The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ತುಳಸಿ (ಒಸಿಮಮ್ ಬೆಸಿಲಿಕಂ )(pronounced /ˈbæzəl/ಅಥವಾ/ˈbeɪzəl/), ಲಾಮಿಯಾಸಿಯೆ(ಪುದೀನ ಸಸ್ಯಗಳು) ಸಸ್ಯ ಜಾತಿಯ, ಎಳೆಯದಾದ, ಬಹಳ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯವಾಗಿದೆ. ತುಳಸಿ ನಳಪಾಕಕ್ಕೆ ಯೋಗ್ಯ ಸಸ್ಯವಾಗಿದ್ದು ಇಟಾಲಿಯನ್ ಪಾಕದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತದೆ. ಜೊತೆಗೆ ಇದು ತೈವಾನ್ ನಂತಹ ಈಶಾನ್ಯ ಏಷಿಯಾ ಹಾಗು ಥೈಲ್ಯಾಂಡ್, ವಿಯೆಟ್ನಾಂ, ಕಾಂಬೋಡಿಯ, ಹಾಗು ಲಾವೋಸ್ ನಂತಹ ಆಗ್ನೇಯ ಏಷಿಯಾದ ಪಾಕಪದ್ದತಿಗಳಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತದೆ.
ಆಭರಣಗಳು ಮನುಷ್ಯನ ಅಲಂಕರಣ ಸಾಧನಗಳಲ್ಲಿ ಒಂದು (ತೊಡುಗೆ); ಅಂಗರಾಗಗಳು (ನೋಡಿ- ಅಂಗರಾಗಗಳು,-ಅಂಗರಾಗಶಾಸ್ತ್ರ) ಮತ್ತು ಉಡುಗೆ ಉಳಿದ ಎರಡು ಸಾಧನಗಳು. ಇವು ವೈಯಕ್ತಿಕ ಶೃಂಗಾರಕ್ಕೆ ಧರಿಸಲಾಗುವ ಬ್ರೋಚುಗಳು, ಉಂಗುರಗಳು, ಕಂಠಹಾರಗಳು, ಕಿವಿಯೋಲೆಗಳು, ಲೋಲಕಗಳು ಮತ್ತು ಕಂಕಣಗಳಂತಹ ಸಣ್ಣ ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುತ್ತವೆ. ರತ್ನಾಭರಣಗಳನ್ನು ಮೈ ಮೇಲೆ ಧರಿಸಬಹುದು ಅಥವಾ ಬಟ್ಟೆಗಳಿಗೆ ಲಗತ್ತಿಸಬಹುದು, ಮತ್ತು ಈ ಪದವು ಬಾಳಿಕೆ ಬರುವ ವಸ್ತುಗಳಿಗೆ ಸೀಮಿತವಾಗಿದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಮಫ್ತಿ ೨೦೧೭ರ ಕನ್ನಡ ಭಾಷೆಯ ಆಕ್ಷನ್ ಕ್ರೈಮ್ ಥ್ರಿಲ್ಲರ್ ಚಿತ್ರ. ನಾರ್ಥನ್ ರವರು ನಿರ್ದೇಶಿರುವ ಮೊದಲ ಚಿತ್ರ ಇದಾಗಿದೆ, ಜಯಣ್ಣ ಕಂಬೈನ್ಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿರುವ ಶ್ರೀಮುರುಳಿಯು ಭೂಗತ ದೊರೆ ಪಾತ್ರದಲ್ಲಿ ನಟಿಸಿರುವ ಶಿವರಾಜಕುಮಾರ್ ಅವರನ್ನು ಹುಡುಕಿಕೊಂಡು ಹೋಗುವ ಕಥೆಯಾಗಿದೆ.ಜುಲೈ ೨೦೧೬ ರಲ್ಲಿ ಚಿತ್ರದ ನಿರ್ಮಾಣ ಪ್ರಾರಂಭವಾಯಿತು ಮತ್ತು ೧ ಡಿಸೆಂಬರ್ ೨೦೧೭ ರಂದು ಚಿತ್ರ ಬಿಡುಗಡೆಯಾಯಿತು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆಯಾದರೂ, ಈ ಇಬ್ಬರು ಬೇರೆಯೇ ಎಂಬ ಅಭಿಪ್ರಾಯ, ಚರ್ಚೆಯನ್ನು ಸಾಕಷ್ಟು ವಿದ್ವಾಂಸರು ವ್ಯಕ್ತಪಡಿಸಿರುವರಾದರೂ, ಇಬ್ಬರನ್ನು ಇನ್ನು ಬೇರೆ, ಬೇರೆಯಾಗಿ ನೋಡಲು ಸಾಧ್ಯವಾಗಿಲ್ಲ. ವೃತ್ತಿಯಲ್ಲಿ ನೆಯ್ಗೆಕಾರನಾದ ದಾಸಿಮಯ್ಯನವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತವೆ. ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತದೆ.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು . ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕಶಾಲಾ ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ತೆಯಿಂದ.ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು.ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು.
ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.