The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಮುತ್ತುಗಳು -ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ, ತನ್ನ್ನ ಆಕಾರ, ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ, ಜನರನ್ನು ವಶೀಕರಿಸುತ್ತಾ ಬಂದಿದೆ. ಎಲ್ಲರನ್ನು ಪ್ರಾಚೀನ ಕಾಲದಿಂದಲೇ ತನ್ನ ಕಡೆ ಹಾಗು ತನ್ನ ಜನ್ಮರಹಸ್ಯದ ಕಡೆಗೆ ಸೆಳೆಯುತ್ತಾ ಬಂದಿರುವ ಈ ರತ್ನದ ಜನ್ಮವು ಒಂದು ನಿಜವಾದ ಪವಾಡವೇ ಎಂದು ಹೇಳಬಹುದು. ಎಲ್ಲಾ ಬೆಲೆಬಾಳುವ ರತ್ನಗಳು ಅಂದರೆ ವಜ್ರ, ಪಚ್ಚೆ, ಮಾಣಿಕ್ಯದಂತಹ ಹರಳುಗಳು ಹಾಗು ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ಲೋಹಗಳು ಭೂಮಿಯನ್ನು ಅಗೆದಾಗ ಸಿಗುತ್ತವೆ.
ಉಬ್ಬರ: ಮೈಯಲ್ಲಿರುವ, ಕೂಡಿಸುವ ಊತಕದ (ಕನೆಕ್ಟಿವ್ ಟಿಷ್ಯು) ಜೀವಕಣಗಳ ನಡುವಣ ತೆರಪುಗಳಲ್ಲೂ ರಸಿಕೆಯ (ಸೀರಮ್) ಪೊಳ್ಳುಗಳಲ್ಲೂ ನೀರಿನಂತಿರುವ ದ್ರವ ಸೇರಿಕೊಂಡು ಉಬ್ಬಿರುವಿಕೆ (ಈಡೀಮ). ಹೀಗೆ ಊದಿರುವ ಊತಕಗಳನ್ನು ಚುಚ್ಚಿದರೆ ತೆಳುವಾದ ಹೆಪ್ಪುಗಟ್ಟದ ರಸ ಒಸರುವುದು. ರಕ್ತದಲ್ಲಿನ ರಸಿಕೆಯನ್ನು ತೀರ ಹೆಚ್ಚು ಸೋಸಿ ಬಳಸಿರುವ ಈ ರಸದಲ್ಲಿ ಒಂದಿಷ್ಟು ಪ್ರೋಟೀನೂ ಇರುತ್ತದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಇಂಡಿಯನ್, ಬೂದುಕಂಠ, ಸಿಲೋನ್ ಅಥವಾ ಕೊಲಂಬೊ ಕಾಗೆ, ಎಂದೂ ಕರೆಯಲ್ಪಡುವ ಭಾರತೀಯ ಕಾಗೆ ಅಥವಾ ಮನೆ ಕಾಗೆ ( ಕಾರ್ವುಸ್ ಸ್ಪ್ಲೆಂಡೆನ್ಸ್ ) ಏಷ್ಯಾದ ಮೂಲದ ಕಾಗೆ ಕುಟುಂಬದ ಒಂದು ಸಾಮಾನ್ಯ ಹಕ್ಕಿಯಾಗಿದ್ದು, ಈಗ ವಿಶ್ವದ ಅನೇಕ ಭಾಗಗಳಲ್ಲಿ ಕಂಡುಬರುತ್ತದೆ. ಹಣೆಯ, ತಲೆ, ಗಂಟಲು ಮತ್ತು ಎದೆಯ ಮೇಲ್ಭಾಗವು ಸಮೃದ್ಧವಾಗಿ ಕಪ್ಪು ಬಣ್ಣದ್ದು, ಕುತ್ತಿಗೆ ಮತ್ತು ಸ್ತನವು ಹಗುರವಾದ ಬೂದು-ಕಂದು ಬಣ್ಣದಲ್ಲಿರುತ್ತದೆ. ರೆಕ್ಕೆಗಳು, ಬಾಲ ಮತ್ತು ಕಾಲುಗಳು ಕಪ್ಪು ಬಣ್ಣದಲ್ಲಿರುತ್ತವೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಆಲಿಯಮ್ ಸ್ಯಾಟೀವಮ್, ಸಾಮಾನ್ಯವಾಗಿ ಬೆಳ್ಳುಳ್ಳಿ ಎಂದು ಪರಿಚಿತವಿರುವ ಈರುಳ್ಳಿ ಪಂಗಡ ಆಲಿಯಮ್ನಲ್ಲಿನ ಒಂದು ಜಾತಿ. ಅದರ ನಿಕಟ ಸಂಬಂಧಿಗಳು ಈರುಳ್ಳಿ, ಶ್ಯಾಲಟ್, ಲೀಕ್, ಚೈವ್ ಮತ್ತು ರ್ಯಾಕ್ಯೊವನ್ನು ಒಳಗೊಂಡಿವೆ. ೭,೦೦೦ ವರ್ಷಕ್ಕಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು ಮಧ್ಯ ಏಷ್ಯಾಕ್ಕೆ ಸ್ಥಳೀಯವಾಗಿದೆ ಮತ್ತು ಮೆಡಿಟರೇನಿಯನ್ ಪ್ರದೇಶದಲ್ಲಿ ಬಹಳ ಕಾಲದಿಂದ ಮುಖ್ಯ ಆಹಾರವಾಗಿದೆ, ಮತ್ತು ಏಷ್ಯಾ, ಆಫ಼್ರಿಕಾ, ಹಾಗು ಯೂರೋಪ್ನಲ್ಲಿ ಆಗಾಗ ಬಳಸುವ ರುಚಿಕಾರಕವಾಗಿದೆ.
ಜಾತಿ ಎಂದರೆ ಸಾಮಾಜಿಕ ವರ್ಗೀಕರಣದ ಒಂದು ರೂಪ, ಒಂದು ರೋಗದ ವಿಷಕಾರಿ ಜಂತದ ಅಸ್ತ್ರವಾಗಿ ತಾಂಡವಾಡುತ್ತಿದೆ.ಅಂತರ್ವಿವಾಹ, ಹಲವುವೇಳೆ ವೃತ್ತಿ, ಶ್ರೇಣಿವ್ಯವಸ್ಥೆಯಲ್ಲಿ ಸ್ಥಾನ, ರೂಢಿಗತ ಪರಸ್ಪರ ಸಾಮಾಜಿಕ ಸಂವಹನ, ಮತ್ತು ಬಹಿಷ್ಕಾರವು ಸೇರಿರುವ ಜೀವನಶೈಲಿಯ ಆನುವಂಶಿಕ ವರ್ಗಾವಣೆ ಇದರ ಲಕ್ಷಣಗಳಾಗಿವೆ. ಜಾತಿಯು ಕಾನೂನಾತ್ಮಕವಾಗಿ ನೆಲೆಗೊಂಡಿರುವ ಸಾಮಾಜಿಕ ವರ್ಗಗಳ ವ್ಯವಸ್ಥೆಯ ಅತಿಯಾದ ವಿಕಸನವಾಗಿದೆ. ಜಾತಿ ವ್ಯವಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಇವೆಯಾದರೂ, ಕಟ್ಟುನಿಟ್ಟಾದ ಸಾಮಾಜಿಕ ಗುಂಪುಗಳಾಗಿ ಭಾರತೀಯ ಸಮಾಜದ ವಿಭಜನೆಯು ಇದರ ಮಾದರಿ ಜನಾಂಗೀಯ ಉದಾಹರಣೆಯಾಗಿದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಅಲ್ಜೀರಿಯ (الجزائر, ಅಲ್ ಜಜಾ'ಇರ್ ಬೆರ್ಬೆರ್ನಲ್ಲಿ: , ದ್ಜಾಯೆರ್, ಅಧಿಕೃತವಾಗಿ ಅಲ್ಜೀರಿಯ ಜನ ಪ್ರಜಾತಾಂತ್ರಿಕ ಗಣರಾಜ್ಯ), ಆಫ್ರಿಕಾ ಖಂಡದ ಎರಡನೇ ದೊಡ್ಡ ದೇಶ. ಈಶಾನ್ಯಕ್ಕೆ ಟುನಿಸಿಯ, ಪೂರ್ವಕ್ಕೆ ಲಿಬ್ಯಾ, ಆಗ್ನೇಯಕ್ಕೆ ನೈಜರ್, ನೈರುತ್ಯಕ್ಕೆ ಮಾಲಿ ಮತ್ತು ಮೌರಿಟಾನಿಯ, ಹಾಗು ಪಶ್ಚಿಮಕ್ಕೆ ಮೊರಾಕೊಗಳೊಂದಿಗೆ ಅಲ್ಜೀರಿಯ ಗಡಿಯನ್ನು ಹೊಂದಿದೆ. ರಾಜಧಾನಿ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಅಲ್ಜಿಯರ್ಸ್, ಇದು ಮೆಡಿಟರೇನಿಯನ್ ಕರಾವಳಿಯಲ್ಲಿ ದೇಶದ ದೂರದ ಉತ್ತರದಲ್ಲಿದೆ.
ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ ೩೨ ವರ್ಷಗಳ ಕಾಲ ಜೀವಿಸಿದ್ದರು. ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆ ಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಅರ್ನೆಸ್ಟ್ ಹೆಮಿಂಗ್ವೇ(ಜುಲೈ 21, 1899 – ಜುಲೈ 2, 1961) ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೇರಿಕದ ಬರಹಗಾರ ಮತ್ತು ಪತ್ರಕರ್ತ.೨೦ನೆಯ ಶತಮಾನದ ಒಬ್ಬ ಪ್ರಭಾವೀ ಲೇಖಕ. ತನ್ನ ಹೊಸ ಮಾದರಿಯ ಬರವಣಿಗೆ ಹಾಗೂ ಬದುಕಿನ ಸಾಹಸಶೀಲತೆ ಮುಂದಿನ ತಲೆಮಾರಿನ ಸಾವಿರಾರು ಜನರ ಬರವಣಿಗೆ ಮತ್ತು ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿ. ೧೯೨೦ ರಿಂದ ೧೯೫೦ರ ನಡುವೆ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದ ಇವರಿಗೆ ೧೯೫೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿದೊರೆಯಿತು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಆಧುನಿಕ ಕಲೆ ಎಂಬುದು ಸರಿಸುಮಾರಾಗಿ 1860ರ ದಶಕದಿಂದ 1970ರ ದಶಕದವರೆಗಿನ ವಿಸ್ತರಿತ ಅವಧಿಯ ಸಂದರ್ಭದಲ್ಲಿ ರೂಪುಗೊಂಡ ಕಲಾತ್ಮಕ ಕೃತಿಗಳಿಗೆ ಉಲ್ಲೇಖಿಸಲ್ಪಡುತ್ತದೆ ಮತ್ತು ಆ ಕಾಲದ ಅವಧಿಯಲ್ಲಿ ರೂಪುಗೊಂಡ ಕಲೆಯ ಶೈಲಿ ಮತ್ತು ತತ್ತ್ವವನ್ನು ಸೂಚಿಸುತ್ತದೆ. ಪ್ರಯೋಗಶೀಲತೆಯ ಒಂದು ಉತ್ಸಾಹದಲ್ಲಿ, ಗತಕಾಲದ ಸಂಪ್ರದಾಯಗಳು ಪಕ್ಕಕ್ಕೆ ಎಸೆಯಲ್ಪಡುವುದಕ್ಕೆ ಕಾರಣವಾದ ಕಲೆಯೊಂದಿಗೆ ಈ ಶಬ್ದವು ಸಾಮಾನ್ಯವಾಗಿ ಸಂಬಂಧಹೊಂದಿದೆ. ನೋಡುವಿಕೆಯ ಹೊಸ ವಿಧಾನಗಳೊಂದಿಗೆ ಮತ್ತು ಕಲೆಯ ಮೂಲದ್ರವ್ಯಗಳು ಹಾಗೂ ಕಾರ್ಯಚಟುವಟಿಕೆಗಳ ಸ್ವರೂಪದ ಕುರಿತಾದ ತಾಜಾ ಕಲ್ಪನೆಗಳೊಂದಿಗೆ ಆಧುನಿಕ ಕಲೆಯ ಕಲಾವಿದರು ಪ್ರಯೋಗ ನಡೆಸಿದರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಠೇವಣಿ ಎಂದರೆ ಯಾವುದೇ ಸಂಸ್ಥೆಯಲ್ಲಿ ಇರಿಸಲಾದ ವಿತ್ತೀಯ ಮೊತ್ತ. ಠೇವಣಿಯು ಯಾರಿಂದ ಇರಿಸಲ್ಪಟ್ಟಿರುತ್ತದೆಯೊ ಆ ಪಕ್ಷದ (ವ್ಯಕ್ತಿ ಅಥವಾ ಸಂಸ್ಥೆ) ಜಮಾ ಆಗಿರುತ್ತದೆ, ಮತ್ತು ಅದನ್ನು ಹಿಂದೆ ತೆಗೆದುಕೊಳ್ಳಬಹುದು (ವಾಪಸು ತೆಗೆದುಕೊಳ್ಳುವುದು), ಯಾವುದೋ ಇತರ ಪಕ್ಷಕ್ಕೆ ಹಸ್ತಾಂತರಿಸಬಹುದು, ಅಥವಾ ಮುಂದಿನ ದಿನಾಂಕದಲ್ಲಿ ಖರೀದಿಗೆ ಬಳಸಬಹುದು. ಈ ಹಣಕಾಸು ಪರಿಕಲ್ಪನೆಯನ್ನು ಹಲವುವೇಳೆ ಬ್ಯಾಂಕ್ಗಳ ಸಂಬಂಧ ಬಳಸಲಾಗುತ್ತದೆ, ಏಕೆಂದರೆ ಬ್ಯಾಂಕ್ಗಳಲ್ಲಿ ಠೇವಣಿಗಳು ಸಾಮಾನ್ಯವಾಗಿ ಹಣ ಬರುವ ಮುಖ್ಯ ಮೂಲವಾಗಿರುತ್ತವೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
"ಪಂಚತಂತ್ರ ಕಥೆಗಳ ಮೂಲ ಭಾರತ".ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ( ಸಂಸ್ಕೃತ:पञ्चतन्त्र' )ಐದು ಮೂಲತತ್ವಗಳು'ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, "ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು" ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು "ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ" ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು.
ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ ೯ ರತ್ನಗಳು. ಇವು, ಹವಳ ಮುತ್ತು ವಜ್ರ ವೈಢೂರ್ಯ ಗೋಮೇಧಿಕ ಮರಕತ ಮಾಣಿಕ್ಯ ಪಚ್ಚೆ ನೀಲ ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು.ಅವರೆಂದರೆ ೧ - ಕಾಳಿದಾಸ, ೨ - ವರರುಚಿ, ೩ - ವೇತಾಲ ಭಟ್ಟ , ೪ - ವರಾಹಮಿಹಿರ, ೫ - ಶಂಕು, ೬- ಧನ್ವಂತ್ರಿ, ೭ - ಬ್ರಹ್ಮ ಗುಪ್ತ, ೮ - ಕ್ಷಪಣಕ, ೯- ಅಮರಸಿಂಹ ನವರತ್ನ (ಸಂಸ್ಕೃತ: नवरत्न) ಸಂಸ್ಕೃತದ ಸಂಯೋಜನಾ ಪದದ ಅರ್ಥ "ಒಂಬತ್ತು ರತ್ನಗಳು" ಎಂದು ಆಗಿದೆ. ಈ ಶೈಲಿಯಲ್ಲಿ ನವರತ್ನಗಳನ್ನು ಉಪಯೋಗಿಸಿಕೊಂಡು ರಚಿತವಾದ ಆಭರಣ ಹಿಂದೂ ಧರ್ಮ, ಜೈನ್ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮ ಪ್ರಮುಖ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಇತರ ಧರ್ಮಗಳ ನಡುವೆ ಹೊಂದಿದೆ.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ. ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ ಡೇ). ಮೇ ದಿನ ಅಥವಾ ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖಿನಂದು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.ಕಾರ್ಮಿಕರ ಮೆರೆವಣಿಗೆ, ಪ್ರದರ್ಶನ, ಸಭೆ-ಇವು ಆ ದಿನದ ವಿಶೇಷಗಳು.