The most-visited English Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
೧೯೪೭ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಆದರೆ ಆಗ ಭಾರತದೊಡನೆ ವಿಲೀನವಾಗಲು ಬಯಸಿದ ತನ್ನ ಸಂಸ್ಥಾನದ ಬಹುಜನರ ಅಭಿಪ್ರಾಯವನ್ನು ವಿರೋಧಿಸಿದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಅಲಿ, "ಡೆಕ್ಕನ್ ರೇಡಿಯೋ" (ಅಥವಾ "ನಿಜಾಮ್ ರೇಡಿಯೋ") ಮೂಲಕ ಹೈದರಾಬಾದ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ನಿರೀಕ್ಷೆಯಂತೆ ಪಾಕಿಸ್ತಾನವು ಹೈದರಾಬಾದ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನ
ಅಂತರರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನವನ್ನು (ಅನೌಪಚಾರಿಕವಾಗಿ ಮತ್ತು ಸರಳವಾಗಿ ಓಝೋನ್ ದಿನ ಎಂದು ಕರೆಯಲಾಗುತ್ತದೆ) ಸೆಪ್ಟೆಂಬರ್ 16 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ನಿಗದಿಪಡಿಸಲಾಗಿದೆ. ಇದರ ಪ್ರಸ್ತಾಪವನ್ನು ಡಿಸೆಂಬರ್ 19, 2000 ರಂದು ಮಾಡಲಾಯಿತು(1987 ರಲ್ಲಿ ಹಲವು ರಾಷ್ಟ್ರಗಳು ಓಝೋನ್ ಪದರವನ್ನು ಸವಕಳಿಗೊಳಿಸುವ ವಸ್ತುಗಳ ಕುರಿತು ಮಾಂಟ್ರಿಯಲ್ ಪ್ರೋಟೋಕಾಲ್‌ಗೆ ಸಹಿ ಹಾಕಿದ ದಿನಾಂಕದ ನೆನಪಿಗಾಗಿ). 1994 ರಲ್ಲಿ, UN ಜನರಲ್ ಅಸೆಂಬ್ಲಿ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವನ್ನು ಘೋಷಿಸಿತು, 1987 ರಲ್ಲಿ ಓಝೋನ್ ಪದರವನ್ನು ಸವಕಳಿ ಮಾಡುವ ವಸ್ತುಗಳ ಕುರಿತ ಮಾಂಟ್ರಿಯಲ್ ಪ್ರೋಟೋಕಾಲ್‌ಗೆಸಹಿ ಮಾಡಿದ ದಿನಾಂಕವನ್ನು ನೆನಪಿಸುತ್ತದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ
"ನಾವು ಈಗಾಗಲೇ ಭೂಮಿಯ ಸಂಪನ್ಮೂಲಗಳಲ್ಲಿ ಅಗತ್ಯಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. "ಭೂಮಿಯ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ " - ಎಂದು ಹೇಳಲಾಗುತ್ತದೆ (ಗಾಂಧೀಜಿ). ಈಗ ಮಾನವನ ಬದುಕಿಗೆ ಪರಿಸರ ರಕ್ಷಣೆಗೆ ಅತಿ ಸೂಕ್ಷ್ಮ ಪ್ರದೇಶವಾದ ಭಾರತದ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎಂಬುದ ಪರಿಸರ ತಜ್ಞರ ಅಭಿಪ್ರಾಯ.
ಪ್ರಜಾವಾಣಿಯು (ಕನ್ನಡ:ಜನರ ಧ್ವನಿ) ಭಾರತದ ಕರ್ನಾಟಕದಲ್ಲಿ ಪ್ರಕಟವಾದ ಪ್ರಮುಖ ಕನ್ನಡ ಭಾಷೆಯ ಬ್ರಾಡ್‌ಶೀಟ್ ದಿನಪತ್ರಿಕೆಯಾಗಿದೆ. ೨.೧೩ ದಶಲಕ್ಷಕ್ಕೂ ಹೆಚ್ಚು ಓದುಗರನ್ನು ಹೊಂದಿರುವ ಈ ಪತ್ರಿಕೆಯು ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಾರವಾದ ಪತ್ರಿಕೆಗಳಲ್ಲಿ ಒಂದಾಗಿದೆ. 'ಪದ ಸಂಪದ', 'ಚಿನಕುರಳಿ' ಮುಂತಾದ ಜನಪ್ರಿಯ ಅಂಕಣ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ಆಂಗ್ಲ: ISRO – Indian Space Research Organisation) ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ. ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಸುಮಾರು ೧೭,೦೦೦ ಕೆಲಸಗಾರರನ್ನು ಹೊಂದಿದೆ. ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತಮಿಳುನಾಡು), ಹಾಸನ(ಕರ್ನಾಟಕ) ಮತ್ತು ಶ್ರೀಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ.
ಜನಪದ ಎಂಬ ಪದವು ಜನ - ಜನರು ಅಥವಾ ಬುಡಕಟ್ಟು ಪದ - ಎಂಬ ಎರಡು ಪದಗಳಿಂದ ರೂಪುಗೊಂಡಿದೆ - ಒಂದು ರೀತಿಯ ಸಣ್ಣ ಪದ್ಯವು ಸಂಧಿ - ವ್ಯಾಕರಣ ಪದವಾಗಿ ಸೇರಿಕೊಂಡಿದೆ. ಕನ್ನಡಿಗ ಮತ್ತು ಬಹುಶಃ ತೆಲುಗು ಜನರ ಜಾನಪದ ಸಂಸ್ಕೃತಿ ಮತ್ತು ಆಡುಮಾತಿನ ಭಾಷೆಯು ,ಭಾಷೆಗಳು ಅಸ್ತಿತ್ವಕ್ಕೆ ಬಂದ ಸಮಯದಿಂದ ಈ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಜಾನಪದ : ಭಾರತ ದೇಶದಲ್ಲೇ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ.
ಶಾಸಕನು ಕಾನೂನುಗಳನ್ನು ಬರೆದು ಅಂಗೀಕರಿಸುವ ವ್ಯಕ್ತಿ, ವಿಶೇಷವಾಗಿ ಶಾಸನ ಸಭೆಯ ಸದಸ್ಯನಾಗಿರುವವನು. ಶಾಸಕರು ಸಾಮಾನ್ಯವಾಗಿ ರಾಜಕಾರಣಿಗಳಾಗಿದ್ದು ಇವರನ್ನು ಹಲವುವೇಳೆ ರಾಜ್ಯದ ಜನರು ಚುನಾಯಿಸುತ್ತಾರೆ. ಶಾಸನಸಭೆಗಳು ರಾಷ್ಟ್ರಗಳನ್ನು ಮೀರಿರಬಹುದು (ಉದಾಹರಣೆಗೆ ಯೂರೋಪಿಯನ್ ಸಂಸತ್ತು), ರಾಷ್ಟ್ರೀಯವಾಗಿರಬಹುದು (ಉದಾಹರಣೆಗೆ, ಅಮೇರಿಕ ಸಂಯುಕ್ತ ಸಂಸ್ಥಾನದ ಕಾಂಗ್ರೆಸ್), ಪ್ರಾದೇಶಿಕವಾಗಿರಬಹುದು (ಉದಾಹರಣೆಗೆ, ವೇಲ್ಸ್‌ನ ರಾಷ್ಟ್ರೀಯ ಶಾಸನಸಭೆ), ಅಥವಾ ಸ್ಥಳೀಯವಾಗಿರಬಹುದು (ಉದಾಹರಣೆಗೆ, ಸ್ಥಳೀಯ ಪ್ರಾಧಿಕಾರಗಳು).
ವಿಶ್ವಕರ್ಮನು (ಸಂಸ್ಕೃತದಲ್ಲಿ ಈ ಶಬ್ದದ ಅರ್ಥ - ಎಲ್ಲವನ್ನು ಸಾಧಿಸುವವನು, ಎಲ್ಲದರ ಕರ್ತೃ, ಎಲ್ಲವನ್ನು ಮಾಡುವವನು) ಸೃಷ್ಟಿಯ ವ್ಯಕ್ತೀಕರಣ ಮತ್ತು ಋಗ್ವೇದದ ಪ್ರಕಾರ ಸೃಷ್ಟಿ ದೇವತೆಯ ಅಮೂರ್ತ ರೂಪ. ಇವನು ವಿಶ್ವಕರ್ಮ ಜಾತಿಯವರ, ಅಭಿಯಂತರರ, ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು "ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ" ಮತ್ತು ಬ್ರಹ್ಮನ್ ಹಾಗೂ ಪುರುಷರ ಮೂಲ ಪರಿಕಲ್ಪನೆ ಎಂದು ನಂಬಲಾಗಿದೆ.
ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಬೆಂಗಳೂರು : ಕರ್ನಾಟಕ ರಾಜ್ಯದ ಅತಿ ದೊಡ್ಡ ನಗರ ಮತ್ತು ರಾಜಧಾನಿ ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರ ಹಾಗೂ ಕಸಬಾ ಹೋಬಳಿಯ ಕೇಂದ್ರವಾಗಿದೆ, ಪ್ರಸ್ತುತ ಬೆಂಗಳೂರು ತಾಲ್ಲೂಕು 408 ಚ.ಕಿ.ಮೀ ವಿಸ್ತೀರ್ಣ ಹೊಂದಿದೆ. ಬೆಂಗಳೂರು ನಗರವು ಕ್ರಿ.ಶ.೧೫೩೭ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರಿಂದ ನಿರ್ಮಾಣವಾಯಿತು. ಇದು ದಕ್ಷಿಣ ಪ್ರಸ್ಥಭೂಮಿಯ ಮೇಲಿದ್ದು, ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿದೆ.
ಓಝೋನ್ ಪದರ ಸೂರ್ಯನಿಂದ ಹೊರಸೂಸುವ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುವ ಭೂಮಿಯ ವಾಯುಮಂಡಲದಲ್ಲಿ ಒಂದು ಪ್ರದೇಶವಾಗಿರುತ್ತದೆ. ಇದು ವಾಯುಮಂಡಲದಲ್ಲಿ ಓಝೋನ್ O3 ನ ಅನಿಲದ ಅಧಿಕ ಸಾಂದ್ರತೆಯನ್ನು ಹೊಂದಿದೆ. ಭೂಮಿಯ ಮೇಲೆ ಸುಮಾರು ೧೦ ಕಿ.ಮೀ ನಿಂದ ೪೦ ಕಿ.ಮೀ.ರ ವರೆಗೆ ವ್ಯಾಪಿಸಲ್ಪಟ್ಟಿರುವ ಈ ಪ್ರದೇಶವು ಸೂರ್ಯನಿಂದ ಬಿಡುಗಡೆಯಾಗುವ ನೇರಳಾತೀತ ವಿಕಿರಣಗಳನ್ನು ಹೀರಿಕೊಂಡು ಭೂಮಿಗೆ ಅವುಗಳು ತಲಪುವುದನ್ನು ತಡೆಗಟ್ಟುತ್ತವೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಓಝೋನ್' ('O3 ), ಅಥವಾ ಟ್ರೈಆಕ್ಸಿಜನ್ ಎಂಬುದು ಒಂದು ತ್ರಿಪರಮಾಣ್ವಕ ಅಣುವಾಗಿದ್ದು, ಮೂರು ಆಮ್ಲಜನಕ ಪರಮಾಣುಗಳನ್ನು ಇದು ಒಳಗೊಂಡಿದೆ. ದ್ವಿಪರಮಾಣ್ವಕ ಭಿನ್ನರೂಪಕ್ಕಿಂತ (O2) ಸಾಕಷ್ಟು ಕಡಿಮೆ ಸ್ಥಿರವಾಗಿರುವ ಆಮ್ಲಜನಕದ ಒಂದು ಭಿನ್ನರೂಪ ಇದಾಗಿದೆ. ಕೆಳಮಟ್ಟದ ವಾತಾವರಣದಲ್ಲಿರುವ ಓಝೋನ್ ಒಂದು ವಾಯು ಮಾಲಿನ್ಯಕಾರಕವಾಗಿದ್ದು, ಪ್ರಾಣಿಗಳ ಉಸಿರಾಟದ ವ್ಯವಸ್ಥೆಗಳ ಮೇಲೆ ಇದು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ ಮತ್ತು ಸೂಕ್ಷ್ಮ ಸ್ವಭಾವದ ಸಸ್ಯಗಳನ್ನು ಸುಡುತ್ತದೆ; ಆದಾಗ್ಯೂ, ಮೇಲುಮಟ್ಟದ ವಾತಾವರಣದಲ್ಲಿನ ಓಝೋನ್ ಪದರವು ಪ್ರಯೋಜನಕಾರಿಯಾಗಿದ್ದು, ಹಾನಿಕಾರಕ ನೇರಳಾತೀತ ಬೆಳಕು ಭೂಮಿಯ ಮೇಲ್ಮೈಯನ್ನು ತಲುಪುವುದನ್ನು ಸಮರ್ಥವಾಗಿ ತಡೆಗಟ್ಟುತ್ತದೆ.
ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಹಾಡು. ಆದರೆ ಕನ್ನಡದ ಪ್ರಮುಖ ಕಥೆಗಾರ ಶಂಕರ ಬೈಚಬಾಳ ಅವರ ವಂದೇ ಮಾತರಂ-ಸಲೀಂ- ಕೃತಿ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕದನ ಕೃತಿಯಾಗಿದೆ. ಚಟ್ಟೊ ಉಪಾದ್ಯಾಯರ ಹಾಡು ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ ೨೨ ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಗೇಡು ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: If you get your hands dirty in the mud, you will get food.
ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.
ರಾಘವಾಂಕ :-ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.(ಷಟ್ಪದಿಯ ಬ್ರಹ್ಮ ಎಂದೇ ಪ್ರಸಿದ್ಧರಾಗಿದ್ದಾರೆ) ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ ಧರ್ಮದ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ.
ವಿಜಯದಶಮಿ, ದಸರಾ, ದಸರಾ ಅಥವಾ ದಶೈನ್ ಎಂದೂ ಕರೆಯುತ್ತಾರೆ, ಇದು ಪ್ರತಿ ವರ್ಷ ನವರಾತ್ರಿಯ ಕೊನೆಯಲ್ಲಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಹಿಂದೂ ಲೂನಿ-ಸೌರ ಕ್ಯಾಲೆಂಡರ್‌ನ ಏಳನೇ ತಿಂಗಳಾದ ಅಶ್ವಿನ್‌ನ ಹಿಂದೂ ಕ್ಯಾಲೆಂಡರ್ ತಿಂಗಳ ಹತ್ತನೇ ದಿನದಂದು ಇದನ್ನು ಆಚರಿಸಲಾಗುತ್ತದೆ, ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನ ಗ್ರೆಗೋರಿಯನ್ ತಿಂಗಳುಗಳಲ್ಲಿ ಬರುತ್ತದೆ. ವಿಜಯದಶಮಿಯನ್ನು ವಿವಿಧ ಕಾರಣಗಳಿಗಾಗಿ ಆಚರಿಸಲಾಗುತ್ತದೆ ಮತ್ತು ಭಾರತೀಯ ಉಪಖಂಡದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ.
ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)
ಓಝೋನ್ ಸವಕಳಿ ಯು ಎರಡು ಪ್ರತ್ಯೇಕ ಆದರೆ ಪರಸ್ಪರ ಸಂಬಂಧವಿರುವ ಹೇಳಿಕೆಗಳನ್ನು ವಿವರಿಸುತ್ತದೆ: ಓಝೋನ್ ಈ ಪೃಥ್ವಿಯ ಸಂರಕ್ಷಣಾ ಕವಚ. ವಿಷಾದದ ಸಂಗತಿಯೆಂದ್ರೆ ಇದು ಸದ್ಯ ಮಾನವ ನಿರ್ಮಿತ ತಪ್ಪುಗಳಿಂದಾಗಿ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ. ವಾಯು ಮಾಲಿನ್ಯ ಮತ್ತು ಪರಿಸರ ನಾಶದಿಂದಾಗಿ ರಕ್ಷಣಾ ಕವಚ ಕಳೆಗುಂದುತ್ತಿದೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.