The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಶಕುನ ಎಂದರೆ ಹಲವುವೇಳೆ ಬದಲಾವಣೆಯ ಆಗಮನವನ್ನು ಸೂಚಿಸುವ, ಭವಿಷ್ಯವನ್ನು ನುಡಿಯುತ್ತದೆಂದು ನಂಬಲಾದ ಒಂದು ವಿದ್ಯಮಾನ. ಶಕುನಗಳು ತಮ್ಮ ದೇವತೆಗಳಿಂದ ದೈವಿಕ ಸಂದೇಶವನ್ನು ತರುತ್ತವೆ ಎಂದು ಪ್ರಾಚೀನ ಕಾಲದಲ್ಲಿ ಜನರು ನಂಬಿದ್ದರು.ಈ ಶಕುನಗಳಲ್ಲಿ ನೈಸರ್ಗಿಕ ವಿದ್ಯಮಾನಗಳು, ಉದಾಹರಣೆಗೆ ಗ್ರಹಣ, ಪ್ರಾಣಿಗಳು ಮತ್ತು ಮನುಷ್ಯರ ಅಸಹಜ ಜನನಗಳು ಮತ್ತು ಬಲಿಗೆ ಹೊರಟಿರುವ ಬಲಿಯ ಕುರಿಮರಿಯ ವರ್ತನೆ ಸೇರಿವೆ. ಈ ಶಕುನಗಳನ್ನು ವಿವರಿಸಲು ದೈವಜ್ಞರು ಎಂಬ ತಜ್ಞರಿದ್ದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಭಾರತದ ಸಂಸತ್ತು ಭಾರತದ ಗಣರಾಜ್ಯದ ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಳುಳ್ಳ (ಉಭಯ ಸದನಿಕ) ಸರ್ವೋಚ್ಚ ವಿಧಾಯಕ ಘಟಕವಾಗಿದೆ. ಭಾರತದ ರಾಷ್ಟ್ರಪತಿಯವರ ಕಚೇರಿ, "ರಾಜ್ಯಸಭಾ" ಎಂದು ಕರೆಯಲ್ಪಡುವ ರಾಜ್ಯಗಳ ಪರಿಷತ್ತು ಆಗಿರುವ ಒಂದು ಮೇಲ್ಮನೆ, ಮತ್ತು "ಲೋಕಸಭಾ" ಎಂದು ಕರೆಯಲ್ಪಡುವ ಪ್ರಜಾಪ್ರತಿನಿಧಿಗಳ ಸಭೆಯಾಗಿರುವ ಒಂದು ಕೆಳಮನೆಯನ್ನು ಇದು ಒಳಗೊಂಡಿದೆ. ನವದೆಹಲಿಯಲ್ಲಿನ ಸಂಸದ್ ಭವನದಲ್ಲಿರುವ (ಇದನ್ನು ಸಾಮಾನ್ಯವಾಗಿ ಸಂಸದ್ ಮಾರ್ಗ ಎಂದು ಕರೆಯಲಾಗುತ್ತದೆ) ಪ್ರತ್ಯೇಕ ಶಾಸನಸಭೆಗಳಲ್ಲಿ ಎರಡೂ ಸದನಗಳು ಸಭೆ ಸೇರುತ್ತವೆ.
ಈ ಪುಟದಲ್ಲಿ ಕಾಲ್ಪನಿಕ ಮತ್ತು ಆಧಾರಗಳಿಲ್ಲದ ವಿಷಯ ಮತ್ತು ನಿರೂಪಣೆಯ ಅನೇಕ ದೋಷಗಳಿವೆ. ಇದರ ಬದಲು ಮೈ.ವಿಕೋ.ದ ಲೇಖನವನ್ನು ಆದಿ ಶಂಕರ ಲೇಖನಕ್ಕೆ ಪೂರಕವಾಗಿ ಹಾಕಬಹುದು. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆದಿಶಂಕರಾಚಾರ್ಯಭಾರತದ ಸಾಂಸ್ಕ್ರತಿಕ ಇತಿಹಾಸದಲ್ಲಿ ಧ್ರುವ ನಕ್ಷತ್ರದಂತೆ ಪ್ರಕಾಶಮಾನರಾಗಿರುವ ಮಹಾಪುರುಷರಲ್ಲಿ ಶಂಕರಾಚಾರ್ಯರು ಪ್ರಮುಖರು.ಭಾರತದಲ್ಲಿ ಮಾತ್ರವಲದೆ, ಜಗತಿನ ತತ್ವ ಶಾಸ್ತ್ರದ ಇತಿಹಾದಲ್ಲಿ ಎಂದೆಂದಿಗೂ ಶಾಶ್ವತವಾಗಿ ಉಳಿಯುವ ಹೆಸರು ಶ್ರೀ ಶಂಕರಚಾರ್ಯರದು.
ಸ್ವಾತಂತ್ರ್ಯ ಬಂದಾಗಿನಿಂದಲೂ, ಭಾರತದಲ್ಲಿನ ಚುನಾವಣೆಗಳು ತಮ್ಮ ವಿಕಸನದಲ್ಲಿ ಸುದೀರ್ಘವಾದ ಹಾದಿಯನ್ನು ಸವೆಸಿವೆಯಾದರೂ, ಅಷ್ಟು ಸಮಯವೂ ಚುನಾವಣೆಗಳು ಸ್ವತಂತ್ರ ಭಾರತದ ಒಂದು ಗಮನಾರ್ಹವಾದ ಸಾಂಸ್ಕೃತಿಕ ಅಂಶವೆನಿಸಿಕೊಂಡಿವೆ. 2004ರಲ್ಲಿ ನಡೆದ ಭಾರತೀಯ ಚುನಾವಣೆಗಳು 670 ದಶಲಕ್ಷಕ್ಕೂ ಹೆಚ್ಚಿನ ಜನರಿರುವ ಮತದಾರ ಸಮುದಾಯವೊಂದನ್ನು ಒಳಗೊಂಡಿದ್ದವು; ಇದು ಮುಂದಿನ ಅತಿದೊಡ್ಡ ಸ್ಥಾನವನ್ನು ಹೊಂದಿರುವ ಯುರೋಪಿನ ಸಂಸತ್ ಚುನಾವಣೆಗಳಿಗೆ ಹೋಲಿಸಿದಾಗ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿನದು ಎನಿಸಿಕೊಂಡಿತ್ತು. ಅಷ್ಟೇ ಅಲ್ಲ, 1989ರ ವೆಚ್ಚಗಳಿಗೆ ಹೋಲಿಸಿದಾಗ ಈ ಅವಧಿಯ ಘೋಷಿತ ಖರ್ಚುವೆಚ್ಚವು ಮೂರುಪಟ್ಟು ಹೆಚ್ಚಾಗಿ, ಅದು ಬಹುಮಟ್ಟಿಗೆ 300 ದಶಲಕ್ಷ $ನಷ್ಟು ಪ್ರಮಾಣವನ್ನು ತಲುಪಿತ್ತು ಮತ್ತು ಈ ಚುನಾವಣೆಯಲ್ಲಿ 1 ದಶಲಕ್ಷಕ್ಕೂ ಹೆಚ್ಚಿನ ವಿದ್ಯುನ್ಮಾನ ಮತದಾನ ಯಂತ್ರಗಳು ಬಳಸಲ್ಪಟ್ಟವು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ತರ್ಕ ಮತ್ತು ವಿವೇಚನೆಗಳ ಸಹಾಯದಿಂದ ಪ್ರಪಂಚ, ಜೀವನ, ಅಸ್ತಿತ್ವ, ದೈವತ್ವ, ನೈಜತೆ, ಮುಂತಾದ ಆಳವಾದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವನ ಯತ್ನವನ್ನು ತತ್ತ್ವಶಾಸ್ತ್ರ ಎಂದು ಪರಿಗಣಿಸಬಹುದು. ಪ್ರಪಂಚವನ್ನು ಪರಿಶೀಲಿಸುವ ಇತರ ಮಾನವ ಯತ್ನಗಳು ವಿಜ್ಞಾನ ಮತ್ತು ಧಾರ್ಮಿಕತೆ. ಆದರೆ ತತ್ತ್ವಶಾಸ್ತ್ರದಲ್ಲಿ ವಾದಗಳನ್ನು ವಿಜ್ಞಾನದಂತೆ ಪ್ರಯೋಗ ಅಥವಾ ಅನುಭವದಿಂದ ಧೃಡಪಡಿಸಲಾಗುವುದಿಲ್ಲ ಮತ್ತು ಧಾರ್ಮಿಕತೆಯಲ್ಲಿರುವಂತೆ ನಂಬಿಕೆ ಅಥವಾ ದೈವಪ್ರೇರಣೆಯನ್ನು ಅವಲಂಬಿಸುವುದಿಲ್ಲ.
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್
ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಚಲನಚಿತ್ರಗಳ ಕಲೆ ಹಾಗೂ ವಿಜ್ಞಾನದ ಪ್ರಗತಿಗೆ ಮೀಸಲಾಗಿರುವ ಒಂದು ವೃತ್ತಿಪರ ಗೌರವ ಸಂಘಟನೆಯಾಗಿದೆ. ಅಕಾಡೆಮಿಯು ಸುಮಾರು ೬೦೦೦ ಚಲನಚಿತ್ರ ವೃತ್ತಿಪರರನ್ನು ಕೂಡಿದೆ. ಸದಸ್ಯರು ಬಹಳಷ್ಟು ಯುನೈಟೆಡ್ ಸ್ಟೇಟ್ಸ್ ಆಧರಿಸಿವೆ, ಸದಸ್ಯತ್ವ ಜಗತ್ತಿನ ಅರ್ಹ ಚಿತ್ರ ನಿರ್ಮಾಪಕರು/ನಿರ್ದೇಶಕರುಗಳಿಗೆ ತೆರೆದಿರುತ್ತದೆ.
ಡೇವಿಡ್ ಕ್ರೇನ್ ಹಾಗೂ ಮಾರ್ಟಾ ಕಾಫ಼್ಮಾನ್ ರಿಂದ ತಯಾರಿತ ಫ಼್ರೆಂಡ್ಸ್, ಅಮೇರಿಕಾದ ಒಂದು ಧಾರಾವಾಹಿಯಾಗಿದೆ. ಸಾಂದರ್ಭಿಕ ಹಾಸ್ಯ ಧಾರಾವಾಹಿಯಾಗಿರುವ ಇದು ಎನ್.ಬಿ.ಸಿ ವಾಹಿನಿಯಲ್ಲಿ ಸೆಪ್ಟಂಬರ್ ೨೨, ೧೯೯೪ ರಿಂದ ಮೇ ೬, ೨೦೦೪ ರ ವರೆಗೆ ಪ್ರಸಾರಗೊಂಡಿತು. ಮೆನ್ಹಾಟನ್ ನ ಒಂದು ಸ್ನೇಹಿತರ ಬಳಗದ ಕಥೆಯ ಸುತ್ತ ತಿರುಗುವ ಈ ಸರಣಿಯು ವಾರ್ನರ್ಸ್ ಬ್ರದರ್ಸ್ ಟೆಲಿವಿಶನ್ ನ ಸಹಯೋಗದೊಂದಿಗೆ ಬ್ರೈಟ್/ಕಾಫ಼್ಮಾನ್/ಕ್ರೇನ್ ಪ್ರೊಡಕ್ಶನ್ಸ್ ನಿಂದ ನಿರ್ಮಿಸಲ್ಪಟ್ಟಿದೆ.
ಜ್ಯೋತಿ ಬಸು (ಬಂಗಾಳಿ: জ্যোতি বসু, ೮ ಜುಲೈ ೧೯೧೪ – ೧೭ ಜನೆವರಿ ೨೦೧೦) ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ್ದ ಪಶ್ಚಿಮ ಬಂಗಾಳದ ಒಬ್ಬ ರಾಜಕಾರಣಿಯಾಗಿದ್ದರು. ಅವರು ೧೯೭೭ರಿಂದ ೨೦೦೦ರ ವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಭಾರತದ ಯಾವುದೇ ರಾಜ್ಯದಲ್ಲಿ ಅತಿ ದೀರ್ಘಾವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಗೌರವಕ್ಕೆ ಪಾತ್ರರಾಗಿದ್ದರು. ಅವರು, ಪಕ್ಷದ ಸ್ಥಾಪನೆಯಾದ ೧೯೬೪ರಿಂದ ೨೦೦೮ರ ವರೆಗೆ, ಸಿಪಿಐ(ಎಂ) ಪಾಲಿಟ್ಬ್ಯೂರೋದ ಸದಸ್ಯರಾಗಿದ್ದರು.
ಡೊರೆಮನ್(ಜಪಾನೀಸ್ ಭಾಷೆ: ドラえもん ) ಎಂಬುದು ಪಾನೀಸ್ ಮಂಗಾ ಸರಣಿಯಾಗಿದ್ದು, ಇದನ್ನು ಫ್ಯೂಜಿಕೊ ಎಫ್. ಫ್ಯೂಜಿಯೊ ಬರೆದು ವಿವರಿಸಿದ್ದಾರೆ. ಮಂಗಾವನ್ನು ಡಿಸೆಂಬರ್ ೧೯೬೯ ರಲ್ಲಿ ಮೊದಲ ಬಾರಿಗೆ ಧಾರಾವಾಹಿ ಮಾಡಲಾಯಿತು, ಅದರ ೧೩೪೫ ಪ್ರತ್ಯೇಕ ಅಧ್ಯಾಯಗಳನ್ನು ೪೫ ಟ್ಯಾಂಕೋಬಾನ್ ಸಂಪುಟಗಳಲ್ಲಿ ಸಂಕಲಿಸಲಾಗಿದೆ ಮತ್ತು ಶೋಗಾಕುಕನ್ ಅವರು ೧೯೭೦ ರಿಂದ ೧೯೯೬ ರವರೆಗೆ ಪ್ರಕಟಿಸಿದರು.
ರಾಜನೀತಿ (ಸಂಸ್ಕೃತದಿಂದ: राजनीति, राज [ರಾಜ]+नीति [ನೀತಿ] ಪದಗಳ ಜೋಡಣೆಯಿಂದ ಬರುವುದು, ರಾಜನೀತಿ, 'ಆಡಳಿತದ ಅಧಿಕಾರದ ಜತೆ ಸಂಬಂಧವಿಟ್ಟುಕೊಂಡಿರುವ ಸಮಾಹ') ಗುಂಪುಗಳಲ್ಲಿ ನಿರ್ಧಾರ ಮಾಡುಲು ಸಂಬಂಧಿಸಿದ ಚಟುವಟಿಕೆಗಳ, ಅಥವಾ ವ್ಯಕ್ತಿಗಳ ಮಧ್ಯೆ ಅಧಿಕಾರದ ಸಂಬಂಧಗಳ ರೂಪಗಳ ಕ್ಷೇತ್ರ, ಉದಾಹರಣೆಗೆ ಸಂಪನ್ಮೂಲಗಳ ಮತ್ತು ಸ್ಥಾನಮಾನಗಳ ಹಂಚಿಕೆ. ಸಾಮಾಜಿಕ ವಿಜ್ಞಾನದಲ್ಲಿ ರಾಜನೀತಿ ಮತ್ತು ಸರ್ಕಾರವನ್ನು ಅಧ್ಯಯಿಸುವ ಶಾಖೆಯನ್ನು ರಾಜ್ಯಶಾಸ್ತ್ರವೆಂದು ಕರೆಯಲಾಗುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಊಳಿಗಮಾನ ಪದ್ಧತಿ ಅನ್ನುವುದು ಶ್ರೀಮಂತರ(ಒಡೆಯ ಅಥವಾ ಧಣಿ), ಮತ್ತು ಹಿಡುವಳಿದಾರರ (ರೈತ) ನಡುವಿನ ಆಳ್ವಿಕೆಯ ಮತ್ತು ಮಿಲಿಟರಿ ಪದ್ಧತಿ. ಊಳಿಗಮಾನ ಪದ್ಧತಿಯು ಒಂಬತ್ತನೆಯ ಶತಮಾನದಿಂದ ಹದಿನೈದನೆಯ ಶತಮಾನದವರೆಗೂ ಪ್ರವರ್ಧ ಮಾನದಲ್ಲಿತ್ತು. ಇದರ ಅತ್ಯಂತ ಉನ್ನತ ಅರ್ಥದಲ್ಲಿ, ಊಳಿಗಮಾನ ಪದ್ಧತಿಯನ್ನು ಮಧ್ಯಯುಗದ ಯುರೋಪಿನ ಆಳ್ವಿಕೆಯ ಪದ್ದತಿಗೆ ಸೂಚಿಸಲಾಗಿದ್ದು ಪರಸ್ಪರ ಕಾನೂನು ಬದ್ದ ಮತ್ತು ಸೈನಿಕ ಉದಾತ್ತಗುಣದ ನಡುವಿನ ಮಿಲಿಟರಿ ಜವಾಬ್ದಾರಿಗಳಿಂದ ರಚಿಸಲ್ಪಟ್ಟು, ಮೂರು ಪ್ರಮುಖ ಪರಿಕಲ್ಪನೆಗಳಾದ ಒಡೆಯರ, ಹಿಡುವಳಿದಾರರ, ಮತ್ತು ಉಂಬಳಿಗಳ ಸುತ್ತ ಸುತ್ತುತ್ತದೆ.
REDIRECT Template:Infobox province or territory of Canadaಕ್ವಿಬೆಕ್ /kəˈbɛk/ ಅಥವಾ /kwɨˈbɛk/ (French: Québec [kebɛk] ( )) , ಇದು ಪೂರ್ವ-ಮಧ್ಯ ಕೆನಡಾದ ಒಂದು ಪ್ರಾಂತ್ಯ. ಇದು ಕೆನಡಾದ ಏಕಮಾತ್ರ ಫ್ರೆಂಚ್-ಮಾತನಾಡುವ ಅಭಿನ್ನತೆಯ ಪ್ರಬಲ ಪ್ರಾಂತ್ಯ ಹಾಗೂ ಇಲ್ಲಿಯ ಪೂರ್ಣ ಅಧಿಕೃತ ಭಾಷೆ ಪ್ರಾಂತೀಯ ಮಟ್ಟದಲ್ಲಿ ಕೂಡ ಫ್ರೆಂಚ್ ಆಗಿದೆ. ಕ್ವಿಬೆಕ್ ವಿಸ್ತಾರದಲ್ಲಿ ಕೆನಡಾದ ಅತಿ ದೊಡ್ಡ ಪ್ರಾಂತ್ಯ ಹಾಗೂ ಆಡಳಿತದ ವಿಭಾಗದಲ್ಲಿ ಎರಡನೇಯ ಸ್ಥಾನದಲ್ಲಿದೆ; ಕ್ವಿಬೆಕ್ ಅಲ್ಲದೇ ಬರಿ ನನುವಟ್ ರಾಜ್ಯಕ್ಷೇತ್ರ ಒಂದು ಇಲ್ಲಿ ದೊಡ್ಡದಾಗಿದೆ.
ವಿಕಟ ವಿನೋದ (ಫ್ರೆಂಚ್ ನ ಹ್ಯೂಮರ್ ನಾಯರ್ ನಿಂದ ಬಂದಿದೆ) ಎಂಬುದು ಅತಿವಾಸ್ತವಿಕತವಾದಿ ಸಿದ್ಧಾಂತಿಯಾದ ಆಂಡ್ರೆ ಬ್ರೆಟನ್ 1935 ರಲ್ಲಿ ರಚಿಸಿದ ಪದವಾಗಿದೆ, ಇದನ್ನು ಹಾಸ್ಯ ಮತ್ತು ವಿಡಂಬನೆ ಯ ಪ್ರಕಾರವನ್ನು ಸೂಚಿಸಲೆಂದು ರಚಿಸಿದರು. ಈ ಪ್ರಕಾರದಲ್ಲಿ ಸಿನಿಕತೆ ಮತ್ತು ಸಂದೇಹವಾದದಿಂದ ವಿನೋದವನ್ನು ಮಾಡಲಾಗುತ್ತದೆ. ವಿಕಟ ವಿನೋದವೆಂಬುದು ಸಾವಿನ ವಿಷಯದ ಮೇಲೆ ಮಾಡಲಾಗುವ ವಿಡಂಬನೆಯಾಗಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ವಿಶ್ವಕ್ಕೆ 'ರೀಸ್ ವಿದರ್ಸ್ಪೂನ್ ' ಎಂದು ಪರಿಚಿತರಾದ ಲಾರಾ ಜೀನ್ ರೀಸ್ ವಿದರ್ಸ್ಪೂನ್ (ಜನನ: 22 ಮಾರ್ಚ್ 1976) ಅಮೆರಿಕಾದ ಒಬ್ಬ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. 1988ರಲ್ಲಿ ಅವರು ಮೂರು ಪ್ರಮುಖ ಚಲನಚಿತ್ರಗಳಲ್ಲಿ ನಟಿಸಿದರು: ಒವರ್ನೈಟ್ ಡೆಲಿವರಿ , ಪ್ಲೆಸೆಂಟ್ವಿಲ್ಲೆ ಮತ್ತು ಟ್ವಿಲೈಟ್ . ಇದರ ಮಾರನೆಯ ವರ್ಷ, ರೀಸ್ ವಿದರ್ಸ್ಪೂನ್ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ಎಲೆಕ್ಷನ್ ಎಂಬ ಚಲನಚಿತ್ರದಲ್ಲಿ ನಟಿಸಿದರು.
ಇಂಟೆಲ್ ಕಾರ್ಪೊರೇಶನ್ (NASDAQ: INTC; SEHK: 4335; Euronext: INCO) ಒಂದು ಅಮೆರಿಕಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ. ಇದು ಆದಾಯದ ಆಧಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಅರೆವಾಹಕ(ಸೆಮಿಕಂಡಕ್ಟರ್) ಚಿಪ್ ತಯಾರಕವಾಗಿದೆ. ಇದು ಹೆಚ್ಚಿನ ವೈಯಕ್ತಿಕ ಕಂಪ್ಯೂಟರ್ಗಳಲ್ಲಿ ಕಂಡುಬರುವ ಸಂಸ್ಕಾರಕಗಳಾದ x86 ಸರಣಿಯ ಮೈಕ್ರೋಪ್ರೋಸೆಸರ್ಗಳ(ಸೂಕ್ಷ್ಮಸಂಸ್ಕಾರಕಗಳ) ಸೃಷ್ಟಿಕರ್ತವಾಗಿದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಸ್ಟೇಜ್ ಹೆಸರು ಲೇಡಿ ಗಾಗಾ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದ ಸ್ಟೆಫನಿ ಜೋನ್ನೆ ಆಂಜೆಲಿನಾ ಜರ್ಮಾನೊಟ್ಟಾ (ಮಾರ್ಚ್ ೨೮, ೧೯೮೬ ರಂದು ಜನಿಸಿದರು) ಇವರು ಅಮೇರಿಕಾದ ಒಬ್ಬ ಹಾಡುಗಾರ್ತಿ-ಕವನಬರಹಗಾರರಾಗಿದ್ದರು. ರಲ್ಲಿ ನ್ಯೂಯಾರ್ಕ್ ನಗರದ ಲೋವರ್ ಈಸ್ಟ್ ಸೈಡ್ನ ರಾಕ್ ಸಂಗೀತ ದೃಶ್ಯದಲ್ಲಿ ಪಾಲ್ಗೊಂಡ ನಂತರ ಮತ್ತು ನಂತರದಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ದ ಆರ್ಟ್ಸ್ನಲ್ಲಿ ದಾಖಲಾತಿಯನ್ನು ಪಡೆದ ನಂತರ, ಆಕೆಯು ಸ್ಟ್ರೀಮ್ಲೈನ್ ರೆಕಾರ್ಡ್ಸ್, ಇಂಟರ್ಸ್ಕೋಪ್ ರೆಕಾರ್ಡ್ಸ್ನ ಒಂದು ಪ್ರಕಾಶನ ಮುದ್ರೆಯಾಗಿತ್ತು. ಇಂಟರ್ಸ್ಕೋಪ್ನಲ್ಲಿನ ಮೊದಲ ಅವಧಿಯ ಸಮಯದಲ್ಲಿ, ಅವರು ತಮ್ಮ ಸಹ ಕಲಾಕಾರರಿಗೆ ಕವನಬರಹಗಾರರಾಗಿ ಕಾರ್ಯನಿರ್ವಹಿಸಿದರು ಮತ್ತು ರಾಪರ್ ಆಕೋನ್ರ ಗಮನವನ್ನು ತಮ್ಮೆಡೆಗೆ ಸೆಳೆದರು, ಆಕನ್ ಆಕೆಯ ಹಾಡುಗಾರಿಕೆಯ ಸಾಮರ್ಥ್ಯಗಳನ್ನು ಗುರುತಿಸಿದರು, ಮತ್ತು ತಮ್ಮ ಸ್ವಂತ ಲೇಬಲ್ ಕಾನ್ ಲೈವ್ ಡಿಸ್ಟ್ರಿಬ್ಯೂಷನ್ನಲ್ಲಿ ಆಕೆಯನ್ನು ದಾಖಲಾತಿ ಮಾಡಿಕೊಂಡರು.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.