, ಉದ್ಯೋಗ ಪರಿಸ್ಥಿತಿ, ಮತ್ತು ಸ್ಥಳವೂ ಸೇರಿಕೊಂಡಿದೆ. ಅಂಕಿ ಸಂಖ್ಯೆಯಲ್ಲಿನ ಭಿನ್ನತೆಯು,ಹಾಗು ಮನೆಯ ಅವಶ್ಯಕತೆಯ ಸುತ್ತ-ಮುತ್ತ, ಎರಡು ವಿಷಯ ಆಸಕ್ತಿದಾಯಕವಾಗಿದ್ದು,ಸಮಯಾಧಾರಿತ ಪರಿಸ್ಥಿತಿಯು ಸಹ ಕಾರಣವಾಗಿರುತ್ತದೆ.
ಕೀರ್ತಿನಾಥ ಕುರ್ತಕೋಟಿ ಇವರು ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ. ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. ೧೯೫೯ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಭಾರತದ ಚುನಾವಣಾ ಆಯೋಗವು ಭಾರತದಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಸ್ವಾಯತ್ತ ಸಾಂವಿಧಾನಿಕ ಸಂಸ್ಥೆಯಾಗಿದೆ. ದೇಶದ ಸ್ಥಳೀಯ ಸಂಸ್ಥೆ ಸೇರಿದಂತೆ ಲೋಕಸಭೆ, ರಾಜ್ಯಸಭೆಗೆ, ರಾಜ್ಯದಲ್ಲಿ ರಾಜ್ಯ ವಿಧಾನಸಭೆಗಳಿಗೆ ಮತ್ತು ರಾಷ್ಟ್ರಪತಿ ಮತ್ತು ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣಾ ಪ್ರಕ್ರಿಯೆ ನಡೆಸುತ್ತದೆ.ಚುನಾವಣಾ ಆಯೋಗವು ಆರ್ಟಿಕಲ್ 324 ರ ಪ್ರಕಾರ ಸಂವಿಧಾನದ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ತರುವಾಯ ಪೀಪಲ್ಸ್ ಕಾಯ್ದೆಯ ಪ್ರಾತಿನಿಧ್ಯವನ್ನು ಜಾರಿಗೊಳಿಸಿತು. ಆಯೋಗವು ಸಂವಿಧಾನದ ಅಡಿಯಲ್ಲಿ ಸನ್ನಿವೇಶವನ್ನು ನಿಭಾಯಿಸಲು ಕೆಲವು ಅಧಿಕಾರವನ್ನು ಹೊಂದಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಕತ್ತಿವರಸೆಮೂಲತಃ ಆತ್ಮರಕ್ಷಣೆಗೂ ಶತ್ರುವಿನ ವಿರುದ್ಧ ಆಕ್ರಮಣೆಗೂ ಕತ್ತಿಯನ್ನು ಬಳಸುವ ಚಾಕಚಕ್ಯತೆ (ಫೆನ್ಸಿಂಗ್).ಇದು ಬದಲಾವಣೆಗೊಂಡು ಇಂದು ಒಂದು ಕುಶಲ ಕಲೆಯಾಗಿ ಮಾತ್ರ ಉಳಿದಿದೆ.ಮತ್ತು ಇದನ್ನು ದೇಸಿ ಕಲೆ ಮತ್ತು ಜಾತ್ರೆಗಳಲ್ಲಿ ಒಂದು ಆಟವಾಗಿ ಮಾಡಿಕೊಂಡು ಇದರಿಂದ ಆಟದ ನಾಯಕನು ಹಣ ಸಂಪಾದಿಸುತ್ತಾನೆ ಮತ್ತು ಅವನ ಕಲೆಯನ್ನು ಪ್ರದರ್ಶಣೆ ಮಾಡುತ್ತಾನೆ. ಹಾಗೂ ಜನರ ಮನಸ್ಸಿನಲ್ಲಿ ಸಂತೋಷ ಮೂಡಿಸುತ್ತಾನೆ.
ಹೃದಯ ಸ್ನಾಯುವಿನ ಊತಕ ಸಾವು (MI ) ಅಥವಾ ತೀವ್ರತರದ ಹೃದಯ ಸ್ನಾಯುವಿನ ಊತಕ ಸಾವು (AMI) ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿಯ-ಕಾಠಿಣ್ಯದ ಶೇಖರಣೆ (ತಂತುಯುಕ್ತವಾದ ಊತಕದ ಶೇಖರಣೆ)ಯ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ (ತಡೆಗಟ್ಟುವಿಕೆ). ಈ ಶೇಖರಣೆಯು ಅಪಧಮನಿಯ ಗೋಡೆಯಲ್ಲಿ ಲಿಪಿಡ್ಗಳು (ಕೊಬ್ಬಿನಾಮ್ಲಗಳು) ಮತ್ತು ಬಿಳಿರಕ್ತಕಣಗಳ (ವಿಶೇಷವಾಗಿ ಬೃಹತ್ಕಣಗಳು) ಅಸ್ಥಿರ ಸಂಗ್ರಹವಾಗಿದೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
'ಇಂಡೋ-ಆರ್ಯನ್ ಜನರು, ಇಂಡಿಕ್ ಜನರು ಎಂದೂ ಕರೆಯುತ್ತಾರೆ, ದಕ್ಷಿಣ ಏಷ್ಯಾದಲ್ಲಿ ಪ್ರಧಾನವಾಗಿ ಕಂಡುಬರುವ ಜನರ ವೈವಿಧ್ಯಮಯ ಸಂಗ್ರಹವಾಗಿದೆ, ಅವರು (ಸಾಂಪ್ರದಾಯಿಕವಾಗಿ) ಇಂಡೋ-ಆರ್ಯನ್ ಭಾಷೆಗಳನ್ನು ಮಾತನಾಡುತ್ತಾರೆ. ಐತಿಹಾಸಿಕವಾಗಿ, ಆರ್ಯರು ಇಂಡೋ-ಇರಾನಿಯನ್ ಭಾಷೆಗಳನ್ನು ಮಾತನಾಡುವ ಗ್ರಾಮೀಣವಾದಿಗಳು, ಮಧ್ಯ ಏಷ್ಯಾದಿಂದ ದಕ್ಷಿಣ ಏಷ್ಯಾಕ್ಕೆ ವಲಸೆ ಬಂದ ಇಂಡೋ-ಆರ್ಯನ್ ವಲಸೆಗಳು|ವಲಸೆ ಮತ್ತು ಪ್ರಾಟೋ-ಇಂಡೋ-ಆರ್ಯನ್ ಭಾಷೆಯನ್ನು ಪರಿಚಯಿಸಿದರು. ಆರಂಭಿಕ ಇಂಡೋ-ಆರ್ಯ ವಲಸೆಗಳು|ಇಂಡೋ-ಆರ್ಯ ಜನರು ಸಿಂಧೂ ನದಿಯ ಪಶ್ಚಿಮಕ್ಕೆ ವಾಸಿಸುತ್ತಿದ್ದ ಇರಾನಿಯನ್ ಜನರು|ಇರಾನಿಯನ್ ಗುಂಪಿಗೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ; ಸಾಂಸ್ಕೃತಿಕ, ಭಾಷಾ ಮತ್ತು ಐತಿಹಾಸಿಕ ಸಂಬಂಧಗಳಲ್ಲಿ ಇದು ಸ್ಪಷ್ಟವಾದ ಸಂಪರ್ಕವಾಗಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
"ಹಡಪದ ಅಪ್ಪಣ್ಣ" ನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಇವರು "ಹಡಪದ" ಸಮಾಜದವರಾಗಿದ್ದು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ (ಫೆಬ್ರುವರಿ ೧೯, ೧೬೩೦/ಫೆಬ್ರುವರಿ ೧೯, ೧೬೨೭ - ಏಪ್ರಿಲ್ ೩, ೧೬೮೦) ಹಿಂದೂ ಸ್ವರಾಜ್ಯದ ಸ್ಥಾಪಕರು.ಇವರು ೧೬೩೦ರಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆಯ ಹತ್ತಿರವಿರುವ ಶಿವನೇರಿಎಂಬಲ್ಲಿ ಜನಿಸಿದರು.ಇವರು ೧೬೭೪ ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರ ವರೆಗೂ ರಾರಾಜಿಸಿತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು.ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಡೆಮಿ ಗೈನೆಸ್, ವೃತ್ತಿಯಿಂದ ಡೆಮಿ ಮೂರ್ ಎಂದು (ನವೆಂಬರ್ ೧೧,೧೯೬೨ರಲ್ಲಿ ಜನನ)ಪ್ರಸಿದ್ದರಾಗಿರುವ ಅಮೆರಿಕಾದ ನಟಿ. ಚಿತ್ರಗಳಲ್ಲಿ ಸಣ್ಣ ಪಾತ್ರಗಳು ಹಾಗು ದೂರದರ್ಶನದ ಜನರಲ್ ಹಾಸ್ಪಿಟಲ್ ಧಾರಾವಾಹಿಯಲ್ಲಿ ಒಂದು ಪಾತ್ರದ ನಂತರ, ಮೂರ್ ಅವರು ಸೈಂಟ್.ಎಲ್ಮೊಸ್ ಫಯರ್ (೧೯೮೫)ಹಾಗು ಘೋಸ್ಟ್ (೧೯೯೦) ಚಿತ್ರಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಸ್ಥಾಪಿಸಿದರು, ೧೯೯೦ರ ದಶಕದ ಆರಂಭದಲ್ಲಿ, ಎ ಫಿಯು ಗುಡ್ ಮೆನ್ (೧೯೯೨),ಇನ್ಡೀಸೆಂಟ್ ಪ್ರೊಪೋಸಲ್ (೧೯೯೩), ದೀಸ್ಕ್ಲೋಸರ್ (೧೯೯೪) ಚಿತ್ರಗಳ ಯಶ್ಶಸ್ಸಿನ ನಂತರ ಹಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಪಡೆಯುವ ನಟಿಯೆನಿಸಿದರು. ೯೦ರ ದಶಕದ ಕೊನೆಯಲ್ಲಿ ಅವರ ಚಿತ್ರಗಳು ಕಡಿಮೆ ಯಶ್ಶಸ್ಸನ್ನು ಕಂಡರೂ,Charlie's Angels: Full Throttle ೨೦೦೩ ಅವರ ಪಾತ್ರದಿಂದ ಮರಳಿ ಪ್ರಾಮುಖ್ಯತೆಯನ್ನು ಪಡೆದರು.ತಮ್ಮ ವೃತಿಪರ ಹೆಸರನ್ನು,ಅವರ ಮೂದಲ ಪತಿ ಫ್ರೆಡ್ಡಿ ಮೂರ್ ಅವರಿಂದ ಪಡೆದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
2003 ಮಾರ್ಚ್ 20ರಂದು ಪ್ರಾರಂಭಗೊಂಡ ಬಹುರಾಷ್ಟ್ರಗಳ ಸೇನಾ ತುಕಡಿಗಳು ಇರಾಕಿನ ನೆಲವನ್ನು ವಶಪಡಿಸಿಕೊಳ್ಳುವ ಸೇನಾಕಾರ್ಯಾಚರಣೆಯನ್ನು ಇರಾಕ್ ಯುದ್ಧ ಎಂದು ಕರೆಯಲಾಗುತ್ತದೆ (ಇದನ್ನು ಇರಾಕ್ ಆಕ್ರಮಣ, ಎರಡನೇ ಗಲ್ಫ್ ಯುದ್ಧ , ಹಾಗೂ ಆಪರೇಷನ್ ಇರಾಕ್ ವಿಮೋಚನಾ ಕಾರ್ಯಾಚರಣೆ ಎಂದೂ ಕರೆಯಲಾಗುತ್ತದೆ). ಅಮೇರಿಕಾದ ಅಧ್ಯಕ್ಷ ಜಾರ್ಜ್.ಡಬ್ಲ್ಯು.ಬುಷ್ ಅವರ ಮುಂಚೂಣಿಯ ಅಮೇರಿಕಾ ಹಾಗೂ ಟೋನಿ ಬ್ಲೇರ್ ಮುಖಂಡತ್ವದ ಇಂಗ್ಲೆಂಡ್ ಈ ಕಾರ್ಯಾಚರಣೆಯ ಮುಂದಾಳತ್ವ ವಹಿಸಿಕೊಂಡಿದ್ದವು. ಹೀಗೆ ವಿಮೋಚನೆಯ ಹೆಸರಿನಲ್ಲಿ ಇರಾಕಿನ ನೆಲದ ಮೇಲೆ ಕಾಲೂರಿದ ಸೇನೆಯನ್ನು ಇತ್ತೀಚೆಗೆ ತೆರವುಗೊಳಿಸಲಾಯಿತು.
ವಿಜಯದಾಸ(೧೬೮೨– ೧೭೫೫) ೧೮ ನೇ ಶತಮಾನದಲ್ಲಿ ಕರ್ನಾಟಕದ, ಹರಿದಾಸ ಸಂಪ್ರದಾಯದ ಪ್ರಮುಖ ಸಂತ ಮತ್ತು ದ್ವೈತ ತತ್ವಶಾಸ್ತ್ರದ ಸಂಪ್ರದಾಯದ ವಿದ್ವಾಂಸ. ಸಮಕಾಲೀನ ಹರಿದಾಸ ಸಂತರಾದ ಗೋಪಾಲ ದಾಸ, ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥ ದಾಸ ಮತ್ತು ಪ್ರಸನ್ನ ವೆಂಕಟ ದಾಸರೊಂದಿಗೆ, ಅವರು ಕನ್ನಡ ಭಾಷೆಯಲ್ಲಿ ಬರೆದ ದೇವರನಾಮ ಎಂಬ ಭಕ್ತಿಗೀತೆಗಳ ಮೂಲಕ ದಕ್ಷಿಣ ಭಾರತದಾದ್ಯಂತ ಮಧ್ವಾಚಾರ್ಯರ ತತ್ವಶಾಸ್ತ್ರದ ಸದ್ಗುಣಗಳನ್ನು ಪ್ರಚಾರ ಮಾಡಿದರು.ಕನ್ನಡ ವೈಷ್ಣವ ಭಕ್ತಿ ಸಾಹಿತ್ಯದ ಅವಿಭಾಜ್ಯ ಅಂಗವಾಗಿದ್ದು, ಹಿಂದೂ ದೇವರು ವಿಷ್ಣು ಮತ್ತು ಇತರ ದೇವತೆಗಳನ್ನು ಸ್ತುತಿಸುವ ಈ ಸಂಯೋಜನೆಗಳನ್ನು ದಾಸರ ಪದಗಳು (ದಾಸರ ಸಂಯೋಜನೆಗಳು) ಎಂದು ಕರೆಯಲಾಗುತ್ತದೆ. ಅವರು ತಮ್ಮ ಸಂಯೋಜನೆಗಳ ಮೂಲಕ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಎರಡನ್ನೂ ಪ್ರಭಾವಿಸಿದ್ದಾರೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಮಹಾಭಾರತ ಮತ್ತು ರಾಮಾಯಣ ಪ್ರಾಚೀನ ಭಾರತದ ಎರಡು ಪ್ರಮುಖ ಸಂಸ್ಕೃತ ಮಹಾಕಾವ್ಯವಾಗಿದ್ದು ಇವುಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುತ್ತಾರೆ. ಮಹಾಭಾರತ ಇದು ಕುರುಕ್ಷೇತ್ರ ಯುದ್ಧದ ಘಟನೆಗಳು ಮತ್ತು ನಂತರದ ಘಟನೆಗಳನ್ನು ವಿವರಿಸುತ್ತದೆ, ಇದು ರಾಜಮನೆತನದ ಸೋದರ ಸಂಬಂಧಿಗಳ ಎರಡು ಗುಂಪುಗಳಾದ ಕೌರವರು ಮತ್ತು ಪಾಂಡವರ ನಡುವಿನ ಉತ್ತರಾಧಿಕಾರದ ಯುದ್ಧವಾಗಿದೆ. ಮಹಾಭಾರತ ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳಲ್ಲಿ ಒಂದು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಕೇಂದ್ರ ಪಟ್ಟಿ ಅಥವಾ ಲಿಸ್ಟ್-ಐ ಎಂಬುದು ಭಾರತದ ಸಂವಿಧಾನದ ಏಳನೇ ಅನುಸೂಚಿಯಲ್ಲಿ ನೀಡಲಾದ 100 ವಿಷಯಗಳ ಪಟ್ಟಿಯಾಗಿದೆ (ಕೊನೆಯ ವಿಷಯ 97 ಎಂದು ನಮೂದಿಸಲಾಗಿದೆ) ಇದರ ಮೇಲೆ ಸಂಸತ್ತು ಶಾಸನ ಮಾಡಲು ವಿಶೇಷ ಅಧಿಕಾರವನ್ನು ಹೊಂದಿದೆ. ಶಾಸಕಾಂಗ ವಿಭಾಗವನ್ನು ಮೂರು ಪಟ್ಟಿಗಳಾಗಿ ವಿಂಗಡಿಸಲಾಗಿದೆ: ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿ. ಯುನೈಟೆಡ್ ಸ್ಟೇಟ್ಸ್, ಸ್ವಿಟ್ಜರ್ಲ್ಯಾಂಡ್ ಅಥವಾ ಆಸ್ಟ್ರೇಲಿಯಾದ ಫೆಡರಲ್ ಸರ್ಕಾರಗಳಿಗಿಂತ ಭಿನ್ನವಾಗಿ, ಕೆನಡಾದ ಫೆಡರಲ್ ಸರ್ಕಾರದಂತೆ ಉಳಿದ ಅಧಿಕಾರಗಳು ಕೇಂದ್ರ ಸರ್ಕಾರದೊಂದಿಗೆ ಉಳಿದಿವೆ.
ಗುರುಂಗ್ ( ದೇವನಾಗರಿ : गुरुङ ), ತಮು ಕಿ ( ತಮು ಕಿ, tamu kyī ; ಟಿಬೆಟಿಯನ್ : ཏམུ་ཀི ) ಅಥವಾ ತಮು ಭಾಸಾ( तमु भाषा, tamu bhāṣā ), ನೇಪಾಳದ ಗುರುಂಗ್ ಜನರು ಮಾತನಾಡುವ ಭಾಷೆ. ನೇಪಾಳದಲ್ಲಿ ಗುರುಂಗ್ ಮಾತನಾಡುವವರ ಒಟ್ಟು ಸಂಖ್ಯೆ 1991 ರಲ್ಲಿ 227,918 ಮತ್ತು 2011 ರಲ್ಲಿ 325,622 ಆಗಿತ್ತು. ನೇಪಾಳದ ಅಧಿಕೃತ ಭಾಷೆ ನೇಪಾಳಿ ಇಂಡೋ-ಯುರೋಪಿಯನ್ ಭಾಷೆಯಾಗಿದೆ.
ಒಂದು ವಸ್ತುವಿನ ಎಲ್ಲಾ ಭಾಗಗಳ ತೂಕಗಳಿಂದಾದ ಕ್ರೋಡೀಕೃತ (Resultant) ಬಲವು ಯಾವ ಬಿಂದುವಿನ ಮೂಲಕ ಹಾದು ಹೋಗುವುದೋ ಆ ಬಿಂದುವನ್ನು ಗುರುತ್ವ ಕೇಂದ್ರ ಎನ್ನುತ್ತಾರೆ. ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಾನಗಳಿಗೂ ಕೇವಲ ಒಂದು ಗುರುತ್ವ ಕೇಂದ್ರವಿರುತ್ತದೆ. ಏಕರೀತಿಯ ಗುರುತ್ವ ಕ್ಷೇತ್ರದಲ್ಲಿ ವಸ್ತುವಿನ ಗುರುತ್ವ ಕೇಂದ್ರ ಮತ್ತು ದ್ರವ್ಯರಾಶಿಯ ಕೇಂದ್ರ ಒಂದೇ ಆಗಿರುವುದು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಮಯೂರಿ ಉಪಾಧ್ಯ (ಜನನ ೩೦ ಡಿಸೆಂಬರ್ ೧೯೭೯) ಒಬ್ಬ ಭಾರತೀಯ ನೃತ್ಯ ಸಂಯೋಜಕಿ, ನರ್ತಕಿ, ವಾಣಿಜ್ಯೋದ್ಯಮಿ ಮತ್ತು ಭಾರತದ ಬೆಂಗಳೂರು ಮೂಲದ ಟಿವಿ ವ್ಯಕ್ತಿತ್ವ. ಅವರು ಬೆಂಗಳೂರು ಮೂಲದ ನೃತ್ಯ ಸಂಸ್ಥೆಯ ನರ್ತರುತ್ಯದ ಕಲಾ ನಿರ್ದೇಶಕಿಯೂ ಆಗಿದ್ದಾರೆ. ಜನವರಿ ೨೦೧೮ ರಲ್ಲಿ, ಮಯೂರಿ ಅವರು ಬ್ರಾಡ್ವೇ ವರ್ಲ್ಡ್ನಿಂದ ಅತ್ಯುತ್ತಮ ನೃತ್ಯ ಸಂಯೋಜಕರಾಗಿ ಆಯ್ಕೆಯಾದರು, ಇದು ಭಾರತೀಯ ಇತಿಹಾಸದಲ್ಲಿ ದೀರ್ಘಾವಧಿಯ ಸಂಗೀತವಾಗಿದೆ .
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಾಲುಮರದ ತಿಮ್ಮಕ್ಕ (೩೦ ಜೂನ್ ೧೯೧೧ – ೧೪ ನವೆಂಬರ್ ೨೦೨೫) ಇವರು ಕರ್ನಾಟಕದಲ್ಲಿ ಜನಿಸಿ ನೆಲೆಸಿದ್ದ ಒಬ್ಬ ಭಾರತೀಯ ಪರಿಸರವಾದಿ. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ನೂರಾರು ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದಾಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡಿದುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಗಮನಿಸಿ ಪುರಸ್ಕರಿಸಿವೆ.