The most-visited ಕನ್ನಡ Wikipedia articles, updated daily. Learn more...
ಸ್ಥೂಲವಾಗಿ 630–740 nmಗಳಷ್ಟು ತರಂಗದೂರ ವ್ಯಾಪ್ತಿಯಲ್ಲಿ ಪ್ರಧಾನವಾಗಿ ಮಾನವ ಕಣ್ಣು ಗ್ರಹಿಸಬಲ್ಲ ದೀರ್ಘವಾದ ತರಂಗದೂರಗಳಲ್ಲಿರುವ ಬೆಳಕಿನಲ್ಲಿರುವ ಬಹು ಸಂಖ್ಯೆಯ ಸದೃಶ ವರ್ಣ/ಬಣ್ಣಗಳಲ್ಲಿ ಯಾವುದೇ ಬಣ್ಣವು ಕೆಂಪು ಆಗಿರುತ್ತದೆ. ಇದಕ್ಕಿಂತ ಉದ್ದವಾದ ತರಂಗದೂರಗಳನ್ನು ಅತಿಗೆಂಪು ಅಥವಾ ರಕ್ತಾತೀತ (ಕೆಂಪಿಗಿಂತ ಕೆಳಗಿನದು ) ಎಂದು ಕರೆಯಲಾಗುವುದಲ್ಲದೇ ಇವನ್ನು ಮಾನವನ ಬರಿಗಣ್ಣಿಂದ ನೋಡಲು ಸಾಧ್ಯವಿಲ್ಲ. ಕೆಂಪನ್ನು RGB ವರ್ಣ/ಬಣ್ಣ ವ್ಯವಸ್ಥೆಗಳಲ್ಲಿ ಹಸಿರುನೀಲಿಗೆ ಪೂರಕವಾಗಿ ಸಂಯೋಜನೀಯ/ಸೇರಿಸುವ ಬೆಳಕಿನ ಮೂಲ/ಪ್ರಾಥಮಿಕ ವರ್ಣ/ಬಣ್ಣಗಳಲ್ಲಿ ಒಂದಾಗಿ ಬಳಸಲಾಗುವುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಆಯುರ್ವೇದದ ಪ್ರಕಾರ, ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು ವಸ್ತುಗಳಲ್ಲಿ ಒಂದು. ಇಪ್ಪತ್ತನೇ ಶತಮಾನದ ಸಾಹಿತ್ಯದಿಂದ ಆರಂಭಗೊಂಡು, ಈ ಕಲ್ಪನೆಯನ್ನು ತ್ರಿದೋಷೋಪದೇಶ ಎಂದು ಕರೆಯಲಾಗುತ್ತಿದೆ. ಅಧಿಕೃತ ಆಯುರ್ವೇದ ಶಾಸ್ತ್ರಗ್ರಂಥಗಳು ಶರೀರದಲ್ಲಿ ಈ ಮೂರು ವಸ್ತುಗಳ ಪ್ರಮಾಣ ಮತ್ತು ಗುಣಮಟ್ಟಗಳು ಹೇಗೆ ಋತುಗಳು, ದಿನದ ಸಮಯ, ಆಹಾರ ಮತ್ತು ಹಲವು ಇತರ ಅಂಶಗಳ ಪ್ರಕಾರ ಏರಿಳಿಯುತ್ತವೆ ಎಂದು ವಿವರಿಸುತ್ತವೆ.
ಸಮಾಜ ವಿಜ್ಞಾನವು ಶೈಕ್ಷಣಿಕ ಅಧ್ಯಾಯನದ ಒಂದು ವರ್ಗವಾಗಿದ್ದು, ಸಮಾಜಕ್ಕೆ ಸಂಬಂಧಿಸಿದೆ ಮತ್ತು ಸಮಾಜದೊಳಗಿನ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಸಮಾಜ ವಿಜ್ಞಾನವು ಅನೇಕ ಶಾಖೆಗಳನ್ನು ಹೊಂದಿದೆ. ಸಮಾಜ ವಿಜ್ಞಾನವು ಈ ಕೆಳಗಿನವುಗಳನ್ನು ಒಳಗೊಂಡಿದ್ದು, ಆದರೆ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ: ಮಾನವಶಾಸ್ತ್ರ, ಪುರಾತತ್ವ, ಸಂವಹನ ಅಧ್ಯಯನಗಳು, ಅರ್ಥಶಾಸ್ತ್ರ, ಇತಿಹಾಸ, ಸಂಗೀತಶಾಸ್ತ್ರ, ಮಾನವ ಭೌಗೋಳಿಕತೆ, ನ್ಯಾಯಶಾಸ್ತ್ರ, ಭಾಷಾಶಾಸ್ತ್ರ, ರಾಜ್ಯಶಾಸ್ತ್ರ , ಮನೋವಿಜ್ಞಾನ, ಸಾರ್ವಜನಿಕ ಆರೋಗ್ಯ ಮತ್ತು ಸಮಾಜಶಾಸ್ತ್ರ .
ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ.ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ.ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ.ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.ಸಾಂಸ್ಕೃತಿಕವಾಗಿ ಹಲವಾರು ಚಿಂತಕರು, ಕಲಾವಿದರು,ವಿಜ್ಞಾನಿಗಳನ್ನು ಹೊಂದಿ ಈಗಲೂ ಪ್ರಪಂಚದ ಗಮನಸೆಳೆಯುತ್ತಿದೆ. ಪ್ರಪಂಚದಲ್ಲಿ ನಾಲ್ಕನೆಯದಾಗಿ ಅತೀ ಹೆಚ್ಚು ಪಾರಂಪರಿಕ ತಾಣಗಳಿದ್ದು, ವರ್ಷಕ್ಕೆ ೮ ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುತ್ತಿದೆ. ಫ್ರಾನ್ಸ್ ಅಧಿಕೃತವಾಗಿ ರೇಪಬ್ಲೀಕ್ ಫ್ರಾನ್ಸೇಸ್.
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ರೋನಾಲ್ಡ್ ವಿಲ್ಸನ್ ರೀಗನ್ (/reɪɡən/; ಫೆಬ್ರುವರಿ 6, 1911 - ಜೂನ್ 5, 2004) ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು.
ಗಾಟ್ಫ್ರೈಡ್ ವಿಲ್ಹೆಲ್ಮ್ ಲೆಬ್ನಿಜ್
ಗಾಟ್ಫ್ರೈಡ್ ವಿಲ್ಹೆಲ್ಮ್ (1 ಜುಲೈ 1646 [O.S. 21 ಜೂನ್] - 14 ನವೆಂಬರ್ 1716) ಜರ್ಮನ್ ಪಾಲಿಮಾತ್ ಮತ್ತು ತತ್ವಜ್ಞಾನಿ.ಗಣಿತಶಾಸ್ತ್ರ ಮತ್ತು ತತ್ತ್ವಶಾಸ್ತ್ರಜ್ನ . ಅವನು ಯಾಂತ್ರಿಕ ಕ್ಯಾಲ್ಕುಲೇಟರ್ ಕ್ಷೇತ್ರದಲ್ಲಿ ಅತ್ಯಂತ ಸಮೃದ್ಧ ಸಂಶೋಧಕನಾಗಿದ್ದನು. ಪ್ಯಾಸ್ಕಲ್ನ ಕ್ಯಾಲ್ಕುಲೇಟರ್ಗೆ ಸ್ವಯಂಚಾಲಿತ ಗುಣಾಕಾರ ಮತ್ತು ವಿಭಜನೆಯನ್ನು ಸೇರಿಸುವುದರಲ್ಲಿ ಕೆಲಸ ಮಾಡುತ್ತಿದ್ದಾಗ, ಅವರು 1685 ರಲ್ಲಿ ಪಿನ್ವೀಲ್ ಕ್ಯಾಲ್ಕುಲೇಟರ್ ಅನ್ನು ಮೊದಲು ವಿವರಿಸಿದರು ಮತ್ತು ಅರಿತ್ಮೊಮೀಟರ್ನಲ್ಲಿ ಬಳಸಿದ ಲೆಬ್ನಿಜ್ ಚಕ್ರವನ್ನು ಮೊದಲ ಬಾರಿಗೆ ನಿರ್ಮಿಸಿದ ಯಾಂತ್ರಿಕ ಕ್ಯಾಲ್ಕುಲೇಟರ್ ಅನ್ನು ಕಂಡುಹಿಡಿದರು.
ಜರ್ಮನ್ ಭಾಷೆ ([Deutsch] Error: {{Lang}}: text has italic markup (help), [ಡಾಯ್ಶ್ ) ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದು. ಇಂಡೊ-ಯುರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿರುವ ಈ ಭಾಷೆಯು ಆಂಗ್ಲ ಭಾಷೆ ಮತ್ತು ಡಚ್ ಭಾಷೆಗಳಿಗೆ ಅತ್ಯಂತ ಸಮೀಪ ಸಂಬಂಧ ಹೊಂದಿದೆ. ವಿಶ್ವಾದ್ಯಂತ, ಸುಮಾರು 120 ದಶಲಕ್ಷ ಜನರು ಜರ್ಮನ್ ಭಾಷೆ ಮಾತನಾಡುವರು, ಅಲ್ಲದೆ 80 ದಶಲಕ್ಷ ಪರಸ್ಥಳೀಯರೂ ಸಹ ಜರ್ಮನ್ ಭಾಷೆ ಮಾತನಾಡಬಲ್ಲರು.
ಸಂಯುಕ್ತ ಸಂಸ್ಥಾನದ ಸೈನ್ಯ ವು ಸಂಯುಕ್ತ ಸಂಸ್ಥಾನದ ಸಶಸ್ತ್ರ ಪಡೆ ಗಳ ಒಂದು ಶಾಖೆಯಾಗಿದ್ದು, ಭೂ-ನೆಲೆಯ ಸೇನಾ ಕಾರ್ಯಾಚರಣೆಗಳಿಗೆ ಜವಾಬ್ದಾರವಾಗಿದೆ. ಇದು ಅಮೆರಿಕ ಸೈನ್ಯದ ಅತ್ಯಂತ ದೊಡ್ಡ ಮತ್ತು ಹಳೆಯ ಸ್ಥಾಪಿತ ಶಾಖೆಯಾಗಿದೆ ಮತ್ತು ಏಳು ಅಮೆರಿಕದ ಸಮವಸ್ತ್ರಸಹಿತ ಸೇವೆ (ಯುನಿಫಾರ್ಮ್ಡ್ ಸರ್ವಿಸಸ್)ಗಳಲ್ಲಿ ಒಂದಾಗಿದೆ. ಆಧುನಿಕ ಸೈನ್ಯವು ಭೂಖಂಡ (ಕಾಂಟಿನೆಂಟಲ್) ಸೈನ್ಯ ಯಲ್ಲಿ ತನ್ನ ಬೇರುಗಳನ್ನು ಹೊಂದಿದ್ದು, ೧೭೭೫ರ ಜೂನ್ ೧೪ರಂದು ರೂಪುಗೊಂಡಿತು.
ಪೀಟರ್ ಹೇಡನ್ ಡಿಂಕ್ಲೇಜ್ (ಜನನ ಜೂನ್ 11, 1969) ಒಬ್ಬ ಅಮೇರಿಕದ ನಟ. ಅವರು ಎಲ್ಫ್ (2003), ಫೈ೦ಡ್ ಮಿ ಗಿಲ್ಟಿ (2006), ಅಂಡರ್ಡಾಗ್ (2007), ಡೆತ್ ಅಟ್ ಎ ಫ್ಯೂನರಲ್ (2010) ಮತ್ತು ಐಸ್ ಏಜ್: ಕಾಂಟಿನೆಂಟಲ್ ಡ್ರಿಫ್ಟ್ (2012) ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ . ಇವರು ಗೇಮ್ ಆಫ್ ಥ್ರೋನ್ಸ್ ನಲ್ಲಿ ಟಿರಿಯನ್ ಲಾನ್ನಿಸ್ಟರ್ ಪಾತ್ರಕ್ಕಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎಮ್ಮಿ ಪ್ರಶಸ್ತಿಗಳಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ವೆನಿಸ್ (ಇಟಾಲಿಯನ್:Venezia, IPA: [veˈnεttsia], ವೆನೆಷಿಯನ್: ವೆನೆಷಿಯ ) ಉತ್ತರ ಇಟಲಿಯ ಒಂದು ನಗರವಾಗಿದ್ದು 271,367 ಜನಸಂಖ್ಯೆಯ (1 ಜನವರಿ 2004 ಜನಗಣನೆಯ ಪ್ರಕಾರ) ವೆನೆಟೊ ಪ್ರದೇಶದ ರಾಜಧಾನಿ. ಪಡುವಾ ಜೊತೆ ಸೇರಿ, ಈ ನಗರ ಪಡುವಾ-ವೆನಿಸ್ ಮಹಾನಗರ ಪ್ರದೇಶದ ಭಾಗವಾಗಿದೆ (ಜನಸಂಖ್ಯೆ 1,600,000). ಐತಿಹಾಸಿಕವಾಗಿ ಈ ನಗರ ಒಂದು ಸ್ವತಂತ್ರ ರಾಷ್ಟ್ರವಾಗಿತ್ತು.
ದಂಡಯಾತ್ರೆ ಎಂದರೆ ಯುದ್ಧದಲ್ಲಿ ಒಂದು ನಿರ್ದಿಷ್ಟ ಘಟ್ಟವಾಗಿ ಕೈಗೊಂಡ ಸೇನಾಕಾರ್ಯಾಚರಣೆ ಯಾ ಪರಸ್ಪರ ಸಂಬಂಧಿತ ಕಾರ್ಯಾಚರಣೆಗಳು ಅಥವಾ ಒಟ್ಟಾರೆ ಯುದ್ಧನೀತಿಯ (ಸ್ಟ್ರ್ಯಾಟಜಿ) ಕಾರ್ಯಾಚರಣೆ (ಕೇಂಪೇನ್). ವಿಶೇಷ ಕಾರಣಕ್ಕಾಗಿ ನಡೆಸುವ ಸೇನಾ ಮುನ್ನಡೆಗೂ ಈ ಹೆಸರುಂಟು. ದೀರ್ಘಾವಧಿಯ ಯುದ್ಧದಲ್ಲಿ ಒಂದು ಮಹಾನಾಯಕತ್ವದ ಅಧೀನವಾಗಿ ಹಲವಾರು ಉಪನಾಯಕತ್ವಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕದನಗಳಲ್ಲಿ ಉದ್ಯುಕ್ತವಾಗಿರಬಹುದು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ಮಹಾತ್ಮ ಜ್ಯೋತಿಬಾ ಫುಲೆ (೧೮೨೭ - ೧೮೯೦) ಅವರು ಆಧುನಿಕ ಮಹಾರಾಷ್ಟ್ರದ ಸಾಮಾಜಿಕ ಕ್ರಾಂತಿಯ ಮೂಲಪುರುಷರಲ್ಲಿ ಪ್ರಮುಖರು. ಸಮಾಜ ಸುಧಾರಕರಾಗಿ, ಸಮಾನತೆಯ ಹರಿಕಾರರಾಗಿ ದೀನ, ದಲಿತ ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದವರು. ಇವರು ಜನಸಾಮಾನ್ಯರು ಡಾಂಭಿಕ ಧರ್ಮ, ಪಂಥ, ಸಂಪ್ರದಾಯ ಮುಂತಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕೆಂದು ಅಪೇಕ್ಷೆ ಪಟ್ಟವರು.ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಕನ್ನಡದಲ್ಲಿರುವ ಬಹುತೇಕ ಕೃತಿಗಳಲ್ಲಿ "ಜ್ಯೋತಿಬಾ ಫುಲೆ" ಎಂಬ ಹೆಸರೆ ಬಳಕೆಯಲ್ಲಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ೨೦೧೫-೨೦೧೬ನೇ ಸಾಲಿನಲ್ಲಿ ಪ್ರಾರಂಭವಾಗಿತ್ತು.ಈ ಅಭಿಯಾನವು ಅಧಿ ಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭಮಾಡಿದರು. ಸ್ವಚ್ಛ ಭಾರತ ಅಭಿಯಾನದ ಅಕ್ಟೋಬರ್ ೨ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ಸ್ವತಃ ಕೈಯಲ್ಲಿ ಪೊರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ. ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ತಾವೇನೂ ಮಾಡಲಾಗದೇ, ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ.