The most-visited English Wikipedia articles, updated daily. Learn more...
ಮೋಹನ್‌ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಒಂದು ಅವಳಿ ನಕ್ಷತ್ರ ವೆಂದರೆ, ತಮ್ಮ ಸಮಾನ ರಾಶಿಕೇಂದ್ರದ ಸುತ್ತ ಪರಿಭ್ರಮಿಸುವ ಎರಡು ನಕ್ಷತ್ರಗಳನ್ನೊಳಗೊಂಡ ತಾರಾ ಮಂಡಲವಾಗಿದೆ. ಅತ್ಯಂತ ಪ್ರಕಾಶಮಾನವಾದ ನಕ್ಷತ್ರವನ್ನು ಪ್ರಾಥಮಿಕ ತಾರೆಯೆಂದು ಹಾಗು ಮತ್ತೊಂದು ಅದರ ಸಹತಾರೆ ಯೆಂದು, ಅಲ್ಲದೇ ಹತ್ತಿರವಿರುವ, ಕಮ್ಸ್, ಅಥವಾ ದ್ವಿತೀಯಕ ತಾರೆ ಗಳೆಂದು ಕರೆಯಲಾಗುತ್ತದೆ. ೧೯ನೇ ಶತಮಾನದ ಆರಂಭ ಮತ್ತು ಇಂದಿನವರೆಗಿನ ಸಂಶೋಧನೆಗಳು, ಹಲವು ನಕ್ಷತ್ರಗಳು ಅವಳಿ ತಾರಾ ವ್ಯವಸ್ಥೆಗಳು ಅಥವಾ ಎರಡಕ್ಕಿಂತ ಹೆಚ್ಚು ತಾರೆಗಳಿರುವ ತಾರಾ ಮಂಡಲದ ಭಾಗವಾಗಿರುತ್ತವೆ, ಎಂದು ಸೂಚಿಸಿದೆ.
ಶ್ರೀ ವಿಠ್ಠಲಶೆಟ್ಟಿ ಎಂಬ ಹೆಸರಾದರೂ ಮಾಸ್ಟರ್ ವಿಠ್ಠಲ ಎಂದೇ ಚಿರಪರಿಚಿತರಾಗಿರುವ ಶ್ರೀಯುತರು ನೃತ್ಯಾಚಾರ್ಯ ಶ್ರೀ ರಾಜನ್‌ಅಯ್ಯರ್ ಅವರ ಬಳಿ ನೃತ್ಯಾಭ್ಯಾಸ ಮಾಡಿದರು. ೧೯೪೦ರಿಂದ ಸತತವಾಗಿ ನೃತ್ಯ ರಂಗದಲ್ಲಿ ತೊಡಗಿಸಿಕೊಂಡಿರುವ ಇವರು ಮಹಾಭಾರತ, ರಾಮಾಯಣ ಕಥೆಗಳ ಆಧಾರಿತ ರೂಪಕಗಳು, ಬೈಬಲ್ ಕಥಾಧಾರಿತ ರೂಪಕಗಳನ್ನು ರಂಗಭೂಮಿಗೆ ಕೊಡುಗೆಯಾಗಿ ನೀಡಿದ್ದಾರೆ. ೧೯೮೦ರಲ್ಲಿ ಸ್ಪೀಡನ್ ದೇಶದಲ್ಲಿ ಲಲಿತಕಲೆಗಳಿಗೆ ಹೆಸರಾದ ಸಂಸ್ಥೆ “ಸ್ಕಾನೇಷಿಯಾ ವರ್ಲ್ಡ್‌ಟೂರ್” ರವರು ಮೂರು ತಿಂಗಳ ಕಾಲ ನೃತ್ಯವನ್ನು ಬೋಧಿಸುವಂತೆ ಇವರನ್ನು ಗೌರವ ಪೂರ್ಣವಾಗಿ ಆಮಂತ್ರಿಸಿದ್ದರು.
ಒಳ್ಳೆ ಕೊಡಿ ಭಾರತಕ್ಕೆ ಸ್ಥಳೀಯವಾಗಿರುವ ಒಂದು ಸಣ್ಣ ನಿತ್ಯಹರಿದ್ವರ್ಣ ಮರವಾಗಿದೆ, ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಒಳಗೊಂಡಂತೆ ಡೆಕ್ಕನ್ ಪ್ರಸ್ಥಭೂಮಿ, ಥೈಲ್ಯಾಂಡ್, ಮಲಯ ಪರ್ಯಾಯ ದ್ವೀಪ, ಸಿಂಗಾಪುರ ಮತ್ತು ಬೋರ್ನಿಯೊ ಮುಂತಾದೆಡೆ ಕಂಡುಬರುತ್ತದೆ. ಇದು ಮರಳು ಅಥವಾ ಕಲ್ಲಿನ ಮಣ್ಣಿನೊಂದಿಗೆ ತೀರದಲ್ಲಿ ಕಂಡುಬರುತ್ತದೆ. ಸಾಮಾನ್ಯ ಹೆಸರುಗಳಲ್ಲಿ ಕಯಾಮ್, ಡೆಲೆಕ್ ಬಂಗಾಸ್, ಡೆಲೆಕ್ ಏರ್, ನಿಪಿಸ್ ಕುಲಿತ್ ( ಮಲಯದಲ್ಲಿ "ತೆಳುವಾದ ಚರ್ಮ"), ಮಿಯಾಟ್ ಮತ್ತು ನೆಮಾರು ಸೇರಿವೆ.
'ಪುಣ್ಯಕೋಟಿ' ತಯಾರಿಕೆಯ ಹಂತದಲ್ಲಿರುವ, ಇನ್ನೂ ಬಿಡುಗಡೆಯಾಗದ ಸಂಸ್ಕೃತ ಭಾಷೆಯ ಭಾರತೀಯ ಅನಿಮೇಷನ್ ಚಿತ್ರವಾಗಿದೆ, ಈ ಚಿತ್ರವನ್ನು ರವಿಶಂಕರ್ ವಿ ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಿ(crowd funded) ಮತ್ತು ವಿವಿಧ ಕಡೆಗಳಿಂದ ಮತ್ತು ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ(crowd sourced) ತಯಾರಿಸಲಾಗುತ್ತಿದೆ. ಪುಣ್ಯಕೋಟಿ ಜುಲೈ 2019 ರಲ್ಲಿ ಬಿಡುಗಡೆಯಾಗಬೇಕಿದ್ದ ಮೊದಲ ಸಂಸ್ಕೃತ ಅನಿಮೇಟೆಡ್ ಚಲನಚಿತ್ರವಾಗಿದೆ.
ಸುದೀಪ ಅಥವಾ ಕಿಚ್ಚ ಸುದೀಪ (ಜನನ ೨ ಸೆಪ್ಟೆಂಬರ್ ೧೯೭೩) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರಗಳಾದ ಸ್ಪರ್ಶ (2000), ಹುಚ್ಚ (2001), ನಂದಿ (2002), ಕಿಚ್ಚ (2003), ಸ್ವಾತಿ ಮುತ್ತು (2003), ಮೈ ಆಟೋಗ್ರಾಫ್ (2006), ನಂ 73 ಶಾಂತಿ ನಿವಾಸ (2007), ಮುಸ್ಸಂಜೆ ಮಾತು (2008), ವೀರ ಮದಕರಿ (2009), ಜಸ್ಟ್ ಮಾತ್ ಮಾತಲ್ಲಿ (2010), ಕೆಂಪೇಗೌಡ (2011), ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ (2012) ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 (2019) ಇವರ ಪ್ರಮುಖ ಚಿತ್ರಗಳು. ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದರು.
ಹಿಂದ್ ಮಾತಾ ಸಿನೆಮಾ, ದಾದರ್, ಮುಂಬೈ
ಸುಮಾರು ಎರಡು ದಶಕಗಳಕಾಲ ಸ್ಥಗಿತಗೊಂಡಿದ್ದು, ಈಗ ಹೊಸದಾಗಿ ಸಜ್ಜಾಗಿರುವ 'ಹಿಂದ್ ಮಾತಾ ಸಿನೆಮಾ ಥಿಯೇಟರ್', ತನ್ನ ಪ್ರದರ್ಶನಗಳನ್ನು ಮತ್ತೆ ಶುರುಮಾಡಲಿದೆ. ೨೦ ವರ್ಷಗಳ ತರುವಾಯ ಮತ್ತೆ ಶುರುವಾದ ಸಿನೆಮಾ ಥಿಯೇಟರ್ ನ ಹೊಸ ಹೆಸರು, 'ಗೋಲ್ಡನ್ ಡಿಜಿಟಲ್ ಸಿನೆಮಾ' ಎಂದು. ಈಗ ಥಿಯೇಟರ್ ನ, ಒಳಗಡೆ ಹಾಗೂ ಹೊರಗಡೆ ಎಲ್ಲಾ ಹೊಸದಾಗಿ ನಿರ್ಮಿಸಲ್ಪಟ್ಟಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಅಶೋಕನ ಬ್ರಾಹ್ಮೀ ಲಿಪಿ ಉತ್ತರಕ್ಕೆ ಕಾಲಸಿ ಮತ್ತು ಭಾರತ-ನೇಪಾಲ ಗಡಿಯಲ್ಲಿರುವ ರುಮ್ಮಿಂದೈಯಿಂದ ದಕ್ಷಿಣಕ್ಕೆ ಮೈಸೂರುವರೆಗೂ ಪೂರ್ವಕ್ಕೆ ಒರಿಸ್ಸದಿಂದ ಪಶ್ಚಿಮಕ್ಕೆ ಜುನಾಗಢ ಮತ್ತು ಮುಂಬಯಿವರೆಗೂ ದೊರೆತ ಅಶೋಕ ಸಾಮ್ರಾಟನ ಧರ್ಮಶಾಸನಗಳಲ್ಲಿ ಕಂಡುಬರುತ್ತದೆ. ಈ ಲಿಪಿಯು ಅಶೋಕನ ಕಾಲದಲ್ಲಿ ಪ್ರಚಲಿತವಿದ್ದ ಪಾಕೃತ ಬಾಷೆಯಾಗಿ ಉಪಯೋಗಿಸಲ್ಪಟ್ಟಿದೆ. ಆ ಕಾಲಕ್ಕಾಗಲೇ ಅದು ಪರಿಪುರ್ಣತೆಯನ್ನು ಪಡೆದಿದ್ದು ಪ್ರಾಕೃತ ಭಾಷೆಯ ಪ್ರತಿಯೊಂದು ಶಬ್ದ ಅಥವಾ ಧ್ವನಿಗೆ ಪ್ರತ್ಯೇಕವಾದ ಅಕ್ಷರ ಅಥವಾ ಸಂಜ್ಞೆಯನ್ನು ಅದರಲ್ಲಿ ಕಲ್ಪಿಸಲಾಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ ೧೨ ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಸಂಭೋಗ ಭಂಗಿ ಎಂದರೆ ಜನರು ಲೈಂಗಿಕ ಸಂಭೋಗ ಅಥವಾ ಇತರ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಳಸುವ ದೇಹದ ಭಂಗಿ. ಲೈಂಗಿಕ ಕ್ರಿಯೆಗಳನ್ನು ಅದರಲ್ಲಿ ಭಾಗವಹಿಸುವವರು ಆ ಕ್ರಿಯೆಗಳನ್ನು ಕೈಗೊಳ್ಳಲಿಕ್ಕೆ ಅನುಸರಿಸುವ ಭಂಗಿಗಳಿಂದ ವಿವರಿಸಲಾಗುತ್ತದೆ. ಲೈಂಗಿಕ ಸಂಭೋಗ ಎಂಬುದು ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ದೇಹಕ್ಕೆ ಇನ್ನೊಬ್ಬರು ತಮ್ಮ ಲೈಂಗಿಕ ಅವಯವವನ್ನು ತುರುಕಿಸುವುದೇ ಆಗಿದ್ದರೂ, ಲೈಂಗಿಕ ಅವಯವವನ್ನು ತುರುಕಿಸದೆ ಮಾಡುವ ಲೈಂಗಿಕ ಭಂಗಿಳು ಸಹ ಪ್ರಚಾರದಲ್ಲಿವೆ.
ಕರ್ನಾಟಕ : ರಾಜ್ಯವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಮತ್ತು ಹೇಮಾವತಿ ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಕಯಾಮತ್ ಸೇ ಕಯಾಮತ್ ತಕ್ (ಚಲನಚಿತ್ರ)
ಕಯಾಮತ್ ಸೇ ಕಯಾಮತ್ ತಕ್ (ಅನುವಾದ: ವಿನಾಶದಿಂದ ವಿನಾಶದವರೆಗೆ) (ಕ್ಯೂಎಸ್‍ಕ್ಯೂಟಿ ಎಂಬ ಆದ್ಯಕ್ಷರ ಗುಚ್ಛದಿಂದಲೂ ಪರಿಚಿತವಾಗಿದೆ) ೧೯೮೮ರ ಒಂದು ಹಿಂದಿ ಸಂಗೀತಾತ್ಮಕ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಮನ್ಸೂರ್ ಖಾನ್ ನಿರ್ದೇಶಿಸಿದ್ದಾರೆ. ಅವರ ತಂದೆ ನಾಸಿರ್ ಹುಸೇನ್ ಇದನ್ನು ಬರೆದು ನಿರ್ಮಾಣ ಮಾಡಿದ್ದಾರೆ.
ಅನುವರ್ತಿಕ್ ಮಿರ್ಜಿ ಭರತೇಶ್ ತಂತ್ರಜ್ಞಾನ ಸಂಸ್ಥೆ
ಅನುವರ್ತಿಕ್ ಮಿರ್ಜಿ ಭರತೇಶ್ ತಂತ್ರಜ್ಞಾನ ಸಂಸ್ಥೆ ( ಭರತೇಶ್ ತಂತ್ರಜ್ಞಾನ ಸಂಸ್ಥೆ , ಅಥವಾ ಎ.ಎಂ.ಬಿ.ಐ.ಟಿ. , ಅಥವಾ ಬಿ.ಐ.ಟಿ. ) ಭಾರತದ ಕರ್ನಾಟಕದ ಬೆಳಗಾವಿಯಲ್ಲಿರುವ ಖಾಸಗಿ ತಂತ್ರಜ್ಞಾನ ಸಂಸ್ಥೆ.
ಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆ
"ನಾವು ಈಗಾಗಲೇ ಭೂಮಿಯ ಸಂಪನ್ಮೂಲಗಳಲ್ಲಿ ಅಗತ್ಯಕ್ಕಿಂತ 2 ರಿಂದ 3 ಪಟ್ಟು ಹೆಚ್ಚಿನ ಸಂಪನ್ಮೂಲಗಳನ್ನು ಬಳಸುತ್ತಿದ್ದೇವೆ. "ಭೂಮಿಯ ಪ್ರತಿ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಪ್ರತಿ ಮಾನವನ ದುರಾಸೆಯನ್ನಲ್ಲ " - ಎಂದು ಹೇಳಲಾಗುತ್ತದೆ (ಗಾಂಧೀಜಿ). ಈಗ ಮಾನವನ ಬದುಕಿಗೆ ಪರಿಸರ ರಕ್ಷಣೆಗೆ ಅತಿ ಸೂಕ್ಷ್ಮ ಪ್ರದೇಶವಾದ ಭಾರತದ ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಅತಿ ಅಗತ್ಯ ಎಂಬುದ ಪರಿಸರ ತಜ್ಞರ ಅಭಿಪ್ರಾಯ.
ಬಾಲ್ಖಾಶ್ ಸರೋವರ ( Kazakh: Балқаш көлі , Balqaş kóli, Kazakh pronunciation: [bɑlqɑɕ kwʏlɪ] ; Russian: озеро Балхаш, romanized: ozero Balkhash ) ಆಗ್ನೇಯ ಕಝಾಕಿಸ್ತಾನ್‌ನಲ್ಲಿರುವ ಸರೋವರವಾಗಿದೆ, ಇದು ಏಷ್ಯಾದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ ಮತ್ತು ವಿಶ್ವದ ೧೫ ನೇ ಅತಿದೊಡ್ಡ ಸರೋವರವಾಗಿದೆ. ಇದು ಮಧ್ಯ ಏಷ್ಯಾದ ಪೂರ್ವ ಭಾಗದಲ್ಲಿ ನೆಲೆಗೊಂಡಿದೆ ಮತ್ತು ಎಂಡೋರ್ಹೆಕ್ (ಮುಚ್ಚಿದ) ಜಲಾನಯನ ಪ್ರದೇಶವಾದ ಬಾಲ್ಖಾಶ್-ಅಲಕೋಲ್ ಜಲಾನಯನ ಪ್ರದೇಶದಲ್ಲಿದೆ. ಜಲಾನಯನ ಪ್ರದೇಶವು ಏಳು ನದಿಗಳನ್ನು ಹರಿಸುತ್ತದೆ, ಅದರಲ್ಲಿ ಪ್ರಾಥಮಿಕವಾದ ಇಲಿ ನದಿಯ ಒಳಹರಿವಿನ ಹೆಚ್ಚಿನ ಭಾಗವನ್ನು ತರುತ್ತದೆ; ಕರಾಟಲ್ ನಂತಹ ಇತರರು ಮೇಲ್ಮೈ ಮತ್ತು ಮೇಲ್ಮೈ ಹರಿವನ್ನು ತರುತ್ತಾರೆ.
ಯುಟೊಪಿಯ (ಆದರ್ಶರಾಜ್ಯ) ಇದೊಂದು ಕಾಲ್ಪನಿಕ ಸಾಮ್ರಾಜ್ಯ.ಯುಟೊಪಿಯ (Utopia) ಎಂಬುದು ಗ್ರೀಕ್ ಭಾಷೆಯ ಶಬ್ದವಾಗಿದೆ.ಎಲ್ಲಿ ಮನುಷ್ಯಜೀವಿ ತನ್ನ ಜೀವ,ಜಂತುಗಳೊಂದಿಗೆ ಸುಖ,ಶಾಂತಿ,ಸಮೃದ್ಧಿಯಿಂದ ಇರುತ್ತಾನೆಯೋ,ಎಲ್ಲಿ ಹಸು-ಹುಲಿಗಳು ಪರಸ್ಪರ ಪ್ರೀತಿಯಿಂದ ಇರಬಲ್ಲವೋ ಅಂತಹ ಸಮಾಜ ಅಥವಾ ವ್ಯವಸ್ಥೆಯನ್ನು ಯುಟೊಪಿಯನ್ ಸಾಮ್ರಾಜ್ಯವೆಂದು ಎಂದು ಕರೆಯಲಾಗುತ್ತದೆ.ಪ್ರಸ್ತುತ ಸನ್ನಿವೇಶದಲ್ಲಿ ಇದು ಅಸಾಧ್ಯವಾಗಿರುವದರಿಂದ ಯುಟೊಪಿಯ ಸಾಮ್ರಾಜ್ಯವನ್ನು ಕಾಲ್ಪನಿಕ ಜಗತ್ತೆಂದೇ ಕರೆಯಲಾಗಿದೆ.ಆದರೂ ಹಿಂದೂ ಧರ್ಮದ ಭಾಗವಾಗಿರುವ ತ್ರೇತಾಯುಗದ ರಾಮರಾಜ್ಯ(ರಾಮಾಯಣ)ವನ್ನು ಯುಟೊಪಿಯನ್ ಸಾಮ್ರಾಜ್ಯಕ್ಕೆ ಹೋಲಿಸಬಹುದೆಂದು ಭಾವಿಸಲಾಗುತ್ತಿದೆ. ಮಾನವ ಆಡಳಿತವ್ಯವಸ್ಥೆಯಿಂದುಂಟಾಗುವ ಯಾವ ವಿಧವಾದ ಲೋಪದೋಷವೂ ಇಲ್ಲದ ಸರ್ವಲಕ್ಷಣಸಂಪನ್ನವಾದ ಮಾದರಿ ರಾಜ್ಯ (ಯುಟೋಪಿಯ). ಈ ಲೋಕದಲ್ಲೇ ನಮ್ಮಿಂದ ದೂರ ಬೇರೊಂದೆಡೆಯಲ್ಲಿ ಅಂಥದೊಂದು ರಾಜ್ಯವಿದೆಯೆಂದು ಬಣ್ಣಿಸುವ ಗ್ರಂಥಗಳೂ ಲೇಖನಗಳೂ ಪ್ಲೇಟೊನ ಕಾಲದಿಂದಲೂ ಪ್ರಪಂಚ ಸಾಹಿತ್ಯದಲ್ಲಿ ಸಿಗುತ್ತವೆ.
ಅಪ್ನಾ ದಳ (ಸೋನೆಲಾಲ್) ಅಥವಾ ಅಪ್ನಾ ದಲ್ (ಸೋನೆಲಾಲ್) ಭಾರತೀಯ ರಾಜಕೀಯ ಪಕ್ಷವಾಗಿದೆ ಮತ್ತು ಭಾರತದಲ್ಲಿಅಪ್ನಾ ದಳದ ಉದ್ದೇಶ ಬಹಳ ಸ್ಪಷ್ಟವಾಗಿದೆ. ಅಪ್ನಾ ದಳದ ಗುರಿ ಪ್ರತಿ ಭಾರತೀಯ ನಾಗರಿಕರಿಗೆ ಸಮಾನ ಅವಕಾಶವನ್ನು ಕಲ್ಪಿಸುವುದು. ರಾಷ್ಟ್ರ ದೇಶ ಮೊದಲು, ಮಹಿಳಾ ಸಬಲೀಕರಣ, ಭ್ರಷ್ಟಾಚಾರ ಮುಕ್ತ ಭಾರತ, ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಅಪ್ನಾ ದಳ ಆದ್ಯತೆ ನೀಡಿದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಗ್ವಾಲಿಯರ್ ಕೋಟೆ ಭಾರತದ ಮಧ್ಯ ಪ್ರದೇಶದ ಗ್ವಾಲಿಯರ್ ಹತ್ತಿರವಿರುವ ಒಂದು ಗಿರಿಕೋಟೆಯಾಗಿದೆ. ಈ ಕೋಟೆಯು ಕನಿಷ್ಠಪಕ್ಷ ೧೦ ನೇ ಶತಮಾನದಿಂದ ಅಸ್ತಿತ್ವದಲ್ಲಿದೆ, ಮತ್ತು ಈಗ ಕೋಟೆ ಆವರಣವೆಂದೆನಿಸಿಕೊಳ್ಳುವುದರ ಒಳಗೆ ಕಂಡುಬರುವ ಶಾಸನಗಳು ಹಾಗೂ ಸ್ಮಾರಕಗಳು ಇದು ೬ನೇ ಶತಮಾನದ ಆರಂಭದಷ್ಟು ಮುಂಚಿತವಾಗಿಯೇ ಅಸ್ತಿತ್ವದಲ್ಲಿದ್ದಿರಬಹುದೆಂದು ಸೂಚಿಸುತ್ತವೆ. ಇದರ ಇತಿಹಾಸದಲ್ಲಿ ಕೋಟೆಯನ್ನು ಅನೇಕ ವಿಭಿನ್ನ ಆಳ್ವಿಕೆಗಾರರು ನಿಯಂತ್ರಿಸಿದ್ದಾರೆ.
ದುರ್ಗೆ ಅಥವಾ ದುರ್ಗಾ, ದೇವಿಯ ಅತ್ಯಂತ ಪ್ರಸಿದ್ಧ ಅವತಾರ ಮತ್ತು ಹಿಂದೂ ದೇವತಾಸಂಗ್ರಹದಲ್ಲಿ ಶಕ್ತಿ ದೇವತೆಯ ಮುಖ್ಯ ರೂಪಗಳ ಪೈಕಿ ಒಬ್ಬಳು. ದುರ್ಗೆಯ ಪ್ರಾಚೀನ ರೂಪವು ಹಿಮಾಲಯ ಹಾಗು ವಿಂಧ್ಯದ ನಿವಾಸಿಗಳಿಂದ ಆರಾಧಿಸಲ್ಪಟ್ಟ ಒಬ್ಬ ಪರ್ವತ ದೇವಿ, ಅಲೆಮಾರಿ ಅಭೀರ ಕುರುಬನಿಂದ ಆರಾಧಿಸಲ್ಪಟ್ಟ ಒಬ್ಬ ದೇವಿ, ಒಬ್ಬ ಸ್ತ್ರೀಯಾಗಿ ಕಲ್ಪಿಸಲ್ಪಟ್ಟ ಸಸ್ಯ ಆತ್ಮ, ಮತ್ತು ಒಬ್ಬ ಯುದ್ಧ ದೇವತೆಯ ಸಮನ್ವಯದ ಪರಿಣಾಮ. ಅವಳ ಭಕ್ತರು ನಾಗರಿಕತೆಯಲ್ಲಿ ಮುಂದುವರೆದಂತೆ, ಪ್ರಾಚೀನ ಯುದ್ಧ ದೇವತೆಯು ಎಲ್ಲವನ್ನು ಧ್ವಂಸಮಾಡುವ ಕಾಳಿಯ ವ್ಯಕ್ತಿರೂಪವಾಗಿ, ಸಸ್ಯ ಆತ್ಮವು ಆದಿ ಶಕ್ತಿ ಮತ್ತು ಸಂಸಾರದಿಂದ ಮುಕ್ತಿಕೊಡುವ ಸಂರಕ್ಷಕಿಯಾಗಿ ರೂಪಾಂತರಗೊಂಡಳು ಮತ್ತು ಅವಳು ಕ್ರಮೇಣ ಬ್ರಾಹ್ಮಣಿಕ ಪುರಾಣ ಹಾಗು ತತ್ವಶಾಸ್ತ್ರದ ಪಂಕ್ತಿಯಲ್ಲಿ ತರಲಾಯಿತು.ಉತ್ತರ ಭಾರತದಲ್ಲಿ ದುರ್ಗೆಯನ್ನು ಹೆಚ್ಚಾಗಿ ಪ್ರಾರ್ಥಿಸುವರು.ನವರಾತ್ರಿ ದಿನಗಳಲ್ಲಿ ಈ ದೇವತೆಗೆ ವಿವಿಧ ರೀತಿಯ ಅಲಂಕಾರ ಮಾಡಿ ಪೂಜಿಸುವರು.ಈ ದೇವಿಯು ಧೈರ್ಯ ಹಾಗು ಶೌರ್ಯದ ಸಂಕೇತ."ದುರ್ಗೆ ದೇವತೆ" ಅಥವಾ "ಆದಿ ಪರಶಕ್ತಿ" ಹಿಂದೂ ದೇವಾನು-ದೇವತೆಯರಲ್ಲಿ ಒಬ್ಬರು.
ಬಾಜಿಗರ್ [[[ಹಿಂದಿ]] (ದೇವನಾಗರಿ): बाज़ीगर, ಉರ್ದು/ಪರ್ಷಿಯನ್ (ನಸ್ಟಾಲಿಕ್): بازیگ ಇಂಗ್ಲಿಷ್: ಗ್ಯಾಂಬ್ಲರ್ ] ಎಂಬುದು 1993ರಲ್ಲಿ ಬಂದ ಒಂದು ಭಾರತೀಯ ಹಿಂದಿ ಚಲನಚಿತ್ರವಾಗಿದ್ದು, ಅಬ್ಬಾಸ್-ಮಸ್ತಾನ್ ಈ ಚಿತ್ರವನ್ನು ನಿರ್ದೇಶಿಸಿದರು. 1953ರಲ್ಲಿ ಬಂದ ಇರಾ ಲೆವಿನ್‌ನ ಎ ಕಿಸ್ ಬಿಫೋರ್ ಡೈಯಿಂಗ್ ಎಂಬ ಕಾದಂಬರಿಯನ್ನು ಆಧರಿಸಿದ ಈ ಚಿತ್ರವು ಒಂದು ಸಮಕಾಲೀನ ರೋಮಾಂಚಕ ಕೃತಿಯಾಗಿದ್ದು, ತಾನು ಬಯಸಿದ್ದನ್ನು ಪಡೆಯುವುದಕ್ಕಾಗಿ ಯಾವುದಕ್ಕೂ ಹೇಸದೆ ನಿರ್ದಯಿಯಾಗಿ ವರ್ತಿಸುವ ಓರ್ವ ಯುವಕನ ಕುರಿತ ಚಿತ್ರಣವಾಗಿದೆ. ಇಬ್ಬಗೆಯ ವರ್ತನೆಯ ಓರ್ವ ಕಥಾನಾಯಕನನ್ನು ಒಳಗೊಂಡಿದ್ದ ಈ ಚಿತ್ರವು, ಬಾಲಿವುಡ್‌ನ ಪ್ರಮಾಣಕ ಸಿದ್ಧ-ಸೂತ್ರವನ್ನು ಅನಿರೀಕ್ಷಿತವಾಗಿ ಮುರಿಯುವುದರ ಮೂಲಕ ತನ್ನ ಭಾರತೀಯ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿತು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗಿಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌದರಿ ಅವರ ಪ್ರಕಾರ ಇದನ್ನು 'ಮೂಲಭೂತ ಹಕ್ಕು'ಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ |||(3)(ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ ಸಂವಿಧಾನದಲ್ಲಿ ೬(6) ಮೂಲಭೂತ ಹಕ್ಕುಗಳಿವೆ.
ಅನ್ನಾ ಸೆರ್ಗೆಯೆವ್ನೆವಾ ಕುರ್ನಿಕೋವಾ ರು (Russian: ; ಜನನ 7 ಜೂನ್ 1981) ಓರ್ವ ರಷ್ಯನ್/ರಷ್ಯಾದ ವೃತ್ತಿಪರ ಟೆನಿಸ್ ಆಟಗಾರ್ತಿ ಹಾಗೂ ರೂಪದರ್ಶಿ. ಆಕೆಯ ಗಣ್ಯತೆಯ ಸ್ಥಾನಮಾನವು ಅವರನ್ನು ವಿಶ್ವದಾದ್ಯಂತದ ಟೆನಿಸ್ ಆಟಗಾರರಲ್ಲಿ ಅತ್ಯಂತ ಪ್ರಸಿದ್ಧಿ ಪಡೆದವರಲ್ಲಿ ಒಬ್ಬರನ್ನಾಗಿಸಿದೆ. ಆಕೆಯ ಖ್ಯಾತಿಯು ಉತ್ತುಂಗದಲ್ಲಿದ್ದಾಗ, ಕುರ್ನಿಕೋವಾರ ಚಿತ್ರಗಳನ್ನು ಹುಡುಕುತ್ತಿದ್ದ ಅಭಿಮಾನಿಗಳ ಹಿಂಡು ಆಕೆಯ ಹೆಸರನ್ನು ಅಂತರ್ಜಾಲದ ಹುಡುಕು ತಾಣವಾದ Googleನಲ್ಲಿ ಪ್ರಧಾನ ಹುಡುಕು ಪದಗಳಲ್ಲಿ ಒಂದನ್ನಾಗಿ ಮಾಡಿತ್ತು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಕುರಾನು ಇಸ್ಲಾಂ ಧರ್ಮದ ಮೂಲಾಧಾರ ಗ್ರಂಥ, ಕುರಾನು ಎಂಬುದು ಕುರ್ ಆನ್ ಎಂಬ ಪದಗಳಿಂದಾಗಿದ್ದು ಮೂಲ ಅರಬ್ಬೀ ಶಬ್ದವಾದ ಕರಾ ಎಂದರೆ ಓದು ಎಂಬುದಕ್ಕೆ ಸಂಬಂಧಿಸಿದೆ. ಅರಬ್ಬೀ ಭಾಷೆಯಲ್ಲಿ ಇದಕ್ಕೆ ಆಲ್-ಫರ್ಕ್ವಾನ್ (ಪ್ರಸಿದ್ಧಗ್ರಂಥ), ಕಲಮುಲ್ಲಾ (ದೇವನ ನುಡಿ), ಕಿತಾಬ್ (ಪವಿತ್ರ ಗ್ರಂಥ), ನೂರ್ (ದಿವ್ಯಜ್ಯೋತಿ) ಮತ್ತು ಆಲ್‍ಹುದಾ (ಮಾರ್ಗದರ್ಶಕ) ಎಂಬ ಹೆಸರುಗಳಿವೆ. ಇದಕ್ಕಿರುವ ಹಲವಾರು ಹೆಸರುಗಳಲ್ಲಿ ಕೆಲವನ್ನು ಕುರಾನಿನಲ್ಲಿ ಸೂಚಿಸಿದೆ; ಮತ್ತೆ ಕೆಲವನ್ನು ಮುಸಲ್ಮಾನರು ಕೊಟ್ಟಿರುತ್ತಾರೆ.
ಶ್ರೀಮತಿಯು ರವಿ ಕುಮಾರ್ ನಿರ್ದೇಶಿಸಿದ 2011 ರ ಕನ್ನಡ ಪ್ರಣಯ ಚಲನಚಿತ್ರವಾಗಿದೆ ಮತ್ತು 2004 ರ ಬಾಲಿವುಡ್ ಚಲನಚಿತ್ರ ಐತ್ರಾಜ್‌ನ ರಿಮೇಕ್ ಆಗಿದ್ದು, ಆ ಚಿತ್ರವಾದರೋ ಡಿಸ್‍ಕ್ಲೋಶರ್ ಚಲನಚಿತ್ರವನ್ನು ಸಡಿಲವಾಗಿ ಆಧರಿಸಿದೆ. ಚಿತ್ರದಲ್ಲಿ ಉಪೇಂದ್ರ, ಪ್ರಿಯಾಂಕಾ ತ್ರಿವೇದಿ ಮತ್ತು ಸೆಲಿನಾ ಜೇಟ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಪ್ರೇಮ್ ಚೋಪ್ರಾ, ಸಯಾಜಿ ಶಿಂಧೆ ಮತ್ತು ರೇಖಾ ದಾಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಶಂಕರೇಗೌಡ ನಿರ್ಮಿಸಿದ್ದಾರೆ , ಘಂಟಾಡಿ ಕೃಷ್ಣ ಅವರ ಮೂಲ ತು ಚಲನಚಿತ್ರ ಸಂಗೀತವನ್ನು ಒಳಗೊಂಡಿದೆ.
ತಾವೇ ಸ್ವಯಂ ದೇವತೆಗಳು (The Gods Themselves) ಎಂಬುದು ಐಸಾಕ್ ಅಸಿಮೋವ್ ೧೯೭೨ರಲ್ಲಿ ರಚಿಸಿದ ಹ್ಯೂಗೋ (೧೯೭೩) ಮತ್ತು ನೆಬ್ಯುಲ (೧೯೭೨) ಪುರಸ್ಕೃತ ಇಂಗ್ಲಿಷ್ ವೈಜ್ಞಾನಿಕ ಕಾದಂಬರಿ. ಈ ಪುಸ್ತಕವು ಮೂರು ಭಾಗಗಳಲ್ಲಿ ವಿಂಗಡಿತವಾಗಿದೆ, ವಾಸ್ತವವಾಗಿ, ಇವು ನಿಯತಕಾಲಿಕೆಯಲ್ಲಿ ಮೂರು ಸಣ್ಣ ಕಥೆಗಳಾಗಿ ಪ್ರಕಟಗೊಂಡಿದ್ದವು. ಅಸಿಮೋವ್ ರವರು ತಮ್ಮ ಆತ್ಮಕಥೆಯಲ್ಲಿ ಈ ಕಾದಂಬರಿಯು (ಅದರಲ್ಲಿಯೂ ಎರಡನೆಯ ಭಾಗವು) 'ತಾವು ಚಿಂತಿಸಿದ ಊರ್ಧ್ವಶಿರ ಚಿಂತನೆಗಳಲ್ಲಿಯೇ ಅತಿ ದೊಡ್ಡದು ಮತ್ತು ಪರಿಣಾಮಕಾರಿಯಾದುದು' ಎಂದು ಹೇಳಿಕೊಂಡಿದ್ದಾರೆ.
ದೆವ್ವ (ಗ್ರೀಕ್:διάβολος ಅಥವಾ ದಿಯವೊಲೋಸ್ = 'ಅಪನಿಂದಕ' ಅಥವಾ 'ಆಪಾದಕ')ವನ್ನು ಕೆಲವು ಧರ್ಮಗಳಲ್ಲಿ ಹಾಗು ಸಂಸ್ಕೃತಿಗಳಲ್ಲಿ ಅತ್ಯಂತ ಪ್ರಬಲ ಮಾನವಾತೀತ ಅಸ್ತಿತ್ವವೆಂದು ಅದೆಂದರೆ ದುಷ್ಟಶಕ್ತಿಯ ಮೂರ್ತರೂಪ ದ ಜೊತೆಗೆ ದೇವರು ಹಾಗು ಮಾನವಕುಲದ ಶತ್ರುವೆಂದು ಪರಿಗಣಿಸಲಾಗುತ್ತದೆ. ದೆವ್ವವನ್ನು ಸಾಮಾನ್ಯವಾಗಿ ಅಸಂಪ್ರದಾಯವಾದಿಗಳು, ನಾಸ್ತಿಕರು, ಹಾಗು ಇತರ ನಂಬಿಕೆಯಿಲ್ಲದವರ ಜೊತೆಗೆ ಸಂಬಂಧಿಸಲಾಗುತ್ತದೆ. ಅಬ್ರಹಾಂ ಧರ್ಮವು ದೆವ್ವವನ್ನು ಒಬ್ಬ ಅವಿಧೇಯ ಫಾಲನ್ ಏಂಜಲ್(ಸ್ವರ್ಗದಿಂದ ಬಹಿಷ್ಕರಿಸಲ್ಪಟ್ಟ ದೇವತೆ) ಅಥವಾ ಅಸುರ ದೈತ್ಯ ವೆಂದು ಪರಿಗಣಿಸುತ್ತದೆ.
ಸಾಂಪ್ರದಾಯಿಕ ಚೀನಿಯರ ಔಷಧಿ ಎಂದರೆ (中医, pinyin: zhōng yī),ಈ ಸ್ವರೂಪವನ್ನು ಸಾಮಾನ್ಯವಾಗಿ ಸಂಕ್ಷಿಪ್ತ ರೂಪದಲ್ಲಿ TCM ) ಎಂದು ಕರೆಯುತ್ತಾರೆ, ಇದೊಂದು ಸಾಂಪ್ರದಾಯಿಕ ಔಷಧಿ ಪದ್ದತಿಯಾಗಿದ್ದು ಮೂಲದಲ್ಲಿ ಚೀನೀಯರದ್ದಾದರೂ ಪೂರ್ವ ಏಷ್ಯಾದ್ಯಂತ ಆಚರಣೆಯಲ್ಲಿದೆ. ಈ TCM ವಿವಿಧ ವೈದ್ಯಕೀಯ ಮಾದರಿಗಳನ್ನು ಪಾಶ್ಚಾತ್ಯ ಔಷಧಿಗಿಂತಲೂ ಅಧಿಕ ಉತ್ತಮ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ:ಆಧುನಿಕ ಔಷಧಿ ಗುರುತಿಸುವ ಎಲ್ಲಾ ಮಾನವ ಅಂಗಾಂಗಗಳನ್ನು ಅವುಗಳ ರಚನೆಯನ್ನು ವಿಧಿಬದ್ದವಾಗಿ ಗುರುತಿಸುತ್ತದೆ.ಈ ಸಾಂಪ್ರದಾಯಿಕತೆಯಲ್ಲಿ ಅದೇ ತೆರನಾದ ಕಾರ್ಯ ಚಟುವಟಿಕೆಗಳನ್ನು ಅದು ಗುರುತಿಸಿ ಅಧ್ಯಾತ್ಮ ತತ್ವ ಮೀಮಾಂಸೆಗಳ ಮೇಲೆ ತನ್ನ ವೈದ್ಯಕೀಯತೆಗೆ ಕಾರ್ಯರೂಪ ನೀಡುತ್ತದೆ.ಆದರೆ ಇಂಥ ತಾತ್ವಿಕ ಆಧಾರಗಳನ್ನು ಆಧುನಿಕ ವೈದ್ಯಕೀಯ ವಿಜ್ಞಾನವು ಮಾನ್ಯ ಮಾಡುವುದಿಲ್ಲ. ಆದರೆ TCM ಪೂರ್ವ ಏಷ್ಯಾದಾದ್ಯಂತ ಸಾಮಾನ್ಯ ವೈದ್ಯಕೀಯ ಸುರಕ್ಷಿತತೆಯಂತೆಯೇ ಆಚರಣೆಯಲ್ಲಿದೆ.ಇದನ್ನು ಪಾಶ್ಚಿಮಾತ್ಯ ಜಗತ್ತಿನಲ್ಲಿ ಪರ್ಯಾಯ ವೈದ್ಯಕೀಯ ಪದ್ದತಿಯೆಂದು ಪರಿಗಣಿಸಲಾಗುತ್ತದೆ.
ಬೆಳಗಿನ ಬೇನೆ ಎಂಬುದು ಗರ್ಭಿಣಿಯಾದಾಗ ಬೆಳಗ್ಗೆ ಹೊತ್ತು ಬರುವ ಓಕರಿಕೆ, ಗರ್ಭಿಣಿಸ್ಥಿತಿಯಲ್ಲಿನ ವಾಂತಿಮಾಡುವಿಕೆ ಓಕರಿಕೆ, (ಗರ್ಭಿಣಿಸ್ಥಿತಿಗೆ ಸಂಬಂಧಿಸಿದ ವಮನ ಅಥವಾ NVP ), ಅಥವಾ ಗರ್ಭಿಣಿಸ್ಥಿತಿಯಲ್ಲಿನ ವಾಂತಿ ಬರುವ ಸೂಚನೆ ಎಂಬ ಹೆಸರುಗಳಿಂದ ಕರೆಯಲ್ಪಡುವ ಒಂದು ಅಸ್ವಸ್ಥತೆಯ ಸ್ಥಿತಿಯಾಗಿದ್ದು, ಎಲ್ಲಾ ಗರ್ಭಿಣಿ ಮಹಿಳೆಯರ ಪೈಕಿ ಅರ್ಧಕ್ಕಿಂತಲೂ ಹೆಚ್ಚುಮಂದಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಹಾರ್ಮೋನಿಗೆ ಸಂಬಂಧಿಸಿದ ಗರ್ಭನಿರೋಧಕ ಅಥವಾ ಹಾರ್ಮೋನು ಬದಲಿ ಚಿಕಿತ್ಸೆಯನ್ನು ಬಳಸುತ್ತಿರುವ ಕೆಲವೊಂದು ಮಹಿಳೆಯರಲ್ಲಿ, ಹೆಚ್ಚಳಗೊಂಡ ಈಸ್ಟ್ರೋಜೆನ್ ಮಟ್ಟಗಳಿಗೆ ಸಂಬಂಧಿಸಿದಂತೆ, ಓಕರಿಕೆ ಬರುವಂತಿರುವಿಕೆಯ ಇದೇ ರೀತಿಯ ಸ್ವರೂಪವೂ ಸಹ ಕಂಡುಬರುತ್ತದೆ. ಸಾಮಾನ್ಯವಾಗಿ, ಇದು ಬೆಳಗ್ಗೆಯ ಆರಂಭಿಕ ಅವಧಿಗಳಲ್ಲಿ ಕಂಡುಬರುತ್ತದೆ ಹಾಗೂ ದಿನವು ಮುಂದುವರಿದಂತೆ ಕಡಿಮೆಯಾಗುತ್ತದೆ.
ರಾಘವಾಂಕ :-ಕವಿಯು ಕ್ರಿ.ಶ.೧೨ನೆಯ ಶತಮಾನದ ಉತ್ತರಾರ್ಧದಲ್ಲಿ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದ ಕವಿ.(ಷಟ್ಪದಿಯ ಬ್ರಹ್ಮ ಎಂದೇ ಪ್ರಸಿದ್ಧರಾಗಿದ್ದಾರೆ) ಈತನು ಹರಿಹರನ ಸೋದರಳಿಯ.ಹರಿಹರನೂ,ರಾಘವಾಂಕನೂ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ನೂತನ ಯುಗಪ್ರವರ್ತಕರೆಂದು ಹೆಸರಾಗಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಷಟ್ಪದೀ ಪ್ರಕಾರವನ್ನು ಪ್ರವರ್ತನಗೊಳಿಸಿದ ಕೀರ್ತಿ ರಾಘವಾಂಕನಿಗೆ ಸಲ್ಲುತ್ತದೆ. ಕನ್ನಡದ ಅತ್ಯಂತ ಸ್ವತಂತ್ರ ಮನೋಧರ್ಮದ ಪ್ರಯೋಗಶೀಲನಾದ ಲಿಂಗಾಯತ ಧರ್ಮದ ಕವಿ. ಹರಿಶ್ಚಂದ್ರಕಾವ್ಯ ಎಂಬ ಕಾವ್ಯದ ಕರ್ತೃ.
ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು. ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕ_ಕ್ರಿಯೆ ಎನ್ನಲಾಗದು.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಜಾಕಿ ಚಾನ್, SBS, MBE (ಹುಟ್ಟಿದಾಗ ಇಟ್ಟ ಹೆಸರು ಚಾನ್ ಕಾಂಗ್ ಸ್ಯಾಂಗ್, 陳港生; ಹುಟ್ಟಿದ್ದು 1954ರ ಏಪ್ರಿಲ್ 7ರಂದು) ಓರ್ವ ಹಾಂಗ್ ಕಾಂಗ್ ಮೂಲದ ನಟ, ಚಲನಾ ನೃತ್ಯ ಸಂಯೋಜಕ, ಚಲನಚಿತ್ರೋದ್ಯಮಿ, ಹಾಸ್ಯನಟ, ನಿರ್ಮಾಪಕ, ಕದನ ಕಲೆಯ ಕಲಾವಿದ, ಚಿತ್ರಕಥಾ ಲೇಖಕ, ವಾಣಿಜ್ಯೋದ್ಯಮಿ, ಗಾಯಕ ಮತ್ತು ಸಾಹಸ ಪ್ರದರ್ಶನ ನಿರ್ವಾಹಕನಾಗಿದ್ದಾನೆ. ಆತನ ಚಲನಚಿತ್ರಗಳಲ್ಲಿನ, ಆತನ ದೊಂಬರಾಟದಂಥ ಹೊಡೆದಾಟದ ಶೈಲಿ, ಕಾಲೋಚಿತವಾಗಿ ನಗೆಯುಕ್ಕಿಸುವ ಸಾಮರ್ಥ್ಯ, ಸುಧಾರಿತ ಶಸ್ತ್ರಾಸ್ತ್ರಗಳು ಹಾಗೂ ನಾವೀನ್ಯತೆಯ ಸಾಹಸ ಪ್ರದರ್ಶನಗಳ ಬಳಕೆಗೆ ಆತ ಖ್ಯಾತಿಯನ್ನು ಪಡೆದಿದ್ದಾನೆ. 1970ರ ದಶಕದಿಂದಲೂ ಜಾಕಿ ಚಾನ್ ಅಭಿನಯಿಸುತ್ತಾ ಬಂದಿದ್ದು, ಇದುವರೆಗೂ 100 ಹೆಚ್ಚಿನ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾನೆ.
ಬಿಗ್ ಬಾಸ್ ಕನ್ನಡ (ಬಿಬಿಕೆ) ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ನ ಕನ್ನಡ ಆವೃತ್ತಿಯಾಗಿದೆ ಇದು ಕಲರ್ಸ್ ಕನ್ನಡ ಚಾನೆಲ್ ಮೂಲಕ ಭಾರತದಲ್ಲಿ ಪ್ರಸಾರವಾಗುತ್ತದೆ. ಬಿಗ್ ಬ್ರದರ್ ನ ಜಾಗತಿಕ ಸ್ವರೂಪವನ್ನು ಹೊಂದಿರುವ ಎಂಡೆಮೊಲ್ ಶೈನ್ ಇಂಡಿಯಾ ಮತ್ತು ಬನಿಜಯ್ ಗ್ರೂಪ್ ಈ ಕಾರ್ಯಕ್ರಮವನ್ನು ನಿರ್ಮಿಸಿದೆ. ಈಟಿವಿ ಕನ್ನಡದಲ್ಲಿ (ಈಗ ಕಲರ್ಸ್ ಕನ್ನಡ ) ಮೊದಲ ಸೀಸನ್ ರಿಯಾಲಿಟಿ ಶೋ ಅನ್ನು 2013 ರಲ್ಲಿ ಹೋಸ್ಟ್ ಮಾಡಲು ಕಿಚ್ಚ ಸುದೀಪ ಅವರನ್ನು ನೇಮಿಸಲಾಯಿತು.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.