The most-visited ಕನ್ನಡ Wikipedia articles, updated daily. Learn more...
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜಲಿಯನ್ವಾಲಾ ಬಾಗ್ ಹತ್ಯಾಹಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು., ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು ೧೮೦೦ಕ್ಕೂ ಹೆಚ್ಚು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜಲಿಯನ್ ವಾಲಾ ಬಾಗ್(Hindi: जलियांवाला बाग) ಎನ್ನುವ ಹೆಸರು ಪ್ರತೀ ಭಾರತೀಯರನ್ನು ಬೆಚ್ಚಿ ಬೀಳಿಸುವಂತಹ ಹೆಸರು, ಬ್ರಿಟಿಷರ ಕಾಲದಲ್ಲಿ ನಡೆದ ನರಮೇಧವೇ ಇದಕ್ಕಿರುವ ಕಾರಣ. ಸುಮಾರು ಆರುವರೆ ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಜಲಿಯನ್ ವಾಲಾ ಬಾಗ್ ಈಗ ಸಾರ್ವಜನಿಕ ಉದ್ಯಾನವನವಾಗಿದ್ದು ಭಕ್ತಿ ಪರವಶತೆಗೆ ಹೆಸರಾಗಿರುವ ಪಂಜಾಬಿನ ಅಮೃತಸರ ನಗರದಲ್ಲಿದೆ. ರಾಷ್ಟೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದಿರುವ ಈ ಸ್ಮಾರಕ ಸ್ಥಳವನ್ನು ಪಂಜಾಬ್ ರಾಜ್ಯೋತ್ಸವದ ದಿನವಾದ 13 ಎಪ್ರಿಲ್, 1961ರಂದು ಅಂದಿನ ರಾಷ್ಟ್ರಪತಿ ಡಾ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಆವಿಷ್ಕರಣ ಶಬ್ದದ ಇತರ ಬಳಕೆಗಳಿಗಾಗಿ ಆವಿಷ್ಕರಣ (ದ್ವಂದ್ವ ನಿವಾರಣೆ) ನೋಡಿ.ಆವಿಷ್ಕರಣ ಎಂದರೆ ಒಂದು ಅನನ್ಯ ಅಥವಾ ನವೀನ ಉಪಕರಣ, ವಿಧಾನ, ರಚನೆ ಅಥವಾ ಪ್ರಕ್ರಿಯೆ. ಆವಿಷ್ಕರಣದ ಪ್ರಕ್ರಿಯೆಯು ಒಟ್ಟಾರೆ ಶಿಲ್ಪಶಾಸ್ತ್ರ ಮತ್ತು ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯೊಳಗಿನ ಪ್ರಕ್ರಿಯೆ. ಅದು ಒಂದು ಯಂತ್ರ ಅಥವಾ ಉತ್ಪನ್ನದಲ್ಲಿ ಸುಧಾರಣೆಯಾಗಿರಬಹುದು ಅಥವಾ ಒಂದು ವಸ್ತುವನ್ನು ಸೃಷ್ಟಿಸಲು ಹೊಸ ವಿಧಾನವಾಗಿರಬಹುದು ಅಥವಾ ಒಂದು ಫಲಿತಾಂಶವಾಗಿರಬಹುದು.
ಕಲಾವಿದನು ಕಲೆಯನ್ನು ಸೃಷ್ಟಿಸುವ, ಕಲೆಗಳನ್ನು ಅಭ್ಯಾಸಮಾಡುವ, ಅಥವಾ ಕಲೆಯನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ. ದಿನನಿತ್ಯದ ಮಾತು ಮತ್ತು ಶೈಕ್ಷಣಿಕ ಪ್ರವಚನ ಎರಡರಲ್ಲೂ 'ಕಲಾವಿದ' ಪದದ ಸಾಮಾನ್ಯ ಬಳಕೆಯೆಂದರೆ ಕೇವಲ ದೃಶ್ಯಕಲೆಗಳಲ್ಲಿನ ಅಭ್ಯಾಸಿ. ಈ ಪದವನ್ನು ಹಲವುವೇಳೆ ಮನೋರಂಜನಾ ವ್ಯವಹಾರದಲ್ಲಿ ಸಂಗೀತಗಾರರು ಮತ್ತು ಇತರ ಪ್ರದರ್ಶಕರಿಗೆ (ಕಡಿಮೆವೇಳೆ ನಟರಿಗಾಗಿ) ಬಳಸಲಾಗುತ್ತದೆ, ವಿಶೇಷವಾಗಿ ವ್ಯಾವಹಾರಿಕ ಸಂದರ್ಭದಲ್ಲಿ.
ದ್ಯಾಟ್ ಸೆವೆಂಟೀಸ್ ಶೋ ಮೇ ೧೭, ೧೯೭೬ ರಿಂದ ಡಿಸೆಂಬರ್ ೩೧, ೧೯೭೯ವರೆಗೆ ಪಾಯಿಂಟ್ ಪ್ಲೇಸ್, ವಿಸ್ಕಾನ್ಸನ್ ಎಂಬ ಕಾಲ್ಪನಿಕ ಉಪನಗರ ಪಟ್ಟಣದಲ್ಲಿರುವ ಹದಿಹರೆಯದ ಸ್ನೇಹಿತರ ಒಂದು ಗುಂಪಿನ ಜೀವನಗಳ ಮೇಲೆ ಕೇಂದ್ರೀಕರಿಸುವ ಅಮೇರಿಕಾದ ಒಂದು ದೂರದರ್ಶನ ಕಾಲಮಾನ ಸಂದರ್ಭ ಹಾಸ್ಯ ಕಾರ್ಯಕ್ರಮ. ಅದರ ಪ್ರಥಮ ಪ್ರದರ್ಶನ ಫ಼ಾಕ್ಸ್ ದೂರದರ್ಶನ ಜಾಲದ ಮೇಲೆ ಆಗಸ್ಟ್ ೨೩, ೧೯೯೮ರಂದು ಆಯಿತು, ಎಂಟು ನಿರಂತರ ಸರಣಿಗಳಾಗಿ ಪ್ರದರ್ಶನ ಕಂಡಮೇಲೆ, ಮೇ ೧೮, ೨೦೦೬ರಂದು ೨೦೦ನೇ ಸಂಚಿಕೆಯೊಂದಿಗೆ ಕೊನೆಗೊಂಡಿತು. ಮುಖ್ಯ ಹದಿಹರೆಯದ ಪಾತ್ರವರ್ಗದಲ್ಲಿ ಟೋಫ಼ರ್ ಗ್ರೇಸ್, ಮಿಲಾ ಕುನಿಸ್, ಆಶ್ಟನ್ ಕುಚರ್, ಡ್ಯಾನಿ ಮಾಸ್ಟರ್ಸನ್, ಲಾವುರಾ ಪ್ರೀಪಾನ್, ಮತ್ತು ವಿಲ್ಮರ್ ವಾಲ್ಡರಾಮಾ ಇದ್ದರು.
ಲಾರ್ಜ್ ಹ್ಯಾಡ್ರಾನ್ ಕೊಲೈಡರ್ (ಎಲ್ ಎಚ್ ಸಿ) ಪ್ರಪಂಚದ ಅತ್ಯಂತ ಬೃಹತ್ ಹಾಗು ಅತ್ಯಂತ ಶಕ್ತಿಯುತ ಉಪಪರಮಾಣು ಕಣಗಳನ್ನು ತ್ವರಿತಗೊಳಿಸುವ ಉಪಕರಣಗಳ ಸಂಗ್ರಹವಾಗಿದೆ. ಇದನ್ನು ಪ್ರೋಟಾನ್ ಕಣಗಳನ್ನು ಸುಮಾರು ಬೆಳಕಿನ ವೇಗಕ್ಕೆ ತ್ವರಿತಗೊಳಿಸಿ ಅವುಗಳನ್ನು ಅಪ್ಪಳಿಸಲು ನಿರ್ಮಿಸಲಾಗಿದೆ. ಯುರೋಪಿನ ಅಣು ಸಂಶೋಧನೆ ಸಂಸ್ಥೆ (CERN) ಮುಂದಾಳತ್ವದಲ್ಲಿ ಇದನ್ನು ಜಿನೀವದ ಬಳಿ ಸ್ವಿಟ್ಜರ್ಲ್ಯಾಂಡ್ ಮತ್ತು ಫ್ರಾನ್ಸ್ ದೇಶಗಳ ಗಡಿಯ ನೆಲದಡಿ ನಿರ್ಮಿಸಲಾಗಿದೆ.
ಪದದ ಅತ್ಯಂತ ನಿರ್ದಿಷ್ಟ ಬಳಕೆಯಲ್ಲಿ ಚಲಾವಣೆ ವಾಸ್ತವಿಕ ಬಳಕೆಯಲ್ಲಿದ್ದಾಗ ಯಾವುದೇ ರೂಪದಲ್ಲಿನ ಹಣವನ್ನು ಸೂಚಿಸುತ್ತದೆ, ವಿಶೇಷವಾಗಿ ನೋಟುಗಳನ್ನು ಮತ್ತು ನಾಣ್ಯಗಳನ್ನು. ಚಲಾವಣೆಯು (ನಾಣ್ಯಪದ್ಧತಿ) ಸಾಮಾನ್ಯ ಬಳಕೆಯಲ್ಲಿನ, ವಿಶೇಷವಾಗಿ ಒಂದು ದೇಶದಲ್ಲಿ ಬಳಕೆಯಲ್ಲಿರುವ, ಒಂದು ಹಣದ ವ್ಯವಸ್ಥೆ ಎನ್ನುವುದು ಹೆಚ್ಚು ಸಾಮಾನ್ಯ ವ್ಯಾಖ್ಯಾನ. ಅಮೇರಿಕದ ಡಾಲರ್, ಬ್ರಿಟನ್ನ ಪೌಂಡ್, ಯೂರೋಪ್ನ ಯೂರೊ, ಭಾರತದ ರೂಪಾಯಿ ಚಲಾವಣೆಯ ಉದಾಹರಣೆಗಳು.
ಅಮೆರಿಕಸ್ ಅಥವಾ ಅಮೆರಿಕ ವು,ಸ್ಪ್ಯಾನಿಷ್: Américaಪೋರ್ಚುಗೀಸ್:AméricaFrench: AmériqueDutch: [Amerika] Error: {{Lang}}: text has italic markup (help) ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ. ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ.
ಒಂದು ಕಾಲದಲ್ಲಿ ಪ್ರಾಮಿಸರಿ ನೋಟ್ ಒಂದು ಸ್ಥಿರ ಅಥವಾ ನಿರ್ಧಾರದ ಪ್ರಮಾಣ ಪತ್ರ, ಒಂದು ಪಕ್ಷದಿಂದ(ತಯಾರಕ ಅಥವಾ ನೀಡುವವರು) ಇನ್ನೊಂದು ಪಕ್ಷಕ್ಕೆ(ಸ್ವೀಕರಿಸುವವರು) ಇತರೆ ಮೊತ್ತವನ್ನು ಭವಿಷ್ಯದಲ್ಲಿ ಕೊಡುವಂತೆಸಮಯ ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ಸ್ವೀಕರಿಸುವವ ಬೇಡಿಕೆಯ ಮೇಲೆ ಬರವಣಿಗೆಯ ರೂಪದಲ್ಲಿ ಭರವಸೆಯಾಗಿ ಕೊಡುತಿದ್ದರು. ಇದರಲ್ಲಿ ಕಾನೂನಿನ ಸಾಧನವಾಗಿದ್ದು (ವಿಶೇಷವಾಗಿ ಒಂದು ಹಣಕಾಸಿನ),. ಪ್ರಾಮಿಸರಿ ನೋಟ್ ಬೇಷರತ್ತಾದ ಮತ್ತು ಸುಲಭವಾಗಿ ಮಾರಲು ಯೋಗ್ಯವಾದ ಪ್ರಮಾಣ ಪತ್ರ, ಇದೊಂದು ರೀರಿಯಲ್ಲಿ ಇದನ್ನು ನೆಗೋಶಬಲ್ ವಾದ್ಯ ಎಂದು ಕರೆಯಲಾಗುತ್ತದೆ.
ನಿಮಿಷ ಎಂಬುವುದು ಕಾಲದ ಒಂದು ಏಕಮಾನವಾಗಿದ್ದು ಸಾಮಾನ್ಯವಾಗಿ ಒಂದು ಗಂಟೆಯ 1⁄60 ಭಾಗಕ್ಕೆ (ಅರುವತ್ತರ ಮೊದಲ ಭಿನ್ನರಾಶಿ) ಅಥವಾ ೬೦ ಸೆಕೆಂಡುಗಳಿಗೆ ಸಮಾನವಾಗಿರುತ್ತದೆ. ಯುಟಿಸಿ ಸಮಯ ಸ್ತರದಲ್ಲಿ, ಅಪರೂಪದ ಸಂದರ್ಭಗಳಲ್ಲಿ ನಿಮಿಷವು ೬೧ ಸೆಕೆಂಡುಗಳನ್ನು ಹೊಂದಿರುತ್ತದೆ. ಇದು ಅಧಿಕ ಸೆಕೆಂಡುಗಳ ಪರಿಣಾಮವಾಗಿರುತ್ತದೆ (ಋಣಾತ್ಮಕ ಅಧಿಕ ಸೆಕೆಂಡನ್ನು ಸೇರಿಸುವ ನಿಯಮವಿದೆ, ಇದರಿಂದ ೫೯ ಸೆಕೆಂಡುಗಳ ನಿಮಿಷವಾಗುತ್ತದೆ, ಆದರೆ ಈ ವ್ಯವಸ್ಥೆಯಡಿ ೪೦ ವರ್ಷಗಳಿಗಿಂತ ಹೆಚ್ಚು ಸಮಯದಲ್ಲಿ ಇದು ಎಂದೂ ಆಗಿಲ್ಲ).
ಸನ್ನದು (ಅಧಿಕಾರಪತ್ರ) ಎಂದರೆ ನೀಡುವವನು ನಿರ್ದಿಷ್ಟಪಡಿಸಿದ ಹಕ್ಕುಗಳನ್ನು ಚಲಾಯಿಸುವ ಪಡೆಯುವವನ ವಿಶೇಷಾಧಿಕಾರವನ್ನು ವಿಧ್ಯುಕ್ತವಾಗಿ ಒಪ್ಪುತ್ತಾನೆ ಎಂದು ಹೇಳಿ ಅಧಿಕಾರ ಅಥವಾ ಹಕ್ಕುಗಳನ್ನು ನೀಡುವುದು. ನೀಡುವವನು ಪ್ರಾಧಾನ್ಯತೆಯನ್ನು (ಅಥವಾ ಸಾರ್ವಭೌಮತ್ವ) ಉಳಿಸಿಕೊಳ್ಳುತ್ತಾನೆ, ಮತ್ತು ಪಡೆಯುವವನು ಸಂಬಂಧದೊಳಗೆ ಸೀಮಿತ (ಅಥವಾ ಕೆಳಗಣ) ಸ್ಥಾನವನ್ನು ಒಪ್ಪಿಕೊಳ್ಳುತ್ತಾನೆ ಎಂಬುದು ಸೂಚ್ಯವಾಗಿದೆ, ಮತ್ತು ಈ ಅರ್ಥದಲ್ಲಿ ಐತಿಹಾಸಿಕವಾಗಿ ಸನ್ನದುಗಳನ್ನು ನೀಡಲಾಗುತ್ತಿತ್ತು, ಮತ್ತು ಆ ಅರ್ಥವನ್ನೇ ಈ ಪದದ ಆಧುನಿಕ ಬಳಕೆಯಲ್ಲಿ ಉಳಿಸಿಕೊಳ್ಳಲಾಗಿದೆ.
ಜೇಮ್ಸ್ ಫ್ರಾನ್ಸಿಸ್ ಕ್ಯಾಮೆರಾನ್ (ಜನನ ಆಗಸ್ಟ್ ೧೬, ೧೯೫೪) ಒಬ್ಬ ಕೆನೇಡಿಯನ್ ಚಲನಚಿತ್ರ ನಿರ್ಮಾಪಕ, ಆವಿಷ್ಕಾರಿ, ಎಂಜಿನಿಯರ್, ಫಿಲಾಂತ್ರೊಪಿಸ್ಟ್, ಮತ್ತು ಸಮುದ್ರ-ಆಳದ ಅನ್ವೇಷಕರಾಗಿದ್ದಾರೆ. ದಿ ಟರ್ಮಿನೇಟರ್ (೧೯೮೪) ಎಂಬ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಚಲನಚಿತ್ರದ ಮೂಲಕ ಇವರು ತಮ್ಮ ಪ್ರಥಮ ಪ್ರಮುಖ ಯಶಸ್ಸನ್ನು ಕಂಡುಕೊಂಡರು. ಅನಂತರ ಅವರು ಹಾಲಿವುಡ್ನ ಸುಪ್ರಸಿದ್ಧ ನಿರ್ದೇಶಕರಾದರು.
ರಾಜೀನಾಮೆ ಎಂದರೆ ಒಬ್ಬರ ಹುದ್ದೆ ಅಥವಾ ಸ್ಥಾನವನ್ನು ಬಿಟ್ಟುಕೊಡುವ ಅಥವಾ ತ್ಯಜಿಸುವ ಔಪಚಾರಿಕ ಕ್ರಿಯೆ. ಚುನಾವಣೆ ಅಥವಾ ನೇಮಕಾತಿ ಮೂಲಕ ಪಡೆದಿರುವ ಒಂದು ಸ್ಥಾನವನ್ನು ಹೊಂದಿರುವ ವ್ಯಕ್ತಿಯು ಆ ಸ್ಥಾನದಿಂದ ಕೆಳಗಿಳಿದಾಗ ರಾಜೀನಾಮೆ ಆಗಬಹುದು. ಆದರೆ ಆ ಅವಧಿಯ ಮುಕ್ತಾಯದ ನಂತರ ಆ ಸ್ಥಾನವನ್ನು ತ್ಯಜಿಸುವುದನ್ನು, ಅಥವಾ ಹೆಚ್ಚುವರಿ ಅವಧಿಯನ್ನು ಕೋರುವುದನ್ನು ಇಷ್ಟಪಡದಿರುವುದನ್ನು ರಾಜೀನಾಮೆ ಎಂದು ಪರಿಗಣಿಸಲಾಗುವುದಿಲ್ಲ.
21 ನೇ ಶತಮಾನದ ಕೌಶಲ್ಯಗಳ ಸಾಮರ್ಥ್ಯಗಳನ್ನು ಮತ್ತು ಕಲಿಕೆಯ ಸ್ವರೂಪಗಳನ್ನು ಒಳಗೊಂಡಿರುತ್ತವೆ, ಇದನ್ನು 21 ನೇ ಶತಮಾನದ ಸಮಾಜದಲ್ಲಿ ಯಶಸ್ಸಿಗೆ ಅಗತ್ಯವೆಂದು ಗುರುತಿಸಲಾಗಿದೆ ಮತ್ತು ಶಿಕ್ಷಣತಜ್ಞರು, ವ್ಯಾಪಾರ ಮುಖಂಡರು, ಶಿಕ್ಷಣ ತಜ್ಞರು ಮತ್ತು ಸರ್ಕಾರಿ ಸಂಸ್ಥೆಗಳು ವೇಗವಾಗಿ ಬದಲಾಗುತ್ತಿರುವ, ವಿದ್ಯುನ್ಮಾನ ಸಮಾಜದಲ್ಲಿ ಯಶಸ್ಸಿನ ತಯಾರಿಯಲ್ಲಿ ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳಲು ಬೇಕಾದ ಕೌಶಲ್ಯಗಳನ್ನು ಕೇಂದ್ರೀಕರಿಸಲು ಬೆಳೆಯುತ್ತಿರುವ ಅಂತರರಾಷ್ಟ್ರೀಯ ಚಳುವಳಿ ಒಂದು ಭಾಗವಾಗಿದೆ. ಈ ಕೌಶಲ್ಯಗಳು ಅನೇಕ ಆಳವಾದ ಕಲಿಕೆಯೊಂದಿಗೆ ಸಂಬಂಧ ಹೊಂದಿವೆ, ಇದು ವಿಶ್ಲೇಷಣಾತ್ಮಕ ತಾರ್ಕಿಕತೆ, ಸಂಕೀರ್ಣ ಸಮಸ್ಯೆಗೆ ಪರಿಹಾರ ಮತ್ತು ತಂಡದ ಕೆಲಸಗಳಂತಹ ಪ್ರವೀಣತೆಯ ಕೌಶಲ್ಯಗಳನ್ನು ಆಧರಿಸಿದೆ. ಈ ಕೌಶಲ್ಯಗಳು ಸಾಂಪ್ರದಾಯಿಕ ಶೈಕ್ಷಣಿಕ ಕೌಶಲ್ಯಗಳಿಂದ ಭಿನ್ನವಾಗಿವೆ, ಏಕೆಂದರೆ ಅವು ಪ್ರಾಥಮಿಕವಾಗಿ ವಿಷಯ ಜ್ಞಾನ-ಆಧಾರಿತವಲ್ಲ.20 ನೇ ಶತಮಾನದ ನಂತರದ ದಶಕಗಳಲ್ಲಿ ಮತ್ತು 21 ನೇ ಶತಮಾನದವರೆಗೆ, ಸಮಾಜವು ಆರ್ಥಿಕತೆ ಮತ್ತು ತಂತ್ರಜ್ಞಾನದಲ್ಲಿ ಬದಲಾವಣೆಯ ವೇಗವನ್ನು ಪಡೆದುಕೊಂಡಿದೆ.
ರೈಲುಸಾರಿಗೆಯು ಪ್ರಯಾಣಿಕರನ್ನೂ ಸರಕನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸಲು ಇರುವ ಪ್ರಮುಖ ಸಾರಿಗೆ ವ್ಯವಸ್ಥೆಗಳ ಪೈಕಿ ಒಂದು (ರೈಲ್ವೆ ಟ್ರಾನ್ಸ್ಪೋರ್ಟ್, ರೈಲ್ ಟ್ರಾನ್ಸ್ಪೋರ್ಟ್). ರಸ್ತೆ ಸಾರಿಗೆ, ಜಲಸಾರಿಗೆ ಮತ್ತು ವಾಯುಸಾರಿಗೆಗಳು ಇತರ ಸಾರಿಗೆ ವ್ಯವಸ್ಥೆಗಳು. ರೈಲುಸಾರಿಗೆ ವ್ಯವಸ್ಥೆಯಲ್ಲಿ ನೆಲದ ಮೇಲೆ ಹಾಕಿರುವ ಎರಡು ಸಮಾಂತರ ಉಕ್ಕಿನ ಹಳಿಗಳ ಮೇಲೆ ಸಂಪರ್ಕವಿಟ್ಟುಕೊಂಡು, ಚಲಿಸುವ ಚಕ್ರಗಳಿರುವ, ಹಬೆ ಇಲ್ಲವೆ ಡೀಸಲ್ ಇಂಧನ ಬಳಸಿ ಮುಂದೆ ಸಾಗುವ ಯಾಂತ್ರಿಕ ಇಲ್ಲವೆ ವಿದ್ಯುಚ್ಚಾಲಿತ ಕರ್ಷಣದ ಏರ್ಪಾಡು ಇರುತ್ತದೆ.
ರಷ್ಯಾ (Russian: Россия), ಅಧಿಕೃತವಾಗಿ ರಸಿಸ್ಕಾಯಾ ಫೇಡರಾಟ್ಸಿಯ (Russian: Российская Федерация - ರಷ್ಯಾದ ಒಕ್ಕೂಟ), ಉತ್ತರ ಯುರೇಷಿಯಾ (ಯುರೋಪ್ ಹಾಗೂ ಏಷ್ಯಾ ಒಟ್ಟಿಗೆ) ದಲ್ಲಿರುವ ಒಂದು ದೇಶ. ಇದೊಂದು 83 ಬಿಡಿ ಸಂಸ್ಥಾನಗಳನ್ನು ಹೊಂದಿರುವ ಅರೆ-ಅಧ್ಯಕ್ಷೀಯ ಒಕ್ಕೂಟವಾಗಿದೆ. ರಷ್ಯಾ ತನ್ನ ಭೂಗಡಿಗಳನ್ನು ಈ ದೇಶಗಳೊಂದಿಗೆ ಹಂಚಿಕೊಂಡಿದೆ (ವಾಯುವ್ಯದಿಂದ ಆಗ್ನೇಯದವರೆಗೆ) : ನಾರ್ವೆ, ಫಿನ್ಲ್ಯಾಂಡ್, ಎಸ್ಟೊನಿಯಾ, ಲಾಟ್ವಿಯಾ, ಲಿಥುವೇನಿಯಾ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಪೋಲೆಂಡ್ (ಕಲಿನಿನ್ಗ್ರಾಡ್ ಓಬ್ಲಸ್ಟ್ ಮೂಲಕ), ಬೆಲಾರೂಸ್, ಉಕ್ರೇನ್, ಜಾರ್ಜಿಯಾ, ಅಜರ್ಬೈಜಾನ್, ಕಜಕ್ಸ್ತಾನ್, ಚೀನಾ, ಮಂಗೋಲಿಯಾ ಮತ್ತು ಉತ್ತರ ಕೊರಿಯಾ.
ರಾಕ್ಸ್ಟಾರ್ ಗೇಮ್ಸ್ ನ್ಯೂಯಾರ್ಕ್ ಸಿಟಿ ಮೂಲದ ಬಹುರಾಷ್ಟ್ರೀಯ ವೀಡಿಯೊ ಗೇಮ್ ಡೆವಲಪರ್ ಮತ್ತು ಪ್ರಕಾಶಕರಾದ, ಟೇಕ್ ಟು ಸಂವಹನ ಒಡೆತನದ ಕ೦ಪನಿ, ಮತ್ತು ಬ್ರಿಟಿಷ್ ನ ವಿಡಿಯೋ ಗೇಮ್ ಪ್ರಕಾಶಕರ ಬಿಎಂಜಿ ಇಂಟರ್ಯಾಕ್ಟಿವ್ ನ ಖರೀದಿಸಿದ ಕ೦ಪನಿ. ಈ ಪ್ರಕಾಶಕರು ತಮ್ಮ ಗ್ರ್ಯಾಂಡ್ ಥೆಫ್ಟ್ ಆಟೋ, ಮ್ಯಾಕ್ಸ್ ಪೇನ್, ಲಾ ನೊಯಿರ್ವು, ವಾರಿಯರ್ಸ್, ಬುಲ್ಲಿ, ಮ್ಯಾನ್ ಹ೦ಟ್, ಮಿಡ್ನೈಟ್ ಕ್ಲಬ್ ಮತ್ತು ಕೆಂಪು ಡೆಡ್ ಆಟಗಳು ಮತ್ತು ತಮ್ಮ ಪಂದ್ಯಗಳಲ್ಲಿ ಅಲ್ಲದೆ ತೆರೆದ ಪ್ರಪಂಚದ ಬಳಕೆಗೆ, ಮತ್ತು ಉಚಿತ ರೋಮಿಂಗ್ ಸೆಟ್ಟಿಂಗ್ಸ್ಳಿಗೆ ಹೆಸರುವಾಸಿಯಾಗಿದೆ. ಈ ಕ೦ಪನಿ ಇತರರಿ೦ದ ಆಂತರಿಕವಾಗಿ ರಚಿಸಲಾದ ಸ್ವಾಧೀನಪಡಿಸಿಕೊಂಡ ಮತ್ತು ಮರುನಾಮಕರಣಗೊ೦ದ ಸ್ಟುಡಿಯೋಗಳನ್ನು ಒಳಗೊಂಡಿದೆ.
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಸ್ವಿಟ್ಜರ್ಲೆಂಡ್ (German: [die Schweiz] Error: {{Lang}}: text has italic markup (help) French: la Suisse, ಇಟಾಲಿಯನ್:Svizzera, Romansh: [Svizra] Error: {{Lang}}: text has italic markup (help)), ಅಧಿಕೃತವಾಗಿ ಸ್ವಿಸ್ ಒಕ್ಕೂಟ (ಲ್ಯಾಟಿನ್ನಲ್ಲಿ ಕಾನ್ಪೊಡೆರೇಷ್ಯೋ ಹೆಲ್ವೆಟಿಕಾ, ಆದ್ದರಿಂದ ಇದರ ISO ರಾಷ್ಟ್ರ ಸಂಕೇತಗಳಾಗಿ CH ಮತ್ತು CHEಯನ್ನು ನಿಗದಿಪಡಿಸಲಾಗಿದೆ), ಸುತ್ತಲೂ ಭೂಪ್ರದೇಶದಿಂದ ಆವೃತವಾದ ಪರ್ವತ ಪ್ರದೇಶ ಸುಮಾರು 7.7 ದಶಲಕ್ಷ ಜನಸಂಖ್ಯೆ(2009ರಲ್ಲಿ)ಯನ್ನು ಹೊಂದಿರುವ 41,285 km²ನಷ್ಟು ವಿಸ್ತೀರ್ಣವಿರುವ ಪಶ್ಚಿಮ ಯೂರೋಪ್ನ ರಾಷ್ಟ್ರವಾಗಿದೆ. ಸ್ವಿಟ್ಜರ್ಲೆಂಡ್ ಕ್ಯಾಂಟನ್ಗಳೆಂದು ಕರೆಯಲಾಗುವ 26 ರಾಜ್ಯಗಳನ್ನು ಹೊಂದಿರುವ ಸಂಯುಕ್ತ ಗಣರಾಜ್ಯವಾಗಿದೆ. ಬರ್ನ್ ರಾಜ್ಯಾಡಳಿತದ ಅಧಿಕಾರ ಕೇಂದ್ರವಾಗಿದ್ದರೆ, ಇದರ ಎರಡು ಜಾಗತಿಕ ಮಹಾನಗರಗಳಾದ ಜಿನೀವಾ ಮತ್ತು ಜ್ಯೂರಿಚ್ಗಳು ರಾಷ್ಟ್ರದ ಆರ್ಥಿಕ ಕೇಂದ್ರಗಳಾಗಿವೆ.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.