The most-visited ಕನ್ನಡ Wikipedia articles, updated daily. Learn more...
ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ (೪.೫ ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕನ್ನಡ ಕರ್ನಾಟಕ ರಾಜ್ಯದ ಆಡಳಿತ ಭಾಷೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ ಇಪ್ಪತೊಂಬತ್ತನೆಯ ಸ್ಥಾನ ಕನ್ನಡಕ್ಕಿದೆ.
ಭೂರಚನಶಾಸ್ತ್ರ ಮತ್ತು ಭೌತಿಕ ಭೂಗೋಳಶಾಸ್ತ್ರದಲ್ಲಿ, ಪ್ರಸ್ಥಭೂಮಿ ಎಂದರೆ ಸಾಮಾನ್ಯವಾಗಿ ತುಲನಾತ್ಮಕವಾಗಿ ಚಪ್ಪಟೆ ಭೂಮಿಯನ್ನು ಹೊಂದಿರುವ, ಸುತ್ತಮುತ್ತಲಿನ ಪ್ರದೇಶದ ಮೇಲೆ ಗಣನೀಯವಾಗಿ ಎತ್ತರಿಸಿರುವ, ಹಲವುವೇಳೆ ಕಡಿದಾದ ಇಳಿಜಾರಿನ ಒಂದು ಅಥವಾ ಹೆಚ್ಚು ಬದಿಗಳಿರುವ ಎತ್ತರದ ಭೂಪ್ರದೇಶ. ಪ್ರಸ್ಥಭೂಮಿಗಳು ಅನೇಕ ಪ್ರಕ್ರಿಯೆಗಳಿಂದ ರೂಪಗೊಳ್ಳಬಹುದು. ಇವುಗಳಲ್ಲಿ ಜ್ವಾಲಾಮುಖಿ ಶಿಲಾಪಾಕದ ಉಬ್ಬುವಿಕೆ, ಶಿಲಾರಸದ ನಿಸ್ಸರಣ, ಮತ್ತು ನೀರು ಹಾಗೂ ಹಿಮನದಿಗಳಿಂದಾದ ಸವೆತ ಸೇರಿವೆ.
ವರ್ಣತಂತು ಎಂದರೆ ಜೀವಕೋಶಗಳಲ್ಲಿ ಕಂಡು ಬರುವ ಡಿಎನ್ಎ ಮತ್ತು ಪ್ರೊಟೀನುಗಳ ವ್ಯವಸ್ಥಿತ ರಚನೆಯಾಗಿದೆ. ಡಿಎನ್ಎ ಒಂದು ಸುರುಳಿಯಾಕಾರದ ಒಂದು ತುಂಡಾಗಿದ್ದು ಅದರಲ್ಲಿ ಬಹಳ ವಂಶವಾಹಿಗಳನ್ನು, ನಿಯಂತ್ರಕ ಅಂಶಗಳು ಮತ್ತು ನ್ಯುಕ್ಲಿಯೊಸೈಡ್ನ ಸರಣಿಗಳನ್ನು ಹೊಂದಿದೆ. ವರ್ಣತಂತುಗಳು ಡಿಎನ್ಎ-ಬಂಧದ ಪ್ರೊಟೀನುಗಳನ್ನೂ ಒಳಗೊಂಡಿರುತ್ತದೆ, ಅದು ಡಿಎನ್ಎಯನ್ನು ಒಟ್ಟಾಗಿರಿಸುತ್ತದೆ ಮತ್ತು ಅದರ ನಿಯಂತ್ರಕ ಕಾರ್ಯವಿಧಾನದಲ್ಲಿ ಕೆಲಸ ಮಾಡುತ್ತದೆ.
ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕ, ಉಪಮೆ, ದೀಪಕ, ಅಲಂಕಾರಗಳಾಗಿರುತ್ತವೆ. ಉದಾಹರಣೆಗೆ: ಅತಿಆಸೆ ಗತಿ ಕೇಡು, ಕುಂಬಾರನಿಗೆ ವರುಷ,ದೊಣ್ಣೆಗೆ ನಿಮಿಷ, ಬೆಕ್ಕಿನ ತಲೀ ಮ್ಯಾಲ ದೀಪ ಇಟ್ಹಾಂಗ, ಹೊಳೆಗೆ ಸುರಿದರೂ ಅಳೆದುಸುರಿಯಬೇಕು, ಕೈ ಕೆಸರಾದರೆ ಬಾಯಿ ಮೊಸರು.(English translation: Sowthe seeds to get ripen fruits.) ಹಾವೂ ಸಾಯ್ಬಾರದು, ಕೋಲೂಮುರೀಬಾರ್ದು ಮಣ್ಣಿನಿಂದ ಮಣ್ಣಿಗೆ (English:from mud to the mud) ಅರ್ಥ: ಭೂತಾಯಿಯ ಮಡಿಲಲ್ಲಿಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.
ಬ್ರಾಟಿಸ್ಲಾವಾ (German: [Pressburg (Preßburg)] Error: {{Lang}}: text has italic markup (help), ಹಂಗೇರಿಯನ್:Pozsony) ಎಂಬುದು ಸ್ಲೋವಾಕಿಯಾದ ರಾಜಧಾನಿಯಾಗಿದೆ ಮತ್ತು, ಸುಮಾರು 429,000ದಷ್ಟು ಜನಸಂಖ್ಯೆಯನ್ನು ಹೊಂದುವುದರೊಂದಿಗೆ ಇದು ದೇಶದ ಅತಿದೊಡ್ಡ ನಗರವೂ ಆಗಿದೆ. ಡ್ಯಾನುಬೆ ನದಿಯ ಎರಡೂ ದಡಗಳ ಮೇಲಿರುವ ನೈಋತ್ಯದ ಸ್ಲೋವಾಕಿಯಾದಲ್ಲಿ ಬ್ರಾಟಿಸ್ಲಾವಾ ನೆಲೆಗೊಂಡಿದೆ. ಆಸ್ಟ್ರಿಯಾ ಮತ್ತು ಹಂಗರಿ ದೇಶಗಳ ಎಲ್ಲೆಯಾಗಿರುವ ಬ್ರಾಟಿಸ್ಲಾವಾ ನಗರವು, ಎರಡು ಸ್ವತಂತ್ರ ದೇಶಗಳ ಮೇರೆಯಾಗಿರುವ ಏಕೈಕ ರಾಷ್ಟ್ರೀಯ ರಾಜಧಾನಿಯಾಗಿದೆ; ಬ್ರಾಟಿಸ್ಲಾವಾ ಮತ್ತು ವಿಯೆನ್ನಾಗಳು ಪರಸ್ಪರ ಅತ್ಯಂತ ನಿಕಟವಾಗಿರುವ ಯುರೋಪ್ ಖಂಡದ ರಾಷ್ಟ್ರೀಯ ರಾಜಧಾನಿಗಳಾಗಿದ್ದು, ಅವುಗಳ ನಡುವಿನ ಅಂತರವು 60 kilometres (37 mi)ಕ್ಕಿಂತ ಕಡಿಮೆಯಿದೆ.
ಮಿನ್ನಿಯಾಪೋಲಿಸ್ (pronounced /ˌmɪniˈæpəlɪs/ ( listen)), ನಗರವನ್ನು "ಸರೋವರಗಳ ನಗರ"ವೆಂದು ಹಾಗು "ಮಿಲ್ ಸಿಟಿ" ಎಂಬ ಉಪನಾಮದಿಂದಲೂ ಕರೆಯಲಾಗುತ್ತದೆ. ಇದು ಹೆನ್ನೆಪಿನ್ ಕೌಂಟಿಯ ಕೌಂಟಿ ಸ್ಥಾನವಾಗಿರುವುದರ ಜೊತೆಗೆ,GR6 U.S.ನ ಮಿನ್ನೇಸೋಟ ರಾಜ್ಯದ ಅತ್ಯಂತ ದೊಡ್ಡ ನಗರವಾಗಿದೆ ಅಲ್ಲದೆ ಅಮೇರಿಕ ಸಂಯುಕ್ತ ಸಂಸ್ಥಾನದ 47ನೇ ಅತ್ಯಂತ ದೊಡ್ಡ ನಗರವೆನಿಸಿದೆ. ನಗರವು ತನ್ನ ಹೆಸರನ್ನು ಪಡೆಯಲು ಅದರ ಮೊದಲ ಶಾಲಾಶಿಕ್ಷಕ ಕಾರಣವೆನ್ನಲಾಗುತ್ತದೆ, ಈತ ನೀರಿನ ಡಕೋಟ ಪದ mni , ಹಾಗು ನಗರ ಎಂಬುದರ ಗ್ರೀಕ್ ಪದ polis ಪದಗಳನ್ನು ಒಟ್ಟುಗೂಡಿಸಿದರು.
ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಯಾರಿಸ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತರರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. ಕನ್ನಡಕ್ಕೂ ಒಮ್ಮೆ ಈ ಗೌರವ ಸಂದಿತ್ತು.
೧ಪಿ / ಹ್ಯಾಲಿ ಎಂದು ಅಧಿಕೃತವಾಗಿ ಗೊತ್ತುಪಡಿಸಿದ ಹಾಲಿಸ್ ಕಾಮೆಟ್ ಅಥವಾ ಕಾಮೆಟ್ ಹ್ಯಾಲೆ ಭೂಮಿಯಿಂದ ಕಾಣುವ ಅಲ್ಪಾವಧಿಯ ಕಾಮೆಟ್ ಪ್ರತಿ ೧೪-೧೯ ವರ್ಷಗಳು. ಹಾಲಿ ಎಂಬುದು ಭೂಮಿಯಿಂದ ಬರಿಗಣ್ಣಿಗೆ ನಿಯಮಿತವಾಗಿ ಗೋಚರಿಸುವ ಏಕೈಕ ಅಲ್ಪಾವಧಿಯ ಕಾಮೆಟ್ ಮತ್ತು ಮಾನವ ಜೀವಿತಾವಧಿಯಲ್ಲಿ ಎರಡು ಬಾರಿ ಕಾಣಿಸಿಕೊಳ್ಳುವ ಏಕೈಕ ಬೆತ್ತಲೆ-ಕಾಮೆಟ್ ಮಾತ್ರ. ೧೯೮೬ ರಲ್ಲಿ ಹಾಲಿ ಕೊನೆಯ ಸೌರವ್ಯೂಹದ ಒಳ ಭಾಗಗಳಲ್ಲಿ ಕಾಣಿಸಿಕೊಂಡನು ಮತ್ತು ಮುಂದಿನ ೨೦೬೧ರ ಮಧ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ.
ಚಾರ್ಲ್ಸ್ ಮಿಲ್ಲೆಸ್ ಮ್ಯಾನ್ಸನ್ (ಜನನ: 1934ರ ನವೆಂಬರ್ 12ರಂದು - died 19 November 2017) ಅಮೆರಿಕಾದ ಓರ್ವ ಅಪರಾಧಿಯಾಗಿದ್ದು, ಮ್ಯಾನ್ಸನ್ ಕುಟುಂಬ ಎಂದೇ ಹೆಸರಾದ ಒಂದು ಮೇಲ್ನೋಟದ-ಸಮುದಾಯದ ನೇತೃತ್ವವನ್ನು ವಹಿಸಿದ; ಈ ಸಮುದಾಯವು 1960ರ ದಶಕದ ಅಂತ್ಯಭಾಗದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಪ್ರವರ್ಧಮಾನಕ್ಕೆ ಬಂದಿತು.: 163–4, 313 ಅವನ ಸೂಚನೆಯ ಅನುಸಾರ, ಅವನ ಗುಂಪಿನ ಸದಸ್ಯರಿಂದ ಮಾಡಲ್ಪಟ್ಟ ಟೇಟ್/ಲೇಬಿಯಾಂಕಾ ಕೊಲೆಗಳನ್ನು ಎಸಗಲು ಒಳಸಂಚು ಹೂಡಿದ್ದಕ್ಕೆ ಅವನನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿತ್ತು. ಜಂಟಿ-ಹೊಣೆಗಾರಿಕೆಯ ನಿಯಮದ ಮೂಲಕ ಅವನು ತಪ್ಪಿತಸ್ಥನೆಂದು ರುಜುವಾತು ಪಡಿಸಲ್ಪಟ್ಟ; ಒಳಸಂಚಿನ ಉದ್ದೇಶದ ಮುಂದುವರಿಕೆಯಲ್ಲಿ, ಅವನ ಸಹವರ್ತಿ ಪಿತೂರಿಗಾರರು ಎಸಗುವ ಅಪರಾಧಗಳಿಗೆ ಸಂಬಂಧಿಸಿದಂತೆ ಒಳಸಂಚೊಂದರ ಪ್ರತಿಯೋರ್ವ ಸದಸ್ಯವನ್ನು ತಪ್ಪಿತಸ್ಥನನ್ನಾಗಿಸುವುದು ಈ ಜಂಟಿ-ಹೊಣೆಗಾರಿಕೆಯ ನಿಯಮದ ವೈಶಿಷ್ಟ್ಯ."ಹೆಲ್ಟರ್ ಸ್ಕೆಲ್ಟರ್" ಎಂಬ ಶಬ್ದದೊಂದಿಗೆ ಮ್ಯಾನ್ಸನ್ ಗುರುತಿಸಿಕೊಂಡಿದ್ದಾನೆ; ಬೀಟಲ್ಸ್ ತಂಡದಿಂದ ಬರೆಯಲ್ಪಟ್ಟ ಮತ್ತು ಧ್ವನಿಮುದ್ರಿಸಲ್ಪಟ್ಟ ಹೆಲ್ಟರ್ ಸ್ಕೆಲ್ಟರ್ ಎಂಬ ಹಾಡಿನಿಂದ ಅವನು ಈ ಶಬ್ದವನ್ನು ಹೆಕ್ಕಿಕೊಂಡ. ಹಾಡಿನ ಸಾಹಿತ್ಯವು ತಾನು ನಂಬಿದ ಒಂದು ಭೀಕರವಾದ ಜನಾಂಗೀಯ ಯುದ್ಧದ ಕುರಿತಾಗಿದೆ ಎಂಬುದಾಗಿ ತಪ್ಪಾಗಿ ಗ್ರಹಿಸಿದ್ದ ಮ್ಯಾನ್ಸನ್, ಸದರಿ ಕೊಲೆಗಳು ಅದನ್ನು ತ್ವರಿತಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಭಾವಿಸಿದ್ದ.
ಅತಿಸೂಕ್ಷ್ಮಾಣುಗಳಿಂದ ತ್ವರಿತಗೊಳಿಸಲ್ಪಡುವ ಅಥವಾ ಕಾರಣವಾಗುವ ಹಾಳಾಗುವಿಕೆಯನ್ನು (ಗುಣಮಟ್ಟ, ಸೇವಿಸಲು ಯೋಗ್ಯವಾದ, ಅಥವಾ ಪೌಷ್ಟಿಕಾಂಶಗಳ ನಷ್ಟ) ಹೆಚ್ಚಾಗಿ ಕಡಿಮೆ ಮಾಡಲು ಇಲ್ಲವೆ ನಿಲ್ಲಿಸಲು ಆಹಾರವನ್ನು ಸಂಸ್ಕರಿಸುವ ಮತ್ತು ನಿರ್ವಹಣೆಯ ಕಾರ್ಯವಿಧಾನವೇ ಆಹಾರ ಸಂರಕ್ಷಣೆ . ಆದಾಗ್ಯೂ, ಕೆಲವು ಪದ್ಧತಿಗಳಲ್ಲಿ ಆಹಾರವನ್ನು ಕಾಪಾಡಲು ಮತ್ತು ನಿರ್ದಿಷ್ಟ ಗುಣಮಟ್ಟವನ್ನು ಸೇರಿಸಲು ಉಪಯೋಗಕಾರಿ ಬೂಷ್ಟು , ಈಸ್ಟ್ ಗಳು ಅಥವಾ ಮೃದು ಅಣುಜೀವಿಗಳನ್ನು ಉಪಯೋಗಿಸುತ್ತಾರೆ (ಉದಾ. ಚೀಸ್, ವೈನ್).
ಕರ್ನಾಟಕವು (ಪೂರ್ವದಲ್ಲಿ ಮೈಸೂರು ರಾಜ್ಯ) ಭಾರತದಲ್ಲಿನ ರಾಜ್ಯವೊಂದು. ಕರ್ನಾಟಕವು ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಅತಿ ದೊಡ್ಡ ರಾಜ್ಯವು ಹಾಗೂ ದೇಶದ ಆರನೆಯ ದೊಡ್ಡ ರಾಜ್ಯವು ಆಗಿದೆ. ೧೯೭೩ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಮಹಾಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ).
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
ಬಸವಣ್ಣ ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ=ಮಾದರಸ,ತಾಯಿ=ಮಾದಲಂಬಿಕೆ (ಬಸವ,ಬಸವೇಶ್ವರ ) ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ,ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣರು ಲಿಂಗ ತಾರತಮ್ಯ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು.
ಉತ್ತರ ಐರ್ಲೆಂಡ್ (ಐರಿಷ್:Tuaisceart Éireann, ಅಲ್ಸ್ಟರ್ ಸ್ಕಾಟ್ಸ್: ನಾರ್ಲಿನ್ ಏರ್ಲನ್ನ್ ) ಯುನೈಟೆಡ್ ಕಿಂಗ್ಡಮ್ ನ ನಾಲ್ಕು ರಾಷ್ಟ್ರಗಳಲ್ಲಿ ಒಂದಾಗಿದೆ. ಐರ್ಲೆಂಡ್ ನ ದ್ವೀಪದ ಈಶಾನ್ಯ ಭಾಗದಲ್ಲಿ ನೆಲೆಯಾಗಿರುವ ಇದು, ದಕ್ಷಿಣ ಹಾಗು ಪಶ್ಚಿಮಕ್ಕೆ ರಿಪಬ್ಲಿಕ್ ಆಫ್ ಐರ್ಲೆಂಡ್ ನೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. 2001 UK ಜನಗಣತಿಯ ಸಮಯದಲ್ಲಿ ಇದು 1,685,000ರಷ್ಟು ಜನಸಂಖ್ಯೆ ಹೊಂದಿತ್ತು, ಇದರಲ್ಲಿ ದ್ವೀಪದ ಒಟ್ಟಾರೆ ಜನಸಂಖ್ಯೆಯು ಸುಮಾರು 30% ಹಾಗು ಯುನೈಟೆಡ್ ಕಿಂಗ್ಡಮ್ ಜನಸಂಖ್ಯೆಯಲ್ಲಿ ಸುಮಾರು 3%ನಷ್ಟು ಸೇರಿದೆ.
ಸೋನಾರ್ ಅಥವಾ Sonar (‘SOund Navigation And Ranging’ ಇದರ ಸಂಕ್ಷಿಪ್ತ ರೂಪ) ಇದೊಂದು ಶಬ್ದ ಪ್ರಸಾರದ ಮೂಲಕ (ಸಾಮಾನ್ಯವಾಗಿ ನೀರಿನಾಳದಲ್ಲಿ, ಸಬ್ಮೆರಿನ್ ನೌಕಾಯಾನದಲ್ಲಿ) ಸಂಪರ್ಕಕ್ಕಾಗಿ ಅಥವಾ ಇತರ ನೌಕೆಗಳನ್ನು ಪತ್ತೆ ಹಚ್ಚಲು ಉಪಯೋಗಿಸುವ ತಂತ್ರವಾಗಿದೆ. ಎರಡು ರೀತಿಯ ತಾಂತ್ರಿಕತೆಗೆ ಸೋನಾರ್ ಎಂದು ಕರೆಯಲಾಗುತ್ತದೆ: ನಿಷ್ಕ್ರಿಯ ಸೋನಾರ್ ಇದು ಹಡಗುಗಳಿಂದ ಮಾಡಲ್ಪಟ್ಟ ಶಬ್ದಗಳನ್ನು ಆಲಿಸಲು ಅಗತ್ಯವಾಗಿದೆ. ಸಕ್ರಿಯ ಸೋನಾರ್ ಇದು ಶಬ್ದದ ನಾಡಿಯ ವಿಮೋಚನೆಗಾಗಿ ಹಾಗೂ ಪ್ರತಿಧ್ವನಿಯನ್ನು ಆಲಿಸಲು ಅಗತ್ಯವಾಗಿದೆ.
'ಆಂಗ್ಕರ್ ವಾಟ್' (ನಗರ ವತ್ತ) ಕಾಂಬೋಡಿಯಾ ದೇಶದಲ್ಲಿರುವ ಹಿಂದೂ ದೇವಾಲಯ ಸಮುಚ್ಛಯ. ಕಾಂಬೋಡಿಯಾ ದೇಶದ ಖ್ಮೇರ್(Khmer) ಸಾಮ್ರಾಜ್ಯದ ರಾಜಧಾನಿಯಾಗಿದ್ದ 'ಆಂಗ್ಕರ್' ಎಂಬಲ್ಲಿದೆ. ಇದನ್ನು ಸಾಮ್ರಾಟ ಎರಡನೆಯ ಸೂರ್ಯವರ್ಮ ೧೨ನೆಯ ಶತಮಾನದಲ್ಲಿ ಕಟ್ಟಿಸಿದನು.ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧಾರ್ಮಿಕ ಸಮುಚ್ಛಯವಾಗಿದೆ.ಇದು ಆಯತಾಕಾರದಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದವಾಗಿದೆ.
ಕೌಲಾಲಂಪುರ್ (ಜಾವಿ(ಇದು ಮಲೆಷ್ಯಾದ ಭಾಷಾ ಲಿಪಿ: كوالا لومڤور; ಭಾಷಾಂತರಿಸಿದಾಗ: "ರಾಡಿ ಮಣ್ಣಿನ ದೊಡ್ಡ ಕೆರೆ," "ಮಣ್ಣಿನ ದೊಡ್ಡ ನದಿ ಹರಿವು," ಮತ್ತು"ರಾಡಿ ಮಣ್ಣಿನ ನಗರ "ಎಂದಾಗುತ್ತದೆ; pronounced /ˈkwɑːləlʊmˈpʊər/ ಇಂಗ್ಲಿಷಲ್ಲಿ; ಮಲಯಾ [kwɑlɑlʊmpʊ], ಸ್ಥಳಿಯವಾಗಿ [kwɑləlʊmpɔ] ಅಥವಾ ಇಲ್ಲವೇ [kɔlɔmpɔ], ಇದನ್ನು ಸಾಮಾನ್ಯವಾಗಿ ಸಂಕ್ಷಿಪ್ತವಾಗಿ, K.L. ಎನ್ನುತ್ತಾರೆ,ಇದು ದೊಡ್ಡ ನಗರ ಮತ್ತು ಮಲೆಷ್ಯಾದ ರಾಜಧಾನಿಯಾಗಿದೆ. ನಗರದ ವ್ಯಾಪ್ತಿ ಪ್ರದೇಶವು ಒಟ್ಟು244 km2 (94 sq mi),ವಿಸ್ತೀರ್ಣ ಹೊಂದಿದೆ.ಒಟ್ಟು 1.6 ದಶಲಕ್ಷ ಜನಸಂಖ್ಯೆಯು 2006 ರಲ್ಲಿತ್ತು. ಬೃಹತ್ ಕೌಲಾಲಂಪುರ್ ನ್ನು ಕ್ಲಾಂಗ್ ವ್ಯಾಲಿ (ಕೌಲಾಲಂಪುರ್ ಮತ್ತು ಸುತ್ತಮತ್ತಲಿನ ಉಪನಗರದ ವಲಯ)ಎಂದೂ ಕರೆಯಲಾಗುತ್ತದೆ.ಇಲ್ಲಿನ ಒಟ್ಟು ನಗರೀಕರಣದ ಸಾಂದ್ರತೆಯು 7.2 ದಶಲಕ್ಷವಾಗಿದೆ.
ಸಸ್ಯ ಜೀವಕೋಶಗಳು ಯೂಕ್ಯಾರಿಯೋಟಿಕ್ (ಅಂದರೆ, ಒಂದು ಪೊರೆಯಿಂದ ಆವರಿಸಲ್ಪಟ್ಟ ಕೋಶಕೇಂದ್ರವನ್ನು ಒಳಗೊಂಡಿರುವ) ಜೀವಕೋಶಗಳಾಗಿದ್ದು, ತಾವು ಹೊಂದಿರುವ ಹಲವಾರು ಪ್ರಮುಖ ಅಂಶಗಳಿಂದಾಗಿ ಅವು ಇತರ ಯೂಕ್ಯಾರಿಯೋಟಿಕ್ ಜೀವಿಗಳ ಜೀವಕೋಶಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತವೆ. ಅವುಗಳ ಭಿನ್ನತಾ ಸೂಚಕ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ: ಒಂದು ಬೃಹತ್ತಾದ ಮಧ್ಯಭಾಗದ ಕುಹರ: ಇದು ಟೋನೋಪ್ಲಾಸ್ಟ್ <JA ರಾವೆನ್ (1997) ದಿ ವ್ಯಾಕ್ಯುಓಲ್: ಎ ಕಾಸ್ಟ್-ಬೆನಿಫಿಟ್ ಅನಾಲಿಸಿಸ್. ಅಡ್ವಾನ್ಸಸ್ ಇನ್ ಬಟಾನಿಕಲ್ ರಿಸರ್ಚ್ 25, 59–86</ref> ಎಂದು ಕರೆಯಲ್ಪಡುವ ಒಂದು ಒಳಪೊರೆಯಿಂದ ಆವರಿಸಲ್ಪಟ್ಟಿರುವ ಒಂದು ನೀರು-ತುಂಬಿದ ಪ್ರದೇಶವಾಗಿದೆ.
ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC. ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು. ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು.
ವಿದ್ಯುಲ್ಲೇಪಿಸುವಿಕೆ ಎಂಬುದು ಒಂದು ಲೋಹಲೇಪದ ಪ್ರಕ್ರಿಯೆಯಾಗಿದ್ದು, ದ್ರಾವಣವೊಂದರಿಂದ ಒಂದು ಬಯಸಿದ ಮೂಲದ್ರವ್ಯದ ಧನ ಅಯಾನುಗಳನ್ನು ಅಪಕರ್ಷಿಸಲು ಅದು ವಿದ್ಯುತ್ತಿನ ಪ್ರವಾಹವನ್ನು ಬಳಸುತ್ತದೆ ಮತ್ತು ಒಂದು ಲೋಹದಂಥ ಮೂಲದ್ರವ್ಯದ ಒಂದು ತೆಳುವಾದ ಪದರದೊಂದಿಗೆ ಒಂದು ವಹನೀಯ ವಸ್ತುವನ್ನು ಲೇಪಿಸುಸುತ್ತದೆ. ಒಂದು ಮೇಲ್ಮೈಗೆ ಬಯಸಿದ ಗುಣವೊಂದನ್ನು (ಉದಾಹರಣೆಗೆ, ಉಜ್ಜಿಹೋಗುವಿಕೆ ಮತ್ತು ಸವೆತ ನಿರೋಧಶಕ್ತಿ, ಕೊರೆತ ಸಂರಕ್ಷಣೆ, ಜಾರಿಕೆ, ಸೌಂದರ್ಯ ಪ್ರಜ್ಞೆಯ ಗುಣಲಕ್ಷಣಗಳು, ಇತ್ಯಾದಿಗಳನ್ನು) ದಯಪಾಲಿಸಲು ಮೂಲದ್ರವ್ಯದ ಪದರವೊಂದನ್ನು ಸಂಚಯಿಸುವುದಕ್ಕಾಗಿ ವಿದ್ಯುಲ್ಲೇಪಿಸುವಿಕೆಯನ್ನು ಪ್ರಧಾನವಾಗಿ ಬಳಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಕೈಗೊಳ್ಳದಿದ್ದರೆ ಸದರಿ ಮೇಲ್ಮೈ ಆ ಗುಣದಿಂದ ವಂಚಿತವಾಗುತ್ತದೆ.
ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಕೆಳ ಪಂಗಡದ ದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು.
ಪರಿಸರ ವ್ಯವಸ್ಥೆ ಎಂಬ ಪದವು ಪರಿಸರವೊಂದರ ಸಂಯೋಜಿತ ಭೌತಿಕ ಮತ್ತು ಜೈವಿಕ ಘಟಕಗಳಿಗೆ ಅನ್ವಯಿಸುತ್ತದೆ. ಒಂದು ಪರಿಸರ ವ್ಯವಸ್ಥೆಯು ಸಾಮಾನ್ಯವಾಗಿ ನೈಸರ್ಗಿಕ ಪರಿಸರದೊಳಗಿನ ಒಂದು ಪ್ರದೇಶವಾಗಿದ್ದು, ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಅಜೀವಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಪರಿಸರ ವ್ಯವಸ್ಥೆಗಳು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು.
ಕುಡಿಯುವ ನೀರು ಅಥವಾ ಕುಡಿಯುವ ನೀರಿನ ಸಾಕಷ್ಟು ಸುರಕ್ಷಿತ ನೀರು ಮಾನವರಿಂದ ಸೇವಿಸಲ್ಪಡುವ ಅಥವಾ ತಕ್ಷಣದ ಅಥವಾ ದೀರ್ಘಕಾಲದ ಹಾನಿ ಅಪಾಯವನ್ನು ಕಡಿಮೆ ಬಳಸಲಾಗುತ್ತದೆ. ಅತ್ಯಂತ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ನೀರಿನ ಮಾತ್ರ ಒಂದು ವಾಸ್ತವವಾಗಿ ಕನಿಷ್ಠ ಪ್ರಮಾಣದ ಸೇವಿಸಲು ತಯಾರಿಕೆಯಲ್ಲಿ ಬಳಸಲಾಗುತ್ತದೆ ಸಹ, ಮನೆಗಳು, ವಾಣಿಜ್ಯ ಮತ್ತು ಕೈಗಾರಿಕಾ ಕುಡಿಯುವ ನೀರಿನ ಗುಣಮಟ್ಟ ಭೇಟಿ ಸರಬರಾಜು. (ಕುಡಿಯುವ ಉದ್ದೇಶಗಳಿಗಾಗಿ ಬೇರೆ) ವಿಶಿಷ್ಟ ಉಪಯೋಗಗಳು ಶೌಚಾಲಯ ಸ್ವಚ್ಛಗೊಳಿಸಲು, ತೊಳೆಯುವುದು, ಮತ್ತು ಭೂದೃಶ್ಯ ನೀರಾವರಿ ಸೇರಿವೆ.
ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. ಕ್ರಿ.ಶ.ಸು.
ಭಾರತದ ವಾಯುವ್ಯ ಭಾಗದಲ್ಲಿರುವ ಪಂಜಾಬ್ (ਪੰਜਾਬ),ಅನ್ನು ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಹರ್ಯಾಣ, ರಾಜಸ್ಥಾನ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಸುತ್ತುವರಿದಿದೆ. ರಾಷ್ಟ್ರದ ಚಿಕ್ಕ ರಾಜ್ಯಗಳಲ್ಲಿ ಒಂದಾಗಿರುವ ಪಂಜಾಬ್ ನ ಸಮೃದ್ಧಿ ಭವ್ಯವಾಗಿದೆ.1947 ರಲ್ಲಿ ಪಂಜಾಬ್ ಪ್ರದೇಶವನ್ನು ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನವೆಂದು ವಿಂಗಡಿಸಿದ ಬಳಿಕ 1947 ರಲ್ಲಿ ಪಂಜಾಬ್ ಮತ್ತೊಮ್ಮೆ ವಿಂಗಡನೆಯಾಗಿ ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಹರ್ಯಾಣ ಎಂದಾಯಿತು. ಇದು ಗ್ರೀಕರಿಗೆ, ಅಫ್ಘಾನಿಯರಿಗೆ, ಇರಾನಿಗಳಿಗೆ ಮತ್ತು ಮಧ್ಯ ಏಶ್ಯಾದ ಜನರಿಗೆ ರಹದಾರಿಯಾಗಿ ಉಳಿಯಿತು.ಪಂಜಾಬ್ ಗೆ ಐತಿಹಾಸಿಕ ಮಹತ್ವವಿದ್ದು, ಇದರ ಕುರಿತಾಗಿ ಗ್ರೀಕರು ಮತ್ತು ಝೋರೊಸ್ಟ್ರಿಯನ್ ಗಳಲ್ಲಿ ಕೂಡ ಜನಪ್ರಿಯತೆ ಇದೆ.
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ಈ ನೀತಿಗಳಿಂದ ಹಲವು ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು.
ಜಲಿಯನ್ವಾಲಾ ಬಾಗ್ ಹತ್ಯಾಹಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಗಂಡಸರು, ಹೆಂಗಸರು, ಮಕ್ಕಳೆಲ್ಲರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು., ಮತ್ತು ಸಿವಿಲ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಸ್ಮಿತ್ ನೀಡಿದ ಮಾಹಿತಿಯ ಪ್ರಕಾರ, ಸಾವಿಗೀಡಾದವರು ೧೮೦೦ಕ್ಕೂ ಹೆಚ್ಚು.
ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಪ್ರಗತಿ ಕಡೆಗೆ ಗುರಿಯಿಟ್ಟು ಅವುಗಳ ಸಮೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.
ಮೋಹನ್ದಾಸ್ ಕರಮ್ ಚಂದ್ ಗಾಂಧಿಯವರು (ಗುಜರಾತಿ: મોહનદાસ કરમચંદ ગાંધી, [moːɦənˈdaːs kəɾəmˈtʂənd ˈɡaːndʱiː] ( listen) ಎಂದು ಉಚ್ಚರಿತ; ೨ನೇಯ ಅಕ್ಟೋಬರ್ ೧೮೬೯ – ೩೦ನೇಯ ಜನವರಿ ೧೯೪೮) ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. ಅವರಿಗೆ ಮಹಾತ್ಮ ಎಂಬ ಬಿರುದು ಇತ್ತು ಅಲ್ಲದೇ ಭಾರತೀಯ ಜನರು ಅವರನ್ನು ಬಾಪೂಜೀ ಎಂದು ಸಂಭೋಧಿಸುತ್ತಿದ್ದರು.
ಪ್ರತಿಧ್ವನಿ ಎಂದರೆ ಸಾಕಷ್ಟು ಪರಿಮಾಣ ಹಾಗೂ ಕಾಲವಿಳಂಬ ಸಹಿತವಾಗಿ ಪ್ರತಿಫಲನಗೊಂಡ ಅಥವಾ ಬೇರೆತೆರನಾಗಿ ಹಿಂತಿರುಗಿಸಲ್ಪಟ್ಟ ಮತ್ತು ಆರಂಭದಲ್ಲಿ ನೇರವಾಗಿ ಪ್ರೇಷಿಸಿದ ಶಬ್ದತರಂಗಕ್ಕಿಂತ ಯಾವುದೊ ರೀತಿಯಲ್ಲಿ ಖಚಿತವಾಗಿ ಬೇರೆಯದೇ ಶಬ್ಧ ತರಂಗವೆಂದು ಗುರುತಿಸಬಹುದಾದ ಶಬ್ದತರಂಗ (ಇಕೊ). ಭಾರಿ ಕಟ್ಟಡದ ಮುಂದೆ ನಿಂತು ಹೋ ಎಂದು ಬೊಬ್ಬೆ ಹೊಡೆದರೆ ಆ ಶಬ್ದ ಸ್ವಲ್ಪ ಹೊತ್ತಾದ ಬಳಿಕ ಪುನಃ ಮರಳಿ ಬಂದು ಬಡಿಯುತ್ತದೆ. ಶಬ್ದದ ಆಕಾರದಿಂದ ಹೊರಟು ಶಬ್ದತರಂಗಗಳು ಪ್ರಸಾರವಾಗುವ ಪಥದಲ್ಲಿ ಯಾವುದಾದರೂ ಅಡಚಣೆ ಇದ್ದರೆ ಅಲ್ಲಿ ಅವು ಸೇರುತ್ತವೆ.
2020 ಬೇಸಿಗೆ ಪ್ಯಾರಾಲಿಂಪಿಕ್ಸ್ ಅನ್ನು , ಟೋಕಿಯೊ 2020 ಪ್ಯಾರಾಲಿಂಪಿಕ್ ಗೇಮ್ಸ್ ಎಂದು ಕರೆಯಲಾಗಿದ್ದು, ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯು ನಿರ್ವಹಿಸುವ ಪ್ರಮುಖ ಅಂತರಾಷ್ಟ್ರೀಯ ಬಹು-ಕ್ರೀಡಾ ಪ್ಯಾರಾಸ್ಪೋರ್ಟ್ಸ್ ಸ್ಪರ್ಧೆ ಇದಾಗಿದೆ. ಇದು 16 ನೇ ಬೇಸಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟವಾಗಿದ್ದು, ಜಪಾನ್ನ ಟೋಕಿಯೊದಲ್ಲಿ 24 ಆಗಸ್ಟ್ ಮತ್ತು 5 ಸೆಪ್ಟೆಂಬರ್ 2021 ನಡುವೆ ನಡೆಯಿತು. ಈ ಸ್ಪರ್ಧೆಗಳನ್ನು ಈ ಹಿಂದೆ 25 ಆಗಸ್ಟ್ ನಿಂದ 6 ಸೆಪ್ಟೆಂಬರ್ ೨೦೨೦ ರ ನಡುವೆ ನಡೆಸಲು ಯೋಜಿಸಲಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2020 ರ ಬೇಸಿಗೆ ಒಲಿಂಪಿಕ್ಸ್ ಜೊತೆಗೆ ೨೦೨೧ ಕ್ಕೆ ಮುಂದೂಡಲಾಯಿತು.
thumb|coin money ಸಾಮಾನ್ಯವಾಗಿ ಸರಕು ಮತ್ತು ಸೇವೆಗಳು ಹಾಗೂ ಋಣಗಳ ವಾಪಸಾತಿಗೆ ಸಂದಾಯದ ರೂಪವೆಂದು ಒಪ್ಪಿಕೊಳ್ಳಲಾದ ಯಾವುದಕ್ಕಾದರೂ ಹಣವೆನ್ನಬಹುದು. ಪ್ರಮುಖವಾಗಿ ಒಂದು ವಿನಿಮಯ ಸಾಧನವಾಗಿ (ಮೀಡಿಯಮ್ ಆಫ಼್ ಎಕ್ಸ್ಚೇಂಜ್), ಒಂದು ಲೆಕ್ಕದ ಏಕಮಾನವಾಗಿ (ಯೂನಿಟ್ ಆಫ಼್ ಅಕೌಂಟ್), ಮತ್ತು ಒಂದು ಮೌಲ್ಯದ ಸಂಗ್ರಹವಾಗಿ (ಸ್ಟೋರ್ ಆಫ಼್ ವ್ಯಾಲ್ಯು) ಹಣವನ್ನು ಉಪಯೋಗಿಸಲಾಗುತ್ತದೆ. ಕೆಲವು ಲೇಖಕರು ಹಣವು ಸ್ಪಷ್ಟವಾಗಿ ಒಂದು ಮುಂದೆ ಸಲ್ಲಿಸುವ ಸಂದಾಯದ ಮಾನದಂಡ (ಸ್ಟ್ಯಾಂಡರ್ಡ್ ಆಫ಼್ ಡೆಫ಼ರ್ಡ್ ಪೇಮಂಟ್) ಆಗಿರಬೇಕೆಂದು ಬಯಸುತ್ತಾರೆ.
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಭೌತಶಾಸ್ತ್ರದಲ್ಲಿ, ಬಲ (Force) ಎಂದರೆ ಯಾವುದೇ ಸ್ವತಂತ್ರ ವಸ್ತುವಿನ ಚಲನೆಯನ್ನು ಬದಲಾಯಿಸುವ ಅಥವಾ ನಿಶ್ಚಲ ವಸ್ತುವಿನಲ್ಲಿ ಒತ್ತಡವನ್ನು ಉಂಟುಮಾಡುವ ಬಾಹ್ಯ ಶಕ್ತಿ. 'ಬಲ'ವು ದ್ರವ್ಯರಾಶಿಯನ್ನು ಹೊಂದಿರುವ ವಸ್ತುವನ್ನು ಅದರ ವೇಗವನ್ನು ಬದಲಾಯಿಸಲು ಕಾರಣವಾಗಬಹುದು (ಉದಾಹರಣೆಗೆ ವಿಶ್ರಾಂತಿ ಸ್ಥಿತಿಯಿಂದ ಚಲಿಸುವುದು), ಅಂದರೆ ವೇಗವನ್ನು ಹೆಚ್ಚಿಸುತ್ತದೆ. 'ಬಲ'ವನ್ನು ಒಂದು ಎಳೆತ ಅಥವಾ ತಳ್ಳುವುದು ಎಂದು ಅಂತರ್ಬೋಧೆಯಿಂದ ವಿವರಿಸಬಹುದು.
ಲ್ಯಾಪ್ಟಾಪ್ ಎಂಬುದು ಖಾಸಗಿ ಕಂಪ್ಯೂಟರ್, ಅದನ್ನು ವಿನ್ಯಾಸಗೊಳಿಸಿರುವುದು ಸಂಚಾರಿ ಬಳಕೆಗೆ ಮತ್ತು ಅದು ಸಣ್ಣ ಹಾಗೂ ಹಗುರ ಇದ್ದು ಬಳಸುವವರು ತಮ್ಮ ಮಡಿಲ ಮೇಲಿಟ್ಟುಕೊಂಡು ಉಪಯೋಗಿಸಬಹುದಾಗಿದೆ. ಡೆಸ್ಕ್ ಟಾಪ್ ಕಂಪ್ಯೂಟರ್ ನೊಳಗಡೆ ಏನೇನು ಸಂಯೋಜನೆಗೊಂಡಿವೆಯೋ ಅವುಗಳಲ್ಲಿ ಬಹುತೇಖ ಲ್ಯಾಪ್ಟಾಪ್ ನಲ್ಲೂ ಇದೆ. ಮುಖ್ಯವಾಗಿ ಪ್ರದರ್ಶಕ, ಕೀಲಿ ಮಣೆ, ಗುರಿ ಸಾಧಕ, (ಟ್ರ್ಯಾಕ್ಪ್ಯಾಡ್ ಎಂದೂ ಕರೆಯಲ್ಪಡುವ ಟಚ್ಪ್ಯಾಡ್, ಮತ್ತು/ಅಥವಾ ಪಾಯ್ನ್ಟಿಂಗ್ ಸ್ಟಿಕ್), ಧ್ವನಿಪೆಟ್ಟಿಗೆಗಳು,ಮತ್ತು ಸಣ್ಣ ಹಾಗು ಹಗೂರವಾದ ಬ್ಯಾಟರಿ ಇರುತ್ತದೆ.
ಸಸ್ಯಗಳು ಜೀವಿಗಳಲ್ಲಿ ಒಂದು ಪ್ರಮುಖ ವಿಂಗಡಣೆ. ಸುಮಾರು ೩೫೦,೦೦೦ ಸಸ್ಯ ಪ್ರಬೇಧಗಳು (species) ಇವೆಯೆಂದು ಅಂದಾಜು ಮಾಡಲಾಗಿದೆ. ಸಸ್ಯಗಳು ಪ್ರಾಣಿಗಳಂತೆ ಜಂಗಮಗಳಲ್ಲ,ಅಂದರೆ ತಮ್ಮ ಸ್ಥಳವನ್ನು ಬಿಟ್ಟು ಓಡಾಡುವುದಿಲ್ಲ.ಎಲ್ಲಾದರೊಂದು ಕಡೆ ಅಂಟಿಕೊಂಡಿರುತ್ತವೆ.ಹೀಗಾಗಿ ಇವುಗಳನ್ನು ಸ್ಥಾವರಗಳೆಂದು ಕರೆಯಬಹುದು.ಗಿಡಮರಗಳೆಲ್ಲ ಈ ವರ್ಗಕ್ಕೆ ಸೇರುತ್ತವೆ.ಸ್ಥಾವರ - ಜಂಗಮಗಳ ವರ್ಗೀಕರಣಕ್ಕೆ ಅಪವಾದಗಳೂ ಇಲ್ಲದಿಲ್ಲ.
ಕನ್ನಡ ರಂಗಭೂಮಿಯ ಪರಂಪರೆ ಅತಿ ಪ್ರಾಚೀನವಾದದ್ದೆಂಬುದರಲ್ಲಿ ಸಂದೇಹವಿಲ್ಲ. ಕನ್ನಡ ರಂಗಭೂಮಿಯ ಪ್ರಕಾರಗಳಲ್ಲಿ ಗೊಂಬೆಯಾಟ, ತೊಗಲು ಗೊಂಬೆಯಾಟ, ಬಯಲಾಟ ದಶಾವತಾರ ಎಂದು ಕರೆಯುವ ಯಕ್ಷಗಾನದ ಆಟಗಳು (ಅದರ ತೆಂಕು ಬಡಗು ಎಂಬ ಪ್ರಭೇದ), ದೊಡ್ಡಾಟ(ಮೂಡಲಪಾಯ ಎನ್ನುವುದು ಅಧ್ಯಯನಕ್ಕೆ ಇಟ್ಟ ಹೆಸರು), ಘಟ್ಟದಕೋರೆ, ಶನಿಕಥೆ ಆಟ, ಕೃಷ್ಣಪಾರಿಜಾತ ಎನ್ನುವ ದೊಡ್ಡಾಟದ ಪ್ರಕಾರಗಳು ಮತ್ತು ನಾಟಕಗಳು ಪ್ರಮುಖವಾಗಿವೆ. ಪಾರ್ತಿಸುಬ್ಬನ ರಾಮಾಯಣದ ಯಕ್ಷಗಾನದ ಪ್ರಸಂಗಗಳು (ಸೀತಾಪಹಾರ, ವಾಲೀ ವಧಾ, ರಾವಣಾ ವಧಾ) ಸುಮಾರು ೧೬ನೇ ಶತಮಾನದವು.
ಪ್ರಾಚೀನ ಈಜಿಪ್ಟ್ ಪೌರಾತ್ಯ ಉತ್ತರ ಆಫ್ರಿಕಾದ ನೈಲ್ ನದಿ ದಂಡೆಯುದ್ದಕ್ಕೂ ಚಾಚಿಕೊಂಡಿದ್ದ ಒಂದು ಪುರಾತನ ನಾಗರಿಕತೆ, ಈ ಪ್ರದೇಶದಲ್ಲಿ ಈಗ ಆಧುನಿಕ ಈಜಿಪ್ಟ್ ಇದೆ. ಈ ನಾಗರಿಕತೆಯು ಸುಮಾರು ಕ್ರಿ.ಪೂ 3150ರ ಸಂದರ್ಭದಲ್ಲಿ ಒಳನಾಡು ಮತ್ತು ಕೆಳ ಈಜಿಪ್ಟಿನ ರಾಜಕೀಯ ಸಂಘಟನೆಯೊಂದಿಗೆ ಮೊದಲ ಫೇರೋನಡಿಯಲ್ಲಿ ಏಕೀಭವಗೊಂಡು, ನಂತರದ ಸುಮಾರು ಮೂರು ಸಹಸ್ರವರ್ಷಗಳಷ್ಟು ಕಾಲ ಬೆಳವಣಿಗೆ ಹೊಂದಿತು. ಇದರ ಇತಿಹಾಸವು ಸುಭದ್ರ ರಾಜ್ಯ ಗಳ ಸಂದರ್ಭದಲ್ಲಿ ಉತ್ತಮವಾಗಿತ್ತು, ನಂತರ ಈ ರಾಜ್ಯಗಳು 'ಮಧ್ಯಕಾಲೀನ ಯುಗ' ಎಂದು ಕರೆಯುವ ಪರಸ್ಪರ ಅಭದ್ರತೆಯ ಅವಧಿಯಲ್ಲಿ ಬೇರ್ಪಟ್ಟವು.
ಲೋಹಾಭಗಳೆಂದರೆ ಲೋಹ ಮತ್ತು ಅಲೋಹಗಳೆರಡರ ನಡುವಿನ ಗುಣಲಕ್ಷಣಗಳನ್ನು ತೋರುವ ಅಥವಾ ಅವೆರಡರ ಗುಣಲಕ್ಷಣಗಳನ್ನು ತೋರುವ ಮೂಲವಸ್ತುಗಳು. ಇವುಗಳ ವಿಭಿನ್ನವಾದ ಮತ್ತು ವಿಚಿತ್ರವಾದ ಗುಣಲಕ್ಷಣಗಳನ್ನು ತೋರುವ ಗುಣದಿಂದಾಗಿ ಇವುಗಳಿಗೆ ನಿಖರವಾದ ವ್ಯಾಖ್ಯೆಯನ್ನು ನೀಡುವುದು ಕಷ್ಟ. ಈ ವಿಶೇಷ ಗುಣದ ಹೊರತಾಗಿಯೂ ಇವು ರಸಾಯನಶಾಸ್ತ್ರದ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿವೆ.
ಅರಿಸ್ಟಾಟಲ್ (Greek: Ἀριστοτέλης , ಅರಿಸ್ಟಾಟೆಲೆಸ್ ) (384 BC – 322 BC) ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ.
ಹಜ್ ( /h ɑː dʒ / ; ಅರೇಬಿಕ್: حَجّ Ḥajj ; ಕೆಲವೊಮ್ಮೆ ಇಂಗ್ಲಿಷ್ನಲ್ಲಿ ಹಡ್ಜ್, ಹಡ್ಜಿ ಅಥವಾ ಹಜ್ ಎಂದು ಉಚ್ಚರಿಸಲಾಗುತ್ತದೆ) ಇದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ವಾರ್ಷಿಕ ಇಸ್ಲಾಮಿಕ್ ತೀರ್ಥಯಾತ್ರೆಯಾಗಿದ್ದು ಹಜ್ ಕಡ್ಡಾಯವಾದ ಧಾರ್ಮಿಕ ಕರ್ತವ್ಯವಾಗಿದ್ದು, ಇದು ಮುಸ್ಲಿಮರಿಗೆ ಅತ್ಯಂತ ಪವಿತ್ರ ನಗರವಾಗಿದೆ. ಎಲ್ಲಾ ವಯಸ್ಕ ಮುಸ್ಲಿಮರು ತಮ್ಮ ಹಜ್ ಮುಸ್ಲಿಮರಿಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ದೈಹಿಕವಾಗಿ ಮತ್ತು ಆರ್ಥಿಕವಾಗಿ ಪ್ರಯಾಣಿಸಲು ಮತ್ತು ಅವರ ಅನುಪಸ್ಥಿತಿಯಲ್ಲಿ ಮನೆಯನ್ನು ಕುಟುಂಬವನ್ನು ಬೆಂಬಲಿಸಬೇಕು. ಇಸ್ಲಾಮಿಕ್ ಪರಿಭಾಷೆಯಲ್ಲಿ, ಹಜ್ ಎಂಬುದು ಸೌದಿ ಅರೇಬಿಯಾದ ಪವಿತ್ರ ನಗರವಾದ ಮೆಕ್ಕಾದಲ್ಲಿರುವ ಕಾಬಾ, "ಅಲ್ಲಾಹನ ಮನೆ" ಗೆ ಮಾಡಿದ ತೀರ್ಥಯಾತ್ರೆಯಾಗಿದೆ.
ಮಣ್ಣು ಒಂದು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ(ಸಾಯಿಲ್ ಹಾರಿಜಾನ್ಸ್), ಇದು ತನ್ನ ಮೂಲ ವಸ್ತುವಿಗಿಂತ ಮೇಲ್ಮೈಯಲ್ಲಿ ಭೌತಿಕವಾಗಿ, ರಾಸಾಯನಿಕವಾಗಿ, ಮತ್ತು ಖನಿಜಾಂಶಗಳ ಇರುವಿಕೆಯಲ್ಲಿ ವ್ಯತ್ಯಾಸ ತೋರುತ್ತದೆ. ಇದು ರಾಸಾಯನಿಕವಾಗಿ ಹಾಗು ಪರಿಸರದ ಕ್ರಿಯೆಗಳಿಂದಾಗಿ ಮುರಿದ ಬಂಡೆಗಳಿಂದ ಅಥವಾ ಕೊಚ್ಚಿಹೋದ ಅನೇಕ ಮಾರ್ಪಾಡುಗಳನ್ನೊಳಗೊಂಡ, ಹವಾ ಪರಿಣಾಮಗಳಿಂದ ,ಮತ್ತು ಭೂಸವೆತಗಳಿಂದ ರೂಪುಗೊಂಡಿದೆ .
ಭಾರತದ ಸ್ವಾತ್ರಂತ್ರ್ಯ ಚಳುವಳಿಯು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತ್ರಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದು ೧೮೫೭ರಿಂದ ೧೯೪೭ರ ಆಗಸ್ಟ್ ೧೫ರವರೆಗೆ ನಡೆದ ಭಾರತದ ವಿವಿಧ ಸಂಘ-ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣಾಹುತಿಗಳ ಸಂಗಮ. ೧೭೫೭ರಲ್ಲಿ ವಂಗದ ನವಾಬನಾಗಿದ್ದ ಸಿರಾಜುದ್ದೌಲನನ್ನು ಪ್ಲಾಸೀ ಕದನದಲ್ಲಿ ಪರಾಜಯಗೊಳಿಸಿದ ಈಸ್ಟ್ ಇಂಡಿಯ ಕಂಪನಿಯ ಬ್ರಿಟಿಷ್ ಸೈನ್ಯ, ಇದರಲ್ಲಿ ನೆರವಾದ ಮೀರ್ ಜಾಫರನಿಗೆ ಪಟ್ಟಕಟ್ಟಿತು.
ಕರ್ನಾಟಕದ ಏಕೀಕರಣ ಭಾರತದ ರಾಜ್ಯ ಕರ್ನಾಟಕವನ್ನು ರೂಪಿಸುತ್ತದೆ, ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ ಮತ್ತು ಮೈಸೂರು ರಾಜ್ಯ ಎಂದು ಹೆಸರಿಸಲ್ಪಟ್ಟವು. ದಶಕಗಳ ಹಿಂದೆ, ಬ್ರಿಟಿಷ್ ಆಳ್ವಿಕೆಯಲ್ಲಿ ಕನ್ನಡ ಜನಸಂಖ್ಯಾಶಾಸ್ತ್ರದ ಆಧಾರದ ಮೇಲೆ ರಾಜ್ಯದ ಮೊದಲ ಬೇಡಿಕೆಗಳನ್ನು ಮಾಡಲಾಗಿತ್ತು.
ಅಯಾನುಪರಮಾಣುವಿನ (ಆ್ಯಟಮ್) ಕೇಂದ್ರದಲ್ಲಿ ಪ್ರೊಟಾನ್ಗಳೂ ನ್ಯೂಟ್ರಾನ್ಗಳೂ (ಪ್ರೊಟಾನ್-ಎಲೆಕ್ಟ್ರಾನನ್ನು ಕಳಚಿದಮೇಲೆ ಉಳಿಯುವ ಹೈಡ್ರೊಜನ್ ಪರಮಾಣು, ಅಂದರೆ ಹೈಡ್ರೊಜನ್ ಪರಮಾಣುವಿನ ನ್ಯೂಕ್ಲಿಯಸ್, ಇದು ಧನವಿದ್ಯುತ್ಕಣ ; ನ್ಯೂಟ್ರಾನ್-ವಿದ್ಯುದ್ರಹಿತ ಕಣ ; ಎಲೆಕ್ಟ್ರಾನ್-ಋಣ ವಿದ್ಯುತ್ಕಣ; ನ್ಯೂಕ್ಲಿಯಸ್-ಬೀಜ) ಇರುವ ಬೀಜವಿದೆ. ಇದರ ಸುತ್ತ ಎಲೆಕ್ಟ್ರಾನ್ಗಳು ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿವೆ. ಸಾಮಾನ್ಯವಾಗಿ ಬೀಜದಲ್ಲಿರುವ ಪ್ರೊಟಾನ್ ಮತ್ತು ಎಲೆಕ್ಟ್ರಾನ್ಗಳ ಸಂಖ್ಯೆ ಸಮಾನ.
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಮುಕ್ತಾಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷಾನಿಲಗಳು ಬಳಕೆಯಾದವು.
ನೀರಾವರಿ ಎಂದರೆ ನೆಲಕ್ಕೆ ಕೃತಕವಾಗಿ ನೀರಿನ ಅನ್ವಯ (ಇರಿಗೇಶನ್). ಮುಖ್ಯವಾಗಿ ಬೇಸಾಯಕ್ಕೆ ಮಳೆನೀರನ್ನು ಮಾತ್ರ ಆಶ್ರಯಿಸದೆ ಇತರ ನೈಸರ್ಗಿಕ ಮೂಲಗಳಿಂದ-ಉದಾಹರಣೆಗೆ ನದಿ ಸರೋವರ ತೋಡುಬಾವಿಗಳಿಂದ-ನೀರನ್ನು ಒದಗಿಸುವುದು ನೀರಾವರಿಯ ಉದ್ದೇಶ. ನೀರಿನ ಮೂಲ (ಜಲಾಶಯ) ಮತ್ತು ಸಂಗ್ರಹಿತ ಜಲವನ್ನು ಉದ್ದಿಷ್ಟ ನಿವೇಶನಗಳಿಗೆ ಹರಿಸಲು ಕಾಲುವೆಗಳೂ-ಇವು ನೀರಾವರಿಯ ಪ್ರಮುಖಾವಶ್ಯಕತೆಗಳು.
ಸಮಾಜಶಾಸ್ತ್ರವು ಸಮಾಜ ವಿಜ್ಞಾನಗಳಲ್ಲಿ ಹೊಸದಾದ ಮತ್ತು ಬಹುಶೀಘ್ರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಗಳಲ್ಲೊಂದು (ಸೋಷಿಯಾಲಜಿ). ಈ ಪರಿಕಲ್ಪನೆಯನ್ನು ಪ್ರಥಮಬಾರಿಗೆ ಫ್ರಾನ್ಸ್ನ ಸಾಮಾಜಿಕ ತತ್ತ್ವಜ್ಞಾನಿ ಆಗಸ್ಟ್ ಕಾಂಟ್ ಪ್ರಯೋಗಿಸಿದ (1829). ಮಾನವ ಮತ್ತು ಸಮಾಜದ ನಡುವಿನ ಪರಸ್ಪರ ಸಂಬಂಧ ಮತ್ತು ಪ್ರಭಾವ ಸ್ವರೂಪವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಈ ವಿಷಯ ವ್ಯಾಪ್ತಿಯಲ್ಲಿ ಸಮಾಜದ ಎಲ್ಲ ಸಂಸ್ಥೆಗಳೂ ಆ ಸಂಸ್ಥೆಗಳಲ್ಲಿ ನಡೆಯುವ ಚಟವಟಿಕೆಗಳೂ ಕಾಲದಿಂದ ಕಾಲಕ್ಕೆ ಸಮಾಜದಲ್ಲಿ ತಲೆದೋರುವ ಬದಲಾವಣೆಗಳೂ ಪ್ರಮುಖ ಸ್ಥಾನ ಪಡೆದಿವೆ.
ಮೂಲಭೂತ ಹಕ್ಕುಗಳು ವ್ಯಕ್ತಿಗಳ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಅಗತ್ಯವಾದ ಹಕ್ಕುಗಳು. ಈ ಹಕ್ಕುಗಳು ವ್ಯಕ್ತಿಗಳ ಅಸ್ತಿತ್ವ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಮೂಲಭೂತ ಅಥವಾ ಅವಶ್ಯಕವಾದ ಕಾರಣ, ನವದೀಪ್ ಚೌಧರಿ ಅವರ ಪ್ರಕಾರ ಇದನ್ನು 'ಮೂಲಭೂತ' ಹಕ್ಕುಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಭಾರತದ ಸಂವಿಧಾನದ ಭಾಗ III (ಲೇಖನಗಳು 12 ರಿಂದ 35) ರಲ್ಲಿ ಪ್ರತಿಪಾದಿಸಲಾಗಿದೆ.ಸಂವಿಧಾನದಲ್ಲಿ ೬ ಮೂಲಭೂತ ಹಕ್ಕುಗಳಿವೆ.
ವಿಜಯನಗರ ಸಾಮ್ರಾಜ್ಯ:(ಕ್ರಿ.ಶ.೧೩೩೬ - ೧೬೪೬) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. ೧೩ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (ಕ್ರಿ.ಶ ೧೨೯೦ - ೧೩೨೦) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ.
ತೂಕ(Weight) ಒಂದು ವಸ್ತುವಿನ ಮೇಲೆ ವರ್ತಿಸುವ ಅದು ಇರುವ ಗ್ರಹ (Planet)ದ ಗುರುತ್ವಶಕ್ತಿಯನ್ನು ಆ ವಸ್ತುವಿನ ತೂಕ ಎನ್ನುತ್ತಾರೆ.ಯಾವುದೇ ವಸ್ತುವಿನ ತೂಕವು ಅದು ಇರುವ ಗ್ರಹದ ಗುರುತ್ವಕೇಂದ್ರಕ್ಕಿರುವ ದೂರ ಮತ್ತು ಅದರ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.ಯಾವುದೇ ವಸ್ತುವಿನ ತೂಕವು ಗ್ರಹದ ಮೇಲ್ಮೈಯಲ್ಲಿ ಅತ್ಯಧಿಕವಾಗಿದ್ದು ಗುರುತ್ವಕೇಂದ್ರದಿಂದ ದೂರ ಸರಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ.ಬಾಹ್ಯಾಕಾಶದಲ್ಲಿ ವಸ್ತುವಿನ ತೂಕವು ಅಳತೆಗೆ ಸಿಗದಷ್ಟು ಕಡಿಮೆಯಾಗಿರುತ್ತದೆ.ವಸ್ತುವಿನ ತೂಕವು ಅದು ಇರುವ ಗ್ರಹದ ದ್ರವ್ಯರಾಶಿಯ ಮೇಲೂ ಅವಲಂಬಿತವಾಗಿದೆ. ಉದಾಹರಣೆಗೆ ಭೂಮಿಯ ಮೇಲೆ ೯೧ ಕಿ.ಗ್ರಾಂ.ತೂಗುವ ಮನುಷ್ಯ ಚಂದ್ರನ ಮೇಲೆ ಕೇವಲ ೧೫ ಕಿ.ಗ್ರಾಂ.ತೂಗುತ್ತಾನೆ.
ಪೆರಿಯಾರ್ ರಾಮಸ್ವಾಮಿ (ಸೆಪ್ಟೆಂಬರ್ ೧೭, ೧೮೭೯–ಡಿಸೆಂಬರ್ ೨೪, ೧೯೭೩) - ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ "ಪೆರಿಯಾರ್ ರಾಮಸ್ವಾಮಿ" ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು "ತಮಿಳು ಸ್ವಾಭಿಮಾನ ಚಳುವಳಿ" ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ 'ಪೆರಿಯಾರ್' ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ.
'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ತುಂಬಾ ಹಳೆಯ ಕಲ್ಬರಹವಾದ ತಾಳಗುಂದ ಕಲ್ಬರಹ ವು (ಇದು ಹಲ್ಮಿಡಿ ಶಾಸನ ಕ್ಕಿಂತಲೂ ಹಳೆಯದು) ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು.
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ ರಂದು ರಾಷ್ಟ್ರೀಯ "ಯುವದಿನ"ವೆಂದು ಆಚರಿಸಲಾಗುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ. ಭಾರತ ಗಣರಾಜ್ಯ ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಎಂಟು ಕೇಂದ್ರಾಡಳಿತ ಪ್ರದೇಶಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.
ಸ್ಥಳೀಯ ಆರ್ಥಿಕತೆ, ಸಮಾಜ ಮತ್ತು ಸಾಂಸ್ಕೃತಿಕತೆಯು ಜಗದ ಜಾಲದ ವಿನಿಮಯದಲ್ಲಿ ಒಳಪಡುವಿಕೆಯು 'ಜಾಗತೀಕರಣ' ವನ್ನು ವಿವರಿಸುತ್ತದೆ. ಜಾಗತೀಕರಣವನ್ನು ಕೆಲವು ಬಾರಿ ಆರ್ಥಿಕ ಜಾಗತೀಕರಣ ಈ ಮುಂದಿನ ವಿಚಾರಗಳನ್ನು ಕುರಿತು ಬಳಸಲಾಗುತ್ತದೆ : ವ್ಯಾಪಾರ, ವಿದೇಶೀ ನೇರ ಬಂಡವಾಳ, ಬಂಡವಾಳ ಹರಿವು, ವಲಸೆ, ತಾಂತ್ರಿಕತೆಯ ವಿಸ್ತರಣೆಯ ಮೂಲಕ ರಾಷ್ಟ್ರೀಯ ಆರ್ಥಿಕತೆಯ ಜೊತೆ ಅಂತರರಾಷ್ಟ್ರೀಯ ಆರ್ಥಿಕತೆಯ ಸಮನ್ವಯತೆ.. ಏನೇ ಆದರೂ ಜಾಗತೀಕರಣವನ್ನು ಸಾಮಾನ್ಯವಾಗಿ ಆರ್ಥಿಕ, ತಾಂತ್ರಿಕ, ರಾಜಕೀಯ ಮತ್ತು ಜೈವಿಕ ವಿಚಾರಗಳ ಸಂಯೋಗವೆಂದು ಪರಿಗಣಿಸಲಾಗುತ್ತದೆ.ಜನಪ್ರಿಯ ಸಂಸ್ಕೃತಿ ಅಥವಾ ಭಾಷೆ, ಕಲ್ಪನೆಗಳ ಅಂತರರಾಷ್ಟ್ರೀಯ ಮಟ್ಟದ ಹರಡುವಿಕೆಯನ್ನು ಸೂಚಿಸಲು ಈ ಪದವನ್ನು ಉಪಯೋಗಿಸಲಾಗುವುದು.
ವಾದಿರಾಜರು (ಕ್ರಿ.ಶ. ೧೪೮೦ - ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು.