The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಪರೀಕ್ಷೆ ಅದನ್ನು ತೆಗೆದುಕೊಂಡವನ ಜ್ಞಾನ, ಕೌಶಲ, ಸಾಮರ್ಥ್ಯ, ದೈಹಿಕ ಅರ್ಹತೆ, ಅಥವಾ ಇತರ ಅನೇಕ ವಿಷಯಗಳಲ್ಲಿ (ಉದಾ. ನಂಬಿಕೆಗಳು) ವರ್ಗೀಕರಣವನ್ನು ಅಳೆಯಲು ಉದ್ದೇಶಿಸುವ ಒಂದು ಮೌಲ್ಯಮಾಪನ. ಪರೀಕ್ಷೆಯನ್ನು ಮಾತಿನ ಮೂಲಕ, ಕಾಗದದ ಮೇಲೆ, ಗಣಕಯಂತ್ರದ ಮೇಲೆ, ಅಥವಾ ಪರೀಕ್ಷೆ ತೆಗೆದುಕೊಳ್ಳುವವನು ದೈಹಿಕವಾಗಿ ಒಂದು ಕೌಶಲಗಳ ಸಮೂಹವನ್ನು ನಿರ್ವಹಿಸಬೇಕಾಗುವ ಒಂದು ಸೀಮಿತ ಪ್ರದೇಶದಲ್ಲಿ ನಡೆಸಬಹುದು.
ವ್ಯವಸ್ಥೆಗಳನ್ನು ಹೊಂದಿವೆ. ಈ ವ್ಯವಸ್ಥೆಗಳಲ್ಲಿ, ವಿದ್ಯಾರ್ಥಿಗಳು ಶಾಲೆಗಳ ಸರಣಿಯ ಮೂಲಕ ಮುನ್ನಡೆಯುತ್ತಾರೆ.ಒಂದು ದೇಶದ ಅಭಿವ್ರದ್ದಿಯನ್ನು ಸದರಿ ದೇಶದ ಶಿಕ್ಷಣದ ವ್ಯವಸ್ಥೆಯ ಮೇಲೆ ಅಳೆಯಲಾಗುತ್ತದೆ.ಶಾಲ ಶಿಕ್ಷಣವನ್ನು ಎರಡು ಬಗೆಯಾಗಿ ವಿಂಗಡಿಸಬಹುದು.ಅವುಗಳು,ಪ್ರಾಥಮಿಕ ಶಾಲ ಶಿಕ್ಷಣ ಮತ್ತು ಮಾಧ್ಯಮಿಕಶಾಲಾ ಶಿಕ್ಷಣ. ತಂತ್ರಜ್ಞಾನದ ಬೆಳೆವಣಿಗೆಯೊಂದಿಗೆ ಶಿಕ್ಷಣ ರೀತಿಯಲ್ಲಿ ಅನೇಕ ಬದಲಾವಣೆಗಳಾಗಿವೆ.ಆನ್ಲೈನ್ ಶಾಲೆಗಳನ್ನು ಎಷ್ಟೋ ಮಂದಿ ಬಳಕೆಮಾಡುತ್ತಾರೆ.ಶಾಲೆ ಎಂಬ ಪರಿಕಲ್ಪನೆ ಪ್ರಾರಂಭವಾದದ್ದು ಗುರುಕುಲ ಎಂಬ ಶಿಕ್ಷಣ ವ್ಯವಸ್ತೆಯಿಂದ.ಶಿಕ್ಷಣದ ಮೊದಲ ಗುರಿ ಮಕ್ಕಳಲ್ಲಿ ತಿಳುವಳಿಕೆಯನ್ನು ತುಂಬುವುದು.ತಿಳುವಳಿಕೆ ಬೆಳೆಯುವ ಕ್ರಿಯೆ ಮನೆಯಲ್ಲಿ ಪ್ರಾರಂಭವಾಗಿ ಶಾಲೆಯಲ್ಲಿ ಮುಂದುವರೆಯಬೇಕು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ
ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಭಾರತದ ಕರ್ನಾಟಕ ರಾಜ್ಯದ ಶಿಕ್ಷಣ ಮಂಡಳಿಯಾಗಿದೆ. ಕೆಎಸ್ಇಇಬಿ 1964 ರಲ್ಲಿ ಅಸ್ತಿತ್ವಕ್ಕೆ ಬಂದಿತು, ಅದು ಎಸ್ಎಸ್ಎಲ್ಸಿ ಮತ್ತು ಇತರ ಪರೀಕ್ಷೆಗಳನ್ನು ನಡೆಸುತ್ತಿದೆ. ಮಂಡಳಿಯು ಕರ್ನಾಟಕ ರಾಜ್ಯದಲ್ಲಿ ಪ್ರೌಢ ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ.
ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್
ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (ಸಾಮಾನ್ಯವಾಗಿ ಎಸ್ಎಸ್ಎಲ್ಸಿ ಎಂದು ಉಲ್ಲೇಖಿಸಲಾಗುತ್ತದೆ) ಭಾರತದಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲಿ ಅಧ್ಯಯನದ ಕೊನೆಯಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಯಿಂದ ಪಡೆಯುವ ಪ್ರಮಾಣೀಕರಣವಾಗಿದೆ. SSLC ಅನ್ನು 10 ನೇ ತರಗತಿಯ ಸಾರ್ವಜನಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಪಡೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ ಭಾರತದಲ್ಲಿ '10 ನೇ ತರಗತಿ ಬೋರ್ಡ್ ಪರೀಕ್ಷೆಗಳು' ಎಂದು ಕರೆಯಲಾಗುತ್ತದೆ. SSLC ಭಾರತದ ಹಲವು ರಾಜ್ಯಗಳಲ್ಲಿ ವಿಶೇಷವಾಗಿ ಕೇರಳ, ಕರ್ನಾಟಕ, ಮತ್ತು ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಸಾಮಾನ್ಯ ಅರ್ಹತಾ ಪರೀಕ್ಷೆಯಾಗಿದೆ.
ಬಸವಣ್ಣ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
'ಮಾಧ್ಯಮ ಅಥವಾ ಸಮೂಹ ಮಾಧ್ಯಮ ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ.
ಚುನಾವಣೆ ಯೆನ್ನುವುದು ಒಂದು ಔಪಚಾರಿಕ ವ್ಯವಸ್ಥೆ, ನಿರ್ಧಾರ ಮಾಡುವ ಪ್ರಕ್ರಿಯೆ.ಇದರಲ್ಲಿ,ಜನಸಮೂಹ ಒಬ್ಬನನ್ನು ಸಾರ್ವಜನಿಕ ಕ್ಷೇತ್ರದ ಅಧಿಕಾರವನ್ನು ಹಿಡಿಯಲು ಮಾಡುವ ಆಯ್ಕೆ. ಚುನಾವಣೆಗಳು ಒಂದು ಸಾಧಾರಣ ಯಾಂತ್ರಿಕದಲ್ಲಿ ಆಧುನಿಕ ಪ್ರಾತಿನಿಧಿಕ ಪ್ರಜಾಪ್ರಭುತ್ವವಾಗಿ 17ನೇ ಶತಮಾನದಿಂದ ನಡೆಯುತ್ತಿದೆ. ಚುನಾವಣೆಗಳು-ಶಾಸಕಾಂಗಳಲ್ಲಿ,ಕೆಲವೊಮ್ಮೆ ಕಾರ್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ಮತ್ತು ಪ್ರಾದೇಶಿಕ ಹಾಗೂ ಸ್ಥಳೀಯ ಸರ್ಕಾರಗಳಿಗೆ ಅಧಿಕಾರಸ್ಥರನ್ನು ತುಂಬುತ್ತದೆ.
ಭಾರತ, ಅಧಿಕೃತವಾಗಿ ಭಾರತ ಗಣರಾಜ್ಯ, ಅಥವಾ ಇಂಡಿಯಾ (India), ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ. ಭಾರತೀಯ ಉಪಖಂಡದ ಪ್ರಮುಖ ದೇಶವಾಗಿದ್ದು, ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರವಾಗಿದೆ. ಭಾರತವು ೧೩೦ ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು (೨೦೧೮ ಅಂದಾಜು) ಒಟ್ಟು ೮೦೦ ವಿಭಿನ್ನ ಭಾಷೆಗಳನ್ನು ಉಪಯೋಗಿಸುವ ಜನರನ್ನು ಹೊಂದಿದೆ.
ಚೆಕ್ ಸುಮಾರು ೧೨ ದಶಲಕ್ಷ ಸ್ಥಳೀಯ ಭಾಷಾ ಬಳಕೆದಾರರನ್ನು ಹೊಂದಿರುವ ಒಂದು ಪಶ್ಚಿಮ ಸ್ಲಾವ್ ಭಾಷೆ; ಚೆಕ್ ಗಣರಾಜ್ಯದಲ್ಲಿ ಅದು ಬಹುಸಂಖ್ಯಾತ ಭಾಷೆ ಮತ್ತು ವಿಶ್ವಾದ್ಯಂತ ಚೆಕ್ ಜನರಿಂದ ಬಳಸಲ್ಪಡುತ್ತದೆ. ಚೆಕ್ ಭಾಷೆಯು ಸ್ಲೋವಾಕಿಯಾದ ಭಾಷೆಗೆ ಹೋಲುತ್ತದೆ ಹಾಗೂ ಪರಸ್ಪರವಾಗಿ ಅದರೊಂದಿಗೆ ಮತ್ತು, ಕಡಮೆ ಪ್ರಮಾಣದಲ್ಲಿ ಪೋಲಂಡ್ನ ಭಾಷೆ ಹಾಗೂ ಸಾರ್ಬ್ ಭಾಷೆಗಳೊಂದಿಗೆ ಬುದ್ಧಿಗ್ರಾಹ್ಯವಾಗಿದೆ. ಚೆಕ್ ಭಾಷೆಯು ಚೆಕ್ ಗಣರಾಜ್ಯದ ಬಹುತೇಕ ನಿವಾಸಿಗಳಿಂದ ವ್ಯಾಪಕವಾಗಿ ಬಳಸಲ್ಪಡುತ್ತದೆ.
ಚಲನಚಿತ್ರ ನಿರ್ಮಾಣ ಪ್ರಕಾರವನ್ನು ಅವಲಂಬಿಸಿ ಚಲನಚಿತ್ರ ನಿರ್ಮಾಪಕರು ವಿವಿಧ ಪಾತ್ರಗಳನ್ನು ತುಂಬುತ್ತಾರೆ. ಉತ್ಪಾದನಾ ಕಂಪೆನಿ ಅಥವಾ ಸ್ವತಂತ್ರ, ನಿರ್ಮಾಪಕರು ಯೋಜಿಸಿದ ಮತ್ತು ಚಲನಚಿತ್ರ ನಿರ್ಮಾಣದ ವಿವಿಧ ಅಂಶಗಳನ್ನು ಸಂಘಟಿಸಲು, ಉದಾಹರಣೆಗೆ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡುವುದು, ಬರೆಯುವ ನಿರ್ದೇಶನ, ನಿರ್ದೇಶನ ಮತ್ತು ಸಂಪಾದನೆ, ಮತ್ತು ಹಣಕಾಸು ವ್ಯವಸ್ಥೆ ಮಾಡುವುದನ್ನು ಸಂಯೋಜಿಸುವುದು. "ಆವಿಷ್ಕಾರ ಹಂತ" ದ ಸಮಯದಲ್ಲಿ, ನಿರ್ಮಾಪಕರು ಭರವಸೆಯ ವಸ್ತುಗಳನ್ನು ಕಂಡುಕೊಳ್ಳಬೇಕು ಮತ್ತು ಅಂಗೀಕರಿಸಬೇಕು.
ದಂಡಯಾತ್ರೆ ಎಂದರೆ ಯುದ್ಧದಲ್ಲಿ ಒಂದು ನಿರ್ದಿಷ್ಟ ಘಟ್ಟವಾಗಿ ಕೈಗೊಂಡ ಸೇನಾಕಾರ್ಯಾಚರಣೆ ಯಾ ಪರಸ್ಪರ ಸಂಬಂಧಿತ ಕಾರ್ಯಾಚರಣೆಗಳು ಅಥವಾ ಒಟ್ಟಾರೆ ಯುದ್ಧನೀತಿಯ (ಸ್ಟ್ರ್ಯಾಟಜಿ) ಕಾರ್ಯಾಚರಣೆ (ಕೇಂಪೇನ್). ವಿಶೇಷ ಕಾರಣಕ್ಕಾಗಿ ನಡೆಸುವ ಸೇನಾ ಮುನ್ನಡೆಗೂ ಈ ಹೆಸರುಂಟು. ದೀರ್ಘಾವಧಿಯ ಯುದ್ಧದಲ್ಲಿ ಒಂದು ಮಹಾನಾಯಕತ್ವದ ಅಧೀನವಾಗಿ ಹಲವಾರು ಉಪನಾಯಕತ್ವಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕದನಗಳಲ್ಲಿ ಉದ್ಯುಕ್ತವಾಗಿರಬಹುದು.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಹೊಳೆಗೆ ಸುರಿದರೂ ಅಳೆದು ಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sow the seeds to get ripen fruits.) ಹಾವೂ ಸಾಯ್ಬಾರದು, ಕೋಲೂ ಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English: from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
(ಸೂಚನೆ : ನಮ್ಮ ನುಡಿಯಲ್ಲಿ ಜ್ವಾಲಾಮುಖಿ ಮತ್ತು ಅಗ್ನಿಪರ್ವತ ಈ ಎರಡೂ ಪದಗಳು ಸಮಾನಾರ್ಥಕವಾಗಿ ಬಳಸಲ್ಪಡುತ್ತವೆ. ಈ ಲೇಖನದಲ್ಲಿ ಎರಡೂ ಪದಗಳನ್ನು ಬಳಸಲಾಗಿದೆ) ಉರಿಬೆಟ್ಟ (ಜ್ವಾಲಾಮುಖಿ) ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿರುವ ಒಂದು ಬಿರುಕು. ಇಂತಹ ಬಿರುಕಿನ ಮೂಲಕ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಮತ್ತು ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ.
ಊದುಕುಲುಮೆ ಎಂಬುದು ಲೋಹವಿಜ್ಞಾನದ ಕುಲುಮೆಯ ಒಂದು ಬಗೆಯಾಗಿದ್ದು, ಕೈಗಾರಿಕಾ ಲೋಹಗಳನ್ನು, ಅದರಲ್ಲೂ ಸಾಮಾನ್ಯವಾಗಿ ಕಬ್ಬಿಣವನ್ನು ಉತ್ಪಾದಿಸುವುದಕ್ಕೆ ಕೈಗೊಳ್ಳಬೇಕಾದ ಅದಿರು ಕರಗಿಸುವಿಕೆಯ ಪ್ರಕ್ರಿಯೆಯಲ್ಲಿ ಇದನ್ನು ಬಳಸಲಾಗುತ್ತದೆ. ಊದುಕುಲುಮೆಯೊಂದರಲ್ಲಿ, ಕುಲುಮೆಯ ಮೇಲ್ತುದಿಯ ಮೂಲಕ ಇಂಧನ ಮತ್ತು ಅದಿರುಗಳನ್ನು ನಿರಂತರವಾಗಿ ಪೂರೈಸಲಾಗುತ್ತದೆ; ಅದೇ ವೇಳೆಗೆ, ಗಾಳಿಯನ್ನು (ಕೆಲವೊಮ್ಮೆ ಆಮ್ಲಜನಕದ ಸಂವರ್ಧನದೊಂದಿಗೆ) ಕೋಣೆಯ ತಳಭಾಗದೊಳಗೆ ಊದಲಾಗುತ್ತದೆ. ಇದರಿಂದಾಗಿ ಸಾಮಗ್ರಿಯು ಕೆಳಮುಖವಾಗಿ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಕುಲುಮೆಯಾದ್ಯಂತ ರಾಸಾಯನಿಕ ಕ್ರಿಯೆಗಳು ನಡೆಯಲು ಸಾಧ್ಯವಾಗುತ್ತದೆ.
ತುರ್ಕ್ಮೇನಿಸ್ತಾನ್ನ ಭಾಷೆಯು ತುರ್ಕ್ಮೇನಿಸ್ತಾನ್ನ ರಾಷ್ಟ್ರೀಯ ಭಾಷೆ. ತುರ್ಕ್ಮೇನಿಸ್ತಾನ್ನಲ್ಲಿ ಇದು ಸರಿಸುಮಾರು ೩೪,೩೦,೦೦೦ ಜನರಿಂದ, ಮತ್ತು ಜೊತೆಗೆ, ಇರಾನ್ (೨೦,೦೦,೦೦೦), ಅಫ್ಘಾನಿಸ್ತಾನ್ (೫,೦೦,೦೦೦), ಸಿರಿಯಾ (೫,೦೦,೦೦೦), ಇರಾಕ್ (೨,೦೦,೦೦೦ - ೩,೦೦,೦೦೦), ಮತ್ತು ತುರ್ಕಿಗಳನ್ನು (೧೦,೦೦,೦೦೦) ಒಳಗೊಂಡಂತೆ, ಇತರ ರಾಷ್ಟ್ರಗಳಲ್ಲಿ ಸರಿಸುಮಾರು ೬೦,೦೦,೦೦೦ ಜನರಿಂದ ಬಳಸಲ್ಪಡುತ್ತದೆ. ತುರ್ಕ್ಮೇನಿಸ್ತಾನ್ನ ಭಾಷೆಯು ಅಲ್ಟೇಯಿಕ್ ಭಾಷಾ ಕುಟುಂಬದ ಟರ್ಕಿಕ್ ಶಾಖೆಯಲ್ಲಿದೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಒಂದು ಅಥವಾ ಹೆಚ್ಚು ಸಂತತಿಯು ಮಹಿಳೆಯ ಒಳಗೆ ಅಭಿವೃದ್ಧಿಯಾಗುವ ಸಮಯವನ್ನು ಗರ್ಭಧಾರಣೆ ಎಂದು ಕರೆಯಲ್ಪಡುತ್ತದೆ..ಬಹು ಗರ್ಭಧಾರಣೆ(multiple pregnancy) ಒಂದಕ್ಕಿಂತ ಹೆಚ್ಚು ಸಂತಾನವನ್ನು ಒಳಗೊಂಡಿರುತ್ತದೆ. ಇದಕ್ಕೆ ಉದಾಹರಣೆ ಅವಳಿ ಮಕ್ಕಳು..ಪ್ರೆಗ್ನೆನ್ಸಿ ಲೈಂಗಿಕ ಸಂಭೋಗ (ಅಂಡಾಣು ಮತ್ತು ವೀರ್ಯಾಣುಗಳ ಮಿಲನ) ಅಥವಾ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿಯಿಂದ ಉಂಟಾಗಬಹುದು.ಇದು ಸಾಮಾನ್ಯವಾಗಿ ಹಿಂದಿನ ಋತುಚಕ್ರದಿಂದ ಸುಮಾರು 40 ವಾರಗಳ ಕಾಲ ಇದ್ದು ಹೆರಿಗೆಯಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ತಿಂಗಳು ಸುಮಾರು 29½ ದಿನಗಳನ್ನು ಹೊಂದಿದ್ದು ಸುಮಾರು ಒಂಬತ್ತು ಚಾಂದ್ರಮಾನ ತಿಂಗಳುಗಳಿಗೆ ಸಮವಾಗುತ್ತದೆ.
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ದಿ ಮೆಟ್ರಿಕ್ಸ್ ಒಂದು(West Frisian) ವೈಜ್ಞಾನಿಕ ಕಾಲ್ಪನಿಕ ಕತೆ-ಸಾಹಸಪ್ರಧಾನ ಚಲನಚಿತ್ರವಾಗಿದ್ದು, ಇದನ್ನು ಬರೆದು ನಿರ್ದೇಶನ ಮಾಡಿದವರು ಲಾರ್ರಿ ಮತ್ತು ಎಂಡೀ ವಾಚೋಸ್ಕಿ ಮತ್ತು ಅಭಿನಯಿಸಿದವರು ಕೀನು ರೀವ್ಸ್, ಲಾರೆನ್ಸ್ ಫೀಶ್ಬರ್ನ್, ಕೇರ್ರೀ-ಆಯ್ನೆ ಮೊಸ್ ಜೋ ಪೆಂಟೋಲಿಯಾನೊ ಮತ್ತು ಹ್ಯೂಗೋ ವೀವಿಂಗ್. ಇದು ಮೊದಲು ಅಮೇರಿಕಾ ದೇಶದದಲ್ಲಿ ಮಾರ್ಚ್ 31, 1999 ರಂದು ಬಿಡುಗಡೆಗೊಂಡಿತು ಮತ್ತು ಇದು ಈ ಚಲನಚಿತ್ರ ಸರಣಿಯ, ಹಾಸ್ಯ ಪುಸ್ತಕಗಳು, ವಿಡಿಯೊ ಆಟಗಳು ಮತ್ತು ಎನಿಮೇಶನ್ಗಳ ಮೊದಲ ಭಾಗವಾಗಿದೆ. ಈ ಚಲನಚಿತ್ರವು ಭವಿಷ್ಯವೊಂದನ್ನು ವಿವರಿಸುತ್ತಿದ್ದು, ಅದರಲ್ಲಿ ನಿಜವಾಗಿ ಮನುಷ್ಯರು ತಿಳಿದುಕೊಳ್ಳುವ ವಾಸ್ತವಿಕತೆ ಮೆಟ್ರಿಕ್ಸ್ ಆಗಿರುತ್ತದೆ: ಇದು ಸಚೇತನ ಯಂತ್ರಗಳು ನಕಲು ಮಾಡಿದ ವಾಸ್ತವಿಕತೆಯಾಗಿದ್ದು, ಇದನ್ನು ಮನುಷ್ಯರನ್ನು ತಣಿಸಲು ಮತ್ತು ವಶಪಡಿಸಿಕೊಳ್ಳಲು, ಮತ್ತು ಅದೇ ಸಮಯದಲ್ಲಿ ಅವರ ದೇಹದ ಶಾಖ ಮತ್ತು ವಿದ್ಯಚ್ಛಕ್ತಿಯನ್ನು ಶಕ್ತಿಯ ಆಕರಗಳಾಗಿ ಬಳಸಿಕೊಳ್ಳಲು ಮಾಡಲಾಗಿರುತ್ತದೆ.
ಜೇಮ್ಸ್ ಫ್ರಾನ್ಸಿಸ್ ಕ್ಯಾಮೆರಾನ್ (ಜನನ ಆಗಸ್ಟ್ ೧೬, ೧೯೫೪) ಒಬ್ಬ ಕೆನೇಡಿಯನ್ ಚಲನಚಿತ್ರ ನಿರ್ಮಾಪಕ, ಆವಿಷ್ಕಾರಿ, ಎಂಜಿನಿಯರ್, ಫಿಲಾಂತ್ರೊಪಿಸ್ಟ್, ಮತ್ತು ಸಮುದ್ರ-ಆಳದ ಅನ್ವೇಷಕರಾಗಿದ್ದಾರೆ. ದಿ ಟರ್ಮಿನೇಟರ್ (೧೯೮೪) ಎಂಬ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಚಲನಚಿತ್ರದ ಮೂಲಕ ಇವರು ತಮ್ಮ ಪ್ರಥಮ ಪ್ರಮುಖ ಯಶಸ್ಸನ್ನು ಕಂಡುಕೊಂಡರು. ಅನಂತರ ಅವರು ಹಾಲಿವುಡ್ನ ಸುಪ್ರಸಿದ್ಧ ನಿರ್ದೇಶಕರಾದರು.
ಇಸಾಮು ಅಕಾಸಕಿ (赤崎 勇, Akasaki Isamu, ಜನನ, ಜನವರಿ 30, 1929) ಜಪಾನಿನ ತಂತ್ರಜ್ಜ ಮತ್ತು ಭೌತಶಾಸ್ತಜ್ಜ. ಇವರು ಅರೆವಾಹಕಗಳ ತಂತ್ರಜ್ಜಾನದಲ್ಲಿ ವಿಷೇಶಜ್ಜ ಮತ್ತು ನೊಬೆಲ್ ಪ್ರಶಸ್ತಿ ವಿಜೇತರು.ಇವರ ಪ್ರಸಿದ್ಧ ಸಂಶೋಧನೆ ೧೯೮೯ರಲ್ಲಿ ಮಾಡಿದ ಪ್ರಖರ ಗ್ಯಾಲಿಯಮ್ ನೈಟ್ರೈಡ್ (GaN) p-n ಜಂಕ್ಷನ್ ನೀಲಿ ಎಲ್ ಇ ಡಿ ಮತ್ತು ಇದರ ಫಲಶ್ರುತಿಯಾಗಿ ಅತ್ಯಂತ ಹೆಚ್ಚು ಪ್ರಕಾಶಮಾನವುಳ್ಳ ಗ್ಯಾಲಿಯಮ್ ನೈಟ್ರೈಡ್ ನೀಲಿ ಎಲ್.ಇ.ಡಿ,ಯ ಅವಿಷ್ಕಾರ.ಇದಕ್ಕಾಗಿ ಮತ್ತು ಇತರ ಸಾಧನೆಗಳಿಗಾಗಿ, ಅಕಾಸಾಕಿಗೆ 2009 ರಲ್ಲಿ ಸುಧಾರಿತ ತಂತ್ರಜ್ಞಾನದಲ್ಲಿ ಕ್ಯೋಟೋ ಪ್ರಶಸ್ತಿ, ಮತ್ತು 2011 ರಲ್ಲಿ ಐಇಇಇ ಎಡಿಸನ್ ಪದಕವನ್ನು ನೀಡಲಾಯಿತು .
ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆ ರಾಷ್ಟ್ರಗಳ ಪ್ರಭಾವಗಳು ಭಾರತೀಯ ಸಂಸ್ಕೃತಿ ಯನ್ನು ರೂಪಿಸಿವೆ. ಸಿಂಧೂ ಕಣಿವೆ ನಾಗರಿಕತೆ ಯಿಂದ ಆರಂಭಗೊಂಡ ಭಾರತೀಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಸಾಧಾರಣ ವಿಕಸನ ಕಂಡಿತು. ಇದಾದ ನಂತರ ಬೌದ್ಧ ಧರ್ಮದ ಉನ್ನತಿ ಮತ್ತು ಅವನತಿ, ಸುವರ್ಣ ಯುಗ, ಮುಸ್ಲಿಂ ಆಳ್ವಿಕೆಗೆ ಭಾರತ ಅಧೀನವಾದದ್ದು ಹಾಗೂ ಯುರೋಪಿಯನ್ನರ ವಸಾಹತು ಆಳ್ವಿಕೆ ಸಂದರ್ಭದಲ್ಲಿ ಈ ವಿಕಸನ ಮತ್ತಷ್ಟು ವೈವಿಧ್ಯಮಯವಾಯಿತು.
ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.
ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
[ಗೌತಮ ಬುದ್ಧ] (ಕ್ರಿ.ಪೂ ೫೬೩-೪೮೩) ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಭಗವಾನ್ ಗೌತಮ ಬುದ್ಧನು ಕಂಡು ಹಿಡಿದ ವಿಪಶ್ಶನ[೨] ಧ್ಯಾನ ಮಾರ್ಗವು ದುಃಖ ಮತ್ತು ಪಾಪಕರ್ಮಗಳಿಂದ ಮುಕ್ತವಾಗಲು ಸಹಾಯ ಮಾಡುತ್ತದೆ. ಇಡೀ ಜಗತ್ತಿಗೆ ಜ್ಞಾನದ ಹಿರಿಮೆಯನ್ನು ತುಂಬಲು ಜನಿಸಿದವರು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಶೈಕ್ಷಣಿಕ ತಂತ್ರಜ್ಞಾನವು "ಸೂಕ್ತ ತಾಂತ್ರಿಕ ಪ್ರಕ್ರಿಯೆಗಳನ್ನು ಮತ್ತು ಸಂಪನ್ಮೂಲಗಳನ್ನು ರಚಿಸುವುದು, ಬಳಸುವುದು ಮತ್ತು ನಿರ್ವಹಿಸುವ ಮೂಲಕ ಕಲಿಕೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವ ಅಧ್ಯಯನ ಮತ್ತು ನೈತಿಕ ಅಭ್ಯಾಸ". ಶೈಕ್ಷಣಿಕ ತಂತ್ರಜ್ಞಾನವು ದೈಹಿಕ ಯಂತ್ರಾಂಶ ಮತ್ತು ಶೈಕ್ಷಣಿಕ ಸಿದ್ಧಾಂತದ ಬಳಕೆಯಾಗಿದೆ. ಇದು ಕಲಿಕೆಯ ಸಿದ್ಧಾಂತ , ಕಂಪ್ಯೂಟರ್-ಆಧಾರಿತ ತರಬೇತಿ, ಆನ್ಲೈನ್ ಕಲಿಕೆ, ಮತ್ತು ಮೊಬೈಲ್ ತಂತ್ರಜ್ಞಾನಗಳನ್ನು ಎಲ್ಲಿ ಬಳಸಿಕೊಳ್ಳುತ್ತದೆ, ಎಮ್-ಕಲಿಕೆ ಸೇರಿದಂತೆ ಹಲವಾರು ವಲಯಗಳನ್ನು ಒಳಗೊಳ್ಳುತ್ತದೆ.
ಬಹುಸಾಂಸ್ಕೃತಿಕತೆ ಎಂಬುದು ಬಹು ವಿಧವಾದ ಜನಾಂಗೀಯ ಸಂಸ್ಕೃತಿಗಳ ಅಂಗೀಕಾರ ಅಥವಾ ಪ್ರವರ್ತನೆಯಾಗಿದ್ದು, ನಿರ್ದಿಷ್ಟ ಸ್ಥಳವೊಂದರ ಜನಸಂಖ್ಯಾಶಾಸ್ತ್ರದ ಸ್ವರೂಪಕ್ಕೆ, ಸಾಮಾನ್ಯವಾಗಿ ಸಾಂಸ್ಥಿಕ ಮಟ್ಟದಲ್ಲಿ ಇದನ್ನು ಅನ್ವಯಿಸಲಾಗುತ್ತದೆ; ಶಾಲೆಗಳು, ವ್ಯವಹಾರದ ಅಸ್ತಿತ್ವಗಳು, ನೆರೆಹೊರೆಗಳು, ನಗರಗಳು ಅಥವಾ ರಾಷ್ಟ್ರಗಳು ಹೀಗೆ ಅನ್ವಯಿಕೆಗೊಳಗಾಗುವ ಉದಾಹರಣೆಗಳಾಗಿವೆ. ಈ ಸಂದರ್ಭದಲ್ಲಿ, ಯಾವುದೇ ನಿರ್ದಿಷ್ಟವಾದ ಜನಾಂಗೀಯ, ಧಾರ್ಮಿಕ, ಮತ್ತು/ಅಥವಾ ಸಾಂಸ್ಕೃತಿಕ ಸಮುದಾಯದ ಮೌಲ್ಯಗಳನ್ನು ಪ್ರಧಾನವಾಗಿ ಪ್ರವರ್ತಿಸದೆಯೇ, ವಿಶಿಷ್ಟವಾದ ಜನಾಂಗೀಯ ಮತ್ತು ಧಾರ್ಮಿಕ ಸಮೂಹಗಳಿಗೆ ಧರ್ಮಸಮ್ಮತವಾದ ಸ್ಥಾನಮಾನವು ವಿಸ್ತರಿಸುವುದನ್ನು ಬಹುಸಂಸ್ಕೃತಿವಾದಿಗಳು ಸಮರ್ಥಿಸುತ್ತಾರೆ.ಬಹುಸಾಂಸ್ಕೃತಿಕತೆಯ ಕಾರ್ಯನೀತಿಯು ವಿಭಿನ್ನ ಸಂಸ್ಕೃತಿಗಳ ವಿಲೀನತೆ ಮತ್ತು ಸಾಮಾಜಿಕ ಏಕೀಕರಣದ ಪರಿಕಲ್ಪನೆಗಳೊಂದಿಗೆ ಅನೇಕ ವೇಳೆ ವೈಲಕ್ಷಣ್ಯವನ್ನು ತೋರಿಸುತ್ತದೆ ಅಥವಾ ಅವಕ್ಕೆ ತದ್ವಿರುದ್ಧವಾಗಿರುತ್ತದೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨, ೧೯೬೧ ರಲ್ಲಿ ಸ್ಥಾಪಿಸಿದರು.