The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಉಸಿರಾಟವು ಗಾಳಿಯನ್ನು ಶ್ವಾಸಕೋಶಗಳ ಒಳಗೆ ಮತ್ತು ಹೊರಗೆ ಚಲಿಸುವಂತೆ ಅಥವಾ ಆಮ್ಲಜನಕವನ್ನು ಕಿವಿರುಗಳಂತಹ ಇತರ ಉಸಿರಾಟದ ಅಂಗಗಳ ಮೂಲಕ ಚಲಿಸುವಂತೆ ಮಾಡುವ ಪ್ರಕ್ರಿಯೆ. ಈ ಪ್ರಕಾರದ ಆಮ್ಲಜನಕ ಬಳಸುವ ಜೀವಿಗಳು—ಪಕ್ಷಿಗಳು, ಸಸ್ತನಿಗಳು, ಮತ್ತು ಸರೀಸೃಪಗಳಂತಹ—ಜೀವಿಗಳಿಗೆ ಉಸಿರಾಟದ ಮೂಲಕ ಗ್ಲೂಕೋಸ್ನಂತಹ ಶಕ್ತಿಪೂರಿತ ಅಣುಗಳ ಚಯಾಪಚಯದ ರೂಪದಲ್ಲಿ ಶಕ್ತಿಯನ್ನು ಬಿಡುಗಡೆಮಾಡಲು ಆಮ್ಲಜನಕದ ಅಗತ್ಯವಿರುತ್ತದೆ. ಉಸಿರಾಟವು ದೇಹದಲ್ಲಿ ಆಮ್ಲಜನಕದ ಅಗತ್ಯವಿರುವಲ್ಲಿ ಅದನ್ನು ತಲುಪಿಸುವ ಮತ್ತು ಇಂಗಾಲಾಮ್ಲವನ್ನು ತೆಗೆಯುವ ಕೇವಲ ಒಂದು ಪ್ರಕ್ರಿಯೆ.
ವಿಕಿಪೀಡಿಯ' (ಇಂಗ್ಲಿಷ್: Wikipedia ) ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್
ವಿಲ್ಫ್ರೆಡ್ ಎಡ್ವರ್ಡ್ ಸಾಲ್ಟರ್ ಓವನ್ (೧೮ ಮಾರ್ಚ್, ೧೮೯೩ - ೪ ನವೆಂಬರ್, ೧೯೧೮ ). ಇವರು ಇಂಗ್ಲೀಷ್ ಕವಿ ಹಾಗು ಸೈನಿಕರಾಗಿದ್ದರು. ಮೊದಲ ಜಾಗತಿಕ ಯುದ್ಧದ ಪ್ರಮುಖ ಕವಿಗಳಲ್ಲಿ ಒಬ್ಬರು.
ಡಿಯೇಗೊ ಮೆರಡೋನ (ಜನನ ಅಕ್ಟೋಬರ್ ೩೦, ೧೯೬೦ - ಮರಣ ನವೆಂಬರ್ ೨೫, ೨೦೨೦) ಅರ್ಜೆ೦ಟಿನಾದ ಮಾಜಿ ಫುಟ್ಬಾಲ್ ಕ್ರೀಡಾಪಟು ಮತ್ತು ನವೆ೦ಬರ್ ೨೦೦೮ರಿ೦ದ ಜುಲೈ ೨೦೧೦ರವರೆಗೆ ಅರ್ಜೆ೦ಟಿನಾ ರಾಷ್ಟ್ರೀಯ ಫುಟ್ಬಾಲ್ ತ೦ಡದ ಮ್ಯಾನೇಜರರಾಗಿದ್ದರು. ಇವರು ಜಗತ್ತಿನ ಮಹಾನ್ ಫುಟ್ಬಾಲ್ ಆಟಗಾರರಲ್ಲಿ ಒಬ್ಬರೆಂದು ಹೇಳಲಾದರು, ಅದೇ ದನಿಯಲ್ಲಿ, ಇವರು ಅತ್ಯ೦ತ ವಿವಾದಾಸ್ಪದ, ಸುದ್ದಿಯೋಗ್ಯವಾದ ವ್ಯಕ್ತಿ ಎಂದೂ ಹೇಳಲಾಗುತ್ತದೆ. ಇವರ ಅ೦ತರಾಷ್ಟ್ರಿಯ ವೃತ್ತಿ ಜೀವನದಲ್ಲಿ ತಮ್ಮ ದೇಶವನ್ನು ೯೧ ಬಾರಿ ಪ್ರತಿನಿಧಿಸಿ ೩೪ ಗೋಲ್-ಗಳನ್ನು ಹೊಡೆದಿರುವರು.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ರೋನಾಲ್ಡ್ ವಿಲ್ಸನ್ ರೀಗನ್ (/reɪɡən/; ಫೆಬ್ರುವರಿ 6, 1911 - ಜೂನ್ 5, 2004) ಅಮೆರಿಕಾದ ರಾಜಕಾರಣಿ ಮತ್ತು ನಟರಾಗಿದ್ದು, 40 ನೇ ಅಧ್ಯಕ್ಷರಾಗಿ 1981 ರಿಂದ 1989 ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದರು. 1967 ರಿಂದ 1975 ರವರೆಗೆ ಅವರು ಕ್ಯಾಲಿಫೋರ್ನಿಯಾದ 33 ನೆಯ ಗವರ್ನರ್ ಆಗಿ ಸೇವೆ ಸಲ್ಲಿಸುವ ಮೊದಲು ಹಾಲಿವುಡ್ ನಟ ಮತ್ತು ಒಕ್ಕೂಟದ ನಾಯಕರಾಗಿದ್ದರು.
ಸರ್ ಅಲೆಕ್ಸಾಂಡರ್ ಚಾಪ್ಮನ್ "ಅಲೆಕ್ಸ್" ಫರ್ಗುಸನ್,Kt, CBE, ಸರ್ ಅಲೆಕ್ಸ್ ಅಥವಾ ಫೆರ್ಗೀ ಎಂದೇ ಚಿರಪರಿಚಿತ (ಜನನ 31 ಡಿಸೆಂಬರ್ 1941, ಗ್ಲಾಸ್ಗೌದ ಗೋವನ್ ನಲ್ಲಿ). ಇವರು ಒಬ್ಬ ಸ್ಕಾಟಿಷ್ ಫುಟ್ಬಾಲ್ ತಂಡದ ವ್ಯವಸ್ಥಾಪಕ ಹಾಗು ಮಾಜಿ ಆಟಗಾರ, ಸದ್ಯಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವ್ಯವಸ್ಥಾಪಕ. ಅಲ್ಲಿ ತಂಡದ ಉಸ್ತುವಾರಿಯನ್ನು 1986ರಿಂದ ವಹಿಸಿದ್ದಾರೆ.ಫರ್ಗುಸನ್ ಅಬರ್ಡೀನ್ ತಂಡದ ವ್ಯವಸ್ಥಾಪಕರಾಗಿ ಅತ್ಯಂತ ಯಶಸ್ವಿ ಅವಧಿ ಪೂರೈಸುವುದಕ್ಕೆ ಮುಂಚಿತವಾಗಿ ಈಸ್ಟ್ ಸ್ಟಿರ್ಲಿಂಗ್ಶೈರ್ ಹಾಗು St.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಜಗತ್ತಿನ ಎಲ್ಲ ಮಾನವರು ಪಡೆದ ಮೂಲ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳು ಎನ್ನುವರು. ಸಾಮಾನ್ಯವಾಗಿ ಮಾನವ ಹಕ್ಕುಗಳು ಎಂದು ಕರೆಯಲಾಗುವ ಹಕ್ಕುಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕುಗಳು ಹಾಗೂ ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಮುಖ್ಯವಾಗಿವೆ. ನಾಗರಿಕ ಮತ್ತು ರಾಜಕೀಯ ಹಕ್ಕುಗಳಲ್ಲಿ ಜೀವನದ ಹಕ್ಕು, ಸ್ವಾತಂತ್ರ್ಯ, ಆಸ್ತಿ, ಅಭಿವ್ಯಕ್ತಿ ಸ್ವಾತಂತ್ರ್ಯ ಸಂತೋಷದ ಅನ್ವೇಷಣೆ ಕಾನೂನು ಸಮಾನತೆಯ ಹಕ್ಕುಗಳು ಒಳಗೊಂಡಿವೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ವಯಸ್ಸಾಗುವಿಕೆ (ವಯೋವೃದ್ಧಿ) ಎಂದರೆ ವಯಸ್ಸು ಹೆಚ್ಚಾಗುವ ಪ್ರಕ್ರಿಯೆ. ಈ ಪದವು ವಿಶೇಷವಾಗಿ ಮಾನವರು, ಅನೇಕ ಪ್ರಾಣಿಗಳು ಹಾಗೂ ಶಿಲೀಂಧ್ರಗಳನ್ನು ಸೂಚಿಸುತ್ತದೆ, ಆದರೆ ಬ್ಯಾಕ್ಟೀರಿಯಾ, ಬಹುವಾರ್ಷಿಕ ಸಸ್ಯಗಳು ಹಾಗೂ ಕೆಲವು ಸರಳ ಪ್ರಾಣಿಗಳು ಸಂಭಾವ್ಯವಾಗಿ ಜೈವಿಕವಾಗಿ ಅಮರ್ತ್ಯವಾಗಿವೆ. ವಿಶಾಲವಾದ ಅರ್ಥದಲ್ಲಿ, ವಯಸ್ಸಾಗುವಿಕೆಯು ವಿಭಜಿಸುವುದು ನಿಂತುಹೋಗಿರುವ ಒಂದು ಜೀವಿಯೊಳಗಿನ ಏಕ ಕೋಶಗಳನ್ನು ಸೂಚಿಸಬಹುದು.
ಆವೃತಬೀಜ ಸಸ್ಯಗಳು (ಆಂಜಿಯೋಸ್ಪೆರ್ಮ್ಸ್, ಆಂಜಿಯೋಸ್ಪೆರ್ಮೆ, ಅಥವಾ ಮ್ಯಾಗ್ನೋಲಿಯೊಫೈಟಾ), ಎಂದು ಕರೆಯಲ್ಪಡುವ ಹೂಬಿಡುವ ಸಸ್ಯಗಳು ಭೂ ಸಸ್ಯಗಳ ಅತ್ಯಂತ ವೈವಿಧ್ಯಮಯ ಗುಂಪಾಗಿದ್ದು, 64 ಗಣಗಳು, 416 ಕುಟುಂಬಗಳು, ಸರಿಸುಮಾರು 13,000 ತಿಳಿದಿರುವ ಜಾತಿಗಳು ಮತ್ತು 300,000ರಷ್ಟು ತಿಳಿದಿರುವ ಪ್ರಭೇದಗಳಿವೆ. ಅನಾವೃತ ಬೀಜ ಸಸ್ಯ(ಜಿಮ್ನೋಸ್ಪರ್ಮ್)ಗಳಂತೆ, ಇವುಗಳು ಬೀಜ ಉತ್ಪಾದಿಸುವ ಸಸ್ಯಗಳಾಗಿವೆ . ಹೂವುಗಳು, ಬೀಜಗಳೊಳಗಿನ ಎಂಡೋಸ್ಪರ್ಮ್ ಮತ್ತು ಬೀಜಗಳನ್ನು ಒಳಗೊಂಡಿರುವ ಹಣ್ಣುಗಳ ಉತ್ಪಾದನೆ ಸೇರಿದಂತೆ ಗುಣಲಕ್ಷಣಗಳಿಂದ ಅವುಗಳನ್ನು ಜಿಮ್ನೋಸ್ಪರ್ಮ್ಗಳಿಂದ ಪ್ರತ್ಯೇಕಿಸಲಾಗುತ್ತದೆ.
ಸರ್ ವಿನ್ಸ್ಟನ್ ಲಿಯೋನಾರ್ಡ್ ಸ್ಪೆನ್ಸರ್- ಚರ್ಚಿಲ್ , (೩೦ ನವೆಂಬರ್ ೧೮೭೪ – ೨೪ ಜನವರಿ ೧೯೬೫) ಬ್ರಿಟೀಷ್ ರಾಜಕಾರಣಿ, ಮುತ್ಸದ್ದಿ, ಉತ್ತಮ ವಾಗ್ಮಿ, ಇತಿಹಾಸಕಾರ, ಬರಹಗಾರ, ಕಲಾವಿದ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಯುನೈಟೆಡ್ ಕಿಂಗ್ಡಮ್ನ ಮುಂದಾಳುತ್ವ ವಹಿಸಿ, ಸೋಲಿನ ದವಡೆಯಿಂದ ವಿಜಯದೆಡೆಗೆ ನಡೆಸಿ ಪ್ರಸಿದ್ಧರಾದವರು. ಬ್ರಿಟೀಷ್ ಸೈನ್ಯದಲ್ಲಿ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು.
ದಿ ಟೈಮ್ಸ್ ಆಫ್ ಇಂಡಿಯಾ (TOI ) ಭಾರತದಲ್ಲಿನ ಇಂಗ್ಲಿಷ್-ಭಾಷೆಯ ಒಂದು ಜನಪ್ರಿಯ ದೊಡ್ಡ ಕಾಗದದ ಹಾಳೆಯ ದೈನಿಕ ವೃತ್ತಪತ್ರಿಕೆ ಯಾಗಿದೆ.ವಿಶ್ವದಲ್ಲಿನ ಎಲ್ಲಾ ಇಂಗ್ಲಿಷ್-ಭಾಷಾ ದೈನಿಕ ವೃತ್ತಪತ್ರಿಕೆಗಳ ಪೈಕಿ, ಎಲ್ಲಾ ಸ್ವರೂಪಗಳನ್ನೂ ಹಾದುಹೋಗುವಂತೆ (ದೊಡ್ಡ ಕಾಗದದ ಹಾಳೆ, ಸಂಕ್ಷಿಪ್ತ, ಬರ್ಲಿನ್ನಿನ ಮತ್ತು ಆನ್ಲೈನ್) ಇದು ಅತ್ಯಧಿಕ ಪ್ರಸರಣವನ್ನು ಹೊಂದಿದೆ. ಸಾಹು ಜೈನ್ ಕುಟುಂಬದ ಒಡೆತನದಲ್ಲಿರುವ ಬೆನೆಟ್, ಕೋಲ್ಮನ್ & ಕಂ. ಲಿಮಿಟೆಡ್ ಸಂಸ್ಥೆಯು ಇದರ ಮಾಲೀಕತ್ವವನ್ನು ಹೊಂದಿದೆ ಮತ್ತು ಆ ಸಂಸ್ಥೆಯಿಂದ ಇದು ನಿರ್ವಹಿಸಲ್ಪಡುತ್ತಿದೆ.
ಸಂಗೀತ ನಿರ್ಮಾಪಕ ಧ್ವನಿಮುದ್ರಣದ ಮೇಲ್ವಿಚಾರಣೆ, ನಿರ್ವಹಣೆ ಮತ್ತು ವಾದ್ಯವೃಂದ ಅಥವಾ ಸಂಗೀತಗಾರರ ಸಂಗೀತ ಉತ್ಪಾದನೆಯನ್ನು ನಿರ್ವಹಿಸುತ್ತಾರೆ. ನಿರ್ಮಾಪಕನ ಪಾತ್ರಗಳು ಬದಲಾಗುತ್ತವೆ. ಅವರು ಯೋಜನೆಗಾಗಿ ಸಂಗೀತದ ಕಲ್ಪನೆಗಳನ್ನು ಸಂಗ್ರಹಿಸಬಹುದು, ಕಲಾವಿದರ ಮೂಲಕ ಮೂಲ ಗೀತೆಗಳನ್ನು ಆಯ್ಕೆ ಮಾಡಲು ಸಹಕರಿಸುತ್ತಾರೆ, ಕಲಾವಿದರೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಅವರ ಹಾಡುಗಳು, ಸಾಹಿತ್ಯ ಅಥವಾ ವ್ಯವಸ್ಥೆಗಳನ್ನು ಸುಧಾರಿಸಲು ಅವರಿಗೆ ಸಹಾಯ ಮಾಡಬಹುದು.
ವರ್ಲ್ಡ್ ವೈಡ್ ವೆಬ್ ಎಂಬುದನ್ನು WWW ಮತ್ತು W3 ಎಂಬುದಾಗಿ ಸಂಕ್ಷೇಪಿಸುವುದು ವಾಡಿಕೆ. ಸಾಮಾನ್ಯವಾಗಿ 'ದಿ ವೆಬ್ ' ಎಂದು ಕರೆಯಲ್ಪಡುವ ವರ್ಲ್ಡ್ ವೈಡ್ ವೆಬ್, ಅಂತರ್ಜಾಲ ಮಾಧ್ಯಮವು ಒಳಗೊಂಡಿರುವ ಅಂತರ ಸಂಪರ್ಕಿತ ಹೈಪರ್ಟೆಕ್ಸ್ಟ್ನ ಒಂದು ವ್ಯವಸ್ಥೆಯಾಗಿದೆ. ವೆಬ್ ಪುಟಗಳಲ್ಲಿ ಸೇರ್ಪಡೆಯಾಗಿರುವ ಪಠ್ಯ, ಚಿತ್ರಗಳು, ವಿಡಿಯೋ, ಮತ್ತು ಇತರ ಮಲ್ಟಿಮೀಡಿಯಾ ಸ್ವರೂಪಗಳನ್ನು ವೆಬ್ ಬ್ರೌಸರ್ ಒಂದರ ನೆರವಿನೊಂದಿಗೆ ಓರ್ವರು ವೀಕ್ಷಿಸಬಹುದು ಮತ್ತು ಹೈಪರ್ಲಿಂಕುಗಳನ್ನು ಬಳಸಿ ಅವುಗಳ ನಡುವೆ ಆಕಡೆಯಿಂದ ಈಕಡೆಗೆ ಚಲಿಸಬಹುದು.
ಸ್ಟಿವನ್ ಜಾರ್ಜ್ ಗೆರಾರ್ಡ್ , ಎಬಿಇ; (ಜನ್ಮದಿನ ಮೇ 30 1980), ಇವರು ಇಂಗ್ಲೀಷ್ ಪ್ರೀಮಿಯರ್ ಲೀಗ್ ಕ್ಲಬ್ ಲಿವರ್ಪೂಲ್ ಹಾಗೂ ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುವ ಒಬ್ಬ ಇಂಗ್ಲೀಷ್ ಫುಟ್ಬಾಲ್ ಆಟಗಾರ.pronounced /ˈdʒɛrɑrd/ ಇವರು ತಮ್ಮ ವೃತ್ತಿ ಜೀವನದ ಹೆಚ್ಚಿನ ಸಮಯ ಕೇಂದ್ರ ಮಿಡ್ಫೀಲ್ಡ್ ನಲ್ಲಿಯೇ ಆಡಿದ್ದಾರೆ. 2007 ರ ಲಿವರ್ಪೂಲ್ನಲ್ಲಿ ಫರ್ನಾಂಡೋ ಟೋರಸ್ ಬರುವವರೆಗೂ ಇವರು ಮುಖ್ಯವಾಗಿ ದ್ವಿತೀಯ ಸ್ಟ್ರೈಕರ್ ಆಗಿ ಮತ್ತು 2006 ರಿಂದ ಇಂಗ್ಲೆಂಡ್ ತಂಡದಲ್ಲಿ ವಿಂಗರ್ ಆಗಿಯೇ ಆಡುತ್ತಿದ್ದರು. ಗೆರಾರ್ಡ್, ತಮ್ಮ ಸಂಪೂರ್ಣ ವೃತ್ತಿ ಜೀವನವನ್ನು ಆನ್ಫೀಲ್ಡ್ ನಲ್ಲಿಯೇ ಕಳೆದಿರುವ ಅವರು 1998 ರಲ್ಲಿ ತಂಡಕ್ಕೆ ಪ್ರವೇಶ ಪಡೆದಿದ್ದರು ಹಾಗೂ 2000-01 ರ ಸಮಯದಲ್ಲಿ ತಂಡದಲ್ಲಿ ಪ್ರಥಮವಾಗಿ ಸ್ಥಾನ ಪಡೆದರು, ಅಲ್ಲದೆ 2003 ರ ಸಾಮಿ ಹೈಯಪ್ಪಾಯಿ ಲಿವರ್ಪೂಲ್ ತಂಡದಲ್ಲಿ ನಾಯಕನಾಗಿ ಸಫಲತೆ ಕಂಡರು.
ಭೌತಿಕ ವಿಜ್ಞಾನಗಳಲ್ಲಿ, ಕಣವು ಚಿಕ್ಕ ಸ್ಥಳೀಕರಿಸಲ್ಪಟ್ಟ ವಸ್ತು ಮತ್ತು ಇದಕ್ಕೆ ಘನ ಅಳತೆ ಅಥವಾ ದ್ರವ್ಯರಾಶಿಯಂತಹ ಹಲವು ಭೌತಿಕ ಗುಣಲಕ್ಷಣಗಳನ್ನು ಹೊಂದಿಸಬಹುದು. ಈ ಶಬ್ದದ ಅರ್ಥವು ಸಾಕಷ್ಟು ಸಾರ್ವತ್ರಿಕವಾಗಿದೆ, ಮತ್ತು ಇದನ್ನು ವಿವಿಧ ವೈಜ್ಞಾನಿಕ ಕ್ಷೇತ್ರಗಳ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ವಸ್ತುಗಳನ್ನು ಕಣಗಳಾಗಿ ಪರಿಗಣಿಸುವುದು ಸಂದರ್ಭದ ಗಾತ್ರದ ಮೇಲೆ ಅವಲಂಬಿಸಿದೆ; ವಸ್ತುವಿನ ಸ್ವಂತ ಗಾತ್ರವು ಚಿಕ್ಕದು ಅಥವಾ ನಗಣ್ಯವಾಗಿದ್ದರೆ, ಅಥವಾ ರೇಖಾಗಣಿತೀಯ ಗುಣಲಕ್ಷಣಗಳು ಮತ್ತು ರಚನೆ ಅಪ್ರಸ್ತುತವಾಗಿದ್ದರೆ, ಅದನ್ನು ಕಣವೆಂದು ಪರಿಗಣಿಸಬಹುದು.
ದೃಶ್ಯ ಗ್ರಹಿಕೆ ಎಂದರೆ ಪರಿಸರದಲ್ಲಿನ ವಸ್ತುಗಳಿಂದ ಪ್ರತಿಫಲಿತವಾದ ದೃಗ್ಗೋಚರ ರೋಹಿತದಲ್ಲಿನ ಬೆಳಕನ್ನು ಬಳಸಿ ಆವರಿಸಿರುವ ಪರಿಸರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ. ಉಂಟಾಗುವ ಗ್ರಹಿಕೆಯನ್ನು ದೃಶ್ಯ ಗ್ರಹಿಕೆ, ದೃಷ್ಟಿ, ಅಥವಾ ನೋಟ ಎಂದೂ ಕರೆಯಲಾಗುತ್ತದೆ. ನೋಟದಲ್ಲಿ ಒಳಗಾದ ವಿವಿಧ ಶಾರೀರಿಕ ಘಟಕಗಳನ್ನು ಒಟ್ಟಾಗಿ ದೃಶ್ಯ ವ್ಯವಸ್ಥೆ ಎಂದು ಸೂಚಿಸಲಾಗುತ್ತದೆ, ಮತ್ತು ಒಟ್ಟಾರೆಯಾಗಿ ದರ್ಶನ ವಿಜ್ಞಾನ ಎಂದು ಸೂಚಿಸಲ್ಪಡುವ, ಭಾಷಾ ವಿಜ್ಞಾನ, ಮನೋಶಾಸ್ತ್ರ, ಗ್ರಹಣ ವಿಜ್ಞಾನ, ನರವಿಜ್ಞಾನ, ಮತ್ತು ಆಣ್ವಿಕ ಜೀವಶಾಸ್ತ್ರದಲ್ಲಿ ಸಾಕಷ್ಟು ಸಂಶೋಧನೆಯ ಕೇಂದ್ರಬಿಂದುವಾಗಿವೆ.
(ಹುಟ್ಟು: ಆಗಸ್ಟ್ ೨೧, ೧೯೮೬) ಉಸೈನ್ ಬೋಲ್ಟ್' ಜಮೈಕ ದೇಶದ ಒಬ್ಬ ಓಟಗಾರ. ೧೦೦ ಮೀಟರ್ ಓಟ ಹಾಗು ೨೦೦ ಮೀಟರ್ ಓಟ ಸ್ಪರ್ಧೆಗಳಲ್ಲಿ ವಿಶ್ವ ಹಾಗು ಒಲಂಪಿಕ್ ದಾಖಲೆಗಳನ್ನು ಹೊಂದಿರುವಾತ. ೨೦೦೮ರ ಬೀಜಿಂಗ್ ಒಲಂಪಿಕ್ಸ್ ಅಲ್ಲಿ ಈ ಎರಡು ಸ್ಪರ್ಧೆಗಳನ್ನಲ್ಲದೆ, ಜಮೈಕದ ಇತರ ತಂಡಗಾರರೊಂದಿಗೆ ೪ x ೧೦೦ ಮೀಟರ್ ರಿಲೇ ಸ್ಪರ್ಧೆಯಲ್ಲೂ ವಿಶ್ವದಾಖಲೆ ಸೃಷ್ಟಿಸಿ, ಇತಿಹಾಸದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ 'ಯುಸೈನ್ ಬೋಲ್ಟ್', ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಮೂರರಲ್ಲೂ ವಿಶ್ವದಾಖಲೆಗಳನ್ನು ಮುರಿದ ಮೊದಲಿಗರಾದರು.
ಅರ್ಜೆಂಟೀನ ದಕ್ಷಿಣ ಅಮೇರಿಕ ಖಂಡದಲ್ಲಿರುವ ೨ನೇ ದೊಡ್ಡ ದೇಶ ಹಾಗು ಪ್ರಪಂಚದ ೮ನೇ ದೊಡ್ಡ ದೇಶ.https://simple.wikipedia.org/wiki/Argentina ದಕ್ಷಿಣ ಅಮೆರಿಕದ ರಾಜ್ಯಗಳಲ್ಲಿ ಒಂದು (೩೫೦-೫೫೦ ದಕ್ಷಿಣ ಅಕ್ಷಾಂಶ, ೫೪೦೨೨°-೭೩೦೩೦° ಪಶ್ಚಿಮ ರೇಖಾಂಶ). ಉತ್ತರದಲ್ಲಿ ಬೊಲಿವಿಯ, ಪರಗ್ವೆ, ಪಶ್ಚಿಮದಲ್ಲಿ ಚಿಲಿ, ಪೂರ್ವ ಮತ್ತು ಈಶಾನ್ಯದಲ್ಲಿ ಬ್ರೆಜಿಲ್ ಮತ್ತು ಉರುಗ್ವೆ ದೇಶಗಳೂ ದಕ್ಷಿಣ ಮತ್ತು ಪೂರ್ವದಲ್ಲಿ ದಕ್ಷಿಣ ಅಂಟ್ಲಾಂಟಿಕ್ ಸಾಗರ ಸುತ್ತುವರೆದಿರುವ ಈ ದೇಶದ ವಿಸ್ತೀರ್ಣ ೨,೭೮೦,೪೦೦.ಚ.ಕಿಮೀ. ಜನಸಂಖ್ಯೆ ೪೦,೧೧೭,೦೯೬ (೨೦೧೦).http://www.worldometers.info/world-population/argentina-population/ ಉತ್ತರಕ್ಕೆ ಸ್ವಲ್ಪ ವಿಶಾಲವಾಗಿದ್ದು ದಕ್ಷಿಣಕ್ಕೆ ಹೋದಂತೆ ಇಕ್ಕಟ್ಟಾಗುತ್ತ ಹೋಗುತ್ತದೆ.
ಸಯಾಮಿ ಅವಳಿಗಳು ಅಥವಾ ಸಂಯೋಜಿತ ಅವಳಿಗಳು ಗರ್ಭದಿಂದಲೇ ಶರೀರವನ್ನು ಜೋಡಿಸಿಕೊಂಡು ಹುಟ್ಟುವ ತದ್ವತ್ತಾದ ಅವಳಿ ಜೀವಗಳು. ಸುಮಾರು ೫೦,೦೦೦ ದಿಂದ ೨,೦೦,೦೦೦ ದ ವರೆಗಿನ ಜನನ ಕ್ರಿಯೆಯಲ್ಲಿ ಒಂದು ಸಯಾಮಿ ಅವಳಿಗಳು ಜನಿಸುವ ಸಂಭವನೀಯತೆ ಇದೆಯೆಂದು ಅಂದಾಜಿಸಲಾಗುತ್ತದೆ. ಸಾಮಾನ್ಯವಾಗಿ ಹುಟ್ಟುವಾಗಲೇ ಈ ಅವಳಿಗಳ ದೇಹ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ ಮತ್ತು ತದ್ರೂಪವಾಗಿರುತ್ತವೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ.
ಅರ್ಜಿದಾರ ಲೇಖನಕ್ಕಾಗಿ ಇಲ್ಲಿ ನೋಡಿ.ಅಭ್ಯರ್ಥಿ, ಅಥವಾ ನಿರ್ದಿಷ್ಟನಾಮಿ, ಒಂದು ಪ್ರಶಸ್ತಿ ಅಥವಾ ಗೌರವದ ಭಾವೀ ಗ್ರಾಹಿ, ಅಥವಾ ಯಾವುದೋ ರೀತಿಯ ಸ್ಥಾನಕ್ಕಾಗಿ ಅರಸುತ್ತಿರುವ ಅಥವಾ ಪರಿಗಣಿಸಲ್ಪಡುತ್ತಿರುವ ವ್ಯಕ್ತಿ; ಉದಾಹರಣೆಗೆ: ಒಂದು ಕಾರ್ಯಸ್ಥಾನಕ್ಕೆ ಚುನಾಯಿತನಾಗಲು — ಈ ಸಂದರ್ಭದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಒಂದು ಗುಂಪಿನಲ್ಲಿ ಸದಸ್ಯತ್ವ ಪಡೆಯಲು"ನಾಮನಿರ್ದೇಶನ"ವು ರಾಜಕೀಯ ಪಕ್ಷದಿಂದ ಒಂದು ಕಾರ್ಯಸ್ಥಾನಕ್ಕೆ ಚುನಾವಣೆಗಾಗಿ ಅಥವಾ ಒಂದು ಗೌರವ ಅಥವಾ ಪ್ರಶಸ್ತಿ ನೀಡಲು ಒಬ್ಬ ಅಭ್ಯರ್ಥಿಯನ್ನು ಆಯ್ಕೆಮಾಡುವ ಪ್ರಕ್ರಿಯೆಯ ಭಾಗವಾಗಿದೆ. ಈ ವ್ಯಕ್ತಿಯನ್ನು ನಿರ್ದಿಷ್ಟನಾಮಿ ಎಂದು ಕರೆಯಲಾಗುತ್ತದೆ.
ತತ್ವಜ್ಞಾನಿ (ದಾರ್ಶನಿಕ) ಎಂದರೆ ತತ್ತ್ವಶಾಸ್ತ್ರವನ್ನು ಅಭ್ಯಾಸಮಾಡುವ ವ್ಯಕ್ತಿ. ಆಧುನಿಕ ಅರ್ಥದಲ್ಲಿ, ತತ್ವಜ್ಞಾನಿಯು ತತ್ತ್ವಶಾಸ್ತ್ರದ ಒಂದು ಅಥವಾ ಹೆಚ್ಚು ಶಾಖೆಗಳಲ್ಲಿ ಕೊಡುಗೆ ನೀಡಿರುವ ಬುದ್ಧಿಜೀವಿ, ಉದಾಹರಣೆಗೆ ಸೌಂದರ್ಯಶಾಸ್ತ್ರ, ನೀತಿಶಾಸ್ತ್ರ, ಜ್ಞಾನಮೀಮಾಂಸೆ, ತರ್ಕಶಾಸ್ತ್ರ, ತತ್ವಮೀಮಾಂಸೆ, ಸಾಮಾಜಿಕ ಸಿದ್ಧಾಂತ, ಮತ್ತು ರಾಜಕೀಯ ತತ್ತ್ವಶಾಸ್ತ್ರ. ತತ್ವಜ್ಞಾನಿಯು ಮಾನವಶಾಸ್ತ್ರಗಳು ಅಥವಾ ಶತಮಾನಗಳಿಂದ ನೈಜ ತತ್ತ್ವಶಾಸ್ತ್ರದಿಂದ ಬೇರ್ಪಟ್ಟಿರುವ ಇತರ ವಿಜ್ಞಾನಗಳಲ್ಲಿ ಕೆಲಸ ಮಾಡಿರುವ ವ್ಯಕ್ತಿಯೂ ಆಗಿರಬಹುದು, ಉದಾಹರಣೆಗೆ ಕಲೆಗಳು, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಶ್ಶಾಸ್ತ್ರ, ಭಾಷಾ ವಿಜ್ಞಾನ, ಮಾನವಶಾಸ್ತ್ರ, ದೇವತಾಶಾಸ್ತ್ರ, ಮತ್ತು ರಾಜನೀತಿ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ. ಸಸ್ಯಗಳು ಹಾಗೂ ಪ್ರಾಣಿಗಳ ಜೀವನಕ್ಕೆ ಜಲಾಧಾರವೊದಗಿಸಲಾರದಷ್ಟು ಒಣ ವಾತಾವರಣವನ್ನು ಹೊಂದಿರುವ ಭೂಪ್ರದೇಶವು ಮರುಭೂಮಿಯೆನಿಸಿಕೊಳ್ಳುತ್ತದೆ. ಈ ಪ್ರದೇಶಗಳಲ್ಲಿ ಜನವಸತಿ ಅತಿ ವಿರಳ ಅಥವಾ ಇಲ್ಲವೇ ಇಲ್ಲ.
ರಿಯಲ್ ಮಡ್ರಿಡ್ (ಸ್ಪ್ಯಾನಿಷ್: Real Madrid Club de Futbol, ಸಾಮಾನ್ಯವಾಗಿ ರಿಯಲ್ ಮಡ್ರಿಡ್ ಸಿ.ಎಫ್) ಸ್ಪೇನಿನ ಮಡ್ರಿಡ್ ನಗರದಲ್ಲಿರುವ ಫುಟ್ಬಾಲ್ ತಂಡ. ಮ್ಯಾಡ್ರಿಡ್ ಫುಟ್ಬಾಲ್ ಕ್ಲಬ್ ಎಂದು 1902 ರಲ್ಲಿ ಸ್ಥಾಪಿತವಾದ ಈ ತಂಡ ಆರಂಭದಿಂದಲೂ ಸಾಂಪ್ರದಾಯಿಕವಾಗಿ ತವರಿನಲ್ಲಿ ಬಿಳಿ ಬಟ್ಟೆಯನ್ನೇ ಧರಿಸಿದೆ. ರಿಯಾಲ್ ಪದದರ್ಥ ಸ್ಪಾನಿಷ್ನಲ್ಲಿ ರಾಯಲ್ (ಅರಸೊತ್ತಿಗೆಯ) ಮತ್ತು ಈ ಪದವು ಕ್ಲಬ್ಗೆ ಲಾಂಛನದಲ್ಲಿನ ರಾಜ ಕಿರೀಟದೊಂದಿಗೆ 1920 ರಲ್ಲಿ ರಾಜ ಹದಿಮೂರನೆಯ ಅಲ್ಫೊನ್ಸೊ ಅವರಿಂದ ದಯಪಾಲಿಸಲ್ಪಟ್ಟಿತು.
ಜೈವಿಕ ನೀತಿಶಾಸ್ತ್ರ ವು ಜೀವಶಾಸ್ತ್ರ ಮತ್ತು ವೈದ್ಯಕೀಯ ಶಾಸ್ತ್ರಗಳಿಂದ ತೆಗೆದುಕೊಂಡು ಬಂದ ನೈತಿಕ ವಾದವಿವಾದ (ವಿರೋದಾಭಾಸ)ಗಳ ತತ್ವಶಾಸ್ತ್ರ ಸಂಬಂಧಿತ ಅಧ್ಯಯನ. ಜೈವಿಕ ನೀತಿಶಾಸ್ತ್ರಜ್ಞರು ಜೀವ ವಿಜ್ಞಾನಗಳು, ಜೈವಿಕ ತಾಂತ್ರಿಕತೆ, ವೈದ್ಯಕೀಯಶಾಸ್ತ್ರ, ರಾಜಕಾರಣ, ಕಾನೂನು ಶಾಸ್ತ್ರ ಮತ್ತು ತತ್ವಶಾಸ್ತ್ರದಲ್ಲಿ ಉದ್ಭವಿಸುವ ನೈತಿಕತೆಯ ಪ್ರಶ್ನೆಗಳ ಜೊತೆ ಸಂಬಂಧಿತವಾಗಿದ್ದಾರೆ.